ಸಂಸತ್ ಭವನ ಎಂಬುದು ಪ್ರಜಾಪ್ರಭುತ್ವದ ದೇವರ ಮನೆ ಎಂದರೂ ತಪ್ಪಾಗದು. ದೇಶದ ರಾಜಧಾನಿಯಲ್ಲಿರುವ ಸಂಸತ್ ಭವವನ ಉಭಯ ಸಭೆಗಳಲ್ಲಿ ಜನರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆಯ್ಕೆಯಾದ ಸಾಂಸದರು ಒಟ್ಟಾಗಿ ಕುಳಿತು ದೇಶದ ಆಗು ಹೋಗುಗಳ ಬಗ್ಗೆ ವಿಷಧವಾಗಿ ಚರ್ಚಿಸಿ ಕಾನೂನುಗಳನ್ನು ರಚಿಸಿ ದೇಶವನ್ನು ಆಳುತ್ತಾರೆ. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ಸರ್ಕಾರದ ದಕ್ಷ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸೆಂಟ್ರಲ್ ವಿಸ್ಟಾ ಸಂಕೀರ್ಣದ ನೀಲನಕ್ಷೆಯನ್ನು ರಚಿಸಿ, 1927ರಲ್ಲಿ ಆರಂಭಿಸಿ ನಾಲ್ಕು ಬ್ಲಾಕುಗಳ ಕಟ್ಟಡವನ್ನು 1931 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾದ ಬಂಗಲೆಯಲ್ಲಿಯೇ ಭಾರತಕ್ಕೆ ಸ್ವಾತ್ರಂತ್ಯ ಬಂದ 75 ವರ್ಷಗಳ ಕಾಲ ಆಡಳಿತ ನಡೆಸಿದ ವಿಷಯ ಎಲ್ಲರಿಗೂ ತಿಳಿದಿದ್ದು ಅದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದಾಗಿದೆ
ಪ್ರಸ್ತುತವಾದ ಸಂಸತ್ ಭವನಕ್ಕೆ ಸುಮಾರು 96 ವರ್ಷಗಳು ಕಳೆದಿದ್ದು ಅಂದಿನ ಕಾಲಕ್ಕೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದ ಆ ಕಟ್ಟಡ ಸದ್ಯದ ಪರಿಸ್ಥಿತಿಗೆ ತೀರಾ ಚಿಕ್ಕದಾಗಿದ್ದಲ್ಲದೇ, ಹಳೆಯದಾಗಿದ್ದ ಕಾರಣ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಎಲ್ಲಾ ಸಂಸದರನ್ನು ಒಟ್ಟಿಗೆ ಸೇರಿಸುವುದು ಕಷ್ಟವಾಗುತ್ತಿದ್ದದ್ದಲ್ಲದೇ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಜಾಗ ಸಾಲುತ್ತಿರಲಿಲ್ಲ. ಅದೇ ರೀತಿಯಾಗಿ 2026ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಆದಾಗ, ಸಂಸದರ ಸಂಖ್ಯೆ ಹೆಚ್ಚಾಗುವ ಕಾರಣದಿಂದಲೇ, ಮನಮೋಹನ್ ಸಿಂಗ್ ಅವರ ಕಾಂಗ್ರೇಸ್ ಸರ್ಕಾರ ಇದ್ದಾಗಲೇ ಅಂದಿನ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಅವರು 2010ರಲ್ಲೇ ನೂತನ ಕಟ್ಟಡ ರಚನೆಗೆ ಮುಂದಾಗಿ ಅದರ ಕುರಿತಾಗಿ ಸಮಿತಿಯೊಂದನ್ನ ರಚಿಸಿ, ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಅಂದಿನ ಕಾಲಕ್ಕೇ ಸುಮಾರು 1200 ಕೋಟಿಗಳ ವೆಚ್ಚದಲ್ಲಿ ನೂತನ ಸಂಸತ್ ಭವನ ರಚಿಸಲು ಯೋಜನೆಯನ್ನು ರೂಪಿಸಲಾಗಿತ್ತು. ನಂತರ 2014 ರಲ್ಲಿ ಮೋದಿಯವರು ಪ್ರಧಾನಿಯಾದರೂ, ಅವರ ಎರಡನೇ ಅವಧಿಯಲ್ಲಿ 2019ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಲ್ಲದೇ, ಅದರ ಕುರಿತಾಗಿ ನ್ಯಾಯಾಲಯದಲ್ಲಿದ್ದ ಎಲ್ಲಾ ವ್ಯಾಜ್ಯಗಳೂ ಬಗೆ ಹರಿದ ನಂತರ ಡಿಸೆಂಬರ್ 10, 2020 ರಂದು ಪ್ರಧಾನಿ ಮೋದಿಯವರು ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದದ್ದು ಈಗ ಇತಿಹಾಸ.
