ಎಲೆಕೋಸು ಚೆಟ್ನಿ

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಚೆಟ್ನಿ ಇದ್ರೇನೆ ಚೆನ್ನ. ಸಾಮಾನ್ಯವಾಗಿ ಎಲ್ಲರೂ ಮಾಡೋ ಕಾಯಿ ಚೆಟ್ನಿ ಮತ್ತು ಹುರಿಗಡಲೇ ಚೆಟ್ನಿ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿ ಎಲೇ ಕೋಸು ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಎಲೆಕೋಸು ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಾಸಿವೆ – 1/2 ಚಮಚ ಕಡಲೇ ಬೇಳೆ – 1 ಚಮಚ ಉದ್ದಿನ ಬೇಳೆ – 2 ಚಮಚ ಒಣಮೆಣಸಿನ ಕಾಯಿ – […]

Read More ಎಲೆಕೋಸು ಚೆಟ್ನಿ

ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆತು ಬಿಡಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೇ ಏನ್ಮಾಡೋದು? ಕೆಲವೊಂದು ಘಟನೆಗಳು ಒಂದೊಂದು ಜಾಗ ಒಂದೊಂದು ಹಬ್ಬ ಇಲ್ಲವೇ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಅದನ್ನು ನೋಡಿದ ತಕ್ಷಣವೇ ಥಟ್ ಅಂತಾ ನೆನಪಾಗಿ ಬಿಡುತ್ತವೆ. ಅದೇ ರೀತಿಯಲ್ಲಿ ಭೀಮನ ಅಮಾವಾಸ್ಯೆ ಬಂದ್ರೇ ಗಂಡನ ಪೂಜೆ, ಭಂಡಾರ ಒಡೆಯುವ ಜೊತೆ ವರ‌ನಟ ಅಣ್ಣಾವ್ರೇ ನೆನಪಾಗ್ತಾರೆ ನೋಡಿ. ಅದು 2000ನೇ ಇಸವಿ ಜುಲೈ ತಿಂಗಳು ಭೀಮನ ಅಮಾವಾಸ್ಯೆಯ ದಿನ. ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಮಗಳು ಬಂದು… Read More ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಗಂಡಸರೇ ಹುಷಾರ್ !!

ಸಾಧಾರಣವಾಗಿ ಪತ್ರಿಕೆಗಳ ಮೂರನೇಯ ಪುಟದಲ್ಲಿ ಪ್ರಕಟವಾಗುವ ಕ್ರೈಮ್ ಸುದ್ದಿ ನೋಡುವಾಗ ಅಮಾಯಕ ಹುಡುಗಿಗೆ ಮೋಸ ಮಾಡಿದ ಹುಡುಗ ಎಂಬ ಸುದ್ದಿ ಇತ್ತೀಚಿನ‌ ದಿನಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸುದ್ದಿ ಅದರ ತದ್ವಿರುದ್ಧವಾಗಿ ಹುಡುಗರೇ ಯುವತಿಯರಿಂದ ಮೋಸ ಹೋದ ಅಪರೂಪ ಪ್ರಕರಣಗಳು ಹೆಚ್ಚಾಗಿ ಸಭ್ಯ ಗಂಡಸರೆಲ್ಲಾ ತಲೆ ತಗ್ಗಿಸುವಂತಾಗಿದೆ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೈಟ್‌ ಫೀಲ್ಡ್‌ ನ ದೊಡ್ಡನೆಕ್ಕುಂದಿ ಬಳಿಯ ಯುವಕನೊಬ್ಬ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಹದಿಹರೆಯದ ವಯಸ್ಸು ಮತ್ತು ಅಂತರ್ಜಾಲದಲ್ಲಿ… Read More ಗಂಡಸರೇ ಹುಷಾರ್ !!

ಆಲ್ ರೈಟ್ ಮುಂದಕ್ಕೆ ಹೋಗೋಣ

ಸುಮಾರು ದಿನಗಳಿಂದ ಕರೆ ಮಾಡದಿದ್ದ ನನ್ನ ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ನಿನ್ನೆ ರಾತ್ರಿ ಕರೆ ಮಾಡಿದ್ದ. ಸಾಧಾರಣವಾಗಿ ತಿಂಗಳಿಗೊಮ್ಮೆಯೋ ಇಲ್ಲವೇ ಎರಡು ತಿಂಗಳಿಗಳಿಗೆ ಒಮ್ಮೆ ಕರೆ ಮಾಡಿ ಗಂಟೆ ಗಟ್ಟಲೆಗಳ ಕಾಲ ಉಭಯ ಕುಶಲೋಪರಿಯನ್ನು ವಿಚಾರಿಸುವುದು ನಮ್ಮಿಬ್ಬರ ನಡುವಿನ ವಾಡಿಕೆ. ಇತ್ತೀಚೆಗೆ ಸುಮಾರು ಐದಾರು ತಿಂಗಳುಗಳಿಂದ ಆತ ಕರೆ ಮಾಡಿರಲಿಲ್ಲ. ಬಹುಶಃ ಕೆಲಸದ ಬಾಹುಳ್ಯದಿಂದಲೋ ಇಲ್ಲವೇ ಕೂರೋನಾ ಪರಿಸ್ಥಿತಿಯಿಂದಾಗಿ ಆತ ಕರೆ ಮಾಡದಿರಬಹುದು ಎಂದು ನಾನೂ ಕೂಡಾ ಸುಮ್ಮನಾಗಿದ್ದೆ. ಯಥಾ ಪ್ರಕಾರ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಮಕ್ಕಳ… Read More ಆಲ್ ರೈಟ್ ಮುಂದಕ್ಕೆ ಹೋಗೋಣ

ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ. ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ… Read More ಬೇಬಿ ಶ್ಯಾಮಿಲಿ

ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಲಲಿತಕಲೆ ಎಲ್ಲದರಲ್ಲೂ ಅಗ್ರಗಣ್ಯರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಹಯಗ್ರೀವ

ಸಾಂಪ್ರದಾಯಕವಾದ ಹಯಗ್ರೀವ ಸಿಹಿ ಖ್ಯಾದ್ಯವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಯಗ್ರೀವ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ – 1/2 ಪಾವು ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು ತುರಿದ ಕೊಬ್ಬರಿ – 1 ಬಟ್ಟಲು ಗಸಗಸೆ – 20 ಗ್ರಾಂ ಗೊಡಂಬಿ – 8-10 ದ್ರಾಕ್ಷಿ – 8-10 ಏಲಕ್ಕಿ – 2-3 ತುಪ್ಪ – 3-4… Read More ಹಯಗ್ರೀವ

ಜನಮರುಳೋ ಜಾತ್ರೆ ಮರುಳೋ?

ಕಳೆದು ಒಂದೆರಡು ವಾರಗಳಿಂದ ಕೂರೋನಾ ರೋಗಾಣುವುಗಿಂತಲೂ ಅತ್ಯಂತ ಹೆಚ್ಚಾಗಿ ಹರಡಿದ ವಿಷಯವೆಂದರೆ, ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲ್ಲೂಕ್ಕಿನ ನೆಟ್ಕಲ್ ಎಂಬ ಗ್ರಾಮದ ಮಹತ್ವಾಕಾಂಕ್ಷಿ ಪ್ರತಾಪ್ ಅಲಿಯಾಸ್ ದ್ರೋಣ್ ಪ್ರತಾಪ್ ವಿಷಯ ಬಗ್ಗೆಯೇ. ಸುಮಾರು ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ದ್ರೋಣ್ ಕುರಿತಂತೆ ತನ್ನ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ವಿಜ್ಞಾನಿ, ಕಸದಿಂದ ರಸ ತೆಗೆಯುವಂತೆ ಹಳೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿಕೊಂಡು ಸುಮಾರು 600 ಕ್ಕೂ ಹೆಚ್ಚು ದ್ರೋಣ್ ಗಳನ್ನು ತಯಾರಿಸಿದ್ದಾನೆ. ಕೇವಲ 21 ವರ್ಷದ… Read More ಜನಮರುಳೋ ಜಾತ್ರೆ ಮರುಳೋ?

ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಚೊಚ್ಚಲು ಟಿ20 ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಉಳಿದೆಲ್ಲಾ ತಂಡಗಳಿಗೆ ಹೋಲಿಸಿದಲ್ಲಿ, ಭಾರತಕ್ಕೆ ಅಷ್ಟೇನೂ ಟಿ20 ಪಂದ್ಯಾವಳಿಗಳ ಅನುಭವವಿರಲಿಲ್ಲ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಸಚಿನ್, ಸೌರವ್, ದ್ರಾವಿಡ್ ಅಂತಹ ಘಟಾನುಘಟಿಗಳಿಲ್ಲದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಯುವಕರ ಪಡೆಯೇ ದಕ್ಷಿಣ ಆಫ್ರಿಕಾಕ್ಕೆ ಹೋಗಿತ್ತು. 2007ರ, Sep 14 ರಂದು ದರ್ಭಾನ್ ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು ಎದುರಿಸುತ್ತಿತ್ತು. ಕ್ರೀಡಾಂಗಣದಲ್ಲಿ ಭಾರತೀಯರು ಮತ್ತು ಪಾಕೀಸ್ಥಾನೀಯರಿಂದಲೇ ಕಿಕ್ಕಿರಿದು ತುಂಬಿದ್ದ ಕಾರಣ ಅದೊಂದು ಭಾರತ ಮತ್ತು ಪಾಕ್ ಉಪಖಂಡದಲ್ಲಿಯೇ… Read More ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