ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ಅದೇಕೋ ಏನೋ ಈ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಲೂ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಧೋರಣೆಗಳನ್ನು ಹೊರ ಹಾಕುತ್ತಲೇ ಇರುತ್ತದೆ. 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಆಡಿಕೊಳ್ಳುತ್ತಾ, ಐದು ಉಚಿತ ಆಮೀಷಗಳ ಮೂಲಕ ಅಧಿಕಾರಕ್ಕೆ ಅಭೂತಪೂರ್ವ ಬಹುಮತದಿಂದ ಆಡಳಿತ ಬಂದ ಸರ್ಕಾರಲ್ಲಿ ಕೆಲವು ನಾಲಾಯಕ್ ಮಂತ್ರಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮೊದಲ ದಿನದಿಂದಲೇ ತಪ್ಪು ಹೆಜ್ಜೆಗಳನ್ನು ಇಡುವಂತಾಗಿ ದಿಕ್ಕು ತಪ್ಪಿ ದಿಕ್ಕಾ ಪಾಲಾಗಿ ಹೋಗಿರುವುದು ಈ ರಾಜ್ಯದ ಜನತೆಯ ದುರ್ದೈವವೇ ಸರಿ.

madhu1ಹುಟ್ಟಿನಿಂದಲೂ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟಿಕೊಂಡು ಹುಟ್ಟಿದ್ದರೂ ಮೈಬಗ್ಗಿಸಿ ಓದಲು ಆಗದೇ, ಪಿಯೂಸಿಯನ್ನೂ ಪಾಸ್ ಮಾಡಲು ಆಗದೇ, ಜಾತಿ ಮತ್ತು  ಅಪ್ಪನ ಹೆಸರಿನ ಬಲ ಇಲ್ಲದೇ ಹೋದರೆ, ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದ, ಹುಂಬರಾದ ಪ್ರಿಯಾಂಕ್ ಖರ್ಗೆ ಮತ್ತು  ತಲೆಯಲ್ಲಿ  ಮೂರು ಕಾಸಿನ ಬುದ್ದಿ ಇಲ್ಲದೇ ಇದ್ದರೂ ಉದ್ದನೆಯ ಕೂದಲು ಬಿಟ್ಟುಕೊಂಡು ಸಿನಿಮಾದ ಖಳನಾಯಕನಂತೆ ಕಾಣುವ ಮಧು ಬಂಗಾರಪ್ಪ ಅಂತಹವರನ್ನು ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿದ ಮೇಲಂತೂ ಜನರಿಗೆ ಈ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ನಿಜ ಹೇಳಬೇಕೆಂದರೆ, ಈಡಿಗ ಸಮುದಾಯದಲ್ಲಿ ಮಂತ್ರಿಯಾಗಲು ಬಿಕೆ ಹರಿಪ್ರಸಾದ್ ಮತ್ತು ಬೇಳೂರು ಗೋಪಾಲಕೃಷ್ಣ ಅವರ ಹೆಸರು ಮುನ್ನಲೆಯಲ್ಲಿದ್ದರೂ, ಅವರಿಬ್ಬರನ್ನು ಮಂತ್ರಿಯನ್ನಾಗಿ ಮಾಡಿದರೆ, ಅವರ ತಿಕ್ಕಲುತನವನ್ನು ತಡೆಯುವುದು ಕಷ್ಟ ಎಂದು ಮನಗಂಡ ಸಿದ್ದರಾಮಯ್ಯನವರು ನೋಡಲು ಸುರದ್ರೂಪಿಯಾಗಿರುವ ಮತ್ತು ಅಮಾಯಕ ಎಂದು ಭಾವಿಸಿ, ಅಪ್ಪನಂತೆಯೇ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ Junping Jack ಮಧು ಬಂಗಾರಪ್ಪ ಅವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡರು.