ಕೇವಲ 30 ತಿಂಗಳುಗಳ ದಾಖಲೆಯ ಸಮಯದಲ್ಲೇ 971 ಕೋಟಿಗಳ ವೆಚ್ಚದಲ್ಲಿ ಅತ್ಯಂತ ಆಧುನಿಕ ಶೈಲಿಯ ಸುಸಜ್ಜಿತವಾದ ಹಿಂದಿನ ಸಂಸತ್ ಭವನಕ್ಕಿಂತಲೂ ಭವ್ಯವಾದ ಹೊಸ ಸಂಸತ್ ಭವನ ಕಟ್ಟಡ ಸಿದ್ಧವಾಗಿದ್ದು. ಇದೇ ಭಾನುವಾರ ಮೇ 28, 2023ಕ್ಕೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟನೆ ಮಾಡುತ್ತಿರುವುದು ನಿಜಕ್ಕೂ ಎಲ್ಲಾ ಭಾರತೀಯರು ಸಂಭ್ರಮ ಪಡುವಂತಹ ವಿಷಯವಾಗಿದೆ. ಎಂದಿನಂತೆ ಮೋದಿಯವರನ್ನು ಮತ್ತು ಅವರ ಸಿದ್ಧಾಂತವನ್ನು ವಿರೋಧಿಸುವ ಸುಮಾರು 20 ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಮೋದಿಯವರ ಬದಲು ರಾಷ್ಟ್ರಪತಿಗಳು ಇಲ್ಲವೇ ಲೋಕಸಭಾ ಸ್ಪೀಕರ್ ಈ ಕಟ್ಟಡವನ್ನು ಉಧ್ಘಾಟಿಸಬೇಕು ಎಂಬ ವರಾತೆಯನ್ನು ತೆಗೆದು ಅದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿ ನ್ಯಾಯಾಧೀಶರಿಂದ ತಪರಾಕಿ ಹಾಕಿಸಿ ಕೊಂಡ ನಂತರ ಉಧ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಕಾಕತಾಳೀಯವೋ, ಇಲ್ಲವೇ ಪೂರ್ವ ನಿರ್ಧಾರಿತವೋ ಕಾಣೇ, ಮೇ 28, ರಾಷ್ಟ್ರಕಂಡ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂಗಳ ಕಣ್ಮಣಿ ಶ್ರೀ ವೀರ ಸಾವರ್ಕರ್ ಅವರ ಜನ್ಮದಿನವಾಗಿದ್ದು, ಅಂದೇ ಈ ನೂತನ ಸಂಸತ್ ಭವನ ಉದ್ಘಾಟನೆ ಆಗುತ್ತಿರುವುದೂ ಸಹಾ, ಸಾವರ್ಕರ್ ಹೆಸರು ಕೇಳಿದರೆ ಹಾವು ತುಳಿದಂತೆ ಬೆಚ್ಚಿ ಬೀಳುವ ಕಾಂಗ್ರೆಸ್ ಪಕ್ಷದವರಿಗೆ ಕೋಪವನ್ನು ತರಿಸಿದ್ದರೂ ಅಚ್ಚರಿ ಇಲ್ಲವಾಗಿದೆ. ಅದೇ ರೀತಿಯಲ್ಲೇ ಮೇ 28, 23 ಎಲ್ಲವನ್ನೂ ಸೇರಿಸಿದರೆ 56 ಬರುತ್ತದೆ. 28.05.23=56 ಮೋದಿಯವರದ್ದು 56 inch ಎಂದೇ ವಿರೋಧಿಗಳು ಒಪ್ಪುವ ಕಾರಣ, ಅದೂ ಸಹಾ ಅವರಿಗೆ ಕೋಪ ತರಿಸಿರಬಹುದು.
