ಶಿಕ್ಷಣದಲ್ಲೂ ತುಷ್ಟೀಕರಣವೇ?

ಅದೇಕೋ ಏನೋ ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣವೇ ಈ ಅಲ್ಪಸಂಖ್ಯಾತರಿಗೆ ತಮ್ಮಿಂದಲೇ  ತಮ್ಮದೇ ಆದ ಸರ್ಕಾರ ಆಡಳಿತಕ್ಕೆ ಬಂದಿರುವ ಕಾರಣ ನಾವು ಏನು ಬೇಕಾದರೂ ಮಾಡಬಹುದು ನಮ್ಮನ್ನು ತಡೆಯಲು ಯಾರೂ ಇಲ್ಲಾ ಎಂದೇ ಭಾವಿಸಿ  ಅನಗತ್ಯವಾದ ವಿವಾದ ಮತ್ತು ಗಲಭೆಗಳಿಗೆ ಕಾರಣರಾಗುತ್ತಿರುವುದನ್ನು ನಾನೇನು ವಿವರವಾಗಿ ಹೇಳಬೇಕಿಲ್ಲ.

ನಿಜ ಹೇಳಬೇಕೆಂದರೆ, ಮುಸಲ್ಮಾನರ  ಈ ಮನಸ್ಥಿತಿಗೆ  ಮುಸಲ್ಮಾನರಿಗಿಂತಲೂ ಪ್ರಸ್ತುತ ಕಾಂಗ್ರೇಸ್ ನಲ್ಲಿರುವ ಸ್ವಘೋಷಿತ ಜಾತ್ಯಾತೀತ ಹಿಂದೂಗಳ ತುಷ್ಟೀಕರಣವೇ ಕಾರಣ ಎಂದರೂ ತಪ್ಪಾಗದು. ಅವರು ಕೇಳಿದೇ ಹೋದರೂ ಇವರೇ ಅವರ ಮತಗಳ ಓಲೈಕೆಗಾಗಿ ಸುಮ್ಮನೇ ಇಲ್ಲ ಸಲ್ಲದ ಅನುದಾನ ಮತ್ತು ಆದೇಶಗಳನ್ನು ನೀಡಲು ಈ ಕಾಂಗ್ರೇಸ್ ನಾಯಕರು ನಾಮುಂದು ತಾಮುಂದು ಎಂದು ನಿಂತಿರುತ್ತಾರೆ ಎನ್ನುವುದಕ್ಕೆ ಸಿದ್ದರಾಮಯ್ಯನವರ ಈ ವರ್ಷದ ಬಜೆಟ್ಟಿನಲ್ಲಿ ಅತ್ಯಂತ ಹೆಚ್ಚಿನ ಅನುದಾನವನ್ನು ಅದೇ ಕೋಮಿನವರಿಗೆ ನೀಡಿದರೆ, ಇನ್ನು ಮುಸಲ್ಮಾನರು ನಮ್ಮ ಬ್ರದರ್ಸ್ ಅವರ ತಂಟೆಗೆ ಬಂದ್ರೇ ನಾನು ಸುಮ್ಮನಿರೋದಿಲ್ಲಾ ಎಂದು ಬಹಿರಂಗವಾಗಿಯೇ ಹೇಳಿಯನ್ನು ಡಿಕೆಶಿಯವರು ಹೇಳುವುದನ್ನು ಎಲ್ಲರು ಕೇಳಿದ್ದೆವೆ. ಇನ್ನು ಅಲ್ಲಾನ ಕೃಪೆಯಿಂದಲೇ ಈ ಬಾರಿ ನಮ್ಮ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದಿರುವುದು ಎಂದು ಗೃಹಮಂತ್ರಿಗಳಾದ ಪರಮೇಶ್ವರ್ ಅವರೇ  ಬಹಿರಂಗ ಹೇಳಿಕೆ ಕೊಟ್ಟಮೇಲೆ ಅವರನ್ನು  ನಿಯಂತ್ರಿಸಲು ಬಹಳ ಕಷ್ಟ ಸಾಧ್ಯವೇ ಸರಿ.

