ಊಟ ತನ್ನಿಷ್ಟ, ನೋಟ ಪರರಿಷ್ಟ

ಕೆಲವು ವರ್ಷಗಳ ಹಿಂದೆ ನಿಜಕ್ಕೂ ನಮ್ಮ ಬಹುತೇಕರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ದುಡಿಯುವ ಕೈ ಎರಡಾದರೇ ಕುಳಿತು ತಿನ್ನುವ ಕೈ ಹತ್ತಾರು ಇರುತ್ತಿತ್ತು. ಸರಿಯಾಗಿ ಎರಡು ಹೊತ್ತು ಹೊಟ್ಟೆ ತುಂಬಾ ಊಟವೂ ಇಲ್ಲದಿರುವಂತಹ ಸಂಧರ್ಭವೂ ಇತ್ತು. ಆದರೂ ನಮ್ಮ ಅಜ್ಜ-ಅಜ್ಜಿಯರ ಆಯಸ್ಸು 80-90 ರ ಆಸುಪಾಸಿನಲ್ಲಿಯೇ ಇರುತ್ತಿತ್ತು. ಆಷ್ಟು ವರ್ಷಗಳ ಕಾಲ ಅವರು ಕಷ್ಟದಲ್ಲೇ ಜೀವಿಸಿದರೂ ಅವರಿಗೆಂದೂ ಬಿಪಿ, ಶುಗರ್, ಕಿಡ್ನಿ ತೊಂದರೆಯಾಗಲಿ ಇರಲೇ ಇಲ್ಲ. ಹೃದಯಾಘಾತ ಎನ್ನುವುದನ್ನು ಕೇಳೇ ಇರಲಿಲ್ಲ ಅವರೆಲ್ಲರೂ ಗಂಡಾ ಗುಂಡೀ ಮಾಡಿಯಾದರೂ ತುಪ್ಪಾ ತಿನ್ನು ಎಂದು ಆರಾಮವಾಗಿ ಆರೋಗ್ಯವಾಗಿ ಇರುತ್ತಿದ್ದದ್ದಕ್ಕೆ ಮುಖ್ಯ ಕಾರಣ ಎಂದರೆ ಅವರೆಲ್ಲರೂ ಕಷ್ಟ ಪಟ್ಟು ದೇಹ ದಂಡಿಸಿ ದುಡಿದು ಸಂಪಾದನೆ ಮಾಡುತ್ತಿದ್ದದ್ದಲ್ಲದೇ ಇದ್ದದ್ದರಲ್ಲೇ ಸಂತೋಷವಾಗಿ ಹಂಚಿಕೊಂಡು ತಿನ್ನುತ್ತಿದ್ದ ಕಾರಣ ಅಷ್ಟು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಇರುತ್ತಿದ್ದರು.

ಅದಕ್ಕೆ ಏನೋ 70ರ ದಶಕದಲ್ಲಿ ಬಂದ ಭೂತಯ್ಯನ ಮಗ ಅಯ್ಯೂ ಕನ್ನಡದ ಚಿತ್ರದಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ ನಾ ಮನಸೋತೆನೆ ಚಿನ್ನ… ಹಾಡಿನಲ್ಲಿ ನಾಯಕಿಯ ಸಣ್ಣದಾದ ನಡುವಿನ ಬಗ್ಗೆ ಸೊಗಸಾಗಿ ಹೇಳಿದ್ದಾರೆ. ಅದೇ 2002ರದ ಹೊತ್ತಿಗೆ ಬಿಡುಗಡೆಯಾದ ಸುದೀಪ್ ಅಭಿನಯದ ಚಂದು ಸಿನಿಮಾದಲ್ಲಿ ಸೊಂಟದ ವಿಸ್ಯಾ ಬೇಡವೋ ಸಿಸ್ಯಾ ಸೊಂಟ ಸೂಪರು ಆದ್ರೇ ಡೇಂಜರೂ… ಎಂಬ ಹಾಡನ್ನೂ ಹೇಳುವ ಮೂಲಕ 3 ದಶಕಗಳಲ್ಲಿ ನಮ್ಮ ಯುವಕ ಯುವತಿಯರಲ್ಲಿ ಆದ ಭಾರೀ ಬದಲಾವಣೆಯನ್ನು ಆ ಹಾಡಿನ ಮೂಲಕ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

post70-80 ರ ದಶಕದವರೆಗೂ ಈ ಪರಿಯ ನಗರೀಕರಣವಾಗದೇ ಇದ್ದು ಮಳೆ ಬೆಳೆಯೂ ಚೆನ್ನಾಗಿ ಆಗುತ್ತಿದ್ದ ಕಾರಣ ಬಹುತೇಕರು ಪಟ್ಟಣದಿಂದ ದೂರವೇ ಉಳಿದು ಹಳ್ಳಿಯಿಂದ ಬೆಳೆಗ್ಗೆ ಎದ್ದು ಹೆಣ್ಣು ಮಕ್ಕಳು ಕಸ ಗುಡಿಸಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಬಿಟ್ಟು ಊರಿನ ಮುಂದಿನ ಕೆರೆಕಡೆಗೆ ಹೋಗಿ ಪಾತ್ರೇ ತೊಳೆದುಕೊಂಡು ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ಕುಡಿಯಲು ನೀರು ತಂದು ಮನೆಯ ಮುಂದಿನ ಭಾವಿಯಿಂದ ಬಚ್ಚಲು ಮನೆಗೆ ನೀರು ತುಂಬಿಸಿ, ಮನೆಯವರಿಗೆ ಅಡುಗೆ ಮಾಡಲು ಅಡುಗೆ ಮನೆ ಸೇರಿಕೊಂಡರೆ, ಬಂದರೆ ಗಂಡಸರು ಕೊಟ್ಟಿಗೆ ಗುಡಿಸಿ ಸಗಣಿ ಬಾಚಿ ತಿಪ್ಪಗೆ ಹಾಕಿ ದನಕರುಗಳನ್ನು ಹೊಡೆದು ಕೊಂಡು ಸೂರ್ಯ ನೆತ್ತಿಗೆ ಬರುವ ವರೆಗೂ ರೆಟ್ಟೆ ಬಗ್ಗಿಸಿ ಬೆವರು ಬರುವ ವರೆಗೂ ಕೃಷಿ ಚಟುವಟಿಕೆಗಳಲ್ಲಿ ಮಾಡುತ್ತಿದ್ದರೆ, ಮನೆಯವರಿಗಾಗಿ ಬಿಸಿ ಬಿಸಿ ಮುದ್ದೇ ಬಸ್ಸಾರು ಮಾಡಿಕೊಂಡು ಹೊಲಕ್ಕೆ ತೆಗೆದುಕೊಂಡು ಬಂದು ಅಲ್ಲೇ ಮರದ ನೆರಳಿನಲ್ಲಿ ಒಟ್ಟಿಗೆ ಕುಳಿತುಕೊಂಡು ಊಟಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕಾರಣ ಮೈಯ್ಯಲ್ಲಿದ ಕೊಬ್ಬೆಲ್ಲಾ ಅವರಿಗೇ ಅರಿವಿಲ್ಲದಂತೆ ಅವರು ಮಾಡುತ್ತಿದ ಕೆಲಸ ಕಾರ್ಯಗಳ ಮೂಲಕ ಕರಗಿ ಹೋಗಿ ಸ್ಥೂಲಕಾಯ ಎನ್ನುವುದರ ಅರಿವೇ ಇರಲಿಲ್ಲ.

foor_mill80ರ ಅಂತ್ಯದ ಹೊತ್ತಿಗೆ ನಿಧಾನವಾಗಿ ಒಂದೊಂದೇ ಯಾಂತ್ರಿಕೃತವಾಗಿ ಬತ್ತ ಕುಟ್ಟುವ ಒನಕೆ ಮತ್ತು ಹಿಟ್ಟು ಬೀಸುವ ಬೀಸೋ ಕಲ್ಲಿನ ಜಾಗದಲ್ಲಿ ಊರಿನಲ್ಲಿ floor millಗಳು ಬಂದವೋ ಒನಕೆ ಮತ್ತು ಬೀಸೋಕಲ್ಲು ಅಟ್ಟ ಸೇರಿಕೊಂಡವು. ಇನ್ನು ರುಬ್ಬಲು, ತಿರುವಲು ಬಳಸುತ್ತಿದ್ದ ಒರಳುಕಲ್ಲಿನ ಜಾಗಕ್ಕೆ mixer grinder/wet grinderಗಳು ಬಂದು ಹೆಣ್ಣು ಮಕ್ಕಳನ್ನು ಮತ್ತಷ್ಟು ಸೋಮಾರಿಗಳನ್ನಾಗಿಸಿತು ಎಂದರೂ ತಪ್ಪಾಗದು. ಇನ್ನು ಕಾಡೆಲ್ಲಾ ಕಡಿದು ನಾಡು ಮಾಡಿದ ಕಾರಣ ಮಳೆ ಎಲ್ಲವೂ ಕಡಿಮೆ ಆಗಿ ಅಂತರ್ಜಲ ಮಟ್ಟ ಕುಸಿದು ಊರಿನ ಬಾವಿಗಳು ಬರಿದಾದಾಗ ನೂರಾರು ಅಡಿಗಳ ಆಳಕ್ಕೆ ಕೊಳವೇ ಭಾವಿ ಕೊರೆದು ಅದಕ್ಕೆ ಮೋಟರ್ ಪಂಪ್ ಅಳವಡಿಸಿ, ಯಾವಾಗ ಸ್ವಿಚ್ ಒತ್ತಿದ ತಕ್ಷಣ ನೀರು ಬರಲು ಆರಂಭಿಸಿತೋ, ಅದುವರೆಗೂ ಸಾವಿರಾರು ನೀರಿನ ಕೊಡವನ್ನು ಹೊತ್ತಿದ್ದ ಸೊಂಟಗಳು ನಿಸ್ತೇಜವಾಗಿದ್ದಲ್ಲದೇ ನಿಧಾನವಾಗಿ ದೇಹದಲ್ಲಿ ಕೊಬ್ಬು ನಮಗೇ ಅರಿವಿಲ್ಲದಂತೆಯೇ ಬೆಳೆಯುತ್ತಾ ಹೋಗಿದ್ದಲ್ಲದೇ ಕಲಬೆರಕೆ ಎಣ್ಣೆ, ಆಹಾರಗಳಿಂದ ಮೂವತ್ತಕ್ಕೆಲ್ಲಾ ಕೂದಲು ಬೆಳ್ಳಗಾಗುವುದೋ ಇಲ್ಲವೇ ಸಂಪೂರ್ಣ ಉದುರಿಹೋಗುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ, ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದಿರುವ ಕಾರಣ, ಹೆಂಗಸು ಮತ್ತು ಗಂಡಸರು ಎನ್ನುವ ಬೇಧ ಭಾವವಿಲ್ಲದೇ, ಯದ್ವಾ ತದ್ವಾ ದಪ್ಪವಾಗಿ ಸ್ಥೂಲಕಾಯವಾಗುತ್ತಿರುವ ಕಾರಣದಿಂದ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್, ಕಿಡ್ನಿ ತೊಂದರೆ ಅನುಭವಿಸುತ್ತಿದ್ದು 40-45ರ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗಿ 50+ ಇರುವುದೇ ಬೋನಸ್ ಎನಿಸುವಂತಾಗಿರುವುದು ಸುಳ್ಳಲ್ಲ.

jfಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಎಂದರೆ ಇಂದಿನ ಯುವ ಜನತೆ ಉತ್ತಮ ಆಹಾರಕ್ಕಿಂತ ಜಂಕ್ ಫುಡ್ ಕಡೆಗೆ ಹೆಚ್ಚು ಆಕರ್ಷಿತರಾಗಿರುವುದಲ್ಲದೇ, ಮೇಲೆ ಹೇಳಿದಂತೆ ಯಾವುದೇ ಆರೋಗ್ಯಕರ ದೇಹದಂಡಿಸುವ ಕಾರ್ಯದಲ್ಲಿ ಭಾಗವಹಿಸದಿರುವ ಕಾರಣ ಸಣ್ಣ ವಯಸ್ಸೀಗೇ ಸ್ಥೂಲ ಕಾಯರಾಗಿ, ಡುಮ್ಮ ಅಥವಾ ಡುಮ್ಮಿ ಎನಿಸಿಕೊಂಡು Dummy dummy Duplicate Door No. 88 ಎಂದು ಚಿಕ್ಕವಯಸ್ಸಿನ ಮಕ್ಕಳೂ ಆಡಿಕೊಳ್ಳುವಂತಾಗಿದ್ದಾರೆ. ಹಾಗಾಗಿ ಬಹುತೇಕರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿರುವುದು ತಪ್ಪಲ್ಲವಾದರೂ ಅವರು ಅನುಸರಿಸುತ್ತಿರುವ ಮಾರ್ಗ ತಪ್ಪಾಗಿದೆ.

ನನ್ನ ವಯಕ್ತಿಕ ಅನುಭವದ ಪ್ರಕಾರ ಪ್ರತಿಯೊಬ್ಬರೂ ಆರೋಗ್ಯಕರವಾಗಿರಲು 60% ಆಹಾರ ಪದ್ದತಿ ಮತ್ತು 40% ನಿಯಮಿತ ವ್ಯಾಯಾಮ ಅತ್ಯಾವಶ್ಕಕ. ದುರಾದೃಷ್ಟವಷಾತ್ ಇಂದಿನ ಯುವಕರು ಇವೆರಡರಲ್ಲೂ ಎಡವಿ ಊಟ ತನ್ನಿಷ್ಟ ಎಂದು ಯದ್ವಾ ತದ್ವಾ ತಿಂದು ದೇಹ ಬೆಳಸಿಕೊಂಡು ನಂತರ ನೋಟ ಪರರ ಇಷ್ಟ ಎಂದು ಅದನ್ನು ಬೆವರು ಸುರಿಸದೇ ಕರಗಿಸಿಕೊಳ್ಳುವ ಸಲುವಾಗಿ ಲಕ್ಷಾಂತರ ಹಣ ಖರ್ಚು ಮಾಡಿ Fat shaming ಹಿಂದೆ ಬಿದ್ದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಅದ್ನಾನ್ ಸಾಮಿ ಎಂಬ ಪಾಕ್ ಮೂಲದ ಬಾಲಿವುಡ್ ಗಾಯಕ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಮೂಲಕ ದಿಢೀರ್ ಎಂದು ಸಾಕಷ್ಟು ತೂಕವನ್ನು ತೂಕ ಕಳೆದುಕೊಂಡು ಸಣ್ಣಗಾಗಿ ಎಲ್ಲಗೂ ಮೂಗಿನ ಮೇಲೆ ಬೆರಳಿಡುವಂತ ಮಾಡಿದ ನಂತರ ಬಹುತೇಕರು ಅದೇ shortcut method ಅನುಸರಿಸಲು ಹೋಗಿ ಕಡೆಗೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಕೇಂದ್ರ ಸರ್ಕಾರದ ಸಚಿವ ಅರುಣ್ ಜೇಟ್ಲಿಯವರಂತೂ ತಮ್ಮ ತೂಕ ಇಳಿಸಲು ಒಳಗಾಗಿದ್ದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದರೆ, ಮೈಸೂರಿನ ಮಾಜಿ ಯುವರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಕೂಡ ತಮ್ಮ ದೇಹದ ತೂಕವನ್ನು ಒಮ್ಮಿಂದೊಮ್ಮೆಲ್ಲೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಫಲಾಕಾರಿಯಾಗದ ಕಾರಣವೇ ಅವರು ದೇಹಾಂತ್ಯವಾದರು ಎಂದು ಓದಿದ ನೆನಪು. ಇನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೂಡಾ ತಮ್ಮ ದೇಹದ ತೂಕವನ್ನು ಅಸಾಂಪ್ರಾದಾಯಕವಾಗಿ ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಮಧ್ಯದಲ್ಲಿಯೇ ಕೋಮಾಕ್ಕೆ ಜಾರಿ ಸುಮಾರು ತಿಂಗಳುಗಳ ನಂತರ ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿ ಬಂದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗದೇ ಮೃತರಾದರೆ, ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಹಾ ಇದೇ ರೀತಿಯ ಧಿಡೀರ್ ಸಣ್ಣಗಾಗಲು ಹೋಗಿ ಹೈರಾಣಾಗಿ ಕಡೆಗೆ ಶಿವನ ಪಾದ ಸೇರಿರುವುದು ಈಗ ಇತಿಹಾಸವಾಗಿದೆ.

ellyಪ್ರೊಫೆಸರ್ ಹಕ್ಸಲೆ ಎಂಬ ಪಾಶ್ಚಾತ್ಯ ಪಂಡಿತರು ಹೇಳಿದ ಹಾಗೆ Be careful, your body is the living temple of God ಅಂದರೆ, ನಮ್ಮ ದೇಹವು ಜೀವಂತ ದೇವರು ಇರುವ ದೇವಾಲಯ ಹಾಗಾಗಿ ಜಾಗರೂಕರಾಗಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ನಮ್ಮ ದೇಹ ಯಾವುದೇ ಪತ್ರವನ್ನೇ ಆಗಲಿ ಸ್ವೀಕಾರ ಮಾಡುವ ಅಂಚೆ ಪೆಟ್ಟಿಗೆ (Post box) ಅಥವಾ ಎಲ್ಲಾ ರೀತೀಯ ಗಲೀಜನ್ನು ಹಾಕಲು ಬಳೆಸುವ ಕಸದ ಡಬ್ಬ( Dust bin) ಅಂತೂ ಅಲ್ಲವೇ ಅಲ್ಲ. ಹಾಗಾಗಿ ಮೊದಲು ನಾವೇ ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿಮಾಡಿಕೊಳ್ಳಬೇಕು. ನಮ್ಮ ದೇಹ ಸುಸ್ಥಿತಿಯಲ್ಲಿರಲು ಏನು ಬೇಕು? ಏನು ಬೇಡ? ಏನನ್ನು? ಎಷ್ಟು ತಿನ್ನಬೇಕು? ಯಾವುದನ್ನು ಬಿಡಬೇಕು? ನಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ಹೊತ್ತು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಯಾವ ರೀತಿಯಾಗಿ ನಮ್ಮ ಜೀವನ ಶೈಲಿ ಇರಬೇಕು? ಎಂಬುದನ್ನು ಪಟ್ಟಿ ಮಾಡಿಕೊಂಡು ಅದೇ ರೀತಿಯಾಗಿ ನಿಯಮಿತವಾಗಿ ಪಾಲಿಸಬೇಕು.