ಇನ್ನು ಹಳೆಯ ಮತ್ತು ಹೊಸಾ ಸಂಸತ್ ಭವನವನ್ನು ತುಲನೆ ಮಾಡಿದರೆ, ಹಳೆಯ ಸಂಸತ್ ಭವನ ಕರ್ನಾಟಕದ ಐಹೊಳೆಯ ದೇವಾಲಯದಂತೆ ವೃತ್ತಾಕಾರದಲ್ಲಿದ್ದರೆ, ಹೊಸದಾಗಿ ನಿರ್ಮಿಸಿರುವ ಸಂಸತ್ ಭವನ ಗಾಳಿ ಮತ್ತು ಬೆಳಕು ಚೆನ್ನಾಗಿ ಬರುವಂತೆ ಇರಲು ತ್ರಿಕೋನಾಕಾರದಲ್ಲಿ ನಿರ್ಮಣವಾಗಿದ್ದು, ಹಳೆಯ ಸಂಸತ್ ಭವನದ ಪಕ್ಕದಲ್ಲೇ ಇದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿರುವ ಈ ನೂತನ ಭವನ, ಭೂಕಂಪದ ಜೊತೆಗೆ ಇತರೇ ಯಾವುದೇ ಪ್ರಕೃತಿ ವಿಕೋಪಗಳನ್ನೂ ತಡೆದುಕೊಂಡು ಸುಮಾರು 150 ವರ್ಷಗಳ ಕಾಲ ಯಾವುದೇ ರೀತಿಯ ತೊಂದರೆ ಇಲ್ಲದೇ ಇರುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯು ಅತ್ಯಂತ ವಿಶಾಲವಾಗಿದ್ದು, ಲೋಕಸಭೆಯಲ್ಲೇ ಸುಮಾರು 888 ಸಾಂಸದರು ಮತ್ತು ರಾಜ್ಯಸಭೆಯಲ್ಲಿ 384 ಸಾಂಸದರು ಕೂರುವಂತೆ ವಿನ್ಯಾಸ ಮಾಡಲಾಗಿದ್ದು ಭವಿಷ್ಯದಲ್ಲಿ ಹೆಚ್ಚಾಗುವ ಸಾಂಸದರ ಸಂಖ್ಯೆಗೆ ಅನುಗುಣವಾಗಿ ರೂಪಿಸಲಾಗಿದೆ.
ಹಿಂದಿನ ಕಟ್ಟಡದಲ್ಲಿ ಜಂಟಿ ಅಧಿವೇಶನ ನಡೆದಾಗ ಸಂಟ್ರಲ್ ಹಾಲ್ ನಲ್ಲಿ ಎರಡೂ ಸಭೆಗಳ ಸಂಸದರನ್ನು ಕೂರಿಸಲು ಕಷ್ಟಪಡಬೇಕಾಗುತ್ತಿತ್ತು. ಅದರೆ ಈಗಿನ ನೂತನವಾದ ಕಟ್ಟದಲ್ಲಿ ಒಟ್ಟಿಗೆ ಸುಮಾರು 1,272 ಮಂದಿ ಕುಳಿತುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬಹುದಾಗಿದೆ. ಇಷ್ಟೇ ಅಲ್ಲದೇ, ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವಾಲಯ, ಅವರ ಸಿಬ್ಬಂಧಿ ವರ್ಗ ಎಲ್ಲರೂ ಸಹಾ ಒಂದೇ ಕಟ್ಟಡದಲ್ಲಿ ವಿಶಾಲವಾದ ಆಲದ ಮರದ ಕೆಳಗೆ ಬಿಳಿಲುಗಳಂತೆ ಕುಳಿತು ಕೆಲಸ ಮಾಡಬಹುದಾಗಿದೆ.
