ಈ ಬಂಧ ಅನುಬಂಧ

ಕಳೆದ ಒಂದು ವಾರದಿಂದ ಕಛೇರಿಯಲ್ಲಿ ಬಹಳ ಕೆಲಸವಿದ್ದ ಕಾರಣ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದಾಗ ನಗು ಮುಖದಿಂದಲೇ ಸ್ವಾಗತಿಸಿದ ನನ್ನ ಮಡದಿ, ಜನ್ಮದಿನದ ಶುಭಾಶಯಗಳು ಎಂದು ಆತ್ಮೀಯವಾಗಿ ಹೇಳಿದಾಗ ಮನಸ್ಸಂತೋಷವಾಯಿತು. ಆಶ್ವಯುಜ ‌ಶುಧ್ಧ ಪಂಚಮಿ,  ದಸರಾ ಹಬ್ಬದ ಐದನೆಯ ದಿನ, ಜನ್ಮ ತಿಥಿ‌ಯ ಪ್ರಕಾರ ನನ್ನ ಹುಟ್ಟಿದ ದಿನ. ‌ಛೇ, ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಹುಟ್ಟು ಹಬ್ಬದ ‌ಶುಭಾಶಯಗಳನ್ನು ಹೇಳಿ ಐದುನೂರರ ಎರಡು ನೋಟುಗಳನ್ನು ನನ್ನ ಜೋಬಿನಲ್ಲಿ ಇರಿಸಿ ಹೃದಯಪೂರ್ವಕವಾಗಿ… Read More ಈ ಬಂಧ ಅನುಬಂಧ

ಆಭರಣ ಅಂಗಡಿಯ ಅವಾಂತರ

ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು… Read More ಆಭರಣ ಅಂಗಡಿಯ ಅವಾಂತರ

ಕೆಜಿಎಫ್-2

ಅದೊಮ್ಮೆ ಒಬ್ಬ ತಂದೆ ತನ್ನ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಿರುತ್ತಾರೆ. ಆಲ್ಲಿ ಬಗೆ ಬಗೆ ಭಯಾನಕ, ಸಾಧು ಪ್ರಾಣಿಗಳು, ಪಶು ಪಕ್ಷಿಗಳು, ಸರಿಸೃಪಗಳು ಹೀಗೆ ಎಲ್ಲವನ್ನೂ ಗೂಡಿನಲ್ಲೋ‍, ಪಂಜರದೊಳಗೂ ಇಲ್ಲವೇ ಗಟ್ಟಿಯಾಗಿ ಬಂಧಿಸಲ್ಪಟ್ಟಂತೆ ನೋಡಿಕೊಂಡು ಬರುವಾಗ ಮತ್ಯಾಲಯದ ಬಳಿ ಬಂದು ಅಲ್ಲಿ ವಿಧ ವಿಧ ರೂಪದ ಬಣ್ಣ ಬಣ್ಣದ ಮೀನುಗಳನ್ನು ಕಣ್ತುಂಬ ನೋಡಿ ಆನಂದಿಸುತ್ತಿರುವಾಗ ಒಂದು ತೆರೆದ ಗಾಜಿನ ದೊಡ್ಡ ಬೋಗುಣಿಯಲ್ಲಿರುವ ಏಡಿಗಳನ್ನು ನೋಡಿ ಆಶ್ವರ್ಯ ಚಕಿತರಾಗಿ, ಅಪ್ಪಾ ಇಲ್ನೋಡಿ ಎಲ್ಲಾ ಪ್ರಾಣಿ ಪಕ್ಷಿಗಳು ತಪ್ಪಿಸಿಕೊಂಡು ಹೋಗದಂತೆ ಒಂದಲ್ಲಾ… Read More ಕೆಜಿಎಫ್-2

ಕೆಜಿಎಘ್-1

ಕೆಜಿಎಘ್ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ವಿಶೇಷವಾಗಿ ಮತ್ತು ರೋಚಕಚಾಗಿ ಚಿತ್ರಿಕರಣವಾಗಿದೆ ಮತ್ತು ಬಿಡುಗಡೆಯ ಮುಂಚೆಯೇ ಪ್ರಪಂಚಾದ್ಯಂತ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಡೀ ಚಿತ್ರತಂಡ ಸುಮಾರು ಎರಡು ಮೂರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಪರಿಶ್ರಮ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟೀಸರ್ನಲ್ಲಿ ನೋಡಬಹುದಾಗಿದೆ.  ಕನ್ನಡದ ಹುಡುಗರೂ ಈ ರೀತಿಯಾಗಿ ಹಾಲಿವುಡ್ ಚಿತ್ರಗಳಿಗೆ ಸರಿಸಮನಾಗಿ ನಿಲ್ಲಬಲ್ಲಂತಹ ಚಿತ್ರಗಳನನ್ನು ಮಾಡಬಹುದು ಎಂದು ಜಗತ್ತಿಗೆ ತೋರಿಸಿರುವುದು ಮತ್ತು ಅದನ್ನು  ಈಗಾಗಲೇ ಚಲಚಿತ್ರ ರಂಗದ ನಾನಾ… Read More ಕೆಜಿಎಘ್-1

