ಮೈಸೂರು ಪಾಕ್

ಮೈಸೂರು ಎಂದಾಕ್ಷಣ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರುವುದೇ ಮೈಸೂರು ದಸರಾ, ಮೈಸೂರು ಅರಮನೆ, ಮೈಸೂರು ಮೃಗಾಲಯ ಇದರ ಜೊತೆಗೆ ಮೈಸೂರಿನ ಹೆಸರನ್ನು ಜಗದ್ವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಅರೇ! ಈ ಸಿಹಿ ತಿಂಡಿಗೂ ಮೈಸೂರಿಗೂ ಏನು ಸಂಬಂಧ? ಅಂತ ತಿಳಿಯ ಬೇಕಾದರೆ, ಆ ಸಿಹಿ ತಿಂಡಿ ಆವಿಷ್ಕಾರದ ಹಿಂದಿರುವ ರೋಚಕವಾದ ಸಂಗತಿ ತಿಳಿಯೋಣ ಬನ್ನಿ. 1884-1940ರ ವರೆಗೂ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ಮಡೀ ಕೃಷ್ಣರಾಜ ಒಡೆಯಯರ್ ಅವರಿಗೆ ಉಟೋಪಚಾರಗಳಲ್ಲಿ ವಿಶೇಷವಾದ ಆಸಕ್ತಿ… Read More ಮೈಸೂರು ಪಾಕ್

ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಪೆರು ದೇಶದ ಲೀನಾ ಐದು ವರ್ಷ ಪುಟ್ಟ ಹುಡುಗಿ. ಆಕೆ ಪದೇ ಪದೇ ಹೊಟ್ಟೇ ನೋವು ಎಂದು ಸಂಕಟ ಪಡುತ್ತಿದ್ದದ್ದಲ್ಲದೇ ಆಕೆಯ ಹೊಟ್ಟೆಯೂ ಕೂಡಾ ದಿನೇ ದಿನೇ ಬೆಳೆಯಲು ಆರಂಭಿಸಿದಾಗ, ಆಕೆಯ ತಾಯಿಯು ಅಕೆಯನ್ನು ಪಿಸ್ಕೋದ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆರಂಭದಲ್ಲಿ ಅವಳ ಹೊಟ್ಟೆಯಲ್ಲಿ ದೊಡ್ಡದಾದ ಗೆಡ್ಡೆಯೊಂದು ಬೆಳೆಯುತ್ತಿರಬಹುದು ಎಂದೇ ಆರಂಭದಲ್ಲಿ ನಂಬಿದ್ದರಾದರೂ ನಂತರ ಕೂಲಂಕಷವಾಗಿ ಪರೀಕ್ಷಿಸಿದ ಡಾ. ಗೆರಾರ್ಡೊ ಲೊಜಾಡಾ ಎಂಬ ವೈದ್ಯೆ ಆಶ್ವರ್ಯಚಕಿತರಾಗಿ ಹೋದರು. ಕೇವಲ ಐದು ವರ್ಷದ ಆ ಹಾಲುಗಲ್ಲದ ಹಸುಳೆ ಗರ್ಭಿಣಿಯಾಗಿದ್ದಳು.… Read More ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಅಚ್ಚುತಾ ಅನಂತಾ ಗೋವಿಂದಾ. ಭಾಗ-2

