ಅಲ್ಪ ವಿದ್ಯೆ, ಮಹಾಗರ್ವಿ

ಕರ್ನಾಟಕ ರಾಜ್ಯರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮ ಸಿಂಗ್ ಅವರದ್ದು ಒಂದೇ ತಂದೆ ತಾಯಿ ಗರ್ಭದಲ್ಲಿ ಹುಟ್ಟದೇ ಇದ್ದರೂ, ಒಂದು ರೀತಿಯಲ್ಲಿ ರಾಮ ಲಕ್ಷ್ಮಣರಂತಹ ಅಣ್ಣ ತಮ್ಮಂದಿರಂತಹ ಅವಿನಾಭಾವ ಸಂಬಂಧ. ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತಕ್ಕೆ ಬಂದಾಗಲೆಲ್ಲಾ ಇವರಿಬ್ಬರೂ ಸಹಾ ಪ್ರಭಾವಿ ಖಾತೆಗಳ ಮಂತ್ರಿಗಳಾಗಿಯೇ ಇರುತ್ತಿದ್ದರು. 2004ರ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಹೋದಾಗ, ಮೊತ್ತ ಮೊದಲ ಬಾರಿಗೆ ಕರ್ಣಾಟಕದಲ್ಲಿ ಕಾಂಗ್ರೇಸ್ ಮತ್ತು ಜನತಾದಳ ಸಮ್ಮಿಶ್ರ ಸರ್ಕಾರ ನಡೆಸಲು ನಿರ್ಧರಿಸಿದಾಗ, ಮುಖ್ಯಮಂತ್ರಿಗಳಾಗುವವರ ಸಾಲಿನಲ್ಲಿ ಖರ್ಗೆಯವರ ಹೆಸರೇ ಮಂಚೂಣಿಯಲ್ಲಿತ್ತಾದರೂ, ಮುಂದೆ ಬಂದರೆ ಹಾಯದೇ, ಹಿಂದೆ ಬಂದರೆ ಒದೆಯಂದಂತಹ ಸಾಧು ಸ್ವಭಾವದವರಾದ ಧರ್ಮಸಿಂಗ್ ತಾವು ಹೇಳಿದಂತೆ ಕೇಳುತ್ತಾರೆ ಎನ್ನುವ ಆಶಯದಿಂದ ದೇವೇಗೌಡರು ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದಾಗ, ಸ್ವಾಭಾವಿಕವಾಗಿ ಖರ್ಗೆಯವರಿಗೆ ಆದ ಬೇಸರವನ್ನು ತಣಿಸುವ ಸಲುವಾಗಿ ಖರ್ಗೆಯವರಿಗೆ ಇಷ್ಟವಿಲ್ಲದಿದ್ದರೂ, ಉರ್ದು ಮಿಶ್ರಿತ ಹಿಂದಿಯ ಭಾಷೆಯ ಅರಿವಿದ್ದ ಕಾರಣ ಅವರನ್ನು 2009 ರಲ್ಲಿ ಮೊದಲ ಬಾರಿಗೆ ರಾಜ್ಯರಾಜಕಾರಣಿದಿಂದ ರಾಷ್ಟ್ರ ರಾಜಕಾರಣಕ್ಕೆ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಸಾಂಸದರನ್ನಾಗಿ ಮಾಡಿಕಳುಹಿಸಲಾಯಿತು.

priyankಹೀಗೆ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಗೆ ಆಯ್ಕೆಯಾದಾಗ ಅವರ ಗುರುಮಿಟ್ಕಲ್ ಮೀಸಲು ವಿಧಾನಸಭೆಯ ಉಪಚುನಾವಣೆಯಲ್ಲಿ ಇಂದಿನ ಲೇಖನದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಹಿರಿಯ ಪುತ್ರ ಪ್ರಿಯಾಂಕ್ ಖರ್ಗೆ (ಇಂದಿರಾ ಗಾಂಧಿಯವರ ಭಟ್ಟಂಗಿ ತನದ ಪರಮಾವಧಿ ತನಕ್ಕೆ ಕುರುಹುವಾಗಿ ಅವರ ಮೊಮ್ಮಗಳ ಹೆಸರನ್ನು ಖರ್ಗೆ ತಮ್ಮ ಹಿರಿಯ ಮಗನಿಗೆ ಇಡಲಾಗಿದ್ದು, ಅವರ ಎರಡನೇಯ ಮಗನ ಹೆಸರು ರಾಹುಲ್ ಎಂಬುದಾಗಿದೆ) ಅವರನ್ನು ಉಪಚುನಾವಣೆಯಲ್ಲಿ ಕಣಕ್ಕೆ ಇಳಿಸಲಾಯಿತು.