madhu2ಈ ವಿಷಯದ ಅರಿವಿದ್ದೋ ಇಲ್ಲದೆಯೋ, ಅಥವಾ ತನ್ನ ಅಪ್ಪನ ಹೆಸರಿಲ್ಲಾದರೂ ಮಂತ್ರಿ ಪದವಿ ಸಿಕ್ಕಿರುವಾಗ, ಅದನ್ನು ಸದ್ಬಳಿಕೆ ಮಾಡುವ ಮೂಲಕ ನಾಡಿನ ಮಕ್ಕಳಿಗೆ ಕೆಲವು ಒಳ್ಳೆಯ ಕೆಲಸವನ್ನಾದರೂ ಮಾಡೋಣ ಎಂಬುದನ್ನು ಮನಗಾಣದ ಮಧು, ತಾನೊಬ್ಬ ಮಹಾ ಪ್ರಭೂತಿ ಎಂದು ಭಾವಿಸಿ, ಹಿಂದಿನ ಸರ್ಕಾರ ದೇಶದ ಹಿರಿಮೆ ಮತ್ತು ಗರಿಮೆಗಳನ್ನು ಎತ್ತಿಹಿಡಿಯುವಂತಹ ದೇಶಭಕ್ತರ ಕುರಿತಾದ ಪಾಠಗಳನ್ನು ಪಠ್ಯದಲ್ಲಿ ಅಳವಡಿಸಿದ್ದನ್ನು, ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಈ ಪಠ್ಯಪುಸ್ತಕವನ್ನು ಕಿತ್ತು ಬಿಸಾಕಿದ್ದೇವೆ ಎಂದು ಉದ್ಧಟತನದಿಂದ ಮಾತನಾಡಿದ ಮಧು ಬಂಗಾರಪ್ಪನೇ ನಮ್ಮ ಇಂದಿನ ಕಥೆಯ ಖಳನಾಯಕ.

ಗುರು ಹಿರಿಯರಿಗೆ, ಮಠ ಮಾನ್ಯಗಳಿಗೆ ಕೈ ಮುಗಿದು ನಮಸ್ಕಾರ ಮಾಡುವುದು ಅನೂಚಾನವಾಗಿ ನಡೆದುಕೊಂಡು ಬಂದಿರುವಂತಹ ನಮ್ಮ ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಆದರೆ, ಸಿದ್ದರಾಮಯ್ಯನಂತರ ಹಿಂದೂ ವಿರೋಧಿ  ಮುಖ್ಯಮಂತ್ರಿ ಮತ್ತು  ಮಧು ಬಂಗಾರಪ್ಪನಂತಹ ಸಂಸ್ಕಾರ ಹೀನರು ಶಿಕ್ಷಣ ಮಂತ್ರಿ ಆಗುತ್ತಿದ್ದಂತೆಯೇ ಪ್ರಸ್ತುತ ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ದೇವಾಲಯದಲ್ಲಿ ಕೈ ಮುಗಿದು ಒಳಗೆ ಬರುವುದು ಹಿಂದೂ ಗುಲಾಮಿಗಿರಿಯ ಪದ್ದತಿ ಎಂಬ ಆಲೋಚನೆ ಬಂದದ್ದೇ ತಡಾ, ಮಣಿವಣ್ಣನ್ ಎಂಬ IAS ಅಧಿಕಾರಿ ತಮ್ಮ ಅಧೀನದ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಬರುವ ಎಲ್ಲಾ ವಸತಿ ಗೃಹಗಳಲ್ಲಿಯೂ ಮೌಕಿಕ ಮತ್ತು WhatsApp ಆದೇಶದ ಮೇರೆಗೆ, ಹತ್ತಾರು ವರ್ಷಗಳಿಂದಲೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಧ್ಯೇಯ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಯಿಸಿದ್ದದ್ದು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿ ಅದೊಂದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಸರಕಾರ ಇದರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಲ್ಲದೇ, ಇಂತಹ ಆದೇಶವನ್ನು ನಾವು ಹೊರಡಿಸಿಯೇ ಇರಲಿಲ್ಲ ಎಂದು ಹೇಳಿ ತಿಪ್ಪೇ ಸಾರಿಸಿದ್ದು ಈಗ ಇತಿಹಾಸ.