ಇಡೀ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಗಿದ್ದಾಗ ಸ್ಯಾಮ್ ಕೂಡ ಕೆಲ ಕಾಲ ಗಲಿಬಿಲಿಗೊಂಡಿದ್ದ. ಅದೇ ಸಮಯದಲ್ಲಿ ಸ್ಯಾಮ್ ಗೆ ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚುತಾ, ಅನಂತಾ, ಗೋವಿಂದಾ ಎಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಂದ ಕಷ್ಟಗಳೆಲ್ಲವೂ ಸುಲಭವಾಗಿ ಪರಿಹಾರವಾಗುತ್ತದೆ ಎಂದು  ತನ್ನ ಅಜ್ಜಿ ಹೇಳಿಕೊಟ್ಟ ದಿವ್ಯ ಮಂತ್ರ ನೆನಪಾಯಿತು. ಕೂಡಲೇ ಎದ್ದು ನಿಂತು ಎತ್ತರದ ಧ್ವನಿಯಲ್ಲಿ  ಎಲ್ಲರೂ ಇಲ್ಲಿ ಸ್ವಲ್ಪ ಗಮನವಿಟ್ಟು ಕೇಳಿ, ಅನಗತ್ಯವಾಗಿ ಭಯ ಪಡದಿರಿ. ನನ್ನ ಬಳಿ ಅದಕ್ಕೆ ಪರಿಹಾರವಿದೆ ಮತ್ತು ನಾನು ಜಪಿಸುವುದನ್ನು ನೀವೂ ಸಹಾ… Read More ಅಚ್ಚುತಾ ಅನಂತಾ ಗೋವಿಂದಾ. ಭಾಗ-2

ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಭಾರತದ ದೇಶದಲ್ಲಿ ಅದೋಂದು ಸಣ್ಣ ಗ್ರಾಮ. ಆ ಗ್ರಾಮದಲ್ಲೊಬ್ಬ ವೃದ್ದ ದಂಪತಿಗಳು ವಾಸಿಸುತ್ತಿದ್ದರು. ಮನೆಯ ಹತ್ತಿರವೇ ನದಿಯೊಂದು ಹರಿಯುತ್ತಿದ್ದ ಕಾರಣ ಅವರ ಭಾವಿಯಲ್ಲಿ ಕೇವಲ  10 ಅಡಿಗಳ ಆಳದಲ್ಲಿಯೇ ನೀರಿದ್ದರಿಂದ  ಅವರ  ಮನೆಯ  ಸುತ್ತಲೂ ಮಾವು, ತೆಂಗು, ಹಲಸಿನ ಮರಗಳಲ್ಲದೇ ದಿನ ನಿತ್ಯ ಪೂಜೆಗೆ ಬೇಕಾಗುವಂತಹ ಹೂವಿನ ಗಿಡಗಳಲ್ಲದೇ, ಮನೆಗೆ ಅವಶ್ಯಕವಾಗಿದ್ದ ತರಕಾರಿಗಳನ್ನೂ ತಮ್ಮ ಕೈತೋಟದಲ್ಲಿಯೇ ಬೆಳೆಯುತ್ತಾ ಆನಂದಮಯ ಜೀವನವನ್ನು ನಡೆಸುತ್ತಿದ್ದರು. ಇದಲ್ಲದೇ ಅವರ ಬಳಿ ಭತ್ತ ಬೆಳೆಯುವ ಫಲವತ್ತದ ಸಾಕಷ್ಟು ಗದ್ದೆಯಿದ್ದು ಜೀವನಕ್ಕೇನೂ ಕೊರತೆ ಇರರಲಿಲ್ಲವಾದರೂ,… Read More ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಎಲ್ಲರಿಗೂ ಗೊತ್ತಿರುವಂತೆ ಅಮೇರಿಕಾದ ಜನರಲ್ ಮೋಟಾರ್ಸ್ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪುರಾತನವಾದ ಮತ್ತು ಅಷ್ಟೇ ದೊಡ್ಡ ಹೆಸರನ್ನು ಗಳಿಸಿದೆ. ಆ ಕಂಪನಿಯ ವಾಹನಗಳನ್ನು ಹೊಂದಲು ಇಂದಿಗೂ ಜನ ಹೆಮ್ಮೆ ಪಡುತ್ತಾರೆ. ಆದರೆ ಆಂತಹ ಜನರಲ್ ಮೋಟಾರ್ಸ್ ಕಂಪನಿಯನ್ನೇ ಒಂದು ವೆನಿಲ್ಲಾ ಐಸ್ ಕ್ರೀಮ್ ಗೊಂದಲಕ್ಕೀಡು ಮಾಡಿದಂತಹ ಜನರಲ್ ಮೋಟಾರ್ಸ್ ಗ್ರಾಹಕ ಮತ್ತು ಅದರ ಗ್ರಾಹಕ-ಆರೈಕೆ ಕಾರ್ಯನಿರ್ವಾಹಕರ ನಡುವೆ ನಡೆದ ಒಂದು ನೈಜ ರೋಚಕವಾದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದೊಂದು ದಿನ ಜನರಲ್ ಮೋಟಾರ್ಸ್‌ನ ಕಂಪನಿಯ ಫಾನ್ಟಿಯಾಕ್ ಕಾರನ್ನು… Read More ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್

