ಅಂದಿನ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಇಂದಿನ ಇಟಾಲಿಯನ್ ಗಾಂಧಿಯ ಕಾಂಗ್ರೇಸ್

ಕಾಂಗ್ರೇಸ್ ಎನ್ನುವ ಪದ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಅತ್ಯಂತ ಪ್ರಚಲಿತ ಪದವಾಗಿದ್ದು. ಕೆಲವು ಸಮಾನ ಮನಸ್ಕರು ಒಂದೆಡೆ ಒಟ್ಟಿಗೆ ಸೇರುವ ಇಲ್ಲವೇ ಭೇಟಿಯಾಗುವ ಪ್ರಕ್ರಿಯೆ. ಇನ್ನೂ ಸರಳವಾಗಿ ಹೇಳಬೇಕೆಂದರೆ,  ಒಂದು ಸಮಾನ ಮನಸ್ಕರು ಒಟ್ಟಿಗೆ ಸೇರಿ ನಡೆಸುವ ಸಭೆ ಅಥವಾ ಅಧಿವೇಶನವನ್ನು ಕಾಂಗ್ರೇಸ್ ಎಂದು ಕರೆಯಲಾಗುತ್ತದೆ. ಸ್ವಾತ್ರಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಸಂಧರ್ಭದಲ್ಲಿ, ಜನ್ಮತಃ ಬ್ರಿಟಿಷ್ ಆಗಿದ್ದು ಭಾರದ ಬ್ರಿಟಿಷ್ ಸರ್ಕಾರದಲ್ಲಿ ರಾಜಕೀಯ ಸುಧಾರಕ, ಪಕ್ಷಿವಿಜ್ಞಾನಿ, ನಾಗರಿಕ ಸೇವಕ ಮತ್ತು ಸಸ್ಯವಿಜ್ಞಾನಿ ಎಂದೇ ಖ್ಯಾತಿ ಪಡೆದಿದ್ದ ಅಲನ್ ಆಕ್ಟೇವಿಯನ್ ಹ್ಯೂಮ್ (A.O. Hume) ಎಂಬ ವ್ಯಕ್ತಿ ಬ್ರಿಟೀಷರು ಆಫ್ರಿಕ ಮತ್ತು ಏಷ್ಯಾ ಖಂಡದಲ್ಲಿ ನಡೆಸುತ್ತಿದ್ದ ದಬ್ಬಾಳಿಕೆಯ ವಿರುದ್ಧವಾಗಿ ಸ್ಥಳೀಯರನ್ನು ಜಾಗೃತಿ ಗೊಳಿಸುವ ಸಲುವಾಗಿ ಕೆಲವು ಸ್ಥಳೀಯ ರಾಜಕೀಯ ಮುಂಖಂಡರೊಡನೆ ಸೇರಿಕೊಂಡು 28 ಡಿಸೆಂಬರ್ 1885 ದಲ್ಲಿ ಭಾರತೀಯ ಕಾಂಗ್ರೇಸ್ ಚಳುವಳಿಯನ್ನು ಆರಂಭಿಸಿದರು. ಆರಂಭದಲ್ಲಿ ಅದೊಂದು ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಹೊಂದಿತ್ತು. ಅಂದಿನ ಸಮಯದಲ್ಲಿ ಲಾಲ್-ಬಾಲ್-ಪಾಲ್ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ನಡೆಯುತ್ತಿದ್ದ ಉಗ್ರ ಪತಿಭಟನೆಯೊಂದಿಗೆ ಕಾಂಗ್ರೇಸ್ ಜೋಡಿಸಿಕೊಂಡಿತಾದರೂ, 19 ನೇ ಶತಮಾನದ ಉತ್ತರಾರ್ಧದಿಂದ ಆದರಲ್ಲೂ ವಿಶೇಷವಾಗಿ ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಆಗಿದ್ದ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ವರ್ಣಬೇಧ ನೀತಿಯಿಂದಾಗಿ  ರೈಲಿನಿಂದ ಹೊರದಬ್ಬಿಸಲ್ಪಟ್ಟ ನಂತರ ಭಾರತಕ್ಕೆ ಹಿಂದಿರುಗಿ ಗೋಪಾಲಕೃಷ್ಣ ಗೋಖಲೆಯವರ ಪ್ರೇರಣೆಯಿಂದಾಗಿ ಕಾಂಗ್ರೇಸ್ಸಿಗೆ ಸೇರಿದ ನಂತರಕಾಂಗ್ರೆಸ್ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಪಕ್ಷವಾಗಿ ಬೆಳೆದು ನಂತರ ವಿವಿಧ ಹಂತದ ಹೋರಾಟ ನಡೆಸಿ 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತ್ರಂತ್ರ ತಂದುಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು.

