ಶೂನ್ಯದಿಂದ ಸಾಧನೆಯವರೆಗೆ

ನನ್ನ ಹಿಂದಿನ ಲೇಖನದಲ್ಲಿ ಖ್ಯಾತ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕುರಿತಂತೆ ಲೇಖನದಲ್ಲಿ ವಯಕ್ತಿಕ ಸಮಸ್ಯೆಯಿಂದ ಹೊರಬರಲಾರದೇ, ಖಿನ್ನತೆಗೆ ಒಳಗಾಗಿ ಬದುಕನ್ನೇ ಅಕಾಲಿಕವಾಗಿ  ಅಂತ್ಯ ಮಾಡಿಕೊಂಡ ದುರಂತ ಕಥೆಯ ಕುರಿತಂತೆ ಅನೇಕ ಓದುಗರು ವಿವಿಧ ರೀತಿಯ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರು. ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ ಆದರೆ ಅದನ್ನು  ಸವಾಲಾಗಿ ಸ್ವೀಕರಿಸಿ ಅದರಿಂದ  ಹೇಗೆ ಹೊರಬಂದು ಸಾಧನೆಯ ಮಟ್ಟಲುಗಳನ್ನು ಏರಿ ಯಶಸ್ವಿಯಾಗಿರುವ ಕೆಲವು ಅಧ್ಬುತ ಪ್ರಸಂಗಗಳು ಇದೋ ನಿಮಗಾಗಿ. ಕ್ರಿಕೆಟ್ ವೀಕ್ಷಕವಿವರಣಾಗಾರ ಶ್ರೀ ಹರ್ಷ… Read More ಶೂನ್ಯದಿಂದ ಸಾಧನೆಯವರೆಗೆ

ಸುಶಾಂತ್ ಸಿಂಗ್ ರಜಪೂತ್

ನೆನ್ನೆ ಇಡೀ ದಿನ ಯಾವುದೇ ದೃಶ್ಯ ಮಾಧ್ಯಮ ಮತ್ತು ಫೇಸ್ ಬುಕ್ ವಾಲ್ ಗಳಲ್ಲಿ, ವಾಟ್ಸ್ಯಾಪ್ ಡಿಪಿಗಳಲ್ಲಿ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿಪ್ಪಿರುವ ಸುದ್ದಿಯದೇ ಚರ್ಚೆ. ಅವನ ಸಾವಿನ ಪರ-ವಿರೋಧಗಳನ್ನು ತಮ್ಮ ತಮ್ಮ ಶೈಲಿಯಲ್ಲಿ ಸಂತಾಪಸೂಚಿಸುತ್ತಿದ್ದರು. ಅದರಲ್ಲೊಬ್ಬರು, ಕಳೆದ ವಾರ ಕನ್ನಡ ಚಿರಂಜೀವಿ ಸರ್ಜಾ ಈ ವಾರ ಸುಶಾಂತ್ ಮರಣ ಹೀಗೆ ಇಬ್ಬರು ಉದಯೋನ್ಮುಖ ಕಲಾವಿದರುಗಳು ವಿಧಿವಶರಾಗಿರುವುದು ನಿಜಕ್ಕೂ ದುಃಖಕರ ಎಂದು ವ್ಯಕ್ತಪಡಿಸಿದ್ದರು. ಅದನ್ನು ನೋಡಿದ… Read More ಸುಶಾಂತ್ ಸಿಂಗ್ ರಜಪೂತ್

ನಕಲಿ ಗಾಂಧಿಗಳ ಪ್ರಮುಖ ಹಗರಣಗಳು

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ಕ್ರಾಂತಿಕಾರಿಗಳ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಗೆದ್ದಲು ಶ್ರಮವಹಿಸಿ ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಳ್ಳುವಂತೆ ಅಂದಿನ ಬಹುತೇಕ ಕಾಂಗ್ರೇಸ್ ನಾಯಕರ ವಿರೋಧದ ನಡುವೆಯೂ ಮಹಾತ್ಮಾಗಾಂಧಿಯವರ ಮೇಲೆ ಒತ್ತಡ ಹೇರಿದ ನೆಹರು ಸ್ವತ್ರಂತ್ರ್ಯ ಭಾರತದ ಪ್ರಪ್ರಥಮ ಪ್ರಧಾನಿಯಾದದ್ದು ಈಗ ಇತಿಹಾಸ. ಸ್ವತಂತ್ರ್ಯ ಬಂದಾಗಲಿಂದಲೂ ತೊಂಬತ್ತರ ದಶಕದವರೆಗೂ ನೆಹರೂ ಕುಟುಂಬವೇ ನಕಲಿ ಗಾಂಧಿ ಹೆಸರಿನಲ್ಲಿ ಅಧಿಕಾರವನ್ನು ಅನುಭವಿಸಿ ನಂತರ ಮೂರು ಅವಧಿಗಳಲ್ಲಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಹಿಂಬದಿಯ ಆಡಳಿತ ನಡೆಸಿ… Read More ನಕಲಿ ಗಾಂಧಿಗಳ ಪ್ರಮುಖ ಹಗರಣಗಳು

ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ

ಉತ್ತರ ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯವನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಟ್ಟಲು ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಜೋಳದ ಹಿಟ್ಟು – 1 ಬಟ್ಟಲು • ಜೀರಿಗೆ – 1/2 ಚಮಚ • ಚಿಟುಕೆ ಇಂಗು • ರುಚಿಗೆ ತಕ್ಕಷ್ಟು ಉಪ್ಪು ಬಟ್ಟಲು ಕಡುಬುಗಳನ್ನು ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ… Read More ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ

ಎತ್ತುಗಳ ನಿಯತ್ತು

ಕೂರೋನಾ ಲಾಕ್ ಡೌನ್ ಸಮಯದಲ್ಲಿ ತನ್ನೂರಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಂಡಲೆಯುತ್ತಿದ್ದ ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ, ತನ್ನೂರಿನ ಎಣ್ಣೆ ತೆಗೆಯುವ ಗಾಣದಲ್ಲಿ ಎತ್ತುಗಳು ತಮ್ಮ ಪಾಡಿಗೆ ತಾವು ಸುತ್ತುತ್ತಿದ್ದರೆ, ರೈತನೊಬ್ಬ ಆರಾಮವಾಗಿ ನಿದ್ರಿಸುತ್ತಿದ್ದನ್ನು ನೋಡಿ ಆಶ್ಚರ್ಯ ಚಕಿತನಾದ. ನಿದ್ರಿಸುತ್ತಿದ್ದ ರೈತನನ್ನು ಎಬ್ಬಿಸಿ, ಈ ಎತ್ತುಗಳು ಗಾಣವನ್ನು ಅರೆಯುವುದನ್ನು ನಿಲ್ಲಿಸಿದರೆ ನಿಮಗೆ ಹೇಗೆ ತಿಳಿಯುತ್ತದೇ?ಎಂದು ಕುತೂಹಲದಿಂದ ಕೇಳಿದ. ರೈತ ಕೂಡಾ ಹಾಗೆಯೇ ಕಣ್ತೆರೆಯದೇ, ಸ್ಚಾಮೀ, ಎತ್ತುಗಳು ಸುತ್ತುವುದನ್ನು ನಿಲ್ಲಿಸಿದರೆ ಅವುಗಳ ಕತ್ತಿನಲ್ಲಿರುವ ಗಂಟೆಯ ಶಬ್ಧ ನಿಲ್ಲುತ್ತದೆ ಎಂದ.… Read More ಎತ್ತುಗಳ ನಿಯತ್ತು

ಸನಾತನ ಆಹಾರ ಪದ್ದತಿ

ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಎಲ್ಲಡೆಯೂ, ಎಲ್ಲರಲ್ಲಿಯೂ ಗಂಡಸಲ್ಲಾಗಲೀ, ಹೆಂಗಸರಲ್ಲಾಗಲೀ ಕಾಣಬಹುದಾದ ಮತ್ತು ಕಾಡಬಹುದಾದ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಥೂಲಕಾಯ(obesity) ಎಂದರೆ ತಪ್ಪಾಗಲಾದರು. ಈ ಸ್ಥೂಲಕಾಯಕ್ಕೆ ಮುಖ್ಯವಾದ ಕಾರಣವೇ ನಮ್ಮ ಆಹಾರ ಪದ್ದತಿ ಎಂದರೆ ನಿಜಕ್ಕೂ ಆಶ್ಚರ್ಯವಾಗಬಹುದು. ನಮಗೆ ತಿಳಿದಂತೆ ನಮ್ಮ ಅಜ್ಜ, ಅಜ್ಜಿಯರು ಶತಾಯುಷಿಗಳಾಗಿದ್ದರು ಇಲ್ಲವೇ ಕನಿಷ್ಟ ಪಕ್ಷ ಎಂಬತ್ತಕ್ಕೂ ಹೆಚ್ಚಿನ ವಯಸ್ಸಿನವರೆಗೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ತುಂಬು ಜೀವನ ನಡೆಸಿದ್ದರು. ಇನ್ನು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಓದಿ ತಿಳಿದಿರುವ ಪ್ರಕಾರ ನಮ್ಮ ಋಷಿಮುನಿಗಳು ಸಾವಿರಾರು… Read More ಸನಾತನ ಆಹಾರ ಪದ್ದತಿ

ರಾಮ್ ಪ್ರಸಾದ್ ಬಿಸ್ಮಿಲ್

ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ| ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ || ಶಿರವನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು ಎಂಬ ಅರ್ಥ ಬರುವ ಈ ಕ್ರಾಂತಿಕಾರಿ ಕವಿತೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕ್ರಾಂತಿಯನ್ನು ಬಡಿದೆಚ್ಚರಿಸಿದ ಸಾಲುಗಳು. ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರುಗಳು ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾಗ ಬಹಳ ಇಷ್ಟ ಪಟ್ಟು ಹಾಡುತ್ತಿದ್ದದ್ದೇ ಇದೇ ಹಾಡು.… Read More ರಾಮ್ ಪ್ರಸಾದ್ ಬಿಸ್ಮಿಲ್

ನಿಸ್ವಾರ್ಥ ಸೇವೆ

ಮೂಲತಃ ರಾಮನಾಥಪುರಂ ಜಿಲ್ಲೆಯವರಾದ 47 ವರ್ಷದ ಶ್ರೀಯುತ ಮೋಹನ್ ಅವರು ನಾವು ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬೀಡಾದ ಮಧುರೈನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಪ್ರತೀ ದಿನ ಸುಮಾರು 600 ರೂ. ಲಾಭ ಗಳಿಸುತ್ತಿದ್ದಾರೆ ಮತ್ತು ಅದನ್ನು ತಮ್ಮ ಮುದ್ದಿನ ಮಗಳಾದ 13 ವರ್ಷದ ನೇತ್ರಾಳ ವಿದ್ಯಾಭ್ಯಾಸಕ್ಕೆಂದು ಉಳಿಸುತ್ತಿದ್ದಾರೆ. ಕುಮಾರಿ ನೇತ್ರಾಳಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಅದಕ್ಕಾಗಿ ಆಕೆಯೂ ಸಹಾ ಸಾಕಷ್ಟು ಪರಿಶ್ರಮ ಪಡುತ್ತಿದ್ದಾಳೆ.   ಮಾರ್ಚ್ ತಿಂಗಳಿನಲ್ಲಿ ಕೂರೋನಾ ಮಹಾಮಾರಿಯ ಪ್ರಭಾವದಿಂದಾಗಿ ಪ್ರಪಂಚಾದ್ಯಂತ ಲಾಕ್ ಡೌನ್ ಪ್ರಾರಂಭವಾದಾಗ… Read More ನಿಸ್ವಾರ್ಥ ಸೇವೆ

ದಿಢೀರ್ ಓಟ್ಸ್  ದೋಸೆ

ಇತ್ತೀಚಿನ ದಿನಗಳಲ್ಲಿ  ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುತ್ತಿರುವ ಕಾರಣ, ತೀರ್ಥ ತೆಗೆದುಕೊಂಡರೆ ಶೀತ  ಮಂಗಳಾರತೀ ತೆಗೆದುಕೊಂಡರೆ ಉಷ್ಣ ಅನ್ನುವ ರೀತಿಯಲ್ಲಿ ಆಡುತ್ತಾರೆ. ಹಾಗಾಗಿ  ಪ್ರತಿಯೊಂದು ಆಹಾರವನ್ನು ಸೇವಿಸುವಾಗಲೂ ಅದರ  ಕ್ಯಾಲೋರಿಗಳನ್ನು ಲಕ್ಕಾಚಾರ ಹಾಕಿ ಗುಣಾಕಾರ ಭಾಗಕಾರ ಹಾಗಿದ ಮೇಲೆನೇ ತಿನ್ನೋದು.   ಹಾಗಾಗಿ  ಕಡಿಮೆ ಕ್ಯಾಲೋರಿ ಇರುವ , ಆರೋಗ್ಯಕರವಾಗಿಯೂ, ರುಚಿಕರವಾಗಿರುವ ಮತ್ತು  ದಿಢೀರ್ ಎಂದು ತಯಾರಿಸಬಹುದಾದ ಓಟ್ಸ್ ದೋಸೆಯನ್ನು ಮಾಡುವ ವಿಧಾನವನ್ನು  ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5  ಜನರಿಗೆ ಆಗುವಷ್ಟು ದಿಢೀರ್… Read More ದಿಢೀರ್ ಓಟ್ಸ್  ದೋಸೆ