madhu_kumarಇನ್ನು ವಿಧಾನಸಭೆಯಲ್ಲಿ ತಮ್ಮ ಶಿಕ್ಷಣ ಇಲಾಖೆಯ ಕುರಿತಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಸರಿಯಾಗಿ ಉತ್ತರ ಕೊಡಲು ಬಾರದೇ ತಡಬಡಾಯಿಸುವ ಮಧು ಬಂಗಾರಪ್ಪನವರ ಕುರಿತಾಗಿ ಒಡ ಹುಟ್ಟಿದ ಸಹೋದರನಾದರೂ ಜಿಲ್ಲೆಯ ರಾಜಕಾರಣದಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವಂತಿರುವ ಕುಮಾರ್ ಬಂಗಾರಪ್ಪ ಜಿಲ್ಲೆಯ ಕೆಲಸಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಉಸ್ತುವಾರಿ ಸಚಿವರಿಗೆ ಇನ್ನೂ ಹಿಡಿತವೇ ಬಂದಿಲ್ಲ. ಓದಿ ಬೆಳೆದಿದ್ದರೆ ತಾನೇ, ಇದೆಲ್ಲಾ ಅರ್ಥವಾಗುವುದು ಎಂದು ಆಗ್ಗಾಗ್ಗೆ ಲೇವಡಿ ಮಾಡಿದ್ದನ್ನೂ ಕೇಳಿರಬಹುದು. ಹಾಗಾಗಿ ಪ್ರತೀ ಬಾರಿ ಮಾಧ್ಯಮದ ಸಂದರ್ಶನದಲ್ಲಿ ನನಗೆ ಕನ್ನಡ ಓದಲು ಸ್ವಲ್ಪ ಕಷ್ಟವಾಗುತ್ತದೆ. ಅದನ್ನೇ ಮುಂದಿಟ್ಟುಕೊಂಡು  ನನ್ನ ಅಣ್ಣ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುತ್ತಿದ್ದಾನೆ. ಅವನ ಮಾತಿಗೆ ಬೆಲೆಕೊಟ್ಟು ಅದನ್ನೇ ಸುದ್ದಿ ಮಾಡಿ ನನ್ನನ್ನು ಟ್ರೋಲ್ ಮಾಡಬೇಡಿ ಎಂದು ಮಧು ಬಂಗಾರಪ್ಪ ಅನೇಕ ಬಾರಿ ಎಚ್ಚರಿಕೆ ರೀತಿಯ ಮನವಿಯನ್ನು ಜನರಿಗೆ ಮಾಡಿದ್ದನ್ನೂ ನೋಡಿದ್ದೇವೆ.  ಅಣ್ಣ ತಮ್ಮಂದಿರ ಈ ಕಿತ್ತಾಟವು ವಿರೋಧ ಪಕ್ಷಗಳಿಗೆ ಆಡಿಕೊಳ್ಳಲು ವಸ್ತುವಾಗಿದ್ದಂತೂ ಸುಳ್ಳಲ್ಲ.

rahul_madhuಕನ್ನಡ ಓದಲು ಬಾರದು ಎಂಬುದನ್ನು ಬಿಡಿ. ಕನ್ನಡವನ್ನು ಸರಿಯಾಗಿ ಮಾತನಾಡಲು ಸಹಾ ಬಾರದು ಎಂಬುದನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಮತಯಾಚಿಸಲು ಬಂದಿದ್ದ ಪಪ್ಪು ಅಲಿಯಾಸ್ ರಾಹುಲ್ ಗಾಂಧಿಯವರು ಹಿಂಗ್ಲೀಷ್ ನಲ್ಲಿ(ಇಂಗ್ಲೀಶ್ ಮಿಶ್ರಿತ ಹಿಂದಿ) ಭಾಷಣ ಮಾಡಿದ್ದನ್ನು ಸ್ಥಳೀಯರಿಗೆ ಅನುವಾದಿಸಲು ರಾಜ್ಯದ ಶಿಕ್ಷಣ ಮಂತ್ರಿಗಳಿಗಿಂತಲೂ ಒಳ್ಳೆಯವರು ಇಲ್ಲಾ ಎಂದು ಭಾವಿಸಿ ಇದೇ ಮಧು ಬಂಗಾರಪ್ಪನವರನ್ನು ನಿಯೋಜಿಸಿಕೊಂಡಾಗ, ಎತ್ತು ಏರಿಗೆ ಎರದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ, ರಾಹುಲ್ ಮಾತನಾಡಿದ್ದನ್ನು ಅನುವಾದಿಸಲು ಎಲ್ಲರ ಮುಂದೆ ತಡಬಡಾಯಿಸಿದ್ದಲ್ಲದೇ, ತಾನು ಹೇಳುತ್ತಿರುವುದೇ ಒಂದು, ಮಧು ಬಂಗಾರಪ್ಪಾ ಅನುವಾದಿಸುತ್ತಿರುವುದೇ ಒಂದು ಎಂಬುದನ್ನು ಅರಿತ ರಾಹುಲ್, ಮತ್ತಷ್ಟು ಅಪಸವ್ಯಗಳಾಗಬಾರದು ಎಂದು ನಿರ್ಧರಿಸಿ ಮತ್ತೊಬ್ಬರನ್ನು ಅನುವಾದ ಮಾಡಲು ವೇದಿಕೆಯ ಮೇಲೆ ಕರೆದಾಗಲೇ ಮಧು ಬಂಗಾರಪ್ಪನವರ ಬೌದ್ಧಿಕ ದೀವಾಳಿತನದ ಪರಿ ನಾಡಿನ ಜನರಿಗೆ ಪರಿಚಯವಾಗಿತ್ತು.

