ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

ಕನ್ನಡ ತಾಯಿ ಭುವನೇಶ್ವರಿಯನ್ನೇ ನಂಬದ, ಆದೇ ಭುವನೇಶ್ವರಿ ದೇವಿಯನ್ನೇ ಸಾರ್ವಜನಿಕವಾಗಿ ಅವಹೇಳನ ಮಾಡಿದಂತಹ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡದ ಲೇಖಕಿ, ವಕೀಲೆ ಬಾನು ಮುಷ್ತಾಕ್ ಅವರು ಈ ಬಾರಿ ದಸರಾ ಉತ್ಸವನ್ನು ಉದ್ಭಾಟನೆ ಮಾಡುತ್ತಿರುವುದರ ಕುರಿತಾಗಿ ಈಗಾಗಲೇ ನಾಡಿನಾದ್ಯಂತ ಪರ ವಿರೋಧವಾಗಿ ಚರ್ಚೆ ನಡೆಯುತ್ತಿದೆ.

ಬಹುತ್ವವನ್ನು ನಂಬದ, ಕೇವಲ ಏಕ ದೇವರು ಮತ್ತು ಏಕ ಧರ್ಮ ಗ್ರಂಥ ಮತ್ತು ಏಕ ಧರ್ಮದ ಖಟ್ಟರ್ ಅನುಯಾಯಿ  ಆಗಿರುವ ಬಾನು ಮುಷ್ತಾಕ್,  ಸಿದ್ದರಾಮಯ್ಯ ಮತ್ತು ಈ ಕಾಂಗ್ರೇಸ್ ಸರ್ಕಾರದ  ಮುಸಲ್ಮಾನರ ಓಲೈಕೆಗೆ ದಾಳವಾಗಿದ್ದಾರೆ ಎಂಬುದನ್ನು ತಿಳಿದೋ ತಿಳಿಯದೋ ರಾಜಕಾರಣಿಗಳಿಗಿಂತಲೂ ಅನುಕೂಲ ಸಿಂಧುತ್ವವನ್ನು ತೋರಿಸುತ್ತಾ,  ಕ್ಷಣ ಕ್ಷಣಕ್ಕೊಂದು ಹೇಳಿಕೆಗಳನ್ನು ಕೊಡುತ್ತಾ ಇರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದ್ದು ಅವರ ಪ್ರತಿಯೊಂದು ಪ್ರಶ್ನೆಗಳಿಗೂ ಅವರದ್ದೇ  ಆದ ರೀತಿಯಲ್ಲಿ ಉತ್ತರಿಸುವ ಪ್ರಯತ್ನವಾಗಿದೆ.

ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಬಗ್ಗೆ ಅವರು  ಈ ಹಿಂದೇ ಆಡಿದ್ದ ಮಾತುಗಳ ಕುರಿತಾಗಿ ವಿವರಣೆ ನೀಡುತ್ತಾ,  ಕನ್ನಡವನ್ನು ನನ್ನಷ್ಟು ಪ್ರೀತಿಸಿ. ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ. ಕನ್ನಡವನ್ನು ನನ್ನಷ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಅವರೂ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ನನ್ನಂತೆ ನೀವು ಸಾಧನೆ ಮಾಡಿದ್ರೆ ಟೀಕೆ ಮಾಡಲು ಅರ್ಹತೆ ಸಿಗುತ್ತೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಬಾನು ಮುಷ್ತಾಕ್ ಅವರ ಹೇಳಿಕೆ ತನ್ನ ಕೋಳಿ ಕೂಗಿದರೆ ಮಾತ್ರವೇ ಬೆಳಗಾಗುತ್ತದೆ ಎನ್ನುವಂತಿದೆ. ಇನ್ನು ವಯಕ್ತಿಯವಾಗಿ ಹೇಳಬೇಕೆಂದರೆ, ಕನ್ನಡ ಮಾಧ್ಯಮದಲ್ಲೇ ಓದಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಸುಮಾರು 30ಕ್ಕೂ ಹೆಚ್ಚುವರ್ಷಗಳ ಕಾಲ ಕೆಲಸ ಮಾಡಿ ವಿವಿಧ ದೇಶಗಳನ್ನು ಸುತ್ತಿ ಈಗ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಪ್ರವೃತ್ತಿಯಲ್ಲಿ ನಾನೊಬ್ಬ ಅಪ್ಪಟ್ಟ ಕನ್ನಡಿಗನಾಗಿದ್ದು, ಜಿ.ಪಿ. ರಾಜರತ್ನಂ ಅವರ ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ!” ಎಂನ್ನುವುದನ್ನೇ ಧ್ಯೇಯವಾಗಿಟ್ಟುಕೊಂಡು ನನ್ನ ಅಧಿಕೃತ ಸಹಿಯನ್ನೂ ಸೇರಿ ಕನ್ನಡದಲ್ಲೇ ಬಹುತೇಕ ಎಲ್ಲಾ ವ್ಯವಹಾರಗಳನ್ನು ಮಾಡಿದ್ದೀನಿ. ನಾನೂ ಸಹಾ ನಿಮ್ಮಂತೆಯೇ ಸುಮಾರು 1400 ಲೇಖನಗಳನ್ನು ನನ್ನದೇ ಆದ ಬ್ಲಾಗ್ ನಲ್ಲಿ ಪ್ರಕಟಿಸಿದಲ್ಲದೇ  ಆ ಲೇಖನಗಳು ಬಹುತೇಕ ನಾಡಿನ ಎಲ್ಲಾ ಜನಪ್ರಿಯ ಪ್ರತಿಷ್ಠೆಯ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಹಾಗಾಗಿ ನಿಮ್ಮದೇ ಹೇಳಿಕೆಯಂತೆ ನನಗೂ ಸಹಾ ಕನ್ನಡಾಂಬೆಯ ವಿರುದ್ಧ ನಿಮ್ಮ ಹೇಳಿಕೆಯನ್ನು ಖಂಡಿಸುವ ಹಕ್ಕಿದೆ ಎಂದು ಭಾವಿಸುತ್ತೇನೆ.

ಇನ್ನು ನಿಮ್ಮ ಕೃತಿಗಳ ಮೂಲಕ ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇನೆ ಮತ್ತು ಭೂಕರ್ ಪ್ರಶಸ್ತಿಯ ಬಗ್ಗೆ ತಿಳಿದವರು ಈ ರೀತಿಯಾಗಿ ಆಕ್ಷೇಪಣೆ ಎತ್ತುತ್ತಿರಲಿಲ್ಲ ಎಂದಿರುವುದು  ನವಿಲು ನೋಡಿ ಕೆಂಭೂತ ಕುಣಿದಂತಾಗಿದೆ ಎಂದರೂ ತಪ್ಪಾಗದು.  ನೀವು ಹುಟ್ಟಿ ಕನ್ನಡ ಕಲಿತು ಲೇಖನ ಬರೆಯುವ ಅದೆಷ್ಟೋ ಸಹಸ್ರ ವರ್ಷಗಳ ಮುನ್ನವೂ ಕನ್ನಡಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಇತ್ತು.  ಇಂದೂ ಇದೆ  ಮತ್ತು ಮುಂದೆಯೂ ಇರುತ್ತದೆ. ಹಾಗಾಗಿ ನಿಮ್ಮ ಕೃತಿಗಳಿಂದ ಕನ್ನಡಕ್ಕೆ ಮಾನ್ಯತೆ ಸಿಕ್ಕಿದೆ ಎನ್ನುವುದು ನಿಮ್ಮ ಬೌದ್ಧಿಕ ದೀವಾಳಿ ಮತ್ತು ಆತ್ಮರತಿ ತನವನ್ನು ಸೂಚಿಸುತ್ತದೆ.

