ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ಜೂನ್ 3 2025ರ ತಡರಾತ್ರಿ  ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ RCB & PBKS ನಡುವೆ IPL 18ನೇ ಆವೃತ್ತಿಯ ಅಂತಿಮ ಹಣಾನಣಿಯ ಪಂದ್ಯದಲ್ಲಿ RCB 6 ರನ್ನುಗಳಿಂದ PBKS ತಂಡವನ್ನು ಸೋಲಿಸುತ್ತಿದ್ದಂತೆಯೇ ವಿಶ್ವಾದ್ಯಂತ ಇರುವ RCB ಅಭಿಮಾನಿಗಳ ಸಡಗರ ಸಂಭ್ರಮಗಳು ಮುಗಿಲು ಮುಟ್ಟುವಂತಿತ್ತು. ಬೆಂಗಳೂರು ಮಾತ್ರವಲ್ಲದೇ  ಇಡೀ ದೇಶ ಮತ್ತು ಪ್ರಪಂಚಾದ್ಯಂತ ಅನೇಕ ಕಡೆಗಳಲ್ಲಿ ಮುಂಜಾನೆಯವರೆಗೂ ಅಭಿಮಾನಿಗಳು ರಸ್ತೆಗಿಳಿದು RCBಯ ಚೊಚ್ಚಲು  IPLಪ್ರಶಸ್ತಿಗಳಿಸಿದ್ದನ್ನು ಸಂಭ್ರಮಿಸಿತ್ತು.

ನಿಜ ಹೇಳಬೇಕೆಂದರೆ, IPL RCB ಇವೆಲ್ಲವೂ ಖಾಸಗಿ ಸಂಸ್ಥೆಗಳಾಗಿದ್ದು ಇದಕ್ಕೂ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರಕ್ಕೆ ಸಂಬಂಧವೇ ಇಲ್ಲ. ಅಲ್ಲಿ ಆಡುವ ಆಟಗಾರರೂ ಸಹಾ ಕೇವಲ ಮತ್ತು ಕೇವಲ ಹಣಕ್ಕಾಗಿ ಮತ್ತು ಜನರನ್ನು ಮನರಂಜಿಸುವುದಕ್ಕಾಗಿ ತಮ್ಮ ತಮ್ಮ ತಂಡಗಳ ಪರವಾಗಿ ಆಟವಾಡುತ್ತಾರೆ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಜನರು ಅದನ್ನು ನೋಡಿ ಸಂಭ್ರಮಿಸುತ್ತಾರೆ. ವಯಕ್ತಿಕವಾಗಿ ನಾನೂ ಸಹಾ ಕ್ರಿಕಿಟ್  ಆಟವನ್ನು  ಇಚ್ಚೆ ಪಡುವ ಕಾರಣ, ಮನೆಯವರೊಂದಿಗೆ RCB ಗೆಲುವನ್ನು ಸಂಭ್ರಮಿಸಿದ್ದೆ. ಮಾರನೆಯ ದಿನ ಕಛೇರಿಗೂ ಕೆಂಪು ಬಣ್ಣದ ಶರ್ಟ್ ಹಾಕಿಕೊಂಡು ಹೋಗಿ  RCB ಪರ ನನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಲ್ಲದೇ, ನನ್ನ ಸಹೋದ್ಯೋಗಿಗಳೊಂದಿಗೆ ಸಣ್ಣದಾಗಿ ಸಂಭ್ರಮಿಸಿದ್ದೆ. RCB ನಡೆದು ಬಂದ ದಾರಿ ಎಂಬ ವಿಡೀಯೋ ಸಹಾ ಮಾಡಿ ಸಂಭ್ರಮಿಸಿದ್ದೆ. ಆದರೆ ಇದೆಲ್ಲವೂ ಸಂಪೂರ್ಣವಾಗಿ ಖಾಸಗಿಯಾಗಿತ್ತು