ಮಹಾಭಾರತದಲ್ಲಿ ಪಂಚ ಪಾಂಡವರಿಗೂ ಮತ್ತು ಕೌರವರಿಗೂ ಅಧಿಕಾರಕ್ಕಾಗಿ ದಾಯಾದಿ ಕಲಹ ಇದ್ದದ್ದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕೌರವರ ರಾಜ ದುರ್ಯೋಧನ ಯಾವ ಬಗೆಯಲ್ಲಾದರೂ ಪಾಂಡವರನ್ನು ನಾಶ ಮಾಡಲು ಒಂದಲ್ಲಾ ಒಂದು ಯೋಜನೆಗಳನ್ನು ಹಾಕುತ್ತಾ, ಕಡೆಗೆ ಕುಂತಿಯಾದಿಯಾಗಿ ಇಡೀ ಪಾಂಡವರನ್ನೇ ಹತ್ಯೆ ಮಾಡಲು ನಿರ್ಧರಿಸಿ ವಾರಣಾವತ ಎಂಬಲ್ಲಿ ಅರಗಿನ ಅರಮನೆಯೊಂದನ್ನು ನಿರ್ಮಿಸಿ ಪಾಂಡವರನ್ನು ಅಲ್ಲಿರಿಸಿ ಯಾರಿಗೂ ತಿಳಿಯದಂತೆ ಆ ಅರಗಿನ ಅರಮನೆಗೆ ಬೆಂಕಿ ಹಚ್ಚಿ , ಪಂಚ ಪಾಂಡವರನ್ನು ಒಮ್ಮೆಲೆಯೇ ನಾಶ ಮಾಡುವ ಉಪಾಯ ಹೂಡಿದನು. ಕೌರವರ ಆಸ್ಥಾನದಲ್ಲಿ… Read More ಲಾಕ್ಷಾಗೃಹ ಮತ್ತು ಕೂರೋನಾ ಲಾಕ್ ಡೌನ್

ಲಭ್ಯ

ಹೆಣ್ಣು, ಹೊನ್ನು ಮತ್ತು ಮಣ್ಣು ಎಲ್ಲವೂ ಲಭ್ಯ ಇದ್ದಲ್ಲಿ ಮಾತ್ರವೇ ಎಲ್ಲರಿಗೂ ಸಿಗುತ್ತದೆ ಎನ್ನುವುದು ದೊಡ್ಡವರು ಹೇಳುವ ಮಾತು. ಕಷ್ಟ ಪಟ್ಟು, ಬಿಸಿಲಿನಲ್ಲಿ ಬವಳಿ ಬೆಂದು, ಅಕ್ಕ ಪಕ್ಕದವರೊಡನೆ ಕಾದಾಡಿ, ಹೋರಾಡಿ ಸರದಿಯಲ್ಲಿ ನಿಂತು ಖರೀದಿಸಿದ ಕಲ್ಲೆಣ್ಣೆ (ಸೀಮೇಎಣ್ಣೆ ) ಅಂತಿಮವಾಗಿ ನಮಗೆ ಸಿಗದೇ, ಲಭ್ಯ ಇದ್ದವರಿಗೇ ಸಿಕ್ಕಾಗ ಆಗುವ ಸಿಟ್ಟು ಸೆಡವು ನಿಜಕ್ಕೂ ಹೇಳಲಾಗದು. ಅಂತಹ ರೋಚಕ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಗ ಎಂಭತ್ತರ ದಶಕ. ಆಗ ತಾನೇ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದೆ. ಊರಿನಲ್ಲಿದ್ದ… Read More ಲಭ್ಯ

