2024ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಮುಗಿದಿದ್ದು ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಎರಡನೇ ಹಂತವೂ ಮುಗಿದಿದ್ದು ಮೇ 13ರಂದು ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಚುನಾವಣೆಗಳು ನಡೆಯಲಿದ್ದು ಉಳಿದಂತೆ ದೇಶಾದ್ಯಂತ ಜೂನ್ 1ರ ವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳುತ್ತಿದ್ದರೆ, ಈ ಬಾರಿ ಶತಾಯಗತಾಯ ಶ್ರೀ ನರೇಂದ್ರ ಮೋದಿಯವರನ್ನು ಸೋಲಿಸಲೇ ಬೇಕೆಂದು ಫಣತೊಟ್ಟಿರುವ ಕಾಂಗ್ರೇಸ್ INDI ಒಕ್ಕೂಟದ ಮೂಲಕ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಲು ಮುಂದಾಗಿರುವ ಸಂಧರ್ಭದಲ್ಲಿ ಈ ಬಾರಿ ಕಾಂಗ್ರೇಸ್ ಪಕ್ಷ ಗೆಲ್ಲಬಹುದಾದ ಸಂಖ್ಯೆಗಳ ಕುರಿತಾಗಿ ಸ್ವಲ್ಪ ತಿಳಿಯೋಣ ಬನ್ನಿ,
ಸ್ವಾತ್ರಂತ್ರ್ಯಾ ನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಸುಮಾರು ಎರಡು-ಮೂರು ದಶಕಗಳ ಕಾಲ ಯಾವುದೇ ರೀತಿಯ ಸಮರ್ಥವಾದ ವಿರೋಧ ಪಕ್ಷವಿಲ್ಲದೇ, ಕಾಂಗ್ರೇಸ್ ಪಕ್ಷ ಭಾರತಾದ್ಯಂತ ಅಭೂತಪೂರ್ವ ಯಶಸ್ಸನ್ನು ಪಡೆದದ್ದು ಈಗ ಇತಿಹಾಸ 70-80ರ ದಶಕದಲ್ಲಿ ಉತ್ತರ ಭಾರತದಲ್ಲಿ ಜನಸಂಘ ಮತ್ತು ಜಯಪ್ರಕಾಶ್ ನಾರಾಯಣ್ (JP) ಅವರ ಜನತಾ ಪಕ್ಷ ಮತ್ತು ದಕ್ಷಿಣದಲ್ಲಿ ದ್ರಾವಿಡ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ ಕಾಂಗ್ರೇಸ್ ಪಕ್ಷದ ಅಶಾಗೋಪುರ ನಿಧಾನವಾಗಿ ಕರಗತೊಡಗಿ, 77ರ ತುರ್ತುಪರಿಸ್ಥಿತಿಯ ನಂತರ ಸ್ವತಃ ಇಂದಿರಾಗಾಂಧಿಯ ನೇತೃತ್ವದಲ್ಲೇ ಹೀನಾಯ ಸೋಲನ್ನು ಅನುಭವಿಸಿದರೂ, ನಂತರ ಮತ್ತೆ ಇಂದಿರಾಗಾಂಧಿಯವರ ನೇತೃತ್ವದಲ್ಲೇ ಚೇತರಿಸಿಕೊಂಡು, ಆಕೆಯ ಮರಣಾನಂತರ ಅನುಕಂಪದ ಆಧಾರದ ಮೇಲೆ ರಾಜೀವ್ ಗಾಂಧಿ ಅಭೂತಪೂರ್ವ ಯಶಸ್ಸನ್ನು ಪಡೆದರೂ ಬೋಫೋರ್ಸ್ ಹಗರಣದಿಂದ ಆವರು ಸಹಾ ಸೋಲನ್ನು ಅನುಭವಿಸಿದ ನಂತರ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗರ UPA -1 & 2 ಅಧಿಕಾರಾವಧಿಯಲ್ಲಿ 25ಕ್ಕೂ ಅಧಿಕ ಪಕ್ಷಗಳ ಸಮ್ಮಿಶ್ರ ಸರ್ಕಾರ ನಡೆಸಿದ ನಂತರ ನಡೆದ 2014 ಮತ್ತು 2019ರಲ್ಲಿ ಸಂಸತ್ತಿನ ನಿಯಮಗಳ ಪ್ರಕಾರ, ಲೋಕಸಭೆಯ ಒಟ್ಟು ಬಲದ ಕನಿಷ್ಠ 10% ಅರ್ಥಾತ್ 55 ಸ್ಥಾನಗಳನ್ನೂ ಸಹಾ ಪಡೆಯಲಾಗದೇ, ಅಧಿಕೃತ ವಿರೋಧ ಪಕ್ಷವಾಗಲೂ ಸಹಾ ಆಗದೇ ಹೋದದ್ದು ಈಗ ಇತಿಹಾಸವಾಗಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಸ್ಥಾನಮಾನ ಹೇಗಿರಬಹುದು ಎಂಬುದನ್ನು ಸವಿವರವಾಗಿ ನೋಡೋಣ ಬನ್ನಿ,
2019ರ ಚುನಾವಣೆಯಲ್ಲಿ ಶೇ 19.49ರಷ್ಟು ಮತಗಳನ್ನು ಗಳಿಸಿದ ಕಾಂಗ್ರೇಸ್ ಪಡೆದದ್ದು ಕೇವಲ 52 ಸ್ಥಾನಗಳು. ಅವುಗಳಲ್ಲಿ ಹೆಚ್ಚಿನ ಪಾಲು ಕೇರಳ 15, ತಮಿಳುನಾಡು 8 ತೆಲಂಗಾಣ 3, ಕರ್ನಾಟಕ 1 ಮತ್ತು ಪಂಜಾಬ್ ನಲ್ಲಿ 8ಸ್ಥಾನಗಳನ್ನು ಗಳಿಸಿದರೆ, ಉಳಿದ ಸ್ಥಾನಗಳನ್ನು ದೇಶಾದ್ಯಂತ ಉಳಿದ ರಾಜ್ಯಗಳಲ್ಲಿ ಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಅಧಿಕೃತ ವಿರೋಧ ಪಕ್ಷ ಸ್ಥಾನವನ್ನೂ ಪಡೆಯಲಾರದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು, ದೇಶದಲ್ಲಿ ಕೇವಲ ಕರ್ನಾಟಕ, ಹಿಮಾಚಲ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾತ್ರವೇ ಅಧಿಕಾರದಲ್ಲಿ ಇರುವ ಕಾಂಗ್ರೇಸ್ಸಿನ ಪರಿಸ್ಥಿತಿ ಕಳೆದ ಬಾರಿಗಿಂತಲೂ ಹೀನಾಯಮಾನವಾಗಿದೆ ಎಂದರೆ ಅಚ್ಚರಿ ಪಡಬೇಕಿಲ್ಲ.
ಒ
ಟ್ಟು 545 ಲೋಕಸಭಾ ಸ್ಥಾನಗಳಿಗೆ 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು 417 ಸ್ಥಾನಗಳಲ್ಲಿ ಸ್ಪರ್ಧಿಸಿ, 145 ಸ್ಥಾನಗಳನ್ನು ಗೆದ್ದಿದ್ದರೆ, 2009ರಲ್ಲಿ ಪಕ್ಷವು 440 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 206 ಸ್ಥಾನಗಳನ್ನು ಗೆದ್ದಿತ್ತು. ನಂತರ 2014ರಲ್ಲಿ 464 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 44 ಸ್ಥಾನಗಳಲ್ಲಿ ಗಳಿಸಿದ್ದರೆ, 2019ರ ಲೋಕಸಭೆ ಚುನಾವಣೆಯಲ್ಲಿ 421 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 52 ಸ್ಥಾನಗಳನ್ನು ಗಳಿಸುವ ಮೂಲಕ ಸಾಕಷ್ಟು ಏರಿಳಿತವನ್ನು ಕಂಡಿದ್ದರೆ, ಪ್ರಸ್ತುತ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿ ಅಧಿಕಾರಕ್ಕೇರುವ ಕನಸನ್ನು ಕಾಣುತ್ತಿರುವ ಕಾಂಗ್ರೇಸ್ 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 328 ಅಭ್ಯರ್ಥಿಗಳನ್ನು ಮಾತ್ರಾ ಕಣಕ್ಕಿಳಿಸಲು ಮುಂದಾಗಿದ್ದು, ದೇಶದಲ್ಲೇ ಅತ್ಯಂತ ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ ಕಾಂಗ್ರೇಸ್ ಮೊದಲ ಬಾರಿಗೆ 400 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ಚುನಾವಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದೆ ಎಂದರೂ ತಪ್ಪಾಗದು.
