ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು. ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ… Read More ರಾಮ ಹೆಚ್ಚೋ, ರಾವಣ ಹೆಚ್ಚೋ‌

ನಾನು ಹೇಗೆ ಸಣ್ಣಗಾದೆ

ಈ ಹಿಂದೆ ನಾನೇ ಹಲವಾರು ನನ್ನ ಬರಹಗಳಲ್ಲಿ ತಿಳಿಸಿದ್ದಂತೆ ನಾನು ಕಾಲೇಜು ಓದುತ್ತಿರುವಾಗಲೂ ಸಣ್ಣಗೆ ಕುಳ್ಳಗಿದ್ದು , ನಮ್ಮ ತಾಯಿವರು ಕುಟುಂಬದ ವೈದ್ಯರ ಬಳಿ ಹಲವಾರು ಸಲ ತೋರಿಸಿ, ನಮ್ಮ ಮಗನಿಗೆ ಸ್ವಲ್ಪ ಉದ್ದ ಹಾಗು ದಷ್ಟ ಪುಷ್ಟವಾಗಿ  ಆಗುವಂತೆ ಏನಾದರೂ ಔಷಧಿ ಇದ್ದರೆ ಕೊಡಿ ಎಂದು ಕೇಳಿದ್ದದ್ದು ಇನ್ನೂ ಹಚ್ಚ ಹಸುರಾಗಿದೆ. ನಂತರ ವಯೋಗುಣವಾಗಿ ಬೆಳೆದನಾದರೂ ಸಣ್ಣಗೇ ಇದ್ದೆ.  ಮದುವೆ ಸಮಯದಲ್ಲೂ  ಮದುವೆಗೆ ಬಂದಿದ್ದ ನೆಂಟರಿಷ್ಟರೂ, ಸ್ನೇಹಿತರುಗಳು ನನ್ನನ್ನೂ  ಮತ್ತು ನನ್ನ ಅರ್ಧಾಂಗಿಯನ್ನು ನೋಡಿ, ಇದೇನು… Read More ನಾನು ಹೇಗೆ ಸಣ್ಣಗಾದೆ

ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಇವತ್ತು ರಾತ್ರಿ ಮುಗಿದು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ 1 ನೇ ತಾರೀಖು. ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಸಂಭ್ರವೋ ಸಂಭ್ರಮ. ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು… Read More ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ… Read More ಕರ್ಮಯೋಗಿ ಹಾಗೂ ಭಕ್ತಿಯೋಗಿ 

ರಾಮ ರಾವಣ -2

ನಾವೆಲ್ಲಾ ಓದಿದಂತೆ‌ ಇಲ್ಲವೇ ಕೇಳಿ ತಿಳಿದಂತೆ ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಅದ ಕಾರಣ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು ಎಂದು ನಮ್ಮ ಮನಃಪಠದಲ್ಲಿ ಅಚ್ಚೊತ್ತಿದೆ. ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ. ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ… Read More ರಾಮ ರಾವಣ -2

ರಾಮ ರಾವಣ-1

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ‌ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು. ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌… Read More ರಾಮ ರಾವಣ-1

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು.… Read More ಬುದ್ಧಿವಂತ ರೈತ

ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ಇತ್ತೀಚೆಗೆ ಹೊರ ಊರಿಗೆ ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರು ಪರಿಚಯವಾಗಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾಗ ಅವರು  ಬಹಳ ದೈವೀಕ ಭಕ್ತರೆಂದು ಅವರ ವೇಷ ಭೂಷಣ ಮತ್ತು ಅವರ ಸಂಭಾಷಣೆಯಿಂದಲೇ ವ್ಯಕ್ತವಾಯಿತು. ನನ್ನ ಬಗ್ಗೆ ವಿವರಿಸುತ್ತಿದ್ದಾಗ, ನಾನು ಬೆಂಗಳೂರಿನ ವಿದ್ಯಾರಣ್ಯಪುರದವನೆಂದು ಪರಿಚಯಿಸಿ ಕೊಳ್ಳುತ್ತಿದ್ದಾಗಲೇ, ಓಹೋ ನೀವು ವಿದ್ಯಾರಣ್ಯಪುರದವರಾ? ಬಹಳ ಅದೃಷ್ಟವಂತರಿದ್ದೀರಿ. ಅಲ್ಲಿಯ ಜಾಗ ತುಂಬಾನೇ ಪ್ರಶಾಂತವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ತಾಯಿ ದುರ್ಗಾ ಪರಮೇಶ್ವರಿ ಅಲ್ಲಿ ಶಾಶ್ವತವಾಗಿ ನೆಲೆ ಮಾಡಿರುವ ಕಾರಣ ಇಡೀ ಬಡಾವಣೆ ಸಾಂಸ್ಕೃತಿವಾಗಿ ಹಾಗೂ ಆರ್ಥಿಕವಾಗಿ ಅಭಿವೃಧ್ಧಿ… Read More ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ಈ ಬಂಧ ಅನುಬಂಧ

ಕಳೆದ ಒಂದು ವಾರದಿಂದ ಕಛೇರಿಯಲ್ಲಿ ಬಹಳ ಕೆಲಸವಿದ್ದ ಕಾರಣ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದಾಗ ನಗು ಮುಖದಿಂದಲೇ ಸ್ವಾಗತಿಸಿದ ನನ್ನ ಮಡದಿ, ಜನ್ಮದಿನದ ಶುಭಾಶಯಗಳು ಎಂದು ಆತ್ಮೀಯವಾಗಿ ಹೇಳಿದಾಗ ಮನಸ್ಸಂತೋಷವಾಯಿತು. ಆಶ್ವಯುಜ ‌ಶುಧ್ಧ ಪಂಚಮಿ,  ದಸರಾ ಹಬ್ಬದ ಐದನೆಯ ದಿನ, ಜನ್ಮ ತಿಥಿ‌ಯ ಪ್ರಕಾರ ನನ್ನ ಹುಟ್ಟಿದ ದಿನ. ‌ಛೇ, ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಹುಟ್ಟು ಹಬ್ಬದ ‌ಶುಭಾಶಯಗಳನ್ನು ಹೇಳಿ ಐದುನೂರರ ಎರಡು ನೋಟುಗಳನ್ನು ನನ್ನ ಜೋಬಿನಲ್ಲಿ ಇರಿಸಿ ಹೃದಯಪೂರ್ವಕವಾಗಿ… Read More ಈ ಬಂಧ ಅನುಬಂಧ