ಹೀಗೆ ಲಕ್ಷಾಂತರ ನಿಸ್ವಾರ್ಥ ಸ್ವಾತ್ರಂತ್ರ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತ್ರಂತ್ರ್ಯ, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಂತರದ ದಿನಗಳಲ್ಲಿ  ನೆಹರು ಮತ್ತು ಅವರ ಮಗಳು ಇಂದಿರಾ ಪ್ರಿಯದರ್ಶನಿಯ  ದೂ(ದು)ರಾಲೋಚನೆಯ ಪರಿಣಾಮವಾಗಿ  ಇಡೀ ನೆಹರು ಕುಟುಂಬವೇ ನಕಲಿ ಗಾಂಧಿ ಕುಟುಂಬವಾಗಿ ಮಾರ್ಪಟ್ಟು, ಕೇವಲ ಮುಗ್ಧ ಭಾರತೀಯರನ್ನು ಮರಳು ಮಾಡಿ ಅಧಿಕಾರವನ್ನು ಪಡೆಯುವ ಸಲುವಾಗಿ  ಸ್ವಾತ್ರಂತ್ರ್ಯಾ ನಂತರ ಅಂದಿನ ಕಾಂಗ್ರೇಸ್ ಚಳುವಳಿಯನ್ನು ವಿಸರ್ಜನೆ ಮಾಡಬೇಕು ಎಂಬ ಅಸಲಿ ಗಾಂಧಿಯವರ ಅಶಯವನ್ನೂ ಧಿಕ್ಕರಿಸಿ, ದೇಶಕ್ಕೆ ಸ್ವಾತ್ರಂತ್ರ ತಂದುಕೊಟ್ಟ ಪಕ್ಷ ತಮ್ಮದು ಎಂದು ಮುಂದುವರೆಸಿಕೊಂಡು ಹೋದ ಪರಿಣಾಮವೇ, ಅಂದಿನ  ರಾಷ್ಟ್ರೀಯ ಕಾಂಗ್ರೇಸ್ ಇಂದು  ಇಟಾಲಿಯನ್ ಮೂಲದ  ಇಂಗ್ಲೇಂಡಿನ ರೆಸ್ಟೋರೆಂಟ್ ಒಂದರಲ್ಲಿ ಪರಿಚಾರಿಕೆಯಾಗಿದ್ದ ಸೋನಿಯಾ ಆಂಟೋನಿಯಾ ಮೈನೋಳನ್ನು ಇಂದಿರೆಯ ಮಗ ರಾಜೀವ್ ಪ್ರೀತಿಸಿ ಮದುವೆ ಆದ ಕಾರಣ, ಆಕೆ ಸೋನಿಯಾ ಗಾಂಧಿಯಾಗಿ, ಅಕೆಯ ದಡ್ಡ ಮಗ ರಾಹುಲ್ ಗಾಂಧಿ, ರಾಬರ್ಟ್ ವಾದ್ರಾಳನ್ನು ಮದುವೆಯಾದರೂ ಪ್ರಿಯಾಂಕಾ ಗಾಂಧಿ ವಾದ್ರಾಳಾಗಿ ಗಾಂಧಿಯಾಗಿಯೇ ಇರುವ ಮತ್ತು ಆಕೆಯ ಮಕ್ಕಳಾದ ರೆಹಾನ್ ವಾದ್ರಾ ಮತ್ತು ಮಿರಾಯಾ ವಾದ್ರಾರ ವಂಶ ಪಾರಂಪರ್ಯ ಪಕ್ಷವಾಗಿ ಉಳಿದು ಹೋಗಿರುವುದು ವಿಪರ್ಯಾಸವೇ ಸರಿ.