ಇನ್ನು ಹೊಸ ಕಟ್ಟಡ ವಿನ್ಯಾಸವೂ ಸಹಾ ಹಿಂದಿನಂತೆಯೇ ಭಾರತೀಯ ಸಾಂಸ್ಜೃತಿಕ ಶೈಲಿಯನ್ನೇ ಹೋಲುತ್ತಿದ್ದು, ಲೋಕಸಭೆಯ ಹಾಲ್ ರಾಷ್ಟ್ರಪಕ್ಷಿ ನವಿಲಿನಂತೆ ಕಾಣುವಂತೆ ವಿನ್ಯಾಸ ಮಾಡಲಾಗಿದ್ದು ಉತ್ತಮವಾಗಿ ಗಾಳಿ, ಬೆಳಕಿಗೆ ಕೊರತೆ ಇರದಂತೆ ಎಚ್ಚರಿಕೆ ವಹಿಸಲಾಗಿದೆ. ಅದೇ ರೀತಿಯಾಗಿ ರಾಜ್ಯಸಭೆಯನ್ನು ದೇಶದ ರಾಷ್ಟ್ರ ಪುಷ್ಪ ಕಮಲದ ಹೂವಿನ ರೀತಿಯಲ್ಲಿ ನಿರ್ಮಾಣ ಮಾಡುವ ಮೂಲಕ ನಮ್ಮ ಪೌರಾಣಿಕ ದೇವಾನು ದೇವತೆಗಳು ಕಮಲದ ಹೂವಿನ ಮೇಲೆ ಕುಳಿತಿರುವಂತೆ ವಿನ್ಯಾಸಗೊಳಿಸಲಾಗಿರುವುದು ಎಲ್ಲರ ಮನವನ್ನು ಸೆಳೆಯುತ್ತಿದೆ. ಇದಲ್ಲದೆ ಸಾಂವಿಧಾನಿಕ ಭವನ ಎನ್ನುವ ವಿಶಾಲವಾದ ಭವನವಲ್ಲದೇ ಅದರ ಸುತ್ತಲೂ ಇರುವ ಕಚೇರಿಗಳೂ ಸಹಾ ಅತ್ಯಾಧುನಿಕ ವಿನ್ಯಾಸದಿಂದ ವಿಶಾಲವಾಗಿದೆಯಲ್ಲದೇ, ಸಭೆಗಳು ನಡೆಯುವಾಗ ಅಧುನಿಕ ಶೈಲಿಯ ಆಡಿಯೋ ಹಾಗೂ ವಿಡಿಯೋ ವ್ಯವಸ್ಥೆ ಮಾಡಲಾಗಿದ್ದು, ಹಿಂದಿನ ಭವನಕ್ಕಿಂತಲೂ ದೊಡ್ಡದಾದ ಗ್ರಂಥಾಲಯ ಈ ನೂತನ ಸಂಸತ್ ಭವನದಲ್ಲಿ ಇರುವುದು ವಿಶೇಷವಾಗಿದೆ.
ಎಂದಿನಂತೆ ಪ್ರಧಾನಿಗಳ make in India ಮಾದರಿಯಲ್ಲಿ ಸ್ಥಳೀಯ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರು ದಾಖಲೆಯ ಸಮಯದಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡ ನಿಸ್ಸಂದೇಹವಾಗಿ ಭಾರತದ ಹೆಗ್ಗುರುತಾಗುವುದರಲ್ಲಿ ಸಂದೇಹವೇ ಇಲ್ಲವಾಗಿದೆ. ಇನ್ನು ಸ್ವಾವಲಂಭಿ ಮತ್ತು ಸ್ವಾಭಿಮಾನಕ್ಕೆ ಒತ್ತು ಕೊಟ್ಟು ಈ ನೂತನ ಸಂಸತ್ ಭವನದ ಮೂರೂ ಪ್ರವೇಶ ದ್ವಾರಗಳಿಗೆ ವಿಭಿನ್ನವಾದ ಹೆಸರುಗಳನ್ನು