ಬಾಯಿ ಬಿಟ್ಟರೆ ಅಂಬೇಡ್ಕರ್ ಸಂವಿಧಾನವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವ ಮರಿ ಖರ್ಗೆ, ಅದೇ ಅಂಬೇಡ್ಕರ್ ಕೊಟ್ಟ ಮೀಸಲಾತಿಯ ಸಕಲ ಸೌಲಭ್ಯಗಳು ಇದ್ದರೂ, ಹುಟ್ಟಿದಾಗಲಿಂದಲೇ ಅಪ್ಪಾ ಮಾಡಿಟ್ಟಿದ್ದ ಸಕಲೈಶ್ವರ್ಯಗಳು ಇದ್ದರೂ, ಸದಾಶಿವ ನಗರದ ಪೂರ್ಣಪ್ರಜ್ಞ ದಂತಹ ಪ್ರತಿಷ್ಟಿತ ಶಾಲೆಯಲ್ಲಿ ಓದಿದ್ದರೂ, ವಿದ್ಯೆ ಮೈಗಂಟದೇ ಪಿಯೂಸಿ ಫೇಲ್ ಆದ ನಂತರ, ಯಾವುದೋ ಮಲ್ಟಿ ಮೀಡಿಯಾ ಕೋರ್ಸ್ ಮುಗಿಸಿಕೊಂಡು ನಾಮಕಾವಾಸ್ಥೆಗೊಂದು ಕೆಲಸಕ್ಕೆ ಸೇರಿ ಅಗ್ಗಾಗ್ಗೇ ಆವರಿವರ ಹುಟ್ಟು ಹಬ್ಬದ ಪೋರ್ಸ್ಟರ್ಸ್ಗಳನ್ನು ಸದಾಶಿವ ನಗರ ಮತ್ತು ಬೆಂಗಳೂರು ಅರಮನೆ ಸುತ್ತಾ ಮುತ್ತಾ ಹಾಕಿಸಿಕೊಂದು ಮಿಂಚುವುದರ ಹೊರತಾಗಿ ಮತ್ತೇನೂ ಹೆಚ್ಚಿನ ವಿದ್ಯಾರ್ಹತೆ ಇಲ್ಲದಿದ್ದ ಮರಿ ಖರ್ಗೆ, ಪ್ರಥಮ ಚುಂಬನೇ ದಂತ ಭಗ್ನಂ ಎನ್ನುವಂತೆ ಉಪಚುನಾವಣೆಯಲ್ಲಿ ಸೋತು ಮನೆಯಲ್ಲಿ ಕೂರುವಂತಾಯಿತು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರಗಳ ಮರುವಿಂಗಡಣೆಯಾದ ಪರಿಣಾಮ ಗುರುಮಿಟ್ಕಲ್ ವಿಧಾನ ಸಭೆ ಚಿತ್ತಾಪುರ ಮೀಸಲಾತಿ ಕ್ಷೇತ್ರವಾಗಿ ಮಾರ್ಪಟ್ಟಾಗ, ಅಪ್ಪನ ಹೆಸರಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ನಂತರ ಅಪ್ಪನ ದಯೆಯಿಂದಲೇ ಸಿದ್ದರಾಮಯ್ಯನನವರ ಮಂತ್ರಿಮಂಡಲದಲ್ಲಿ IT ಖಾತೆಯ ಮಂತ್ರಿಯಾದಾಗ, ತಲೆ ಭುಜದ ಮೇಲೆ ನಿಲ್ಲದಂತಾಯಿತು.

WhatsApp Image 2024-03-02 at 06.19.49ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಆದಿಯಾಗಿ, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ನಂತಹವರಿಗೆ ಅಪ್ಪನ ಹೆಸರಿಲ್ಲದೇ ಇದ್ದಲ್ಲಿ, ಕಾಂಗ್ರೇಸ್ ಪಕ್ಷದ ಕಛೇರಿಯ ಮುಂದೆ ಪೆಟ್ಟಿ ಅಂಗಡಿ ನಡೆಸಲು ಯೋಗ್ಯತೆ ಇಲ್ಲದೇ ಹೋದರೂ ಅವರ್ಯಾರಿಗೂ ದರ್ಪಕ್ಕೇನೂ ಕಡಿಮೆ ಇಲ್ಲ, ಇವರೆಲ್ಲರೂ ಓದಿನಲ್ಲಿ ಅಷ್ಟಕ್ಕಷ್ಟೇ ಆದರೂ, ಅವರಿಗಿರುವ ಧಿಮಾಕನ್ನು ಇಡೀ ಪ್ರಂಪಚಕ್ಕೆ ಹಂಚಿದರೂ ಇನ್ನೂ ಅರ್ಥ ಪಾಲು ಉಳಿಯುತ್ತದೆ. ಇವರೆಲ್ಲರೂ ಅಲ್ಪ ವಿದ್ಯಾ ಮಹಾಗರ್ವಿ ಎನ್ನುವುದಕ್ಕೆ ಅನ್ವರ್ಥ ವ್ಯಕ್ತಿಗಳು ಎಂದರೂ ತಪ್ಪಾಗದು. ಅದರಲ್ಲೂ ಮರಿ ಖರ್ಗೆಯಂತೂ ತನಗೆಗೊತ್ತಿಲ್ಲದ ವಿಷಯವಿಲ್ಲಾ. ತಾನೇ ಅತೀ ಬುದ್ಧಿವಂತ ಎಂದು ಎಲ್ಲದ್ದರಲ್ಲೂ ಮೂಗು ತೂರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಕೊಬ್ಬಿ ಮೆರೆಯುತ್ತಿರುವುದು ಇಡೀ ಪ್ರಪಂಚಕ್ಕೇ ಗೊತ್ತಿದೆ. 2023ರ ವಿಧಾನಸಭೆಯಲ್ಲಿ ಬಿಟ್ಟಿ ಭಾಗ್ಯಗಳಿಂದಾಗಿ ಜನರನ್ನು ಮರಳು ಮಾಡಿ ಬಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದೇ ತಡಾ ಅವರನ್ನು ಕೈಯ್ಯಲ್ಲಿ ಹಿಡಿಯಲು ಸಾಧ್ಯವಿಲ್ಲವಾಗಿದೆ.