sidduಇನ್ನು 2024ರಲ್ಲಿ ಬಾರಿ ದೀಪಾವಳಿಯ ಜೊತೆ ಕನ್ನಡ ರಾಜ್ಯೋತ್ಸವವೂ ಬಂದಿರುವ ಕಾರಣ ರಾಜ್ಯದೆಲ್ಲೆಡೆ ರಾಜ್ಯೋತ್ಸವದ ಸಡಗರ ಸಂಭ್ರಮ ಮನೆ ಮಾಡಿದ್ದು, ಎಂದಿನಂತೆ ನವೆಂಬರ್ 1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜ್, ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ಅವರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿ ಕನ್ನಡದ ಬಗ್ಗೆ ಅಭಿಮಾನ ಇರಬೇಕು, ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತದೆ. ಆದರೆ ನಮ್ನ ರಾಜ್ಯದಲ್ಲಿ ಅಭಿಮಾನ ಇದೆ. ಅಭಿಮಾನ ಇದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಯಾರಿಗೆ ಕನ್ನಡ ಬರಲ್ಲ, ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡ ಮತ್ತೆ ಕನ್ನಡಿಗರ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಇಂತವರ ವಿರುದ್ಧ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣಕ್ರಮ ತೆಗೆದುಕೊಳ್ಳುತ್ತದೆ. ರಾಜ್ಯೋತ್ಸವದ ದಿನ ಶಪಥ ಮಾಡೋಣ, ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಅಂತ ಎಂದು ಕರೆ ನೀಡಿದರು.

ಕನ್ನಡ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸಿದ್ದರಾಮಯ್ಯನವರು ಇದೇ ಮೊದಲೇನಲ್ಲಾ.  ಸಮಯ ಸಿಕ್ಕಾಗಲೆಲ್ಲಾ ತಾವೊಬ್ಬ ಕನ್ನಡದ ಪಂಡಿತ ಎಂಬ ಭ್ರಮೆಯಲ್ಲಿ ಕನ್ನಡ ಪಾಠವನ್ನೇ ಹೇಳಿಕೊಡಲು ಮುಂದಾಗುತ್ತಾರೆ. ವಿಧಾನ ಸಭೆಯಲ್ಲೂ ಕನ್ನಡದ ವ್ಯಾಕರಣ, ಸಂಧಿ ಸಮಾಸಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡಿರುವ ಉದಾಹರಣೆಯೂ ಇದೆ. ದುರಾದೃಷ್ಟವಷಾತ್ ಅಂಗೈಯಲ್ಲಿರುವ ಹುಣ್ಣಿಗೆ ಕನ್ನಡಿ ಬೇಕೆ? ಎನ್ನುವಂತೆ  ಅಂದಿನ ಕಾರ್ಯಕ್ರಮದಲ್ಲಿ ತಮ್ಮ ಪಕ್ಕದಲ್ಲೇ ವೇದಿಕೆಯ ಮೇಲೆ ಕುಳಿತಿರುವ ಈ ರಾಜ್ಯದ  ಶಿಕ್ಷಣ ಮಂತ್ರಿಯಾಗಿರುವ ಮಧು ಬಂಗಾರಪ್ಪನವರಿಗೇ ಸರಿಯಾಗಿ ಕನ್ನಡ ಮಾತನಾಡಲು ಬಾರದು ಎಂದುದರ ಅರಿವಿಲ್ಲಾ ಎನ್ನುವುದು ಹಾಸ್ಯಾಸ್ಪದ. ಅನ್ಯ ಭಾಷೀಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ತಮ್ಮ ಮಂತ್ರಿಮಂಡಲದ ಮಂತ್ರಿಗಳಿಗೆ ಮೊದಲು ಸರಿಯಾಗಿ ಕನ್ನಡ ಕಲಿಸಿದರೆ ಸಾಕು ಎಂದು ಕನ್ನಡಿಗರು ಮಾತನಾಡಿಕೊಳ್ಳುತ್ತಿರುವುದು ಸುಳ್ಳೇನಲ್ಲಾ.

