ಅನ್ನದಾತ ಸುಖೀಭವ

ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶ್ರೀ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಅವರ ಅನ್ನದಾತ ಪದ್ಯವನ್ನು ಓದಿಯೇ ಇರುತ್ತೇವೆ. ನಮ್ಮೆಲ್ಲರ ಅನ್ನದಾತರಾದ ರೈತರನ್ನು ಇದಕ್ಕಿಂತಲೂ ಉತ್ತಮವಾಗಿ ವರ್ಣಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮನಮುಟ್ಟುವಂತಿದೆ ಈ ಪದ್ಯ. ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನುನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸವನೆ ದುಡಿಯುತ ಗಟ್ಟಿ ದೇಹ ದೊಡ್ಡ ಮನಸು ದೇವನಿಂದ… Read More ಅನ್ನದಾತ ಸುಖೀಭವ

ವಿಜಯ ದಿವಸ್ ಮತ್ತು ಪ್ರಹಾರ ದಿವಸ್

ಡಿಸೆಂಬರ್ 16, 1971 ನಿಜಕ್ಕೂ ನಮ್ಮ ಭಾರತದ ಮೂರೂ ಸೇನೆಗಳಿಗೆ ಅತ್ಯಂತ ಸ್ಮರಣಿಯ ದಿನ. ಇಡೀ ಪ್ರಪಂಚವೇ ನಮ್ಮ ವಿರುದ್ಧವಾಗಿದ್ದರೂ, ಸ್ವತಃ ಅಮೇರಿಕಾ ಹಿಂಬಾಗಿಲಿನಿಂದ ಪಾಕೀಸ್ಥಾನಕ್ಕೆ ಸಹಾಯ ಮಾಡುತ್ತಿದ್ದರೂ, ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇಲ್ಲದಿದ್ದರೂ ನಮ್ಮ ಭೂ,ವಾಯು ಮತ್ತು ಜಲ ಸೇನೆಗಳು ಜಂಟಿಯಾಗಿ ಛಲದಿಂದ ಪಾಕೀಸ್ಥಾನದ ವಿರುದ್ಧ ಜನರಲ್ ಮಾಣಿಕ್ ಷಾ ಅವರ ನೇತೃತ್ವದಲ್ಲಿ ಹೋರಾಡಿ ಸುಮಾರು 93000ಕ್ಕೂಅಧಿಕ ಪಾಕೀ ಸೈನಿಕರನ್ನು ಸೆರೆಗೈದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಅಂದಿನ ಪೂರ್ವ ಪಾಕೀಸ್ಥಾನದ ಜೆನರಲ್… Read More ವಿಜಯ ದಿವಸ್ ಮತ್ತು ಪ್ರಹಾರ ದಿವಸ್

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ಬಾರಿಯ ಆಗಶ್ಟ್ 15, 2019 ಒಂದು ರೀತಿಯ ಅಪರೂಪದ ದಿನ. ನಾಡಿಗೆ 73ನೇ  ಸ್ವಾತಂತ್ರ್ಯ ದಿನಾಚರಣೆ, ಕೆಚ್ಚದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಡಗರವಾದರೇ  ಇನ್ನು ಮನೆಗಳಲ್ಲಿ ನಾರಿಯರಿಗೆ   ರಕ್ಷಾಬಂಧನದ  ಸಂಭ್ರಮ,  ಬಹುತೇಕ ನರರಿಗೆ ನೂಲುಹುಣ್ಣಿಯ ಆಚರಣೆ.  ಅಂಗಡಿಯಲ್ಲಿ ಒಂದೆಡೆ ನೂರಾರು ತ್ರಿವರ್ಣ ಧ್ವಜದ ಭರಾಟೆಯಾದರೆ ಮತ್ತೊಂದೆಡೆ ಸಾವಿರಾರು ರಾಖಿಗಳ  ಸರಮಾಲೆ ಮತ್ತೊಂದೆಡೆ ಸದ್ದಿಲ್ಲದೆ ಕೆಲವಾರು ಜನಿವಾರಗಳ ಮಾರಾಟ. ಒಟ್ಟಿನಲ್ಲಿ ಎಲ್ಲರಿಗೂ ಕೊಂಡಾಟವೇ ಕೊಂಡಾಟ. ಮೂರ್ನಾಲ್ಕು  ದಿನಗಳಿಂದ  ಆರೋಗ್ಯ ಸರಿಯಿಲ್ಲದೇ  ಗೃಹಬಂಧನದಲ್ಲಿಯೇ ಇದ್ದ ನನಗೆ ಇಂದು… Read More 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಕಾಮುಕ

ನೆನ್ನೆ ಕಳೆದ ಒಂದೂವರೆ ತಿಂಗಳು ನಡೆದ ಮಹಾಚುನಾಚಣೆಯ ಅಂತಿಮ ಫಲಿತಾಂಶದ ದಿನ. ಚುನಾವಣಾ ಸ್ಪರ್ಧಿಗಳಿಗೆ ಎಷ್ಟು ಒತ್ತಡ, ಕಾತುರ ಮತ್ತು ಕುತೂಹಲ ಇರುತ್ತದೋ ಅದಕ್ಕಿಂತಲೂ ಹೆಚ್ಚಿನ ಒತ್ತಡಕ್ಕೊಳಗಾಗಿ ರಾತ್ರಿಎಲ್ಲಾ ನಿದ್ದೆಯೇ ಬಾರದೆ, ಮುಂಜಾವ ನಾಲ್ಕುವರೆ ಘಂಟೆಗೇ ಎಚ್ಚರಗೊಂಡು ಪ್ರಾತರ್ವಿಧಿಗಳನ್ನು ಮುಗಿಸಿ, ಭಗವಂತಾ, ದೇಶಕ್ಕೆ ಸುಭದ್ರ ಮತ್ತು ಸಮರ್ಥ ನಾಯಕತ್ವ ಮತ್ತೊಮ್ಮೆ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ನಿರ್ಗಮನ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ದರಿಂದ ಚುನಾವಣೆ ಫಲಿತಾಂಶದ ದಿನ ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನೇರವಾಗಿ ಫಲಿತಾಂಶ… Read More ಕಾಮುಕ

ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಕಳೆದ ಎರಡು ತಿಂಗಳುಗಳಲ್ಲಿ , ಇಡೀ ವಿಶ್ವದ ಚಿತ್ತ ನಮ್ಮ ದೇಶದತ್ತ ಇತ್ತು. ಕಾರಣ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಲಿತ್ತು. ಬಹುಶಃ ಪ್ರಪಂಚದ ಅತ್ಯಂತ ದೀರ್ಘಕಾಲದ ಮತ್ತು ಅತ್ಯಂತ ಹೆಚ್ಚಿನ ಕ್ಷೇತ್ರಗಳು ಮತ್ತು ಮತದಾರರು ಪಾಲ್ಗೊಂಡ ಚುನಾವಣೆ ಎಂದರೆ ಇದುವೇ ಇರಬೇಕು. 2014 ರಲ್ಲಿ UPA-1 ಮತ್ತು UPA-2ರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಭಾರತೀಯರಿಗೆ ತಮ್ಮ ದೇಶವನ್ನು ಮುನ್ನಡೆಸಲು ಕಾಣಿಸಿದ ಏಕೈಕ ಆಶಾಕಿರಣವೆಂದರೆ ನರೇಂದ್ರ ದಾಮೋದರ್ ದಾಸ್ ಮೋದಿ. ಅರ್ಥಾತ್… Read More ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಬ್ಲಾಕ್ ಟೈಗರ್

ಲೇಖಕರು : ಶ್ರೀ ನಿರಂಜನ್ ಹವ್ಯಾಸಿ ಬರಹಗಾರರು ದೇಶದ ರಕ್ಷಣೆಗೆ ಸಂಬಂಧ ಪಟ್ಟ ವಿಷಯದಲ್ಲಿ ಗೂಢಾಚಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ.   ಅವರು ದೇಶಕ್ಕಾಗಿ ತಮ್ಮ ಜೀವನದ ಹಂಗನ್ನೇ ತೊರೆದು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಶತೃ ರಾಷ್ಟ್ರಗಳಲ್ಲಿ  ಕೆಲಸ ನಿರ್ವಹಿಸುತ್ತಾ ಕಾಲ ಕಾಲಕ್ಕೆ ಶತೃ ದೇಶದ ಗೌಪ್ಯ ಮಾಹಿತಿಗಳನ್ನು ತಮ್ಮ ಮಾತೃದೇಶಕ್ಕೆ ಕಳುಹಿಸಿಕೊಡುತ್ತಾ ಶತೃಗಳ ಆಕ್ರಮಣದಿಂದ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಭಾಗಿಗಳಾಗಿರುತ್ತಾರೆ. ಅಂತಹ ಒಬ್ಬ ಧೀರ ಯೋಧ ಗೂಢಾಚಾರಿ ಆಗಿದ್ದ  ದಿ. ಶ್ರೀ ರವೀಂದ್ರ ಕೌಶಿಕ್ ಅವರ ಕುರಿತಾಗಿ… Read More ಬ್ಲಾಕ್ ಟೈಗರ್

Nation First Everything Next

ಒಂದನೊಂದು ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡು ಇತ್ತು. ಆ ಕಾಡಿನ ಒಂದು ದೊಡ್ಡ ಮರವೊಂದರಲ್ಲಿ ಹಲವಾರು ಪಕ್ಷಿಗಳು ಸುಖವಾಗಿ ವಾಸಮಾಡಿ ಕೊಂಡಿದ್ದವು. ಅಂತಹ ಪಕ್ಷಿಗಳ ಸಂಕುಲಗಳಲ್ಲಿ ಒಂದು ಗಂಡುಬೇರುಂಡ ಪಕ್ಷಿಯೂ ಇತ್ತು. ಎಲ್ಲರಿಗೂ ತಿಳಿದಿರುವಂತೆ ಗಂಡುಬೇರುಂಡ ಪಕ್ಷಿಗೆ ಒಂದೇ ದೇಹ ಎರಡು ತಲೆಗಳು ಇರುತ್ತಿದ್ದವು. ಈಗ ಈ ಪಕ್ಷಿಗಳು ನಶಿಸಿ ಹೋಗಿರುವುದರಿಂದ ಅದರ ಜ್ಣಾಪಕಾರ್ಥವಾಗಿ ನಮ್ಮ ರಾಜ್ಯದ ಅಧಿಕೃತ ಲಾಂಛನದ ಮಧ್ಯಭಾಗದಲ್ಲಿ ಗಂಡುಬೇರುಂಡ ಪಕ್ಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ಗಂಡುಬೇರುಂಡ ಪಕ್ಷಿಯು ಇತರೇ ಪಕ್ಷಿಗಳಂತೆ ಕಾಡಿನಲ್ಲಿದ್ದ ಹಲವಾರು… Read More Nation First Everything Next