ಇನ್ನು ನಿಮ್ಮ ಕೃತಿಗೆ ಬೂಕರ್ ಪ್ರಶಸ್ತಿ ಬಂದಿರುವುದು  ದೀಪಾ ಭಸ್ತಿರವರು ಆಂಗ್ಲ ಭಾಷೆಗೆ ಅನುವಾದ ಮಾಡಿ ಇಂಗ್ಲೇಂಡ್ ಮತ್ತು ಐರ್ಲೆಂಡ್ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದರಿಂದಾಗಿಯೇ ಹೊರತು ಅದು ನೇರವಾಗಿ ನಿಮ್ಮ ಕನ್ನಡ ಕೃತಿಗಲ್ಲಾ ಎಂಬುದು ನೆನಪಿದೆ ಎಂದು ಭಾವಿಸುತ್ತೇನೆ. ಇಲ್ಲದೇ ಹೋದಲ್ಲಿ  ಅಟ್ಟ ಹತ್ತಿದ ಮೇಲೆ ಏಣಿಯ ಹಂಗೇಕೆ ಎಂದು ನಿಮ್ಮ ಕೃತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದ ದೀಪ ಅವರ ಸಾಧನೆಗೆ ಮನ್ನಣೆ ಕೊಡದೇ ತಪ್ಪು ಮಾಡುತ್ತಿದ್ದೀರಿ ಎಂದೇ ಜನರು ಭಾವಿಸುತ್ತಾರೆ.

ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿಯು ಇಂಗ್ಲಿಷಿಗೆ ಅನುವಾದಿಸಲ್ಪಟ್ಟು ಇಂಗ್ಲೇಂಡ್ ಅಥವಾ ಐರ್ಲೆಂಡಿನಲ್ಲಿ  ಪ್ರಕಟಿತವಾದ ಅನುವಾದಿತ ಪುಸ್ತಕಕ್ಕೆ ನೀಡಲಾಗುವ ವಿಶೇಷವಾದ ವಾರ್ಷಿಕ ಪ್ರಶಸ್ತಿಯಾಗಿದ್ದು, ಒಟ್ಟು ಬಹುಮಾನದ ಮೊತ್ತ £50,000 ಅಗಿದ್ದು, ಈ  ಬಹುಮಾನದ ಹಣವನ್ನು ಲೇಖಕ/ಲೇಖಕಿಯರಿಗೆ  ಮತ್ತು ಅನುವಾದಕರ ನಡುವೆ ಸಮವಾಗಿ ಹಂಚಲಾಗುತ್ತದೆ ಹಾಗಾಗಿ ಈ ಪ್ರಶಸ್ತಿಯ ಮೊತ್ತವನ್ನು ನಿಮಗೂ ಮತ್ತು  ದೀಪಾ ಭಸ್ತಿ ಇಬ್ಬರಿಗೂ ಸಮನಾಗಿ ಪ್ರಶಸ್ತಿ ಫಲಕದೊಂದಿಗೆ ಹಂಚಿರುವಾಗ ಕೇವಲ ಬೂಕರ್ ಪ್ರಶಸ್ತಿ ಬಂದಿರುವುದಕ್ಕಾಗಿ ನಿಮ್ಮನ್ನು ಈ ಸರ್ಕಾರ ದಸರಾ ಉದ್ಘಾಟನೆಗೆ ಅಹ್ವಾನಿಸಿದ್ದಲ್ಲಿ, ನೀವು ಪ್ರಾಂಜಲ ಮನಸ್ಸುಳವರಾಗಿದ್ದಲ್ಲಿ, ಈ ಪ್ರಶಸ್ತಿಗೆ ನನಷ್ಟೇ ದೀಪ ಬಸ್ತಿಯಯವರೂ ಸಹಾ ಹಕ್ಕುದಾರಳಾಗಿದ್ದು ಅವರ ಜೊತೆಯಲ್ಲೇ ಉದ್ಭಾಟನೆ ಮಾಡುತ್ತೇನೆ ಎನ್ನುತ್ತಿದ್ದಿರಿ.