2019ರ ಚುನಾವಣಾ ಸಂಧರ್ಭದಲ್ಲಿ ಕಾಂಗ್ರೇಸ್ ಬಳಿ, ಛತ್ತೀಸ್ಗಡ್, ಪಂಜಾಬ್ ಮಧ್ಯಪ್ರದೇಶ, ರಾಜಾಸ್ಥಾನ, ಕರ್ನಾಟಕ, ಕೇರಳ (ಸಮ್ಮಿಶ್ರ ಸರ್ಕಾರ)ಗಳು ಇದ್ದರೆ ಈ ಬಾರಿ ಇಡೀ ಉತ್ತರ ಭಾರತ, ಈಶಾನ್ಯ ಭಾರತಾದ್ಯಂಟ ಕೇವಲ 4 ಸಾಂಸದರನ್ನು ಹೊಂದಿರುವ ಹಿಮಾಚಲ ಪ್ರದೇಶದ ಹೊರತಾಗಿ ಉಳಿದ ಯಾವುದೇ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರದ ಕಾರಣ, ಇಡೀ ಉತ್ತರ ಭಾರತ ಕಾಂಗ್ರೇಸ್ ಪಕ್ಷಕ್ಕೆ ಬರಡಾಗಿದೆ. ಹಾಗೂ ಹೀಗೂ ಕಷ್ಟದಿಂದ ಮತ್ತು ಕೆಲವರ ವಯಕ್ತಿಕ ಸಾಧನೆಯಿಂದ 8-10 ಸ್ಥಾನಗಳನ್ನು ನಿರೀಕ್ಷಿಸಬಹುದಾಗಿದೆ. ಇನ್ನು ಈ ಬಾರಿ ದಕ್ಷಿಣದಲ್ಲಿಯೂ ಕರ್ನಾಟಕದ ಹೊರತಾಗಿ ತಮಿಳುನಾಡು ತೆಲಂಗಾಣ ಮತ್ತು ಕೇರಳದಲ್ಲೂ ಬಿಜೆಪಿ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡಿದ್ದು ಈ ಬಾರಿ ಕೇವಲ ಮತಗಳಿಕೆಯ ಹೆಚ್ಚಳಿಕೆಯಲ್ಲದೇ ಕೆಲವು ಸ್ಥಾನಗಳನ್ನೂ ಸಹಾ ಪಡೆಯಬಹುದು ಎಂದು ಚುನಾವನೋತ್ತರ ಸಮೀಕ್ಷೆಗಳು ಹೇಳುತ್ತಿರುವುದರಿಮ್ದ ಕೇರಳದಲ್ಲಿ 6-8 ಸ್ಥಾನಗಳು, ಕರ್ನಾಟಕದಲ್ಲಿ 3-5 ಸ್ಥಾನಗಳು, ತೆಲಂಗಾಣ 6-8 ಸ್ಥಾನಗಳು ಪಡರೆ ಇನ್ನು ತಮಿಳುನಾಡಿನಲ್ಲಿ ಕೇವಲ 1-2 ಸ್ಥಾನಗಳನ್ನು ಪಡೆಯುವ ಮೂಲಕ 30-35 ಸ್ಥಾನಗಳು ದಕ್ಷಿಣ ಭಾರತದಲ್ಲಿ ಮತ್ತು ಉತ್ತರ ಭಾರತದಲ್ಲಿ 8-10 ಸ್ಥಾನಗಳನ್ನು ಪಡೆಯುವ ಮೂಲಕ ಕೇವಲ 40-50 ಸ್ಥಾನಕಷ್ಟೇ ಸೀಮಿತವಾಗಬಹುದು ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ವಿರೋಧ ಪಕ್ಷಗಳ ನಡುವೆ ಅತೀ ದೊಡ್ಡ ಪಕ್ಷವಾಗಿ ಆಯ್ಕೆಯಾದರೂ, ಮಗದೊಮ್ಮೆ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲು ಸಾಥ್ಯವಾಗದೇ ಅದರ ಸ್ಥಾನ ಮತ್ತಷ್ಟು ಗಣನೀಯವಾಗಿ ಕುಂಠಿತವಾಗುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕಿಂತಲೂ ಆಚ್ಚರಿಯ ವಿಷಯವೇನೆಂದರೆ, ಕಳೆದ ಬಾರಿ ಅಮೇಥಿಯಲ್ಲಿ ಸೋಲಬಹುದು ಎಂಬುದನ್ನು ಗ್ರಹಿಸಿ ರಾಹುಲ್ ಗಾಂಧಿ ಕೂಡಲೇ ಅಲ್ಪಸಂಖ್ಯಾತ ಬಾಹುಳ್ಯವುಳ್ಳ ಕೇರಳದ ವೈನಾಡಿನಿಂದ ಸ್ಪರ್ಧಿಸಿ ಲಕ್ಷಾಂತರ ಮತಗಳಿಂದ ಗೆದ್ದು ಬೀಗಿದ್ದರೂ, ಈ ಬಾರಿ ಅಲ್ಲಿ ಕಮ್ಯೂನಿಸ್ಠ್ ಪಕ್ಷದ ಎದುರು ಸೋಲುವ ಸಂಭವನೀಯತೆ ಹೆಚ್ಚಾಗಿರುವ ಕಾರಣ, ಪ್ರಧಾನ ಮಂತ್ರಿಯಾಗುವ ಕನಸನ್ನು ಹೊತ್ತಿರುವ ರಾಹುಲ್ ಮತ್ತೊಮ್ಮೆ ಉತ್ತರ ಭಾರತದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಹೊರಟಿರುವುದು ಸಹಾ ಕಾಂಗ್ರೇಸ್ ಪಕ್ಷದ ಅವನತಿಯ ಮುನ್ಸೂಚನೆಯಾಗಿದೆ ಎನ್ನಲಾಗಿದೆ.
ಕಳೆದ ಬಾರಿ ಅಮೇಥಿಯಲ್ಲಿ ಸ್ಮೃತಿ ಇರಾನಿಯವರ ಎದುರು ಹೀನಾಯಮಾನವಾಗಿ ಸೋತ ನಂತರ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಗೆಲ್ಲುವ ಭರವಸೆಯನ್ನೇ ಕಳೆದು ಕೊಂಡು ಒಮ್ಮೆಯೂ ಆ ಕ್ಷೇತ್ರಕ್ಕೆ ಕಾಲಿಡ ರಾಹುಲ್ ಈ ಬಾರಿ ಮತ್ತೊಮ್ಮೆ ಸೋಲನ್ನು ಅನುಭವಿಸಬಹುದು ಎಂಬ ಮುನ್ನಚ್ಚರಿಕಾ ಕ್ರಮದಿಂದ ಪಾರಂಪರಾಗತ ಕಾಂಗ್ರೇಸ್ ಪಕ್ಷ ಅದರಲ್ಲೂ ನೆಹರು ವಂಶದವರ ಭದ್ರ ಕೋಟೆಯಾಗಿರುವ ಮತ್ತು ಸತತವಾಗಿ ಸೋನಿಯಾ ಗಾಂಧಿಯವರನ್ನು ಗೆಲ್ಲಿಸಿದ್ದ ರಾಯ್ ಬರೇಲಿಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲು ಹೊರಟಿರುವುದು ಮತದಾರರ ಮೇಲೆ ಋಣಾತ್ಮಕ ಪರಿಣಾಮ ಬೀರಿರುವುದಲ್ಲದೇ, ರಾಯ್ ಬರೇಲಿ ಲೋಕಸಭಾ ಅಧೀನದಲ್ಲಿರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೇ ಪ್ರಾಭಲ್ಯ ಪಡೆದಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಈ ಬಾರಿ ಕಾಂಗ್ರೇಸ್ ಮುಕ್ತ ಉತ್ತರ ಪ್ರದೇಶವನ್ನಾಗಿಸಲು ಪಣ ತೊಟ್ಟಿರುವ ಕಾರಣ, ರಾಯ್ ಬರೇಲಿಯಲ್ಲಿಯೂ ಸಹಾ ಕಾಂಗ್ರೇಸ್ ಅಧಿನಾಯಕ ರಾಹುಲ್ ಗಾಂಧಿ ಗೆಲ್ಲುವುದು ಸಹಾ ಅನುಮಾನ ಎನ್ನಲಾಗುತ್ತಿದೆ
ಅನಾರೋಗ್ಯದ ದೃಷ್ಟಿಯಿಂದ ಕಾಂಗ್ರೇಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ರಾಜಾಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದಾಗ, ಸಹಜವಾಗಿ ಎಲ್ಲರೂ ರಾಯ್ ಬರೇಲಿ ಕ್ಷೇತ್ರದಿಂದ ಆಕೆಯ ಮಗಳು ಪ್ರಿಯಾಂಕ ವಾದ್ರಾ ಸ್ಪರ್ಧಿಸಬಹುದು ಎಂದೇ ನಿರೀಕ್ಷೆ ಮಾಡಿದ್ದನ್ನು ತಲೆಕೆಳಗು ಮಾಡಿ, ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿರುವುದನ್ನು ಖಂಡಿಸಿ, ಪ್ರಿಯಾಂಕಾ ಗಾಂಧಿಯ ಆಪ್ತ ಮತ್ತು ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಬಣ ಮತ್ತು ಪ್ರಿಯಾಂಕಾ ಗಾಂಧಿ ಬಣವಾಗಿ ವಿಭಜನೆಯಾಗಬಹುದು ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವುದಲ್ಲದೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿ, ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ, ರಾಯಬರೇಲಿ ಬದಲು ರಾವಲ್ಪಿಂಡಿಯಿಂದ ಸ್ಪರ್ಧಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದು ಗಮನಾರ್ಹವಾಗಿದ್ದು, ಇದು ಕಾಂಗ್ರೇಸ್ ಪಕ್ಷದ ಮುಂದಿನ ದಿನಗಳು ಹೇಗಿರಬಹುದು ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.
