ಮಾಡೋದು ಅನಾಚಾರ ಮನೇ ಮುಂದೆ ಬೃಂದಾವನ ಅನ್ನೋ ಗಾದೆ ಮಾತು ನೆನ್ನೆ ಚಾಮರಾಜಪೇಟೆಯ ನನ್ನ ಕಛೇರಿಯಲ್ಲಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ಥಳೀಯರಿಗೆ ಸಿಹಿ ಹಂಚಿ, ಅನ್ನ ಸಂತರ್ಪಣೆ ಮಾಡಿ ಅತ್ಯಂತ ಸಂಭ್ರಮ – ಸಡಗರದಿಂದ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದೆ. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಖಾನ್ ಹಾಗೂ ಮತ್ತಿತರರು ನನ್ನೊಂದಿಗಿದ್ದರು ಎಂಬ ಟ್ವೀಟ್ ಜೊತೆಗೆ ಅವರ ಕಛೇರಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿಸಿ, ಸಂಜೆ ವಿಸರ್ಜಿಸಿದ ಫೋಟೋವನ್ನು ಬೆಂಗಳೂರಿನ ಚಾಮರಾಜ ಪೇಟೆಯ ಶಾಸಕ ಝಮೀರ್ ಹಾಕಿರುವುದನ್ನು ನೋಡಿದಾಗ ನೆನಪಾಯಿತು.
ಬೆಂಗಳೂರಿನ ಹೃದಯ ಭಾಗವಾದ ಚಾಮರಾಜ ಪೇಟೆಯ ಕುರಿ ಮೈದಾನವನ್ನು ಆತಿಕ್ರಮಿಸಿಕೊಂಡು ಅದಕ್ಕೆ ಅನಧಿಕೃತವಾಗಿ ಈದ್ಗಾ ಮೈದಾನವೆಂದು ಹೆಸರಿಸಿ ಕೇವಲ ಮುಸಲ್ಮಾನರ ಹಬ್ಬಗಳ ಹೊರತಾಗಿ ಯಾವುದೇ ಸಭೆ ಸಮಾರಂಭಗಳನ್ನೂ ನಡೆಸಬಾರದು ಎಂಬ ಅಲಿಖಿತ ಕಾನೂನನ್ನೂ ಸಹಾ ಹಿಂದಿನ ಓಲೈಕೆಯ ಸರ್ಕಾರ ಜಾರಿಗೆ ತಂದಿತ್ತು. ಇತ್ತೀಚೆಗೆ ಇದಕ್ಕೆ ಪ್ರತಿರೋಧವಾಗಿ ಅಲ್ಲಿನ ಸ್ಥಳೀಯರು ಆ ಮೈದಾನ ಬಿಬಿಎಂಪಿ ಸ್ವತ್ತು ಹಾಗಾಗಿ ಆ ಮೈದಾನದ ಮೇಲೆ ಎಲ್ಲಾ ಸಾರ್ವಜನಿಕರಿಗೂ ಸಮಾನವಾದ ಹಕ್ಕಿದ್ದು ಅಲ್ಲಿ ಸ್ವಾತ್ರಂತ್ರೋತ್ಸವ, ಗಣೇಶೋತ್ಸವ, ರಾಜ್ಯೋತ್ಸವವನ್ನು ಆಚರಿಸಲು ಮುಂದಾದಾಗ ಇದೇ ಸ್ಥಳೀಯ ಶಾಸಕ ಝಮೀರ್ ಆ ಮೈದಾನ ಮುಸಲ್ಮಾನರ ವಕ್ಫ್ ಸಮಿತಿಗೆ ಸೇರಿರುವ ಕಾರಣ ಅಲ್ಲಿ ಯಾವುದೇ ಕಾರಣಕ್ಕೂ ಮುಸಲ್ಮಾನರ ಪ್ರಾರ್ಥನೆಗೆ ಹೊರತಾಗಿ ಬೇರಾವುದೇ ಕಾರ್ಯಕ್ರಮಗಳನ್ನೂ ನಡೆಸಬಾರದು ಎಂಬ ಫರ್ಮಾನು ಬೇರೆ ಹೊರಡಿಸಿದಾಗ ಅ ಮೈದಾನದ ಹಕ್ಕಿನ ಕುರಿತಾಗಿ ಇಲಾಖಾ ಮಟ್ಟದಲ್ಲಿ ತನಿಖೆ ಆರಂಭವಾಯಿತು.
ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಆ ಮೈದಾನದ ಸ್ವತ್ತಿನ ಕುರಿತಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅದು ವಕ್ಫ್ ಸಮಿತಿಗೆ ಸಂಬಂಧ ಪಟ್ಟಿದ್ದು ಎಂಬ ದಾಖಲೆಯನ್ನು ಒದಗಿಸಲಾಗದೇ ಹೋದಾಗ ಅದು ಕಂದಾಯ ಇಲಾಖೆಗೆ ಸೇರಿದ್ದು ಎಂದು ತಿಳಿದ ಸ್ಥಳೀಯರು ಸ್ವಾತ್ರಂತ್ರ್ಯ ಅಮೃತಮಹೋತ್ಸವವನ್ನು ನಡೆಸಲು ಮುಂದಾದಾಗ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಸರ್ಕಾರವೇ ಮುಂಜಾಗೃತಾ ಕ್ರಮದಿಂದ ಸಕಲ ಪೋಲೀಸ್ ಬಂದೋ ಬಸ್ತಿನಲ್ಲಿ ಆ ಮೈದಾನದಲ್ಲಿ ಸ್ವಾತ್ರಂತ್ರ್ಯ ಅಮೃತಮಹೋತ್ಸವವನ್ನು ನಡೆಸಿತು. ಇದರಿಂದ ಸಂತಸಗೊಂಡ ಸ್ಥಳೀಯರು ಮತ್ತು ಬೆಂಗಳೂರು ಗಣೇಶೋತ್ಸವ ಸಮಿತಿ ಜಂಟಿಯಾಗಿ ಅದೇ ಮೈದಾನದಲ್ಲಿ ಗಣೇಶೋತ್ಸವವನ್ನು ನಡೆಸಲು ಮುಂದಾಯಿತು,
ಸಾರ್ವಜನಿಕವಾಗಿ ಹಿಂದೂ ಮುಸ್ಲಿಂ ಬಾಯ್ ಬಾಯ್ ಎಂದು ಬೂಸಿ ಬಿಡುವ ಇದೇ ಜಮೀರ್ ಮತ್ತು ಕೆಲ ಮುಸಲ್ಮಾನರು ಗಣೇಶೋತ್ಸವದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿ, ವಿಚಾರಣೆ ನಡೆದು, ಆ ಮೈದಾನ ಕಂದಾಯ ಇಲಾಖೆಗೆ ಸೇರಿರುವ ಕಾರಣ ಅಲ್ಲಿ ಗಣೇಶೋತ್ಸವ ನಡೆಸಲು ಯಾವುದೇ ಅಡ್ಡಿ ಇಲ್ಲಾ ಎಂದು ತೀರ್ಪಿತ್ತಾಗ ಸಂತಸಗೊಂಡ ಸ್ಥಳೀಯರು ಉತ್ಸವವನ್ನು ನಡೆಸಲು ಸಕಲ ರೀತಿಯಾಗಿ ಸಿದ್ಧತೆ ನಡೆಸಿಕೊಳ್ಳುತ್ತಿರುವಾಗಲೇ ಹಬ್ಬದ ಹಿಂದಿನ ದಿನ ಇದೇ ಝಮೀರ್ ಮತ್ತೇ ವಕ್ಫ್ ಮತ್ತು ಕೆಲ ಮುಸ್ಲಿಂ ಪ್ರಮುಖರನ್ನು ದೆಹಲಿಗೆ ಕರೆದೊಯ್ದು, ಸದಾಕಾಲವೂ ದೇಶದ್ರೋಹಿಗಳ ಪರವಾಗಿಯೇ ವಾದ ಮಾಡುವ ಕುಖ್ಯಾತ ಕ್ರಿಮಿನಲ್ ನ್ಯಾಯವಾದಿ ಕಪಿಲ್ ಸಿಬಲ್ ಮುಖಾಂತರ ಸುಪ್ರೀಕೋರ್ಟಿನಲ್ಲಿ ದಾವೆ ಹೂಡಿ ಈ ಬಾರಿ ಚಾಮರಾಜಪೇಟೆಯ ಮೈದಾನದಲ್ಲಿ ಗಣೇಶೋತ್ಸವವನ್ನು ನಡೆಸದಂತೆ ತಡೆಯನ್ನು ತರುವಲ್ಲಿ ಯಶಸ್ವಿಯಾಗಿದ್ದು ದುರಾದೃಷ್ಟಕರವೇ ಸರಿ.