ಇಂದಿನ ಯುವಜನತೆ ಎದುರಿಸುತ್ತಿರುವ ಬಹುತೇಕ ರೋಗಗಳಿಗೆ ಸ್ಥೂಲಕಾಯ ಅತ್ಯಂತ ಮಾರಕವಾಗಿದ್ದು ಅದನ್ನು ಹೇಗೆ ಪಡೆದು ಕೊಂಡೆವೋ ಹಾಗೆಯೇ ನಿಧಾನವಾಗಿ ನಿಯಮಿತವಾದ ವ್ಯಾಯಾಮ ಮತ್ತು ಯೋಜಿತ ಆಹಾರ ಪದ್ದತಿಯ ಮೂಲಕ ಆರೋಗ್ಯಕರವಾದ ರೀತಿಯಲ್ಲಿ ತೂಕವನ್ನು ಕಾಯ್ದುಕೊಳ್ಳುವ ಮೂಲಕ ನಾನಾ ವಿವಿಧ ರೋಗ ರುಜಿನಗಳಿಂದ ಮುಕ್ತರಾಗಿರಬಹುದಾಗಿದೆ. ಇದನ್ನು ಚೆನ್ನಾಗಿಯೇ ಅರಿತಿದ್ದ ನಮ್ಮ ಪೂರ್ವಜರು ಲಂಘನಂ ಪರಮೌಷಧಂ ಎಂದರೆ ಉಪವಾಸವೇ ಸಕಲ ಖಾಯಿಲೆಗಳಿಗೆ ಪರಮೌಷಧ ಎಂದು ಹೇಳಿದ್ದಾರೆ. Something is better than nothing ಎನ್ನುವಂತೆ, ಯಾವುದೇ ರೀತಿಯ ವ್ಯಾಯಾಮವನ್ನೇ ಮಾಡದೇ ಇರುವುದಕ್ಕಿಂತಲೂ, ಅಲ್ಪ ಸ್ವಲ್ಪ ನಮ್ಮ ದೇಹಕ್ಕೆ ಅನುಗುಣವಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ. ವಾರದಲ್ಲಿ ಕನಿಷ್ಠ ಪಕ್ಷ ನಾಲ್ಕೈದು ದಿನಗಳಾದರೂ ದಿನದಲ್ಲಿ 30-60 ನಿಮಿಷ ವ್ಯಾಯಾಮ ಮಾಡುವುದು ಅತ್ಯುತ್ತವಾದ ಅಭ್ಯಾಸ. ಯಾವುದೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ದೇಹವನ್ನು ದಂಡಿಸಲು ಮತ್ತು ಸುಸ್ಥಿತಿಯಲ್ಲಿಡಲು ದೀರ್ಘ ನಡಿಗೆ ಮತ್ತು ಯೋಗಾಸನ ಮತ್ತು ಪ್ರಾಣಾಯಾಮಗಳು ಅತ್ಯುತ್ತಮ ವಿಧಾನಗಳಾಗಿವೆ. ಅದರಲ್ಲೂ ಸೂರ್ಯ ನಮಸ್ಕಾರದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚಿನ Calories burn ಮಾಡಬಹುದಾಗಿದೆ.

ಇಂದಿನ ಜನರ ಪರಿಸ್ಥಿತಿ ಹೇಗಿದೆ ಎಂದರೆ,

ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು
ಬೈಕ್ ಓಡಿಸಿ ಬೆನ್ನು ನೋವಾಗಿ ಕಾರ್ ಬಂತು
ಕಾರ್ ಓಡಿಸುವಾಗ ಕೈಕಾಲು ಆಡಿಸದ ಕಾರಣ ಹೊಟ್ಟೆ ಬಂತು
ಆ ಹೊಟ್ಟೆ ಕರಗಿಸಲು ಮತ್ತೆ ಜಿಮ್ಮಿನಲ್ಲಿ ಸೈಕಲ್ ತುಳಿಯುವ ಹಾಗಾಯ್ತು

belly2ಮೊದಲು ನಾಲಿಗೆಯನ್ನು ಹಿಡಿತಲ್ಲಿ ಇಟ್ಟು ಕೊಳ್ಳಲಾಗದೇ ಉಟತನ್ನಿಷ್ಟ ಎಂದು ಸಿಕ್ಕಾ ಪಟ್ಟೆ ತಿಂದು ದಪ್ಪಗಾಗಿ ನಂತರ ಮತ್ತೊಬ್ಬರ ಕಣ್ಣಿಗೆ ಸಣ್ಣಗೆ ಕಾಣುವ ಸಲುವಾಗಿ ಕಳೆದ ವಾರವಷ್ಟೇ, ಕಿರುತೆರೆ ನಟಿಯೊಬ್ಬರು ದೇಹದ ಕೊಬ್ಬು ಕರಗಿಸಲು ತನ್ನ ಪೋಷಕರು ಮತ್ತು ಸ್ನೇಹಿತರಿಗೂ ಹೇಳಿದೇ, ಶಸ್ತ್ರಚಿಕ್ತಿತ್ಸೆಗೆ ಒಳಗಾಗಿ ಚಿಕಿತ್ಸೆಯ ಸಮಯದಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣ ಅಸುನೀಗಿರುವುದು ನಿಜಕ್ಕೂ ದುಃಖಕರವೇ ಸರಿ. ಮೇಲ್ನೋಟಕ್ಕೆ ಇದು ಎಷ್ಟೇ ವೈದ್ಯರ ನಿರ್ಲಕ್ಷ್ಯ ಎಂಬಂತೆ ಕಂಡರೂ, ಚಿಕಿತ್ಸೆಯ ಸಮಯದಲ್ಲಿ ಆಗ ಬಹುದಾದ ಅವಘಢಗಳಿಗೆ ವೈದ್ಯರು ಜವಾಬ್ಧಾರಲ್ಲಾ ಎಂಬ ಎಲ್ಲಾ ರೀತಿಯ ಕರಾರು ಪತ್ರಗಳಿಗೆ ಸಹಿ ಹಾಕಿಸಿಕೊಂಡಿರುವ ಕಾರಣ ಕಾನೂನಾತ್ಮಕವಾಗಿ ವೈದ್ಯರನ್ನೇನು ಮಾಡಲಾಗದು. ಈಗ ಎಷ್ಟೇ ಬಡಿದಾಡಿದರೂ ಹೋದ ಜೀವವನ್ನು ಮರಳಿ ತರಲಾಗದ ಕಾರಣ, ಈ ಲೇಖನವನ್ನು ಓದಿದ ನಂತರವಾದರೂ ವ್ಯಾಯಮ ಮತ್ತು ಸರಿಯಾದ ಆಹಾರ ಪದ್ದತಿಗಳಿಲ್ಲದೇ ದಿಢೀರ್ ಎಂದು ಸಣ್ಣಗಾಗುವುದು ಆಘಾತಕಾರಿ ವಿಷಯ ಎಂದು ತಿಳಿದು ಯಾರು ಏನೇ ಹೇಳಿದರೂ ಅದನ್ನು ತಲೆಗೆ ಹಾಗಿಕೊಳ್ಳದೇ, ನಾವು ಹೇಗಿದ್ದೇವೋ ಅದನ್ನೇ ಒಪ್ಪಿಕೊಂಡು ಬದುಕುವುದು ಉತ್ತಮ.

hemicalಇನ್ನೂ ಕೆಲವರು ಗುಳಿಗೆ ಮತ್ತು ಪುಡಿಗಳ ರೂಪದಲ್ಲಿ ರಾಸಾಯನಿಕ ವಸ್ತುಗಳನ್ನು ಸೇವಿಸಿ ಹಲವರು ತೂಕ ಇಳಿಸಿಕೊಂಡಿರುವ ಉದಾಹರಣೆ ಇದ್ದರೂ, ಅದರಿಂದ ಸದ್ಯಕ್ಕೆ ಜೀವಕ್ಕೆ ಅಪಾಯ ಇಲ್ಲದೇ ಇದ್ದರೂ, long term ನಲ್ಲಿ ಖಂಡಿತವಾಗಿಯೂ ಅದರ ಅಡ್ಡಪರಿಣಾಮವನ್ನು ಅನುಭವವಿಸಲೇ ಬೇಕಾಗುತ್ತದೆ. Thyroid, BP, sugar ಮುಂತಾದವುಗಳಿಗೆ ಕಟ್ಟು ನಿಟ್ಟಿನ ಆಹಾರ, ನಿಯಮಿತವಾದ, ಅಷ್ಟೇ ಹಿತಮಿತವಾದ ವ್ಯಾಯಾಮ ಮಾಡಿಕೊಳ್ಳುವ ಮೂಲಕ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ. There is no shortcut for success in life ಎನ್ನುವುದನ್ನು ಮನಗಂಡು ಬೇಸಿಗೆಯಲ್ಲಿ ಒಣಗುವ, ಚಳಿಯಲ್ಲಿ ಬೆದರುವ ಈ ಹುಲುಶರೀರಕ್ಕೆ ? ಒಂದು ದಿನ ಜೀವನ ಮುಗಿಸಲೇ ಬೇಕಾದ ಈ ಶರೀರಕ್ಕೆ ಅನಗತ್ಯವಾದ ಹಿಂಸೆಯನ್ನು ತೆಗೆದುಕೊಳ್ಳದೇ ಆರಾಮಾಗಿ ಇರೋಣ. ಜೀವ ಇದ್ದಲ್ಲಿ ಮಾತ್ರವೇ ಜೀವನ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಕೊರೋನ ಗಿರೋನಾ ಏನೂ ಇಲ್ಲಾ! ಎಲ್ಲಾ ಬರೀ ಮೆಡಿಕಲ್ ಮಾಫಿಯಾ!

ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ವಿದ್ಯಾರಣ್ಯಪುರದಲ್ಲಿ ಪ್ರತೀ ತಿಂಗಳ 2ನೇ ಮತ್ತು4ನೇ ಭಾನುವಾರ ಸಾವಯವ ಸಂತೆ ಸುಮಾರು 3 ವರ್ಷಗಳಿಂದಲೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದ್ದು ಲಾಕ್ಡೌನ್ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿತ್ತು. ಹಂತ ಹಂತವಾಗಿ ಲಾಕ್ದೌನ್ ತೆರೆದ ನಂತರ ಸಂತೆ ಪುನರ್ ಅರಂಭಿಸಿದರೂ ಹಿಂದಿನಷ್ಟು ಜನ ಸಂದಣೆ ಇಲ್ಲದೇ ಹೋದರೂ ಗ್ರಾಹಕರಿಗೂ ಮತ್ತು ವ್ಯಾಪಾರಿಗಳಿಗೂ ಮೆಚ್ಚುವಂತೆ ನಡೆದುಕೊಂಡು ಹೋಗುತ್ತಿತ್ತು. ಎರಡು ವಾರಗಳ ಹಿಂದೆ ವಾರಾಂತ್ಯದ ಕರ್ಫೂ ಇದ್ದರೂ, ಜನರು ಎಂದಿನಂತೆ ಬಂದಿದ್ದ ಕಾರಣ ಈ ವಾರ ಹೇಗೂ ಕರ್ಫೂ ಇಲ್ಲದಿದ್ದ ಕಾರಣ ಜನರು ಇನ್ನೂ ಹೆಚ್ಚಿಗೆ ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಸಂತೆಯ ದಿನ ನಮಗೆಲ್ಲರಿಗೂ ಅಚ್ಚರಿ ಎನ್ನುವಂತೆ ಕಡಿಮೆ ಜನರು ಬಂದಾಗ ನಮ್ಮ ಗುಂಪಿನಲ್ಲಿ ಈ ಕುರಿತಂತೆ ಚರ್ಚಿಸಿದಾಗ ತಿಳಿದು ಬಂದ ವಿಷಯವೇನೆಂದರೆ ಇದೇ ಬುಧವಾರ ಗಣರಾಜ್ಯೋತ್ಸವದ ರಜೆ ಇರುವ ಕಾರಣ ಸೋಮವಾರ, ಮಂಗಳವಾರ ರಜೆ ಹಾಕಿ ಒಟ್ಟಿಗೆ ಶನಿವಾರದಿಂದ ಬುಧವಾರ 5 ದಿನಗಳ ಕಾಲ ಮಜಾ ಮಾಡಲೆಂದು ಹೊರ ಊರುಗಳಿಗೆ ಹೋಗಿದ್ದ ವಿಷಯ ತಿಳಿದು ಆಶ್ಚರ್ಯದ ಜೊತೆಗೆ ಮರುಕವೂ ಆಯಿತು.

ಕಳೆದ ಎರಡು ವರ್ಷಗಳಿಂದ ಇಡೀ ಪ್ರಪಂಚಕ್ಕೇ ವಕ್ಕರಿಸಿಕೊಂಡಿರುವ ಈ ಕೊರೋನ ಮಹಾಮಾರಿಯ ಅಲೆ-1, ಅಲೆ-2 ಈಗ ಅಲೆ-3 ರಿಂದ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರವೂ ಸಹಾ ಇದರ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಾಗದೇ ರಾತ್ರಿ ಕರ್ಫೂ ವಾರಂತ್ಯದ ಕರ್ಫೂ ಹೇರುತ್ತಾ ಅದಷ್ಟೂ ಜನರು ಸೇರುವುದನ್ನು ನಿರ್ಭಂಧಿಸಲು ಪ್ರಯತ್ನಿಸುತ್ತಿದ್ದಂತೆಯೇ ಬಹುತೇಕರು ಕೊರೋನ ಗಿರೋನಾ ಏನೂ ಇಲ್ಲಾ! ಎಲ್ಲಾ ಬರೀ ಮೆಡಿಕಲ್ ಮಾಫಿಯಾ! ಎಂದು ಪುಂಖಾನು ಪುಂಖದ ಹೇಳಿಕೆಗಳನ್ನು ಕೊಡುತ್ತಿರುವುವದು ಇತ್ತಿಚೆಗೆ ಸಮಾಜಿಕ ಜಾಲತಾಣಗಳಲ್ಲಿ ಸರ್ವೇ ಸಮಾನ್ಯವಾಗಿದೆ. ಜನಸಾಮಾನ್ಯರು ಹೀಗೆ ಹೇಳಿದರೆ ಪರವಾಗಿಲ್ಲ ಎನ್ನಬಹುದು ಅದರೆ ಅದೆಷ್ಟೋ ವೈದ್ಯರು ಮತ್ತು ಸರ್ಕಾರದಲ್ಲಿ ಮಂತ್ರಿಗಳಾಗಿರುವವರೇ ಈ ರೀತಿಯಾಗಿ ಹೇಳಿದಾಗ ಜನರಿಗೆ ಯಾರನ್ನು ನಂಬುವುದು ಮತ್ತು ಯಾರನ್ನು ಬಿಡುವುದು ಎನ್ನುವುದು ನಿಜಕ್ಕೂ ಕಷ್ಟವಾಗಿದೆ.

ನಿಜ ಹೇಳಬೇಕೆಂದರೆ ಕೊರೋನಾದ ಅಸ್ಥಿತ್ವವನ್ನು ಪ್ರಶ್ನಿಸುವುದು ಒಂದು ರೀತಿಯಲ್ಲಿ ಭಗವಂತನ ಅಸ್ಥಿತ್ವವನ್ನು ಪ್ರಶ್ನಿಸಿದಂತೆಯೇ ಎಂದರೂ ಅತಿಶಯವಲ್ಲ. ಭಗವಂತ ಮತ್ತು ಕೋರೋನಾ ಇಬ್ಬರೂ ಕಣ್ಣಿಗೆ ಕಾಣಿಸುವುದಿಲ್ಲವಾದರೂ ಅವರ ಪ್ರಭಾವವಂತೂ ಇದ್ದೇ ಇದೆ ಎನ್ನುವುದಂತೂ ಸತ್ಯ. ಅದರಲ್ಲೂ ಕೊರೋನಾ ಬಂದು ಅದರ ತೀವ್ರತೆಯನ್ನು ಅನುಭವಿಸಿದಂಹವರಿಗೆ ಅದರ ನಿಜವಾದ ಅನುಭವದ ಅರ್ಥವಾಗುತ್ತದೆ.

ಕೊರೋನಾ ಮನೆಯಿಂದ ಹೊರಗೆ ಹೋದಲ್ಲಿ ಮಾತ್ರವೇ ಬರುತ್ತದೆ ಎಂಬ ನಿಯಮವೇನೂ ಇಲ್ಲಾ. ಮನೆಯಲ್ಲಿದ್ದರೂ ಕೊರೋನಾ ಬರಬಹುದು ಎನ್ನುವುದಕ್ಕೆ ನನ್ನ ಸ್ವಂತ ಅನುಭವವೇ ಸಾಕ್ಷಿ. ಕೆಲವೇ ಕೆಲವು ಆತ್ಮೀಯರೊಂದಿಗೆ ನನ್ನ 50ನೇ ಹುಟ್ಟು ಹಬ್ಬ ಮತ್ತು ನನ್ನ ಚೊಚ್ಚಲು ಪುಸ್ತಕದ ಬಿಡುಗಡೆಯನ್ನು ಮಾಡಿ ಸಂಭ್ರಮಿಸಿದ ಎರಡೇ ದಿನಗಳ ನಂತರ ಗಂಟಲು ನೋವು ಸಣ್ಣದಾಗಿ ಕಾಣಿಸಿಕೊಂಡಾಗ ಬಿಸಿನೀರಿಗೆ ಉಪ್ಪನ್ನು ಹಾಕಿಕೊಂಡು ಮುಕ್ಕಳಿಸುತ್ತಿದ್ದ ಸಂದರ್ಭದಲ್ಲೇ, ಮನೆಗೆ ಬಂದಿದ್ದ ಆತ್ಮೀಯರ, ನೆನ್ನೆ ಸಂಜೆ ನನಗೆ ಕೋವಿಡ್ ಸೋಂಕು ತಗುಲಿದೆ ಎಂದು ಧೃಢಪಟ್ಟಿರುವ ಕಾರಣ ನೀವೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಸಂದೇಶ ನೋಡಿದೊಡನೆಯೇ ನನ್ನ ಜಂಘಾಬಲವೇ ಅಡಗಿದ್ದಂತೂ ಸುಳ್ಳಲ್ಲ. ಕೂಡಲೇ ನಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿದಾಗ ಜ್ವರ ಏನೂ ಹೆಚ್ಚಾಗಿರದಿದ್ದ ಕಾರಣ ಗಂಟಲು ನೋವಿಗೆ ಔಷಧಿಯನ್ನು ಬರೆದುಕೊಟ್ಟು ಮುಂಜಾಗೃತಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದೊಡನೆಯೇ ಮನೆಯಲೆಲ್ಲ ಗಾಭರಿ. ಆ ರಾತ್ರಿಯಿಂದಲೇ ಮನೆಯಲ್ಲಿ ಮುಟ್ಟಾದ ಹೆಂಗಸರನ್ನು ಮೂಲೆಯಲ್ಲಿಡುವಂತೆ ನನ್ನ ಅನುಭವ.