ದುರಾದೃಷ್ಟವಷಾತ್ ಪ್ರಚಾರದ ಹಪಾಹಪಿ  ಮತ್ತು ಸರ್ಕಾರ ನೀಡುವ  G-ಕೆಟಗರಿ ನಿವೇಶನದ ಜೊತೆಗೆ ಸಕಲ ಸರ್ಕಾರೀ ಗೌರವದೊಂದಿದೆ ದಸರಾ ಉದ್ಘಾಟನೆ ಎಲ್ಲವೂ ನಿಮ್ಮ ಕಾಲಡಿಯಲ್ಲಿ ಬಿದ್ದಾಗ, ಅರಿಶಿನ ಕುಂಕುಮ ಬಣ್ಣದ ಕನ್ನಡ ದೇವಿ ಎಲ್ಲವೂ ಮಾಯವಾಗಿ ಜಾತ್ಯಾತೀತರಾದಿರಿ. ಇನ್ನು ಈ ಕಾಂಗ್ರೇಸ್ ಸರ್ಕಾರಕ್ಕೂ ಹಿಂದೂಗಳಾದ  ದೀಪಾರವನ್ನು  ಓಲೈಸುವುದರಿಂದ  ನಯಾ ಪೈಸೆಯೂ ಲಾಭವಿಲ್ಲದೇ ಇರುವುದರಿಂದ ನಿಮನ್ನು ಹರಕೆಯ ಕುರಿಯನ್ನಾಗಿಸಿದರು. ಸನಾತನದ ಧಾರ್ಮಿಕ ವಿಧಿವಿಧಾನದ ನಾಡ ಹಬ್ಬವನ್ನು ಕೇವಲ ನಿಮಗಾಗಿ ಮತ್ತು ನಿಮ್ಮ ಮತದವರನ್ನು ಓಲೈಸಿಕೊಳ್ಳುವುದಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಕರೆದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡರು.  ಈ ಕುಟಿಲತೆಯ ಅರಿವಿಲ್ಲದ ನೀವು ಮಾತ್ರಾ ಹಿಂದೂಗಳ ಟೀಕೆಗಳನ್ನು ಎದುರಿಸುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿ.

ಇನ್ನು ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ ಎಂದು ವಿರೋಧಿಸಿದವರಿಗೆ ಚಾಟಿ ಬೀಸಿದ್ದೀರಿ ಎಂದು ಪತ್ರಿಕೆಗಳು ಬರೆಯುತ್ತಿವೆ. ಆದರೆ 2023ರಲ್ಲಿ ನೀವೇ ಹಳದಿ ಕೆಂಪು ಬಣ್ಣದ ತಾಯಿ ಭುವನೇಶ್ವರಿಯ ಕನ್ನಡ ನನ್ನಂತಹ. ಅಲ್ಪಸಂಖ್ಯಾತರನ್ನು  ಆರಂಭದಿಂದಲೂ ತುಳಿಯುತ್ತಲೇ ಬಂದಿರುವುದಕ್ಕೆ ಇದೇ ಸಾಕ್ಷಿ. ಅದಕ್ಕೆ ನೀವೇ ಜವಾಬ್ಧಾರರು. ನಾನು ನಿಮ್ಮಿಂದ ಉತ್ತರ ಬಯಸುತ್ತೇನೆ ಎಂದು ಮೇಜು ಕುಟ್ಟಿ ಪ್ರಶ್ನಿಸಿದ್ದಿರಿ?  ಕೇವಲ ಎರಡು ವರ್ಷಗಳಲ್ಲಿ  ಬೂಕರ್ ಬಂದ ತಕ್ಷಣವವೇ ಅದೇ  ಹಳದಿ ಕೆಂಪು ಬಣ್ಣದ ಕನ್ನಡವನ್ನು ನೀವೇ  ಒಪ್ಪಿ ಅಪ್ಪಿ ಕೊಳ್ಳುತ್ತಿದ್ದೀರಿ! ಎಂದರೆ ಎಲ್ಲರಿಗೂ ನಿಮ್ಮ ಧರ್ಮ ನಿಷ್ಠತೆಯ ಬಗ್ಗೆ ಅನುಮಾನ ಬರುವುದು ಸಹಜ.  ಮೊನ್ನೆ ಟಿವಿಯ ಸಂದರ್ಶನವೊಂದರಲ್ಲಿ ನಿಮ್ಮದೇ ಧರ್ಮದ ಮುಲ್ಲಾರೊಬ್ಬರು, ನಿಮ್ಮಂತಹ ಅಲ್ಪಸಂಖ್ಯಾತ ಮಹಿಳೆ  ಹಿಂದೂ ದೇವಾಲಯಕ್ಕೆ ಹೋಗಿ ಅಲ್ಲಿನ ದೇವರಿಗೆ ಹೂವನ್ನು ಅರ್ಪಿಸಿ ಕೈ ಮುಗಿಯುವುದು ಹರಾಮ್ ಆಗುತ್ತದೆ ಮತ್ತು  ನಿಖಾ ಕೂಡಾ ಮುರಿದು ಬೀಳುತ್ತದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಹಿತವನ್ನು ಕಾಪಾಡುವುದಕ್ಕೆ ತ್ರಿವಳಿ ತಲ್ಲಾಖ್  ನಿಷೇಧ ಹೇರಿದಾಗ ಬದಲಾವಣೆಯನ್ನು ಒಬ್ಬದೇ ನೀವು ಕೇಂದ್ರ ಸರ್ಕಾರದ ವಿರುದ್ಧ ಹರಿಯಾಯ್ದಿದ್ದೀರಿ. ಈಗ ಅದೇ ನಿಮ್ಮವರೇ ನಿಮ್ಮನ್ನು ನಡು ನೀರಲ್ಲಿ ಕೈಬಿಡುತ್ತಿದ್ದಾರೆ ಛೇ!! ಹೀಗಾಗಬಾರದಿತ್ತು.