kharge2ಇದೇ ಸಮಯಕ್ಕೆ ಸರಿಯಾಗಿ ಸೋತು ಸುಣ್ಣವಾಗಿದ್ದ ಕಾಂಗ್ರೇಸ್ ಪಕ್ಷಕ್ಕೆ, ನಕಲಿ ಗಾಂಧಿಗಳ ಮುಖ ನೋಡಿ ಮತ ಹಾಕುವುದಿಲ್ಲ ಎಂಬುದನ್ನು ಅರಿತು, ತಮ್ಮ ಕುಟುಂಬ ಅತ್ಯಾಪ್ತ(ಬಕೆಟ್) ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ ಮೇಲಂತೂ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ, ಮರಿ ಖರ್ಗೆಯ ಸೊಕ್ಕು ಮತ್ತಷ್ಟು ಹೆಚ್ಚಾಗಿದ್ದಂತೂ ಸುಳ್ಳಲ್ಲ. ಸಿದ್ದರಾಮ್ಯ್ಯನವರ ಮಂತ್ರಿಮಂಡಲದಲ್ಲಿ ಮತ್ತೆ ಅಪ್ಪನ ಕೋಟಾದ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ IT & BT ಖಾತೆಯ ಮಂತ್ರಿಯಾದರೂ, ತನ್ನ ಖಾತೆಯ ಹೊರತಾಗಿ ಉಳಿದ ಎಲ್ಲಾ ಖಾತೆಗಳಲ್ಲೂ ಅನಗತ್ಯವಾಗಿ ಮೂಗು ತೂರಿಸುವ ಛಾಳಿ ಬೆಳಸಿಕೊಂಡಿರುವುದು ಏಳು ಕೋಟಿ ಕನ್ನಡಿಗರಿಗೆ ಅಸಹನೀಯವಾಗಿದೆ. ರಾಜ್ಯದಲ್ಲಿ ಎಲ್ಲೇ ಏನೇ ಒಳ್ಳೆಯದು ಅಥವಾ ಕೆಟ್ಟದ್ದಾಗಲಿ ಅದನ್ನು ಸಮರ್ಥನೆ ಮಾಡಿಕೊಳ್ಳಲು ಸಿದ್ಧವಾಗಿರುವ ಮೊತ್ತ ಮೊದಲೇ ವ್ಯಕ್ತಿಯೇ ಹುಂಬ ಮರಿ ಖರ್ಗೆ ಎಂದರೂ ತಪ್ಪಾಗದು.

mari_khargeಅದು ಗೃಹಖಾತೆಯಾಗಿರಬಹುದು, ಸಮಾಜ ಕಲ್ಯಾಣ ಖಾತೆ ಆಗಿರಬಹುದು, ಕನ್ನಡಾಭಿವೃದ್ಧಿ, ಹಣಕಾಸು, ಅಬ್ಕಾರಿ, ಕ್ರೀಡೇ ಹೀಗೇ ಖಾತೇ ಯಾವುದೇ ಆಗಿರಲಿ, ಮಂತ್ರಿಗಳು ಯಾರೇ ಆಗಿರಲಿ, ಅದು ಪತ್ರಿಕಾ ಗೋಷ್ಟಿಯಾಗಿರಲೀ, ವಿಧಾನ ಸಭೆಯ ಅಧಿವೇಶನವಾಗಿರಲೀ ಕಡೆಗೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲಾ ಕಡೆಯಲ್ಲೂ ಎಲ್ಲಾ ಖಾತೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸುವ ಏಕೈಕ ಭೂಪ ಎಂದರೆ ಅದು ಮರಿ ಖರ್ಗೆ. ವಿಷಯವೇ ತಿಳಿಯದಿದ್ದರೂ, ತಮ್ಮ ನಾಯಕ ರಾಹುಲ್ ಗಾಂಧಿಯಂತೆಯೇ ಓತಪ್ರೋತವಾಗಿ ಉತ್ತರಿಸುವುದನ್ನು ಕೇಳಲು ನಿಜಕ್ಕೂ ಅಸಹನೀಯ ಎನಿಸುತ್ತದೆ. ಅಪ್ಪಾ ಪಕ್ಷದ ಅಧ್ಯಕ್ಷರಾಗಿರುವ ಏಕೈಕ ಕಾರಣದಿಂದಾಗಿಯೇ ರಾಜ್ಯ ಕಾಂಗ್ರೇಸ್ ನಾಯಕರು ಮರಿಖರ್ಗೆಯ ಈ ಪರಿಯ ಕಾಟವನ್ನು ಸಹಿಸಿಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