ನೀಡಲಾಗಿದ್ದು, ಸಂಸದರು ಪ್ರವೇಶಿಸುವ ದ್ವಾರಕ್ಕೆ ಜ್ಞಾನ ದ್ವಾರ, ಗಣ್ಯರು ಪ್ರವೇಶಿಸುವ ದ್ವಾರಕ್ಕೆ ಶಕ್ತಿ ದ್ವಾರ ಹಾಗೂ ಅಧಿಕಾರಿ ವರ್ಗ ಪ್ರವೇಶಿಸುವ ದ್ವಾರಕ್ಕೆ ಕರ್ಮ ದ್ವಾರ ಎಂದು ಹೆಸರಿಟ್ಟಿದ್ದು, ಭಾನುವಾರ ಅಧಿಕೃತವಾಗಿ ಉದ್ಘಾಟನೆ ಆಗಲಿರುವ ಸಂಸತ್ ಭವನಕ್ಕೆ ಯಾವ ಹೆಸರು ಇಡಲಾಗುತ್ತದೆ ಎಂಬುದೇ ಎಲ್ಲರಿಗೂ ಕುತೂಹಲಕಾರಿಯಾಗಿದೆ. ನುಡಿದಂತೆಯೇ ಇಷ್ಟು ಭವ್ಯವಾದ ಸಂಸತ್ ಭವನವನ್ನು ನಿರ್ಮಿಸಿ, ಖಂಡಿತವಾಗಿಯೂ ಇದನ್ನು ಮುಂದಿನ ಚುನಾವಣಾ ಸಮಯದಲ್ಲಿ ರಾಜಕೀಯವಾಗಿ ಬಿಜೆಪಿ ಪಕ್ಷ ಬಳಸಿಕೊಳ್ಳ ಬಹುದು ಎಂಬ ದೂ(ದು)ರಾಲೋಚನೆಯಿಂದ ಕಾಂಗ್ರೇಸ್ ಆದಿಯಾಗಿ ಅನೇಕ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿರುವುದು ಜನರಿಗೆ ಅರ್ಥವಾಗಿ ಹಾಸ್ಯಾಸ್ಪದವಾಗಿ ಕಾಣುತ್ತಿರುವುದಂತೂ ಸುಳ್ಳಲ್ಲ.
ಸಂಸತ್ ಎನ್ನುವುದು ಪ್ರಜಾಪ್ರಭುತ್ವದ ಆತ್ಮವಾಗಿದ್ದು, ಅದು ಮೌಲ್ಯಗಳಿಂದ ಕಟ್ಟಲಾಗಿದೆಯೇ ಹೊರತು ಅಹಂಕಾರದಿಂದ ಅಲ್ಲ ಎಂದು ಅನರ್ಹಗೊಂಡಿರುವ ರಾಹುಲ್ ಗಾಂಧಿ ಹೇಳಿರುವುದಲ್ಲದೇ, ನಮ್ಮ ದೇಶದಲ್ಲಿ ರಾಷ್ಟ್ರಪತಿ ಹುದ್ದೆ ಎನ್ನುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಹುದ್ದೆಯಾಗಿದ್ದು, ನೂತನ ಸಂಸತ್ ಭವನವನ್ನು ಅವರಿಂದಲೇ ಉದ್ಘಾಟನೆ ಮಾಡಿಸಬೇಕಿತ್ತು ಎಂದು ಹೇಳುವ ಮೂಲಕ ಕಿತಾಪತಿ ತೆಗೆದಿದ್ದಾರೆ. ಹಾಗೆ ನೋಡಿದರೆ, ನಮ್ಮ ದೇಶದ ಸಂವಿಧಾನದಲ್ಲಿ ಪ್ರಧಾನ ಮಂತ್ರಿಗಳು ನೂತನ ಕಟ್ಟವನ್ನು ಉಧ್ಘಾಟಿಸಬಾರದು ಎಂಬ ನಿಯಮ ಎಲ್ಲೂ ಇಲ್ಲಾ ಎಂಬುದನ್ನು ಪಪ್ಪೂ ಮರೆತಂತಿದೆ.
