ಹರ್ ಘರ್ ತಿರಂಗ

ಪ್ರಧಾನಿಗಳು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಧರ್ಭದಲ್ಲಿ ಸಕಲ ಭಾರತೀಯರ ‌ಮನ ಮತ್ತು ಮನೆಗಳಲ್ಲಿ ದೇಶಾಭಿಮಾನವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಿ, ನಮ್ಮ ತ್ರಿವರ್ಣ ದ್ವಜವನ್ನು‌ ಆಗಸ್ಟ್13-15ರ ವರಗೆ ಎಲ್ಲರ ಮನೆಯ ಮೇಲೆ ಹಾರಿಸಬೇಕೆಂದು ಕೋರಿದ್ದಾರೆ.

ಹಿಂದೂಗಳ ಶ್ರಧ್ಧೇಯ ಭಗವಾ ಧ್ವಜದ ಬದಲು ಈ ತ್ರಿವರ್ಣ ಧ್ವಜ ಏಕೆ? ಮತ್ತು ಹೇಗೆ ಬಂದಿತು? ಈ ಧ್ವಜದ ರೂವಾರಿಗಳು ಯಾರು? ಎಂಬ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಹರ್ ಘರ್ ತಿರಂಗ

ಚಂದ್ರಶೇಖರ ಆಜಾದ್

ನ್ಯಾಯಾಧೀಶ: ನಿನ್ನ ಹೆಸರೇನು? ಹುಡುಗ: ಆಜಾದ್! ನ್ಯಾಯಾಧೀಶ: ತಂದೆಯ ಹೆಸರು? ಹುಡುಗ: ಸ್ವಾತಂತ್ರ ನ್ಯಾಯಾಧೀಶ: ಮನೆ ಎಲ್ಲಿದೆ? ಹುಡುಗ: ಸೆರೆಮನೆಯೇ ನನಗೆ ಮನೆ! ಇದು ನಾಟಕವೊಂದರ ಸಂಭಾಷಣೆಯಲ್ಲ. ಭಾರತ ಮಾತೆಗೆ ಜೈಕಾರ ಕೂಗಿ, ಬಿಳಿಯರ ವಿರುದ್ಧ ಎದ್ದುನಿಂತ ಹದಿನೈದರ ಪೋರನೊಬ್ಬನ ದಿಟ್ಟ ಉತ್ತರ. ಹೌದು. ಚಂದ್ರಶೇಖರ್ ಆಜಾದ್ ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಆತನಿಗಿನ್ನೂ ಹದಿನೈದೂ ದಾಟಿರಲಿಲ್ಲ. ಬ್ರಿಟೀಷರ ಭಿಕ್ಷೆಗೆ ಕೈಚಾಚದೇ ವಂದೇ ಮಾತರಂ ಎನ್ನುತ್ತಾ ಹನ್ನೆರಡು ಚಡಿ ಏಟುಗಳನ್ನು ಸ್ವೀಕರಿಸಿದ. ಇದರ ನಂತರ ಆತನಲ್ಲಿದ್ದ ರಾಷ್ಟ್ರೀಯತೆಯ ಭಾವ ಮತ್ತಷ್ಟು ಹೆಚ್ಚಾಯ್ತು.… Read More ಚಂದ್ರಶೇಖರ ಆಜಾದ್

ಶಿವಪುರದ ಸತ್ಯಾಗ್ರಹ ಸೌಧ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ… Read More ಶಿವಪುರದ ಸತ್ಯಾಗ್ರಹ ಸೌಧ

ಚಾಪೇಕರ್ ಸಹೋದರರು

ಇವತ್ತಿನ ಬಹುತೇಕ ರಾಜಕೀಯ ಪಕ್ಷದ ನಾಯಕರುಗಳು ನಮ್ಮವರು ಈ ದೇಶಕ್ಕಾಗಿ ಇಷ್ಟು ತ್ಯಾಗ ಮಾಡಿದ್ದಾರೆ ಅಷ್ಟು ತ್ಯಾಗ ಮಾಡಿದ್ದಾರೆ ಎಂದು ಪುಂಖಾನು ಪುಂಖವಾಗಿ ಹೇಳುತ್ತಲೇ ಜನರನ್ನು ಮರಳು ಮಾಡುತ್ತಿರುವ ಸಂಧರ್ಭದಲ್ಲಿ ಒಂದೇ ಕುಟುಂಬದ, ಅದರಲ್ಲೂ ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ಅಣ್ಣ ತಮ್ಮಂದಿರಾದ ಚಾಪೇಕರ್ ಸಹೋದರರನ್ನು ಬ್ರಿಟೀಷ್ ಅಧಿಕಾರಿಗಳು ಮತ್ತು ಮಿತ್ರದ್ರೋಹ ಎಸಗಿದ ಸಾಕ್ಷಿಯಾಗಿದ್ದ ಭಾರತೀಯನನ್ನು ಕೊಂಡಿದ್ದಕ್ಕಾಗಿ ಗಲ್ಲು ಶಿಕ್ಷೆಯನ್ನು ವಿಧಿಸಿದಾಗ ಅವರೆಲ್ಲರೂ ಸಂತೋಷದಿಂದ ಭಾರತಮಾತೆಗೆ ತಮ್ಮ ಪ್ರಾಣವನ್ನು ಅರ್ಪಿಸಿದ್ದನ್ನು ನೆನಪಿಸಿಕೊಂಡು ಆ ಸಹೋದರಿಗೆ ಎರಡು… Read More ಚಾಪೇಕರ್ ಸಹೋದರರು

ವೀರ ಕುನ್ವರ್ ಸಿಂಗ್

ಬ್ರಿಟೀಷರ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಮಂಗಲ್ ಪಾಂಡೆ 1857ರಲ್ಲಿ ಬ್ರಿಟೀಷ್ ಸೈನ್ಯದ ವಿರುದ್ಧವೇ ತಿರುಗಿ ಬಿದ್ದು ನಡೆಸಿದ ಹೋರಾಟವನ್ನು ಬ್ರಿಟೀಷರು ಸಿಪಾಯಿದಂಗೆ ಎಂದು ದಾಖಲಿಸಿದರೆ, ಭಾರತದ ನಿಜವಾದ ಇತಿಹಾಸಕಾರರು ಅದನ್ನು ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಎಂದೇ ಹೆಮ್ಮೆಯಿಂದ ಕರೆಯುತ್ತಾರೆ. ಮಂಗಲ್ ಪಾಂಡೆ ಹತ್ತಿಸಿದ ಸ್ವಾತ್ರಂತ್ರ್ಯದ ಕಿಚ್ಚನ್ನು ಬಿಹಾರ್ ಪ್ರಾಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಪ್ರಸ್ತುತ ಭಾರತದ ಬಿಹಾರದ ಭೋಜ್‌ಪುರ ಜಿಲ್ಲೆಯ ಭಾಗವಾಗಿರುವ ಜಗದೀಸ್‌ಪುರದ ಪರ್ಮಾರ್ ರಜಪೂತರ ಉಜ್ಜೈನಿಯಾ ಕುಲದ ಕುಟುಂಬಕ್ಕೆ ಸೇರಿದ್ದ ವೀರ್ ಕುನ್ವರ್ ಸಿಂಗ್ ಅವರಿಗೆ… Read More ವೀರ ಕುನ್ವರ್ ಸಿಂಗ್

ಅನಂತ ಲಕ್ಷ್ಮಣ ಕಾನ್ಹೇರೆ

ಇತಿಹಾಸ ತಿಳಿಯದ ಕೆಲವು ಅರಿವುಗೇಡಿಗಳು ವೀರ ಸಾವರ್ಕರ್ ಅವರೊಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು ಎಂದು ಪದೇ ಪದೇ ಹೇಳುವಾಗ ನಿಜಕ್ಕೂ ಮೈಯ್ಯಲ್ಲಿರುವ ರಕ್ತ ಕುರಿಯುತ್ತದೆ. ನಿಜ ಹೇಳಬೇಕೆಂದರೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಕರಾಗಿದ್ದಲ್ಲದೇ ಅವರ ಹಿಂದೆ ನಿಂತು ಅವರ ಎಲ್ಲಾ ಹೋರಾಟಗಳಿಗೂ ಶಕ್ತಿ ತುಂಬುತಿದ್ದದ್ದೇ ವೀರ ಸಾವರ್ಕರ್. ಅಂತಹ ವೀರ ಸಾವರ್ಕರ ಗರಡಿಯಲ್ಲಿ ತಯಾರಾಗಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ 18ರ ಪ್ರಾಯದಲ್ಲೇ 19 ಎಪ್ರಿಲ್ 1910 ರಂದು… Read More ಅನಂತ ಲಕ್ಷ್ಮಣ ಕಾನ್ಹೇರೆ

ವಿಧುರಾಶ್ವಥ, ದಕ್ಷಿಣ ಭಾರತದ ಜಲಿಯನ್ ವಾಲಾ ಭಾಗ್

ಏಪ್ರಿಲ್ 13 1919 ಅಂದರೆ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ ಪಂಜಾಬಿನ ಜಲಿಯನ್ ವಾಲಾ ಎಂಬ ಉದ್ಯಾನದಲ್ಲಿ ಸಂಭ್ರಮದಿಂದ ಭೈಸಾಖಿ ಹಬ್ಬವನ್ನು ಆಚರಿಸಲು ಸೇರಿದ್ದ ಸಹಸ್ರಾರು ದೇಶಭಕ್ತರ ಮೇಲೆ ಏಕಾ ಏಕಿ ಗುಂಡಿನ ಸುರಿಮಳೆಯನ್ನು ಸುರಿಸಿದ ಬ್ರಿಟಿಷರು ನೂರಾರು ಜನರ ಹತ್ಯೆಗೆ ಕಾರಣವಾಗಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಹಿ ಅಧ್ಯಾಯವಾಗಿರುವಂತೀಯೇ, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರಿನ ತಾಲ್ಲೂಕಿಗೆ ಸೇರಿರುವ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರವಾದ ವಿದುರಾಶ್ವತ್ಥದಲ್ಲೂ ಸಹಾ ಸ್ವಾತಂತ್ರ್ಯ ಪೂರ್ವದಲ್ಲಿ… Read More ವಿಧುರಾಶ್ವಥ, ದಕ್ಷಿಣ ಭಾರತದ ಜಲಿಯನ್ ವಾಲಾ ಭಾಗ್

ಕಿತ್ತೂರು ರಾಣಿ ಚೆನ್ನಮ್ಮ

ಪ್ರಪಂಚದ ಬಹುತೇಕ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡು ಸೂರ್ಯ ಮುಳುಗದ ನಾಡು ಎಂದು ಬೀಗುತ್ತಿದ್ದ ಬ್ರಿಟೀಷರಿಗೆ ಆರಂಭಿಕ ಸೋಲಿನ ರುಚಿಯನ್ನುಣಿಸಿದ *ಕನ್ನಡದ ದಿಟ್ಟ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ* ಯಂದು ಆಕೆಯ ಯಶೋಗಾಥೆ ಇದೋ ನಿಮಗಾಗಿ… Read More ಕಿತ್ತೂರು ರಾಣಿ ಚೆನ್ನಮ್ಮ

ತಾರತಮ್ಯ

ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ… Read More ತಾರತಮ್ಯ