ಕನ್ನಡದಲ್ಲಿ ಕೊಚ್ಚೆಗೆ ಕಲ್ಲು ಎಸೆದು ಮೈ ಮೇಲೆ ರಾಡಿ ಎರಚಿಕೊಳ್ಳಬಾರದು ಎಂಬ ಗಾದೆ ಮಾತಿದೆ. ಅದೇ ರೀತಿ ಸಗಣಿ ಜೊತೆ ಸರಸಕ್ಕಿಂತ ಗಂಧದೊಡನೆ ಗುದ್ದಾಟ ಲೇಸು ಎಂಬ ಗಾದೆ ಮಾತೂ ಇದೆ. ಹೆಚ್ಚು ಕಡಿಮೆ ಇವೆರಡೂ ಗಾದೆಗಳು ಅಲ್ಪರ ಸಂಘ ಅಪಮಾನ ಭಂಗ ಎನ್ನುವ ಗಾದೆ ಮಾತಿಗೆ ಉದಾರಣೆಯಾಗಿದ್ದು ಮೂರ್ಖ್ ಸೇ ಕ್ಯಾ ಕರ್ನಾ ಚಾಹಿಯೇ? ಎಂದು ಅಕ್ಬರ್ ಬೀರಬಲ್ಲರಿಗೆ (ಮಹೇಶ ಶರ್ಮ) ಕೇಳಿದಾಗ, ಕುಛ್ ನಹೀ, ಚುಪ್ ಹೋನಾ ಚಾಹೀಯೇ ಎಂದು ಹೇಳಿದಂತೆ ಕೆಲವರ ಬಗ್ಗೆ ಅನಾವಶ್ಯಕವಾಗಿ ಮಾತನಾಡುವುದಾಗಲೀ, ಲೇಖನ ಬರೆಯುವಾಗಲೀ ಸಮಯ ವ್ಯರ್ಥ. ಒಂದು ರೀತಿಯಾಗಿ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವಂತೆ 53 ವರ್ಷದ ಚಿರ ಯೌವನ್ನಿಗ ಯುವಕರ ಕಣ್ಮಣಿ, ಸ್ವಘೋಷಿತ ಭಾವಿ ಪ್ರಧಾನಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ ಎಂದು ಎಷ್ಟೇ ಸುಮ್ಮನಾದಾರೂ, ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಕೆಲವರಂತೆ ರಾಗಾ ಪದೇ ಪದೇ ದೇಶವಿರೋಧಿ ಹೇಳಿಕೆಗಳನ್ನು ಅದರಲ್ಲೂ ವಿದೇಶದ ನೆಲದಲ್ಲಿ ನೀಡುವ ಮೂಲಕ ಅಲ್ಲಿದೇ ನಮ್ಮನೇ ಇಲ್ಲಿ ಬಂದೆ ಸುಮ್ಮನೇ ಎನ್ನುವಂತೆ ತನ್ನ ನಿಷ್ಠೆ ಏನಿದ್ದರೂ ತಮ್ಮಮ್ಮನ ಧರ್ಮಕ್ಕೆ ಮಾತ್ರವೇ ಹೋರತು ಭಾರತಕ್ಕಲ್ಲ ಎಂದು ಮತ್ತೆ ಸಾಭೀತು ಪಡಿಸಿರುವುದು ದೇಶದ ಆಂತರಿಕ ಭಧ್ರತೆಯ ದೃಷ್ಟಿ ಇಂದ ಕಳವಳಕಾರಿಯಾಗಿದೆ.
ಸ್ವಾತಂತ್ರ್ಯಾನಂತರ ಅವರದ್ದೇ ಕಾಂಗ್ರೇಸ್ ಮುಖಂಡ ಮತ್ತು ಅಂದಿನ ಗೃಹಮಂತ್ರಿಗಳಾದ ಸರ್ದಾರ್ ವಲ್ಲಭಬಾಯ್ ಪಟೇಲರು 565 ಸಣ್ಣ ಸಣ್ಣ ರಾಜ್ಯಗಳನ್ನು 1947ರಲ್ಲೇ ಒಗ್ಗೂಡಿಸಿ ಭಾರತ ಎಂಬ ಒಕ್ಕೂಟ ರಾಷ್ಟ್ರವಾಗಿಸಿ ಕಳೆದ 75 ವರ್ಷಗಳಲ್ಲೇ ಇಡೀ ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಪ್ರಜಾತಂತ್ರ ರಾಷ್ಟ್ರವನ್ನಾಗಿಸಿ, ಇತ್ತೀಚೆಗೆ ತನ್ನನ್ನು ವಸಾಹತು ಮಾಡಿಕೊಂಡಿದ್ದ ಇಂಗ್ಲೇಂಡನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿರುವಾಗಿದೆ. 28 ಡಿಸೆಂಬರ್ 1885ರಂದು ಆರಂಭವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ದೇಶದ ಅತ್ಯಂತ ಹಳೆಯ ಪಕ್ಷವಾಗಿದೆ (ಅಂದಿನ ಕಾಂಗ್ರೇಸ್ಸಿಗೂ ಇಂದಿನ ನೆಹರು, ಇಂದಿರಾ ಸೋನಿಯಾ ಕಾಂಗ್ರೇಸ್ಸಿಗೂ ಸಂಬಂಧವೇ ಇಲ್ಲಾ) ಎಂದು ಕೊಚ್ಚಿಕೊಳ್ಳುವ ರಾಹುಲ್ ಗಾಂಧಿ ಮತ್ತವರ ಪಕ್ಷವನ್ನು ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಜನರು ಹೇಳ ಹೆಸರಿಲ್ಲದಂತೆ ಸೋಲಿಸಿರುವಾಗ, ಮಕಾಡೆ ಮಲಗಿಸಿರುವಾಗ ತನ್ನ ಮತ್ತು ತನ್ನ ಪಕ್ಷದ ಚಿತ್ರಣವನ್ನು ಬದಲಾಯಿಸಿಕೊಳ್ಳುವ ಸಲುವಾಗಿ ಮತ್ತು ತನ್ನ ಅಸ್ಮಿತೆ ಮತ್ತು ಅಸ್ಥಿತ್ವವನ್ನು ಈ ಡೇಶದ ಜನರಿಗೆ ತೋರಿಸುವ ಸಲುವಾಗಿ ಸೆಪ್ಟೆಂಬರ್ 7 2022ರಿಂದ ಸುಮಾರು 150 ದಿನಗಳ ಕಾಲ 4,080 ಕಿಲೋಮೀಟರ್ಗಳನ್ನು ನಡಿಗೆಯ ಮೂಲಕ ರಾಹುಲ್ ಗಾಂಧಿ ಮತ್ತವರ 125 ಜನರ ಪಟಾಲಂ, ಭಾರತ್ ಜೋಡೋ ಎಂಬ ಯಾತ್ರೆಯನ್ನು ಆರಂಭಿಸಿದ್ದು ಎಲ್ಲರಿಗೂ ತಿಳಿದೇ ಇದೆ.
Tell me who your friends are, and I will tell you who you are. ಎನ್ನುವ ಆಂಗ್ಲ ನಾಣ್ಣುಡಿಯಂತೆ, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ನಡಿಗೆಯನ್ನು ಆರಂಭಿಸುತ್ತಿದ್ದಂತೆಯೇ ಪೂರ್ವನಿಯೋಜನೆಯಂತೆ ಹಿಂದೂ ಧರ್ಮ ಮತ್ತು ಭಾರತದ ದೇಶದ ವಿರುದ್ಧ ಸದಾಕಾಲವೂ ವಿಷವನ್ನು ಕಕ್ಕುವ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದದ್ದಲ್ಲದೇ ಅಲ್ಲಿಂದ ಮುಂದಿನ 150 ದಿನಗಳ ಯಾತ್ರೆಯಲ್ಲಿ ದಾರಿಯುದ್ದಕ್ಕೂ ತುಕ್ಡೇ ಗ್ಯಾಂಗಿನ ಕನ್ನಯ್ಯ ಸೇರಿದಂತೆ ಸಕಲ ದೇಶವಿರೋಧಿಗಳೂ, ಕ್ರಿಮಿನಲ್ಗಳು ಒಬ್ಬೊಬ್ಬರಾಗಿ ತನ್ನೊಂದಿಗೆ ಸೇರಿಸಿಕೊಂಡು ಯಾತ್ರೇ ಮಾಡುತ್ತಿದ್ದಂತೆಯೇ ಆ ಯಾತ್ರೆಯ ಧ್ಯೇಯ ಮತ್ತು ಉದ್ದೇಶಗಳು ಈ ದೇಶದ ಜನರಿಗೆ ಅರಿವಾಯಿತಲ್ಲದೇ, ರಾಹುಲ್ ದಾರಿಯುದ್ದಕ್ಕೂ ತನ್ನ ಜೋಕರ್ ಮನಸ್ಥಿತಿಯನ್ನು ಜಗಜ್ಜಾಹೀರಾತು ಮಾಡುತ್ತಾ, ಅಗ್ಗಾಗ್ಗೇ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಾ, ಮಾಹಾಭಾರತದ ಸಮಯದಲ್ಲಿ ಪಾಂಡವರು ಡಿಮೋನಿಟೈಸೇಶನ್ ಮಾಡಲಿಲ್ಲ ಎಂದು ಓತ ಪ್ರೋತವಾಗಿ ಮಾತನಾಡುತ್ತಲೇ ಹಾಗೂ ಹೀಗೂ, 29 ಜನವರಿ 2023ರಂದು ಹವಾಮಾನ ವೈಪರೀತ್ಯಗಳ ನಡುವೆಯೂ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮುಗಿಸಿ
ನಂತರ ಯಾತ್ರೆಯ ಆಯಾಸ ಪರಿಹಾರಕ್ಕಾಗಿ ಮೂರ್ನಾಲ್ಕು ದಿನಗಳ ಕಾಲ ಅಲ್ಲಿಯೇ ತಂಗಿದ್ದು ಸ್ವಚ್ಚಂದವಾಗಿ ಮಂಜುಗೆಡ್ಡೆಯ ಮೇಲೆ ಸ್ಕೀಯಿಂಗ್ ಮಾಡಿದ್ದು ಈಗ ಇತಿಹಾಸ. ಅಷ್ಟು ಸುದೀರ್ಘವಾದ ನಡಿಗೆ ಮಾಡಿದ್ದರಿಂದ ರಾಹುಲ್ ಗಾಂಧಿ ಆರೋಗ್ಯ ಸುಧಾರಿಸಿದಲ್ಲದೇ ಗಡ್ಡವಷ್ಟೇ ಬೆಳೆಯಿತೇ ಹೋರತು ದೇಶಕ್ಕೆ ಅದರಿಂದ ಮೂರ್ಕಾಸಿನ ಪ್ರಯೋಜನವಾಗಲಿಲ್ಲ ಎಂದೇ ದೇಶದ ಜನರು ಮಾತನಾಡಿಕೊಂಡದ್ದು ಸುಳ್ಳಲ್ಲ.