madhuಕನ್ನಡದ ಬಗ್ಗೆ ಮುಖ್ಯಮಂತ್ರಿಗಳು  ಮಾತನಾಡಿದ ನಂತರ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಬರೆದು ತಂದಿದ್ದ ಭಾಷಣ ಆರಂಭಿಸುತ್ತಿದ್ದಂತೆಯೇ,  ಯಾರೋ ಬರೆದು ಕೊಟ್ಟಿದ್ದ ಭಾಷಣವನ್ನು ಓದಲು ಶುರು ಮಾಡುತ್ತಿದ್ದಂತೆಯೇ, ತಪ್ಪು ತಪ್ಪು ಉಚ್ಛಾರಣೆಗಳ ಮೂಲಕ ಮೂಲ ಭಾಷಣದ ಆಶಯವನ್ನೇ ದಿಕ್ಕು ತಪ್ಪಿಸಿದ್ದನ್ನು ಕಂಡು ಅಯ್ಯೋ ದೇವರೇ, ಈ ಕಿವಿಗಳಲ್ಲಿ ಇನ್ನೂ ಏನೇನು ಕೇಳಬೇಕಪ್ಪಾ! ಎಂದು ನೆರೆದಿದ್ದವರಿಗೆ ಅನಿಸಿದ್ದು ಸುಳ್ಳಲ್ಲ.  ತಮ್ಮ ಭಾಷಣದಲ್ಲಿ ಸಂಗತಿ ಎನ್ನುವ ಬದಲು ಸಂಗಾತಿ, ದುರಸ್ಥಿ ಎನ್ನುವ ಬದಲು ದುಸ್ಥಿತಿ ಮಾಡಲಾಗಿದೆ ‘ಮನುಜರು’ ಎನ್ನುವ ಬದಲು ‘ಮಜುರ್‌’, ಮತ್ತು ‘ಸಹಬಾಳ್ವೆ’ ಬದಲಾಗಿ ‘ಸಹಬಾಳ್ಮೆ’ ಈ ರೀತಿಯಾಗಿ ಇನ್ನೂ ಅನೇಕ ಅಸ್ಕಲಿತ ಅಸ್ಪಷ್ಟವಾದ ಕನ್ನಡ ಮಾತನಾಡುವ ಮೂಲಕ ನಗೆ ಪಾಟಲಾಗಿದ್ದದ್ದು ನಿಜಕ್ಕೂ ಈ ರಾಜ್ಯದ ದೌರ್ಭಾಗ್ಯವೇ ಸರಿ.  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಹಲವು ಕಾರ್ಯ ಮಾಡಲಾಗಿದೆ. ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಕೊಡಲಾಗುತ್ತಿದೆ. ವಿವಿಧ ಬಗೆಯ ಅವಕಾಶಗಳನ್ನ ಕೊಡಲಾಗುತ್ತಿದೆ. ಕಲಿಕೆಯ ಬಲವರ್ಧನೆಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ಥಿ ಮಾಡಲಾಗಿದೆ. ಈ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಹಲವು ಕೆಲಸ ಮಾಡಲಾಗುತ್ತಿದೆ ಎಂದು ಕನ್ನಡ ಪರ ಅಭಿವೃದ್ಧಿ ಕಾರ್ಯಗಳನ್ನು ಶಿಕ್ಷಣ ಸಚಿವರು ತಿಳಿಸಿದರೂ, ಶಿಕ್ಷಣ ಸಚಿವರ ಕನ್ನಡ ಇಡೀ ಕಾರ್ಯಕ್ರಮವನ್ನು ತಾಳತಪ್ಪಿಸಿತು.