ಇನ್ನು ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ಮೊದಲ ಮೂರು ಶಿಕ್ಷಣ ಮಂತ್ರಿಗಳು ಮುಸಲ್ಮಾನರಾದ ಕಾರಣವೋ ಇಲ್ಲವೇ ನೆಹರು ಮತ್ತವರ  ಅಸೆಯೋ ಎನ್ನುವಂತೆ ಚಿಕ್ಕ ವಯಸ್ಸಿನ ನಮ್ಮ ಮಕ್ಕಳಿಗೆ ಕಲಿಸುವ ಇತಿಹಾಸದಲ್ಲಿ ಮುಸಲ್ಮಾನ ರಾಜರುಗಳನ್ನೇ ವೈಭವೀಕರಿಸಿ  ಭಾರತೀಯ ರಾಜರುಗಳನ್ನು ಬಲ ಹೀನರು ಎಂದು ತೋರಿಸುವ ಮೂಲಕ ಬಲವಂತವಾಗಿ ಹಿಂದೂ ರಾಜರುಗಳ ಶೌರ್ಯ, ಸಾಹಸಗಳನ್ನು ನಮ್ಮ ಇಂದಿನ ಪೀಳಿಗೆಗೆ ತಿಳಿಸದೇ  ಹೋದದ್ದು ಅಕ್ಷಮ್ಯ ಅಪರಾಧವಾಗಿದ್ದು, ಈಗ ಸಾಮಾಜಿಕ ಜಾಲತಾಣಗಳು ಸ್ವಲ್ಪ ಶಕ್ತಿಶಾಲಿಯಾದ ಮಾಧ್ಯಮವಾದ ನಂತರ ಅವರ ಎಲ್ಲಾ ಸುಳ್ಳುಗಳನ್ನೂ ಬಯಲು ಮಾಡಿ ನೈಜ ಇತಿಹಾಸವನ್ನು ತಿಳಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯವಾದರೂ,  ಹಿಂದೂಗಳ ಅಂತಹ ಪ್ರಯತ್ನಕ್ಕೆ   Whatsapp University ಎಂಬ ಹಣೆಪಟ್ಟಿ ಕಟ್ಟಿ ಕೊಂಕು ತೆಗೆಯುವ ಇತಿಹಾಸವನ್ನರಿಯದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪನವರಿಗೆ ಆ ತಾಯಿ ಭಾರತಿಯೇ ಸದ್ಭುದ್ಧಿ ಕೊಡಲಿ ಎಂದು ಪ್ರಾರ್ಥಿಸಬೇಕಷ್ಟೇ.

 

 

ಇದಕ್ಕೆಲ್ಲಾ ಪೂರಕ ಎನ್ನುವಂತೆ ಕಳೆದ ಐದಾರು ತಿಂಗಳುಗಳಿಂದ ಧರ್ಮಸ್ಥಳ ಶ್ರೀಕ್ಷೇತ್ರದ ಮೇಲೆ ಅವ್ಯಾವಹತವಾಗಿ ಸಮೀರ್ ಎಂಬ ಮುಸಲ್ಮಾನ  YouTuber ಮೂಲಕ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಕಳಂಕವನ್ನು  ತರಲು ಪ್ರಯತ್ನಿಸಿ ವಿಫಲರಾದರೆ, ಕನ್ನಡ ತಾಯಿ ಭುವನೇಶ್ವರಿಯನ್ನು  ಬಹಿರಂಗವಾಗಿಯೇ ಒಪ್ಪದ ಕಟ್ಟರ್ ಮುಸ್ಲಿಂ ಮಹಿಳೆಯಾದ ಬಾನು ಮುಷ್ತಾಕ್  ಅವರಿಗೆ ಬೂಕರ್ ಪ್ರಶಸ್ತಿ (ನಿಜ ಹೇಳಬೇಕೆಂದರೆ  ದೀಪಾರವರು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಕ್ಕಾಗಿ ಪ್ರಶಸ್ತಿ ಬಂದಿದೆ) ಗಳಿಸಿದ್ದಾರೆ ಎಂಬ ಏಕೈಕ ನೆಪದಿಂದ ಹಿಂದೂಗಳ  ಧಾರ್ಮಿಕ ಆಚಣೆಯಾದ ನಾಡ ಹಬ್ಬ ದಸರಾ ಹಬ್ಬದ ಉದ್ಭಾಟನೆಯನ್ನು  ಬಾನು ಮುಷ್ತಾಕ್ ಅವರಿಂದ ಮಾಡಿಸಲು ಮುಂದಾಗಿರುವುದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪವನ್ನು ಸುರಿದಂತಾಗಿದೆ.   ಇದೇ ಘಟನೆಗೆ ಮತ್ತಷ್ಟು  ಉಲ್ಬಣವಾಗಲು ಚಾಮುಂಡೇಶ್ವರಿ ಬೆಟ್ಟ ಕೇವಲ ಹಿಂದೂಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎಂಬ ಡಿಕೆಶಿ ಅವರ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾರಣ ರಾಜ್ಯಾದ್ಯಂತ  ಧರ್ಮಸ್ಥಳ ರಕ್ಷಣೆ ಮತ್ತು ದಸರಾ ಉದ್ಭಾಟನೆಯ ವಿರುದ್ಧ ಹಿಂದೂಗಳು ಬೀದಿಗೆ ಇಳಿದು ಹೋರಾಟ ಮಾಡುವಂತಹ ಪರಿಸ್ಥಿತಿಯನ್ನು ಇದೇ ಕಾಂಗ್ರೇಸ್ ಸರ್ಕಾರ ತಂದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

