ರಂಜಾನ್ ರಾಮಾಯಣ

ಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ… Read More ರಂಜಾನ್ ರಾಮಾಯಣ

ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

ನೆನ್ನೆ ತಡರಾತ್ರಿ, ಬಸವ ಜಯಂತಿಯ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಭಾವಚಿತ್ರದೊಂದಿಗೆ ಶುಭಾಶಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ, ಕೂಡಲೇ ಗೆಳೆಯ ನೀಲಕಂಠ ಸ್ವಲ್ಪ ವಿಭಿನ್ನವಾಗಿ ಮೇಲ್ಕಾಣಿಸಿದ ಬಸವನ ಭಾವಚಿತ್ರದೊಂದಿಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದಾಗ ಮನಸ್ಸು ಸ್ವಲ್ಪ ಕಸಿವಿಸಿಗೊಂಡು, ಇಂದು ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ, ಇದು ಕೋಲೇ ಬಸವಣ್ಣನವರ ಆಚರಣೆಯಲ್ಲ ಎಂದು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದೆ. ಕೂಡಲೇ ಗೆಳೆಯ ನೀಲಕಂಠರ ಈ ಪ್ರತಿಕ್ರಿಯೆ ನಿಜಕ್ಕೂ ನನ್ನ ಕಣ್ಮನ ತೆರೆಸಿತು ಎಂದರೆ ತಪ್ಪಾಗಲಾರದು. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ… Read More ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

ಬಾಳಗಂಚಿ ಹೊನ್ನಾದೇವಿ ಹಬ್ಬ

ಹಿಂದಿನ ಲೇಖನದಲ್ಲಿ ನಮ್ಮೂರಿನ ಚೋಮನ ಹಬ್ಬದ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ನಮ್ಮ ಊರಿನ ಗ್ರಾಮ ದೇವತೆ, ಹೊನ್ನಾದೇವಿ ಅಥವಾ ಹೊನ್ನಮ್ಮ ಅಥವಾ ಸ್ವರ್ಣಾಂಬಾ ದೇವಿಯ ಊರ ಹಬ್ಬದ ಬಗ್ಗೆ ತಿಳಿದುಕೊಳ್ಳೊಣ. ಸಾವಿರಾರು ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ನಮ್ಮ ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ 76 ವೃತ್ತಿನಿರತ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿದ್ದ ಎಂಬ ಬಗ್ಗೆ 1256ರಲ್ಲಿ ಬರೆಸಿದ ತಾಮ್ರ ಶಾಸನ ಸಾರುತ್ತದೆ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಖ್ಯಾತರಾಗಿದ್ದ ಹಾಗೂ ವಿಜಯನಗರ ಸಾಮ್ರಾಜ್ಯದ… Read More ಬಾಳಗಂಚಿ ಹೊನ್ನಾದೇವಿ ಹಬ್ಬ

ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು… Read More ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀರಾಮ ನವಮಿಯಲ್ಲಿ ಪ್ರಭು ಶ್ರೀ ರಾಮನ ಪೂಜೆಯಷ್ಟೇ ಮಹತ್ವ, ಅಂದಿನ ಪ್ರಸಾದ ರೂಪದ ರಸಾಯನ, ಪಾನಕ, ಕೋಸಂಬರಿ, ನೀರು ಮಜ್ಜಿಗೂ ಇದ್ದೂ, ಬೆಳ್ಳಗಿರುವುದು ಹಾಲಲ್ಲ. ಬಣ್ಣದ ನೀರೆಲ್ಲಾ ಪಾನಕವಲ್ಲ, ಎನ್ನುವಂತೆ ಶ್ರೀ ರಾಮನವಮಿ ಪಾನಕದ ಕುರಿತಾದ ಕೆಲವು ರೋಚಕತೆಗಳ ರಸಾನುಭವ ಇದೋ ನಿಮಗಾಗಿ… Read More ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀ ರಾಮ ನವಮಿ

ಪ್ರಭು ಶ್ರೀರಾಮ ಚಂದ್ರನ ಜನ್ಮದ ವೃತ್ತಾಂತ ಮತ್ತು ಶ್ರೀ ರಾಮ ನವಮಿಯನ್ನು ಎಲ್ಲೆಲ್ಲಿ ಹೇಗೇಗೇ ಆಚರಿಸಲಾಗುತ್ತದೆ? ಶ್ರೀ ರಾಮನ 108 ಹೆ‍ಸರುಗಳು ಯಾವುದು ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ರಾಮ ನವಮಿ

ಚಾಂದ್ರಮಾನ ಯುಗಾದಿ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆಯನ್ನು ಕುಲವಧು ಚಲನಚಿತ್ರದಲ್ಲಿ ಅಳವಡಿಸಿಕೊಂಡು ಲೀಲಾವತಿಯವರು ಹಾಡುತ್ತ ನರ್ತಿಸುವುದನ್ನು ನೋಡುತ್ತಿದ್ದರೆ ಅದುವೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದ. ನಮ್ಮ ಹಿರೀಕರು ನಮ್ಮ ಹವಾಮಾನಕ್ಕೆ ಅನುಗುಣವಾಗಿಯೇ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ದತಿಯನ್ನು ರೂಢಿಮಾಡಿದ್ದಾರೆ. ಅಂತೆಯೇ ಪ್ರಕೃತಿಯೂ ತನ್ನ ಹಳೆಯದ್ದನೆಲ್ಲಾ ಕಳೆದು ಕೊಂಡು ಹೊಸ ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ ಸೂರ್ಯನೂ ಕೂಡಾ ಕೆಲವೇ… Read More ಚಾಂದ್ರಮಾನ ಯುಗಾದಿ

ಕಾಮನ ಹುಣ್ಣಿಮೆ / ಹೋಳಿ ಹಬ್ಬ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನದಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲ್ಪಡುವ ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಅದರ ಆಚರಣೆ ಸವಿವರಗಳು ಇದೋ ನಿಮಗಾಗಿ… Read More ಕಾಮನ ಹುಣ್ಣಿಮೆ / ಹೋಳಿ ಹಬ್ಬ

ದೀಪಾವಳಿ

ದೀಪಾವಳಿ ಹೇಳಿ ಕೇಳಿ ಬೆಳಕಿನ ಹಬ್ಬ ಇಲ್ಲಿ ಮಡಿ ಹುಡಿ ಆಚಾರ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಮಕ್ಕಳಿಗೂ ದೀಪಾವಳಿ ಎಂದರೆ ಅಚ್ಚು ಮೆಚ್ಚು. ನಮ್ಮ ಮನೆಯಲ್ಲಿಯೂ ನಾವೆಲ್ಲಾ ಸಣ್ಣವರಿದ್ದಾಗ ದೀಪಾವಳಿ ಹಬ್ಬ ಬರುವ ಎರಡು ತಿಂಗಳ ಮುಂಚೆಯೇ ನಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ. ಏಕೆಂದರೆ ಆಗ ನಮ್ಮ ಮನೆಯಲ್ಲಿ ಪಟಾಕಿ ಚೀಟಿಯನ್ನು ನಡೆಸುತ್ತಿದ್ದೆವು. ಪ್ರತೀ ತಿಂಗಳು ಕೆಲ ನಿರ್ಧಿಷ್ಟ ಮೊತ್ತದ ಹಣವನ್ನು ಆರು ತಿಂಗಳು ಕಟ್ಟಿದ ನಂತರ ದೀಪಾವಳಿ ಹಬ್ಬಕ್ಕೆ ಕೆಲ ವಾರಗಳ ಮುಂಚೆ ಕಟ್ಟಿದ… Read More ದೀಪಾವಳಿ