ಇನ್ನೂ ನಿಮ್ಮ ಕೃತಿ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದಾಗ ನಿಮ್ಮ ಗೆಳತಿ ಹಾಗೂ ಲೇಖಕಿ ಮೈಸೂರಿನ ಮೀನಾ ಅವರು ನಿಮಗೆ  ಬೂಕರ್ ಪ್ರಶಸ್ತಿ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರಂತೆ. ನಿಮ್ಮ ಗೆಳತಿಯ ಹಾರೈಕೆಯೋ, ಇಲ್ಲವೇ ತಾಯಿ ಚಾಮುಂಡೇಶ್ವರಿಯ ಹರಕೆಯೋ ಎಂಬಂತೆ  ನಿಮಗೆ  ಬೂಕರ್ ಪ್ರಶಸ್ತಿ ಬಂದ ನಂತರ ಅದೇ ಮೈಸೂರಿನಲ್ಲಿ ನಡೆದ ಲಿಡ್ ಫೆಸ್ಟಿವಲ್ ಗೆ ಬಂದಾಗ ನಿಮ ಗೆಳತಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರುಸೋಣ ಎಂದಾಗ ನಿಮಗೆ ಸಮಯ ಸಿಕ್ಕಿರಲಿಲ್ಲ. ಏಕೆಂದರೆ,  ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ? ಎನ್ನುವ ಮನೋಭಾವದವರಾಗಿದ್ದಿರಿ. ಆದರೆ ಈಗ ಅದೇ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದೀರಿ.

ನಿಜ ಹೇಳಬೇಕೆಂದರೆ ನೀವು ಯಾವ ಧರ್ಮಕ್ಕಾಗಿ ಹೋರಾಡುತ್ತಿದ್ದೀರೋ   ಆ ಧರ್ಮದ ಪ್ರಾರ್ಥನಾ ಮಂದಿರಕ್ಕೆ ಬೂಕರ್ ಅಂತಹ  ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರೂ ನಿಮಗೆ ಅಲ್ಲಿಗೆ ಹೋಗಲು ಅನುಮತಿ ಇಲ್ಲಾ. ಅದರೆ ನಮ್ಮ ಧರ್ಮದಲ್ಲಿ ಆ ತಾಯಿಯನ್ನು ನಿಸ್ವಾರ್ಥವಾಗಿ ನಂಬಿ ಬರುವ  ಎಲ್ಲರಿಗೂ ಯಾವುದೇ ಬೇಧ ಭಾವವಿಲ್ಲದೇ ಮುಕ್ತವಾದ ದರ್ಶನವಿದೆ. ಇದೇ ನಮ್ಮ ಹಳದಿ ಕೆಂಪು ಬಣ್ಣದ ತಾಯಿ ಭುವನೇಶ್ವರಿಯ ಶಕ್ತಿ ಮತ್ತು ಮಹತ್ವ.

