ಅಶ್ವತ್ಥಾಮೋ ಹತಃ ಕುಂಜರಃ

drona1ದ್ವಾಪರ ಯುಗದಲ್ಲಿ  ಐದು ಮಂದಿ ಪಾಂಡವರಿಗೂ ಮತ್ತು ನೂರು ಮಂದಿ ಕೌರವರಿಗೆ ಸಕಲ ವಿದ್ಯೆಯನ್ನು ಹೇಳಿಕೊಟ್ಟವರೇ, ರಾಜಗುರುಗಳಾದ ಶ್ರೀ ದ್ರೋಣಾಚಾರ್ಯರು. ಅವರ ಏಕೈಕ ಪುತ್ರನೇ ಅಶ್ವತ್ಥಾಮ.  ನಮ್ಮ ಪುರಾಣದಲ್ಲಿ ಬರುವ ಏಳು ಚಿರಂಜೀವಿಗಳಲ್ಲಿ ಅಶ್ವತ್ಥಾಮನೂ ಒಬ್ಬ.  ಕುರುಕ್ಷೇತ್ರದ ಪಾಂಡವರು ಮತ್ತು ಕೌರವರ ನಡುವಿನ ಯುದ್ಧದಲ್ಲಿ ಕೌರವರು ಅಧರ್ಮದೆಡೆಗೆ ಇದ್ದಾರೆ ಎಂದು ತಿಳಿದರೂ ಸಹಾ, ತನ್ನ ಸಂಕಷ್ಟದ ಸಮಯದಲ್ಲಿ ತನಗೆ ರಾಜಾಶ್ರಯ ನೀಡಿದ್ದ ಹಸ್ತಿನಾವತಿಯೊಂದಿಗಿನ ಬದ್ಧತೆಯಿಂದಾಗಿ ಮತ್ತು ಸ್ವಾಮಿನಿಷ್ಠೆಯಿಂದಾಗಿ ಪಾಂಡವರ ವಿರುದ್ಧ ಕೌರವರ ಸೈನ್ಯದ ನೇತೃತ್ವವಹಿಸಿದ್ದರು.

dro a2ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಮೃತ್ಯುವಿಗೂ ಕಾರಣೀಭೂತರಾಗಿದ್ದ ದ್ರೋಣಾಚಾರ್ಯರನ್ನು ಹೇಗಾದರೂ ಮಾಡಿ ಸೋಲಿಸಿದಲ್ಲಿ ಮಾತ್ರವೇ ಪಾಂಡವರಿಗೆ ಯುದ್ದದಲ್ಲಿ ಜಯ ಎಂಬುದನ್ನು ಅರಿತಿದ್ದ ಶ್ರೀಕೃಷ್ಣ ಪರಮಾತ್ಮನು, ಧರ್ಮರಾಯನ ಬಳಿ ಬಂದು, ದ್ರೋಣಪುತ್ರರ ಪುತ್ರ ಅಶ್ವತ್ಥಾಮ ಸಾವನ್ನಪ್ಪಿದ್ದಾನೆ ಎಂಬ ಸುಳ್ಳು ವದಂತಿಯನ್ನು ಹಬ್ಬಿಸಲು ಸೂಚಿಸುತ್ತಾನೆ. ಯುದ್ದ ಬೇಕಾದರೂ ಸೋಲುತ್ತೇವೆ ಆದರೆ ಎಂದಿಗೂ ಅಧರ್ಮವಾಗಿ  ಸುಳ್ಳನ್ನು ಹೇಳಿ ಯುದ್ದವನ್ನು ಗೆಲ್ಲುವುದಿಲ್ಲಾ! ಎಂದು ಕಡಾ ಖಂಡಿತವಾಗಿ ಧರ್ಮರಾಯನು ಹೇಳುತ್ತಾನೆ.