WhatsApp Image 2024-02-29 at 23.05.28ಸಂಘ, ಸಾವರ್ಕರ್, ಹಿಂದೂ, ಶ್ರೀರಾಮ ಜೊತೆಗೆ ಚಕ್ರವರ್ತಿ ಸೂಲಿಬೆಲೆ ಇವೆಲ್ಲಾ ಹೆಸರುಗಳನ್ನು ಕೇಳಿದಾಕ್ಷಣ ಮರಿಖರ್ಗೆಗೆ ಇದ್ದಕ್ಕಿದ್ದಂತೆಯೇ ಮೈಮೇಲೆ ದೆವ್ವ ಬಂದಂತೆ ಒದರಾಡುವುದು ನಿಜಕ್ಕೂ ಅಸಹ್ಯಕರ ಎನಿಸುತ್ತದೆ. ದೇಶಕ್ಕಾಗಿ ಸಾವರ್ಕರ್ ಅವರ ತ್ಯಾಗ ಬಲಿದಾನ ಮತ್ತು ಸಂಘದ ಕಾರ್ಯಕರ್ತರ ಸೇವಾ ಮನೋಭಾವನೆಗಳ ಕುರಿತಾಗಿ ಕಿಂಚಿತ್ತೂ ಅರಿವಿಲ್ಲದ ಮರಿ ಖರ್ಗೆ, ಇವೆಲ್ಲವನ್ನೂ ಸೂಕ್ತವಾಗಿ ಮತ್ತು ಸಮರ್ಥವಾಗಿ ಜನರಿಗೆ ತಿಳಿಸುವ ಚಕ್ರವರ್ತಿ ಸೂಲಿಬೆಲೆಯನ್ನು ಕಂಡರೆ ಅಷ್ಟಕ್ಕಷ್ಟೇ. ಪದೇ ಪದೇ ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟ್ವಿಟ್ಟರ್ ಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಮತ್ತು ಸೂಲಿಬೆಲೆಯವರನ್ನು ವಾಟ್ಸಪ್ ಯೂನಿವರ್ಸಿಟಿ, ಬಾಡಿಗೆ ಭಾಷಣಕಾರ ಎಂದು ಟೀಕಿಸುವ ಮರಿಖರ್ಗೆ, ಇದೇ ಕುರಿತಂತೆ ಚರ್ಚೆಗೆ ಬರಲು ಪಂಥಾಹ್ವಾನ ನೀಡಿದರೆ ಅದನ್ನು ಸ್ವೀಕರಿಸಲು ಆಗದೇ ಜಂಬ ಕೊಚ್ಚಿದ ಉತ್ತರ ಕುಮಾರನಂತೆ ಓಡಿ ಹೋದ ಉದಾಹರಣೆಗಳು ನೂರಾರಿವೆ.

namo_Bharatಇದಕ್ಕೆ ತಾಜಾ ಉದಾಹಣೆಯಂತೆ 2024ರ ಚುನಾವಣೆಯಲ್ಲಿ ಮಗದೊಮ್ಮೆ ಮೋದಿಯವರನ್ನೇ ಪ್ರಧಾನ ಮಂತ್ರಿಗಳನ್ನಾಗಿ ಆಯ್ಕೆ ಮಾಡುವ ಸಲುವಾಗಿ ಕಾಲಿಗೆ ಚಕ್ರಕ್ತಟ್ಟಿಕೊಂಡು ಚಕ್ರವರ್ತಿಯವರು ನಮೋ ಭಾರತ ಎಂಬ ವೇದಿಕೆಯ ಆಡಿಯಲ್ಲಿ ರಾಜ್ಯಾದ್ಯಂತ ಮೋದಿಯವರ ಹತ್ತು ವರ್ಷಗಳ ಸಾಧನೆಯನ್ನು ವಿವರಿಸುತ್ತಾ ಮಗದೊಮ್ಮೆ ಮೋದಿಯವರೇ ಏಕೆ ಪ್ರಧಾನಿಗಳಾಗಬೇಕು ಎಂಬುದನ್ನು ಜನರಿಗೆ ತಿಳಿಸುತ್ತಿರುವುದು ಎಲ್ಲರಿಗೂ ತಿಳಿದೆಯಷ್ಟೇ.