ಈ ಹಿಂದೆ 1975 ರಲ್ಲಿ ಅಂದಿನ ರಾಷ್ಟ್ರಪತಿ ಫಕ್ರದ್ದೀನ್ ಅಹಮದ್ ಬದಲಾಗಿ ಕಾಂಗ್ರೇಸ್ಸಿನ ಶ್ರೀಮತಿ ಇಂದಿರಾ ಗಾಂಧಿಯವರೇ ಪಾರ್ಲಿಮೆಂಟ್ ಅನೆಕ್ಸ್ ಉದ್ಘಾಟನೆ ಮಾಡಿದ್ದರು. ಅದೇ ರೀತಿಯಲ್ಲಿ 1987ರಲ್ಲಿ ಆರ್ ವೆಂಕಟರಾಮನ್ ರವರು ರಾಷ್ಟ್ರಪತಿಗಳಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ನೂತನ ಗ್ರಂಥಾಲಯವನ್ನು ಶ್ರೀ ರಾಜೀವ್ ಗಾಂಧಿಯವರೇ ಉಧ್ಭಾಟಿಸಿದ್ದರು. 2009 ರಲ್ಲಿ ಮನಮೋಹನ ಸಿಂಗ್ ರವರು ಪ್ರಧಾನಿಗಳಾಗಿದ್ದಾಗ, ಸರ್ಕಾರದ ಯಾವುದೇ ಮಂತ್ರಿಯಾಗದೇ ಇದ್ದರೂ, ಬಾಂದ್ರ ಮತ್ತು ವರ್ಲೀ ಸೀ ಲಿಂಕ್ ಬ್ರಿಡ್ಜ್ ಶ್ರೀಮತಿ ಸೋನಿಯಾಗಾಂಧಿ ಉದ್ಘಾಟನೆ ಮಾಡಿದ್ದರೆ, 2010 ರಲ್ಲಿ ಮತ್ತೆ ಅದೇ ಕಾಂಗ್ರೇಸ್ ಪಕ್ಷದ ಅಧಿನಾಯಕಿಯೇ ಅಟಲ್ ಟನಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದನ್ನು ಪಪ್ಪು ಮರೆತಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮರ್ಮು ರವರನ್ನು ಸೋಲಿಸಲು ಪ್ರಯತ್ನ ಮಾಡುವ ಮೂಲಕ ಆದಿವಾಸಿ ಮಹಿಳೆಗೆ ಅಪಮಾನನ ಮಾಡಿದ ಕಾಂಗ್ರೇಸ್ ಈಗ ನೂತನ ಸಂಸತ್ ಭವನ ಪ್ರಧಾನಿಗಳು ಉದ್ಘಾಟಿಸಿದರೆ ರಾಷ್ಟ್ರಪತಿಗಳಿಗೆ ತೋರುವ ಅಗೌರವ ಎಂದು ಹಲುಬುತ್ತಿರುವುದು ನಿಜಕ್ಕೂ ಲಜ್ಜೆಗೇಡಿ ತನವಾಗಿದೆ.
ಹಳೆಯ ಸಂಸತ್ ಭವನದ ಎದುರಿಗಿದ್ದ ಗಣ್ಯರ ಪ್ರತಿಮೆಗಳಂತೆ ನೂತನ ಕಟ್ಟಡದ ಮುಂದೆಯೂ, ಮಹಾತ್ಮ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಬಾಯ್ ಪಟೇಲ್, ಚಾಣಕ್ಯರರ ಪ್ರತಿಮೆಗಳನ್ನು ಸ್ಥಾಪಿಸಲು ಯೋಚಿಸಲಾಗಿದ್ದು. ನೂತನ ಸಂಸತ್ ಭವನ ಕಟ್ಟಡವು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ನಂತರ, ಹಳೆಯ ಸಂಸತ್ ಭವನವನ್ನು ಪ್ರಜಾಪ್ರಭುತ್ವದ ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ಪ್ರಸ್ತುತ ಸರ್ಕಾರ ನಿರ್ಧರಿಸಿದೆ
ಇನ್ನೂ ಸಂಸತ್ ಭವನದ ಮೇಲೆ ಸುಂದರವಾಗಿ ಸಾರನಾಥದಲ್ಲಿ ಇರುವಂತೆಯೇ ಸ್ಥಾಪಿಸಿರುವ ನಾಲ್ಕು ತಲೆಯ ಸಿಂಹ ದೈರ್ಯ, ಸಾಹಸ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಪ್ರತೀಕವಾಗಿದೆ ಎಂದರೂ ತಪ್ಪಾಗದು.
