ಜನರ ದಿಕ್ಕು ತಪ್ಪಿಸುವಿಕೆ

ಈ ವರ್ಷಾಂತ್ಯದಲ್ಲಿ ಗುಜರಾತಿನಲ್ಲಿ ಮತ್ತು ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಕರ್ನಾಟಕದ ಚುನಾವಣೆ ನಡೆಯುತ್ತಿರುವುದರಿಂದ ವಿರೋಧ ಪಕ್ಷಗಳು ಈಗಾಗಲೇ ಭರದಿಂದ ಚುನಾವಣಾ ಅಖಾಡಕ್ಕೆ ಧುಮುಕಿವೆ. ಚುನಾವಣೆ ಸಂಧರ್ಭದಲ್ಲಿ ವಿರೋಧ ಪಕ್ಷಗಲು ಆಡಳಿತ ಪಕ್ಷದ ವೈಫಲ್ಯಗಳು ಇಲ್ಲವೇ ಅಸಮರ್ಥತೆಯ ಕುರಿತಾಗಿ ವಿವರಿಸುತ್ತಾ, ತಮ್ಮನ್ನು ಅಧಿಕಾರಕ್ಕೆ ತಂದಲ್ಲಿ ತಾವು ಆ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಿದ್ದೆವು ಎಂಬುದನ್ನು ವಿವರಿಸುವುದು ವಾಸ್ತವದ ಸಂಗತಿ. ದುರಾದೃಶ್ಟವಷಾತ್ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಅಂತಹ ಘನಘೋರ ಸಂಗತಿಗಳು ಇಲ್ಲದೇ ಇರುವ ಕಾರಣ ಅನಾವಶ್ಯಕ ವಿಷಯಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ನಿರತವಾಗಿರುವುದು ಸ್ಪಷ್ಟವಾಗಿದೆ.

kejಗುಜರಾತಿನಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೇಸ್ ಸಂಪೂರ್ಣ ನೆಲಕಚ್ಚಿದ್ದು ಅದು ಸುಧಾರಿಸುವ ಲಕ್ಷಣವೇ ಕಾಣದೇ ಹೋದಾಗ, ಒಂದೊಂದಾಗಿ ಕಾಂಗ್ರೇಸ್ ಪಕ್ಷದ ಶಾಸಕರು ಮತ್ತು ನಾಯಕರುಗಳು ವಿವಿಧ ಪಕ್ಷಗಳೆಡೆಗೆ ಮುಖಮಾಡುತ್ತಿದ್ದಾರೆ. ಇದನ್ನೇ ನಪೆ ಮಾಡಿಕೊಂಡ ದೆಹಲಿಯ ಕೇಜ್ರೀವಾಲ್ ನೇತೃತ್ವದ AAP ಪಕ್ಷ ಸುಮಾರು ತಿಂಗಳುಗಳಿಂದ ಗುಜರಾತಿನಲ್ಲಿ ಬೀಡು ಬಿಟ್ಟಿದ್ದು ಜನರನ್ನು ಒಲಿಸಿಕೊಳ್ಳಲು ಸುಪ್ರೀಂ ಕೋರ್ಟಿನ ಆಜ್ಞೇಯನ್ನೂ ಮೀರಿ ಭರಪೂರ ಉಚಿತ ಆಮೀಷಗಳನ್ನು ಒಡ್ಡುವ ಮೂಲಕ ಅಧಿಕಾರಕ್ಕೇರಲು ಹವಣಿಸುತ್ತಿದೆ.

kejriಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸಿದ ಹೋರಾಟವನ್ನು ಹೈಜಾಕ್ ಮಾಡಿಕೊಂಡ ಕೇಜ್ರೀವಾಲ್ ಉಚಿತ ನೀರು, ವಿದ್ಯುತ್, ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಮುಂತಾದ ಆಮಿಷಗಳನ್ನೊಡ್ಡಿ ದೆಹಲಿಯಲ್ಲಿ ಎರಡು ಭಾರಿ ಮತ್ತು ಪಂಜಾಬಿನಲ್ಲಿ ಮೊದಲ ಬಾರಿಗೆ (ಕಾಂಗ್ರೇಸ್ ಪಕ್ಷ ಛಿದ್ರವಾಗಿದ್ದು ಮತ್ತು ಖಲಿಸ್ಥಾನದ ಬೆಂಬಲದಿಂದಾಗಿ) ಅಧಿಕಾರಕ್ಕೆ ಬಂದಿದ್ದ ನಂತರ ಸದ್ಯ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕದತ್ತ ಗಮನ ಹರಿಸುತ್ತಿದ್ದು 2024ರ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ (2014 ರಲ್ಲಿ ಕಾಶಿಯಲ್ಲಿ ಮೋದಿಯ ವಿರುದ್ಧ ಹೀನಾಮಾನವಾಗಿ ಸೋತಿದ್ದರು) ಪ್ರಧಾನಿ ಮಂತ್ರಿ ಆಗುವ ಕನಸು ಕಾಣುತ್ತಿರುವ ಸಂಧರ್ಭದಲ್ಲಿಯೇ ಅವರ ಪಕ್ಷದ ಶಾಸಕರು ಮತ್ತು ಮಂತ್ರಿಗಳು ಮಾಡುತ್ತಿರುವ ಹಗರಣಗಳು ಮತ್ತು ಆರಂಭ ಶೂರತ್ವದಲ್ಲಿ ಕಟ್ಟಿದ ಸುಸಜ್ಜಿತ ಶಾಲೆಗಳು ಮತ್ತು ಆಸ್ಪತ್ರೆಗಳ ಹೊರತಾಗಿ ಉಳಿದೆಲ್ಲವೂ ಕಾಗದ ಮೇಲೆ ಅಭಿವೃದ್ಧಿಯಾದ ಸಂಗತಿ ಹೊರ ಬೀಳುತ್ತಿದ್ದಂತೆಯೇ ಮಾನ ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿ ತನ್ನ ಶಾಸಕರನ್ನು ಖರೀಧಿಸಿ ತಮ್ಮ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜ್ ಘಾಟ್ ಬಳಿ ನಾಟಕವಾಡುತ್ತಾ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದೆ. ದೆಹಲಿಯಲ್ಲಿ ಕೇವಲ 6 ಶಾಸಕರನ್ನು ಹೊಂದಿರುವ ಪಕ್ಷ 60 ಶಾಸಕರನ್ನು ಹೊಂದಿದ ಪಕ್ಷವನ್ನು ಕೊಳ್ಳಲು ಬಯಸುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು ಹಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾದಂತಹ ಕುಕೃತ್ಯಕ್ಕೆ ಮುಂದಾಗುವ ಯಾವುದೇ ಪಕ್ಷವನ್ನಾಗಲೀ ಜಾತಿ, ಮತ, ಪಂಥ ಎಂಬ ಬೇಧವಿಲ್ಲದೇ, ಮುಲಾಜಿಲ್ಲದೇ ಸೋಲಿಸಿ ಮನೆಯಲ್ಲಿ ಕೂರಿಸಲೇ ಬೇಕಾಗಿದೆ.

