ಕಲ್ಲಿನ ಮರಗಿ

ಮನುಷ್ಯ ಸಂಘಜೀವಿ. ಹಾಗಾಗಿ ತನ್ನೊಂದಿಗೆ ಜೀವಿಸಲು ಸಂಗಾತಿಯನ್ನು ಹುಡುಕಿಕೊಂಡ ನಂತರ ಹೊಟ್ಟೆ ಪಾಡಿಗೆ ಗೆಡ್ಡೆ ಗೆಣಸುಗಳನ್ನು ಮತ್ತು ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸತೊಡಗಿದ. ಯಾವಾಗ ಕಲ್ಲಿಗೆ ಕಲ್ಲನ್ನು ಉಜ್ಜಿ ಘರ್ಷಣೆಯಿಂದ ಬೆಂಕಿ ಹೊತ್ತಿಸುವುದನ್ನು ಕಲಿತುಕೊಂಡನೋ ಅಂದಿನಿಂದ ತನ್ನ ಗೆಡ್ಡೆ ಗೆಣಸು ಗಳನ್ನು ಮತ್ತು ಮಾಂಸಗಳನ್ನು ಸುಟ್ಟು ತಿನ್ನುವುದನ್ನು ಕಲಿತ. ತನ್ನ ಆತ್ಮರಕ್ಷಣೆಗಾಗಿ ಮತ್ತು ತಮ್ಮ ಆಹಾರದ ಬೇಟೆಗಾಗಿ ಕಲ್ಲಿನ ಆಯುಧಗಳನ್ನು ತಯಾರಿಸಿಕೊಳ್ಳುವುದನ್ನು ಕಲಿತುಕೊಂಡ. ಆಹಾರವನ್ನು ಅರೆಯಲು, ಕುಟ್ಟಲು, ಪುಡಿ ಮಾಡಲು ರುಬ್ಬುವ ಗುಂಡು, ಒರಳು ಮತ್ತು ಬೀಸೋಕಲ್ಲುಗಳನ್ನು… Read More ಕಲ್ಲಿನ ಮರಗಿ

ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ಪ್ರತಿದಿನ ಮಧ್ಯಾಹ್ನ ನಮ್ಮ ಕಛೇರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಬಹಳ ವರ್ಷಗಳಿಂದ ರೂಢಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಒಬ್ಬರು ಪ್ರತಿದಿನವೂ ಅವರ ಮನೆಯಾಕಿ ಶ್ರಧ್ದೆಯಿಂದ ಪ್ರೀತಿಯಿಂದ ಅಡುಗೆ ಮಾಡಿ ಊಟದ ಡಬ್ಬಿಯನ್ನು ಕಟ್ಟಿ ಕಳುಹಿಸಿದ್ದರೂ ಅದೇಕೋ ಏನೋ ಬಹಳಷ್ಟು ಬಾರಿ ಯಾರು ಹೋಟೆಲ್ನಿಂದ ಊಟ ತರಿಸಿರುತ್ತಾರೋ ಅವರಿಗೆ ತಮ್ಮ ಮನೆಯ ಊಟವನ್ನು ಕೊಟ್ಟು ತಾವು ಹೋಟೆಲ್ ಊಟ ಮಾಡುತ್ತಾರೆ. ಕುತೂಹಲದಿಂದ ಹಾಗೇಕೆ ಮಾಡುತ್ತೀರೆಂದು ಕೇಳಿದರೆ ಇದು ಒಂದು ಊಟವೇ ಒಳ್ಳೇ ದನದ ಆಹಾರ… Read More ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?

ಕಳೆದ ವಾರಾಂತ್ಯದಲ್ಲಿ ಮನೆಗೆ ಅವಶ್ಯಕವಿದ್ದ ತರಕಾರಿಗಳನ್ನು ಕೊಳ್ಳಲು ರಸ್ತೆಯ ಬದಿಯಲ್ಲಿದ್ದ ವ್ಯಾಪಾರಿಗಳ ಬಳಿ ಹೋಗಿದ್ದೆ. ನಮಗೆ ಬೇಕಾದ ತರಕಾರಿಗಳನ್ನೆಲ್ಲಾ ಕೊಂಡು ದುಡ್ಡು ಎಷ್ಟಾಯಿತು ಎಂದೆ? ಅಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 18-20ರ ವಯಸ್ಸಿನ ತರುಣ ತರಕಾರಿ ಕೊಡುವಾಗ ಇದ್ದ ಚುರುಕು ಲೆಕ್ಕ ಹಾಕುವಾಗ ತಡಕಾಡತೊಡಗಿದ್ದ. ಕಡೆಗೆ ಕ್ಯಾಲುಕ್ಯುಲೇಟರ್ ಸಹಾಯದಿಂದ ಲೆಖ್ಖಾ ಹಾಕಿ ಅಂಕಲ್ 235 ಆಯ್ತು ಎಂದ. ಸರಿ ಎಂದು 500 ರೂಪಾಯಿ ಕೊಟ್ಟರೆ ಪುನಃ ಕ್ಯಾಲುಕ್ಯುಲೇಟರ್ ತೆಗೆದುಕೊಂಡು 500-235 ಲೆಖ್ಖ ಹಾಕಿ ಚಿಲ್ಲರೆ 265 ರೂಗಳನ್ನು… Read More ಈ ಶತಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?