ಇವೆಲ್ಲದರ ಮಧ್ಯೆ ಸದ್ದಿಲ್ಲದೇ  ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1ರಿಂದ 7ನೇ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಓದಲು ಸುತ್ತೋಲೆ ಕಳುಹಿಸಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾಥಮಿಕ ಶಾಲೆಗಳ 1ರಿಂದ 7ನೇ ತರಗತಿಯ ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವ ಹೆಸರಿನಲ್ಲಿ ಕೇಂದ್ರ ಸರ್ಕಾರ “ರೂಮ್ ಟು ರೀಡ್” ಎಂಬ ಯೋಜನೆಯನ್ನು 2003 ರಲ್ಲಿ ಆರಂಭಿಸಿ, ಪ್ರಸ್ತುತ ಸುಮಾರು 12 ರಾಜ್ಯಗಳ ಶಾಲೆಗಳಲ್ಲಿ ಆಳವಾದ, ವ್ಯವಸ್ಥಿತ ರೂಪಾಂತರವನ್ನು ಪರಿಚಯಿಸಲು ಕೆಲಸ ಮಾಡುತ್ತದೆ. ರೂಮ್ ಟು ರೀಡ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಮಕ್ಕಳಿಗೆ ಸಾಕ್ಷರತೆ ಮತ್ತು ಲಿಂಗ ಸಮಾನತೆ ಶಿಕ್ಷಣವನ್ನು ಸುಧಾರಿಸಲು ಜಾಗತಿಕವಾಗಿ ಕೆಲಸ ಮಾಡುತ್ತದೆ. ಇದು ಶಿಕ್ಷಕರಿಗೆ ತರಬೇತಿ ನೀಡುತ್ತದೆ, ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ರಚಿಸುತ್ತದೆ, ಸ್ಥಳೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತದೆ ಮತ್ತು ಶಾಲೆಗಳಲ್ಲಿ ಆಕರ್ಷಕವಾದ, ಮಕ್ಕಳ-ಸ್ನೇಹಿ ಗ್ರಂಥಾಲಯಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ, ರೂಮ್ ಟು ರೀಡ್‌ನ ಸಾಕ್ಷರತಾ ಕಾರ್ಯಕ್ರಮವು ಮಕ್ಕಳಿಗೆ ಓದುವ ಕೌಶಲ್ಯಗಳನ್ನು ಕಲಿಸಿದರೆ, ಬಾಲಕಿಯರ ಶಿಕ್ಷಣ ಕಾರ್ಯಕ್ರಮವು ಅವರಿಗೆ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಬೆಂಬಲ ನೀಡುತ್ತದೆ.