ಇಡೀ ರಾತ್ರಿ ಆತಂಕದಲ್ಲೇ ಕಳೆದು ಮಾರನೇಯ ದಿನ ಪರೀಕ್ಷೆ ಮಾಡಿಸಿಕೊಂಡು ಸೋಂಕು ತಗುಲಿರುವುದು ಧೃಢಪಟ್ಟ ಕೂಡಲೇ ನನ್ನ ಸಂಪರ್ಕಕ್ಕೆ ಬಂದವರೆಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಸಂದೇಶ ಕಳುಹಿಸಿ ಇಡೀ ಮನೆಯವರೆಲ್ಲರಿಗೂ ಪರೀಕ್ಷೆ ಮಾಡಿಸಿ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಯುವಷ್ಟರಲ್ಲಿ ಬಿಬಿಎಂಪಿ ಅವರ ನಿರಂತರ ಕರೆ. ನೀವು ಆಸ್ಪತ್ರೆಗೆ ಸೇರಿಕೊಳ್ಳುತ್ತೀರೋ ಇಲ್ಲವೇ ಮನೆಯಲ್ಲೇ ಪ್ರತ್ಯೇಕವಾಗಿ ಇರುತ್ತೀರೋ ಎಂಬ ಪ್ರಶ್ನೆಗೆ, ಅದಾಗಲೇ ಅಸ್ಪತ್ರೆ ಸಿಗದೇ ಎಲ್ಲೋ ದೂರ ದೂರದ ಆಸ್ಪತ್ರೆಗಳೋ ಇಲ್ಲವೆ ಐಸೋಲೇಷನ್ ಸೆಂಟರ್ ಬಗ್ಗೆ ಕೇಳಿ ತಿಳಿದಿದ್ದ ನನಗೆ. ನಮ್ಮ ಮನೆಯಲ್ಲೇ ಎಲ್ಲಾ ಸೌಲಭ್ಯ ಇರುವ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳಿ ಮಗನ ಬಳಿ ಅಗತ್ಯವಿದ್ದ ಔಷಧಗಳನ್ನು ತರಿಸಿಕೊಂಡು ನನ್ನದೇ ಕೋಣೆಯಲ್ಲಿ ಪ್ರತ್ಯೇಕವಾಗಿ 2 ವಾರಗಳ ಕಾಲ ಉಳಿಯಲು ನಿರ್ಧರಿಸಿದೆ.

ಆರಂಭದ ಮೂರ್ನಾಲ್ಕು ದಿನಗಳ ಕಾಲ ಜ್ವರವಿದ್ದು ನಂತರ ನಿಧಾನವಾಗಿ ಜ್ವರ ತಗ್ಗಿತಾದರೂ ವಿಪರೀತವಾದ ಕೆಮ್ಮು ನಿಲ್ಲಲೇ ಇಲ್ಲ. ಪ್ರತೀ ಬಾರಿ ಕೆಮ್ಮಿದಾಗಲೂ ಕರಳು ಕಿತ್ತು ಬರುವಷ್ಟು ಯಾತನೆ. ಕಣ್ಣಿನಲ್ಲಿ ನನಗೇ ಅರಿವಿಲ್ಲದಂತೆ ಧಾರಾಕಾರವಾದ ಕಣ್ಣಿರು. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ನತದೃಷ್ಟರಲ್ಲಿ ನಾನೂ ಒಬ್ಬನಾಗಿದ್ದ ಕಾರಣ, ತಿಂಗಳಿನ ಸಂಬಳವನ್ನೇ ನೆಚ್ಚಿಕೊಂಡು ಎಣಿಸಿದ ಕಜ್ಜಾದಂತೆ, ಮನೆ ಸಾಲ, ಕಾರ್ ಸಾಲ, ಮಕ್ಕಳ ಕಾಲೇಜ್ ಫೀ ನಂತರ ಮನೆಯ ನಿರ್ವಹಣೆ ಎಲ್ಲವೂ ನಡೆಯಬೇಕಾದದ್ದು ಈಗ ಏಕಾ ಏಕಿ ಕೆಲಸ ಹೋದ ನಂತರ ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎನ್ನುವಂತೆ ಉಳಿಸಿದ್ದ ಹಣವೆಲ್ಲವೂ ಆರು ತಿಂಗಳಷ್ಟರಲ್ಲಿ ಬರಿದಾಗುತ್ತಿದ್ದಾಗಲೇ ಈ ಕೊರೋನಾ ಮಹಾಮಾರಿ ವಕ್ಕರಿಸಿದ ನಂತರ ಬರುತ್ತಿದ ಕನಸುಗಳು ನಿಜಕ್ಕೂ ಹೇಳಿಕೊಳ್ಳಲಾಗದು.

ಅಷ್ಟರಲ್ಲಾಗಲೇ ಕೋವಿಡ್ ನಿಂದಾಗಿ ಅತೀ ಹತ್ತಿರದ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡಿದ್ದರಿಂದ ಎಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರೂ ಕಾಡುತ್ತಿದ್ದ ಭಯ ನಿಜಕ್ಕೂ ಭಯಾನಕ. ಜೀವನ ಎಂದರೆ ಇಷ್ಟೇನಾ? ಮಕ್ಕಳು ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸಕ್ಕೆ ಹೋಗುತ್ತಿದ ಮಡದಿಯನ್ನೂ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೆಲಸ ಬಿಡಿಸಿದ್ದೆನೆ. ಕೈಯ್ಯಲ್ಲಿ ಕೆಲಸವಿಲ್ಲ. ಸ್ಥಿರಾಸ್ತಿ ಮಾಡಿದ್ದೇನಾದರು ಸದ್ಯಕ್ಕೆ ಸಿಗುವಂತ ಚರಾಸ್ತಿ ಏನೂ ಉಳಿದಿಲ್ಲ, ನಾನು ಹೋಗಿ ಬಿಟ್ಟರೆ ಮನೆಯವರನ್ನೆಲ್ಲಾ ಯಾರು ನೋಡಿಕೊಳ್ಳುತ್ತಾರೆ? ಮಾಡಿಸಿದ ಜೀವವಿಮೆಗಳನ್ನು ಅವರಿಗೆ ಸಾಲುತ್ತದೆಯೇ? ಆ ವಿಮೆಯನ್ನು ಪಡೆದುಕೊಳ್ಳಲು ಇವರಿಗೆ ಬರುತ್ತದೆಯೇ? ಹೀಗೇ ಎಲ್ಲರೂ ಋಣಾತ್ಮಕ ಚಿಂತನೆಗಳೇ ಮನಸ್ಸಿನಲ್ಲಿ ಮೂಡಿ ಬಾರೀ ಭಯವನ್ನು ಮೂಡಿಸುವ ಮೂಲಕ ಈ ಕ್ಷಣಿಕ ಬದುಕಿನ ಬಗ್ಗೆ ಯೋಚಿಸುವಂತೆ ಮಾಡಿತ್ತು.

ಹೌದು ನಿಜ. ಕೊರೋನಾ ಖಾಯಿಲೆ ಆರಂಭದಲ್ಲಿ ಜನರು ಉಡಾಫೆಯಿಂದ ಆಂಡಲೆದ ಕಾರಣ ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಸೊಂಕು ಅತಿ ವೇಗವಾಗಿ ಹರಡಿದಾಗ ಮೆಡಿಕಲ್ ಮಾಫಿಯಗಳು ಅದರ ದುರ್ಲಾಭವನ್ನು ಪಡೆದುಕೊಂಡಿದ್ದೂ ಸುಳ್ಳಲ್ಲ.

 • ಬೇಕೋ ಬೇಡವೋ ಎಲ್ಲರಿಗೂ ಗಾಭರಿಯನ್ನು ಹುಟ್ಟಿಸಿ ICUಗೆ ತಳ್ಳಿ ಒಂದಕ್ಕೆ ನಾಲ್ಕರಷ್ಟು ಪೀಕಿದ್ದಂತೂ ಸುಳ್ಳಲ್ಲ.
 • ಕೆಲವೇ ನೂರು ರುಪಾಯಿಗಳಲ್ಲಿ ದೊರಕುತ್ತಿದ್ದ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ಗಳು ಕಾಳ ಸಂತೆಯಲ್ಲಿ ಸಾವಿರಾರು ರೂಪಾಯಿಗಳಿಗೆ ಭಿಕರಿ ಮಾಡಿದ್ದೂ ಸುಳ್ಳಲ್ಲ.
 • ಸರ್ಕಾರೀ ಮತ್ತು ಖಾಸಗೀ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೃತಕ ಅಭಾವ ಸೃಷ್ಟಿಸಿ ಬಿಬಿಎಂಪಿ ನೌಕರರು ಕಾಸು ಮಾಡಿಕೊಂಡಿದ್ದೂ ಸುಳ್ಳಲ್ಲ.
 • ಕೊರೋನದಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆಂದು ಮಾನವೀಯತೆ ಮರೆತು ಸಾವಿನ ಮನೆಯಲ್ಲೂ ಸಾವಿರಾರು ರೂಪಾಯಿಗಳನ್ನು ಆಂಬುಲೆನ್ಸ್ ಮತ್ತು ಚಿತಾಗಾರದವರು ಹೀರಿದ್ದೂ ಸುಳ್ಳಲ್ಲ.
 • ತಮ್ಮ ರಾಜಕೀಯ ಸೈದ್ಧಾಂತಿಕ ವಿರೋಧಕ್ಕಾಗಿ ಸರ್ಕಾರ ಉಚಿತವಾಗಿ ಕೊಡಲಾರಂಭಿಸಿದ ಲಸಿಕೆಯ ವಿರುದ್ಧ ಇಲ್ಲಸಲ್ಲದ್ದನ್ನು ಹೇಳಿ ಜನರ ದಿಕ್ಕು ತಪ್ಪಿಸಿ ಕದ್ದು ಮುಚ್ಚಿ ತಾವು ಲಸಿಕೆ ಹಾಕಿಸಿಕೊಂಡ ನಾಯಕರು ಇದ್ದದ್ದೂ ಸುಳ್ಳಲ್ಲ.
 • ಹೀಗೆ ಮಾನವೀಯತೆಯನ್ನು ಮರೆತು ತಾವರೆಲ್ಲರೂ ಸಾವಿರಾರು ವರ್ಷಗಳ ಕಾಲ ಈ ಭೂಮಿಯಲ್ಲಿ ಬದುಕುತ್ತೇವೆಂಬ ಭ್ರಮೆಯಲ್ಲಿ ನಾಮೇಲು ತಾಮೇಲು ಎನ್ನುತ್ತಾ ಒಬ್ಬರಿಗಿಂತ ಮತ್ತೊಬ್ಬರು ಜನರನ್ನು ಲೂಟೀ ಮಾಡಿದ್ದು ಸುಳ್ಳಲ್ಲ.
 • ಇವಿಷ್ಟರ ಮಧ್ಯೆ ಮಳೆಗಾಲದಲ್ಲಿ ದೀಪದ ಆಕರ್ಷಣೆಗೆ ಒಳಗಾಗಿ ಅಂತಿಮವಾಗಿ ತಾನೇ ಉದುರಿ ಸಾಯುವ ದೀಪದ ಹುಳದಂತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂಡೆಲೆದ ನಮ್ಮ ನೆಚ್ಚಿನ ಬಂಧುಗಳು, ಸ್ನೇಹಿತರು ಸಹಾ ಸತ್ತದ್ದೂ ಸುಳ್ಳಲ್ಲ.

corona2ಇಷ್ಟೆಲ್ಲಾ ನೋವು ಮತ್ತು ಸಂಕಟಗಳನ್ನು ಅನುಭವಿಸಿದ್ದರೂ ಜನಾ ಜೀವ ಇದ್ದರೆ ಜೀವನ ಎನ್ನುವುದನ್ನೂ ಮರೆತು ಸಮಯ ಸಿಕ್ಕ ತಕ್ಷಣವೇ ಮಹಾಮಾರಿಯೇ ಇಲ್ಲ ಎನ್ನುವಂತೆ ಎಲ್ಲವನ್ನೂ ನಿರ್ಲಕ್ಷಿಸುತ್ತಾ ಸಿಕ್ಕಾ ಪಟ್ಟೆ ಅಲೆದಾಡುವುದು ನಿಜಕ್ಕೂ ಗಾಬರಿಯನ್ನು ಹುಟ್ಟಿಸುತ್ತದೆ.

ಈ ಮಹಾಮಾರಿ ಸಾಂಕ್ರಾಮಿಕ ರೋಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕ್ಷಣ ಮಾತ್ರದಲ್ಲಿ ಹರಡುವ ಕಾರಣ, ದಯವಿಟ್ಟು ಮೂರನೇ ಅಲೆಯ ಬಗ್ಗೆ ಅವಶ್ಯವಾಗಿ ಈ ಕೆಳಕಂಡಂತೆ ಎಚ್ಚರ ವಹಿಸೋಣ.

 • corona3ಹಬ್ಬ ಹರಿ ದಿನ, ಜಾತ್ರೆ, ಪ್ರವಾಸ ಎಂದು ಆದಷ್ಟೂ ಜನಸಂದಣಿಯಿಂದ ದೂರವಿರೋಣ
 • ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗಲೇ ಬೇಕಾದಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ
 • ಮನೆಗೆ ಬಂದ ಕೂಡಲೇ, ಸಾಬೂನಿನಿಂದ ಕೈ ಕಾಲುಗಳನ್ನು ತೊಳೆದುಕೊಂಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳೋಣ
 • ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎರಡೂ ಲಸಿಕೆಗಳನ್ನು ಪಡೆದವರಿಗೆ ಮೂರನೇ ಅಲೆಯ ತೀವ್ರತೆ ಕಡಿಮೆ ಇರುವ ಕಾರಣ, ಖಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಿಕೊಳ್ಳೋಣ.
 • ಯಾರಿಗೇ ಆಗಲಿ ಕೆಮ್ಮು ಜ್ಚರ ಗಂಟಲು ನೋವಿನ ಲಕ್ಷಣ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷಿಸದೇ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು, ಪೂರಕ ಚಿಕಿತ್ಸೆಯನ್ನು ಪಡೆದುಕೊಳ್ಳೋಣ.
 • ಹಿತ ಮಿತವಾದ ಆಹಾರದ ಜೊತೆಗೆ ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಇಲ್ಲವೇ ದೀರ್ಘ ನಡಿಗೆ ಮಾಡುತ್ತಾ ಆದಷ್ಟೂ ಲವಲವಿಕೆಯಿಂದ ಇರೋಣ

corona4ಇವೆಲ್ಲದರ ನಡುವೆ ಕೊರೊನಾ ಆರ್ಭಟವೂ ಸಹಾ ಕಡಿಮೆಯಾಗುತ್ತಿದ್ದರೂ, ಹೆಚ್ಚಿನವರಿಗೆ ಈ ಚಳಿಯಲ್ಲಿ ವೈರಲ್ ಜ್ವರ, ನೆಗಡಿ ಕೆಮ್ಮು ಕಾಡುತ್ತಿರುವ ಕಾರಣ ಅದನ್ನೇ ಕೊರೋನ ಎಂದು ಭಾವಿಸಿ ಧೈರ್ಯ ಕಳೆದುಕೊಳ್ಳದೇ, ಹತ್ತಿರದ ಪರಿಚಯದ ವೈದ್ಯರ ಬಳಿಗಾದರೂ ಹೋಗಿ ಪರೀಕ್ಷೆ ಮಾಡಿಸಿಕೊಂಡು ಅದು ಕೋವಿಡ್ ಹೌದೋ ಅಲ್ಲವೋ ಎಂದು ಖಚಿತ ಪಡಿಸಿಕೊಂಡು ಅದಕ್ಕೆ ಸೂಕ್ತವಾದ ಔಷಧೋಪಚಾರಗಳನ್ನು ಪಡೆದುಕೊಂಡು ಗುಣಪಡಿಸಿಕೊಳ್ಳೋಣ.

corona5ಸರ್ಕಾರವೂ ಸಹಾ ಜನರ ಅನುಕೂಲಕ್ಕೆಂದು ಸಾಕಷ್ಟು ಮುಂಜಾಗೃತೆಯನ್ನು ತೆಗೆದುಕೊಂಡಿರುವುದಲ್ಲದೇ, ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಈಗ ಬೂಸ್ಟರ್ ಡೋಸ್ ಕೊಡುವುದಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ತಲೆ ಗಟ್ಟಿಯಾಗಿದೆ ಎಂದು ಬಂಡೆಗೆ ಚಚ್ಚಿಕೊಂಡರೆ ನಮ್ಮ ತಲೆಗೇ ಏಟಾಗುತ್ತದೆಯೇ ಹೊರತು ಬಂಡೆಗೆ ಏನಾಗುವುದಿಲ್ಲ. ಅದೇ ರೀತಿ ನಾವು ಸಹಾ ಮುಂಜಾಗೃತೆ ವಹಿಸಿದಲ್ಲಿ, ಮತ್ತೇ ಯಾವುದೇ ಮೆಡಿಕಲ್ ಮಾಫಿಯಾದ ಕೈಯಲ್ಲಿ ಸಿಕ್ಕಿಕೊಂಡು ನಮ್ಮ ಹಣ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಹಲಸಿನ ಹಣ್ಣು

jf10ವಸಂತ ಕಾಲದಲ್ಲಿ ಲಭ್ಯವಾಗುವಂತಹ ಹಲಸಿನ ಹಣ್ಣು ಎಲ್ಲರಿಗೂ ಅತ್ಯಂತ ಪ್ರಿಯವಾದ ಹಣ್ಣು ಎಂದರು ತಪ್ಪಾಗದು. ಹಲಸಿನ ಹಣ್ಣು ತನ್ನ ರುಚಿ, ಬಣ್ಣ ಮತ್ತು ಸುವಾಸನೆಗೆ ಹೆಸರುವಾಸಿಯಗಿದೆ. ಮಾಗಿದ ಹಲಸಿನ ಹಣ್ಣು ಹಾಗೇ ತಿನ್ನಲು ಯೋಗ್ಯವಾದರಲ್ಲಿ, ಹಲಸಿನ ಕಾಯಿ ಗ್ರಾಮೀಣ ಭಾಗದ ಅತ್ಯಂತ ಪ್ರಮುಖವಾದ ತರಕಾರಿಗಳಲ್ಲಿ ಒಂದಾಗಿದ್ದು ಇದನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಹಲಸಿನ ಹಣ್ಣು ಆರೋಗ್ಯಕ್ಕೂ ಬಹಳ ಒಳ್ಳೆಯದು ಎಂದು ಹೇಳಲಾಗುತ್ತಿದೆ.