ನಿಜ ಹೇಳಬೇಕೆಂದರೆ, ಕಾಶ್ಮೀರಿ ಮೂಲದ ಹಿಂದೂ ಪಂಡಿತ್ (ಇದರ ಬಗ್ಗೆಯೂ ಅನೇಕ ವಿವಾದಗಳಿವೆ) ನೆಹರುವಿನ ಮಗಳು ಇಂದಿರಾ ಪ್ರಿಯದರ್ಶನಿ ಪಾರ್ಸಿ ಮೂಲದ ಫಿರೋಜ್ ಘಂಢಿಯನ್ನು ಮದುವೆಯಾದ ನಂತರ  ಆಕೆಯ ಮಕ್ಕಳು ಜನ್ಮತಃ ಪಾರ್ಸಿ/ಇಸ್ಲಾಂ ಆಗುತ್ತಾರೆಯೇ ಹೋರತು ಹಿಂದೂಗಳಾಗುವುದಿಲ್ಲ. ಅದೇ ರೀತೀ ರಾಜೀವ್ ಗಾಂಧಿ ಮತ್ತು ಕ್ರಿಶ್ಚಿಯನ್  ಆಂಟೋನಿಯಾ ಮೈನೋ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಪಾರ್ಸಿಗಳಾಗ ಬೇಕು. ಆದರೆ ಈ ದೇಶದ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯದ ಗಂಧ ಗಾಳಿಯೇ ಇಲ್ಲದ ಈ ದೇಶಕ್ಕೆ ಸೊಸೆಯಾಗಿ  ಬಂದ ಒಂದು ದಶಕಗಳ ನಂತರ  ಒತ್ತಾಯಕ್ಕೆ ಮಣಿದು ಈ ದೇಶದ ಪೌರತ್ವವನ್ನು ಸ್ವೀಕರಿಸಿದ ಸೋನಿಯಾಗಾಂಧಿಯ ಮಕ್ಕಳಿಗೆ ಅಸಲಿಗೆ ತಾವು ಯಾವ ಧರ್ಮ ಮತ್ತು ಜಾತಿಯ ಅರಿವೇ ಇಲ್ಲಾ. ಹಾಗಾಗಿ ಅವರಿಬ್ಬರೂ ಸಹಾ ಸಮಯಕ್ಕೆ ತಕ್ಕಂತೆ ಗೋಸುಂಬೆಯಂತೆ ತಮ್ಮ ಧರ್ಮ ಮತ್ತು ಜಾತಿಯನ್ನು ಬಳಸಿಕೊಂಡು  ಪ್ರತೀ ಚುನಾವಣೆಯಲ್ಲಿಯೂ ಒಂದೊಂದು ಜಾತಿ ಪಂತದ ಛದ್ಮ ವೇಷ ಧರಿಸಿಕೊಂಡು ಜನರನ್ನು ಮರಳು ಮಾಡುತ್ತಿರುವುದು ಅಕ್ಷಮ್ಯ  ಅಪರಾಧವಾಗಿದೆ.