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಕಳೆದ ಎರಡು ಸಂಚಿಕೆಗಳಲ್ಲಿ ನಮ್ಮ ಪಿಂಟು ಅರ್ಥಾತ್ ಶ್ರೀನಿವಾಸನ ಬಾಲ್ಯ, ಕುಟುಂಬ ಮತ್ತು ಅವನ ಯೌವನದ ಆಟಪಾಠಗಳ ಬಗ್ಗೆ ತಿಳಿದುಕೊಂಡಿದ್ದೆವು ಈ ಸಂಚಿಕೆಯಲ್ಲಿ ಅವನ ವಿದ್ಯಾಭ್ಯಾಸದ ನಂತರದ ಅವನ ಜೀವನದ ಪ್ರಮುಖ ಘಟ್ಟದ ಬಗ್ಗೆ ತಿಳಿಯೋಣ. ಈ ಮೊದಲೇ ತಿಳಿಸಿದಂತೆ ನಮ್ಮ ಪಿಂಟೂವಿನ ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೇಂದ್ರಸರ್ಕಾರಿ ಕೆಲಸದಲ್ಲಿ ಇದ್ದದ್ದರಿಂದ ಆರ್ಥಿಕವಾಗಿ ತಕ್ಕ ಮಟ್ಟಿಗೆ ಇದ್ದರೂ ಸಹಾ, ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ನಮ್ಮ ಪಿಂಟು ಸಹಾ ತನ್ನ ಡಿಪ್ಲಮೋ ಕೋರ್ಸ್ ಮುಗಿಸಿದ ಮೇಲೆ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಬೇಡುವ ಕೈಗಳ ಹಿಂದಿನ ಕಹಿ ಸತ್ಯ

ಶಂಕರ ಮೊನ್ನೆ ವಾರಾಂತ್ಯದಲ್ಲಿ ಮಡದಿಯೊಂದಿಗೆ ಮಲ್ಲೇಶ್ವರಂಗೆ ಹೋಗಿದ್ದ. ಸಂಜೆಗತ್ತಲು ವಾಹನ ನಿಲ್ಲಿಸಲು ಸ್ಥಳ ಸಿಗದೇ ಪರದಾಡುತ್ತಿದ್ದಾಗ ಯಾರೋ ಒಬ್ಬರು ವಾಹನ ತೆಗೆಯುತ್ತಿದ್ದದ್ದನ್ನು ನೋಡಿ ಮರುಭೂಮಿಯಲ್ಲಿ ನೀರುವ ಸಿಗುವ ಓಯಸಿಸ್ ನಂತೆ ಕಂಡು ಕೂಡಲೇ ಆಲ್ಲಿಗೆ ಹೋಗಿ ವಾಹನ ನಿಲ್ಲಿಸುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಕೈ ಚಾಚಿದಂತಾಯಿತು. ಬೆನ್ನ ಹಿಂದ್ದಿದ್ದರಿಂದ ಆ ವ್ಯಕ್ತಿ ಯಾರು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ ಕೈಗಳಲ್ಲಿದ್ದ ಚಿಲ್ಲರೇ ಕಾಸು ಮತ್ತು ನಡುಗುತ್ತಿದ್ದ ಕೈಗಳಿಂದಾಗಿ ಯಾರೋ ವಯೋವೃದ್ಧರು ಹೊಟ್ಟೆಯ ಪಾಡಿಗೆ ಭಿಕ್ಷೇ ಬೇಡುತ್ತಿದ್ದಾರೆ ಎಂದು ತಿಳಿದ ಶಂಕರ,… Read More ಬೇಡುವ ಕೈಗಳ ಹಿಂದಿನ ಕಹಿ ಸತ್ಯ