jf11ಹಲಸಿನ ಕಾಯಿ ಬಳಸಿಕೊಂಡು ಪಲ್ಯ, ಹುಳಿ, ಗೊಜ್ಜನ್ನು ತಯಾರಿಸಿದರೆ, ಹಲಸಿನ ಹಣ್ಣಿನಿಂದ ಹಪ್ಪಳ, ದೋಸೆ, ರಸಾಯನ, ಚಿಪ್ಸ್ ಮುಂತಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದಾಗಿದೆ. ಪ್ರಕೃತಿದತ್ತವಾಗಿ ಸಿಗುವಂತಹ ಈ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇದ್ದು, ವಿಟಮಿನ್ ಬಿ, ಪೊಟಾಶಿಯಂ ಪ್ರೋಟೀನ್ ಮತ್ತು ನಾರಿನಾಂಶ ಇದರಲ್ಲಿ ಸಮೃದ್ಧವಾಗಿದೆ.

jf4ಹಲಸಿನ ಹಣ್ಣು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಇನ್ನು ಅದರಲ್ಲಿರುವ ವಿಟಮಿನ್ ಎ ಕಣ್ಣಿಗೂ ಸಹಾ ಒಳ್ಳೆಯದಾಗಿದೆ. ಹಲಸಿನ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬು ಇಲ್ಲದಿರುವುದರಿಂದ ತೂಕ ಇಳಿಸುವವರಿಗೆ ಅಚ್ಚು ಮೆಚ್ಚಿನ ಹಣ್ಣಗಿದೆ. ಹಲಸಿನ ಹಣ್ಣಿನಲ್ಲಿರುವ ನಾರಿನಂಶವು ಹೊಟ್ಟೆ, ಅನ್ನನಾಳದಂತಹ ಕ್ಯಾನ್ಸರನ್ನು ತಡೆಯುವುದು ಎಂದು ತಿಳಿದುಬಂದಿದೆಯಲ್ಲದೇ ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಗೂ ಸಹಕಾರಿಯಾಗಿದೆ.

bp1ಹಲಸಿನ ಹಣ್ಣಿನಲ್ಲಿರುವ ಪೊಟಾಶಿಯಂ ಅಂಶವು ಅತ್ಯಧಿಕವಾಗಿ ಇರುವ ಕಾರಣ ಇದು ರಕ್ತದೊತ್ತಡ ಕಡಿಮೆ ಮಾಡುವುದಲ್ಲದೇ ಅದನ್ನು ನಿಯಂತ್ರಣದಲ್ಲಿ ಇಡುವುದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು ಎನ್ನಲಾಗುತ್ತದೆ,

di2ಹಲಸಿನ ಹಣ್ಣು ತುಂಬಾ ಸಿಹಿಯಾಗಿ ಇರುವುದರಿಂದ ಮಧುಮೇಹಿಗಳು ಹಲಸಿನ ಹಣ್ಣನ್ನು ತಿನ್ನಬಾರದು ಎಂದೇ ಎಲ್ಲರೂ ತಿಳಿದಿದ್ದಾರೆ. ನಿಜ ಹೇಳಬೇಕೆಂದರೆ ಹಲಸಿನ ಹಣ್ಣಿನಲ್ಲಿರುವ ಸಕ್ಕರೆಯು ರಕ್ತನಾಳದಲ್ಲಿ ತುಂಬಾ ನಿಧಾನವಾಗಿ ಹೀರಿಕೊಳ್ಳುವ ಕಾರಣ ಮಧುಮೇಹಿಗಳು ಈ ಹಣ್ಣನ್ನು ತಿಂದರೆ ಯಾವುದೇ ರೀತಿಯ ತೊಂದರೆ ಇಲ್ಲವಾಗಿದೆ.

 • ಕಣ್ಣು ಮತ್ತು ಚರ್ಮವನ್ನು ರಕ್ಷಿಸುವುದು
 • ಬಿಸಿಲಿನಿಂದ ಆಗಿರುವ ಹಾನಿ ಮತ್ತು ನೆರಿಗೆ ಕೂಡ ನಿವಾರಣೆ ಮಾಡುವುದು.
 • ಹೊಟ್ಟೆಯಲ್ಲಿ ಆಗುವ ಹುಣ್ಣು(ಅಲ್ಸರ್) ನಿವಾರಣೆ ಮಾಡುತ್ತದೆ.
 • ಹಲಸಿನ ಹಣ್ಣಿನಲ್ಲಿ ಇರುವಂತಹ ಕ್ಯಾಲ್ಸಿಯಂ ಮೂಳೆಗಳಿಗೆ ಬಲನೀಡುವುದು.
 • ನಿಶ್ಯಕ್ತಿ, ಒತ್ತಡ ಮತ್ತು ಸ್ನಾಯುಗಳಲ್ಲಿನ ದುರ್ಬಲತೆಯನ್ನು ಹಲಸಿನ ಹಣ್ಣು ಸೇವಿಸುವ ಮೂಲಕ ನಿವಾರಣೆ ಮಾಡಬಹುದಾಗಿದೆ.

ಹಲಸಿನ ಹಣ್ಣಿನ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಲೇ ಹೋದರೆ ಪುಟಗಟ್ಟಲೇ ಬರೆಯಬಹುದೇನೋ?

jf1ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಹಲಸಿನ ಹಣ್ಣಿನ ಒಳಗೆ ಎಷ್ಟು ತೊಳೆಗಳು ಇರುತ್ತವೆ? ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದು ಹಲಸಿನ ಹಣ್ಣು ಕತ್ತರಿಸಿದಾಗಲೇ ಅದರಲ್ಲಿರುವ ತೊಳೆಗಳನ್ನು ತಿಳಿಯಬಹುದಾಗಿದೆ ಎನ್ನುವುದೇ ಎಲ್ಲರ ನಂಬಿಕೆಯಾಗಿದೆ, ಅನೇಕ ಬಾರಿ ನೋಡಲು ಬಹಳ ದೊಡ್ಡದಾಗಿರುವ ಹಣ್ಣಿನೊಳಗೆ ಕಡಿಮೆ ತೊಳೆಗಳು ಮತ್ತುಸಣ್ನದಾಗಿ ಕಾಣಿಸುವ ಹಣ್ಣಿನಲ್ಲಿ ಬಹಳ ತೊಳೆಗಳು ಇರುವ ಮೂಲಕ ಅಚ್ಚರಿ ಮೂಡಿಸುತ್ತದೆ.

ಅಚ್ಚರಿಯ ವಿಷಯವೇನೆಂದರೆ ಹಲಸಿನ ಹಣ್ಣುಗನ್ನು ನೋಡಿದ ಕೂಡಲೇ ಅದರೊಳಗೆ ಎಷ್ಟು ಹಣ್ಣುಗಳಿವೆ? ಎಂಬುದನ್ನು ಕರಾರುವಾಕ್ಕಾಗಿ ಸುಲಭವಾಗಿ ತಿಳಿದುಕೊಳ್ಳಬಹುದಾದ ಅಚ್ಚರಿಯ ಸಂಗತಿಯನ್ನು ನಮ್ಮ ಪೂರ್ವಜರು ನಮಗೆ ತಿಳಿಸಿಕೊಟ್ಟಿದ್ದಾರೆ

ಹಲಸಿನ ಹಣ್ಣಿನ ತೊಟ್ಟಿನ ಸುತ್ತ ಇರುವ ಮೊದಲ ಸಾಲಿನ ಮುಳ್ಳುಗಳನ್ನು ಒಮ್ಮೆ ಎಣಿಸಿ ಅದನ್ನು 6 ರಿಂದ ಗುಣಿಸಿ ಬರುವ ಸಂಖ್ಯೆಯನ್ನು 5 ರಿಂದ ಭಾಗಿಸಿದಾಗ ಬರುವ ಸಂಖ್ಯೆಯಷ್ಟು
ತೊಳೆಗಳು ಆ ಹಣ್ಣಿನಲ್ಲಿ ಇರುತ್ತದೆ ಎನ್ನಲಾಗುತ್ತದೆ.

jf10ಉದಾಹರಣೆಗೆ ಇಲ್ಲಿ ಕಾಣುತ್ತಿರುವ ಹಣ್ಣಿನ ತೊಟ್ಟಿನ ಸುತ್ತಲು ಮೊದಲ ಸಾಲಿನಲ್ಲಿ 60 ಮುಳ್ಳುಗಳಿದ್ದು ಅದನ್ನು 60×6=360, ನಂತರ 360/5=72 ತೊಳೆಗಳು ಈ ಹಣ್ಣಿನಲ್ಲಿ ಇರುತ್ತದೆ ಎಂದು ತಿಳಿಯಬಹುದಾಗಿದೆ.

ನಿಜವಾಗಲೂ ಈ ಸಂಗತಿ ಎಲ್ಲರಿಗೂ ಅಚ್ಚರಿ ಮೂಡಿಸಿರಬೇಕು ಅಲ್ವೇ? ಇನ್ನೇಕೆ ತಡಾ ಮುಂದಿನ ಬಾರಿ ಹಲಸಿನ ಹಣ್ಣನ್ನು ಕೊಯ್ಯುವ ಮೊದಲು ಇದನ್ನೊಮ್ಮೆ ಪರೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸ್ತೀರಿ ತಾನೇ?

ಇಂತಹ ಇನ್ನಷ್ಟು ಕುತೂಹಲ ಮಾಹಿತಿಗಾಗಿ ನಮ್ಮ ಛಾನಲ್ಲನ್ನು like ಮಾಡಿ Subscribe ಮಾಡಿ share ಮಾಡೋದನ್ನಂತೂ ಮರೀ ಬೇಡಿ.

ಏನಂತಿರೀ?
ನಿಮ್ಮವನೇ ಉಮಾಸುತ

ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್ ನಿನಗ್ ಇಷ್ಟಾ ಇಲ್ಲೇನ್? ಎಂದು ಹೇಳಿ ಅಮೇರಿಕಾದ ಆಹಾರ ಪದ್ದತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿಸಿದ್ದದ್ದನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿ ಮತ್ತು ಆಶ್ಚರ್ಯವಾಗಿದ್ದಲ್ಲದೇ, ನನಗೇ ಅರಿವಿಲ್ಲದಂತೆಯೇ ನಮ್ಮ ಆಹಾರ ಪದ್ದತಿಗಳ ಬಗ್ಗೆ ಹೆಮ್ಮೆ ಮೂಡಿದ್ದಂತೂ ಸತ್ಯ.

mcdನನ್ನ ಸ್ನೇಹಿತನೇ ಹೇಳಿದಂತೆ, ಅಮೆರಿಕಾದಲ್ಲಿ ಎಲ್ಲರೂ ಸಿರಿವಂತರೇನಲ್ಲ, ಅಲ್ಲಿಯೂ ಸಹಾ ಅತ್ಯಂತ ಬಡ ಕಾರ್ಮಿಕ ವರ್ಗದವರು ಇದ್ದು ಅವರೆಲ್ಲರೂ ತಮ್ಮ ದಿನ ನಿತ್ಯದ ಆಹಾರವಾಗಿ  ಮೆಕ್ಡೊನಾಲ್ಡ್ಸ್, ಕೆ.ಎಫ್.ಸಿ  ಪಿಜ್ಜಾ ಹಟ್ ಗಳಿಂದ ಬರ್ಗರ್, ಚಿಕನ್ ಮತ್ತು ಪಿಜ್ಜಾಗಳಂತಹ  ಜಂಕ್ ಫುಡ್ ಅಂದರೆ ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಚಿಸಿಕೊಂಡರೆ, ಅಮೆರಿಕ ಮತ್ತು ಯುರೋಪಿನ ಸಿರಿವಂತ  ಮಿಲಿಯನೇರ್ಗಳು ಮಾತ್ರಾ ತಾಜಾ ತರಕಾರಿಗಳನ್ನು ಬೇಯಿಸಿ ತಿನ್ನುತ್ತಾರೆ. ಅಲ್ಲಿ  ತಾಜಾ ಹಿಟ್ಟಿನಿಂದ ತಯಾರಿಸಿದ ಬಿಸಿ ಬಿಸಿ ಬ್ರೆಡ್ (ರೊಟ್ಟಿ)ಗಳ ಜೊತೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಲಾಡ್ ಗಳನ್ನು ತಿನ್ನುವವರು ನಿಜಕ್ಕೂ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಂದರೆ ಅಲ್ಲಿ ಶ್ರೀಮಂತರಿಗೆ ಮಾತ್ರ ತಾಜಾ ತರಕಾರಿಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ.

ದುರಾದೃಷ್ಟವಷಾತ್ ಬಡ ಜನರು ಮಾತ್ರಾ  ಪ್ಯಾಕೇಜ್ ಮಾಡಿದ ಆಹಾರವನ್ನು ತಿನ್ನುತ್ತಾರೆ. ವಾರಕ್ಕೊಮ್ಮೆ ತಮಗೆ ಅವಶ್ಯಕವಾಗಿರುವ ಆಹಾರವನ್ನು ಖರೀದಿಸಿ ಅವುಗಳನ್ನು  ಫ್ರೀಜರ್ನಲ್ಲಿ ಇಟ್ಟುಕೊಂಡು ಅಗತ್ಯವಿದ್ದಾಗ  ಮೈಕ್ರೋ ವೇವ್ ಒಲೆಯಲ್ಲಿ ಬಿಸಿ ಮಾಡಿ ಸೇವಿಸುತ್ತಾರೆ.

kfcಆದರೆ ಅದೇ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿ, ಶ್ರೀಮಂತರು ಇತ್ತೀಚೆಗೆ ತಮ್ಮ ಮನೆಗಳ ಫ್ರೀಜರ್ಗಳಲ್ಲಿ ಇದೇ ಪ್ಯಾಕ್ಡ್ ಜಂಕ್ ಪುಡ್ ಗಳನ್ನು ಸಂಗ್ರಹಿಸಿಕೊಳ್ಳುವುದು ಐಶಾರಾಮ್ಯ ಎಂದು ಭಾವಿಸಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ಇಷ್ಟಕ್ಕೇ ಸೀಮಿತವಾಗಿರಿಸದೇ,  ಮಕ್ಕಳ ಹುಟ್ಟುಹಬ್ಬ ಅಥವಾ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಇದೇ  ಮೆಕ್ಡೊನಾಲ್ಡ್ಸ್ ಪಿಜ್ಜಾ ಹಟ್ , ಕೆ.ಎಫ್.ಸಿಗಳಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಅದೇ  ಅಮೆರಿಕದಲ್ಲಿನ  ಶ್ರೀಮಂತರು ಬಿಡಿ ಯಾವುದೇ, ಮಧ್ಯಮ ವರ್ಗದವರೂ ಸಹಾ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಈ ಜಂಕ್ ಪುಡ್ ಜಾಯಿಂಟ್ಸ್ ಗಳಲ್ಲಿ ಆಚರಿಸಲು ಇಚ್ಚಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.

ft1ಅದೇ ಭಾರತದ ಪ್ರತೀ ಬಡವರ ಮನೆಗಳಲ್ಲಿಯೂ ತಾಜಾ ತಾಜವಾಗಿ ತಯಾರಿಸಿದ ಬಿಸಿ ಬಿಸಿ ರೊಟ್ಟಿ, ಅನ್ನದೊಂದಿಗೆ ತಾಜಾ ತರಕಾರಿಗಳಿಂದ ತಯಾರಿಸಿದ ಪಲ್ಯಗಳು, ವಿಧ ವಿಧವಾದ ದಾಲ್ ಮತ್ತು ತಾಜಾವಾದ ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿಗಳ ಜೊತೆ ಇಡೀ ಮನೆಯವರೆಲ್ಲಾ ಒಟ್ಟಾಗಿ ಸಂತೋಷದಿಂದ ಆಹಾರವನ್ನು ಸೇವಿಸುತ್ತಾರೆಯೇ ಹೊರತು ಶೈತ್ಯೀಕರಿಸಿದ ಆಹಾರವನ್ನು ಸೇವಿಸುವುದಿಲ್ಲ, ಸೇವಿಸುವುದಿಲ್ಲ ಎನ್ನುವುದಕ್ಕಿಂತ ಅಂತಹ ಆಹಾರ ಪದಾರ್ಥಗಳನ್ನು ಖರೀದಿಸಲು ಶಕ್ತರಾಗಿಲ್ಲ ಎನ್ನುವುದು ವಾಸ್ತವಾಂಶವಾಗಿದೆ.

junkಅಂಧ ಪಾಶ್ಚಾತ್ಯೀಕರಣದಿಂದ ಐಶಾರಾಮ್ಯದ ಸಂಕೇತ ಎಂದು ಪ್ಯಾಕ್ಡ್ ಆಹಾರ ತಿನ್ನುವುದು ನಿಜಕ್ಕೂ ಗುಲಾಮಗಿರಿಯ ಮನಸ್ಥಿತಿ ನಮ್ಮವರದ್ದು ಎಂದರೂ ತಪ್ಪಾಗದು.  ಯುರೋಪ್, ಅಮೇರಿಕಾ ದೇಶದ ಜನರು ನಮ್ಮ ಜನಸಾಮಾನ್ಯರಂತೆ ತಾಜಾ ಆಹಾರವನ್ನು ತಿನ್ನಲು ಹಂಬಲಿಸುತ್ತಿದ್ದರೆ, ಅದೇ ನಮ್ಮವರು ಅಲ್ಲಿಯ ಬಡ ಜನರಂತೆ ಫ್ರಿಜ್ನಲ್ಲಿ ಇರಿಸಲಾಗಿರುವ ಹಳೆಯ ಪ್ಯಾಕ್ ಮಾಡಿದ ಆಹಾರವನ್ನು ತಿನ್ನಲು ಹಂಬಲಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತಿದೆ. ಇಲ್ಲಿ ಬಡವ ಬಲ್ಲಿದ ಎನ್ನುವುದಕ್ಕಿಂತಲೂ, ಜಂಕ್ ಆಹಾರ ದೇಹಕ್ಕೆ ಅನಾರೋಗ್ಯಕ್ಕೆ ಈಡು ಮಾಡಿದರೆ, ಅದೇ ತಾಜಾ ಆಹಾರ ತಿನ್ನುವುದು ಆರೋಗ್ಯಕರ ಎನ್ನುವುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ.