ಮನುಷ್ಯರು ತಪ್ಪು ಮಾಡೋದು ಸಹಜ. ಅದನ್ನು ಎತ್ತಿ ತೋರಿಸಬಾರದು ಎನ್ನುವುದೂ ಸತ್ಯ. ಆದರೆ ಪದೇ ಪದೇ  ಅದೇ ತಪ್ಪನ್ನು ಮಾಡುತ್ತಾ, ತಾನು ಮಾದಿದ್ದೆಲ್ಲವೂ ಸರಿ. ಅದನ್ನೇ ಜನರು ಒಪ್ಪಿಕೊಳ್ಳಬೇಕು ಎನ್ನುವ ಉದ್ಧಟತನ ತೋರುವ ಮಧು ಬಂಗಾರಪ್ಪ ಅಂತಹವರಿಗೆ ಖಂಡಿತವಾಗಿಯೂ ಕ್ಷಮೆ ಎನ್ನುವುದೇ ಇಲ್ಲಾ ಎನ್ನುವುದೂ ಸತ್ಯ.  ಇದೇ ಕುರಿತಾಗಿ  ಪ್ರಶ್ನಿಸಿದ ಪವರ್​ ಟಿವಿಯ ವಾರ್ತಾವಾಚಕಿಯ ಮೇಲೆ ಏಕಾಏಕಿ ಕೂಗಾಡಿದ್ದಲ್ಲದೇ, ನಮ್ಮ ಒಳ್ಳೆ ಕೆಲಸಗಳನ್ನು ತೋರಿಸದೆ, ನಾವು ಮಾಡುವ ತಪ್ಪುಗಳನ್ನು ಮಾತ್ರ ತೋರಿಸುತ್ತೀರಾ! ಎಂದು ಹರಿಹಾಯ್ಯುವ ಮೂಲಕ ರಾಜ್ಯದ  ಒಬ್ಬ ಜವಾಬ್ಧಾರಿ ಮಂತ್ರಿ ಯಾವರೀತಿಯಲ್ಲಿ ನಾಡಿಗೆ ಮಾದರಿಯಗಿರ ಬೇಕು ಎಂಬುದೆಲ್ಲವನ್ನೂ ಗಾಳಿಗೆ ತೂರಿದ್ದಾರೆ. ಆಕೆಯೂ ಸಹಾ, ಸರ್ ತಪ್ಪು ಮಾಡೋದು ಸಹಜ. ಕಡೆಯ ಪಕ್ಷ ನಾಡಿನ ಜನತೆಯ ಮುಂದೆ ಪ್ರಾಮಾಣಿಕವಾಗಿ ಕನ್ನಡವನ್ನು ಕಲಿತು ಮುಂದಿನ ಬಾರಿ ಸರಿಯಾಗಿ ಮಾತಾನಾಡುತ್ತೇನೆ ಎಂದು ಕ್ಷಮೆಯನ್ನಾದರೂ ಯಾಚಿಸಿ ಎಂದಾಗಲೂ ಜೋರು ಮಾತಿನಲ್ಲಿ ಆಕೆಯನ್ನು ಬೈಯುತ್ತಲೇ ತಾವು ತಪ್ಪು ಮಾಡಿಲ್ಲಾ ಮತ್ತು ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಹೇಳುತ್ತಲೇ ಕರೆ ಕತ್ತರಿಸುವ ಮೂಲಕ ಅಹಂ ತೋರಿಸಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ಸಿದ್ದರಾಮಯ್ಯನವರ ನೇತೃತ್ವದ ಈ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 20 ತಿಂಗಳಾದರೂ ಅಧಿಕಾರದ ತೆವೆಲಿಗಾಗಿ ತೇಲಿಬಿಟ್ಟ ಬಿಟ್ಟಿ ಭಾಗ್ಯಗಳಿಗೆ ಹಣವನ್ನು ಹೊಂದಿಸುವ ಸಲುವಾಗಿ ರಾಜ್ಯದ ಅಭಿವೃದ್ದಿಯು ಸಂಪೂರ್ಣವಾಗಿ ನೆನೆಗುದಿಗೆ ಬಿದ್ದು ಆರಂಭದಲ್ಲಿ ಅನಾವೃಷ್ಟಿ ಈಗ ಅತಿವೃಷ್ಟಿಯಿಂದ ಬಳಲುತ್ತಿರುವುದನ್ನು ನಿಭಾಯಿಸಲು ಪರದಾಡುತ್ತಿರುವ ಸಿದ್ದರಾಮಯ್ಯನವರು ಈಗ ತಮ್ಮ ಸಂಪುಟದ ಮಂತ್ರಿಗಳನ್ನೂ ತಮ್ಮ ಹತೋಟಿಯಲ್ಲಿಟ್ಟು ಕೊಳ್ಳಲಾಗದೇ ಇರುವಷ್ಟು ದುರ್ಬಲರೇ? ಎಂದು ರಾಜ್ಯದ ಜನರು ಆಡಿಕೊಳ್ಳುವಂತಾಗಿದೆ. ಪರಿಶ್ರಮ ಮತ್ತು ಜ್ಞಾನ ಒಬ್ಬ ವ್ಯಕ್ತಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಆದರೆ ಆ ಸ್ಥಾನದಲ್ಲಿ ಶಾಶ್ವತವಾಗಿ ಇರಬೇಕೆಂದರೆ ಆತನ ನಡವಳಿಗೆ ಮತ್ತು ವರ್ತನೆ ಕಾರಣವಾಗುತ್ತದೆ ಎಂಬುದನ್ನು ಸಿದ್ದರಾಮಯ್ಯನವರಿಗೂ ಮತ್ತು ಅವರ ಸಂಪುಟದ ಸಚಿವರಿಗೆ ತಿಳಿಸಬೇಕು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

  1. ಸರ್ ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ. ಕನ್ನಡವನ್ನು ನೆಟ್ಟಗೆ ಮಾತನಾಡಲು ಬರದ ಮಂತ್ರಿಯ ಕುರಿತು ಸಮರ್ಪಕ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದೀರ.