R2R ಎರಡು ಪ್ರಮುಖ ಕಾರ್ಯಕ್ರಮಗಳನ್ನು ಹೊಂದಿದೆ – ಒಂದು ಸಾಕ್ಷರತೆಗಾಗಿ ಮತ್ತು ಇನ್ನೊಂದು ಹುಡುಗಿಯರ ಶಿಕ್ಷಣಕ್ಕಾಗಿ – ಇದನ್ನು ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಗತಗೊಳಿಸುತ್ತದೆ. ಓದುವುದು ಭವಿಷ್ಯದ ಎಲ್ಲಾ ಕಲಿಕೆಯ ಅಡಿಪಾಯ ಎಂಬ ನಂಬಿಕೆಯ ಮೇಲೆ ಸಾಕ್ಷರತಾ ಕಾರ್ಯಕ್ರಮವನ್ನು ನಿರ್ಮಿಸಲಾಗಿದೆ. ಈ ಕೆಲಸವು ತರಗತಿ ಗ್ರಂಥಾಲಯಗಳನ್ನು ಸ್ಥಾಪಿಸುವುದು, ವಯಸ್ಸಿಗೆ ಸೂಕ್ತವಾದ ಸಾಹಿತ್ಯವನ್ನು ಅಭಿವೃದ್ಧಿಪಡಿಸುವುದು, ಮಕ್ಕಳಲ್ಲಿ ಓದುವ ಆನಂದವನ್ನು ತುಂಬಲು ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ದೊಡ್ಡ ಸಮುದಾಯವನ್ನು ತೊಡಗಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ.

ಇಂತಹ ಸುಂದರವಾದ ಪರಿಕಲ್ಪನೆಯನ್ನು ಹೊಂದಿರುವ ಕಾರ್ಯಕ್ರಮದಲ್ಲಿ ಹಾಲಿನಲ್ಲಿ ಹುಳಿ ಹಿಂಡಿದಂತೆ ಪ್ರಾಥಮಿಕ ಶಾಲೆಗಳ 1ರಿಂದ 7ನೇ ತರಗತಿಯ ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವ ಹೆಸರಿನಲ್ಲಿ ಕರ್ನಾಟಕ ಸರ್ಕಾರ ರೂಮ್ ಟು ರೀಡ್ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿರುವ  ಸುತ್ತೋಲೆಯು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಪ್ರೋತ್ಸಾಹಿಸುವಂತೆ ಕಂಡರೂ, ಆ ಸುತ್ತೋಲೆಯಲ್ಲಿರುವ QR ಕೋಡ್ ವಿದ್ಯಾರ್ಥಿಗಳಿಗೆ ಕೇವಲ ಈದ್ ಮಿಲಾದ್ ಕುರಿತಾಗಿ ಮಾತ್ರ ಓದಲು ಹಾಗೂ ತಿಳಿದುಕೊಳ್ಳಲು ಮಾರ್ಗದರ್ಶನ ನೀಡುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಮಾತೆತ್ತಿದರೆ ಹೋದ ಬಂದ ಕಡೆಯಲ್ಲೆಲ್ಲಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಂದು ಕೆಂಪು ಪುಸ್ತಕವನ್ನು ಪ್ರದರ್ಶಿಸುವ ( ಆ ಪುಸ್ತಕದಲ್ಲಿ ಏನಿದೆ ಎನ್ನುವುದನ್ನು ಬಿಡಿ, ಅದರಲ್ಲಿ ಎಷ್ಟು ಪುಟಗಳಿವೆ? ಎಂದು ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಕೇಳಿದ ಪ್ರಶ್ನೆಗೆ ಬೆಬ್ಬೆಬ್ಬೇ ಎಂದವರು) ಸಂವಿಧಾನದ ರಕ್ಷಕರು ತಾವೇ ಎನ್ನುವ, ತಾವು ಮಾತ್ರಾ  ಜಾತ್ಯಾತೀತರು ಉಳಿದವರೆಲ್ಲರೂ ಕೋಮುವಾದಿಗಳು ಎನ್ನುವ ಇದೇ ಸಿದ್ದರಾಮಯ್ಯನವರು  ಯಾವುದೇ, ಧರ್ಮದ ಪರವಾಗಿರದೇ, ತಟಸ್ಥವಾಗಿ ಶಿಕ್ಷಣ ನೀಡಬೇಕಾದ ಅವರದ್ದೇ ಸರ್ಕಾರ ಏನೂ ಅರಿಯದ ಆ ಪುಟ್ಟ ವಯಸ್ಸಿನ ಮಕ್ಕಳಿಗೆ  ಕೇವಲ ಒಂದು ಧರ್ಮಕ್ಕೆ ಮಾತ್ರ ವಿಶೇಷ ಪ್ರೋತ್ಸಾಹ ನೀಡುವ ಮೂಲಕ  ಮಕ್ಕಳ ಮನಸ್ಸಿನ ಮೇಲೆ ಏಕಪಕ್ಷೀಯ ಪ್ರಚಾರ ಹೇರಿದಂತಾಗುವುದಲ್ಲದೇ?