ರಾಜೀವ್ ಗಾಂಧಿಯ ಆಪ್ತಮಿತ್ರ ಮತ್ತು ರಾಹುಲ್ ಗಾಂಧಿಯನ್ನು ಶತಾಯ ಗತಾಯ ಅಂತರಾಷ್ಟ್ರೀಯ ಮಟ್ಟದ ನಾಯಕನನ್ನಾಗಿ ಮಾಡಲು ಫಣತೊಟ್ಟಿರುವ ಸ್ಯಾಂ (ಸತ್ಯನಾರಾಯನ) ಪಿತ್ರೋಡ, ಭಾರತ್ ಜೋಡೋ ಅಂತಹ ಸಂದರ್ಭವನ್ನು ಬಳಸಿ ಕೊಂಡು ರಾಗಾ ನನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕೆಂಬ ಉದ್ದೇಶದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ‘21ನೇ ಶತಮಾನದಲ್ಲಿ ಕೇಳಲು ಕಲಿಯುವುದು’ ಎಂಬುದರ ಕುರಿತಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿಯ ಭಾಷಣದ ಜೊತೆ ‘ಬಿಗ್ ಡೇಟಾ ಮತ್ತು ಡೆಮಾಕ್ರಸಿ‘ ಮತ್ತು ‘ಭಾರತ-ಚೀನಾ ಸಂಬಂಧಗಳು‘ ಕುರಿತಾಗಿ ಮುಚ್ಚಿದ ಬಾಗಿಲಿನ ಅಧಿವೇಷನಗಳನ್ನು ಏರ್ಪಡಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಯ್ಯೋ ರಾಮ!!, ತನ್ನ ಎಡವಟ್ಟುಗಳಿಂದಾಗಿಯೇ ಈ ದೇಶದಲ್ಲಿ ಪಪ್ಪೂ ಎಂಬ ಬಿರುದಾಂಕಿತ ರಾಹುಲ್ ವಿದೇಶದಲ್ಲಿ ಇನ್ನೇನ್ನೂ ಮಾತನಾಡುತ್ತಾವೋ ಎಂಬ ಆತಂಕ ಎಲ್ಲರಲ್ಲೂ ಕಾಡತೊಡಗಿತ್ತು.
ರಾಹುಲ್ ಗಾಂಧಿಯವರ ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಆತ ವಿದೇಶಕ್ಕೆ ಹೋದಾಗಲೆಲ್ಲಾ ಒಂದೊಂದು ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. 2022ರ ಮೇ ತಿಂಗಳಿನಲ್ಲಿ ಇದೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ “ಭಾರತದಲ್ಲಿ 75” ಎಂಬ ಶೀರ್ಷಿಕೆಯ ಕುರಿತಾದ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದಕ್ಕಿಂತಲೂ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಭಾರತದ ವಿರುದ್ಧವೇ ಅಸಂಬದ್ಧವಾಗಿ ತಮ್ಮ ಅಪ್ರಬುದ್ಧತೆಯ ಮಾತುಗಳನ್ನಾಡಿ ಬಂದಿದ್ದರು. ಅದೇ ರೀತಿಯಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲಲು ಶ್ರಮಿಸುವಂತೆ, ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಯುಕೆ ಸದಸ್ಯರಿಗೆ ಕೆರೆ ನೀಡಿದ್ದ ರಾಹುಲ್ ಗಾಂಧಿ, ಮಾಡಬೇಕಾದ ಕೆಲಸವನ್ನೆಲ್ಲಾ ಮಾಡಲಾಗಿದೆ ಇನ್ನು ಅದರ ಪಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು ಕೆಲ ದಿನಗಳ ಹಿಂದೆ BBC ಗೋದ್ರಾ ಹಗರಣದ ಪ್ರಕರಣದಲ್ಲಿ ಮೋದಿಯವರೇ ಅಪರಾಧಿ ಎನ್ನುವಂತ ವರದಿ ಪ್ರಕಟಿಸಿದ್ದನ್ನು ನೆನೆಪಿಸಿಕೊಳ್ಳಬಹುದಾಗಿದೆ.