ph2ಇಲ್ಲಿ ನಮಗೆ ಸುಲಭವಾಗಿ ಲಭ್ಯವಿರುವ ಆಹಾರಗಳನ್ನು ನಾವು ಲಘುವಾಗಿ ಪರಿಗಣಿಸಿ, ಅಲ್ಲಿನ ಬಡತನದ ಆಹಾರವನ್ನು  ಅಳವಡಿಸಿಕೊಳ್ಳಲು ನಾವು ಬಯಸಿದರೇ, ಅದೇ  ಅಮೇರಿಕನ್ನರು ನಮ್ಮ ಜನಸಾಮಾನ್ಯರ ಆಹಾರಗಳನ್ನು ಸೇವಿಸುವುದು  ಐಷಾರಾಮ್ಯ  ಎಂದು ಭಾವಿಸುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ತಾಜಾ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಹವಾಮಾನ ಮತ್ತು ಬೆಳೆಗಳನ್ನು ಅವಲಂಬಿತವಾಗಿ ಏರಿಳಿತ ಕಂಡರೆ, ಪ್ಯಾಕೇಜ್ ಮಾಡಿದ ಆಹಾರದ ಬೆಲೆಗಳು ವರ್ಷಪೂರ್ತಿ ಸ್ಥಿರವಾಗಿರುವುದಲ್ಲದೇ, ಅವುಗಳ ಗಡುವು ದಿನಾಂಕಗಳು ಹತ್ತಿರ ಬರುತ್ತಿದ್ದಂತೆ,ಬೆಲೆಗಳು ಅಗ್ಗವಾಗುತ್ತದೆ. ಡಬ್ಬಿಯಲ್ಲಿಟ್ಟ ಆಹಾರವು ಕೆಟ್ಟು ಹೋಗುವ ಸಂಭವವಿರುವ ಕಾರಣ ವ್ಯಾಪಾರಿಗಳು ಕೆಲವೊಮ್ಮೆ ಉಚಿತವಾಗಿಯೂ ಹಂಚುವ ಉದಾಹರಣೆಗಳನ್ನು ನೋಡಬಹುದಾಗಿದೆ. ಅನೇಕ ಬಾರಿ ಈ ರೀತಿಯ ಉಚಿತವಾದ ಆಹಾರಗಳನ್ನು ಪಡೆಯಲು ಅಂಗಡಿಯ ಮುಂದೆ ತಡರಾತ್ರಿಯವರೆಗೂ ಸಾವಿರಾರು ಜನರು ಲಗ್ಗೆ ಹಾಕಿ ಪರಸ್ಪರ ಹೊದೆದಾಡಿರುವ ಪ್ರಸಂಗಳಿಗೇನೂ ಕಡಿಮೆ ಏನಿಲ್ಲ.

ff1ಅದೇ 135+ ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ  ಇಲ್ಲಿಯವರೆಗೆ ತಾಜಾ ಹಣ್ಣು ಮತ್ತು ತರಕಾರಿಗಳಿಗೆ ಅಂತಹ ಕೊರತೆ ಇರದೇ ಋತುಗಳ ಅನುಸಾರವಾಗಿ ಅಲ್ಪಪ್ರಮಾಣದ ಬೆಲೆ ಏರಿಕೆಗಳೊಂದಿಗೆ ಲಭ್ಯವಿರುವ ಕಾರಣ ನಮ್ಮ ದೇಶದ ಸಾಮಾನ್ಯ ಜನರೂ ತಾಜಾ ತಾಜವಾದ ಶುಚಿ ಮತ್ತು ರುಚಿ ಯಾದ  ಆಹಾರವನ್ನು ಸೇವಿಸುವಷ್ಟು  ಅದೃಷ್ಟಪಡೆದಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದುರಾದೃಷ್ಟವಷಾತ್ ಗುಲಾಮೀ ದಾಸ್ಯತನದಿಂದ ಮತ್ತು ಪ್ರತಿಷ್ಟೆಯ ಸಂಕೇತ ಎಂದು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಹಲವರು  ಶ್ರೀಮಂತಿಕೆಯ ಪ್ರತೀಕ ಎಂದು ಬಹುದಿನ ಕೆಡದಂತೆ ರಾಸಾಯನಿಕ ಸಂರಕ್ಷಕಗಳನ್ನು ಬೆರೆಸಿ ಪ್ಯಾಕೇಜ್ ಮಾಡಿದ ಆಹಾರಕ್ಕೆ ಜೋತು ಬೀಳುತ್ತಿರುವ ಮೂಲಕ ವಿನಾಕಾರಣ ತಮ್ಮ ಮೇಲೆ ತಾವೇ ಅನಾರೋಗ್ಯವನ್ನು ಹೇರಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ.

rotimakingನಿಜ ಹೇಳಬೇಕೆಂದರೆ ಜಂಕ್ ಫುಡ್ ಸೇವಿಸುತ್ತಿರುವ ಪಟ್ಟಣವಾದ ಸಿರಿವಂತರುಗಳು ಇಪ್ಪತ್ತೈದು ಮೂವ್ವತ್ತು ವರ್ಷಕ್ಕೇ ಸ್ಥೂಲಕಾಯರಾಗಿ ಅಧಿಕ ರಕ್ತದೊತ್ತಡ, ಮಧುಮೇಹ ಇಲ್ಲವೇ ಹೃದಯಾಘಾತಕ್ಕೆ ಒಳಗಾಗಿ ಆರೋಗ್ಯಕ್ಕಾಗಿ ಲಕ್ಷಾಂತರ ಹಣವನ್ನು ವ್ಯಯಿಸುತ್ತಿದ್ದರೆ, ಅದೇ  ಪಟ್ಟಣದಲ್ಲಿರುವ ಮಧ್ಯಮ ವರ್ಗದವರು ಮತ್ತು ಹಳ್ಳಿಗರು ತಾಜಾ ತಾಜಾ ಆಹಾರವನ್ನು ಸೇವಿಸಿ ದೀರ್ಘಾಯುಷ್ಯವಂತರಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಇವೆಲ್ಲವುಗಳ ಅರಿವಿದ್ದರಿಂದಲೇ ಏನೋ? ನಮ್ಮ ಪೂರ್ವಜರು ಪ್ರತೀ ದಿನವೂ ಪ್ರತೀ ಹೊತ್ತು ತಾಜಾ ತಾಜಾ ಆಹಾರವನ್ನು ಮನೆಗಳಲ್ಲೇ ತಯಾರಿಸಿಕೊಂಡು ಸೇವಿಸುವ ಪದ್ದತಿಯನ್ನು ರೂಢಿಗೆ ತಂದಿದ್ದರು ಎಂದೆನಿಸುತ್ತದೆ ಅಲ್ಲವೇ? ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೇ,  ದೊಡ್ಡವರ ಮನೆ ನೋಟ ಚೆಂದ, ಬಡವರ ಮನೆಯ ಊಟ ಚೆಂದಾ! ಎಂಬ ಗಾದೆಯೂ ರೂಢಿಗೆ ಬಂದಿರ ಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ  ಆತ್ಮೀಯರೊಬ್ಬರು ಕಳುಹಿಸಿ ಕೊಟ್ಟಿದ್ದ ಸಂದೇಶದಿಂದ ಪ್ರೇರಿತವಾದ ಲೇಖನವಾಗಿದೆ.

ತಂಗಳನ್ನ

ಸಾಮನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಬೆಳಗ್ಗೆ ಶುಚಿರುಚಿಯಾಗಿ ಅವರ ಕುಟುಂಬಕ್ಕೆ ಅವಶ್ಯಕತೆ ಇದ್ದಷ್ಟು ಅಡುಗೆಗಳನ್ನು ಮಾಡಿಕೊಂಡು ಬಿಸಿ ಬಿಸಿಯಾಗಿ ತಿನ್ನಲು ಬಯಸುತ್ತಾರೆ. ಎಷ್ಟೇ ಕಟ್ಟೆಚ್ಚೆರ ವಹಿಸಿದರೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಮಾಡಿದ ಆಹಾರ ಮಿಕ್ಕಿಬಿಡುತ್ತದೆ. ಹಾಗೆ ಮಿಕ್ಕಿ ಹೋದ ಆಹಾರವನ್ನು ತಂಗಳು ಆಹಾರ ಎಂದು ಅದನ್ನು ಮಾರನೆಯ ದಿನ ಉಪಯೋಗಿಸಿದೇ ಅದನ್ನು ಹೊರಗೆ ಚೆಲ್ಲುವ ಇಲ್ಲವೇ ಮನೆಯ ಸಾಕುಪ್ರಾಣಿಗಳಿಗೆ ಹಾಕುವ ಪದ್ದತಿಯು ಎಲ್ಲ ಕಡೆಯಲ್ಲಿಯೂ ರೂಢಿಯಲ್ಲಿದೆ. ಇನ್ನೂ ಕೆಲವರು ಆ ರೀತಿಯಾಗಿ ಚೆಲ್ಲಲು ಮನಸ್ಸು ಬಾರದೇ ಮಾರನೆಯ ದಿನ ಆ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ ಮಾಡಿ ಸೇವಿಸುವುದೂ ಉಂಟು.

ಸುಮಾರು ವರ್ಷಗಳ ಹಿಂದೇ, ಅಮ್ಮಾ ತಾಯೀ.. ಕವಳ ಇದ್ರೇ ಕೊಡ್ರವ್ವಾ.. ಎಂದು ಮನೆ ಮನೆಗಳ ಮುಂದೆ ಪಾತ್ರೆಗಳನ್ನು ಹಿಡಿದುಕೊಂಡು ಬಂದು ಕೂಗಿ ಭಿಕ್ಷೇ ಬೇಡುತ್ತಿದ್ದದ್ದನ್ನು ನೋಡಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಹಾಹಾಕಾರವು ಕಡಿಮೆಯಾಗಿ ಅಂದಿನಂತೆ ಯಾರೂ ಸಹಾ ತಂಗಳನ್ನವನ್ನು ತಿನ್ನಲು ಬಯಸದ ಕಾರಣ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಹತ್ತುರೂಪಾಯಿ ಕೊಟ್ಟು ಬಿಡಿ ಹೋಟೆಲ್ನಲ್ಲಿ ಬಿಸಿ ಬಿಸಿ ಆಹಾರವನ್ನೇ ಸೇವಿಸುತ್ತೇವೆ ಎನ್ನುವವರೇ ಹೆಚ್ಚು.

ಇನ್ನು ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆಯು ಅಧಿಕವಾಗಿರುವ ಕಾರಣ, ಬಹುತೇಕರ ಮನೆಗಳಲ್ಲಿ ಆಹಾರವನ್ನು ಚೆಲ್ಲಲು ಬಯಸುವುದಿಲ್ಲ. ಆಹಾರ ಹೆಚ್ಚಾಗಿ ಉಳಿದುಬಿಟ್ಟರೆ,ಅದನ್ನು ಫ್ರಿಜ್ ನಲ್ಲಿ ಇರಿಸಿ ಅಗತ್ಯಕ್ಕೆ ತಕ್ಕಂತೆ ಆ ಆಹಾರಗಳನ್ಮು ಪುನಃ ಬಿಸಿ ಮಾಡಿ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆಯುರ್ವೇದದ ಪ್ರಕಾರ ಈ ರೀತಿಯಾಗಿ ತಂಗಳು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅದರಿಂದ ನಾನಾರೀತಿಯ ಖಾಯಿಲೆಗಳಿಗೆ ತುತ್ತಾಗಬಹುದು ಎಂಬುದಾಗಿಯೂ ಹೇಳುತ್ತಾರೆ. ಅದರೇ ಅದೇ ತಂಗಳನ್ನವನ್ನು ಸೂಕ್ತವಾದ ರೀತಿಯಲ್ಲಿ ಸಂಗ್ರಹಿಸಿಟ್ಟು ಸೇವಿಸಿದಲ್ಲಿ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ತಂಗಳನ್ನದ ಅಚ್ಚರಿಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಿಜ ಆಹಾರವನ್ನು ಹಾಗೆಯೇ ಇಟ್ಟಲ್ಲಿ ಅಥವಾ ಫ್ರಿಜ್ ನಲ್ಲಿ ಇಟ್ಟು ಪದೇ ಪದೇ ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದರೂ ಅದೇ ಅನ್ನವನ್ನು ಒಂದು ಮಣ್ಣಿನ ಮಡಕೆಯಲ್ಲಿ ನೀರಿನೊಂದಿಗೆ ರಾತ್ರಿಯಿಡೀ ನೆನೆಸಿಟ್ಟು ಮರುದಿನ ನೀರನ್ನು ಬಸೆದು ಆ ಅನ್ನವನ್ನು ಬೆಳಿಗಿನ ಉಪಹಾರವಾಗಿ ಸೇವಿಸಿದಲ್ಲಿ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ. ಹಾಗಾಗಿಯೇ ನೂರಾರು ವರ್ಷಗಳಿಂದಲೂ ತಮಿಳುನಾಡಿನ ಅನೇಕ ಹಳ್ಳಿಗಳಲ್ಲಿ ಕೂಳು ಎಂಬ ಹೆಸರಿನಲ್ಲಿ ಈ ಪದ್ದತಿಯು ರೂಢಿಯಲ್ಲಿದೆ.

ಈ ರೀತಿಯ ಅನ್ನವನ್ನು ಕಡೆದ ಮಜ್ಜಿಗೆಯೊಂದಿಗೆ ಕಲಸಿಕೊಂಡು ಅದರ ಜೊತೆಗೆ ಸ್ವಲ್ಪ ಉಪ್ಪನ್ನು ಬೆರಸಿ, ಹಸೀಮೆಣಸಿನಕಾಯಿ ಈರುಳ್ಳಿ ಜೊತೆಗೆ ಸೇವಿಸಿದರೆ ಇನ್ನೂ ಕೆಲವರು, ರುಚಿಕರ ಉಪ್ಪಿನ ಕಾಯಿಯೊಂಡಿಗೆ ಸೇವಿಸಿ ನಂತರ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ಸೇವಿಸುವುದರಿಂದ ದೇಹ ತಂಪಾಗಿದ್ದು ಇಡೀ ದಿನ ಚುರುಕಾಗಿ ಕೆಲಸವನ್ನು ಮಾಡಬಹುದಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ತಂಗಳನ್ನ ನೈಸರ್ಗಿಕವಾಗಿ ಶೀತವಾಗಿದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ತಂಗಳನ್ನ ಸೇವಿಸುವುದರಿಂದ ಅದು ನಮ್ಮ ದೇಹದ ಶಾಖವನ್ನು ತಗ್ಗಿಸುವುದಲ್ಲದೇ, ಏರುತ್ತಿರುವ ಉಷ್ಣಾಂಶ ಮತ್ತು ಬಿಸಿಲಿನ ಬೇಗೆಯಿಂದ ನಮ್ಮ ದೇಹವನ್ನು ಸಂರಕ್ಷಿಸುತ್ತದೆ ಎಂದೂ ಹೇಳುತ್ತಾರೆ.

ಭಾರತೀಯರ ಈ ರೀತಿಯ ಆಹಾರ ಪದ್ದತಿಯ ಕುರಿತಾಗಿ ಸಂಶೋಧನೆ ನಡೆಸಿರುವ ಇಂಗ್ಲೆಂಡ್‌ನ ಕ್ವೀನ್ಸ್ ವಿಶ್ವವಿದ್ಯಾಲಯದ ಬೆಲ್‌ಫಾಸ್ಟ್‌ನ ಸಂಶೋಧಕರ ಪ್ರಕಾರ, ರೈತರು ತಮ್ಮ ಬೆಳೆಗಳಿಗೆ ರಾಸಾಯಿನಿಕ ಕೀಟನಾಶಕಗಳನ್ನು ಉಪಯೋಗಿಸುವ ಕಾರಣ, ಮಣ್ಣು ಸಹಾ ತನ್ನ ಸತ್ವವನ್ನು ಕಳೆದುಕೊಂಡು ಅದರಲ್ಲಿರುವ ಆರ್ಸೆನಿಕ್ ಅಕ್ಕಿಯನ್ನು ಕಲುಷಿತಗೊಳಿಸುತ್ತದೆ, ಇದರಿಂದಾಗಿ ಆ ರೀತಿಯ ಅನ್ನವನ್ನು ಸೇವಿಸುವುದರಿಮ್ದ ಹೆಚ್ಚಿನವರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅದೇ ಅನ್ನವನ್ನು ರಾತ್ರಿಯಿಡೀ ನೆನೆಸಿಡುವ ಮೂಲಕ ಜೀವಾಣು ಮಟ್ಟವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದಾಗಿದೆ ಎನ್ನುತ್ತಾರೆ. ಹಾಗೆಯೇ ಈ ರೀತಿ ಅನ್ನವನ್ನು ನೆನಸಿಡುವುದರಿಂದ ಆ ಅನ್ನದಲ್ಲಿ ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ನಂತಹ ಪೋಷಕಾಂಶಗಳು ಸೇರಿಕೊಂಡು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದೂ ಸಹಾ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಅಕ್ಕಿಯಲ್ಲಿನ ಪೌಷ್ಟಿಕಾಂಶ-ವಿರೋಧಿ ಅಂಶಗಳನ್ನು ಒಡೆಯುತ್ತದೆ, ಇದರ ಪರಿಣಾಮವಾಗಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳಾದ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಜೈವಿಕ ಲಭ್ಯತೆಯು ದೇಹಕ್ಕೆ ಒದಗಿ ಆರೋಗ್ಯ ಸುಧಾರಿಸುತ್ತದೆ. ಇದನ್ನೇ ಅಂಕಿ ಅಂಶಗಳ ಪ್ರಕಾರ ಹೇಳಬೇಕೆಂದರೆ, 100 ಗ್ರಾಂ ಅನ್ನವನ್ನು ರಾತ್ರಿ ಇಡೀ ಸುಮಾರು 12 ಗಂಟೆಗಳ ನೆನೆಸಿಟ್ಟರೆ, ಸಾಧಾರಣ ಅನ್ನದಲ್ಲಿ ಇರಬಹುದಾದ ಕಬ್ಬಿಣದ ಅಂಶದ ಲಭ್ಯತೆಯು 3.4 ಮಿಗ್ರಾಂನಿಂದ 73.91 ಮಿಗ್ರಾಂಗೆ ಅಂದರೆ ಸುಮಾರು 2073% ಹೆಚ್ಚಳವಾಗಿರುವುದನ್ನು ಸಂಶೋಧನೆಯಲ್ಲಿ ಕಂಡು ಕೊಳ್ಳಲಾಗಿದೆ.

