ಹಾಸನಾಂಬಾ

ಹಾಸನ ಎಂಬ ಹೆಸರು ಬರಲು ಕಾರಣವಾದ ಗ್ರಾಮದೇವತೆ ಹಾಸನಾಂಬೆಯ ಐತಿಹ್ಯದ ಜೊತೆಗೆ, ವರ್ಷಕ್ಕೊಮ್ಮೆ ಕೇವಲ 10-12 ದಿನಗಳು ಮಾತ್ರವೇ ಭಕ್ತಾದಿಗಳ ದರ್ಶನಕ್ಕೆ ತೆರೆಯುವ ಆ ದೇವಾಲಯದ ವೈಶಿಷ್ಟ್ಯತೆಗಳು, ವರ್ಷವಿಡೀ ಉರಿಯುವ ದೀಪ, ಬಾಡದ ಹೂವುಗಳು ಮತ್ತು ಹಳಸದ ಪ್ರಸಾದದ ಕುರಿತಾದ ರೋಚಕ ವಿಷಯಗಳು ಇದೋ ನಿಮಗಾಗಿ … Read More ಹಾಸನಾಂಬಾ

ಮಂಗಳೂರು ದಸರಾ

ದಸರಾ ಎಂದ ಕೂಡಲೇ ಥಟ್ ಅಂತಾ ನಮಗೆಲ್ಲಾ ನೆನಪಾಗೋದೇ ಮೈಸೂರು ದಸರಾ. ದಸರಾ ನಮ್ಮ ನಾಡ ಹಬ್ಬ. ಕನ್ನಡಿಗರ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು. ಅಂದು ವಿಜಯನಗರದ ಸಾಮ್ರಾಜ್ಯದಲ್ಲಿ ಕೇವಲ ದಶಮಿಯಂದು ಸೀಮೋಲ್ಲಂಘನ ಮಾಡಿ ಬನ್ನಿ ಮಂಟಪಕ್ಕೆ ಮಾತ್ರವೇ ಸೀಮಿತವಾಗಿದ್ದ… Read More ಮಂಗಳೂರು ದಸರಾ

ಅವಕಾಶ

ಆಗ ಎಂಭತ್ತರ ದಶಕ. ಆಗಿನ್ನೂ ನಾಲ್ಕನೇ ತರಗತಿಯಲ್ಲಿದ್ದೆ. ಇಂದಿನಂತೆ ಡೈರೀ ಹಾಲಿನ ಪ್ರಭಾವ ಅಷ್ಟಾಗಿರಲಿಲ್ಲ . ನಮ್ಮದೇ ಬಡಾವಣೆಯಲ್ಲಿಯೇ ಸಾಕಷ್ಟು ಮನೆಗಳಲ್ಲಿ ಇನ್ನೂ ಹಸು ಮತ್ತು ಎಮ್ಮೆಗಳನ್ನು ಸಾಕಿದ್ದರು. ನಾವೆಲ್ಲಾ ಅವರ ಬಳಿಯೇ ವರ್ತನೆಗೆ (ಪ್ರತಿ ನಿತ್ಯ ಕಡ್ಡಾಯವಾಗಿ ನಿರ್ಧಿಷ್ಟವಾದ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ ಹಣ ನೀಡುವ ಪದ್ದತಿ) ಹಾಲು ತೆಗೆದುಕೊಳ್ಳುತ್ತಿದ್ದವು. ಅದೇ ರೀತಿ ನಾವಿದ್ದ ವಠಾರದ ಮನೆಯ ಮಾಲೀಕರ ಮನೆಯಲ್ಲಿಯೂ ಹಸು ಮತ್ತು ಎಮ್ಮೆ ಸಾಕಿದ್ದರು ನಾವು ಅವರ ಬಳಿಯೇ ಪ್ರತಿನಿತ್ಯ ಹಾಲನ್ನು ತೆಗೆದುಕೊಂಡು ತಿಂಗಳಿಗೊಮ್ಮೆ… Read More ಅವಕಾಶ

ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಸುಮಾರು ಹನ್ನೆರಡು ಹದಿಮೂರು ವರ್ಷಗಳ ಹಿಂದಿನ ಮಾತು. ಅವತ್ತು ಶನಿವಾರವಾದ್ದರಿಂದ ಕೆಲಸಕ್ಕೆ ರಜೆ ಇದ್ದ ಕಾರಣ ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿ ಮನೆಗೆ ಹಿಂದಿರುಗುವಾಗ ಮಟ ಮಟ ಮಧ್ಯಾಹ್ನವಾಗಿ ಹೊಟ್ಟೆ ಕೂಡಾ ತುಂಬಾನೇ ಹಸಿದಿತ್ತು. ಮನೆ ಒಳಗೆ ಕಾಲಿಟ್ಟೊಡನೆಯೇ ನಮ್ಮ ತಾಯಿಯವರು ಯಾರೊಂದಿಗೂ ಮಾತನಾಡುತ್ತಿರುವ ಶಬ್ಧ ಕೇಳಿಸಿ, ಯಾರು ಬಂದಿರಬಹುದು ಎಂದು ಯೋಚಿಸುತ್ತಾ ಸೀದಾ ಬಚ್ಚಲು ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ನೋಡಿದರೆ, ಯಾರೋ ಅಪರಿಚಿತ ಹೆಂಗಸು ನೋಡಲು ಬಹಳ ಕೃಶಕಾಯಳು, ಉಡಲು ಒಂದು… Read More ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಮೊಬೈಲ್ ಹೆಸರೇ ಹೇಳುವಂತೆ ಜಂಗಮವಾಣಿ. ಎಲ್ಲೆಂದರೆಲ್ಲಿ , ಎಷ್ಟು ಹೊತ್ತಿನಲ್ಲಿಯೂ, ಯಾರನ್ನು ಬೇಕಾದರೂ ಸಂಪರ್ಕಿಸ ಬಹುದಾದ ಸುಲಭವಾದ ಸಾಧನ. ಭಾರತದಲ್ಲಿ ಎಂಭತ್ತರ ದಶಕದಲ್ಲಿ ದೂರವಾಣಿಯ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗಳಲ್ಲಿ ಟೆಲಿಫೋನ್ ರಿಂಗಣಿಸತೊಡಗಿದರೆ, ತೊಂಭತ್ತರ ದಶಕದಲ್ಲಿ ಸಿರಿವಂತರ ಕೈಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಿಕೊಳ್ಳುವ ಸಾಧನವಾಗಿ ದೊಡ್ಡ ದೊಡ್ಡ ಮೊಬೈಲ್ ಫೋನ್ಗಳು ಬಂದರು. ಆದರೆ, ಯಾವಾಗ 2001-2002ರಲ್ಲಿ ರಿಲೆಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ 500-2000 ರೂಪಾಯಿಗಳ ಮೊಬೈಲ್ ಬಿಡುಗಡೆ ಮಾಡಿತೋ ಅಂದಿನಿಂದ ಭಾರತದಲ್ಲಿ… Read More ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಅನುಭವದ ಪಾಠ