1947 ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಗೊಳಿಸುವ ಸಂದರ್ಭದಲ್ಲಿ ಅಂದಿನ ಕಡೆಯ ವೈಸ್ ರಾಯ್ ಆಗಿದ್ದ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿಯವರು ರಾಜ ರಾಜ ಚೋಳರ ಕಾಲದಲ್ಲಿ ಒಬ್ಬ ರಾಜನಿಂದ ಮತ್ತೊಬ್ಬರಿಗೆ ಅಧಿಕಾರದ ವರ್ಗಾವಣೆ ಮಾಡುವ ಸಂದರ್ಭದಲ್ಲಿ ತಮ್ಮ ಉತ್ತರಾಧಿಕಾರಿಗೆ ರಾಜದಂಡ ಅಥವಾ ‘ಸೆಂಗೊಲನ್ನು ಹಸ್ತಾಂತರಿಸುವ ರೂಡಿಯನ್ನು ನೆನಪಿಸುವಂತೆ, ಲಾರ್ಡ್ ಮೌಂಟ್ ಬ್ಯಾಟನ್ ಭಾರತದ ಪ್ರಥಮ ಪ್ರಧಾನಿಗಳಾದ ಶ್ರೀ ಜವಾಹರಲಾಲ್ ನೆಹರು ಅವರರಿಗೆ ನೀಡಿದ್ದ ಸೆಂಗೊಲ್ ಅನ್ನು ಸಹಾ ಈ ಹೊಸಾ ಸಂಸತ್ತಿನ ಕಟ್ಟಡದಲ್ಲಿ ಸ್ಥಾಪಿಸುತ್ತಿರುವುದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆಯಾಗಿದೆ. ಸದ್ಯಕ್ಕೆ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿರುವ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ಈ ಸೆಂಗೊಲ್ ಮೇಲಿರುವ ನಂದಿಯ ಸುಂದರವಾದ ಕೆತ್ತನೆ ನಿಜಕ್ಕೂ ನೋಡಲು ಅದ್ಭುತವಾಗಿದೆ.
ಸೆಂಗೋಲ್ ನಮ್ಮ ಹೆಮ್ಮೆಯ ಪ್ರತೀಕ ಎಂದು ತಮಿಳುನಾಡಿನವರು ಗರ್ವ ಪಟ್ಟುಕೊಳ್ಳುವ ಸಮಯದಲ್ಲೇ ಅರೇ ಇದು ನಮ್ಮ ನಂದಿಕೋಲು. ನಮ್ಮ ಚಾಲುಕ್ಯರ ಕಾಲದಲ್ಲೇ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲಿ ಹೀಗೆ ಕಂಡು ಬರುತ್ತದೆ ನೋಡಿ ಎಂದು ನಮ್ಮ ಇತಿಹಾಸಕಾರರು ತಿಳಿಸುವ ಮೂಲಕ ಕನ್ನಡಿಗರೂ ಹೆಮ್ಮೆ ಪಟ್ಟುಕೊಳ್ಳುವಂತಾಗಿರುವುದು ಗಮನಾರ್ಹವಾಗಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ನಿರ್ಮಾಣಗೊಂಡು ಅವರ ಅಮೃತಹಸ್ತದಿಂದಲೇ ಉಧಾಟನೆಯಾಗಲಿರುವ ಸಮಾರಂಭದಲ್ಲೇ ಸಕ್ ಕಾ ಸಾತ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್ ಎನ್ನುವ ಅವರ ಆಶಯದಂತೆಯೇ ಕಟ್ಟಡದ ನಿರ್ಮಾಣಕ್ಕಾಗಿ ಹಗಲಿರಳೂ ಶ್ರಮಿಸಿದ ಸುಮಾರು 40,000 ಕಾರ್ಮಿಕರನ್ನು ಪ್ರಧಾನಿಗಳು ಸನ್ಮಾನ ಮಾಡಲಿರುವುದು ಗಮನಾರ್ಹವಾದ ಅಂಶವಾಗಿದೆ.