WhatsApp Image 2024-03-02 at 06.07.16ಇದೇ ರೀತಿಯ ಕಾರ್ಯಕ್ರಮವೊಂದರಲ್ಲಿ ಗುಲ್ಬರ್ಗಾದ ಸರ್ಕಾರದ ESI ಆಸ್ಪತೆಯನ್ನು ಆಕಾಶಮುಖವಾಗಿ ನೋಡಿದಾಗ ಸ್ಪಷ್ಟವಾಗಿ ಕರ್ಗೆ ಎಂಬುದಾಗಿ ಕಾಣಿಸುವುದರ ಕುರಿತಾಗಿ ಜನರಿಗೆ ತೋರಿಸಿ ಜನರ ತೆರಿಗೆ ಹಣದಲ್ಲಿ ಕಟ್ಟಿಸಿದ ಆಸ್ಪತ್ರೆಯಲ್ಲಿ ತಮ್ಶೆ ಹೆಸರನಲ್ಲಿ ಕಾಣಿಸುವಂತೆ ಕಟ್ಟಿಸುವುದು ಅಯೋಗ್ಯತನವಲ್ಲವೇ? ಎಂದು ಪ್ರಶ್ನಿಸಿದ್ದನ್ನೇ ದೊಡ್ಡದಾಗಿ ಮಾಡಿಕೊಂಡು ಹೇಗಾದರೂ ಮಾಡಿ ಸೂಲಿಬೆಲೆಯವರನ್ನು ಸೆರೆಮನೆಗೆ ಕಳುಹಿಸಲೇ ಬೇಕೆಂದು ತೀರ್ಮಾನಿಸಿದ್ದ ಮರಿ ಖರ್ಗೆ, ಚಕ್ರವರ್ತಿಯವರು, ಮಲ್ಲಿಕಾರ್ಜುನ ಖರ್ಗೆಯವರ ಜಾತಿ ನಿಂದನೆ (atrocity case) ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದರೂ ಸತ್ಯಕ್ಕೆ ಎಂದಿಗೂ ಜಯ ಎನ್ನುವಂತೆ ನ್ಯಾಯಾಲಯ ಅವರ ದಾವೆಯನ್ನು ತಳ್ಳಿಹಾಕಿದ ಮೇಲಂತೂ ಮರಿ ಖರ್ಗೆಗೆ ಚಕ್ರವರ್ತಿಯವರ ಮೇಲೆ  ರೋಷಾ ವೇಷ ಮತ್ತಷ್ಟು ಹೆಚ್ಚಾಗಿದ್ದಂತೂ ಸುಳ್ಳಲ್ಲ.

namo_Bharat2ಕಳೆದ ಫೆಬ್ರವರಿ ತಿಂಗಳ ಆರಂಭದಲ್ಲಿ ಚಾಮರಾಜನಗರದ ತೆರಕಣಾಂಬಿಯಿಂದ ಚಕ್ರವರ್ತಿಯವರು ತಮ್ಮ ಭಾಷಣದ ಸರಣಿಯನ್ನು ಆರಂಭಿಸಿ ಇದುವರೆವಿಗೂ ಸುಮಾರು 35 ಬಹಿರಂಗ ಭಾಷಣವೂ ಸೇರಿದಂತೆ 50 ಕಾರ್ಯಕ್ರಮಗಳನ್ನು ಮುಗಿಸಿ ಫೆ. 28ರ ರಾತ್ರಿ ಬೀದರಿನ ಬಾಲ್ಕಿಯಲ್ಲಿ ಕಾರ್ಯಕ್ರಮ ಮುಗಿಸಿ ಫೆ.29ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ನಮೋ ಭಾರತ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಧರ್ಭದಲ್ಲಿ ರಾತ್ರಿ 11 ಘಂಟೆಯ ಸಮಯದಲ್ಲಿ ಒಬ್ಬ  Dy.SP ಮತ್ತು SP (IAS Raak) ಸೇರಿದಂತೆ ಸುಮಾರು 3 ವ್ಯಾನ್ ಗಳಷ್ಟು ಪೋಲೀಸರು ಕಲುಬರ್ಗಿ ಜಿಲ್ಲೆಯ ಗಡಿಭಾಗದಲ್ಲಿ ತಡೆ ಹಿಡಿದು ಚಿತ್ತಾಪುರದ ಕಾರ್ಯಕ್ರಮಕ್ಕೆ ನೀಡಿದ್ದ ಅಪ್ಪಣೆಯನ್ನು ರದ್ದು ಮಾಡಲಾಗಿದ್ದು ಚಿತ್ತಾಪುರ ಬಿಡಿ, ಇಡೀ ಕಲ್ಬುರ್ಗಿ ಜಿಲ್ಲೆಯೊಳಗೆ ಕಾಲಿಡಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಪೂರ್ವಾಪರವಿಲ್ಲದೇ, ಯಾವುದೇ ರೀತಿಯ ಅಧಿಕೃತ ಧಾಖಲೆ ಇಲ್ಲದೇ ಈ ರೀತಿಯಾಗಿ ಹೇಗೆ ನಿಬಂಧಿಸಬಹುದು? ಕಲುಬುರ್ಗಿ ಏನು ಅಪ್ಪಾ ಮಕ್ಕಳ ಸಾಮ್ರಾಜ್ಯವೇ? ರಿಪಬ್ಲಿಕ್ ಆಫ್ ಖರ್ಗೆ ಮಾಡಿಕೊಂಡಿದ್ದಾರೆಯೇ? ಎಂದು ಸೂಲಿಬೆಲೆಯವರು ಸ್ವಲ್ಪ ಖಾರವಾಗಿಯೇ ಪ್ರಶ್ನಿಸಿದಾಗ ಮಧ್ಯರಾತ್ರಿ ಸುಮಾರು 1 ಘಂಟೆಯ ಸಮಯದಲ್ಲಿ ಜಿಲ್ಲಾ ಕಮಿಷಿನರ್ ಅವರನ್ನು ಎಬ್ಬಿಸಿ ಅವರಿಂದ ಅಧಿಕೃತವಾಗಿ ಪತ್ರವೊಂದಕ್ಕೆ ಸಹಿ ಮಾಡಿಸಿ ಚಕ್ರವರ್ತಿಯವರ ಕೈಗಿತ್ತ ಆದೇಶದಲ್ಲಿ, ಮುಂದಿನ ಐದು ದಿನಗಳ ಕಾಲ ಕೇವಲ ಚಿತ್ರಾಪುರವಲ್ಲದೇ, ಇಡೀ ಕಲ್ಬುರ್ಗಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದಾರೆ.