ಕಳೆದ ಮಂಗಳವಾರ ಫೆಬ್ರವರಿ 28 2023ರಂದು, ಢಾಳಾಗಿ ಬೆಳೆದಿದ್ದ ಗಡ್ಡವನ್ನೆಲ್ಲಾ ನೀಟಾಗಿ ಶೇವ್ ಮಾಡಿ ಸೂಟು ಬೂಟು ಟೈ ಧರಿಸಿಕೊಂಡು ಯಾವುದೇ ಪ್ರೊಫೇಸರ್ ಗಳಿಗಿಂಗಲೂ ಕಡಿಮೆ ಇಲ್ಲದಂತೆ PPTಯೊಂದಿಗೆ ತನ್ನ ಭಾಷಣವನ್ನು ಸ್ಪುಟವಾದ ಇಂಗ್ಲೀಷ್ ಭಾಷೆಯಲ್ಲಿ ಆರಂಭಿಸಿದಾಗ ವಾವ್! ಈ ಬಾರಿ ತುಂಬಾ ಗಹನವಾದ ವಿಚಾರಗಳನ್ನು ಮಂಡಿಸಬಹುದು ಎಂದೇ ಎಲ್ಲರೂ ನಿರೀಕ್ಷಿಸುತ್ತಿದ್ದಾಗ, ಹುಲಿಯ ಚರ್ಮವನ್ನು ಹೊದ್ದ ಕತ್ತೇ ಕಿರುಬ ಎಂದಿಗಾದರೂ ಹುಲಿಯಾದೀತೇ? ಎನ್ನುವಂತೆ, ತನ್ನ ಹೊಸಾ ವೇಷ ಭೂಷಣಗಳಲ್ಲೂ ಭಾರತ ವಿರೋಧಿ ಹೇಳಿಕೆಗಳಿಂದಲೇ ಭಾಷಣ ಆರಂಭಿಸಿದಾಗ ಸ್ವಾಭೀಮಾನಿ ಭಾರತೀಯರ ರಕ್ತ ಕುದಿಯುವಂತಾಯಿತು.
ಈ ಹಿಂದೆ, ವಿದೇಶಿಗರು ನಮ್ಮ ದೇಶದ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು, ಈಗ ನಮ್ಮವರೇ, ವಿದೇಶಿ ನೆಲದಲ್ಲಿ ತಮ್ಮ ತಾಯ್ನಾಡ ಕುರಿತಾಗಿ ಕೆಟ್ಟದಾಗಿ ಮಾತನಾಡಲು ಆರಂಭಿಸಿದಾಗ, ಇಂತಹ ವ್ಯಕ್ತಿ ಮತ್ತು ಇವರ ಕುಟಂಬವನ್ನೇ ಇಷ್ಟು ವರ್ಷ ಭಾರತೀಯರು ತಲೆಯ ಮೇಲೇ ಹೊತ್ತು ಮೆರಸಿದ್ದು? ಎಂಬ ಅಕ್ರೋಶವಾಯಿತು. ಭಾರತವನ್ನು 50 ವರ್ಷಗಳ ಕಾಲ ಇದೇ ಕುಟುಂಬ ಅತ್ಯಂತ ಕೆಟ್ಟ ರೀತಿಯಲ್ಲಿ ಆಳಿದ ಪರಿಣಾಮವಾಗಿಯೇ, ಇಂದು ಕನಿಷ್ಟ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೂ ಆಗದಷ್ಟು ಸಂಖ್ಯೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎನ್ನುವ ಅತ್ಮಾವಲೋಕನ ಮಾಡಿಕೊಳ್ಳದೇ ಏಕಾ ಏಕಿ ವಿದೇಶದಲ್ಲಿ ನಿಂತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿನ ಜನರು ಮುಕ್ತವಾಗಿ ಏನನ್ನೂ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸಿತು.
ಇಡೀ ಪ್ರಪಂಚದಲ್ಲಿ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಮಹತ್ವ ನೀಡುವ ದೇಶ ಯಾವುದಾದರೂ ಇದ್ದಲ್ಲಿ ಅದು ಕೇವಲ ನಮ್ಮ ಭಾರತ ದೇಶ ಮಾತ್ರಾ ಎಂದು ಘಂಟಾಘೋಷವಾಗಿ ಹೇಳುವುದಕ್ಕೆ ಜ್ವಲಂತ ಉದಾರಣೆಯಾಗಿಯೇ ಕೇಂದ್ರ ಸರ್ಕಾರದ ರಕ್ಷಣೆಯಲ್ಲೇ ದೇಶವನ್ನು ತುಂಡರಿಸುವ ಮನಸ್ಥಿತಿಯವರೊಂದಿಗೆ ರಾಹುಲ್ ಸುಮಾರು 4,000 ಕಿಮೀ ಪ್ರಯಾಣಿಸಿದ್ದಲ್ಲದೇ, ಎಲ್ಲಾ ಕಡೆಯಲ್ಲಿಯೂ ಯಥಾ ಪ್ರಕಾರ ಪ್ರಧಾನಿಗಳನ್ನು ಮತ್ತು ಬಿಜೆಪಿಯನ್ನು ನಿಂದಿಸಲು ಸಾಧ್ಯವಾಗಿದ್ದು ಎಂಬುದನ್ನು ಮರೆ ಮಾಚಿದ್ದು ಎಷ್ಟು ಸರಿ?
ಭಾರತ ಸರ್ಕಾರ ವಿರೋಧ ಪಕ್ಷದ ನಾಯಕರುಗಳ ಮೊಬೈಲ್ ಫೋನಿನಲ್ಲಿ ಪೆಗಾಸಸ್ ಎಂಬ ತಂತ್ರಾಶದ ಮೂಲಕ ಅವರ ಮಾತುಕತೆಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಹಿರಿಯ ರಕ್ಷಣಾ ಅಧಿಕಾರಗಳು ತನಗೆ ಎಚ್ಚರಿಕೆ ನೀಡಿದ್ದರು ಎಂಬ ವಿಷಯವನ್ನು ಆತ ಪ್ರಸ್ತಾಪಿಸಿದರು. ಆದರೆ, ಇದೇ ವಿಷಯದ ಕುರಿತಾದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯ ಮೊಬೈಲ್ ಫೋನನ್ನು ಕೋರ್ಟಿಗೆ ಒಪ್ಪಿಸಲು ಕೇಳಿದಾಗ, ಪೋನನ್ನು ತನಿಖೆಗೆ ಕೊಡಲು ರಾಹುಲ್ ನಿರಾಕರಿಸಿದರ ಕುರಿತಾಗಿ ಬಾಯೇ ಬಿಡಲಿಲ್ಲ. ಮುಂದೆ ಸುಪ್ರೀಂ ಕೋರ್ಟ್ ನಡೆಸಿದ ವ್ಯಾಪಕ ತನಿಖೆಯಿಂದಾಗಿ ಪೆಗಾಸಸ್ ಕುರಿತಾಗಿ ಯಾವುದೇ ಪುರಾವೆಗಳಿಲ್ಲ ಎಂಬ ತೀರ್ಪನ್ನೂ ಅದೇ ಜನರಿಂದ ಮರೆ ಮಾಚಿದ್ದು ಎಷ್ಟು ಸರಿ?
ಇನ್ನು ಪದೇ ಪದೇ ವಿದೇಶದಲ್ಲಿ ಭಾರತದ ವಿರುದ್ಧ ಕೇಳಿಬರುವ ಮತ್ತೊಂದು ಆಪಾದನೆ ಎಂದರೆ, ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ ಮತ್ತು ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಾರೆ. ಇದೇ ಗಿಳಿ ಪಾಠವನ್ನು ರಾಹುಲ್ ಸಹಾ ಹೇಳಿದ್ದಾರೆ. ಆದರೆ ನಿಜ ಹೇಳ ಬೇಕೆಂದರೆ ಇಡೀ ಪ್ರಪಂಚದಲ್ಲಿ ಬಹುಸಂಖ್ಯಾತರುಗಳಿಗಿಂಅಲೂ ಅಲ್ಪಸಂಖ್ಯಾತರಿಗೇ ಹೆಚ್ಚಿನ ಸವಲತ್ತುಗಳನ್ನು ನೀಡಿರುವ ಯಾವುದಾದರೂ ದೇಶ ಇದೆ ಎಂದರೆ ಅದು ಕೇವಲ ನಮ್ಮ ಭಾರತ ದೇಶ ಮಾತ್ರ. ಕಾಂಗ್ರೇಸ್ ಅಧಿಕಾರದ ಅವಧಿಯಲ್ಲೇ ಮುಸ್ಲಿಂ ಮತಾಂಧರು ಗೋದ್ರಾ ಪ್ರಕರಣ ನಡೆಸಿದ್ದು. ಇಂದಿರಾ ಗಾಂಧಿ ಹತ್ಯೆಯಾದಗ ಇದೇ ಕಾಂಗ್ರೇಸ್ ನಾಯಕರುಗಳೇ ಸಾವಿರಾರು ಅಮಾಯಕ ಸಿಖ್ ಜನರನ್ನು ಹುಡುಕಿ ಹುಡುಕಿ ಕೊಂದಿದ್ದು, ಕಾಂಗ್ರೇಸ್ ಆಳ್ವಿಕೆಯಲ್ಲೇ ಈ ದೇಶದಲ್ಲಿ ಅತ್ಯಂದ ಕೋಮು ದಳ್ಳುರಿ ನಡೆದದ್ದು ಎಂಬ ಸತ್ಯವನ್ನು ಮರೆ ಮಾಚಿದ್ದು ಎಷ್ಟು ಸರಿ?
ಇನ್ನು ತನ್ನ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ತನ್ನ ಬಳಿ ಬಂದ ಹುಡುಗಿಯೊಬ್ಬಳು ತನ್ನ ಮೆಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಾಗ, ಪೋಲೀಸರಿಗೆ ಈ ವಿಷಯವನ್ನು ತಿಳಿಸಿ ನಿನಗೆ ನ್ಯಾಯ ಒದಗಿಸುತ್ತೇನೆ ಎಂದಾಗ, ದಯವಿಟ್ಟು ಹಾಗೆ ಮಾಡದಿರಿ. ಅದರಿಂದ ತನ್ನ ಮಾನ ಹಾನಿಯಾಗಿ ತನ್ನನ್ನು ಯಾರು ಮದುವೆಯಾಗುದಿಲ್ಲ ಎಂದಳು. ಭಾರತದಲ್ಲಿ ಪ್ರತಿನಿತ್ಯವೂ ಇಂತಹ ಅತ್ಯಾಚಾರಗಳು ನಡೆಯುತ್ತಲೇ ಇರುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, 2006 ರಲ್ಲಿ ತನ್ನ ಸ್ವಕ್ಷೇತ್ರ ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತು ಅವರ ಸ್ನೇಹಿತರು ಕುಡಿದ ಮತ್ತಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಮಗಳಾಗಿದ್ದ ಸುಕನ್ಯಾ ದೇವಿ ಎಂಬ ಹುಡುಗಿಯ ಮೇಲೆ ಅತ್ಯಾಚಾರವೆಸಗಿ, ಆ ವಿಷಯದ ಕುರಿತಾಗಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ದೂರು ನಂತರ ಆ ಹುಡುಗಿ ಮತ್ತು ಆಕೆಯ ಪೋಷಕರು ನಾಪತ್ತೆಯಾಗಿ ಇದುವರೆವಿಗೂ ಪತ್ತೆಯಾಗಿಲ್ಲ ಎಂಬ ಸಂಗತಿಯನ್ನೇಕೆ ಮರೆ ಮಾಡಿದರು?
ಈ ದೇಶದ ಇತಿಹಾಸವನ್ನು ಅರಿಯದ ರಾಹುಲ್ ಪದೇ ಪದೇ ಭಾರತವು ಯುರೋಪ್ ಮಾದರಿಯ ರಾಜ್ಯಗಳ ಒಕ್ಕೂಟವಾಗಿದೆ ಎಂದೇ ಹೇಳುವುದಲ್ಲದೇ ಅದನ್ನೇ ಇಂಗ್ಲೇಂಡಿನಲ್ಲೂ ಹೇಳಿದ್ದಾರೆ. ಅದರೆ ಭಾರತ ರಾಜ್ಯಗಳು ಸಹಸ್ರಾರು ವರ್ಷಗಳಿಂದಲೂ ವಿವಿಧ ರಾಜರುಗಳಿಂದ ಆಳ್ವಿಕೆ ನಡೆಸಲ್ಪಟ್ಟಿದ್ದರೂ ಸನಾತ ಧರ್ಮದ ಅಡಿಯಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ ವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವಂತ ರಾಷ್ಟ್ರವಾಗಿತ್ತು ಮತ್ತು ಇಂದಿಗೂ ಅದೇ ಸ್ಥಿತಿಯಲ್ಲಿದೆ ಎಂಬ ಸತ್ಯ ಸಂಗತಿಯನ್ನೇಕೆ ಮರೆ ಮಾಡಿದರು?
ಇನ್ನು ಭಾರತದ ನೆರರಾಷ್ಟ್ರವಾದ ಚೀನಾದ ಸೈನಿಕರುಗಳಿಂದ ಪದೇ ಪದೇ ಗಡಿಯಲ್ಲಿ ಚಕಮಕಿ ನಡೆಯುತ್ತಲೇ ಚೀನಾ ದೇಶ ಭಾರತಕ್ಕೆ ಆತಂಕದ ನೆರೆ ರಾಷ್ಟ ಎಂಬ ಸಂಗತಿಯನ್ನು ಮುಚ್ಚಿಟ್ಟು, ಸರ್ವಾಧಿಕಾರಿ ಅಕ್ರಮಣಕಾರಿ ಧೋರಣೆಯ ಚೀನಾವನ್ನು, ಪ್ರಪಂಚದ ಅತಿದೊಡ್ಡ ಪ್ರಚಾಪ್ರಭುತ್ವ ರಾಷ್ಟ್ರವೊಂದರಲ್ಲಿ ಸಾಂಸದನಾಗಿ (ಪ್ರಧಾನಿ ಆಗುವ ಕನಸನ್ನು ಹೊತ್ತಿರುವ) ಚೀನಾ ದೇಶ ಸೂಪರ್ ಪವರ್ ದೇಶ ಎಂದು ವಾಚಾಮಗೋಚರವಾಗಿ ಹೊಗಳುವುದು ಎಷ್ಟು ಸರಿ? ತನ್ನ ಮುತ್ತಾತ ನೆಹರು ಕಾಲದಲ್ಲಿ 1962 ರಲ್ಲಿ ಇದೇ ಚೀನಾ ಹಿಂದಿ ಚೀನಿ ಭಾಯಿ ಭಾಯಿ ಎನ್ನುತ್ತಲೇ, ಭಾರತ ಮೇಲೆ ಏಕಾ ಏಕಾ ಧಾಳಿ ನಡಸಿ ಲಡಾಖ್‌ನ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಸುಮಾರು 15,000 ಚದರ ಮೈಲುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡ ಸತ್ಯ ಸಂಗತಿಯನ್ನೇಕೆ ಮರೆ ಮಾಡಿದರು?
ತನ್ನ ಯಾತ್ರೆಯ ಸಲುವಾಗಿ ಕಾಶ್ಮೀರದಲ್ಲಿ ಅಂತಿಮ ಪಾದಯಾತ್ರೆಯನ್ನು ನಡೆಸುವಾಗ, ನನ್ನನ್ನು ಭೇಟಿಯಾಗಲು ಬಂದ ಹಿರಿಯರೊಬ್ಬರು, ನಿಮಗೆ ಖಂಡಿತವಾಗಿಯೂ ನಮ್ಮ ಸಮಸ್ಯೆಗಳನ್ನು ಕೇಳುವ ಮನಸ್ಥಿತಿ ಇದೇಯೇ ಎಂದು ಕೇಳಿ ನಾನು ಹೌದು ಎಂದಾಗ, ನೋಡಿ ಅಲ್ಲಿರುವವರೆಲ್ಲರೂ ಭಯೋತ್ಪಾದಕರು ಎಂದು ತೋರಿಸಿದ. ಆಗ ನಾನು ಉಗ್ರರನ್ನು ನೋಡಿದೆ. ಆ ಉಗ್ರರು ನನ್ನನ್ನು ನೋಡಿದರು. ಆದರೆ ಅವರು ಏನು ಮಾಡಲಿಲ್ಲ ಎಂದು ರಾಹುಲ್ ಹೇಳುತ್ತಾರೆ. ಈ ದೇಶದ ಸಾಂಸದನಾಗಿ ಬಿಡಿ, ಈ ದೇಶದ ಒಬ್ಬ ಜವಾಬ್ಧಾರಿ ನಾಗರೀಕನಾಗಿ ಭಯೋತ್ಪಾದಕರನ್ನು ಕಂಡ ಕೂಡಲೇ ಪೋಲಿಸರಿಗೆ ತಿಳಿಸಿ ಅವರನ್ನು ಬಂಧಿಸುವುದನ್ನು ಬಿಟ್ಟು ಈಗ ಈ ವಿಷಯವನ್ನು ವಿದೇಶದಲ್ಲಿ ವಿದೇಶಿಗರ ಮುಂದೆ ಹೇಳಿ ಭಾರತದಲ್ಲಿ ಇನ್ನೂ ಭಯೋತ್ಪಾದನೆ ಇದೆ ಎಂದು ತಿಳಿಸುವ ಉಮೇದು ಏಕೇ? 2014ರಲ್ಲಿ ಮೋದಿಯವರ ಆಳ್ವಿಕೆ ಬರುವವರೆಗೂ ಕಾಶ್ಮೀರದ ಸ್ಥಿತಿ ಗತಿ ಹೇಗಿತ್ತು? ತಾಯಿಯ ಎದೆ ಹಾಲನ್ನು ಹುಡಿದ ಧೈರ್ಯವಂತ ಶ್ರೀನಗರದ ಲಾಲ್ ಚೌಕ್ ನಲ್ಲಿ ಈ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿ ಎಂದು ಭಯೋತ್ಪಾದಕರು ಅಟ್ಟಹಾಸದಿಂದ ಮೆರೆಯುತ್ತಿದ್ದ ದಿನಗಳು ಇದೇ ಮೋದಿ ಸರ್ಕಾರ ಪರಿಚ್ಚೇದ 370 ಮತ್ತು 35A ಮುಂತಾದ ವಿಶೇಷ ಸವಲತ್ತುಗಳನ್ನು ತೆಗೆದು ಹಾಕಿದ ಪರಿಣಾಮ ಇಂದು ನಾನು ಮತ್ತು ನನ್ನ ತಂಗಿ ಪ್ರಿಯಾಂಕ ಯಾವುದೇ ಆತಂಕವಿಲ್ಲದೇ ಶ್ರೀನಗರದ ತ್ರಿವರ್ಣ ಧ್ವಜವನ್ನು ಲಾಲ್ ಚೌಕ್ ನಲ್ಲಿ ಈ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿ ಅಲ್ಲಿನ ಮಂಜಿನ ಹಿಮೆಗಡ್ಡೆಗಳಲ್ಲಿ ಸ್ವಚ್ಚಂದವಾಗಿ ಆಡಲು ಸಾಧ್ಯವಾಯಿತು ಎಂಬ ವಿಷಯವನ್ನೇಕೆ ಮರೆ ಮಾಚಿದರು?
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಯೋಚಿಸಲೇ ಬೇಕಾಗಿದೆ. ತನ್ನ ಸ್ವಾರ್ಥಕ್ಕಾಗಿ ಅದರಲ್ಲೂ ಅಧಿಕಾರದ ಅಸೆಗಾಗಿ ವಿದೇಶಗಳಲ್ಲಿ ಭಾರತದ ಮಾನವನ್ನು ಇಲ್ಲ ಸಲ್ಲದ ರೀತಿ ಹರಾಜು ಹಾಕುತ್ತಿರುವ ಇಂತಹ ವ್ಯಕ್ತಿಗಳು ನಮ್ಮ ನಾಯಕರಾಗಿರಲು ಎಷ್ಟು ಅರ್ಹರು? ನಮಗೆ ದೇಶ ಮುಖ್ಯವೋ? ಇಂತಹ ವ್ಯಕ್ತಿ ಮುಖ್ಯವೋ?