panchajanyaಧರ್ಮರಾಯನ  ಈ ಉತ್ತರದಿಂದ ಕೊಂಚವೂ ವಿಚಲಿತನಾದ ಶ್ರೀ ಕೃಷ್ಣನು ಕೂಡಲೇ ಪಾಂಡವರ ಸೈನ್ಯದಲ್ಲೇ ಇದ್ದ ಅಶ್ವತ್ಥಾಮ ಎಂಬ ಆನೆಯನ್ನು ಕೊಲ್ಲಿಸಿ, ಈಗ ಸತ್ಯವನ್ನು ಹೇಳುವೆಯಾ? ಎಂದಾಗ, ವಿಧಿಇಲ್ಲದೇ, ಯುದ್ದದ ಭೂಮಿಗೆ ಬಂದ ಯುಧಿಷ್ಟಿರನು ಏರು ಧ್ವನಿಯಲ್ಲಿ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ದ್ರೋಣಾಚಾರ್ಯರಿಗೆ ಕೇಳುವಂತೆ ಅಶ್ವತ್ಥಾಮೋ ಹತಃ ಕುಂಜರಃ ಎಂದು ಹೇಳುತ್ತಿರುವ ಸಂಧರ್ಭಕ್ಕೆ ಸರಿಯಾಗಿ ಶ್ರೀ ಕೃಷ್ಣನು ಗಟ್ಟಿಯಾಗಿ ತನ್ನ ಪಾಂಚಜನ್ಯವನ್ನು (ಶಂಖು) ಊದಿದ ಕಾರಣ, ದ್ರೋಣಾಚಾರ್ಯರಿಗೆ ಅಶ್ವತ್ಥಾಮೋ ಹತಃ ಎಂದಷ್ಟೇ ಕೇಳಿಸಿ,  ಆ ಕ್ಷಣದಲ್ಲಿ ಗಲಿಬಿಲಿ ಗೊಂಡು ತನ್ನ ಮಗ ಚಿರಂಜೀವಿ ಅವನಿಗೆ ಸಾವಿಲ್ಲಾ! ಎಂಬ ವಿಷಯವನ್ನೂ ಮರೆತು ಧರ್ಮರಾಯ ಹೇಳಿದ ಮೇಲೆ ಅದು ಸತ್ಯವೇ ಇರಬೇಕೆಂದು  ಯುದ್ಧದಲ್ಲೇ ಮೂರ್ಛೆ ಹೋದ ನಂತರ ಕುಟಿಲತೆಯಿಂದ ದ್ರೋಣಾಚಾರ್ಯರನ್ನು ವಧಿಸಿ, ಪಾಂಡವರು ಯುದ್ದ ಗೆಲ್ಲುವಂತೆ ಮಾಡುವುದರಲ್ಲಿ ಶ್ರೀಕೃಷ್ಣ ಪರಮಾತ್ಮ ಸಫಲನಾದ ಕಥೆ ಎಲ್ಲರಿಗೂ ತಿಳಿದಿದೆ.

paycmಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದಲೂ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯೂ ಸಹಾ ಒಂದು ರೀತಿಯ ಕುರುಕ್ಷೇತ್ರವಾಗಿ ಪರಿಣಮಿಸಿ, ಸಾವಿರ ಬಾರಿ ಸುಳ್ಳನ್ನು ಹೇಳಿ ಅದನ್ನೇ ಸತ್ಯವನ್ನಾಗಿಸಿ ಮಾಡುವ ಕಲೆಯನ್ನು ಕರಗತಮಾಡಿಕೊಂಡಿರುವ  ಕಾಂಗ್ರೇಸ್,  ಹಿಂದಿನ ಬಿಜೆಪಿ ಸರ್ಕಾರ 40% ಕಮಿಷನ್ PayCM ಸರ್ಕಾರ ಎಂದು ಹೇಳುತ್ತಲೇ 136 ಶಾಸಕರೊಂದಿಗೆ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾದ ಕಾಂಗ್ರೇಸ್ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ತಾನು ನಡೆದದ್ದೇ ಹಾದಿ ಎಂದು  ಅಪ್ಪನ ಹೆಸರಿಲ್ಲದೇ, ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲು ಆಗದ ಅಲ್ಪ ವಿದ್ಯಾ ಮಹಾಗರ್ವಿಗಳಂತಹವರನ್ನು  ಮಂತ್ರಿಗಳನ್ನಾಗಿಸಿಕೊಂಡು, ಕರಟಕ ಧಮನಕಗಳಂತಹ ವಂದಿಮಾಗಧರನ್ನು ಅಕ್ಕ ಪಕ್ಕದಲ್ಲಿರಿಸಿಕೊಂಡು, ನಯಾಪೈಸೆ ಅಭಿವೃದ್ಧಿಕಾರ್ಯಗಳನ್ನು ಮಾಡದೇ ಹೋದರೂ, ತಾವು ಕೊಡುವ ಬಿಟ್ಟಿ ಭಾಗ್ಯಗಳೇ ತಮ್ಮ ಶ್ರೀ ರಕ್ಷೆ ಎಂದು ಭಾವಿಸಿ ಎಚ್ಚರ ತಪ್ಪಿದ್ದಲ್ಲದೇ, ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದಲೂ ಟ್ರಾನ್ಸಪರ್ ದಂದೆ, ಅನ್ನ ಭಾಗ್ಯದ ಫಲಾನುಭವಿಗಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾ ಎಚ್ಚರ ತಪ್ಪಿದ್ದರಿಂದಲೇ ಇಂದು ಸಾಮಾಜಿಕ ಹೋರಾಟಗಾರರು, ವಿರೋಧ ಪಕ್ಷದವರಿಂದ ಮೂಡಾ, ವಾಲ್ಮೀಕಿ ನಿಗಮದ ಹಣದ ಅವ್ಯವಹಾರ, ಟ್ರಾನ್ಸಫರ್ ದಂಧೆ ಮುಂತಾದ ಹಗರಣಗಳು  ಅಂದು ದ್ರೋಣಾಚಾರ್ಯರಿಗೆ ಆದಂತೆ ಇಂದು ಸಿದ್ದರಾಮಯ್ಯನವರ ಕುತ್ತಿಗೆಗೆ ಆಶ್ವರ್ತ್ಥಾಮೋ ಹತಃ ಕುಂಜರಃ ಎನ್ನುವಂತೆ ಉರುಳಾಗಿ ಪರಿಣಮಿಸಿದೆ.

hublet_Watchಯಥಾ ರಾಜಾ ತಥಾ ಪ್ರಜಾ! ಎನ್ನುವಂತೆ, ಹೇಳುವುದಕ್ಕೇ ಮಾತ್ರಾ ತಾನು ಸಮಾಜವಾದಿ ಆದರೆ, ಲಕ್ಷಾಂತರ ಬೆಲೆಯ  ಉಡುಗೊರೆ ಹುಬ್ಲೋಟ್ ಗಡಿಯಾರ, ಜನರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಖರ್ಚು ಮಾಡಿಸಿ ಸರ್ಕಾರಿ ಬಂಗಲೆಯ ದುರಸ್ತಿ, ಹಾಸಿಗೆ ದಿಂಬುಗಳ ಖರೀಧಿಯಲ್ಲೂ ಕಾಸು ಮಾಡಿಕೊಂಡಿದ್ದಲ್ಲದೇ, ದೊಡ್ಡ ಮಗ ವಿದೇಶದಲ್ಲಿ ಮಾದಬಾರದ್ದದ್ದನ್ನು ಮಾಡಲು ಹೋಗಿ ಅನುಮಾನಾಸ್ಪದವಾಗಿ ಮೃತಪಟ್ಟರೆ, ಇನ್ನು