ಆದರೆ Success has many feather/father but failure is none/orfan ಎನ್ನುವಂತೆ ಯಾರೇ ಸಾಧನೆಗಳು ಮಾಡಿದಾಕ್ಷಣ ನಂದು ಎಲ್ಲಿಡಲೀ ನಂದಗೋಪಾಲ ಎನ್ನುವಂತೆ  ಅದರಲ್ಲಿ ತಮ್ಮ ಪಾತ್ರವೇನೂ ಇರದೇ ಇದ್ದರೂ ಅದರ ಫಲವನ್ನು ಪಡೆಯಲು ಹವಣಿಸಲು ನಮ್ಮ ದರಿದ್ರ ರಾಜಕಾರಣಿಗಳು ಸಿದ್ಧವಾಗಿರುತ್ತಾರೆ  ಮತ್ತು ಅವರು ಯಾವ ರೀತಿಯ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ  ಜೂನ್ 4 2025ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಅಮಾಯಕ RCB ಅಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾದದ್ದೇ ಸಾಕ್ಷಿ.

RCBಗೆದ್ದದ್ದು ಒಂದು franchice ತಂಡವಾಗಿ ಕೇವಲ ತನ್ನ  ಹೆಸರಿನಲ್ಲಿ ಬೆಂಗಳೂರು ಎಂದು ಇಟ್ಟು ಕೊಂಡಿತ್ತೇ ಹೊರತು, ಕರ್ನಾಟಕ ರಾಜ್ಯ ಸರ್ಕಾರಕ್ಕೂ ಅದಕ್ಕೂ  ಯಾವುದೇ ಸಂಬಂಧ ಇರಲಿಲ್ಲ. ನಿಜ ಹೇಳಬೇಕೆಂದರೆ  ಅದರಲ್ಲಿ ಬೆರಳೆಣಿಕೆಯ ಕರ್ನಾಟಕದ ಆಟಗಾರರ ಹೊರತಾಗಿ ಉಳಿದವರೆಲ್ಲರೂ ಪರ ರಾಜ್ಯ ಅಥವಾ ವಿದೇಶಿಗರೇ.  ಬಿಟ್ಟಿ ಭಾಗ್ಯಗಳ ಈ ಕರ್ನಾಟಕ ಸರ್ಕಾರದಲ್ಲಿ ಪ್ರಸ್ತುತವಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರದ ಹಂಚಿಕೆಗಾಗಿ ಜಂಗಿ ಕುಸ್ತಿ ನಡೆಯುತ್ತಿರುವುದು  ಎಲ್ಲರಿಗೂ ತಿಳಿದ ವಿಷಯ. ಈಗಲೂ ಸಹಾ ಇಂಥ  ಅವಕಾಶವನ್ನು  encash ಮಾಡಿಕೊಳ್ಳಲು ಯಾವುದೇ ಪೂರ್ವತಯಾರಿ ಇಲ್ಲದೇ  ಒಬ್ಬರ ಮೇಲೆ ಒಬ್ಬರು ನಡೆಸಿದ ಪೈಪೋಟಿಯಿಂದಾಗಿ ಇಂತಹ ಅವಘಡಕ್ಕೆ ಕಾರಣೀಭೂತವಾಗಿರುವುದು ನಿಜಕ್ಕೂ ದುಃಖಕರವಾಗಿದ್ದು  ಅವರಿಬ್ಬರಿಂದಾಗಿ ಇಡೀ ಕನ್ನಡಿಗರೇ ತಲೆ ತಗ್ಗಿಸುವಂತಾಗಿದೆ.