ಈ ರೀತಿಯಾಗಿ ಪ್ರತಿದಿನವೂ ನಿಯಮಿತವಾಗಿ ಒಂದು ಬಟ್ಟಲು ತಂಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಈ ರೀತಿಯಾಗಿವೆ

 • ಇದು ದೇಹಕ್ಕೆ ಶಕ್ತಿಯನ್ನು ಕೊಡುವುದಲ್ಲದೇ ಸದಾ ಕಾಲವೂ ತಾಜಾತನದಿಂದ ಇರಿಸಲು ಸಹಾಯ ಮಾಡುತ್ತದೆ
 • ಈ ರೀತಿಯಾದ ತಂಗಳನ್ನ ಅಪರೂಪದ ಬಿ 6 ಬಿ 12 ಜೀವಸತ್ವಗಳನ್ನು ಹೊಂದಿದೆ.
 • ಮಲಬದ್ಧತೆಯಿಂದ ನರಳುತ್ತಿರುವವರಿಗೆ ಈ ಅನ್ನದಲ್ಲಿರುವ ಅಧಿಕ ನಾರಿನಂಶವು ರಾಮಬಾಣವಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ.
 • ಅಲ್ಸರ್ ನಿಂದ ಬಳಲುತ್ತಿರುವವರು, ವಾರದಲ್ಲಿ ಮೂರು ದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ಅಲ್ಸರ್ ರೋಗವು ಬಹುಬೇಗ ಕಡಿಮೆಯಾಗುತ್ತದೆ.
 • ಈ ರೀತಿಯಾದ ತಂಗಳನ್ನ ಜೀರ್ಣಕ್ರಿಯೆಗೆ ಸಹಾಯ ಮಾಡುವ ಟ್ರಿಲಿಯನ್ಗಟ್ಟಲೆ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುವುದರಿಂದ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
 • ವಯಸ್ಸಾದವರಲ್ಲಿ ಕಾಣ ಸಿಗುವ ಮೂಳೆ ಸಂಬಂಧಿತ ಕಾಯಿಲೆಗಳು ಮತ್ತು ಸ್ನಾಯು ನೋವುಗಳನ್ನು ಇದು ನಿವಾರಿಸುತ್ತದೆ.
 • ಪಾಲೀಷ್ ಮಾಡದ ಬ್ರೌನ್ ರೈಸ್ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೇ ಉಳಿದಿರುವ ಕಾರಣ ಕೆಂಪಕ್ಕಿಯ ತಂಗಳನ್ನ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
 • ಅಧಿಕ ರಕ್ತದೊತ್ತಡವೂ ಸಹಾ ಕಡಿಮೆಯಾಗುತ್ತದೆ.
 • ಇದು ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ.
 • ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಹೆಚ್ಚಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
 • ಪ್ರತಿದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ನೀವು ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸದಿಂದ ತಪ್ಪಿಸಿಕೊಳ್ಳಬಹುದು.

ತಂಗಳನ್ನು ತಿನ್ನುವುದು ಬಡತನದ ಪ್ರತೀಕ ಎಂದೇ ಭಾವಿಸಿದ್ದವರಿಗೆ ನಮ್ಮ ಪೂರ್ವಜರು ಎಂದೋ ಕಂಡು ಹಿಡಿದುಕೊಂಡಿದ್ದ ಅಪೂರ್ವವಾದ ಸತ್ಯ ಈಗ ಸಂಶೋಧನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಇಂದಿನ ಕರಾಳ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ ಲಕ್ಷಾಂತರ ಜನರು ಸರಿಯಾದ ಆಹಾರವಿಲ್ಲದೇ ಹಸಿವಿನಿಂದ ಸಾಯುತ್ತಿರುವಾಗ ಖಂಡಿತವಾಗಿಯೂ ಎಲ್ಲರು ಅಗತ್ಯವಿದ್ದಷ್ಟೇ ಆಹಾರವನ್ನು ತಯಾರಿಸಿಕೊಂಡು, ಒಂದು ಅಗಳನ್ನೂ ಚೆಲ್ಲದೇ ಸದ್ವಿನಿಯೋಗ ಮಾಡಿಕೊಳ್ಳಬೇಕಾದ್ದದ್ದು ಪ್ರತಿಯೊಬ್ಬರ ಕರ್ತವ್ಯವೇ ಆಗಿದೆ.

ಅದೇ ರೀತೀ ಆರೋಗ್ಯದ ದೃಷ್ಟಿಯಿಂದ ಈ ರೀತಿಯಾಗಿ ತಂಗಳನ್ನವನ್ನು ನೀರಿನಲ್ಲಿ ನೆನೆಸಿಟ್ಟು ಅದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯದಿಂದ ಇರುವುದು ಉತ್ತಮವಾದ ಅಭ್ಯಾಸವಾಗಿದೆ.

ಏನಂತೀರಿ?
ನಿಮ್ಮವನೇ ಉಮಾಸುತ

ಡಾ. ಸುನೀಲ್ ಕುಮಾರ್ ಹೆಬ್ಬಿ

ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ |

ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ||

ಎಂಬ ಶ್ಲೋಕವನ್ನು ಸಾಧಾರಣವಾಗಿ ಎಲ್ಲಾ ದೇವಾಲಯಗಳಲ್ಲಿ ಪುರೋಹಿತರು ತೀರ್ಥ ಕೊಡುವಾಗ ಹೇಳುವುದನ್ನು ಕೇಳಿರುತ್ತೇವೆ. ಇದರ ಅರ್ಥ ಹೀಗಿದೆ. ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾಗಿ ಹೋದಾಗಾ, ಗಂಗಾ ಜಲವೇ ಔಷಧಿ, ಹರಿ ಅರ್ಥಾತ್ ಶ್ರೀ ಮನ್ನಾರಾಯಣನೇ ವೈದ್ಯನಾಗುತ್ತಾನೆ ಎಂದು ಭಗವಂತನನ್ನು ಹಾಡಿ ಹೊಗಳುವುದೇ ಆಗಿದೆ.

sunil2

ಸದ್ಯದ ಕಲಿಗಾಲದಲ್ಲಿ ಭಗವಂತನನ್ನು ಮರೆತು ಲೌಕಿಕದಲ್ಲೇ ಕಾಲ ಹರಣ ಮಾಡುತ್ತಿರುವವರು ಕಾಯಿಲೆಗೆ ತುತ್ತಾಗಿ ಅವರ ಶರೀರ ಜರ್ಜರಿತವಾಗಿ ಪರಿಸ್ಥಿತಿ ಉಲ್ಬಣಿಸಿದಾಗ, ಸಂಕಟ ಬಂದಾಗ ವೆಂಕಟರಮಣ ಎಂದು ದೈವವನ್ನು ನಂಬುವುದರ ಜೊತೆಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯೂ ಅತ್ಯಗತ್ಯವಾಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಇರುವ ಹೈಟೆಕ್ ಆಸ್ಪತ್ರೆಗೆ ಸೇರಿದರೂ ಹುಷಾರಾಗದೇ ಹೋಗಬಹುದು. ಅದೇ ಒಂದು ಸಾಧಾರಣ ಕ್ಲಿನಿಕ್ಕಿನಲ್ಲಿ ಅಥವಾ ಸರ್ಕಾರೀ ಆಸ್ಪತ್ರೆಗೆ ಸೇರಿದರೂ ಉತ್ತಮ ಸೇವಾಮನೋಭಾವವುಳ್ಳ ವೈದ್ಯರಿಂದ ಚಿಕಿತ್ಸೆ ದೊರೆತು ಖಾಯಿಲೆ ಗುಣಮುಖವಾದ ಅನೇಕ ಉದಾಹರಣೆಗಳಿವೆ. ನಾವಿಂದು ಅಂತಹದ್ದೇ ನಿಸ್ವಾರ್ಥ ಸಮಾಜಮುಖೀ ವೈದ್ಯರಾದ‌ ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರವೇ ರಾಜ್ಯ ಮತ್ತು ರಾಷ್ಟ್ರಾದ್ಯಂತ ಪ್ರಖ್ಯಾತರಾಗಿರುವ ಡಾ. ಶ್ರೀ ಸುನೀಲ್ ಕುಮಾರ್ ಹೆಬ್ಬಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ.

ಮೂಲತಃ ವಿಜಯಪುರದಲ್ಲಿ ಹುಟ್ಟಿ, ಬೆಳೆದ ಶ್ರೀ ಹೆಬ್ಬಿಯವರು, 2008 ರಲ್ಲಿ ತಮ್ಮ ವೈದ್ಯಕೀಯ ಪದವಿ ಮುಗಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿನ ಯಾವುದಾದರೂ ನರ್ಸಿಂಗ್ ಹೋಂ ನಲ್ಲಿ ನೌಕರಿ ಸಿಕ್ಕಿದರೆ ಸಾಕು ಎಂದು ಹುಡುಕುತ್ತಿದ್ದಾಗ ಪ್ರಖ್ಯಾತವಾದ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿ ಸುಮಾರು 3 ವರ್ಷಗಳ ಕಾಲ ಅಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲಿಗೆ ಬರುವ ಎಷ್ಟೋ ರೋಗಿಗಳಿಗೆ ಚಿಕಿತ್ಸೆಗಾಗಿ ದುಬಾರಿ ಹಣವನ್ನು ಕಟ್ಟಲೂ ಅರದಾಡುತ್ತಿರುವುದು ಅವರ ಮನಸ್ಸಿಗೆ ಬಹಳ ಕಸಿವಿಸಿಯನ್ನುಂಟು ಮಾಡುತ್ತಿರುತ್ತದೆ. ದೇಶದ ಪ್ರತಿಯೊಬ್ಬ ನಾಗರೀಕರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಭಾವನೆ ಅವರಲ್ಲಿ ಮೂಡಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೆಲವೇ ಸಮಯಲ್ಲಿ ಅಲ್ಲಿನ ಕೆಲಸವು ಯಾಂತ್ರೀಕೃತ ಎನಿಸಿದಾಗ 2011ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ ಶ್ರೀ ಹೆಬ್ಬಿಯವರು ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡುತ್ತಾರೆ.

uni3

ಅದರ ಭಾಗವಾಗಿಯೇ ತಮ್ಮ ಆತ್ಮೀಯರೊಬ್ಬರ ಬಳಿ 2 ಲಕ್ಷದಷ್ಟು ದೇಣಿಗೆ ಪಡೆದು ತಮ್ಮ ಬಳಿ ಇದ್ದ ಕಾರನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ತಮ್ಮದೇ ಆದ ಮಾತೃ ಸಿರಿ ಫೌಂಡೇಶನ್ ಹೆಸರಿನಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಮಾಡಲು Dr. On Wheel ಎನ್ನುವ Mobile clinic ಆರಂಭಿಸಿ, ಪ್ರತೀ ದಿನವೂ ರಾಜ್ಯದ ಹಲವಾರು ಕಡೆ ಪ್ರಯಾಣಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಚಿಕಿತ್ಸೆ ಕೊಡಲು ಪ್ರಾರಂಭಿಸುತ್ತಾರೆ.

sunil4

ಅಂದು ಸಣ್ಣದಾಗಿ ತಮ್ಮ ಕಾರಿನಲ್ಲಿಯೇ ಆರಂಭಿಸಿದ Mobile clinic ಇಂದು ಸಂಪೂರ್ಣ ಸುಸಜ್ಜಿತವಾದ ಮೊಬೈಲ್ Dr ಕ್ಲಿನಿಕ್ ಮೂಲಕ ಸುಮಾರು 785 ಕ್ಕೂ ಹೆಚ್ಚು ಉಚಿತ ಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ 85,000 ಕ್ಕೂ ಹೆಚ್ಚು ರೋಗಿಗಳಿಗೆ ಸಂತೃಪ್ತ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಕಾಲದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆತು ಎಲ್ಲರೂ ಆರೋಗ್ಯದಿಂದ ಇರಬೇಕು ಎನ್ನುವ ಅವರ ಅಭಿಪ್ರಾಯವನ್ನು ಸಾಕಾರ ಮಾಡಲೆಂದೇ ಕಟಿ ಬದ್ಧರಾಗಿದ್ದಾರೆ. ಹಾಗಾಗಿಯೇ, ದೇಶದಲ್ಲಿ ಆರೋಗ್ಯ ಹಕ್ಕು ಕಾನೂನು ಜಾರಿಗೆಯಾಗಲೀ ಎಂಬ ಜನ ಜಾಗೃತಿಯನ್ನು ಎಲೆಮರೆ ಕಾಯಿಯಂತೆ ಮೂಡಿಸುತ್ತಾ, ಇದುವರೆಗೆ ಸುಮಾರು 8,000km ರಷ್ಟು ದೂರವನ್ನು ದೇಶಾದ್ಯಂತ ಸಂಚಾರ ಮಾಡಿ ಜನರಲ್ಲಿ ಮೂಡಿಸುವಲ್ಲಿ ಸಫಲರಾಗಿದ್ದಾರೆ.

ಪ್ರಸ್ತುತ ಮಲ್ಲೇಶ್ವರದ ನಿವಾಸಿಯಾಗಿರುವ ಡಾ. ಹೆಬ್ಬಿ ಅವರು, ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗೋರಿಪಾಳ್ಯದಲ್ಲಿರುವ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರದಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರಲ್ಲದೇ, ಅಲ್ಲಿನ ಕೆಲಸ ಮುಗಿಸಿಕೊಂಡು ಕೇವಲ 2 ಗಂಟೆಗಳ ಕಾಲ ವಿರಾಮ ಪಡೆದುಕೊಂಡು ಮತ್ತೆ ಬೆಳಿಗ್ಗೆ 10 ಗಂಟೆಯಿಂದ ಎಂದಿನಂತೆ ತಮ್ಮ ಮೊಬೈಲ್ ಕಾರ್ ಕ್ಲಿನಿಕ್ ಸೇವೆಗೆ ಸಿದ್ದರಾಗುತ್ತಾರೆ.

ಕೊರೋನಾ ಎಂಬ ಮಹಾಮಾರಿ ಪ್ರಪಂಚಾದ್ಯಂತ ವಕ್ಕರಿಸದ ಮೇಲಂತೂ, ಪ್ರಪಂಚಾದ್ಯಂತ ಪ್ರತಿನಿತ್ಯವೂ ಲಕ್ಷಾಂತರ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಸ್ಸೂಕ್ತವದ ಚಿಕಿತ್ಸೆ ದೊರೆಯದೇ ಸಾವನ್ನಪ್ಪುತ್ತಿರುವ ವಿಷಯವನ್ನು ಮನಗಂಡ ಡಾ. ಹೆಬ್ರಿಯವರು, ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರ ಸೋಂಕಿಗೊಳಗಾದ ಬಡವರು ಇರುವಲ್ಲಿಗೇ ಹೋಗಿ ಅವರಿಗೆ ಸಂಪೂರ್ಣ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು ನಿಜಕ್ಕೂ ಅಮೋಘ. ಅನನ್ಯ ಮತ್ತು ಅನುಕರಣೀಯವೇ ಸರಿ.

suni1

ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾದ ಮೇಲಂತೂ ಹೆಬ್ಬಿಯವರಿಗೆ ವೈದ್ಯಕೀಯ ನೆರವನ್ನು ಕೋರಿ ಅನೇಕ ದೂರವಾಣಿ ಕರೆಗಳು ನಿರಂತರವಾಗಿ ಬರುತ್ತಲೇ ಇವೆ. ಎಲ್ಲಾ ಕರೆಗಳನ್ನೂ ತಾಳ್ಮೆಯಿಂದಲೇ ಸ್ವೀಕರಿಸಿ ಆವರಿಗೆ ಪೋನ್ ಮುಖಾಂತರವೇ ಚಿಕಿತ್ಸೆ ನೀಡುತ್ತಾರೆ. ಕೊರೋನಾ ಆರಂಭಿಕ ಲಕ್ಷಣಗಳಿರುವವರಿಗೆ ಅವರ ಉಸಿರಾಟದ ಆಮ್ಲಜನಕದ ಪ್ರಮಾಣವನ್ನು ಅರಿತುಕೊಂಡು, ಫೋನ್ ಮೂಲಕವೇ ಔಷಧಿಯನ್ನು ಸೂಚಿಸುತ್ತಾರೆ. ಅಕಸ್ಮಾತ್ ಪರಿಸ್ಥಿತಿ ತ್ರೀವ್ರವಾಗಿದೆ ಎಂದಾದಲೇ, ಸ್ವತಃ ಅವರೇ ಸೋಂಕಿತರ ಮನೆಗೆ ಹೋಗಿ ಸೂಕ್ತವಾದ ಚಿಕಿತ್ಸೆ ಕೊಟ್ಟು ಅದಕ್ಕಿಂಲೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಿಯೂ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಸೋಂಕಿತರೊಬ್ಬರಿಗೆ, ಆಸ್ಪತ್ರೆಗೆ ಸೇರಲೇ ಬೇಕಾದ ಅನಿವಾರ್ಯತೆಯಾದಾಗ, ಕೇವಲ 3 ಕಿಮೀ ದೂರದಲ್ಲಿರುವ ಆಸ್ಪತೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಚಾಲಕನೊಬ್ಬ ರೂ.12,000 ಕೇಳಿದಾಗ, ಆದನ್ನು ಭರಿಸಲಾಗದೇ ಹೆಬ್ಬಿಯವರಿಗೆ ಕರೆ ಮಾಡಿದಾಗ, ಹೆಬ್ಬಿಯವರೇ ಆ ವ್ಯಕ್ತಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಆಸ್ಪತ್ರೆಗೆ ಸೇರಿಸಿ ಬಂದಿದ್ದಾರೆ.