kempannaಇನ್ನು ಕರ್ನಾಟಕದ ವಿರೋಧ ಪಕ್ಷಗಳ ಪಾಡಂತೂ ಕೇಳುವುದೇ ಬೇಡ. ಆಡಳಿತ ಪಕ್ಷದ ತಪ್ಪುಗಳು, ಧೋರಣೆಗಳನ್ನು ಸಾಕ್ಷಿಸಮೇತ ಬಯಲು ಮಾಡಿ ಜನರಿಗೆ ಆಡಳಿತ ಪಕ್ಷದ ಸೋಲುಗಳನ್ನು ತೋರಿಸುವ ಬದಲು ಪ್ರತೀದಿನವೂ ಗಾಳಿಯಲ್ಲಿ ಗುಂಡು ಹೊಡೆದು ಪಾರಾಗುವಂತಹ ಹೇಳಿಕೆಗಳು ಮತ್ತು ಮತ್ತಾರದೋ ಹೆಗಲ ಮೇಲೆ ಬಂದೂಕನ್ನಿಟ್ಟು ಗುಂಡು ಹಾರಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾಂಗ್ರೇಸ್ ಮತ್ತು ಜನತಾದಲ ಸಮ್ಮಿಶ್ರ ಸರ್ಕಾರವಿದ್ದಾಗ ಪ್ರಧಾನಿಗಳು 10% ಕಮೀಷನ್ ಸರ್ಕಾರ ಎಂದು ಜರಿದ್ದದ್ದನ್ನೇ ನೆಪ ಮಾಡಿಕೊಂಡು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನವರ ಮೂಲಕ ಪ್ರಸ್ತುತ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಪ್ರಧಾನಿಗಳಿಗೆ ಕಾಗದ ಬರೆದದ್ದು ಬಿಟ್ಟರೆ ಅದಕ್ಕೆ ಪೂರಕವಾದ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿ ಈ ವಿಷಯವನ್ನು ತಾರ್ಕಿಕ ಅಂತ್ಯಗೊಳಿಸಲು ಮುಂದಾಗದಿರುವುದು ಅನುಮಾನಕ್ಕೆ ಎಡೆ ಮಾಡುಕೊಡುತ್ತಿದೆ

ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿಗಳ ಕಛೇರಿಯಿಂದ ಕೆಲವು ಅಧಿಕಾರಿಗಳು ತನಿಖೆಗೆ ಬಂದಾಗ ಅನಾರೋಗ್ಯದ ನೆಪವೊಡ್ದಿ ವಿಚಾರಣೆಗೆ ಗೌರು ಹಾಜರಾದ ಗುತ್ತಿಗೆದಾರರ ಸಂಘದ ಕೆಂಪಣ್ಣ ಈಗ ಮತ್ತೆ ಪ್ರಧಾನ ಮಂತ್ರಿಗಳಿಗೆ ಕಾಗದ ಬರೆಯುತ್ತೇನೆ ಎನ್ನುತ್ತಿದ್ದಾರೆಯೇ ಹೊರತು, ತಮ್ಮ ಆರೋಪಕ್ಕೆ ಸೂಕ್ತವಾದ ಧಾಖಲೆ ಇದ್ದಲ್ಲಿ ಇಷ್ತು ದಿನಗಳಾದರೂ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಏಕೆ ದಾವೆ ಹೂಡಿಲ್ಲವೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

DKSಇನ್ನು ಕಾಂಗ್ರೇಸ್ ಪಕ್ಷದಲ್ಲಿ ಅವರದ್ದೇ ನಾಯಕರುಗಳು ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎನ್ನುವಂತೆ, ರಾಜ್ಯದ ಅಭಿವೃದ್ಧಿಗಿಂತಲೂ, ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಜನರಿಂದ್ಧ ಬಹುಮತ ಬರುವ ಮುನ್ನವೇ, ಹೋದ ಬಂದ ಕಡೆಯಲ್ಲೆಲ್ಲಾ ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ, ಡಿಕಿಶಿ, ಝಮೀರ್ ಆದಿಯಾಗಿ ಇನ್ನೂ ಡಜನ್ ನಾಯಕರು ಹೇಳಿಕೊಂಡು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿರುವುದು ಜನರ ಮುಂದೆ ಹಾಯ್ಯಾಸ್ಪದವಾಗುತ್ತಿದೆ.