ಇಂತಹ ಐತಿಹಾಸಿಕ ವಿಷಯ ನಮ್ಮ ಕಾಲಘಟ್ಟದಲ್ಲೇ ಆಗುತ್ತಿರುವುದು ನಿಜಕ್ಕೂ ಅದ್ಭುತವಾದ ಸಂಗತಿ ಎಂದೇ ದೇಶವಾಸಿಗಳು ಭಾವಿಸಿರುವ ಸಂದರ್ಭದಲ್ಲಿ, ಅಂತಹ ಸುಂದರವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಒಂದು ಸುಸಂದರ್ಭ ಎಂದು ಭಾವಿಸುವ ಅನೇಕರು ಇರುವಾಗ, ತಮ್ಮ ಸೈದ್ದಾಂತಿಕ ವಿರೋಧಾಭಾಸಕ್ಕಾಗಿ ಉದ್ಘಾಟನೆಯನ್ನು ಬಹಿಷ್ಕರಿಸುತ್ತಿರುವ ಪ್ರತಿಪಕ್ಷಗಳು ಮುಂದೆ ನಡೆಯುವ ಸಂಸತ್ತಿನ ಅಧಿವೇಶನಗಳಿಗೆ ಯಾವ ಮುಖ ಹೊತ್ತು ಬರುತ್ತಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದ್ದು, ಇಂದು ಸಂಸತ್ ಭವನದ ಉದ್ಘಾಟನೆಯನ್ನು ಭಹಿಷ್ಕರಿಸುವವರನ್ನು ಮತದಾರರು ಶಾಶ್ವತವಾಗಿ ಸಂಸತ್ತಿನಿಂದ ದೂರ ಇರಿಸುವ ಕಾಲ ಹತ್ತಿರವಾಗಿದ್ದು, ವಿನಾಶಕಾಲೇ ವಿಪರೀತ ಬುದ್ದಿ ಎಂದು ಜನರು ಹೇಳುತ್ತಿರುವುದಲ್ಲಿ ತಪ್ಪಿಲ್ಲ ಎಂದು ಕಾಣುತ್ತಿದೆ. ಇದು ಪ್ರತಿಯೊಂದು ಘಟನೆಯನ್ನೂ ರಾಜಕೀಯಗೊಳಿಸುತ್ತಿರುವ ಪ್ರತಿಪಕ್ಷಗಳ ಸಂಕುಚಿತ ಮನೋಭಾವನೆಯನ್ನು ಜಗಜ್ಜಾಹೀರಾತು ಮಾಡುತ್ತಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಕಾಂಗ್ರೆಸ್ ಅಯೋಗ್ಯರು ಇರುವುದೇ ಮೊಸರಲ್ಲಿ ಕಲ್ಲು ಹುಡುಕಲು. ಅವರ ಬಗ್ಗೆ ಹೆಚ್ಚು ಬರೆದು ನಿಮ್ಮ ಸುಂದರ ಲೇಖನಕ್ಕೆ ಅವಮಾನ ಮಾಡುವುದು ಬೇಡ.
LikeLiked by 1 person
ಹೌದು ಅದಕ್ಕಾಗಿಯೇ ಅವರ ಸಂಕುಚಿತ ಮನೋಭಾವನೆ ಎಲ್ಲರಿಗೂ ತಕ್ಕಮಟ್ಟಿಗೆ ಅರ್ಥವಾಗುವಂತೆ ಬರೆದಿದ್ದೇನೆ
LikeLike
ನನಗೆ ಅದು ಸಂಕುಚಿತ ಅನ್ನುವುದಕ್ಕಿಂತ ಕುತ್ಸಿತ, ನೀಚ ಭಾವನೆ ಅನ್ನಿಸುತ್ತೆ.
LikeLiked by 1 person
ಸರಿಯಾಗಿ ಹೇಳಿದ್ರೀ
LikeLike
ಉತ್ತಮವಾದ ಲೇಖನ, ಊರು ಎಂದ ಮೇಲೆ ಹೊಲಗೇರಿ ಇರಲೇಬೇಕಲ್ಲವೇ ?
LikeLiked by 1 person
ಸರಿಯಾಗಿ ಹೇಳಿದ್ರೀ
LikeLike