ನೀರು ಎಲ್ಲರ ಜೀವಾಮೃತ. ಕಡೇ ಪಕ್ಷ ಊಟ ಇಲ್ಲದಿದ್ದರೂ ಸುಮಾರು ದಿನಗಳು ಜೀವಿಸಬಹುದು. ಆದರೆ ನೀರು ಇಲ್ಲದೇ ಜೀವಿಸಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಆಹಾರ ಇಲ್ಲದಿದ್ದಾಗ ಹೊಟ್ಟೆ ತುಂಬಾ ನೀರನ್ನು ಕುಡಿದೇ ಹೊಟ್ಟೆ ತುಂಬಿಸುಕೊಂಡ ಎಷ್ಟೋ ಉದಾಹರಣೆಗಳಿವೆ. ಅಂತಹ ನೀರನ್ನು ಕುಡಿಯುವಾಗ ಆದ ಅನುಭವದ ಸಂಗತಿಯೇ ಇಂದಿನ ಕಥಾವಸ್ತು. ಶಂಕರ ಅದೊಂದು ಪ್ರತಿಷ್ಥಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾರತದಲ್ಲದೇ ದೇಶ ವಿದೇಶದ ನಾನಾ ಭಾಗಗಳಲ್ಲಿ ಅವನ ಕಂಪನಿಯ ಶಾಖೆ ಇತ್ತು. ಪ್ರಪ್ರಥಮ ಬಾರಿಗೆ ಅವನಿಗೆ ಕೆಲಸದ… Read More ಅನುಭವದ ಪಾಠ

ಜನ್ಮ ರಹಸ್ಯ

ಸಾಧಾರಣ ನಾಮ ಸಂವತ್ಸರದ, ಆಶ್ವಯುಜ ಶುದ್ಧ ಪಂಚಮಿ, ಅರ್ಥಾತ್ ನವರಾತ್ರಿಯ ಪಂಚಮಿಯಂದು ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ(KGF) ಸಂಜೆ ಸರಿ ಸುಮಾರು 5:30ಕ್ಕೆ ಈ ಪ್ರಪಂಚಕ್ಕೆ ಕಾಲಿಟ್ಟವರೊಬ್ಬರ ಅದ್ಭುತ ರೋಚಕ ಜನ್ಮ ರಹಸ್ಯ ಇದೋ ನಿಮಗಾಗಿ… Read More ಜನ್ಮ ರಹಸ್ಯ

ಮೈಸೂರಿನ ಜಗ ಜಟ್ಟಿಗಳು

ಇತಿಹಾಸ ಪ್ರಸಿದ್ಧ ಮೈಸೂರಿನ ದಸರಾ ಸಮಯದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಜಟ್ಟಿಗಳ ಮೂಲ ಯಾವುದು? ಅವರ ಜೀವನ ಶೈಲಿ ಹೇಗೇ? ದಸರಾ ಕುಸ್ತಿ ಪಂದ್ಯಾವಳಿಯ ನಿಯಮಾವಳಿಗಳ ಕುರಿತಾದ ರೋಚಕವಾದ ವಿಚಾರಗಳು ಇದೋ ನಿಮಗಾಗಿ… Read More ಮೈಸೂರಿನ ಜಗ ಜಟ್ಟಿಗಳು

ಆಟೋ ರಾಜ ಶಂಕರನಾಗ್

ಕನ್ನಡ ಚಿತ್ರರಂಗ ಕಂಡ ಅಪರೂಪದ ಮತ್ತು ಅನುರೂಪದ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಂತಹ ಶ್ರೀ ಶಂಕರ್ ನಾಗ್ ಅವರು ಸುಮಾರು ವರ್ಷಗಳ ಹಿಂದೆಯೇ ನಮ್ಮನ್ನಗಲಿದ್ದರೂ, ಇಂದಿಗೂ ತಮ್ಮ ಚಿತ್ರಗಳು, ಹಾಡು ಮತ್ತು ನೃತ್ಯಗಳ ಮೂಲಕವಲ್ಲದೇ, ಆಟೋಗಳ ಚಾಲಕರ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಮನ ಮಾಡಿದ್ದಾರೆ. 30 ಸೆಪ್ಟೆಂಬರ್ ಅವರ ಸಂಸ್ಮರಣಾ ದಿನದಿಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿನಿಮಾಗಳ ಹೊರತಾಗಿಯೂ ಅವರ ಸಾಹಸಗಳ ಚಿತ್ರಣ ಇದೋ ನಿಮಗಾಗಿ… Read More ಆಟೋ ರಾಜ ಶಂಕರನಾಗ್