WhatsApp Image 2024-02-29 at 18.55.39ಈ ರೀತಿಯ ಆದೇಶಕ್ಕೆ ಅವರು ನೀಡಿರುವ ಕಾರಣವಂತೂ ಮತ್ತಷ್ಟೂ ಹಾಸ್ಯಾಸ್ಪದವಾಗಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದಿಶೆಯಲ್ಲಿ ಫೆ.29ರಂದು ಚಿತ್ತಾಪೂರ ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ಚಿತ್ತಾಪೂರ ತಾಲ್ಲೂಕ್ ಬಿ.ಜೆ.ಪಿ ಪಕ್ಷದ ಅಧ್ಯಕ್ಷ ಶ್ರೀ ನೀಲಕಂಠ ರಾವ ಪಾಟೀಲ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಅನುಮತಿ ನೀಡರುವುದನ್ನು ರದ್ದು ಪಡಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಈ ರೀತಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಸೂಲಿಬೆಲೆಯವರು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ಷೇಪಾರ್ಹ ಮತ್ತು ಅಸಂಸದೀಯ ಪದಗಳನ್ನು ಬಳಸಿರುವುದು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಭಾಷಣ ಮಾಡುವುದು ಕಂಡುಬಂದಿದೆ. ಅದರ ಜೊತೆಯಲ್ಲಿ ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾರಣ, ಈಗಾಗಲೇ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ. ಇದಷ್ಟೇ ಅಲ್ಲದೇ, ಅವರ ಭಾಷಣಗಳಲ್ಲಿ ಅವರು ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕೋಮುಗಲಭೆಗೆ ಕಾರಣರಾಗಿರುತ್ತಾರೆ ಎಂಬೆಲ್ಲಾ ಆರೋಪಗಳನ್ನು ಮಾಡಲಾಗಿದೆ.