sidduವಯಸ್ಸು 75ವರ್ಷಗಳು ತುಂಬುವುದಕ್ಕೆ ಒಂದು ವರ್ಷಕ್ಕೆ ಮುನ್ನವೇ ದಾವಣಗೆರೆಯಲ್ಲಿ ಅದ್ದೂರಿಯಿಂದ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ ಮಜಾವಾದಿ ಸಿದ್ದರಾಮಯ್ಯ, ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ ಎಂದು ಕೆಲವು ಲಕ್ಷ ಜನರು ಬಂದು ಕಂಠಪೂರ್ತಿ ಬಿಟ್ಟಿ ಕುಡಿದು ಉಂಡು ಮಜಾ ಮಾಡಿ ಹೋದದ್ದರ ಹೊರತಾಗಿ ಮತ್ತಾವ ಪ್ರಯೋಜನವಾಗದೇ ಹೋದದ್ದನ್ನು ಮನಗಂಡ ಸಿದ್ದು,

siddu_savarkarಅಲ್ಪಸಂಖ್ಯಾತರ ಓಲೈಕೆ ಮಾಡಲು ಅನಾವಶ್ಯಕವಾಗಿ ಸಾವರ್ಕರ್ ವಿಷಯದಲ್ಲಿ ಮೂಗು ತೂರಿಸಿ ಜನರಿಂದ ತಪರಾಕಿ ಹಾಕಿಸಿಕೊಂಡು ಹಿಂದೂ ವಿರೋಧಿ ಎಂಬ ಭಾವನೆ ಮೂಡಲಾರಂಭಿಸಿದ್ದನ್ನು ಮನಗಂಡು ಈಗ ಕಾಟಾಚಾರಕ್ಕೆ ಮಠ ಮಂದಿರಗಳನ್ನು ಸುತ್ತುತ್ತಾ ಜನರನ್ನು ದಿಕ್ಕು ತಪ್ಪಿಸಲು ಮುಂದಾಗುತ್ತಿರುವುದು ಜನರಿಗೆ ಅರಿವಾಗುತ್ತಿದೆ.

ibrahimಇನ್ನು ರಾಜ್ಯದಲ್ಲಿ ಕೇವಲ ಜಾತಿಯ ಬೆಂಬಲಾಧಾರಿತವಾಗಿ ಹಳೇ ಮೈಸೂರಿನ ಬೆರಳೆಣಿಕೆಯ ಭಾಗಗಳಲ್ಲಿ ಮಾತ್ರವೇ ಪ್ರಭಾವ ಹೊಂದಿರುವ ಅಪ್ಪಾ ಮಕ್ಕಳ ಕುಟುಂಬ ರಾಜಕಾರಣದ ಪಕ್ಷ ಜೆಡಿಎಸ್ ಗೆ ಚುನಾವಣೆ ಹತ್ತಿರ ಬಂದ ಕೂಡಲೇ ಜನರ ನೆನಪಾಗಿ ಜಲಧಾರೆ ಎಂಬ ಹೆಸರಿನಲ್ಲಿ ಕಂಡ ಕಂಡ ಊರಿನಲ್ಲಿ ಕಣ್ಣಿರ ಧಾರೆಗಳನ್ನು ಹರಿಸಿ, ಮುಂದಿನ ಚುನಾವಣೆಯಲಿ 10-20 ಸಂಖ್ಯೆಯಲ್ಲಿ ಗೆದ್ದು ಮತ್ತೆ ಹಿಂಬಾಗಿಲಿನಿಂದ ಅಧಿಕಾರಕ್ಕೆ ಏರುವ ತಿರುಕನ ಕನಸು ಕಾಣುವ ಪರಿಸ್ಥಿತಿ ಇದ್ದರೂ, ಜನರಿಂದ ನೇರವಾಗಿ ಒಂದೂ ಚುನಾವಣೆಯನ್ನೂ ಗೆಲ್ಲದ ಸದಾಕಾಲವೂ ಗೆದ್ದೆತ್ತಿನ ಬಾಲ ಹಿಡಿದು ಹಿಂಬಾಗಿಲಿನ ರಾಜಕಾರಣದಿಂದಲೇ ಎಲ್ಲಾ ರೀತಿಯ ಅಧಿಕಾರವನ್ನು ಸವಿದಿರುವ ಇಬ್ರಾಹಿಂ ಎಂಬ ವಿದೂಷಕ ಮುಂದಿನ ನಾವೇ ಮೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.