ಕೊರೋನಾದಿಂದಾಗಿಯೇ ಹೆಬ್ಬಿಯವರ ಅಣ್ಣನ ಮಗನೂ ಕೆಲ ತಿಂಗಳ ಹಿಂದೆ ತೀರಿಕೊಂಡಾಗ, ಭಯಗ್ರಸ್ತರಾದ ಅವರ ಕುಟುಂಬದವರು ಹೆಬ್ಬಿಯವರ ಮೊಬೈಲ್ ಕ್ಲಿನಿಕ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರೂ, ಸೋಂಕಿತರ ಕುಟುಂಬಸ್ಥರ ನೋವು, ನರಳಾಟವನ್ನು ನೋಡಲು ಸಾಧ್ಯವಾಗದೇ, ಅಣ್ಣನ ಮಗನ ಅಂತ್ಯಕ್ರಿಯೆ ಮುಗಿದ ಮರುದಿನವೇ ಮರಳಿ ತಮ್ಮ ಸೇವೆಯನ್ನು ಎಂದಿನಂತೆ ಆರಂಭಿಸಿದ್ದಾರೆ.

sunil5

ಪ್ರತೀನಿತ್ಯವೂ 80 ರಿಂದ 120 ಕಿಮೀ ದೂರದ ವರೆಗೂ ಪ್ರಯಾಣಿಸಿ, ಸುಮಾರು 10-12 ಮಂದಿಗೆ ಚಿಕಿತ್ಸೆ ನೀಡುತ್ತಾರೆ. ಇಷ್ಟು ವರ್ಷಗಳ ಕಾಲ ಯಾವುದನ್ನೋ ಬದುಕೆಂದುಕೊಂಡು ಯಾಂತ್ರೀಕೃತವಾಗಿ ಕೆಲಸ ಮಾಡಿ ತಮ್ಮ ಬದುಕನ್ನು ನಷ್ಟ ಮಾಡಿಕೊಂಡಿದಕ್ಕೆ ಅವರಿಗೆ ಬೇಸರವಿದೆ. ಈಗ ಅವರಿಗೆ ನಿಜವಾದ ಬದುಕು ಏನೆಂಬುದು ಅರ್ಥವಾಗಿ ಕಳೆದ ವರ್ಷಗಳಿಂದ ದುಡಿಮೆಗೆ ನೀಡುವಷ್ಟೇ ಸಮಯವನ್ನು ತಮ್ಮ ಇಷ್ಟದ ಬದುಕನ್ನು ಜೀವಿಸಲು ಮೀಸಲಿಡಬೇಕೆಂದು ನಿರ್ಧರಿಸಿದ್ದಾರೆ. ಜೀವನದಲ್ಲಿ ಏರಿಳಿತ ಇಲ್ಲದಿದ್ದರೆ ಸುಖಃ ದುಖಃದ ಅರಿವಿಲ್ಲದೆ ಜೀವಂತ ಹೆಣವಾಗಿ ಬಿಡುತ್ತೇವೆ. ಅತಿಯಾದ ದುಡಿಮೆಯಿಂದಾಗಿ ಕನಿಷ್ಠ ಸುಖ ಸಿಗಬಹುದೇ ಹೊರತು ಬದುಕಿನ ಆನಂದ ಲಭಿಸಲಾರದು. ಹಾಗಾಗಿ ಬದುಕನ್ನು ಕಲಿಸುವುದೇ ನಿಜವಾದ ಬದುಕು ಎನ್ನುತ್ತಾರೆ ಡಾ. ಹೆಬ್ಬಿಯವರು.

ಇವರ ಸೇವೆಯನ್ನು ಗುರುತಿಸಿ ಸುಮಾರು 50 ಕ್ಕೂ ಹೆಚ್ಚು ಪ್ರಶಸ್ತಿ, ಪ್ರಮಾಣ ಪತ್ರ ಸಂದಿವೆಯಲ್ಲದೇ, ನೂರಾರು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ದೇಶಾದ್ಯಂತ ಇವರ ಸೇವೆಯ ಕುರಿತಾದ ಮಾಹಿತಿಯನ್ನು ಪ್ರಸಾರ ಮಾಡಿವೆ.

ದಿನೇ ದಿನೇ ಗಗನಕ್ಕೇರಿರುವ ಪೆಟ್ರೋಲ್ ಬೆಲೆ, ಔಷಧಿ, ವೈದ್ಯಕೀಯ ಸಲಕರಣೆಗಳ ಬೆಲೆಯಿಂದಾಗಿ ತಮ್ಮ ಮೊಬೈಲ್ ಕ್ಲಿನಿಕ್ ಮುಂದುವರೆಸುವುದು ಅವರಿಗೆ ತ್ರಾಸದಾಯಕವಾಗುತ್ತಿದೆ. ಹಾಗಾಗಿ ಸಹೃದಯೀ ಜನರಿಂದ ಇಂತಹ ಸಮಜಮುಖೀ ಸೇವೆಗಾಗಿ ತಮ್ಮ ಕೈಲಾದ ಮಟ್ಟಿಗಿನ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.

ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |

ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ||

sunil_ontribute

ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿಯೇ, ಇನ್ನು ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರಮಾಡುವುದಕ್ಕಾಗಿಯೇ ಎಂಬ ಈ ಶ್ಲೋಕದ ತಾತ್ಪರ್ಯದಂತೆ, ಎಲ್ಲೆಲ್ಲಿಯೋ ಯಾವುದಕ್ಕೋ ಎಷ್ಟೆಷ್ಟೋ ಖರ್ಚು ಮಾಡುವ ನಾವುಗಳು ಅದರಲ್ಲಿ ಕೊಂಚ ಭಾಗವನ್ನಾದರೂ ಡಾ. ಹೆಬ್ಬಿಯವರ +919741958428 ಈ ಮೊಬೈಲ್ ನಂಬರಿಗೆ Google Pay ಮುಖಾಂತರ ಯಥಾಶಕ್ತಿ ಸಹಾಯವನ್ನು ಮಾಡುವ ಮುಖಾಂತರ ಅವರ ಸೇವೆಯೆಂಬ ಯಜ್ಞದಲ್ಲಿ ನಾವುಗಳೂ ಸಮಿಧೆಯಂತೆ ಯಥಾ ಶಕ್ತಿ ಭಾಗಿಗಳಾಗೋಣ. ಇದು ಅಗ್ರಹ ಪೂರ್ವಕ ಒತ್ತಾಯವೇನಲ್ಲವಾದರೂ, ಪ್ರೀತಿಪೊರ್ವಕ ಕೋರಿಕೆಯಷ್ಟೇ. ನಾನೂ ಸಹಾ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವುದಲ್ಲದೇ ನನ್ನ ಬಂಧು-ಮಿತ್ರರಿಗೂ ಈರೀತಿಯಾಗಿ ಸಹಾಯ ಮಾಡಲು ಕೋರಿಕೊಳ್ಳುತ್ತೇನೆ. ನೀವೂ ಸಹಾ ಅದನ್ನೇ ಮಾಡ್ತೀರೀ ತಾನೇ?

ಏನಂತೀರೀ?

ನಿಮ್ಮವನೇ ಉಮಾಸುತ.

ಹೆಚ್ಚಿನ ಮಾಹಿತಿಗಾಗಿ : Call : +916363832491 | +919741958428 |

| http://www.matrusiri.in | http://www.matrusirifoundation.org |

ನುಗ್ಗೇ ಸೊಪ್ಪಿನ ಚಟ್ನಿ ಪುಡಿ

nugge1ನುಗ್ಗೇ ಸೊಪ್ಪು ಎಲ್ಲರಿಗೂ ಚಿರಪರಿಚಿತವಾಗಿರುವ ಮತ್ತು ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಸುಲಭದ ದರದಲ್ಲಿ ಸಿಗಬಹುದಾದ ಸೊಪ್ಪಾಗಿದೆ. ಬಹಳ ಔಷಧೀಯ ಗುಣಗಳಿರುವ ಈ ಸೂಪ್ಪಿನಿಂದ ಪಲ್ಯವನ್ನು ಮಾಡುವುದು ಸರ್ವೇ  ಸಾಧಾರಣವಾದರೂ, ನಾವಿಂದು ನಮ್ಮ ನಳಪಾಕದಲ್ಲಿ ಇದೇ ನುಗ್ಗೇಸೊಪ್ಪಿನ ರುಚಿಕರವಾದ ಚಟ್ನಿಪುಡಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಒಂದು ವಾರಕ್ಕೆ ಸವಿಯಬಹುದಾದಷ್ಟು ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ನುಗ್ಗೆ ಸೊಪ್ಪು – 1 ಬಟ್ಟಲು
 • ಕರಿಬೇವಿನ ಸೊಪ್ಪು – 1 ಬಟ್ಟಲು
 • ಕಡಲೇ ಬೇಳೆ – 1 ಬಟ್ಟಲು
 • ಉದ್ದಿನ ಬೇಳೆ – 1/2 ಬಟ್ಟಲು
 • ಕಡಲೇ ಕಾಯಿ ಬೀಜ – 1/4 ಬಟ್ಟಲು
 • ಕೊಬ್ಬರಿ ತುರಿ – 1/4 ಬಟ್ಟಲು
 • ಜೀರಿಗೆ – 2 ಚಮಚ
 • ಧನಿಯಾ –  2 ಚಮಚ
 • ಮೆಣಸು –  1 ಚಮಚ
 • ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಕೆಂಪು ಮೆಣಸಿನಕಾಯಿ, ಹುಣಸೆಹಣ್ಣು.

nugge2ನುಗ್ಗೇ ಸೊಪ್ಪಿನ ಚಟ್ನಿ ಪುಡಿ ತಯಾರಿಸುವ ವಿಧಾನ

 • ಚೆನ್ನಾಗಿ ಕಾದ ಬಾಣಲೆಯಲ್ಲಿ  ಕಡಲೇ ಬೇಳೆ, ಉದ್ದಿನಬೇಳೆ, ಕಡಲೇ ಕಾಯಿ ಬೀಜ ಗಳನ್ನು ಹಸಿ ಹೋಗುವ ವರೆಗೂ ಹುರಿದುಕೊಳ್ಳಿ
 • ನಂತರ ಅದೇ ಬಾಣಲಿಯಲ್ಲಿ  ಜೀರಿಗೆ, ಮೆಣಸು, ಕರಿಬೇವು,  ಧನಿಯಾ ಮತ್ತು  ಕೆಂಪು ಮೆಣಸಿನಕಾಯಿಗಳನ್ನು ಚಟ ಪಟ ಸಿಡಿಯುವ ವರೆಗೂ ಹುರಿದುಕೊಳ್ಳಿ
 • ನಂತರ ಅದೇ ಬಾಣಲಿಯಲ್ಲಿ ನುಗ್ಗೇ ಸೊಪ್ಪನ್ನು ಹಸೀ ಹೋಗುವವರೆಗೂ ಹುರಿದುಕೊಳ್ಳಿ.
 • ಹುರಿದುಕೊಂಡ ಎಲ್ಲಾ ಪದಾರ್ಥಗಳೂ ತಣ್ಣಗಾದ ನಂತರ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೇ ಹಣ್ಣು ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಸೇರಿಸಿ ತರಿ ತರಿಯಾಗಿರುವಂತೆ ಪುಡಿ ಮಾಡಿಕೊಂಡರೆ ರುಚಿ ರುಚಿಯಾದ ಆರೋಗ್ಯಕರವಾದ ನುಗ್ಗೇ ಸೊಪ್ಪಿನ ಚಟ್ನೀಪುಡಿ ಸವಿಯಲು ಸಿದ್ಧ

nugge3 ಚೆಟ್ನಿಪುಡಿಯನ್ನು ದೋಸೆ, ಇಡ್ಲಿ, ಚಪಾತಿ, ಉಪ್ಪಿಟ್ಟಿನ ಜೊತೆಗೆ ನೆಂಚಿಕೊಂಡು ತಿನ್ನುವುದಲ್ಲದೇ,  ಬಿಸಿ ಬಿಸಿ ಅನ್ನದ ಜೊತೆಗೆ ಒಂದೆರಡು ಮಿಳ್ಳೇ ತುಪ್ಪ ಬೆರೆಸಿ ಪಿಡಿಚೆ ಅನ್ನ ತಿನ್ನಲು ಬಹಳ ಮಜವಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ನಿಮ್ಮವನೇ ಉಮಾಸುತ

ಮನದಾಳದ ಮಾತು :  ನುಗ್ಗೇ ಕಾಯಿ ಆಥವಾ ನುಗ್ಗೇ ಸೊಪ್ಪು ಹೀಗೆ ಯಾವುದೇ ನುಗ್ಗೇ ಪದಾರ್ಧದಲ್ಲಿ ಉತ್ತಮ ಪೋಷಕಾಂಶಗಳು ಇವೆ.  ಇದರ ನಿತ್ಯ ಸೇವನೆಯಿಂದ  ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದಲ್ಲದೇ, ರಕ್ತ ಶುದ್ದಿಯಾಗಿ,  ತ್ವಚೆಯೂ ಸಹಾ ಕಾಂತಿಯುತವಾಗುತ್ತದೆ. ನುಗ್ಗೇ ಪದಾರ್ಥಗಳ ಸೇವನೆ ಕಣ್ಣಿನ ಆರೋಗ್ಯಕ್ಕೂ ಸಹಾ ಒಳ್ಳೆಯದು ಮತ್ತು ನರದೌರ್ಬಲ್ಯ ತಲೆನೋವು, ಮೂಲವ್ಯಾಧಿ ಮುಂತಾದವುಗಳು ನಿವಾರಣೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿ ಹೆಂಗಸರಿಗೆ ಹಾಲುಣಿಸುವ ತಾಯಂದಿರಿಗೆ ಬಹಳ ಒಳ್ಳೆಯದು. ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ  7 ಪಟ್ಟು ಹೆಚ್ಚಿನ ವಿಟಮಿನ್ ಸಿ ಇದರಲ್ಲಿ ಪಡೆಯಬಹುದಾಗಿದೆ. ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ, ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ, ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ ಇರುವ ಕಾರಣ ಇದೊಂದು ಬಡವರ ಪಾಲಿನ ಸಂಜೀವಿನಿಯಾಗಿದೆ ಎಂದರೂ ತಪ್ಪಾಗಲಾರದು.

ಈ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ

ಬೀದರ ಜಿಲ್ಲೆಯ ಸೀಬೆಯ, ಹಣ್ಣು ಬೆಂಗಳೂರಿನ ಸೇಬಿನ ಹಣ್ಣು ||

ಕೊಳ್ಳಿರಿ ಹಿಗ್ಗನು ಹರಿಸುವವು,ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ ||

ಬೆಳಗಾವಿಯ ಸವಿ ಸಪೋಟ. ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ||

ಗಂಜಾಮ್ ಅಂಜೀರ್, ತುಮಕೂರ್ ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ ಕನ್ನಡ ನಾಡಿನ ಹಣ್ಣುಗಳ ||

mango2

ಸದ್ಯಕ್ಕೆ ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ ಅಪ್ಪಟ್ಟ ಕನ್ನಡಿಗರೇ ಇರುವ ಕಾಸರಗೋಡಿನ ಹೆಮ್ಮೆಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಬರೆದಿದ್ದ ಕನ್ನಡನಾಡಿನ ಹಣ್ಣುಗಳ ಹಾಡು ಎಪ್ಪತ್ತರ ದಶಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಹುತೇಕರಿಗೆ ಕಂಠ ಪಾಟವಾಗಿರಲೇ ಬೇಕು. ಕಾಲಕಾಲಕ್ಕೆ ತಕ್ಕಂತೆ ಮತ್ತು ಸ್ಥಳೀಯ ಹವಾಗುಣಕ್ಕೆ ಅನುಗುಣವಾಗಿ ಹಣ್ಣುಗಳನ್ನು ಬೆಳೆಯುತ್ತವೆ. ಬೇಸಿಗೆ ಕಾಲ ಬಂತೆದರೆ ಸಾಕು, ಬಗೆ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಎಲ್ಲರ ನಾಲಿಗೆಯ ಬರವನ್ನು ನೀಗಿಸಲು ಲಭ್ಯವಿರುತ್ತದೆ.

mango1

ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಮತ್ತು ದೈತ್ಯಾಕಾರದ ಹಲಸಿನಹಣ್ಣು ಈ ಎರಡೂ ಹಣ್ಣುಗಳು ಬೇಸಿಗೆ ಕಾಲದಲ್ಲಿ ಲಭ್ಯವಿರುತ್ತದೆ. ಅದಕ್ಕಾಗಿಯೇ ಹಸಿದು ಹಲಸಿನಹಣ್ಣು ತಿನ್ನು, ಉಂಡು ಮಾವಿನ ಹಣ್ಣು ತಿಂದು ಎಂಬ ಗಾದೆಯ ಮಾತಿದ್ದರೆ, ಅದಕ್ಕೆ ಅನುಗುಣವಾಗಿ ಹಿಸಿದು ಹಲಸಿನ ಹಣ್ಣು ತಿನ್ನು, ಉಂಡೇ ಮಾವಿನ ಹಣ್ಣು ತಿನ್ನು ಎನ್ನುವ ಮತ್ತೊಂದು ಗಾದೆಯ ಮಾತೂ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹಸಿದೋ, ಇಲ್ಲವೇ ಹಿಸಿದೋ (ಬಿಡಿಸಿದ) ಉಂಡಾದ ನಂತರವೋ ಇಲ್ಲವೇ, ಉಂಡೇಯಾಗಿಯೋ (ಇಡೀ ಮಾವಿನ ಹಣ್ಣು) ಕಾಲ ಕಾಲಕ್ಕೆ ಸಿಗುವ ಹಣ್ಣುಗಳನ್ನು ತಿಂದು ಸಧೃಢರಾಗಿರಿ ಎಂಬುದಷ್ಟೇ ನಮ್ಮ ಹಿರಿಯರ ಆಶಯವಾಗಿತ್ತು ಎಂದರೂ ತಪ್ಪಾಗದು.

ಎಷ್ಟೋಂದು ಬಗೆಯ ಹಣ್ಣುಗಳಿದ್ದರೂ ಅದೇಕೋ ಏನೋ ಮಾವಿನ ಹಣ್ಣಿಗೆ ಮಾತ್ರ, ಹಣ್ಣುಗಳ ರಾಜನ ಪಟ್ಟ ಕಟ್ಟಲಾಗಿದೆ. ಬಹುಶಃ ಕೇಸರಿ ಮತ್ತು ಹಳದಿ ಮಿಶ್ರಿತ ಅದರ ಆಕರ್ಷಕ ಬಣ್ಣ, ಸಿಹಿಯಾದ ಅದರ ರುಚಿ ಮತ್ತು ಅದರಲ್ಲಿರುವ ಪೋಷಕಾಂಶಗಳು ಇರುವ ಕಾರಣ ಆ ಪಟ್ಟ ಬಂದಿರಬಹುದೇನೋ?