    ಆದರೆ ನಿಮ್ಮ ಪ್ರತಿಕ್ರಿಯೆಯ ಉದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಟೀಕಿಸಲೇಬೇಕು ಎಂಬ ನಿಮ್ಮ ಮನೋಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ.

    ಸರಕಾರದ ತಪ್ಪುಗಳನ್ನು ಎತ್ತಿತೋರಿಸಲೇಬೇಕು, ಹಾಗಂತ ಬರೀ ಟೀಕೆಗಳೇ ತುಂಬಿ ಹೋದರೆ ಹೇಗೆ? ಸಿದ್ದರಾಮಯ್ಯನವರು ಸಂಧಿ, ಸಮಾಸದ ಕುರಿತು ಪಾಠ ಮಾಡಿದರೆ ಅದನ್ನು ಕಂಡು ಖುಷಿಪಡಬೇಕು ಅಲ್ವಾ?

    ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಗ್ಯಾರಂಟಿ ಸ್ಕೀಮ್‌ಗಳು ಮಾತ್ರವೇ ಕಾರಣ ಅಲ್ಲ. ಬೊಮ್ಮಾಯಿ‌ ನೇತೃತ್ವದ ಸರಕಾರ ಮಾಡಿದ ಒಂದು ಅಭಿವೃದ್ಧಿ ಕಾರ್ಯವನ್ನು, ಒಂದು ಹೊಸ ಯೋಜನೆಯನ್ನು ತೋರಿಸಿ ನೋಡೋಣ?

    ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಖಚಿತವಿತ್ತು, ಕಾಂಗ್ರೆಸ್‌ಗೆ ಸರಳ ಬಹುಮತ ಅಥವಾ ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಉಂಟಾಗುತ್ತಿತ್ತು. ಗ್ಯಾರೆಂಟಿ ಯೋಜನೆಗಳಿಂದ 10-15 ಸೀಟ್‌ಗಳು ಹೆಚ್ಚುವರಿಯಾಗಿ ದೊರೆತವು ಅಷ್ಟೆ.

    ಬೊಮ್ಮಾಯಿ ಆಡಳಿತ ದಿನಗಳ ನ್ಯೂಸ್‌ಪೇಪರ್ ತೆಗೆದು ನೋಡಿ, ನಿಮಗೆ ಈ ಕುರಿತು ಖಚಿತ ವರ್ತಮಾನ ದೊರಕುತ್ತವೆ.

    ಕನ್ನಡ ಬಾರದ ಸಚಿವ ಖಂಡಿತವಾಗ್ಯೂ ಶಿಕ್ಷಣ ಮಂತ್ರಿಯಾಗಕೂಡದು. ಇದು ಸಕಲ ಕನ್ನಡಿಗರೂ ಒಪ್ಪಲಾಗದು.

    ನಿಮ್ಮ ಪ್ರತಿಕ್ರಿಯೆ ಅದನ್ನು ಕುರಿತಾಗಿ ಇದ್ದರೆ ಆಗ ಅದರ ಕುರಿತಾಗಿ ಗಮನ ದೊರಕುತ್ತದೆ. ಅದನ್ನು ಬಿಟ್ಟು ಸರಕಾರವನ್ನು, ಅದರ ಎಲ್ಲ ಕೆಲಸಗಳನ್ನು ಖಂಡಿಸಲು ಶುರುಮಾಡಿದರೆ ಮೂಲ ವಿಷಯ ಮೂಲೆಗೆ ಸರಿಯುತ್ತದೆ.

    ಜನತಾ ಆಶೀರ್ವಾದದಿಂದ ಉತ್ತಮ ಬಹುಮತದಿಂದ ಸರ್ಕಾರ ರಚನೆಯಾಗಿದೆ. ಅದು ಐದು ವರ್ಷ ಕಾರ್ಯನಿರ್ವಹಿಸಲಿ, ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಗೆ ಮಾರಕವಾದ ನಿರ್ಧಾರಗಳನ್ನು ಈ ಅರಕಾರ ಕೈಗೊಂಡರೆ ಅದನ್ನು ಉಗ್ರ ಸ್ವರೂಪದಲ್ಲಿ ಖಂಡಿಸೋಣ, ಪ್ರತಿಭಟಿಸೋಣ. ಸರ್ಕಾರ ಕನ್ನಡ ವಿರೋಧಿ ನಿಲುವು ತಳೆಯದಂತೆ ಅದನ್ನು ಹದ್ದುಬಸ್ತಿನಲ್ಲಿ ಇಡೋಣ.

    ಕನ್ನಡ ನಾಡಿಗೆ ಪ್ರಗತಿಪರ ಕೆಲಸವನ್ನು ಈ ಸರಕಾರ‌ಮಾಡುವಂತೆ ಅದರ ಮೇಲೆ ಒತ್ತಡ ಹೇರೋಣ.

    ಮುಮುಂದಿನ ಚುನಾವಣೆಯಲ್ಲಿ ಜನತೆ ಸರ್ಕಾರದ ಸಾಧನೆಗೆ ತಮ್ಮ ಮತದ ಮೂಲಕ ಉತ್ತರ ಕೊಡುತ್ತಾರೆ.

    ಸರ್ಕಾರಗಳನ್ನು ಕೆಡಹುವ ಕೆಲಸವನ್ನು ರಾಜಕಾರಣಿಗಳು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.

    ಆದರೆ ಜನಸಾಮಾನ್ಯರಾದ ನಾವು ಇಂತಹ ಕೃತ್ಯಗಳಲ್ಲಿ ಯಾಕೆ ತೊಡಗಿಕೊಳ್ಳಬೇಕು.

    ಸರಕಾರ ಯಾವುದೇ ಇರಲಿ, ನಾವು ರಾಗಿ ಬೀಸೋದು ತಪ್ಪಲ್ಲ, ಅಲ್ವಾ?

    Like

    1. ಬೊಮ್ಮಾಯಿ‌ ಸರ್ಕಾರ‌ ಸರಿಯಾಗಿ ಕೆಲಸ ಮಾಡಿಲ್ಲ‌ ಅಂತಾನೇ ಜನಾ ಸಿದ್ದು ಸರ್ಕಾರದ ತಂದಿದ್ದಲ್ವೇ?

      ಕಳೆದ 20 ತಿಂಗಳಲ್ಲಿ ಪ್ರತೀ ದಿನವೂ ಕೇಂದ್ರ ಸರ್ಕಾರವನ್ನು, ಹಿಂದೂಗಳನ್ನು ತೆಗಳುವುದನ್ನು ಬಿಟ್ಟು ಬೇರೆ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ತೋರಿಸಿ.

      ನಮ್ಮ ಮನೆಯಲ್ಲೇ ಇಬ್ಬರು ಸರ್ಕಾರಿ ನೌಕರರಿಗೆ ಸಂಬಳ ಬಂದು ಎರಡು ತಿಂಗಳಾಯ್ತು. ಸಿದ್ದುವಿನ ಸ್ವಯಂಕೃತಾಪರಾಧದ ಮೂಡಾ ಕೇಸಿನಲ್ಲಿ ವಾದ ಮಾಡಲು‌ ಸರ್ಕಾರದ ಕೋಟಿ ಕೋಟಿ ಖರ್ಚು ಮಾಡಿ ಮನು ಸಿಂಘ್ವಿಯಂತಹ ವಕೀಲರನ್ನು ಕರೆಯಲು ದುಡ್ಡಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ‌ ಎಂದರೆ ನಂಬುವುದು ಹೇಗೇ?

      ಇನ್ನು ಸಿದ್ದು ‌ಕಂಡ ಕಂಡವರಿಗೆ ಕನ್ನಡ ಪಾಠ ಮಾಡುವ ಮುನ್ನಾ ಶಿಕ್ಷಣ ಮಂತ್ರಿಗೆ ಪಾಠ ಮಾಡಿ ಎನ್ನುವುದು ತಪ್ಪೇ?

      ಎಲ್ಲಾ ಇಲಾಖೆಯಲ್ಲೂ ಮೂಗು ತೂರಿಸುವ ಪಿಯುಸಿ ಫೇಲ್ ಮರಿ ಖರ್ಗೆ, ಶಿವರಾಜ್ ತಂಗಡಗಿ, ಜಮೀರ್, ಸಂತೋಷ್ ಲಾಡ್, ಎಂ.ಬಿ.ಪಾಟೀಲ್ ಅವರನ್ನು ಸಮರ್ಥಿಸಿ ಕೊಳ್ಳಲಾದೀತೇ?

      ನೆನ್ನೆ ಡಿಕೆಶಿ ಇಂದು ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿ ಅವರೇ ಶಕ್ತಿ ಯೋಜನೆಯಿಂದಾಗಿ ಖಜಾನೆ ಖಾಲಿ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಉಳಿದ ಭಾಗ್ಯಗಳೂ ಅಷ್ಟಕಷ್ಟೇ.

      ಇನ್ನು‌ ಜಮೀರ್ ಮುಖೇನ ಸಿದ್ದು ವಕ್ಫ್ ಕಿತಾಪತಿ‌ ಮಾಡಿದ್ದು ಸರಿಯೇ?

      Like

Leave a comment