ಜೀವನದಲ್ಲಿ ಹೇಗೆ ಬದುಕಬೇಕು, ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು  ಆಧ್ಯಾತ್ಮಿಕ ರೀತಿಯಲ್ಲಿ ಸರಳವಾಗಿ ಸಾಕ್ಷಾತ್  ಶ್ರೀಕೃಷ್ಣ ಪರಮಾತ್ಮನೇ ಅರ್ಜುನನಿಗೆ ಕುರುಕ್ಷೇತ್ರದ ಯುದ್ಧ ಸಂಧರ್ಭದಲ್ಲಿ ವಿರಾಟ್ ರೂಪ ತಾಳಿ ಬೋಧಿಸಿದ ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಕಲಿಸಲು ಮುಂದಾದಾಗ,  ನೂರಾರು ಸ್ವಘೋಷಿತ ಬುದ್ಧಿಜೀವಿಗೆಳು ಇದಕ್ಕೆ ವಿರುದ್ಧವಾಗಿ ಆಂದೋಳನ ನಡೆಸಿದ್ದವರು ಈಗ ತುಟಿಕ್ ಪಿಟಿಕೆ ಎನ್ನದೇ ಸುಮ್ಮನಿರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಭಗವದ್ಗೀತೆ ಕೇವಲ ಹಿಂದೂ ಧರ್ಮದ ಗ್ರಂಥವಾಗಿರದೇ, ಪ್ರಪಂಚದಲ್ಲಿರುವ ಎಲ್ಲಾ ಧರ್ಮಗ್ರಂಥಗಳ ಸಾರಾಂಶಗಳು ಇದರಲ್ಲಿ  ಒಳಗೊಂಡಿದ್ದು ಎಲ್ಲರಿಗೂ ಉಪಯುಕ್ತವಾಗಿದೆ. ಭಗವದ್ಗೀತೆಯ ತತ್ವಗಳು ಎಲ್ಲರಿಗೂ ಧನಾತ್ಮಕ ಮನೋಭಾವನೆಯನ್ನು ನೀಡಿ, ಜೀವನದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತವೆ. ಇಂತಹ ಪರಮ ಪವಿತ್ರ ಶ್ಲೋಕಗಳನ್ನು ಕಲಿಸಲು ಇದೇ ಕಾಂಗ್ರೇಸ್ ಮತ್ತು ಅವರ ಕೃಪಾಪೋಶಿತ ಮಂಡಳಿ ಆಕ್ಷೇಪ ವ್ಯಕ್ತ ಪಡಿಸಿತ್ತು.

ಅದೇ ರೀತಿಯಲ್ಲಿ 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ  ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ  ಸುಮಾರು 8000 ನೂತನವಾಗಿ ನಿರ್ಮಿಸಿದ  ಸಂಧರ್ಭದಲ್ಲಿ ಸನ್ಯಾಸಿಗಳಾದ ಶ್ರೀ ಸ್ವಾಮೀ ವಿವೇಕಾನಂದರು ಕಾಷಾಯ ವಸ್ತ್ರ ( ಕೇಸರಿ ಬಣ್ಣದ ಕಾವಿ) ಧರಿಸುತ್ತಿದ್ದರಿಂದ ಆ ಕೊಟಡಿಗಳಿಗೆ ಕೇಸರಿ ಬಣ್ಣ ಬಳಿದು ಎಲ್ಲರಿಗೂ ಜ್ಞಾನ ಲಭ್ಯವಾಗಲಿ ಎನ್ನುವ ಉದ್ದೇಶದಿಂದ  ವಿವೇಕ  ಎಂಬ ಹೆಸರಿಟ್ಟರೆ, ಆ ಕೇಸರಿ ಬಣ್ಣಕ್ಕೂ ಧರ್ಮ ಮತ್ತು ರಾಜಕೀಯ ಬೆರೆಸಿದ್ದ ಇದೇ ಕಾಂಗ್ರೇಸ್ಸಿಗರು, ನಮ್ಮ ಧ್ವಜದಲ್ಲಿಯೇ ಇರುವ ಕೇಸರಿ ಬಣ್ಣದ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಾದಂತ್ಯ ಹೋರಾಟ ನಡೆಸಿದ್ದರು.