ಮಾವಿನ ಎಲೆ, ಮರ, ಮಾವಿನ ಕಾಯಿ, ಮಾವಿನ ಹಣ್ಣು, ಕಡೆಗೆ ಮಾವಿನ ಹಣ್ಣಿನ ವಾಟೆಯೂ(ಗೊರಟೆ) ನಮ್ಮ ಸಂಸ್ಕೃತಿಯ ಅವಿನಾಭಾವ ಸಂಬಂಧವಿದೆ. ಮನೆಯಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿಯೂ ಮಾವಿನ ಸೊಪ್ಪಿನ ತಳಿರು ತೋರಣವಿರಲೇ ಬೇಕು. ಕಳಸ ಸ್ಥಾಪನೆ ಮಾಡುವುದಕ್ಕೂ ಮತ್ತು ಪೂಜೆಯ ನಂತರ ಕಳಸದ ನೀರನ್ನು ಪ್ರೋಕ್ಷಿಸುವುದಕ್ಕೂ ಮಾವಿನ ಸೊಪ್ಪು ಅತ್ಯಾವಶ್ಯಕ. ಇನ್ನು ಮಾವಿನರ ಮರ ಮಟ್ಟುಗಳಿಂದ ಮನೆಯ ಕಿಟಕಿ ಬಾಗಿಲುಗಳನ್ನು ಮಾದಿಸಿಕೊಳ್ಳಲಾಗುತ್ತದೆ. ಮಾವಿನ ಕಾಯಿಯಂತೂ ನಮ್ಮ ಅಡಿಗೆ ಮನೆಯಲ್ಲಿ ಶಾಶ್ವತವಾದ ಸ್ಥಾನ ಪಡೆದಿದೆ. ಮಾವಿನ ಕಾಯಿಯ ತಂಬುಳಿ, ಮಾವಿನ ಕಾಯಿ ಚಿತ್ರಾನ್ನ, ಕಾಯಿಸಾಸಿವೆ ಅನ್ನ, ಮಾವಿನ ಕಾಯಿ ಗೊಜ್ಜು, ಅಪ್ಪೇ ಸಾರು, ಮಾವಿನ ಕಾಯಿಯ ಉಪ್ಪಿನ ಕಾಯಿಯಂತೂ ವರ್ಷವಿಡೀ ಇರುತ್ತದೆ, ಮಾವಿನ ಹಣ್ಣನ್ನು ಹಾಗೆಯೇ ತಿನ್ನಲು ಮಜವಾಗಿದ್ದರೆ, ಇನ್ನೂ ಕೆಲವರು ಮಾವಿನ ಹಣ್ಣಿನ ಮೊರಬ್ಬಾ, ಜ್ಯಾಮ್, ಸೀಕರಣೆ, ಲಸ್ಸೀ ಹೀಗೆ ಬಗೆ ಬಗೆಯ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಮಾವಿನ ಹಣ್ಣುಗಳನ್ನು ಸೇವಿಸಲಾಗುತ್ತದೆ.

ಪುರಾಣದಲ್ಲೂ ಮಾವಿನ ಹಣ್ಣಿನ ಉಲ್ಲೇಖವಿದ್ದು ಮಹಾಭಾರತದಲ್ಲಿ ಅಭಿಮನ್ಯುವಿನ ಮಗ ಪರೀಕ್ಷಿತ ರಾಜನಿಗೆ ಮೃತ್ಯು ಬಂದಿದ್ದೂ ಕೂಡಾ ಮಾವಿನ ಹಣ್ಣಿನಲ್ಲಿದ್ದ ತಕ್ಷಕ ಎಂಬ ನಾಗನಿಂದಲೇ ಎಂಬ ಕಥೆ ಇದೆ.

ಮಾವಿನಹಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳು ಹೆಂಗಸರ ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ರಕ್ತದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾವಿನಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಕರಗುವ ನಾರು ಮತ್ತು ಪೆಕ್ಟಿನ್ ಇದ್ದು, ಇವೆಲ್ಲವೂ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಆರೋಗ್ಯಕರ ಮಿತಿಗಳಲ್ಲಿ ಇರುವಂತೆ ನಿಯಂತ್ರಿಸಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಮಾವಿನ ಹಣ್ಣುಗಳನ್ನು ಸೇವಿಸುವುದರಿಂದ ತ್ವಚೆಯ ಶುದ್ಧೀಕರಣಕ್ಕೆ ಪೂರಕವಾಗಿದೆ. ಮಾವಿನ ಹಣ್ಣಿನಲ್ಲಿ ಅತ್ಯಂತ ಸಿಹಿ ಅಂಶವಿದ್ದರೂ, 5-6 ಮಾವಿನ ಎಲೆಗಳನ್ನು ಕುದಿಸಿ ಅದನ್ನು ಶೋಧಿಸಿ ನಿರಂತರವಾಗಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಕೆಲವೊಂದು ಮಾವಿನ ಕಾಯಿಗಳಲ್ಲಿ ಟಾರ್ಟಾರಿಕ್ ಆಮ್ಲ, ಮಾಲಿಕ್ ಆಮ್ಲ ಮತ್ತು ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲದ ಹುಳಿಯ ಅಂಶ ಇರುವ ಕಾರಣ ಆಡುಗೆಯಲ್ಲಿ ಹುಣಸೇ ಹಣ್ಣು ಅಥವಾ ನಿಂಬೇಹಣ್ಣಿಗ ಬದಲಿಗೆ ಮಾವಿನ ಕಾಯಿಯನ್ನು ತುರಿದೂ ಸಹಾ ಬಳಸಲಾಗುತ್ತದೆ. ಒಂದು ಇಡೀ ಮಾವಿನಹಣ್ಣನ್ನು ತಿಂದಾಗ, ತಕ್ಷಣವೇ ಹೊಟ್ಟೆ ತುಂಬಿದ ಅನುಭವವಾಗುವ ಕಾರಣ, ಬೇರೆ ಆಹಾರವನ್ನು ತಿನ್ನಲು ಮನಸ್ಸಾಗುವುದಿಲ್ಲ. ಇದರಲ್ಲಿ ಕರಗುವ ನಾರು ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ದೇಹದಲ್ಲಿ ಹೆಚ್ಚಿಗಿರುವ ಕ್ಯಾಲೋರಿಗಳನ್ನು ಬಳಸಿಕೊಳ್ಳುವ ಕಾರಣ, ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಇದು ಸಹಕಾರಿಯಾಗಿದೆ.

ಮಾವಿನ ಹಣ್ಣನ್ನು ತಿನ್ನುವುದರಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ದೇಹವನ್ನು ತಕ್ಷಣವೇ ತಂಪಾಗಿಸುತ್ತದೆ ಮತ್ತು ಮಾವಿನಲ್ಲಿರುವ ಸಕ್ಕರೆ ಮತ್ತು ಇತರ ಪೋಷಕಾಂಶಗಳು ದೇಹವನ್ನು ಉಲ್ಲಾಸಗೊಳಿಸುವ ಕಾರಣ ದೇಹಕ್ಕೇ ತಕ್ಷಣದ ಆರಾಮವನ್ನು ಕೊಡುವ ಕಾರಣ ಇದು ಬೇಸಿಗೆ ಕಾಲದ ಶಾಖದ ಹೊಡೆತವನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ.

mango6

ಇಂತಹ ಬಹುಯೋಗಿ ಪರಿಪೂರ್ಣ ಹಣ್ಣಾದ ಮಾವಿನ ಹಣ್ಣನ್ನು ಕರ್ನಾಟದಕದ ಕೋಲಾರ ಮತ್ತು ಅದಕ್ಕೆ ಅಂಟಿಕೊಂಡಿರುವ ಮದನಪಲ್ಲಿ ಚಿಲ್ಲೆಗಳಲ್ಲಿ ಹೆಚ್ಚಾಗಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರಾದರೂ ಪಾಶ್ಚಿಮಾತ್ಯ ಭಾರತದಲ್ಲಿ ಹ್ಯಾಪಸ್ ಕನ್ನಡದಲ್ಲಿ ಅಪೂಸು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಲ್ಫೊನ್ಸೊ ಮಾವಿನ ಹಣ್ಣನಿಗೆ ಮಾತ್ರಾ ಮಾವಿನ ಹಣ್ಣುಗಳಲ್ಲೇ ರಾಜ ಎಂಬ ಕೀರ್ತಿಗೆ ಪಾತ್ರವಾಗಿದೆ. ಉಳಿದೆಲ್ಲಾ ಹಣ್ಣುಗಳು ಕಾಸಿಗೊಂದು ಕೊಸರಿಗೊಂದು ಬೆಲೆಗೆ ಲಭ್ಯವಿದ್ದರೆ, ಅಲ್ಫೊನ್ಸೊ ಹಣ್ಣುಗಳಿಗೆ ಮಾತ್ರಾ ಚಿನ್ನದ ಬೆಲೆಯಿದೆ.

mango8

ಈ ಅಲ್ಫೊನ್ಸೊ ಹಣ್ಣು ಅಪ್ಪಟ ಭಾರತದದ್ದಾದರೂ ತನ್ನ ಅದ್ಭುತ ರುಚಿ ಮತ್ತು ವಿದೇಶೀ ಹೆಸರಿನಿಂದಾಗಿ ಪ್ರಪಂಚಾದ್ಯಂತ ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸುಮಾರು 65,000 ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆಯುವ ಮಾವಿನ ಹಣ್ಣಿಗೆ ದೇಶ ವಿದೇಶಗಳ್ಳಿ ಹೆಚ್ಚಿನ ಬೇಡಿಕೆ ಇದೆ. ರತ್ನಗಿರಿಯ ಬಿಸಿ ಮತ್ತು ಆರ್ದ್ರ ಗಾಳಿ ಮತ್ತು ಅದರ ಕೆಂಪು ಮಣ್ಣು ಮಾವಿನ ಕೃಷಿಗೆ ಹೇಳಿಮಾಡಿಸಿದಂತಿದ್ದು, ಅಲ್ಲಿನ ಪರ್ವತದ ಇಳಿಜಾರುಗಳಲ್ಲಿ ನೀರು ಸರಾಗವಾಗಿ ಹರಿಯುವ ಮೂಲಕ ಅಲ್ಲಿನ ಹವಾಮಾನ ಮಾವಿನ ಕೃಷಿಗೆ ಪೂರಕವಾಗಿದೆ ಎಂದರೂ ತಪ್ಪಾಗಲಾರದು.

ನಮ್ಮ ವೇದ ಉಪನಿಷತ್ತುಗಳು, ಮೌರ್ಯ ಶಾಸನಗಳು ಮತ್ತು ಮೊಘಲ್ ವೃತ್ತಾಂತಗಳಲ್ಲಿ ಮಾವಿನಹಣ್ಣಿನ ಬಗ್ಗೆ ಉಲ್ಲೇಖವಿದ್ದು ಅಪ್ಪಟ ಭಾರತೀಯ ತಳಿಯಾಗಿದ್ದರೂ ಅಲ್ಫೊನ್ಸೊ ಎಂಬ ವಿದೇಶೀ ಹೆಸರನ್ನು ಮಾವಿನ ಹಣ್ಣಿಗೆ ಇಡಲು ಒಂದು ರೋಚಕ ಕಥೆ ಮತ್ತು ವ್ಯಥೆಯೂ ಇದೆ.

mango7

15 ನೇ ಶತಮಾನದಲ್ಲಿ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದ ಪೋರ್ಚುಗೀಸರು ಇಲ್ಲಿನ ಹವಾಮಾನ, ಪ್ರಕೃತಿ ಸಂಪತ್ತುಗಳಿಗೆ ಮಾರುಹೋಗಿ, ಗೋವಾವನ್ನು ವಶಪಡಿಸಿಕೊಳ್ಳುವ ಮೂಲಕ ಏಷ್ಯಾದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ಅಡಿಪಾಯವನ್ನು ಹಾಕುತ್ತಾರೆ, ಹಾಗೆ ಪೋರ್ಚುಗೀಸರ ವೈಸ್‌ರಾಯ್ ಆಗಿ ಬಂದ ಅಲ್ಫೊನ್ಸೊ ಡಿ ಅಲ್ಬುಕರ್ಕ್ (ಕ್ರಿ.ಶ. 1453-1515) ಅವರ ಹೆಸರನ್ನೇ ಈ ಸುಂದರ ಮತ್ತು ರುಚಿಕರ ಮಾವಿನ ಹಣ್ಣಿಗೆ ಇಡುತ್ತಾರೆ. ಸಸ್ಯಶಾಸ್ತ್ರೀಯವಾಗಿ ಮ್ಯಾಂಗಿಫೆರಾ ಇಂಡಿಕಾ ಎಂದು ಕರೆಯಲ್ಪಡುವ ಅಪ್ಪಟ ಭಾರತದ ದೇಸೀ ಹಣ್ಣು ಈ ರೀತಿಯಾಗಿ ವಿದೇಶೀ ಹೆಸರನ್ನು ಪಡೆದುಕೊಂಡಿದ್ದರೂ, ತನ್ನ ಬಣ್ಣ, ಸುವಾಸನೆ ಮತ್ತು ರುಚಿಯ ಮೂಲಕ ಅಪ್ಪಟ ದೇಸೀ ತಳಿಯಾಗಿಯೇ ಪ್ರಸಿದ್ಧಿಯನ್ನು ಪಡೆದಿದೆ

ಗಟ್ಟಿಯಾಗಿದ್ದ ಮತ್ತು ಬಹುದಿನಗಳ ಕಾಲ ಕೆಡದಂತೆ ಇಡಬಹುದಾಗಿದ್ದ ಈ ಆಲ್ಪೊನ್ಸೊ ಹಣ್ಣುಗಳನ್ನು ಪೋರ್ಚುಗೀಸರು ಯುರೋಪಿಗೆ ರಫ್ತು ಮಾಡುವ ಮೂಲಕ ಈ ಹಣ್ಣಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಪೋರ್ಚುಗೀಸರು ತಂದುಕೊಂಡುತ್ತಾರೆ.

ಇದೇ ಸಮಯದಲ್ಲಿ ಕೇವಲ ಅಲ್ಫೊನ್ಸೊ ಅಲ್ಲದೇ ಅನೇಕ ದೇಸೀ ತಳಿಗಳಿಗೆ, ಪೋರ್ಚುಗೀಸ್ ಹೆಸರುಗಳಾದ ಪೆರೆಸ್, ರೆಬೆಲ್ಲೊ, ಫರ್ನಾಂಡಿನಾ, ಫಿಲಿಪಿನಾ, ಪೆರೆಸ್, ಆಂಟೋನಿಯೊ ಹೀಗೆ ಹತ್ತು ಹಲವಾರು ಹೆಸರುಗಳನ್ನು ಇಟ್ಟು ರಫ್ತು ಮಾಡುತ್ತಾರಾದರೂ, ಅಲ್ಫೊನ್ಸೊ ಜನಪ್ರಿಯತೆಯ ಮುಂದೆ ಉಳಿದೆಲ್ಲಾ ಪ್ರಬೇಧಗಳೂ ಕಡಿಮೆಯಾದಾಗ ಸದ್ದಿಲ್ಲದೇ ಆ ಪ್ರಭೇಧಗಳು ಕಣ್ಮರೆಯಾಗಿ ಹೋಗಿರುವುದು ದುರಂತವೇ ಸರಿ.

ಈ ರೀತಿಯಲ್ಲಿ ವಿದೇಶಿಯರು ಕೇವಲ ನಮ್ಮ ಧರ್ಮ ಸಂಸ್ಕೃತಿ, ಶಿಕ್ಷಣ ಮತ್ತು ಜನರನ್ನು ಮಾತ್ರವಲ್ಲದೇ ಹಣ್ಣುಗಳನ್ನೂ ಮತಾಂತರಿಸಿದ್ದು ವಿಪರ್ಯಾಸವೇ ಸರಿ.

2007 ರಲ್ಲಿ ಅಮೇರಿಕಾ ತನ್ನ ಹಾರ್ಲೆ ಡೇವಿಡ್ಸನ್ ಬೈಕ್‌ಗಳಿಗೆ ಬದಲಾಗಿ ಭಾರತದ ರತ್ನಗಿರಿ ಅಲ್ಫೊನ್ಸೊ ಮಾವಿನ ಹಣ್ಣುಗಳ ರಫ್ತು ಮಾಡುವ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ ಎಂದರೆ, ಈ ಅಲ್ಫೊನ್ಸೊ ಮಾವಿನಹಣ್ಣಿನ ರುಚಿ ಮತ್ತು ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂಬುದರ ಕಲ್ಪನೆ ಮೂಡುತ್ತದೆ.

mango4

ಮಧ್ಯಮ ಗಾತ್ರದ ತೆಳ್ಳನೆ ಕಡು ಹಳದೀ ಬಣ್ಣದ ಸಿಪ್ಪೆಯನ್ನು ಹೊಂದಿರುವ ರತ್ನಗಿರಿ ಅಲ್ಫೊನ್ಸೊ ಮಾವಿನ ಹಣ್ಣುಗಳನ್ನು ಈ ರೀತಿಯಾಗಿ ವರ್ಣಿಸುವುದಕ್ಕಿಂತಲೂ ಸ್ವಲ್ಪ ಹೆಚ್ಚಿನ ಹಣ ಕೊಟ್ಟಾದರೂ ಖರೀದಿಸಿ ಸವಿದಾಗಲೇ ಅದರ ರುಚಿಯ ಮಹತ್ವ ತಿಳಿಯುವುದು.

ಇನ್ನೇಕೆ ತಡಾ ಓದ್ಕೊಳೀ, ತಿನ್ಕೊಳೀ, ಮಸ್ತ್ ಮಜಾ ಮಾಡಿ

ಏನಂತೀರೀ?

ನಿಮ್ಮವನೇ ಉಮಾಸುತ

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

cremationವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.corona1ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.corona2ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.

ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.

lockdownಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.marshalಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.marketಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.2ndwave1ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ‌ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ‌ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು‌ ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ

 • ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
 • ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
 • ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
 • ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
 • ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
 • ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
 • ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
 • ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
 • ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
 • ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
 • ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
 • ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
 • ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