WhatsApp Image 2024-03-01 at 09.06.26ಸಂವಿಧಾನಕ್ಕೆ ಸದಾಕಾಲವೂ ತಲೆಬಾಗುವ ಸೂಲಿಬೆಲೆಯವರು ಪೋಲೀಸರು ನೀಡಿದ ಆದೇಶವನ್ನು ಪಡೆದು, ಯಾವುದೇ ರೀತಿಯ ಗಲೆಭೆಗೂ ಆಸ್ಪದ ಕೊಡದಂತೆ ಅಲ್ಲಿಯೇ ಉಳಿದು ಕೊಂಡು, ಕೂಡಲೇ ವಕೀಲರಾದ ಶ್ರೀ ಅರುಣ್ ಶ್ಯಾಮ್‌ ಅವರಿಗೆ ಕರೆ ಮಾಡಿ ನಡೆದ ವಿಚಾರವನ್ನೆಲ್ಲಾ ತಿಳಿಸಿದ್ದಾರೆ. ಹಿಂದೂಪರ ಕಾರ್ಯಕರ್ತರ ಪರ ಸದಾಕಾಲವೂ ಉಚಿತವಾಗಿಯೇ ವಕಾಲತ್ತು ವಹಿಸುವ ಅರುಣ್ ಶ್ಯಾಮ್ ಮತ್ತವರ ಸಹೋದ್ಯೋಗಿ ಸುಯೋಗ್ ಆ ಕೂಡಲೇ, ಕಾನೂನಾತ್ಮಕವಾಗಿ ಹೋರಾಡಲು ಬೇಕಾದ ತಯಾರಿಗಳೆಲ್ಲವನ್ನೂ ಸಿದ್ಧಪಡಿಸಿಕೊಂಡು ಬೆಳ್ಳಂಬೆಳಿಗ್ಗೆಯೇ, ಕಲ್ಬುರ್ಗಿಯಲ್ಲಿ ಬಸವಕಿರಣ್‌ ಅವರನ್ನು ಸಂಪರ್ಕಿಸಿ, ಕಲಬುರ್ಗಿಯ ನ್ಯಾಯಾಲಯದಲ್ಲಿ ಅದರ ವಿರುದ್ಧ ದಾವೆಯನ್ನು ಹೂಡಿದ್ದಲ್ಲದೇ, ಸ್ವತಃ ಅರುಣ್ ಶ್ಯಾಮ್‌ರೇ ಆನ್‌ಲೈನ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿ ಜಿಲ್ಲಾಡಳಿತವು ಕೆಲವು ಪಟ್ಟ ಭಧ್ರ ಹಿತಾಸಕ್ತಿಯ ವ್ಯಕ್ತಿಗಳ ಆದೇಶದ ಮೇರೆಗೆ ಚಕ್ರವರ್ತಿ ಸೂಲಿಬೆಲೆಯವರನ್ನು ಉದ್ದೇಶಪೂರ್ವಕವಾಗಿಯೇ ಕಲ್ಬುರ್ಗಿ ಜಿಲ್ಲೆಗೆ ನಿಷೇಧವನ್ನು ಹೇರಿರುವುದರ ವಿರುದ್ದ ವಾದ ಮಂಡಿಸಿ, ಸಂಜೆಯ ಹೊತ್ತಿಗೆ ಆ ಆದೇಶವನ್ನ್ನು ರದ್ದು ಮಾಡಿಸುವುದರಲ್ಲಿ ಸಫಲರಾಗುತ್ತಿದ್ದಂತೆಯೇ, ಮಾತೆತ್ತಿದರೆ ಸಂವಿಧಾನ, ಸಂವಿಧಾನ ಎಂಬ ಆಣಿ ಮುತ್ತು ಉದುರಿಸುವ ಮರಿ ಖರ್ಗೆ ಸಾಹೇಬರು ಅಸಂವೈಧಾನಿಕವಾಗಿ ಸರ್ಕಾರಿ ಅಧಿಕಾರಿಗಳನ್ನು ಮತು ಪೊಲಿಸ್ ವ್ಯವಸ್ಥೆಯನ್ನೂ ಬಳಸಿಕೊಂಡರೂ ಚಕ್ರವರ್ತಿ ಸೂಲೆಬೆಲೆಯವರನ್ನು ತಡೆಯಲು ಸಾಧ್ಯವಾಗದೇ ಅಂಡು ಸುಟ್ಟುಕೊಂಡು ಅಲೆದಾಡುವ ಬೆಕ್ಕಿನಂತೆ ಪರದಾಡುತ್ತಿರುವ ವಿಷಯ  ನಾಡಿನಾದ್ಯಂತ ಸುದ್ದಿಯಾಗಿದೆ.

WhatsApp Image 2024-03-02 at 02.38.25ಅದೇ ಸಂಜೆ ನಿಗಧಿತ ಸಮಯಕ್ಕೆ ಸರಿಯಾಗಿ ಭಾರೀ ಜನಸ್ತೋಮದ ಎದುರಿನಲ್ಲಿ ಚಕ್ರವರ್ತಿ ಸೂಲೆಬೆಲೆಯವರು ಮೋದಿಯವರ 10 ವರ್ಷದ ಸಾಧನೆಗಳನ್ನು ವಿವರಿಸುತ್ತಿದ್ದು ಅದಕ್ಕೆ ಜನರು ನೀಡುತ್ತಿದ್ದ ಅದ್ಭುತ ಪ್ರತಿಕ್ರಿಯೆ, ನಿಶ್ಚಯವಾಗಿಯೂ ಅಪ್ಪಾ ಮಕ್ಕಳಿಗೆ ಭಯ ಹುಟ್ಟಿಸಿದ್ದು, ಈ ಬಾರಿಯ ಲೋಕಸಭೆಯಷ್ಟೇ ಅಲ್ಲದೇ, ಮುಂದಿನ ಬಾರಿ ವಿಧಾನ ಸಭಾ ಚುನಾವಣೆಯಲ್ಲೂ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಅವರ ಕಣ್ಣ ಮುಂದೆ ಹಾದು ಹೋಗಿದೆ ಎಂದರೂ ತಪ್ಪಾಗದು.

nasir2ಇವೆಲ್ಲದರ ಮಧ್ಯೆ ಕಾಂಗ್ರೇಸ್ ಪಕ್ಷದ ನಾಸಿರ್ ಹುಸೇನ್ ರಾಜ್ಯಸಭಾ ಚುನಾವಣೆಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಶತ್ರು ರಾಷ್ಟ್ರ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆಯ ಸದ್ದು ಕೇಳಿಬಂದಾಕ್ಷಣವೇ, ಅಂತಹ ಘೋಷಣೆಯೇ ನಡೆದಿಲ್ಲಾ. ಅದೆಲ್ಲಾ ಬಿಜೆಪಿಯವರ ಕಟ್ಟು ಕತೆ ಎಂದು ತನಿಖೆಗೆ ಮುನ್ನವೇ ಷರಾ ಬರೆದಿದ್ದ ಮರಿಖರ್ಗೆ,