ಅತ್ಯಾಚಾರಕ್ಕೆ ಧರ್ಮವಿಲ್ಲ.

  ಮೊನ್ನೆ ಹೈದರಾಬಾದಿನ ಬಳಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯ ಮೇಲೆ ನಡೆದೆ ಅಮಾವೀಯವಾದ ಅತ್ಯಾಚಾರ ಮತ್ತು ಬರ್ಬರವಾದ ಹತ್ಯೆ ನಿಜಕ್ಕೂ ದೇಶಾದ್ಯಂತ ತಲ್ಲಣ ಎಬ್ಬಿಸಿದೆ. ಗಾಂಧೀಜೀಯವರು ಕಂಡ ರಾಮ ರಾಜ್ಯ ಕನಸಿನಲ್ಲಿ ನಿರ್ಜನ ಪ್ರದೇಶದಲ್ಲಿ ರಾತ್ರಿ 12ಗಂಟೆಯ ಹೊತ್ತಿಗೂ ಒಬ್ಬ ಹೆಂಗಸು ಹೋಗುವಂತಾದಾಗ ಮಾತ್ರವೇ ನಿಜವಾದ ಸ್ವಾತಂತ್ಯ್ರ ಎಂದಿದ್ದಾರೆ. ರಾತ್ರಿ 12ಗಂಟೆ ಬಿಡಿ, ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಹೊರಗೆ ಹೋದ ಹೆಣ್ಣುಮಗಳು ಸುರಕ್ಷಿತವಾಗಿ ಹಿಂದುರಿಗಿ ಬರುವುದೂ ಈಗ ದುಸ್ತರವಾಗಿದೆ. ನಮ್ಮ ಇಂದಿನ ಶಿಕ್ಷಣ ಪದ್ದತಿ, ಅತಿಯಾದ ಪಾಶ್ವಾತ್ಯ… Read More ಅತ್ಯಾಚಾರಕ್ಕೆ ಧರ್ಮವಿಲ್ಲ.

ಕಾದಂಬರಿಗಾರ್ತಿ ತ್ರಿವೇಣಿ

ಕನ್ನಡ ಚಿತ್ರರಂಗದವರು ಒಳ್ಳೆಯ ಚಿತ್ರ ತೆಗೆಯಲು ಕಥೆಗಳೇ ಇಲ್ಲಾ ಅಂತಾ ಹೇಳುವ ಸಮಯದಲ್ಲಿ ಮಲೆಯಾಳಂ ಚಿತ್ರವೂ ಸೇರಿದಂತೆ ಸುಮಾರು ಎಂಟರಿಂದ ಹತ್ತು ಜನಪ್ರಿಯ ಕನ್ನಡ ಚಿತ್ರಗಳು ಆಕೆಯ ಕಾದಂಬರಿಗಳನ್ನು ಆಧರಿಸಿದ್ದವು ಎಂದರೆ ಆಕೆಯ ಸಾಮರ್ಥ್ಯದ ಅರಿವಾಗುತ್ತದೆ. ಬದುಕಿದ್ದು ಕೇವಲ ಮೂವತ್ತೈದು ವರ್ಷಗಳಾದರೂ ಅದಕ್ಕಿಂತಲೂ ಹೆಚ್ಚಿನ ಸಾಹಿತ್ಯಗಳನ್ನು ರಚಿಸಿದ್ದಾಕೆ. ನಿಧನರಾಗಿ 58 ವರ್ಷಗಳೇ ಆಗಿದ್ದರೂ ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿರುವ ಶ್ರೀಮತಿ ಅನುಸೂಯ ಶಂಕರ್ ಅವರ ಬಗ್ಗೆ ನಾವಿಂದು ತಿಳಿದು ಕೊಳ್ಳೋಣ. ಬಹುಶಃ ಅನುಸೂಯ… Read More ಕಾದಂಬರಿಗಾರ್ತಿ ತ್ರಿವೇಣಿ

ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

ಕ್ರಿಕೆಟ್ ಆಡುವ ಮತ್ತು ನೋಡುವರೆಲ್ಲರಿಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಹೇಗೆ ಕೊಡ್ತಾರೆ ಅಂತಾ ಗೊತ್ತೇ ಇರುತ್ತದೆ. ಯಾವುದೇ ಪಂದ್ಯದಲ್ಲಿ ಯಾರು ಒಳ್ಳೆಯ ಬ್ಯಾಟಿಂಗ್ ಅಥವಾ ಬೋಲಿಂಗ್ ಪ್ರದರ್ಶನ ಮಾಡ್ತಾರೋ, ಇಲ್ಲವೇ ಆಲ್ರೌಂಡ್ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿರ್ತಾರೋ ಅವರನ್ನು ಪಂದ್ಯದ ಕಡೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅಂತ ಘೋಷಿಸುವುದು ಸಹಜ ಪ್ರಕ್ರಿಯೆ. ಇಂದಿಗೆ ಸರಿಯಾಗಿ 33 ವರ್ಷಗಳ ಹಿಂದೆ ಅಂದ್ರೆ, ನವೆಂಬರ್ 28, 1986ರಲ್ಲಿ ಶಾರ್ಜಾದಲ್ಲಿ ನಡೆದ ವೆಸ್ಟ್ಇಂಡೀಸ್ ಮತ್ತು ಪಾಕೀಸ್ಥಾನದ ವಿರುದ್ದದ… Read More ಬೋಲ್ ಮಾಡ್ಲಿಲ್ಲಾ , ಬ್ಯಾಟ್ ಮಾಡ್ಲಿಲ್ಲಾ . ಆದ್ರೂ ಪಂದ್ಯ ಪುರುಷೋತ್ತಮ

ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

1956ರಲ್ಲಿ ಹತ್ತಾರು ಕಡೆ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು  ಭಾಷಾವಾರು ಅಧಾರದ ಮೇಲೆ  ರಾಜ್ಯಗಳನ್ನು ವಿಂಗಡಿಸಿ ಮೈಸೂರು ರಾಜ್ಯವಾದರೂ ಕನ್ನಡಿಗರಿಗೆ ಸಿಗಬೇಕಾದ ಗೌರವಗಳು ಸಿಗದೇ ಇನ್ನೂ  ಪರಕೀಯನಾಗಿಯೇ ಇದ್ದ.  ಅದೂ ರಾಜಧಾನಿಯಾದ ಬೆಂಗಳುರಿನಲ್ಲಿಯೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ದೊರಕದಿದ್ದ ಸಂದರ್ಭದಲ್ಲಿ ಅನಕೃ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾದಾಗ ಅದರ ಮುಂದಾಳತ್ವವನ್ನು ವಹಿಸಿದ, ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿ, ಕನ್ನಡಿಗರ ಅಸ್ದಿತ್ವ ಮತ್ತು ಅಸ್ಮಿತಿಯನ್ನು ಎತ್ತಿ ಹಿಡಿಯಲು ಅವರನ್ನು ಒಗ್ಗೂಡಿಸಲು, ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು… Read More ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

ಸಾಹಿತ್ಯರತ್ನ ಚಿ. ಉದಯಶಂಕರ್

ಡಾ. ರಾಜ್ ಅವರ ಸಹಭಾವಚಿತ್ರ “ಜೀವನ ಚೈತ್ರ”ದ ಅಭಿನಯದಲ್ಲಿ ತಮ್ಮ ಅಮೋಘ ಕಾರ್ಯಗಳಿಂದ ನಿರ್ಮಾಪಕರಾಗಿ, ಸಂಭಾಷಣಕಾರರಾಗಿ, ಸಂಗೀತ ನಿರ್ದೇಶಕರಾಗಿ ನಟನಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಅಜ್ಞಾತವಾಗಿ ಮಹತ್ವದ ಪಾತ್ರ ನಿರ್ವಹಿಸಿದ ಚಿ. ಉದಯಶಂಕರ್ ಅವರ ಕುರಿತು ತಿಳಿಯಲು ಈ ಮಹಾನ್ ಕನ್ನಡಿಗರ ಬಗ್ಗೆ ನಾವು ಓದಿರಬಹುದು. … Read More ಸಾಹಿತ್ಯರತ್ನ ಚಿ. ಉದಯಶಂಕರ್

EatOut

ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ  ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ  ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು  ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು  ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ… Read More EatOut