ಬೆರಳಲ್ಲಿ ಆಗುವುದಕ್ಕೆ ಕೊಡಲಿ ತೆಗೆದುಕೊಂಡ ಎನ್ನುವಂತೆ ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳಬಹುದಾದ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯವರೆಗೂ ತೆಗೆದುಕೊಂಡು ಹೋಗಿ ಇಂದಿಗೂ ಅದು ಜ್ವಲಂತ ಸಮಸ್ಯೆಯಾಗುವಂತೆ ಮಾಡಿದ ನೆಹರುವಿನಂತೆ, ಝಮೀರ್ ಕೂಡಾ, ಸ್ಥಳೀಯರ ವಿರೋಧದ ನಡುವೆಯೂ ಚಾಮರಾಜಪೇಟೆ ಆಟದ ಮೈದಾನವನ್ನು ಕೇವಲ ರಾಜ್ಯವಲ್ಲಾ, ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಬರುವಂತೆ ಮಾಡಿದ ಅಪಕೀರ್ತಿಗೆ ಭಾಜನವಾದರು. ಝಮೀರ್ ನ ಈ ನಡೆ ಸಹಜವಾಗಿಯೇ ಸಮಸ್ತ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ, ಸುಪ್ರೀಂ ಕೋರ್ಟಿನ ಆದೇಶಕ್ಕೆ ತಲೆಬಾಗುತ್ತಲೇ, ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೇ ಇನ್ನೇನು ಬಿಡುಗಡೆಗೆ ಸಿದ್ಧವಿರುವ ಝಮೀರ್ ಮಗನ ಚೊಚ್ಚಲು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಬಹಿರಂಗ ಹೇಳಿಕೆ ನೀಡಿದರು.
ಹೀಗೆ ಚಾಮರಾಜಪೇಟೆ ಆಟದ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಮತ್ತು ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ಹಿಂದೂಗಳನ್ನು ಓಲೈಕೆ ಮಾಡುವುದಕ್ಕಾಗಿ ಹೊಸಾ ನಾಟಕ ಆರಂಭಿಸಿದ್ದು ಅದರ ಮುಂದುವರೆದ ಭಾಗವಾಗಿ, ಅಖಿಲ ಕರ್ನಾಟಕ ಜಿ.ಝೆಡ್.ಜಮೀರ್ ಅಹ್ಮದ್ ಖಾನ್ ಒಕ್ಕೂಟದ ಆಶ್ರಯದಲ್ಲಿ ಸೆಪ್ಟೆಂಬರ್ 5ರ ಬೆಳಿಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಅವರ ಕಚೇರಿಯಲ್ಲಿಯೇ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿಸಿ, ಹಿಂದೂ ಅರ್ಚಕರಿಂದ ವಿಧಿವತ್ತಾಗಿ ಪೂಜೆ ನಡೆಸಿದ್ದಾರೆ. ಪೂಜೆ ಆದ ಬಳಿಕ ಅನ್ನ ಸಂತರ್ಪಣೆ ಮಾಡಿ, ಸಂಜೆ 4 ಗಂಟೆಯ ಆಸುಪಾಸಿನಲ್ಲಿ ಬಾಣ ಬಿರುಸುಗಳ ಅದ್ಧೂರಿ ಮರವಣಿಗೆಯೊಂದಿಗೆ ವಿದ್ಯಾಗಣಪತಿ ಮೂರ್ತಿಯ ವಿಸರ್ಜನೆ ಮಾಡಿ ತಾನು ಹಿಂದೂ ಪರವಾಗಿದ್ದೇನೆ ಎಂಬ ಹುಸಿ ಜಾತ್ಯಾತೀತೆಯನ್ನು ತೋರಿಸಲು ಪ್ರಯತ್ನಿಸಿದ್ದಾರೆ.
ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಯುಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ತರಿಸಿ ಹಿಂದೂಗಳ ಗಣೇಶೋತ್ಸವಕ್ಕೆ ಕಲ್ಲು ಹಾಕುವ ಮೂಲಕ ತನ್ನ ಮುಸ್ಲಿಂ ಸಮುದಾಯವನ್ನು ಓಲೈಸಿದ ಜಮೀರ್ ಈಗ ತನ್ನ ಕಛೇರಿಯಲ್ಲಿ ಗಣೇಶೋತ್ಸವ ಮಾಡಿ ಹಿಂದೂಗಳನ್ನು ಓಲೈಸಲು ಮುಂದಾಗುವ ಮೂಲಕ, ಆರು ಕೊಟ್ಟರೆ ಅತ್ತೇ ಕಡೇ ಮೂರು ಕೊಟ್ಟರೆ ಸೊಸೇ ಕಡೆ ಎನ್ನುವ ಗಾದೆಯಂತೆ ಆತನಊಸರವಳ್ಳಿಯಂತೆ ಬಣ್ಣ ಬದಲಿಸುವ ಗುಣ ಬಟಾಬಯಾಗಿದೆ. ನಿಜ ಹೇಳಬೇಕೆಂದರೆ ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ, ಮೂರ್ತಿ ಪೂಜೆ ಮಾಡುವವರನ್ನು ಕಂಡಲ್ಲಿ ಭಂಜಿಸಿ ಎಂದು ಕುರಾನ್ ನಲ್ಲೇ ಹೇಳಿದೆ ಎಂದು ತಿಳಿದವರು ಹೇಳುತ್ತಾರೆ. ಹಾಗಾದರೆ ನಾನು ಮೊದಲು ಮುಸ್ಲಿಂ ನಂತರ ಭಾರತೀಯ ಎಂದು ಹಲ್ಲು ಕಚ್ಚಿ, ಎದೆ ತಟ್ಟಿಕೊಂಡು ಹೇಳುವ ಜಮೀರ್ ಈಗ ಅದು ಹೇಗೆ ಹಿಂದೂ ಮೂರ್ತಿಯ ಪೂಜೆ ಮಾಡಿದರು? ಹೀಗೆ ಮಾಡುವ ಮೂಲಕ ಧರ್ಮ ಭ್ರಷ್ಟರಾಗಲಿಲ್ಲವೇ? ಇಷ್ಟು ವರ್ಷಗಳ ಕಾಲ ಗಣೇಶನ ಮೇಲಿಲ್ಲದ ಪ್ರೀತಿ ಈಗ ಇದ್ದಕ್ಕಿದ್ದಂತೆ ಹೇಗೆ ಬಂತು? ಅಧಿಕಾರಕ್ಕಾಗಿ ತನ್ನ ಧರ್ಮದ ನಿಯಮಗಳನ್ನೇ ಗಾಳಿಗೆ ತೂರುವವರು, ಈಗ ಇದ್ದಕ್ಕಿದ್ದಂತೆಯೇ ಪರಧರ್ಮ ಸಹಿಷ್ಣು ಹೇಗೆ ಆಗುತ್ತಾರೆ? ಎಂದು ಹಿಂದೂಗಳು ಅರಿಯಬೇಕಿದ್ದು, ಇದು ಖಂಡಿತವಾಗಿಯೂ ಹಿಂದೂಗಳ ಕಿವಿಗೆ ಹೂವಿಡುವ ತಂತ್ರ ಎಂದು ಸುಸ್ಪಷ್ಟವಾಗುತ್ತಿದೆ.
ಸತತ 4ನೇ ಬಾರಿ ಶಾಸಕರಾಗಿರುವ ಜಮೀರ್ ಹಿಂದೆಂದೂ, ಒಮ್ಮೆಯೂ ಗಣೇಶೋತ್ಸವ ಮಾಡದೇ ಈಗ ಗಣೇಶೋತ್ಸವ ಮಾಡಲು ಮುಂದಾಗಿರುವುದು ಖಂಡಿತವಾಗಿಯೂ ಹೊಸ ನಾಟಕ ಎಂದು ಈಗಾಗಲೇ ಹಲವಾರು ಸ್ಥಳೀಯರು ಆಕ್ಷೇಪಿಸಿದ್ದಾರೆ. ಇನ್ನೇನು ಬಿಡುಗಡೆ ಆಗಲಿರುವ ಮಗನ ಸಿನಿಮಾ ಮತ್ತು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಆಕ್ರೋಶ ಭರಿತ ಹಿಂದೂಗಳನ್ನು ಸಮಾಧಾನ ಪಡಿಸುವ ಸಲುವಾಗಿ ಈ ರೀತಿಯ ಹೊಸಾ ನಾಟಕ ಆಡಲು ಆರಂಭಿಸಿರುವುದು ಖಂಡಿತವಾಗಿಯೂ ಫಲಪ್ರದವಾಗದು. ಆಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ಲ ಎನ್ನುವ ಗಾದೆಯಂತೆ ಇಷ್ಟು ದಿನ ಕ್ಷೇತ್ರದ ಜನರನ್ನು ಗೂಬೆ ಮಾಡಿದ್ದ ಜಮೀರನಿಗೆ ಈಗ ಕ್ಷೇತ್ರದ ಜನರೇ ಜಮೀರ್ ಅವರನ್ನು ಗೂಬೆ ಮಾಡಲು ಈಗಾಗಲೇ ತೀರ್ಮಾನಿಸಿದ್ದಾರೆ. ಈ ರೀತಿ ಗಣೇಶನ ಮುಖವಾಡ ಧರಿಸಿಯಾದರೂ ಕ್ಷೇತ್ರದ ಜನರ ಮನಸ್ಸು ಗೆಲ್ಲಲು ಸಾಧ್ಯ ಎಂದು ಜಮೀರ್ ಭಾವಿಸಿದ್ದರೆ, ಕ್ಷೇತ್ರದ ಜನರು ಅದನ್ನು ಈ ಬಾರಿಯ ಚುನಾವಣೆಯಲ್ಲಿ ಸುಳ್ಳು ಮಾಡಲು ಮುಂದಾಗಿದ್ದು ಜಮೀರ್ ನ ಈ ರೀತಿಯ ಹುಚ್ಚಾಟಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವುದು ಜಮೀರನಿಗೆ ಅಂತಕವನ್ನುಂಟು ಮಾಡಿದೆ. ಹಾಗಾಗಿ ಕಡೇ ಗಳಿಗೆಯಲ್ಲಿ ಕ್ಷೇತ್ರ ಮತದಾರರು ಅದರಲ್ಲೂ ವಿಶೇಷವಾಗಿ ಹಿಂದೂಗಳನ್ನು ತನ್ನ ಪರ ಸೆಳೆದುಕೊಳ್ಳಲು ಈ ರೀತಿಯ ಹತ್ತು ಹಲವಾರು ನಾಟಕಗಳಿಗೆ ಮತ್ತು ಆತ ಒಡ್ಡುವ ಆಮೀಷಗಳಿಗೆ ಈ ಬಾರಿಯಾದರೂ ಹಿಂದುಗಳು ಒಳಗಾಗುವುದಿಲ್ಲ ಎಂದೇ ಭಾವಿಸಲಾಗಿದೆ.
ಈ ಕೇವಲ ಜಮೀರ್ ಅಲ್ಲದೇ, ತಮ್ಮ ಅಧಿಕಾರದ ತೆವಲಿಗಾಗಿ ಯಾರು ಈ ದೇಶದ ಹಿಂದೂಗಳನ್ನು ವಿವಿಧ ಜಾತಿಯ ಹೆಸರಿನಲ್ಲಿ ತುಂಡು ಮಾಡುತ್ತಾರೋ ಅಂತಹ ಎಲ್ಲಾ ರಾಜಕಾರಣಿಗಳಿಗೂ ತಕ್ಕ ಪಾಠ ಕಲಿಸಲೇ ಬೇಕಾಗಿದೆ. ಚುನಾವಣೆಯ ಸಮಯದಲ್ಲಿ ಅವರು ಕೊಡುವ ಸುಳ್ಳುಪೊಳ್ಳು ಆಶ್ವಾಸನೆಗಳು ಮತ್ತು ಹಿಂದಿನ ದಿನದ ಒಂದಷ್ಟು ಆರ್ಥಿಕ ಸಹಾಯಕ್ಕೆ ತಮ್ಮ ಮತಗಳನ್ನು ಅಪಮೌಲ್ಯಮಾಡಿಕೊಂಡು ಮುಂದಿನ ಐದು ವರ್ಷಗಳು ಪರಿತಪಿಸುವ ಬದಲು ತಮ್ಮ ಅಮೂಲ್ಯವಾದ ಮತವನ್ನು ವಿವೇಚನೆಯಿಂದ ಅಕ್ಷರಶಃ ಸತ್ಪಾತ್ರರಿಗೆ (ಇರುವವರಲ್ಲಿ ಉತ್ತಮರನ್ನು) ದಾನ ಮಾಡುವ ಮೂಲಕ ದೇಶವನ್ನು ಉಳಿಸೋಣ ಮತ್ತು ಬೆಳಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಇದೇ ನಾಟಕಾನ ಯಾರಾದರೂ ತಿಳಿದವರು, ಆ ಮುಖಂಡನ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಪ್ರಸ್ತುತಪಡಿಸಿ, ನಡೆದಿರೋ ವಿದ್ಯಮಾನಕ್ಕೆ, ಮೈದಾನದ ಸಕಲ ಜನರ ಉಪಯೋಗಕ್ಕೆ ಒಪ್ಪಿತ ವಾಗುವಂತಹ ನ್ಯಾಯಯುತ ನಿರ್ಧಾರ ಬರಲು ಪ್ರಯತ್ನಿಸಿದರೆ ಅತ್ಯುತ್ತಮಹಾಗಸಂತೋಷ ಜನ್ಯ.
LikeLiked by 1 person