ಇತ್ತೀಚೆಗಂತೂ ಹೋದ ಬಂದ ಕಡೆಯೆಲ್ಲೆಲ್ಲಾ ಸಂವಿಧಾನದ ಕೆಂಪು ಬಣ್ಣದ ಪುಸ್ತಕವನ್ನು ಹಿಡಿದು, ಮತ್ತಾರೋ ಬರೆದುಕೊಟ್ಟ ಭಾಷಣವನ್ನು ಗಿಳಿ ಪಾಠದಂತೆ ಓದುತ್ತಾ, ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು  ಅಬ್ಬರಿಸುವ ರಾಹುಲ್ ಗಾಂಧಿ ಮತ್ತು ಅವನ ತಂಗಿಯರನ್ನು ಹಿಡಿದು ಪಟ್ಟಾಗಿ ಕೂರಿಸಿ, ಈ ದೇಶದ ಸಂವಿಧಾನದಲ್ಲಿ ಏನಿದೇ? ಯಾರಿಂದ ಹೇಗೆ ಅಪಾಯದಲ್ಲಿದೆ? ಎಂದು ಕೇಳಿ ನೋಡಿದರೆ ಖಂಡಿತವಾಗಿಯೂ ಅವರಿಬ್ಬರೂ ಉತ್ತರಿಸಲಾರರು. ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರವೇ ಇರುವುದೇ ಪ್ರಜಾಪ್ರಭುತ್ವ ಎಂಬುದನ್ನು ಗಾಳಿಗೆ ತೂರಿ ಭಾರತದಲ್ಲಿ ಅಧಿಕಾರ ಇರುವುದೇ  ನೆಹರುವಿನಿಂದ,  ಇಂದಿರಾ ಕುಟುಂಬಕ್ಕಾಗಿ ಮತ್ತು ಸಕಲಿಗಾಂಧಿಗಳಿಗೋಸ್ಕರ ಎಂಬುದನ್ನೇ ತಲೆಗೆ ತುಂಬಿಕೊಂಡು ಈ ದೇಶದ ಉನ್ನತ  ಅಧಿಕಾರ ಸದಾಕಾಲವೂ ತಮ್ಮ ಪದತಲದಲ್ಲಿಯೇ ಇರಬೇಕೆಂದು ಹಪಾಹಪಿಸುವ ಗೋಸುಂಬೆಗಳೂ ಎಂದರೂ ತಪ್ಪಾಗದು.

ಅಂಬೇಡ್ಕರ್ ಆವರು ಮಂಡಿಸಿದ ಸಂವಿಧಾನದಲ್ಲಿ ಇಲ್ಲದಿದ್ದ ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ತಮ್ಮ ಅಧಿಕಾರಕ್ಕಾಗಿ ಸಂವಿಧಾನದಲ್ಲಿ ತುರುಕಿದ, ಈ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿ ಧೋರಣೆಯನ್ನು ತೋರಿದ ಇಂದಿರಾಗಾಂಧಿಯ ಸೊಸೆ, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಈ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಸದಾಕಾಲವೂ ಧಿಕ್ಕರಿಸುತ್ತಲೇ ಇರುವುದು, ಈ ದೇಶದ ಕುರಿತಾಗಿ ಅವರ ಬದ್ಧತೆಯನ್ನು ಜಗಜ್ಜಾಹೀರಾತು ಮಾಡುತ್ತದೆ.  ಆನೆ ನಡೆದದ್ದೇ ದಾರಿ ಎಂದು ತಮ್ಮನ್ನು ತಾವೇ ಆನೆ ಎಂದು ತಿಳಿದಿರುವ ಈ ನಕಲಿ ಗಾಂಧಿಗಳು ತಾವು ಏನು ಮಾಡಿದರೂ ಸರಿ. ಉಳಿದವರು ಮಾಡಿದ್ದೆಲ್ಲವೂ ತಪ್ಪು ಎಂಬ ಸುಳ್ಳನ್ನು ಸದ್ದಿಲ್ಲದೇ ವಿಷ ಬೀಜದಂತೆ ಹರಡಲು ಪ್ರಯತ್ನಿಸುತ್ತಿದ್ದಾರೆ.

ಇದಕ್ಕೆ ಉತ್ತಮ  ಉದಾರಣೆಯೆಂದರೆ, ಹೋದ ಬಂದ ಕಡೆಯಲೆಲ್ಲಾ, ಹಿಂದೂಗಳನ್ನು ಜಾತಿ ಆಧಾರಿತವಾಗಿ ವಿಭಜಿಸುವ ಜಾತಿ ಗಣನೆಯ ಕುರಿತಾಗಿ ಮಾತನಾಡುತ್ತಾರೆ. ನಿಜ ಹೇಳಬೇಕೆಂದರೆ ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಮತ ಪಂಥಗಳಲ್ಲಿಯೂ  ಜಾತಿ ಮತ್ತು ಉಪಜಾತಿ,  ಪಂಗಡ ಮತ್ತು ಒಳ ಪಂಗಡಗಳಿದ್ದು, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತಹ ಪರಿಸ್ಥಿತಿ ಇರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಆದರೂ ಸಹಾ ಕೇವಲ ಹಿಂದೂಗಳನ್ನು ದಲಿತ, ಹಿಂದುಳಿದವ, ಅಸ್ಪೃಶ್ಯ, ಮೇಲ್ಜಾತಿ, ಕೀಳ್ಜಾತಿ ಎಂದು ಒಡೆದು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ.

ಇನ್ನು ಪ್ರಭು ಶ್ರೀರಾಮ ನಮ್ಮ ದೇಶದಲ್ಲಿ ಕೇವಲ ರಾಜ ಅಥವಾ ದೇವರು ಮಾತ್ರವಾಗಿರದೇ, ನಮ್ಮ ದೇಶದ  ಅಸ್ತಿತ್ವ ಮತ್ತು ಅಸ್ಮಿತೆ ಎಂದರೂ ತಪ್ಪಾಗದು. ರಾಮಾಯಣ ಮತ್ತು ಮಹಾಭಾರತಗಳು ಈ ದೇಶದಲ್ಲಿ ನಡೆದಿತ್ತು ಎನ್ನುವುದಕ್ಕೆ ನೂರಾರು ಜ್ವಲಂತ ಸಾಕ್ಷಿ ಪುರಾವೆಗಳು ಈ ದೇಶದಲ್ಲಿ ಇರುವಾಗ ರಾಮ ಸೇತು ವಿಷಯದಲ್ಲಿ ರಾಮ ಎನ್ನುವುದೇ ಕಟ್ಟು ಕಥೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದೂ ಇದೇ ಸೋನಿಯಾರವರ ಕಾಂಗ್ರೇಸ್. ಇನ್ನು ಅಯೋಧ್ಯೆಯಲ್ಲಿ  ನ್ಯಾಯಾಲಯದ ಆದೇಶದಂತೆಯೇ ರಾಮ ಮಂದಿರ ಕಟ್ಟಲು ಅನುಮತಿ ಪಡೆದು ರಾಮ ಮಂದಿರದ ಶಿಲಾನ್ಯಾಸ ನಂತರ ದೇವಾಲಯದ ಉಧ್ಭಾಟನೆ ಈ ಎಲ್ಲಾ ಸಮಯದಲ್ಲೂ ಆಹ್ವಾನವಿದ್ದರೂ  ಒಂದು ಧರ್ಮದ ಓಲೈಕೆಗಾಗಿ ರಾಮನಿಂದ  ಅಂತರ ಕಾಯ್ದುಕೊಂಡಿದ್ದು ಇದೇ ಸೋನಿಯಾ ಕಾಂಗ್ರೇಸ್.

ಇಡೀ ವಿಶ್ವವೇ ಭಾರತದ ಪ್ರಯಾಗ್ ರಾಜ್ ನಲ್ಲಿ  144 ವರ್ಷಗಳಿಗೊಮ್ಮೆ ನಡೆಯುವ   ಭಾರತದ ಸಾಂಸ್ಕೃತಿಕ ಪರಂಪರೆಯ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಪವಿತ್ರ ನದಿಗಳ ಸಂಗಮದಲ್ಲಿ ಮಿಂದೆದ್ದು ಪುನೀತರಾಗುವಂತ ಸಂಧರ್ಭದಲ್ಲಿ, ಚುನಾವಣಾ ಸಮಯದಲ್ಲಿ ತನ್ನನ್ನು ತಾನು ಜನಿವಾರಧಾರಿ ಕೌಲ್  ಬ್ರಾಹ್ಮಣ ಎಂದು ಕರೆದುಕೊಳ್ಳುವ ರಾಹುಲ್ ಗಾಂಧಿ ಮತ್ತವರ ಕುಟುಂಬ ಅತ್ತ ಕಡೆಯೂ ಸುಳಿಯದೇ ಇರುವುದು ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಕುರಿತು ಅವರಿಗೆ ನಿರ್ಲಕ್ಷತೆಯನ್ನು ಪ್ರತಿಬಿಂಬಿಸುತ್ತದೆ. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಇನ್ನು ಈ ನಕಲಿ ಗಾಂಧಿಗಳ ಪರಮ ಆರಾಧಕರಾದ  ಅವರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಗಾ ನದಿಯಲ್ಲಿ ಮಿಂದೆದ್ದರೆ ಬಡತನ ನಿವಾರಣೆಯಾಗುತ್ತದೆಯೇ? ಎಂದು  ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಗಣೇಶ ಚತುರ್ಥಿ, ನವರಾತ್ರಿಯಂತಹ ಪ್ರಮುಖ ಕಾರ್ಯಕ್ರಮಗಳಿಂದಲೂ  ಅಂತರ ಕಾಯ್ದುಕೊಳ್ಳುವ  ಇದೇ ಕಾಂಗ್ರೇಸ್ಸಿಗರು, ತಲೆಯ ಮೇಲೆ ಟೋಪಿ ಹಾಕಿಕೊಂಡು ಮುಸಲ್ಮಾನರ ಇಫ್ತಾರ್ ಕೂಟಗಳಲ್ಲಿ ಭಾಗವಹಿಸುವುದು, ದರ್ಗಾಗಳಲ್ಲಿ ಛಾದರ್ ಹೊದಿಸುವುದು, ಕ್ರಿಸ್ಮಸ್ ಮತ್ತು ಜನವರಿ ಹೊಸವರ್ಷದ ಸಮಯದಲ್ಲಿ ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುವುದನ್ನೂ ಮಾತ್ರ ಮರೆಯದೇ ಇರುವುದು ಅವರೇ ಹೇಳುವ ಮೊಹಬ್ಬತ್ ಕೀ ದುಖಾನ್ ಎಂಬ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂದೆನಿಸುತ್ತದೆ..

ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆಯಂತಹವರಿಗೆ ಈ ದೇಶದ ಮೇಲಿನ ಬದ್ಧತೆ ಯಾವ ಪ್ರಮಾಣದಲ್ಲಿದೆ ಎಂದರೆ, ಸ್ವತಃ ಅವರದ್ದೇ ಪಕ್ಷದವರೇ ಆಗಿದ್ದು ಈ ದೇಶದ ರಿಜರ್ವ್ ಬ್ಯಾಂಕ್ ಗವರ್ನರ್ ಆಗಿ, ವಿತ್ತ ಮಂತ್ರಿಗಳಾಗಿ, ಕಡೆಗೆ ಎರಡು ಬಾರಿ ಪ್ರಧಾನ ಮಂತ್ರಿಗಳೂ ಆಗಿದ್ದ ಮನಮೋಹನ್ ಸಿಂಗ್ ಅವರು ನಿಧನರಾಗಿ ಇಡೀ ದೇಶವೇ ಶೋಕಾಚರಣೆ ನಡೆಸುತ್ತಿದ್ದಾಗ, ಇದೇ ರಾಹುಲ್ ಪೂರ್ವ ನಿರ್ಧಾರದಂತೆ ವಿದೇಶಕ್ಕೆ ಹೋಗಿ ತನ್ನ ಗೆಳೆಯರೊಡನೆ ಮೋಜು ಮಸ್ತಿ ಮಾಡಿದ್ದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ದೆಹಲಿಯಲ್ಲೇ ಇದ್ದು ಅಲ್ಲಿನ 2025ರ ವಿಧಾನಸಭಾ ಚುನಾವಣೆಗಾಗಿ ಕೇಜ್ರೀವಾಲ್ ವಿರುದ್ಧ ತೋಳೇರಿಸಿ ಚುನಾವಣ ಭಾಷಣ ಮಾಡುತ್ತಿರುವ ಲೋಕಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೆಲವೇ ದಿನಗಳ ಹಿಂದೆ ದೆಹಲಿಯಲ್ಲೇ ನಡೆದ 76ನೇ ಗಣರಾಜ್ಯೋತ್ಸವದಲ್ಲೂ ಗೈರಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯೇ ಇಲ್ಲದ, ರಾಷ್ಟ್ರೀಯ ವಿಚಾರದಲ್ಲಿ  ಬದ್ಧತೆಯೇ ಇಲ್ಲದ ನಾಯಕರು ಈ ದೇಶಕ್ಕೆ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆ ಕಾಡುವುದಂತೂ ಸುಳ್ಳಲ್ಲಾ.

ಇನ್ನು ಪ್ರತೀ ವರ್ಷ ಬಜೆಟ್ ಮಂಡನೆಯಾಗುವ ಮುನ್ನಾ ದಿನ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳು  ಸರ್ಕಾರದ ಸಾಧನೆಯ ಕುರಿತಾಗಿ ಭಾಷಣ ಮಾಡುವುದು ನಡೆದುಕೊಂಡು ಬಂದಿರುವಂತಹ ಪದ್ದತಿಯಾಗಿದ್ದು ಅದೇ ರೀತಿ 2025ರ ಜನವರಿ 31ರಂದು ಬುಡಕಟ್ಟು ಕುಟುಂಬದಿಂದ ರಾಷ್ಟ್ರಪತಿಯಂತಹ ಉನ್ನತ ಹುದ್ದೆಯನ್ನಲಂಕರಿಸಿರುವ ಶ್ರೀಮತಿ ದ್ರೌಪದಿ ಮುರ್ಮು ಆವರು ಸದನದಲ್ಲಿ ತಮ್ಮ ಮಾತೃಭಾಷೆ ಒಡಿಯಾ ಆಗಿದ್ದರೂ ಹಿಂದಿಯಲ್ಲಿ ನಿರರ್ಗಳವಾಗಿ ಮೋದಿ ಸರ್ಕಾರದ ಪ್ರಗತಿಯ ಕುರಿತಾಗಿ ಮಾತನಾಡಿದ್ದಾರೆ.  ಈ ಭಾಷಣದ ನಂತರ ಸದನದಿಂದ ಹೊರ ಬಂದ ಅಮ್ಮಾ, ಮಗ ಮತ್ತು ಮಗಳಿಗೆ ಮಾಧ್ಯಮದ ವರದಿಗಾರರು ರಾಷ್ಟ್ರಪತಿಗಳ ಭಾಷಣದ ಕುರಿತಾಗಿ ಪ್ರತಿಕ್ರಿಯೆಯನ್ನು ಕೇಳಿದ್ದಕ್ಕೆ, ಲೋಕಸಭೆಯಲ್ಲಿ ನಿದ್ದೆ ಮಾಡುವ ಚಾಳಿ ಇರುವ ರಾಹುಲ್,  ಮುರ್ಮು ಅವರ ಭಾಷಣ ಅರ್ಥವಾಯಿತೋ ಇಲ್ಲವೋ, ಈ ಭಾಷಣ ನೀರಸವಾಗಿತ್ತು ಎಂದರೆ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ, ಭಾಷಣ ಮುಗಿಸುವ ಹೊತ್ತಿಗೆ  ರಾಷ್ಟ್ರಪತಿಗಳು ಸುಸ್ತಾಗಿ ಹೋಗಿದ್ದರು ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು ಅದೊಂದು   ಪೂರ್‌ ಥಿಂಗ್‌ (Poor thing) ಎಂದು ಹೇಳುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ.

ಸೋನಿಯಾ ಗಾಂಧಿಯವರ ಈ ಹೇಳಿಕೆಯಿಂದ ಬೇಸರಗೊಂಡಿರುವ ರಾಷ್ಟ್ರಪತಿ ಭವನ, ಅದಕ್ಕೆ ಪ್ರತ್ಯುತ್ತರವಾಗಿ, ಬಜೆಟ್​ ಅಧಿವೇಶನ ಭಾಷಣದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಿಯೂ ಸುಸ್ತಾಗಿರಲಿಲ್ಲ.  ದುರ್ಬಲ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರ ಪರವಾಗಿ ಮಾತನಾಡುವಾಗ ಎಂದಿಗೂ ಆಯಾಸವಾಗುವುದಿಲ್ಲ . ಹೀಗೆ ಸುಳ್ಳನ್ನು ಸತ್ಯವಾಗಿಸಲು ಯಾರಿಂದಲೂ, ಸಾಧ್ಯವಿಲ್ಲ ಎಂಬ ಸ್ಪಷ್ಟನೆ ನೀಡುವ ಮೂಲಕ  ಪರೋಕ್ಷವಾಗಿ ಸೋನಿಯಾರವರ ಉದ್ದಟನಕ್ಕೆ ಚಾಟಿ ಬೀಸಿದೆ. 

ಇತ್ತೀಚೆಗೆ ಗೃಹಮಂತ್ರಿ  ಅಮಿತ್ ಶಾ ಅವರು ಅಂಬೇಡ್ಕರ್ ಅಂಬೇಡ್ಕರ್ ಎಂದು ಜಪಿಸುವ ಬದಲು ದೇವರ ನಾಮವನ್ನು ಜಪಿಸಿದ್ದರೆ ನಿಮ್ಮ ಆಸೆಗಳು ಈಡೇರುತ್ತಿದ್ದವು ಎಂದು ಕೇವಲ ಹಿಂದುಳಿದವರ ಓಟಿನ ಆಸೆಗಾಗಿ  ಅಂಬೇಡ್ಕರ್ ಅವರನ್ನು ಓಲೈಸುವ ಕಾಂಗ್ರೇಸ್ಸಿಗರನ್ನು ಕುಟುಕಿದ್ದ ವಿಡಿಯೋವನ್ನು ತಮಗೆ ಬೇಕಾದಂತೆ ತುಂಡರಿಸಿ ಅದನ್ನು ವೈರಲ್ ಮಾಡಿ, ಅಮಿತ್ ಶಾ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ದೇಶಾದ್ಯಂತ ಗಲಭೆಯನ್ನು ಎಬ್ಬಿಸಿದ್ದ ಇದೇ ಕಾಂಗ್ರೇಸ್ಸಿಗೆ ಇಂದು ಅವರದ್ದೇ ಪಕ್ಷದ ಅಧಿನಾಯಕಿ ಸೋನಿಯಾರವರು ಇಂದು ದಲಿತರು ಅದರಲ್ಲೂ ಬುಡಕಟ್ಟು ಜನಾಂಗದ ರಾಷ್ಟ್ರಪತಿಗಳನ್ನು ನಿಂದಿಸಿರುವುದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಿದ್ದ ಸಂಧರ್ಭದಲ್ಲಿಯೂ ಇದೇ ಸೋನಿಯಾ ಕಾಂಗ್ರೇಸ್ ಅವರ ಬಣ್ಣ ಮತ್ತು ಜಾತಿಯ ಕುರಿತಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದು, ಪದೇ ಪದೇ ಅದೇ ತಪ್ಪುಗಳನ್ನು ಮಾಡುವ ಚಾಳಿಯು ಕಾಂಗ್ರೇಸ್ಸಿಗರದ್ದಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ಎಲ್ಲಾ ವಿಚಾರಗಳನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ, 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ನಮ್ಮ ರಾಷ್ಟ್ರ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಕಿಂಚಿತ್ತೂ ಕಾಲಜಿ ಇಲ್ಲದ, ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಬದ್ಧತೆ ಇಲ್ಲದೇ  ಇದ್ದರೂ, ಕೇವಲ ನೆಹರು, ಇಂದಿರಾ ವಂಶಜ ಎಂಬ ಕಾರಣದಿಂದಾಗಿ,  ಈ ದೇಶದ ಭಾವಿ ಪ್ರಧಾನಿ ಎಂದೇ ಬಿಂಬಿಸಿ ಕೊಳ್ಳುವ, ಇಡೀ ದೇಶದ ಜನರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂದು  ಹವಣಿಸುವ  ಇಂತಹ ಇಟಾಲಿಯನ್ ನಕಲಿ ಗಾಂಧಿಯ ವಂಶಜರು ನಮಗೆ ಅವಶ್ಯಕತೆ ಇದೇಯೇ?  ಎಂಬುದನ್ನು ಆಲೋಚಿಸಿ ಆರಿಸುವ ಸಮಯ ಬಂದಿದೆ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

Leave a comment