ಕೆಲಸದ ಅರ್ಹತೆ

ಅದೊಂದು ದೊಡ್ಡ ‌ನಗರ‌ ಅಲ್ಲೊಬ್ಬ‌ ಬಲು ದೊಡ್ಡ ಉದ್ಯಮಿ ಹಾಗೂ ರಾಜಕಾರಣಿಗಳಾಗಿದ್ದರು. ಅವರಿಗೆ   ಶಿಕ್ಷಣ ‌ಸಂಸ್ಥೆಗಳು,  ಗೋಶಾಲೆಗಳು, ಧಾರ್ಮಿಕ‌ದತ್ತಿಗಳು, ಜವಳಿ ಅಂಗಡಿಗಳು ಹಾಗೂ ಇನ್ನೂ  ತರ ತರಹದ ವ್ಯಾಪಾರಗಳು ಇದ್ದವು. ಅವರಿಗೆ  ಮೂರು ಗಂಡು ಮಕ್ಕಳಿದ್ದು,  ವಿದ್ಯಾವಂತರಾಗಿ ತಂದೆಯ ವ್ಯಾಪಾರ ‌ವಹಿವಾಟುಗಳಿಗೆ ಸಹಕರಿಸುತ್ತಿದ್ದರು.‌ ಸಹಜವಾಗಿ ತಂದೆಯವರಿಗೆ ವಯಾಸ್ಸಾಗುತ್ತಿದ್ದಂತೆಯೇ ತಮ್ಮ ವ್ಯವಹಾರಗಳನ್ನು ತಮ್ಮ ಮಕ್ಕಳಿಗೆ ಹಂಚಿ‌‌ ವಿಶ್ರಾಂತ ‌ಜೀವನ ನಡೆದಸಲು ಯೋಚಿಸಿ‌ ಯಾವ ಯಾವ ಮಕ್ಕಳಿಗೆ ‌ಯಾವ ರೀತಿಯ ವ್ಯವಹಾರಗಳನ್ನು ಹಂಚಬೇಕೆನ್ನುವ ಜಿಜ್ಞಾಸೆಯಲ್ಲಿದ್ದರು. ಅದೊಂದು ಬೇಸಿಗೆಯ ದಿನ  ಹೊರಗಡೆ… Read More ಕೆಲಸದ ಅರ್ಹತೆ

ಸ್ವಾಮಿ ಭಕ್ತಿ ಮತ್ತು ಕರ್ತ್ಯವ್ಯ ನಿಷ್ಠೆ

ಅದೊಂದು ದೊಡ್ಡನಗರ ಅಲ್ಲೊಂದು ಬಾರೀ ವ್ಯವಹಾರಸ್ಥರ ಮನೆ.  ಅವರ ವ್ಯವಹಾರ ಇಡೀ ಪ್ರಪಂಚಾದ್ಯಂತ ಹರಡಿದ್ದು ಕುಟುಂಬದ ಯಜಮಾನರು ಸದಾ ಕಾಲ ದೇಶ ವಿದೇಶಗಳನ್ನು ಸುತ್ತುತ್ತಿದ್ದು, ಅಗೊಮ್ಮೆ ಈಗೊಮ್ಮೆ  ಕುಟುಂಬದೊಡನೆ ಕಾಲ ಕಳೆಯುತ್ತಿದ್ದದ್ದು ಸಹಜ ಪ್ರಕ್ರಿಯೆಯಾಗಿತ್ತು. ಅದೊಂದು ದಿನ ಯಾವುದೋ ಕೆಲಸದ ನಿಮಿತ್ತ  ಉದ್ಯೋಗಪತಿಗಳು ಪರ ಊರಿಗೆ ಹೊರಡಲು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಹಾಗಾಗಿ  ಬೆಳ್ಳಂಬೆಳಿಗ್ಗೆಯೇ  ತಮ್ಮ ಮನೆಯಿಂದ ಹೊರಡಲು ಅನುವಾಗಿ ತಮ್ಮ ಕಾರನ್ನೇರಿ ಹೊರಟು ಮನೆಯ ಮುಂಬಾಗಿಲಿಗೆ ಬಂದಾಗ ಅವರ ಮನೆಯ ರಾತ್ರಿಯ ಪಾಳಿಯ ಕಾವಲುಗಾರ ಎಂದಿನಂತೆ ಪ್ರೀತಿಯಿಂದ… Read More ಸ್ವಾಮಿ ಭಕ್ತಿ ಮತ್ತು ಕರ್ತ್ಯವ್ಯ ನಿಷ್ಠೆ

ಛಲವಿದ್ದಲ್ಲಿ ಗೆಲುವಿದೆ.