ಹಾಂ!! ಹೇಳೋದು ಮರೆತೆ! ನಮ್ಮ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ನಿಮ್ಮದೇ ಧರ್ಮದವರು ಭಾಷೆ ಎಂದು ಬಂದಾಗ ಅವರು ಎಂದೆಂದಿಗೂ ಭಾಷೆಯ ನಡುವೆ ಧರ್ಮವನ್ನು ಬೆರೆಸುವುದಿಲ್ಲ. ಅದೇಕೋ ಏನೋ ಕರ್ನಾಟಕದಲ್ಲಿ  ಮಾತ್ರಾ ನಿಮಗೆ ಕಸ್ತೂರಿ ಕನ್ನಡವೂ ಅರಿಶಿನ ಕುಂಕುಮವಾಗುತ್ತದೆ. ಬೆಂಗಳೂರಿನ ಹೃದಯಭಾಗವಾದ ಕಲಾಸಿ ಪಾಳದಲ್ಲಿ ಬೆವರು ಸುರಿಸಿ ಹೊಟ್ಟೆ ಹೊರೆಯುವ ಕೂಲಿಯವರ ತಲೆಗೆ ಕಟ್ಟೊಕೊಂಡಿದ್ದ ರುಮಾಲಿನಲ್ಲೂ ಕೇಸರಿ ಕಾಣಿಸುತ್ತದೆ.  ಈ ರೀತಿಯಾದ ಸಂಕುಚಿತ ಮನೋಭಾವನೆ ಹೊಂದಿದ್ದಲ್ಲಿ ನೀವು ಹೇಳುವ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದು ಕೇವಲ ಬಾಯಿ ಮಾತಾಗಿಯೇ ಉಳಿದು ಹೋಗುತ್ತದೆ ಅಲ್ವೇ?

ಬದಲಾವಣೆ ಎನ್ನುವುವುದು ಜಗದ ನಿರಂತವಾದ ನಿಯಮ. ಹಾಗಾಗಿ ಆ ಬದಲಾವಣೆಗೆ ಎನ್ನುವುದು ನಿಮ್ಮಂತಹ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಂತಹ ಅಲ್ಪಸಂಖ್ಯಾತ ಮಹಿಳೆಯಿಂದಲೇ ಮುಕ್ತವಾಗಿ ಆರಂಭವಾಗ ಬೇಕಲ್ವೇ? ಹಾಗಿದ್ದಲ್ಲಿ  ಒಮ್ಮೆ ಗಟ್ಟಿ ಮನಸ್ಸಿನಿಂದ ಮುಕ್ತ ಕಂಠದಿಂದ ಭಾರತ ಮಾತೆಗೂ ಮತ್ತು ಕನ್ನಡಾಂಬೆಗೂ ಒಂದು ಜೋರಾದ ಜೈಕಾರ ಹಾಕುವ ಮೂಲಕ ನಿಮ್ಮ ಧರ್ಮ ನಿರಪೇಕ್ಷತೆಯನ್ನು  ಎತ್ತಿ ತೋರಿಸುವ ಮೂಲಕ ತೋರಿಸಿದಲ್ಲಿ, ಕೇವಲ ನೀರು ಕೇಳಿದರೆ, ನೀರಿನೊಂದಿಗೆ ಬೆಲ್ಲವನ್ನೂ ನೀಡುವಂತಹ ಕನ್ನಡಿಗರು ನಿಮ್ಮ ಎಲ್ಲಾ ತಪ್ಪುಗಳನ್ನು ಮನ್ನಿಸಿ ದಸರಾ ಹಬ್ಬದಲ್ಲಿ ನಿಮ್ಮನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ.  ಖಟ್ಟರ್ ನಿಮ್ಮ ಧರ್ಮವೋ ಅಥವಾ ಮುಕ್ತವಾದ ಧರ್ಮ ನಿರಪೇಕ್ಷತೆಯೋ? ಆಯ್ಕೆ ಈಗ ನಿಮ್ಮ ಮುಂದಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ದಸರಾ ಉದ್ಘಾಟನೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

  1. ಶಾಲಲ್ಲಿ ಸುತ್ತಿ ಸರಿಯಾದ ಮರ್ಯಾದೆ.

    ಈ ಬಾರಿಯ ದಸರಾ ಕವಿಗೋಷ್ಠಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬಂದಾಗ ಸಂವೇದನಾ ಶೀಲರಾದವರು, ನಿಜವಾಗಿಯೂ ಸನಾತನ ಸಂಸ್ಕೃತಿಯನ್ನು ಪ್ರೀತಿಸಿ, ಗೌರವಿಸುವವರು ಒಪ್ಪದೆ ಬಹಿಷ್ಕಾರ ಹಾಕ ಬೇಕು.

    Liked by 1 person

Leave a comment