ರಾಜಕೀಯವೇ ಬೇಡವೆಂದು ವೈದ್ಯವೃತ್ತಿಯನ್ನು ಮಾಡಿಕೊಂಡಿದ್ದ ಅವಿವಾಹಿತ ಮನಗನನ್ನು ರಾಜಕೀಯಕ್ಕೆ ಕರೆತಂದು, ಅರಿಶಿನ ಕುಂಕುಮ ಕೋಮುವಾದ ಸಂಕೇತ ಎಂದು ಸಾರ್ವಜನಿಕವಾಗಿ ಬೊಬ್ಬಿರಿದು ಸದ್ದಿಲ್ಲದೇ, ಇಲ್ಲದ ಕೃಷಿ ಜಮೀನಿಗೆ  ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿ ಭಾವಮೈದುನುನ ಮೂಲಕ ತನ್ನ ಹೆಂಡತಿಗೆ ತವರು ಮನೆ ಅರಿಶಿನ ಕುಂಕುಮ ಭಾಗ್ಯ ಕೊಡಿಸಿಕೊಂಡು, ಅದನ್ನು ಮೂಡಾ  ಒತ್ತುವರಿ ಮಾಡಿಕೊಂಡಿರುವ ಕಾರಣ ಮೈಸೂರಿನ ಪ್ರತಿಷ್ಠಿತ ಬದಾವಣೆಗಳಲ್ಲಿ ಬದಲೀ ನಿವೇಶನವನ್ನು ಪಡೆದುಕೊಂಡು ಇಂದು ಸಾರ್ವಜನಿಕವಾಗಿ ಸಿಕ್ಕಿ ಹಾಕಿಕೊಂಡಿರುವ ಸಿದ್ದರಾಮಯ್ಯ ಸಮಾಜವಾದಿಯಲ್ಲಾ. ಆತ  ಮಜಾವಾದಿ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಆನೆ ನಡೆದದ್ದೇ ಹಾದಿ!, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗುವುದಿಲ್ಲಾ!. ಅಕಸ್ಮಾತ್ ಗೊತ್ತಾದರೂ, ತನ್ನ ಹಿಂದುಳಿದ ಜಾತಿಯನ್ನೇ ಗುರಾಣಿಯನ್ನಾಗಿಸಿಕೊಂಡು  ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂಬ ಹುಂಬ ತನವನ್ನು ಹೊಂದಿದ್ದ ಸಿದ್ದು ಇಂದು ತನ್ನ ಸ್ವಪಕ್ಷದವರ ಕುಟಿಲತೆ, ವಿರೋಧ ಪಕ್ಷದ ಗಟ್ಟಿ ಹೋರಾಟದಿಂದಾಗಿ,  ಮರದ ಬೆಣೆ ತೆಗೆಯಲು ಹೋಗಿ  ಬಾಲವನ್ನೇ ಸಿಕ್ಕಿಸಿ ಕೊಂಡ ಮಂಗನಂತಾಗಿದ್ದಾರೆ ಎಂದೇ ಎಲ್ಲರ ಅಭಿಪ್ರಾಯವಾಗಿದೆ.

valmikiರಾಜಾ ಪ್ರತ್ಯಕ್ಷ ದೇವತಾ ಎಂಬ ನಾಣ್ಣುಡಿ ಪ್ರಚಲಿತವಿದ್ದು, ಇಂದು ರಾಜಾಡಳಿತ ಇಲ್ಲದೇ ಹೋದರೂ, ಪ್ರಜಾಪ್ರಭುತ್ವವಾತಿ ತಮ್ಮನ್ನು ಮುನ್ನಡೆಸುವ ನಾಯಕ ಬಹಳ ಪ್ರಾಮಾಣಿಕನಾಗಿರಬೇಕು ಎಂದೇ ಎಲ್ಲರೂ ಭಾವಿಸುತ್ತಾರೆ, ಹಾಗಾಗಿ ಆತ ತನ್ನ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಪಾರದರ್ಶಕತೆಯನ್ನು ತೋರಿಸುವುದು ಅತ್ಯಗತ್ಯವಾಗಿರುತ್ತದೆ. ಜಾತಿ ಬಲ ಮತ್ತು ಬಹು ಮತ ಮತ್ತು ತನ್ನ ಸುತ್ತಲೂ ಇರುವ ಹೊಗಳು ಭಟ್ಟರ ಮಾತಿನಿಂದ ಮೈಮರೆತ ಸಿದ್ದುವಿಗೆ ಇಂದು ವಾಲ್ಮೀಕೀ ನಿಗಮದ ಬಹು ಕೋಟಿ ಹಗರಣ, ಕಾಂಟ್ರಾಕ್ಟರ್ ಸಂಘದ 80% ಕಮಿಷನ್ ಆರೋಪ,  ಮೈಸೂರಿನ ವಿದ್ಯಾಇಲಾಖೆಯ ಟ್ರಾನ್ಸಫರಿನಲ್ಲಿ ಅಪ್ಪಾ ನಾನು ಹೇಳಿದಷ್ಟೇ ಮಾಡಪ್ಪಾ ಎಂಬ ಯತೀಂದ್ರರ ಟಿಲಿಫೋನ್ ಸಂಭಾಷಣೆ, ಕಾಂಗ್ರೇಸ್ ಪಕ್ಷದ ಶಾಸಕ ಮತ್ತು ಆತನ ಮಗನ ಹಣದ ಆಸೆಗಾಗಿ ನೇಣು ಕಾಕಿಕೊಂಡ ಇನ್ಸಪೆಕ್ಟರ್  ಈಗ ಬಹು ಕೋಟಿಯ ಮುಡಾ ಹಗರಣ, ಹೀಗೆ ಬೇಡ ಬೇಡ ಎಂದರೂ, ನೂರಾರು ಹಗರಣಗಳು ಒಂದೊಂದಾಗಿಯೇ ಬಿಲದಿಂದ ಹೊರಬಂದು ಸಿದ್ದು ರಾಜಕೀಯ ಜೀವನಕ್ಕೆ  ಅಂತ್ಯವನ್ನು ಹಾಡಲು ಸಿದ್ದವಾಗಿದೆ.

abrahamಇದೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದ ಮತ್ತು ರಾಜ್ಯ ಸರ್ಕಾರವನ್ನು ಸರಿದಾರಿಗೆ ಕರೆದುಕೊಂಡು ಹೋಗಲೆಂದೇ, ಸಾಂವಿಧಾನಾತ್ಮಕವಾಗಿ ರಾಷ್ಟ್ರಪತಿಗಳಿಂದಲೇ ನೇರವಾಗಿ ಆಯ್ಕೆಯಾದ ರಾಜ್ಯಪಾಲರು, ಟಿ.ಜೆ, ಅಬ್ರಹಾ, ಸ್ನೇಹಮಹಿ ಕೃಷ್ಣ ಮತ್ತ್ತು ಮತ್ತೊಬ್ಬ ಪ್ರದೀಪ್ ಕುಮಾರ್ ಎಸ್.ಪಿ ಎಂಬ ಸಮಾಜ ಸೇವಕರು ಮುಖ್ಯಮಂತ್ರಿಗಳ ಈ ಎಲ್ಲಾ ಆರೋಪಗಳ ಕುರಿತಾಗಿ ತನಿಖೆ ನಡೆಸುವಂತೆ ಜೋರಿದ್ದ ಅರ್ಜಿಯನ್ನು ಪರಿಗಣಿಸಿ, ಇದರ ಸತ್ಯಾಸತ್ಯಾತೆಗಳ ಬಗ್ಗೆ ಸರ್ಕಾರದ ನಿಲುವು ಮತ್ತು ಅಭಿಪ್ರಾಯವೇನು ಎಂಬ ನೋಟೀಸ್ ಕಳುಹಿಸುತ್ತಿದ್ದಂತೆಯೇ, ಕತ್ತಲಲ್ಲಿ ಹಾವನ್ನು ತುಳಿದು ಬಿಚ್ಚಿ ಬೀಳುವಂತೆ ಸಿದ್ದು ಮತ್ತು  ಅವರ ಮಂತ್ರಿಮಂಡಲ ಬೆರಗಾಗಿದ್ದು ಅಚ್ಚರಿಯನ್ನುಂಟು ಮಾಡುತ್ತಿದೆ.