madhuswamyಇನ್ನು ಆಡಳಿತ ಪಕ್ಷದವರು ಅಪರೇಷನ್ ಕಮಲ ಎಂಬ ವಾಮಮಾರ್ಗದಲ್ಲಿ ಗಳಿಸಿದ ಅಧಿಕಾರವನ್ನೂ ಜನಾಭಿವೃದ್ಧಿಗೆ ಅಧಿಕಾರಯುತವಾಗಿ ಚಲಾಯಿಸುವುದನ್ನು ಬಿಟ್ಟು ರಾಜ್ಯದ ಕಾನೂನು ಮಂತ್ರಿಗಳಾದ ಮಾಧುಸ್ವಾಮಿಯವರೇ ಹೇಳಿರುವಂತೆ ಹಾಗೂ ಹೀಗೂ ಸರ್ಕಾರವನ್ನು ತಳ್ಳಿಕೊಂಡು ಚುನಾವಣೆಗೆಯ ಸಮಯದಲ್ಲಿ ಹೇಗೂ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಚಾಣಾಕ್ಷ ನಡೆಗಳಿಂದ ಗೆದ್ದು ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಭ್ರಮೆಯಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕವೇ ಇರುವ ಇದು ಪ್ರಜಾಪ್ರಭುತ್ವದ ಸರ್ಕಾರ ಎನ್ನುವುದು ಕೇವಲ ಬಾಯಿ ಮಾತಾಗಿದ್ದು ಪ್ರಜೆಗಳು ಅವರಿಗೆ ಲೆಖ್ಖಕ್ಕೇ ಇಲ್ಲವಾಗಿದೆ.

krishnaಇನ್ನು ಕೇಂದ್ರ ಸರ್ಕಾರವು ಮಹಾಭಾರತದಲ್ಲಿದ್ದ ಶ್ರೀ ಕೃಷ್ಣ ಪರಮಾತ್ಮನಂತೆ ಎಲ್ಲವನ್ನೂ ನೋಡುತ್ತಲೇ ಸುಮ್ಮನೆ ಕುಳಿತಿದೆ. ಕೃಷ್ಣ ಬಯಸಿದ್ದಲ್ಲಿ ಪಾಂಡವರನ್ನು ವನವಾಸದಿಂದ ಮತ್ತು ದ್ರೌಪದಿ ವಸ್ತ್ರಾಪಹರಣದ ಅವಮಾನದಿಂದ ರಕ್ಷಿಸಬಹುದಿತ್ತು. ಕೃಷ್ಣು ಹಾಗೆ ಮಾಡದೇ, ಧರ್ಮರಾಜನು ಕುತಂತ್ರಿ ಶಕುನಿಯೊಂದಿಗೆ ಪಗಡೆ ಆಡಿ ಸೋತು ಇದ್ದ ರಾಜ್ಯವನ್ನೆಲ್ಲಾ ಕಳೆದುಕೊಂಡು ವನವಾಸ ಮತ್ತು ಅಜ್ಞಾತವಾಸ ಅನುಭವಿಸುವಂತೆ ಮಾಡಿದ. ಪಾಂಡವರು ಒಪ್ಪದಂದಂತೆ ಎಲ್ಲವನ್ನೂ ಮುಗಿಸಿದ ನಂತರವೂ ಧುರ್ಯೋಧನ ರಾಜ್ಯವನ್ನು ಮರಳಿ ಕೊಡದಿರುವ ಧೂರ್ತತನನ್ನು ಜನರಿಗೆ ತಿಳಿಯ ಪಡಿಸುವುದನ್ನು ಶ್ರೀ ಕೃಷ್ಣ ಬಯಸಿದ. ಬಹುಶಃ ಕೇಂದ್ರ ಸರ್ಕಾರವೂ ಅದೇ ರೀತಿ ವಿರೋಧ ಪಕ್ಷಗಳ ಕಪಟತನ ಒಂದೊಂದೇ ಕಳಚಿ ಬೀಳವಂತೆ ಮಾಡುವ ಮೂಲಕ ಜನರಿಗೆ ಅವರ ಕಪಟತನ ಅರ್ಥವಾಗುವಂತೆ ಮಾಡುತ್ತಿದೆ ಎಂದೆನಿಸುತ್ತಿದೆ.