ವ್ಯಕ್ತಿ ಇಂದು ಇರುತ್ತಾನೆ ನಾಳೆ ಸತ್ತು ಹೊಗುತ್ತಾನೆ? ಅದರೆ ದೇಶ ನೆನ್ನೆ ಇತ್ತು. ಇಂದು ಇದೆ ಮತ್ತು ನಾಳೆಯೂ ಇರುವ ಕಾರಣ, ನಮ್ಮ ನಿಷ್ಟೆ ಮತ್ತು ಭಕ್ತಿ ಎಂದಿಗೂ ವ್ಯಕ್ತಿ ಕೇಂದ್ರೀಕೃತವಾಗದೇ ಅದು ದೇಶದ ಕುರಿತಾಗಿ ಇರಬೇಕು.. Nation first. Everything is next. ಎಂಬ ಮನಸ್ಥಿತಿಯಲ್ಲಿ ಈ ದೇಶದ ಅಸ್ಮಿತೆ, ಅಸ್ಥಿತ್ವಗಳ ಕುರಿತಾಗಿ ಧೃಡಸಂಕಲ್ಪ ಹೊತ್ತ, ಸ್ವಾಭಿಮಾನಿಯಾಗಿ, ಈ ದೇಶವನ್ನು ಸಮರ್ಥವಾಗಿ ಮನ್ನಡೆಸ ಬಲ್ಲವರಿಗೆ ಮಾತ್ರವೇ ನಮ್ಮ ಬೆಂಬಲವನ್ನು ನೀಡುವಂತಾಗ ಬೇಕು. ತನ್ಮೂಲಕ ಭಾರತ ವಿಶ್ವಗುರುವಾಗ ಬೇಕು
ಬೋಲೋ ಭಾರತ ಮಾತಾ ಕೀ…. ಜೈ……
ರಾಹುಲ್ ಗಾಂಧಿಯ ಈ ಅಪಸವ್ಯದ ಸಂಪೂರ್ಣ ಭಾಷಣ ಇಲ್ಲಿದ್ದು ಅದನ್ನು ಕೇಳಿದ ನಂತರ ರಕ್ತ ಕುದಿಯದೇ ಹೋದಲ್ಲಿ ಆತ ನಿಸ್ಸಂದೇಹವಾಗಿಯೂ ಭಾರತೀಯನೇ ಆಗಿರಲಾರ ಎನ್ನುವುದು ನನ್ನ ವಯಕ್ತಿಕ ಭಾವನೆ. ದೇಶದ ವಿರುದ್ಧ ಮಾತನಾಡುವವನು ಎಂತಹವರೇ ಆಗಿರಲಿ? ಎಷ್ಟು ದೊಡ್ಡ ವ್ಯಕ್ತಿಯೇ ಆಗಿರಲಿ ಅದು ದೇಶದ ಭದ್ರತೆಗೆ ಅಪಾಯಕಾರಿಯೇ ಹೌದು
ಏನಂತೀರೀ?
ನಿಮ್ಮವನೇ ಉಮಾಸುತ
ಹೀಗಂತಿನಿ,
ರಾಹುಲ್ ರ ತಮ್ಮ ಜೀವನದ ದ್ಯೇಯವೆ ಮೋದಿ ಮತ್ತೊಮ್ಮೆ ಮಗದೊಮ್ಮೆ ಪ್ರಧಾನಿಯಾಗಿ ಮಾಡುವುದು. ಈ ಅವರ ಹೋರಾಟದ ನಿರಂತರ. ಈ ವಿಚಾರದಲ್ಲಿ ಅವರ ಯಶಸ್ಸಿನ ಪಾಮಾಣ ೧೦೦ಕ್ಕೆ ೧೦೦. ಇದನ್ನು ಅಲ್ಲಗೆಳಲು ಯಾರಿಂದು ಸಾದ್ಯವಾಗದ ಮಾತು.
ಅವರು “ದಿ ಡಾರ್ಕ್ ಕ್ನಾಯಿಟ್” ತರ
ತಮ್ಮನು ತಾವೇ ಟಾರ್ಗೆಟ್ ಮಾಡಿ ಕೊಳ್ಳುವರು.
ತಮ್ಮನ್ನು ತಾವೇ ತಗೆಳುಕೊಳ್ಳುವರು
ತಮ್ಮನು ದೇಶವೆ ದ್ವೇಷಿಸುವ ಹಾಗೆ ಮಾತಾಡುವರು ಹಾಗೂ ವರ್ತಿಸುವರು.
ತಮಗೆ ಏನಾದುರು ಸರಿ, ಬಲ ಪಂಕ್ತಿಯವರು ಏನ ಹೇಳಿದರು ಸರಿ, ಯೋಗಿಯಂತೆ ಅಮ್ಮ ಗುರಿಯಾದ, ತಮ್ಮ ಪಕ್ಷದ ನಿರ್ನಾಮ ಹಾಗೂ ಮೋದಿಯ ಜಯದತ್ತ ಮುನ್ನೆಡದು ಹೋಗುತ್ತಲೆ ಇರುವರು.
ರಾಹುಲ್ ಗಾಂಧಿ ಅವರು ಈ ದೇಶದ ಅಪ್ರತಿಮ ಪ್ರಜೆ , ಮೋದಿಯ ಪರಮ ಭಕ್ತ
LikeLiked by 1 person
ಅಬ್ಬಬ್ಬಬ್ಬಾ!! ಎಂತಹ ವಿಶ್ಲೇಷಣೆ. ಭಲೇ ಭಲೇ!!
LikeLike