mysore_Chaloನಡೆದ ಹಗರಣದಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದಲ್ಲಿ, ಎಂತಹ ತನಿಖೆಗಳಿಗೂ ತಾವು ಸಿದ್ದ!. ಎಂದು ತಮ್ಮ ವಿರೋಧಿಗಳ ಬಗ್ಗೆ ತೊಡೆ ತಟ್ಟಿ ನಿಲ್ಲಬೇಕಿದ್ದ ಸಿದ್ದು, ಆಶ್ವತ್ಧಾಮ ಚಿರಂಜೀವಿ ಅತನಿಗೆ ಸಾವಿಲ್ಲ ಎಂಬುದನ್ನು ಅರಿತಿದ್ದರೂ, ಕೇವಲ ಧರ್ಮರಾಯ ಹೇಳಿದ ಎಂದ ಮಾತ್ರಕ್ಕೆ ದೇಹವನ್ನು ಇಲ್ಲೇ ಬಿಟ್ಟು ತನ್ನ ಆತ್ಮದೊಂದಿಗೆ ನೇರವಾಗಿ ಯಮಲೋಕಕ್ಕೆ ಹೋಗಿ ಯಮನೊಡನೆ ವಾದಕ್ಕಿಳಿದ ದ್ರೋಣಾಚಾರ್ಯರಂತೆ, ವಿರೋಧ ಪಕ್ಷ ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರು ಜಾತ ನಡೆಸಿದ ಸಿದ್ದು, ಈಗ ರಾಜ್ಯಪಾಲರು ಅಳೆದು ತೂಗಿ, ರಾಜಕೀಯ ಮತ್ತು ನ್ಯಾಯಾಂಗ ಪಂಡಿತರನ್ನು ಸಮಾಲೋಚಿಸಿ ಸಿದ್ದು ಅವರ ವಿರುದ್ಧ  ತನಿಖೆಗೆ ಆಜ್ಞೆ ಕೊಟ್ಟಿರುವುದಕ್ಕೆ,  ಇದು ಸಂವಿಧಾನದ ಕಗ್ಗೊಲೆ, ಕೇಂದ್ರ ಸರ್ಕಾರ ಚುನಾಯಿತ ಸರ್ಕಾರವನ್ನು ಬೀಳಿಸುವ ಹುನ್ನಾರ, ರಾಜ್ಯಪಾಲರು ಕೇಂದ್ರ ಕೈಗೊಂಬೆ ಇದರ ವಿರುದ್ಧ ರಕ್ತಪಾತ ನಡೆಸಲು ಮುಂದಾಗಿರುವುದು ನಿಜವಾಗಿಯೂ ಪ್ರಜಾ ಪ್ರಭುತ್ವಕ್ಕೆ ಕಾಂಗ್ರೇಸ್ ಮಾಡುತ್ತಿರುವ  ಕಗ್ಗೊಲೆ ಎಂದರೂ ತಪ್ಪಾಗದು.

ರಾಜ್ಯಪಾಲರು ನೀಡಿರುವ ನೋಟಿಸನ್ನು ವಾಪಸ್ ಪಡೆಯಬೇಕೆಂದು ಸಿದ್ದು ಸರ್ಕಾರದ ಮಂತ್ರಿಮಂಡಲ ಮಾಡಿದ್ದ ತೀರ್ಮಾನವನ್ನು ಕೂಲಂಕುಶವಾಗಿ ಪರಿಗಣಿಸಿ. ಮುಖ್ಯಮಂತ್ರಿಗಳು ಮುಡಾ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಎರಡು ಅಂಶಗಳು, ಅವರ ವಿರುದ್ಧ ತನಿಖೆಗೆ ನೀಡಲು ಪ್ರಭಲ ಕಾರಣವಾಗಿದೆ ಎಂದು  ರಾಜ್ಯಪಾಲರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ತಮ್ಮ ಸಹೋದರನಿಂದ ಅರಿಶಿನ ಕುಂಕುಮ ಭಾಗ್ಯದ ರೂಪದಲ್ಲಿ ಜಮೀನು ಪಡೆದು ಅದನ್ನು ಮೂಡಾ ಒತ್ತುವರಿ ಮಾಡಿಕೊಂಡು ಬೇರರೊಬ್ಬರಿಗೆ ನಿವೇಶನ ಮಾಡಿಕೊಟ್ಟ ವಿಷಯವೆಲ್ಲವನ್ನೂ ತಿಳಿದಿದ್ದರೂ, ಆ ಕುರಿತಂತೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ನಂತರವಷ್ಟೇ ಎನ್ನುವುದು ಇಲ್ಲಿ ಗಮನಾರ್ಹವಾಗುತ್ತದೆ.  ಅದುವರೆವಿಗೂ  40:60 ಅನುಪಾತದಲ್ಲಿ ಪರಿಹಾರ  ಎಂಬ ನಿಯಮವನ್ನು 50:50 ರೂಪದಲ್ಲಿ ಪರಿಹಾದ ನೀಡಬೇಕೆಂಬ ಅನುಮತಿ ನೀಡಿದ್ದು ಸಿದ್ದರಾಮಯ್ಯನವರ ಸಂಪುಟವೇ. ಹಾಗಾಗಿ ತಮ್ಮ ಪತ್ನಿಯವರು ಕೊಟ್ಟ ಅರ್ಜಿಯ ಆಧಾರದ ಮೇಲೆ ಪರಿಹಾರದ ನಿಯಮಾವಳಿಯನ್ನು  ಬದಲಾವಣೆ ಮಾಡಿದ್ದದ್ದು ಸ್ಪಷ್ಟವಾಗಿ  ಇಲ್ಲಿ ಗೋಚರವಾದರೆ,  ನಂತರ ಆ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಅಂದಿನ ಶಾಸಕರಾಗಿದ್ದ ಯತೀಂದ್ರರೇ ಇದ್ದರು ಎನ್ನುವುದನ್ನೂ ಸಹಾ ರಾಜ್ಯಪಾಲರು ಉಲ್ಲೇಖಿಸಿದ್ದು, ಈ ಮೂಲಕ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ನೇರವಾಗಿ ಭಾಗಿಗಳಾಗಿರುವುದು ಸ್ಪಷ್ಟವಾಗಿರುವ ಕಾರಣ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್ 218ರ ಅಡಿಯಲ್ಲಿ ಈ ಕುರಿತಂತೆ  ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆಯ  ಅಗತ್ಯವಿದೆ ಎಂಬ ಕಾರಣದಿಂದಾಗಿ ತಾವು ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದೇವೆ ಎಂದು ತಮ್ಮ ಆದೇಶದಲ್ಲಿ ತಿಳಿದ್ದಾರೆ.

ಮುಖ್ಯಮಂತ್ರಿಯವರ ವಿರುದ್ಧ ದೂರುದಾರರು ಸಲ್ಲಿಸಿರುವ ಆರೋಪಗಳಿಗೆ ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳೂ ಇರುವ ಕಾರಣ, ಮುಖ್ಯಮಂತ್ರಿಗಳು ಮತ್ತು ಅವರ ಕಾಂಗ್ರೇಸ್ ಪಕ್ಷ ವಿವೇಚನೆಯನ್ನು ಕಳೆದುಕೊಳ್ಳದೇ, ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳ ವಿರುದ್ಧ, ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಮುಂದೆ ನಡೆಯಬಹುದಾದ ಕಾನೂನು ಹೋರಾಟದಲ್ಲಿ ತಮ್ಮ ಪರವಾಗಿ ಸೂಕ್ತವಾದ ದಾಖಲೆಗಳನ್ನು ಇಟ್ಟು ಸೀತಾಮಾತೆ ಅಗ್ನಿಪರೀಕ್ಷೆಗೆ ಒಳಗಾಗಿ ಪುಟವಿಟ್ಟ ಚಿನ್ನದಂತೆ ಹೊರಬಹುದಾಗಿದ್ದಂತಹ ಸುವರ್ಣಾವಕಾಶವನ್ನು ರಾಜಕೀಯ ಗದ್ದಲವನ್ನು ಎಬ್ಬಿಸುವ ಮೂಲಕ ಸಿದ್ದು ಮತ್ತು ಅವರ ಸಂಪುಟ  ಹಾಳು ಮಾಡಿಕೊಂಡಿದೆ.