ಈ ರೀತಿ ಸತತವಾಗಿ 15 ವರ್ಷಗಳ ಕಾಲ ಯಾವುದೇ ಪಕ್ಷಕ್ಕೆ ಅಧಿಕಾರದಿಂದ ಹೊರಗುಳಿಯುವುದು ಕಷ್ಟ ಸಾಧ್ಯವಾಗಿದ್ದು, ಇದನ್ನು ಅರಿತೇ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನ್ಯಾಷಿನಲ್ ಕಾನ್ಪ್ರೆನ್ಸಿನ ಉಮರ್ ಅಬ್ದುಲ್ಲಾ ಆವರುಗಳು 2024ರ ಚುನಾವಣೆಯು ಎಲ್ಲಾ ವಿರೋಧ ಪಕ್ಷಗಳಿಗೂ ಅತ್ಯಂತ ಪ್ರಮುಖವಾಗಿದ್ದು, ಈ ಚುನಾವಣೆಯಲ್ಲಿ ಸೋತಲ್ಲಿ ಮುಂದಿನ ಎರಡು ದಶಕಗಳ ಕಾಲ ವಿರೋಧ ಪಕ್ಷದಕ್ಕೇ ಉಳಿಯಬೇಕಾದೀತು ಎಂದು ಎಚ್ಚರಿಸಿದ್ದಲ್ಲದೇ, ಮೋದಿಯವರನ್ನು ಮಣಿಸುವುದಕ್ಕಾಗಿ 25ಕ್ಕೂ ಹೆಚ್ಚಿನ ಪಕ್ಷಗಳನ್ನು ಸೇರಿಸಿಕೊಂಡು INDI Alliance ರಚಿಸಿಕೊಂಡರೂ ಎಂದಿನಂತೆ ಕೆಲವು ರಾಜಕೀಯ ನಾಯಕರುಗಳ ಅಹಂ ಮತ್ತು ಕೆಲವು ಪಕ್ಷಗಳ ಸ್ವಪ್ರತಿಷ್ಟೆಯಿಂದಾಗಿ ಆ ಒಕ್ಕೂಟ ಮುಂದುವರೆಸಿಕೊಂಡು ಹೋಗಲಾರದೇ, ಒಂದೊಂದೇ ಪಕ್ಷಗಳು NDA ಜೊತೆ ಸೇರಿಕೊಂಡರೆ ಕೇರಳದಲ್ಲಿ ಕಮ್ಯೂನಿಷ್ಟರು, ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಕಾಂಗ್ರೇಸ್ ವಿರುದ್ಧವೇ ಚುನಾವಣೆಯಲ್ಲಿ ಸೆಣಸಾಡುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ಕಾಂಗ್ರೇಸ್ ಪಕ್ಷದ ಆಸೆಗೆ ತಣ್ಣೀರೆರೆಚುತ್ತಿದ್ದಾರೆ.
ಇನ್ನು ಕಾಂಗ್ರೇಸ್ ಪಕ್ಷ ಎನ್ನುವುದು ಮುಳುಗುವ ಹಡಗು ಎಂದೇ ಭಾವಿಸುತ್ತಿರುವ ಅನೇಕ ಕಾಂಗ್ರೇಸ್ ನಾಯಕರು ಚುನಾವಣೆಗೂ ಮುನ್ನಾ ಮತ್ತು ಚುನಾವಣೆಯ ಸಮಯದಲ್ಲೇ ಕಾಂಗ್ರೇಸ್ ತೊರೆದು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿಯೂ ಸಹಾ ಕಾಂಗ್ರೇಸ್ ಪಕ್ಷ ಭಾರತಾದ್ಯಂತ 50ಕ್ಕಿಂತಲೂ ಕಡಿಮೆ ಸ್ಥಾನವನ್ನು ಪಡೆಯುವುದು ಉಚಿತ ಮತ್ತು ಖಚಿತ ಎನಿಸುತ್ತಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