ಶಂಕರ ಒಂದು ಸಣ್ಣ ಅಕೌಂಟಿಂಗ್ ಸಾಫ್ಟ್ವೇರ್  ಕಂಪನಿಯೊಂದರಲ್ಲಿ  ಕಸ್ಟಮರ್ ಸಪೋರ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ದಿನ ನಿತ್ಯದ ಕೆಲಸಗಳಿಗೆ ಇನ್ನಷ್ಟು ಜನರ  ಅವಶ್ಯಕತೆ ಇದ್ದದ್ದರಿಂದ ಕೆಲವು ಸಿಬ್ಬಂಧ್ಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಸಂಧರ್ಭದಲ್ಲಿಯೇ ಸತೀಶ್ ಅಲ್ಲಿಗೆ ಕೆಲಸ ಸೇರಿಕೊಂಡ ಅವನ ಜೊತೆಗೆ ಅವನ ಸಹೋದ್ಯೋಗಿಯಾಗಿದ್ದ ಬಾಲನನ್ನೂ ಒಂದೆರಡು ವಾರಗಳ ಅಂತರದಲ್ಲಿ ಅಲ್ಲಿಯೇ ಕೆಲಸಕ್ಕೆ ಸೇರಿಸಿದ. ಸತೀಶ್ ಬಿಎಸ್ಸಿ ಪದವೀಧರ ಆಗಷ್ಟೇ ಆವನಿಗೆ ಮದುವೆಯಾಗಿತ್ತು. ಬಾಲ ಬಿಕಾಂ ಪದವೀಧರ ಅವನಿಗಾಗಲೇ ಮದುವೆಯಾಗಿ ಒಬ್ಬ ಸಣ್ಣ ವಯಸ್ಸಿನ ಮಗನಿದ್ದ. ಇವರಿಬ್ಬರಿಗಿಂತಲೂ… Read More ಛಲವಿದ್ದಲ್ಲಿ ಗೆಲುವಿದೆ.

ಕೆಲಸ

ಶಂಕರ ಮತ್ತು  ಹರಿ ಇಬ್ಬರೂ ಪ್ರಾಣ ಸ್ನೇಹಿತರು. ಒಂದು ರೀತಿಯ ಚೆಡ್ಡಿ ದೋಸ್ತು ಕುಚಿಕು ಗೆಳೆಯರು. ಇಬ್ಬರೂ ಒಂದೇ ಶಾಲೆ .  ಹರಿ ತಂದೆ ಮತ್ತು ಶಂಕರನ ತಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆವರಿಬ್ಬರ ಮನೆ ಒಂದೇ ಕಡೆ ಇದ್ದುದ್ದರಿಂದ ಅವರಿಬ್ಬರ ಒಡನಾಟ ಹೆಚ್ಚಾಗಿಯೇ ಇತ್ತು.   ಹರಿಯ ತಾತ ಮತ್ತು ಚಿಕ್ಕಪ್ಪ ಅಡುಗೆ  ವೃತ್ತಿಯಲ್ಲಿದ್ದು ಅವರ ಮನೆಯಲ್ಲಿ ಏನಾದಾರೂ ವಿಶೇಷ ಆಡುಗೆ ಮಾಡಿದ್ದಲ್ಲಿ ಅದರಲ್ಲಿ ಶಂಕರನಿಗೆ ಒಂದು ಪಾಲು ಇದ್ದೇ  ಇರುತ್ತಿತ್ತು ಅಂತಹ ಗೆಳೆತನ ಅವರಿಬ್ಬರದ್ದು.… Read More ಕೆಲಸ

ಅಲ್ಲಾಭಕ್ಷ್ ರೀ ಸರಾ!!

ಶಂಕರ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ‌ಮ್ಯಾನೇಜರ್‌ ಆಗಿ ಕೆಲಸ‌ ಮಾಡುತ್ತಿದ್ದ. ಅದೊಂದು ದಿನ ಅವನ ಸಹೋದ್ಯೋಗಿ ವೀರೇಶ್ ತನ್ನ ಮದುವೆಗೆ ಕಛೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿಯೂ ಆಹ್ವಾನಿಸಿದ್ದಲ್ಲದೆ, ಖುದ್ದಾಗಿ ‌ಮನೆಗೂ ಬಂದೂ ಕುಟುಂಬ ಸಮೇತರಾಗಿ ‌ಬಾಗಲಕೋಟೆಯ‌ ಸಮೀಪದ ಗುಳೇದಗುಡ್ಡದಲ್ಲಿ ನಡೆಯುವ ತನ್ನ ವಿವಾಹಕ್ಕೆ ಬರಲು ಆಹ್ವಾನಿಸಿದ. ಮದುವೆಗೆ ಒಂದೆರಡು‌‌ ದಿನ ಮುಂಚಿತವಾಗಿ ಬಂದರೆ ‌ಸುತ್ತ ಮುತ್ತಲಿನ, ಕೂಡಲ ಸಂಗಮ, ಐಹೊಳೆ, ಬಾದಾಮಿ,ಬನಶಂಕರಿ, ಪಟ್ಟದಕಲ್ಲು ಮಹಾಕೂಟ ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ‌ಸ್ಥಳಗಳನ್ನೂ ನೋಡಬಹುದು ಎಂದು‌ ತಿಳಿಸಿದ. ಹೇಗೂ ಕೆಲವೇ… Read More ಅಲ್ಲಾಭಕ್ಷ್ ರೀ ಸರಾ!!