WhatsApp Image 2024-03-02 at 03.28.34ನಂತರ ವಿಧಾನ ಸಭೆಯಲ್ಲಿಯೂ ಅದನ್ನೇ ಮುಂದುವರೆಸಿ ಸರ್ಕಾರದ ಪರವಾಗಿ FSL ವರದಿ ಮಂಡಿಸುತ್ತೇವೆ ಎಂದು ಹೇಳುವ ಮೂಲಕ ದೇಶದ್ರೋಹಿಗಳ ಪರವಾಗಿ ವಕಾಲತ್ತು ವಹಿಸಿದ್ದರು. ಇದೀಗ ಬಂದ FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸತ್ಯ. ಇದು ತಿರುಚಿರುವ ವಿಡಿಯೋ, ಆಡಿಯೋ ಅಲ್ಲಾ ಎಂದಿರುವುದು ಮರಿ ಖರ್ಗೆಗೆ ನುಂಗಲಾರದ ಕಹಿ ಘಟನೆಯಾಗಿದೆ.

WhatsApp Image 2024-03-02 at 02.20.56ಕನ್ನಡದಲ್ಲಿಯೇ ಉತ್ತರಗಳನ್ನು ಬರೆದು ಐ.ಎ.ಎಸ್ ಹುದ್ದೆಗೆ ಏರಿದ್ದ ಕರ್ನಾಟಕದ ಮೊದಲ ಅಧಿಕಾರಿಗಳಾದ ಶ್ರೀ ಶಿವರಾಮ್ ಅವರು ಹೃದಯಾಘಾತದಿಂದ ನಿಧನರಾದ ಸಂಧರ್ಭದಲ್ಲಿಯೂ ಶಿವರಾಮ್ ಅವರ ಅಂತಿಮ ದರ್ಶನಕ್ಕೆ ಸರ್ಕಾರದ ಪರವಾಗಿ ಹೋಗಿದ್ದ ಪ್ರಿಯಾoಕ ಖರ್ಗೆ ಅವರನ್ನು ಕಂಡ ಕೂಡಲೇ, ಇಲ್ಲಿಗೆ ಬರಲು ನಿಮಗೆ ಯಾವ ರೈಟ್ಸ್ ಇಲ್ಲಾ.. ಎಂದು ಮೃತ ಶಿವರಾಮ್ ಅವರ ಪತ್ನಿ ಶ್ರೀಮತಿ ವೀಣಾ ಅವರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಗಮನಿಸಿದಾಗ, ಈ ವ್ಯಕ್ತಿಯ ಬಗ್ಗೆ ಜನರಿಗೆ ಯಾವ ರೀತಿಯ ಅಸಹನೆ ಇದೆ ಎಂಬುದನ್ನು ಗಮನಿಸಬಹುದಾಗಿದೆ.

kargheಅಧಿಕಾರ ಎನ್ನುವುದು ಗಡಿಯಾರದ ಮುಳ್ಳುಗಳಂತೆ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಅಧಿಕಾರ ಇದೆ ಎಂದು ಎಲ್ಲರನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಸೊಕ್ಕಿನಲ್ಲಿ ಹೇಳಿದರೆ, ಮಾಡಿದ ಕರ್ಮವನ್ನು ಅನುಭವಿಸಲೇ ಬೇಕು ಎನ್ನುವ ಜಗದ ನಿಯಮದಂತೆ, ಮುಂದೊಮ್ಮೆ ಮತ್ತೊಬ್ಬರು ಅಧಿಕಾರಕ್ಕೆ ಬಂದಾಗ, ಇದೇ ಮರಿ ಖರ್ಗೆಯಂತಹವರು ಜೈಲಿನಲ್ಲಿ ಮುದ್ದೇ ಮುರಿಯುವ ಸಂಧರ್ಭ ಬರಲೂ ಬಹುದು (ಈ ಕುರಿತಾದ ಹೆಚ್ಚಿನ ಅನುಭವಕ್ಕೆ ಆವರ ರಾಜ್ಯಾಧ್ಯಕ್ಷ ಬಂಡೆ ಶಿವಕುಮಾರ್ ಅವರನ್ನು ಸಂಪರ್ಕಿಸ ಬಹುದು) ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇನ್ನು ಮುಂದಾದ್ರರೂ, ತಮ್ಮ ದುರಹಂಕಾರ, ಪ್ರತಿಷ್ಠೆ, ಎಲ್ಲವನ್ನೂ ಬದಿಗಿಟ್ಟು ಅವರನ್ನು ಆಯ್ಕೆ ಮಾಡಿಕಳುಹಿಸಿದ ಚಿತ್ತಾಪುರ ಕ್ಷೇತ್ರಕ್ಕೂ ಮತ್ತು ಕರ್ನಾಟಕ ರಾಜ್ಯಕ್ಕೂ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಆಶಿಸುವ ಕೋಟ್ಯಾಂತರ ಕನ್ನಡಿಗರಲ್ಲಿ ನಾವೂ ನೀವೂ ಸಹಾ ಒಬ್ಬರು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

3 thoughts on “ಅಲ್ಪ ವಿದ್ಯೆ, ಮಹಾಗರ್ವಿ

Leave a comment