ಆದರೆ ನಿಜವಾದ ರಾಷ್ಟ್ರ ಭಕ್ತ ಪ್ರಜೆಗಳಿಗೆ ಅಷ್ಟು ತಾಳ್ಮೆಯಿಂದ ಕಾಯಲು ಅಸಾಧ್ಯವಾಗಿದ್ದು. ಅನಾವಶ್ಯಕವಾಗಿ ವಿರೋಧ ಪಕ್ಷಗಳ ದಿಕ್ಕುತಪ್ಪಿಸುವಿಕೆಯಿಂದಾಗಿ ಅನಾವಶ್ಯಕವಾಗಿ ವಿಚಲಿತಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಈ ರೀತಿಯ ಆಕ್ರೋಶಗಳನ್ನೇ ಎದುರು ನೋಡುತ್ತಿರುವ ವಿರೋಧ ಪಕ್ಷಗಳು ಸಹಾ ಉರಿಯುವ ಬೆಂಕಿಗೆ ತುಪ್ಪಾ ಸುರಿಯುವಂತೆ ದಿನೇ ದಿನೇ ಹುಚ್ಚಾಪಟ್ಟೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾ ಜನರನ್ನು ರೊಚ್ಚಿಗೆಬ್ಬಿಸಿ ಸಮಾಜದ ಸ್ವಾಸ್ವ್ಯವನ್ನು ಹಾಳು ಮಾಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ

siddu2ವಿರೋಧ ಪಕ್ಷಗಳು ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ? ಜನರ ನಾಡಿಮಿಡಿತ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಬೀಸುವ ಬಲೆಗೆ ಸಿಕ್ಕಿಕೊಂಡು ವಿಲವಿಲನೆ ಒದ್ದಾಡುವ ಬದಲು, ನಾಯಿ ಬೊಗಳಿದರೆ ದೇವಲೋಕ ಹಾಳಾಗದು. ನಮಗೆ ಸ್ವಂತಕ್ಕಿಂತ ಸಮಾಜ ಮುಖ್ಯ ಹಾಗಾಗಿ ಸಮಯ ಬಂದಾಗ ಪ್ರಜಾಪ್ರಭುತ್ವದ ರೀತಿಯಲ್ಲೇ ಉತ್ತರಿಸುವುದು ಸೂಕ್ತವಾಗಿದೆ. ನಿಜವಾದ ದೇಶ ಭಕ್ತ ಪ್ರಜೆಗಳಿಗೆ ವ್ಯಕ್ತಿ, ಪಕ್ಷಗಳಿಗಿಂತ ದೇಶ ಬಲು ಮುಖ್ಯ ಎಂಬುದನ್ನು ಮಾತಿಗಿಂತ ಸಾರಿ ಸಾರಿ ಕೃತಿಗಳ ಮೂಲಕ ಮಾಡಿ ತೋರಿಸಿದಲ್ಲಿ ವಿರೋಧ ಪಕ್ಷಗಳ ಆಟ ಎಂದಿಗೂ ನಡೆಯದು. ಅಭಿವ್ಯಕ್ತಿ ಸ್ವಾತ್ರಂತ್ಯ ಎಂದರೆ ಯಾರು ಬೇಕಾದರೂ ಏನು ಬೇಕಾದರೂ ಹೇಳಬಹುದು ಎಂದಲ್ಲಾ. ಅಭಿವ್ಯಕ್ತಿ ಸ್ವಾತ್ರಂತ್ಯ ಎಂದರೆ ಸೂಕ್ತ ಸಂಧರ್ಭದಲ್ಲಿ ಸಮಯೋಚಿತವಾಗಿ ವ್ಯವಹರಿಸುವುದಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s