ಈಗ ಅದೇ ಕಾಂಗ್ರೇಸ್ ಸರ್ಕಾರ ಸದ್ದಿಲ್ಲದೇ 1ನೇ ತರಗತಿಯಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಿಗಾಗಿ ಶಾಲೆಗಳಲ್ಲಿ ರಾಜ್ಯಾದ್ಯಂತ 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯನ್ನು ವಿನ್ಯಾಸಗೊಳಿಸಲಾಗಿದ್ದು ಅದರಲ್ಲಿ ಅನಗತ್ಯವಾಗಿ ಈದ್ ಮಿಲಾದ್ ಕುರಿತಾಗಿ ಕಲಿತುಕೊಳ್ಳಲು ಹೊರಡಿಸಿರುವ ವಿಷಯವು ವಿವಾದ ಸ್ವರೂಪ ಪಡೆದುಕೊಂಡಿದ್ದು ಈಗಾಗಲೇ ಈ ವಿಚಾರದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೇ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು,  ಹಿಂದೂ ಹಬ್ಬಗಳಿಗೆ ನೂರಾರು ಕಾನೂನುಗಳನ್ನು ತರುವ ನೀವು – ಮುಸಲ್ಮಾನರ ಹಬ್ಬಗಳಿಗೆ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡುತ್ತಿರಿ. ಈ ನಮ್ಮ ಸೆಲೆಕ್ಟೀವ್ ಸೆಕ್ಯುಲರಿಸಮ್ ಏಕೆ? ಎಂದು ಪ್ರಶ್ನಿಸಿರುವುದಲ್ಲದೇ, ಇಂತಹ ತುಷ್ಟೀಕರಣ ರಾಜಕಾರಣವನ್ನು ಶಿಕ್ಷಣದ ಹೆಸರಿನಲ್ಲಿ ಮುಂದೂಡುವುದು ಕಾಂಗ್ರೆಸ್ ಸರ್ಕಾರದ ಸೆಲೆಕ್ಟೀವ್ ಸೆಕ್ಯುಲರಿಸಮ್‌ನ ಜೀವಂತ ಉದಾಹರಣೆ. ತುಷ್ಟೀಕರಣಕ್ಕೂ ಒಂದು ಇತಿ – ಮಿತಿ ಬೇಡವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ? ಶಾಲೆಗಳು ಜ್ಞಾನ ಮಂದಿರವಾಗಲಿ, ಸರ್ಕಾರದ ಮತಬೇಟೆ ರಾಜಕೀಯದ ಪ್ರಯೋಗಾಲಯವಾಗಬಾರದು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸರ್ಕಾರ ಈ ಆದೇಶವನ್ನು ಹಿಂಪಡೆಯದೇ ಹೋದಲ್ಲಿ ಉಗ್ರಪ್ರತಿಭಟನೆ ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ.

ಪ್ರಪಂಚಾದ್ಯಂತ ಇರುವ 193 ರಾಷ್ಟ್ರಗಳಲ್ಲಿ  ಅಯಾಯಾ ದೇಶದಲ್ಲಿನ ಮೂಲ ನಿವಾಸಿಗಳು ಮತ್ತು ಬಹು ಸಂಖ್ಯಾತರ ಸಂಸ್ಕಾರ ಮತ್ತು ಸಂಸ್ಕೃತಿಗಳೇ ರೂಢಿಯಲ್ಲಿರುವಾಗ ಭಾರತದಲ್ಲಿ ಮಾತ್ರವೇ ಸುಮಾರು ೮೦೦ ವರ್ಷಗಳ ಕಾಲ ಮುಸಲ್ಮಾನರು ಮತ್ತು ೨೫೦+ ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯಲ್ಲಿದ್ದರೂ ಇನ್ನೂ ಸಹಾ ಬುದ್ದಿಯನ್ನು ಕಲಿಯದೇ ಅದೇ ಗುಲಾಮೀ ಪದ್ದತಿಯಿಂದ ಹೊರಬಾರದೇ ನಮ್ಮ ಸನಾತನ ಧರ್ಮವನ್ನು ಮತ್ತೆ ಜಾತಿ ಮತ್ತು ಧರ್ಮದಲ್ಲಿ ಸಾಧ್ಯವಾದಕಡೆಯಲ್ಲೆಲ್ಲಾ ಈ ರೀತಿಯಾಗಿ ಒಡೆಯುತ್ತಿರುವುದರ ಬಗ್ಗೆ ಎಚ್ಚರ ವಹಿಸಬೇಕು ಅಲ್ವೇ