2024 ರಲ್ಲಿ ಭಾರತ ಟಿ20 ವರ್ಲ್ಡ್ ಕಪ್  ಗೆದ್ದಾಗ ಮುಂಬೈನ ಮರಿನಾ ಬೀಚ್ ನ ಸಮುದ್ರದ ಪಕ್ಕದ ರಸ್ತೆಯಲ್ಲಿ ಸಂಭ್ರಮಾಚರಣೆ ನಡೆದಿತ್ತು. ಆಗ ಅಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಕ್ರೀಡಾಭಿನಾನಿಗಳು ಸೇರಿದ್ದರು ಎಂದು ಹೇಳಲಾಗುತ್ತದೆ. ಅಂತಹ ದೊಡ್ಡದಾದ ಜನಸಂಖ್ಯೆಯೂ  ಒಂದೆಡೆಯಲ್ಲಿ ಸೇರಿದಾಗ ಯಾವುದೇ ರೀತಿಯ ಅವಘಡ  ನಡೆಯದೇ ಎಲ್ಲವೂ ಸುಸೂತ್ರವಾಗಿ ನಡೆದಾಗ ಇಲ್ಲಿ ಕೇವಲ 1-2 ಲಕ್ಷ ಜನರ ಜಮಾವಣೆಯಾದಾಗ ಈ ರೀತಿಯ ಅವಘಡಕ್ಕೆ ಹೊಣೆ ಯಾರು? ಎಂದರೆ ಖಂಡಿತವಾಗಿಯೂ ರಾಜ್ಯ ಸರ್ಕಾರದ ಅದರಲ್ಲೂ ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿಯ ಪ್ರಚಾರದ ಹಪಾಹಪಿ ಎದ್ದು ಕಾಣುತ್ತದೆ.

BBCI/KCSA ತನ್ನ ಪಾಡಿಗೆ ತಾನು HAL Airport ನಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ತೆರೆದ ಬಸ್ ನಲ್ಲಿ  ಮೆರವಣಿಗೆ ನಡೆಸಿಕೊಂಡು ಕ್ರೀಡಾಂಗಣದಲ್ಲಿ ಸಮಾರಂಭ ನಡೆಸಿದ್ದಲ್ಲಿ, ಅಭಿಮಾನಿಗಳು ಮಾರ್ಗದ ಮಧ್ಯದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಸಂಭ್ರಮಿಸಿ ಅಲ್ಲಿಯೇ ಚದುರಿಹೋಗುತ್ತಿದ್ದರು. ಆದರೆ ಅನಗತ್ಯವಾಗಿ  ಇವರ ತೆವಲಿಗಾಗಿ ವಿಧಾನ ಸೌಧದ ಮುಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಾರಂಭವನ್ನು ತುರಾತುರಿಯಲ್ಲಿ ಹಮ್ಮಿಕೊಂಡಿದ್ದೇ ತಡಾ, ಡಿಕೆಶಿ, ತಾನು ಸಿದ್ದುಗಿಂಗಲೂ ಒಂದು ಹೆಜ್ಜೆ ಮುಂದಿರಬೇಕು ಎಂದು HAL Airportನಲ್ಲೇ  ಆಟಗಾರರನ್ನು ಬರಮಾಡಿಕೊಂಡಿದ್ದು ಹಾಸ್ಯಾಸ್ಪದವಾಗಿತ್ತು.

ಕ್ಷಣ ಕ್ಷಣಕ್ಕೆ ತುಘಲಕ್ ನಂತೆ  ರಾಜ್ಯ ಸರ್ಕಾರದ ಅಧಿಕಾರಿಗಳು ಸಭೆ ಮತ್ತು ರೋಡ್ ಶೋಗಳನ್ನು ಬದದಲಿಸುತ್ತಲೇ  ಹೋದ  ಪರಿಣಾಮವಾಗಿ RCB ಅಭಿಮಾನಿಗಳಿಗೂ ಗೊಂದಲದ ಗೂಡಾಗಿ  ಸಿಕ್ಕ ಸಿಕ್ಕ ಕಡೆ  ನುಗ್ಗತೊಡಗಿದರು. ವಿಧಾನ ಸೌಧದ ಮುಂದಿನ ಹೈಕೋರ್ಟ್  ಆವರಣದಲ್ಲಿನ ಎತ್ತರದ ಮರ ಮತ್ತು ಅಲ್ಲಿನ ಗೇಟ್ ಮೇಲೆ ಭಯಾನಕವಾಗಿ ಹತ್ತಿ ಕುಳಿತಿರುವ ಅಭಿಮಾನಿಗಳನ್ನು ನೋಡಿದರೆ ಸಾಕು ಅವರ ಹುಚ್ಚು ಯಾವ ರೀತಿಯಲ್ಲಿತ್ತು ಎಂಬುದರ ಅರಿವಾಗುತ್ತದೆ. ವಿಧಾನಸೌಧದ  ಮೆಟ್ಟಿಲುಗಳ ಮೇಲೆ  ಸರ್ಕಾರೀ ಪ್ರಾಯೋಜಿತ RCB ಆಟಗಾರರ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ (ಇಡೀ ಕಾರ್ಯಕ್ರಮದಲ್ಲಿ ಮಂತ್ರಿಗಳು, ಅವರ ಕುಟುಂಬ ಮತ್ತು ಸರ್ಕಾರಿ ಅಧಿಕಾರಿಗಳಿಂದಲೇ ತುಂಬಿದ್ದು ಅದೊಂದು ತೆವಲಿನ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿತ್ತು) ಎಂದಾಗ ಸಹಜವಾಗಿ ಅಲ್ಲಿಗೆ ಹೆಚ್ಚಿನ ಪೋಲೀಸ್ ಭದ್ರತೆಯನ್ನು ಒದಗಿದುವುದು ಅದ್ಯ ಕರ್ತವ್ಯಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೆಚ್ಚಿನ ಆಸ್ಥೆಯನ್ನು ಗೃಹ ಇಲಾಖೆ  ವಹಿಸದೇ ಹೋದದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಗಿದೆ ಎಂದರೂ ತಪ್ಪಾಗದು.

ಇಷ್ಟು ತುರಾತುರಿಯಲ್ಲಿ RCB ಗೆಲುವಿನ ಸಂಭ್ರಮಾಚರಣೆ ಏಕೆ ಮಾಡಲಾಯಿತು ಎಂದು ಕೇಳಿದ್ದಕ್ಕೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೆಲವು ವಿದೇಶಿ ಆಟಗಾರರು ತಮ್ಮ ಪೂರ್ವ ನಿಯೋಜಿತ ಪಂದ್ಯಗಳಲ್ಲಿ ಆಡುವುದಕ್ಕಾಗಿ ಇಂದು ರಾತ್ರಿಯೇ ದೇಶ ತೊರೆಯಬೇಕಿತ್ತು. ಹಾಗಾಗಿ ಇಂದೇ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.  RCB ಗೆಲುವಿನ ಸಂಭ್ರಮಾಚರಣೆಗಾಗಿ ನೆರೆದಿದ್ದ ಜನಸಮೂಹದ ಗಾತ್ರ ಅನಿರೀಕ್ಷಿತವಾಗಿತ್ತು. ಕೇವಲ 30 ಸಾವಿರ ಸಾಮರ್ಥ್ಯದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಇದನ್ನೂ ಯಾರೂ ಊಹಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕೃತವಾಗಿಯೇ ಹೇಳಿರುವುದು ಸ್ಪಷ್ಟವಾಗಿ ಈ ಸರ್ಕಾರದ intellegenceಯ ಬೇಜವಾಬ್ಧಾರಿ ಎದ್ದು ಕಾಣುತ್ತಿದೆ.

ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 30 ಸಾವಿರ ಇದೆ ಎಂದಾಗ ಎಲ್ಲರಿಗೂ ಉಚಿತ ಪ್ರವೇಶ ನೀಡಿದ್ದು ಎಷ್ಟು ಸರಿ? ಅದೂ ಅಲ್ಲದೇ ಸಂಜೆಯ ಕಾರ್ಯಕ್ರಮಕ್ಕೆ ಮಧ್ಯಾಹ್ನದಿಂದಲೇ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬುರುತ್ತಿದ್ದಾಗ, ಅಧಿಕಾರಿಗಳು ತಮ್ಮ ತಮ್ಮ  ಆಪ್ತರಿಗೆ ಒಳಗೆ ಬೇರೆ ದ್ವಾರ ಮೂಲಕ ಕ್ರೀಡಾಂಗಣದೊಳಗೆ ಕರೆಸಿಕೊಂಡು  ಅಭಿಮಾನಿ ದೇವರುಗಳನ್ನು ಮಾತ್ರ ಸಣ್ಣ ದ್ವಾರದ ಬಳಿ ಗಂಟೆ ಗಟ್ತಲೆ ಕಾಯಿಸಿದ್ದೂ ಸಹಾ ಈ ಕಾಲ್ತುಳಿತಕ್ಕೆ ಮತ್ತೊಂದು ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ, ಕ್ರೀಡಾಂಗಣದ ಆವರಣದ ಬಳಿಯಿರುವ ಚರಂಡಿಯ ಮೇಲೆ ಇರಿಸಲಾದ ತಾತ್ಕಾಲಿಕ ಸ್ಲ್ಯಾಬ್ ಮೇಲೆ ಜನರು ನಿಂತಿದ್ದರಿಂದ ಭಾರಕ್ಕೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಹಠಾತ್ ಕುಸಿತವು ಭೀತಿಯನ್ನು ಉಂಟುಮಾಡಿತು ಮತ್ತು ಇದರಿಂದ ಕಾಲ್ತುಳಿತ ಸಂಭವಿಸಿತು, ಇದರ ಪರಿಣಾಮವಾಗಿ ಅನೇಕ ಸಾವುನೋವುಗಳು ಮತ್ತು ಗಾಯಗಳು ಸಂಭವಿಸಿದವು ಎನ್ನಲಾದರೆ, ಮತ್ತೊಂದು ಮೂಲದ ಪ್ರಕಾರ ಕಬ್ಬಿಣದ ಬೃಹದಾಕಾರದ ಗೇಟ್‌ ಮೇಲೆ ನೂರಾರು ಜನರು ಹತ್ತಿ ಕ್ರೀಡಾಂಗಣ ಪ್ರವೇಶಿಸುವ ಸಾಹಸ ಮಾಡುತ್ತಿದ್ದಾಗ ಆ ಬೃಹದಾಕಾರದ ಕಬ್ಬಿಣದ ಗೇಟ್ ಕುಸಿದ ಕೂಡಲೇ ಅದನ್ನು ಹಿಡಿದು ನಿಂತಿದ್ದ ಜನರು ಗೇಟ್‌ ಕೆಳಗೆ ಸಿಲುಕಿಕೊಂಡ ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತ ಆದ ಕಾರಣ ಸುಮಾರು 11ಕ್ಕೂ ಹೆಚ್ಚಿನ ಜನರು ಅಸುನೀಗಿದರೆ 50ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಬೇಜಾವಾಬ್ಧಾರಿ ಸಂಗತಿ  ಎಂದರೆ, ಗಾಯಗೊಂಡವರಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ಅಲ್ಲಿ  ಆಂಬ್ಯುಲೆನ್ಸ್‌ ಇಲ್ಲದೇ ಇದ್ದು ಅ ಪಾಟಿ ಜನಸ್ತೋಮದ ಮಧ್ಯೆ ಆಂಬ್ಯುಲೆನ್ಸ್‌ ಬರುವುದು ಸಹಾ ತಡ ಆದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪಕ್ಕೆ ತಿರುಗಿದೆ.

ಕೋಟ್ಯಾಂತರ ಜನರು ಸೇರಿದ್ದ ಪ್ರಯಾಗದ ಕುಂಭಮೇಳದ ಮೊದಲ ಶಾಹಿ ಸ್ನಾನದಂದು ಇದೇ ರೀತಿಯ ಕಾಲ್ತುಳಿತದ ದುರಂತದ ಸಂದರ್ಭದಲ್ಲಿ ಇದೇ ಕರ್ನಾಟಕ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಾದಿಯಾಗಿ ಎಲ್ಲರೂ  ಟೀಕೆ ಟಿಪ್ಪಣಿ ಮಾಡಿದವರು ಮತ್ತು ಪೆಹೆಲ್ಗಾಂ ದುರಂತದ ಸಂಧರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷತೆ,  security lapses   ಎಂದು  ಅಧಿಕೃತ ಮಂತ್ರಿಮಂಡಳದ ನಿರ್ಣಯ ಹೊರಡಿಸಿದವರಿಗೆ  ಈಗ ನಿಜಾಂಶಗಳು ಅರಿವಿಗೆ ಬರುತ್ತಿರ ಬೇಕು. ದೇಶದ ಮೂಲೆಯಲ್ಲಿ  ನಡೆಯುವ ಸಣ್ಣ ಸಣ್ಣ ವಿಚಾರಗಳಿಗೂ ಮೂಗು ತೂರಿಸುವ ಮರಿ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ನಾಗರಾಜ್ ಯಾದವ್  ಲಕ್ಷಣ್  ಅವರು  ಇಂದು ಅವರದ್ದೇ ಸರ್ಕಾರದ ತೆವಲಿಗೆ ಇಷ್ಟೊಂದು ಬಲಿ ಯಾದಾಗ ಬಾಯಿಯಲ್ಲಿ ಬೆಣ್ಣೆ ಇಟ್ಟುಕೊಂಡಿರುವುದು  ನಿಜಕ್ಕೂ ಅಸಹನೀಯವೇ ಸರಿ.

ಬಿಟ್ಟಿ ಗ್ಯಾರಂಟಿ ಭಾಗ್ಯಗಳ ಮೂಲಕವೇ ಅಧಿಕಾರಕ್ಕೆ ಬಂದ ಈ ಸರ್ಕಾರ ಗ್ಯಾರಂಟಿ ಭಾಗ್ಯಗಳಿಗೆ ಅಮಾಯಕ RCB ಅಭಿಮಾನಿಗಳ 11 ಜನರ ಬಲಿಯೂ  ರಾಜ್ಯ ಸರ್ಕಾರದ ಮತ್ತೊಂದು ಗ್ಯಾರಂಟಿ ಭಾಗ್ಯವಾಗಿದೆ.  ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು RCB  ವಿಜಯೋತ್ಸವ ಆಚರಿಸುತ್ತೇವೆ ಎಂದು ಘೋಷಿಸಿದಾಗ, ಪೊಲೀಸ್ ಇಲಾಖೆ ಅಧಿಕಾರಿಗಳು ಸರ್, ಕೇವಲ ಒಂದು ದಿನದಲ್ಲಿ ಆಷ್ಟು ದೊಡ್ಡ ವಿಜಯೋತ್ಸವ ಆಚರಿಸುವುದಕ್ಕೆ ತೊಂದರೆ ಆಗುತ್ತದೆ ಹೀಗಾಗಿ ಬೇಡ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ಸಹಾ, ಅದಕ್ಕೆ ಗಮನ ಕೊಡದೇ, ನಾವು  ಹೇಳುತ್ತಿದ್ದೇವೆ ನೀವು ಮಾಡ್ರೀ ಎಂದು ದಬಾಯಿಸಿದ ಡಿ.ಕೆ.ಶಿ ಪೊಲೀಸರ ಮೇಲೆ ಒತ್ತಡ ಹಾಕಿದ್ದಲ್ಲದೇ, ಯಥಾ ಪ್ರಕಾರ ಗೃಹ ಇಲಾಖೆ ಮತ್ತು ಅದಕ್ಕೆ ಸಂಭಂದಪಟ್ಟ ಮಂತ್ರಿಗಳೂ ಸರಿಯಾಗಿ ತಯಾರಿ ಮಾಡದೇ ಈ ಸಂಭ್ರಮಕ್ಕೆ ಅನುಮತಿ ನೀಡಿದ್ದು, ಸರ್ಕಾರೀ ಅಧಿಕಾರಿಗಳು ಸರಿಯಾದ ಅನುಕೂಲಗಳನ್ನು ವ್ಯವಸ್ಥೆ ಮಾಡದೇ ಇದ್ದದ್ದು ಈ ಅನಾಹುತಕ್ಕೆ ಕಾರಣವಾಗಿದ್ದು ಈ ಅವಘಡದ ಸಂಪೂರ್ಣ ಹೊಣೆಯನ್ನು ರಾಜ್ಯದ ಕಾಂಗ್ರೇಸ್  ಸರ್ಕಾರವೇ ಹೊರಬೇಕಾಗುತ್ತದೆ.

ಸತ್ತವರೆಲ್ಲರೂ ಕೇವಲ 15-30ರವಯೋಮಾನದವರಾಗಿದ್ದು, ಇನ್ನೂ ಬಾಳಿ ಬದುಕಿ ತಮ್ಮ ಕುಟುಂಬಕ್ಕೆ ಆಸರೆ ಆಗ ಬೇಕಿದ್ದವರಾಗಿದ್ದರು.  ಸತ್ತವರಿಗೆ ಸರ್ಕಾರದ ಪರವಾಗಿ 10ಲಕ್ಷ ಪರಿಹಾರವನ್ನು ಕೊಡುವುದಕಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರೂ, ತಮ್ಮ ತೆವಲಿಗಾಗಿ ತರಾತುರಿಯಲ್ಲಿ ಯಾವುದೇ ರೀತಿಯ ವ್ಯವಸ್ಥೆ ಮಾಡದೇ,ತಾವೂ ತಮ್ಮ ಬಳಗದವರು ಕ್ರಿಕೆಟಿಗರ ಜೊತೆ ಫೋಟೋಶೂಟ್ ಮಾಡಿಸಿಕೊಳ್ಳೋ ಒಂದೇ ಕಾರಣಕ್ಕಾಗಿ ಏರ್ಪೋರ್ಟಿಂದ ಹೋಟ್ಲು, ಅಲ್ಲಿಂದ ವಿಧಾನಸೌದ ಇಲ್ಲಿಂದ ಸ್ಟೇಡಿಯಮ್ಮು ಅಂತೆಲ್ಲಾ ಜಾತ್ರೆ ಮಾಡಿಸಿ ವಿಧಾನಸೌಧಕ್ಕೆ ಕರೆಸಿಕೊಂಡು, ಜನರಿಗೆ ಗೊಂದಲ ಏರ್ಪಡಿಸಿ, ಎಲ್ಲಾ ಕಡೆಯೂ ನೂಕು ನುಗ್ಗಲಾಗಲು ಕಾರಣೀ ಭೂತರಾಗಿ ಅಮಾಯಕ 11 ಜನರ ಬಲಿಯನ್ನು ಪಡೆದ ಈ ರಾಜ್ಯ ಸರ್ಕಾರಕ್ಕೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರ ಶಾಪ ಖಂಡಿತವಾಗಿಯೂ ತಟ್ಟದೇ ಬಿಡುವುದಿಲ್ಲ ಅಲ್ವೇ?

ಅದೆಷ್ಟು ಸಂಭ್ರಮವಾಗಿ ನಡೆಯಬೇಕಿದ್ದ ಕಾರ್ಯಕ್ರಮ ಇಂತಹ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸಂಭ್ರಮದ ಸಭೆ ಸೂತಕವಾಗಿ ಕಾಟಾಚಾರದ ಕಾರ್ಯಕ್ರಮವಾಗಿ  ಕೇವಲ 15 ನಿಮಿಷಗಳಿಗೆ ಮುಕ್ತಾಯವಾಯಿತು. ಅಭಿಮಾನಿಗಳೇ ದೇವರು ಎನ್ನುವ ಈ ನಾಡಿನಲ್ಲಿ ಆರ್‌ಸಿಬಿಯ ಚೊಚ್ಚಲ ಕಪ್‌ ನ ಸಂಭ್ರಮದ ರಸಗಳಿಗೆಯಲ್ಲಿ ಅದೇ ಅಭಿಮಾನಿ ದೇವರುಗಳ ಅಕಾಲಿಕ ಅಗಲಿಕೆಯೇ ಕಪ್ಪು ಚುಕ್ಕಿಯಾಗಿ ಕಾಲ ಕಾಲಕ್ಕೂ ಉಳಿದು ಹೋಗುವಂತಾಗಿರುವುದು ನಿಜಕ್ಕೂ ದುರಂತವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

Leave a comment