siddu2ಮಧ್ಯಪ್ರದೇಶ ವಿಶೇಷ ಪೊಲೀಸ್ ಘಟಕ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ 2004ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಗಳು ಲಭ್ಯವಿದ್ದಾಗಲೂ,  ತನಿಖೆಗೆ ಅನುಮತಿ ನಿರಾಕರಿಸಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಅದೇ ರೀತಿಯಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ಅವಕಾಶವೇ ಇಲ್ಲ ಎಂಬ ಭಾವನೆಯಿಂದ ಅಧಿಕಾರದಲ್ಲಿರುವ ವ್ಯಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದು ಕೊಂಡು ಅದನ್ನು  ಉಲ್ಲಂಘಿಸಲು ಪ್ರೇರಣೆ ನೀಡಿದಂತಾಗುತ್ತದೆ ಹಾಗಾಗಿ ತಾವು ತನಿಖೆಗೆ ಆದೇಶ ನೀಡಬೇಕಾಯಿತಲ್ಲದೇ, ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಪುಟದ ಸಲಹೆಯನ್ನು ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು ಎನ್ನುವ ಮೂಲಕ ಬಾಲಿಶವಾಗಿ ತಮ್ಮ ರಾಜೀನಾಮೆಯನ್ನು ಕೇಳಿರುವ ಸಿದ್ದು ಅವರಿಗೆ ಶಾಲುವಿನಲ್ಲಿ  ..ಟ್ಟು ಸುತ್ತಿ ಬೀಸಿದಂತಿದೆ.

dksರಾಜ್ಯಪಾಲರು ಈಗ ನೀಡಿರುವುದು ಕೇವಲ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಮಾತ್ರವಷ್ಟೇ. ಅವರ ಶಾಸಕತ್ವವನ್ನು ರದ್ದು ಪಡಿಸಿಲ್ಲಾ ಅಥವಾ ಅವರ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕಿತ್ತು ಹಾಕಿಲ್ಲಾ ಎಂಬ ಅರಿವು ಸಾಧಾರಣ ಪ್ರಜೆಗಳಿಗೇ ಇರುವಾಗ ಇನ್ನು ನಲವತ್ತು ವರ್ಷಗಳ ಕಾಲ ರಾಜಕಾರಣ ನಡೆಸಿರುವ ಮತ್ತು ತಮ್ಮದು ಪಾರದರ್ಶಕ ಆಡಳಿತ  ಎಂದು ಹೇಳೀಕೊಳ್ಳುವ ಸಿದ್ದರಾಮಯ್ಯನವರಂತಹ ಪ್ರಬುದ್ಧ ರಾಜಕಾರಣಿಗೆ ಅರ್ಥವಾಗದೇ, ವಿನಾಕಾರಣ ಹೋರಾಟಕ್ಕೆ ಇಳಿದಲ್ಲಿ  ಅಶ್ವತ್ಥಾಮ ಪ್ರಕರಣದಲ್ಲಿ ದ್ರೋಣಾಚಾರ್ಯರಿಗೆ ಸೋಲುಂಟಾದಂತೆ, ಶತಾಯಗತಾಯ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಬಯಸಿರುವವರಿಗೆ ತಾವೇ ರಾಜಮಾರ್ಗ ತೋರಿಸಿದಂತಾಗುವುದಲ್ಲದೇ, ಅವರ 40+ ವರ್ಷದ ರಾಜಕೀಯದಲ್ಲಿ ಗಳಿಸಿದ ಕೀರ್ತಿ ಕವಡೆಗೂ ಕಿಮ್ಮತ್ತಿಲ್ಲದಂತೆ ಆಗುತ್ತದೆ. ಮುಳ್ಳಿನ ಮೇಲೆ ಪಂಚೆ ಬಿದ್ದಾಗ ಅದನ್ನು ಸೈರಣೆಯಿಂದ ತೆಗೆಯಬೇಕೇ ಹೋರತು, ಕೋಪದಿಂದ ಎಳೆಯುವ ಮೂಲಕ ಅಲ್ಲಾ! ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಅಶ್ವತ್ಥಾಮೋ ಹತಃ ಕುಂಜರಃ

Leave a reply to Raghu Cancel reply