?ಹೀಗೆ ಸುಮ್ಮನೇ ಇದ್ರೇ, ಇವತ್ತು ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ ಎಂದು ಅಧಿಕೃತ ಸರ್ಕಾರಿ ಆದೇಶಗಳನ್ನು ನೀಡುವವರು ಮುಂದೇ ಪ್ರತೀ ಶುಕ್ರವಾರ ಮಧ್ಯಾಹ್ನ ನಮಾಜ್ ಮಾಡಿ ಎಂದು ತಾಕೀತು ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಅದೇ ರೀತಿ ಕ್ರಿಶ್ಚಿಯನ್ ಸಂಸ್ಕಾರದಂತೆ, ಈಗಾಗಲೇ ಅನೇಕ ಶಾಲೆಗಳಲ್ಲಿ ಜಡೆ ಹಾಕಿಕೊಂಡು ಬರಬಾರದು, ಹೂವು ಮುಡೀಬಾರದು, ಕೈಗ ಬಳೆ ಹಾಕಿಕೊಂಡು ಬರಬಾರದು. ಕಿವಿಗೆ ಜಿಮ್ಕಿ ಹಾಕಿಕೊಂಡು ಬರಬಾರದು, ಎಷ್ಟೋ ಶಾಲೆಗಳಲ್ಲಿ ಕೆನ್ನೆಗೆ ಅರಿಶಿನ ಮತ್ತು ಹಣೆಯಲ್ಲಿ ಕುಂಕುಮ ಇಟ್ಟು ಬರಬಾರದು ಎಂಬ ಅಲಿಖಿತ ನಿಯಮಗಳು ಇರುವುದು ಈಗ ಗುಟ್ಟಾಗಿಯೇನೂ ಉಳಿದಿದಲ್ಲ. ಹೋಲಿ ಹಬ್ಬದಂದು ಬಣ್ಣದ ಆಟ ಆಡಬಾರದು ನಮ್ಮ ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ಬಟ್ಟೆ ಹಾಕಿಕೊಂಡು ಬರಬಾರದು ಎಂದು ಹೇಳುವವರೇ, ಕ್ರಿಸ್ಮಸ್ ಹಬ್ಬದ ಸಮಯದಲ್ಲಿ hollyvins day, secreate santa & Santaclass ಬಟ್ಟೆಗಳನ್ನು ಹಾಕಿಸಿ ಪರಸ್ಪರ ಉಡುಗೊರೆಗಳನ್ನು ವಿನಿಯೋಗ ಮಾಡಿಸುವುದಲ್ಲದೇ, ಜನವರಿ 1 ರಂದು ಅದ್ದೂರಿಯಾಗಿ ಶಾಲೆಯನ್ನು ಬಣ್ಣ ಬಣ್ಣಗಳಿಂದ ಅಲಂಕರಿಸಿ ನಮ್ಮ ಮಕ್ಕಳ ಬಾಯಿಯಿಂದಲೇ Happy New Years ಹೇಳಿಸುವ ಮೂಲಕ ನಿಧಾನವಾಗಿ ನಮ್ಮ ಸನಾತನ ಸಂಸ್ಜಾರ ಮತ್ತು ಸಂಸ್ಜೃತಿಗಳನ್ನು ನಮ್ಮ ಮಕ್ಕಳಿಂದ ದೂರ ಇರಿಸುತ್ತಿರುವುದನ್ನು ಮನಗಂಡು ಇಂತಹ ದುರುದ್ದೇಶಗಳನ್ನು ಆರಂಭದಲ್ಲೇ ಚಿವುಟಿ ಹಾಕಲು ಎಲ್ಲರೂ ಒಗ್ಗೂಡಬೇಕಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment