ಬಾಳೆ ಗಿಡ ಮತ್ತದರ ಪ್ರಯೋಜನಗಳು

ಹಬ್ಬ ಹರಿದಿನಗಳೆಂದರೆ ದೇವರು ಭಕ್ತಿ , ಪೂಜೆ ಒಂದು ಕಡೆಯಾದರೇ, ದೇವರ ನೈವೇದ್ಯದ (https://wp.me/paLWvR-3H) ಹೆಸರಿನಲ್ಲಿ ಬಗೆ ಬಗೆಯ ಭಕ್ಷ್ಕಗಳನ್ನು ತಯಾರಿಸಿ ದೇವರಿಗೆ ನಿವೇದಿಸಿ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಿಸುವುದು ನಡೆದು ಬಂದ ಸಂಪ್ರದಾಯ. ದಿನ ನಿತ್ಯ ತಟ್ಟೆಗಳಲ್ಲಿ ಸೇವಿಸಿದರೆ ವಿಶೇಷ ದಿನಗಳಂದು ಬಾಳೆಎಲೆಯ ಮೇಲೆ ಊಟ ಮಾಡುವುದೇ ಒಂದು ವಿಸಿಷ್ಟ ಅನುಭವ. ಮದುವೆ ಮುಂಜಿ , ನಾಮಕರಣ ಮುಂತಾದ ಶುಭ ಕಾರ್ಯಕ್ರಮವಿರಲೀ ಇಲ್ಲವೇ ತಿಥಿಯಂತ ಅಶುಭ ಕಾರ್ಯಕ್ರಮಗಳಲ್ಲಿ ಹಲವಾರು ಜನರಿಗೆ ಊಟ ಬಡಿಸಲು ಅಷ್ಟೊಂದು… Read More ಬಾಳೆ ಗಿಡ ಮತ್ತದರ ಪ್ರಯೋಜನಗಳು

ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ದಸರಾಹಬ್ಬ ಮೈಸೂರು ಪ್ರಾಂತದ ನಾಡಹಬ್ಬ ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೇ ಬಾಗಿಣ ಕೊಡುವುದು ಸಂಪ್ರದಾಯ. ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು,… Read More ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ಗೆಳೆತನ (Friendship)

ನಮ್ಮೆಲ್ಲರ ನಿತ್ಯ ಜೀವನದಲ್ಲಿ ಗೆಳೆತನ (friendship) ಎಂಬುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಗೆಳೆತನ ಸರಿಯಾಗಿದ್ದಲ್ಲಿ ಎಲ್ಲವೂ ಸುಖಃಮಯವಾಗಿರುತ್ತದೆ. ಅಕಸ್ಮಾತ್ ಗೆಳೆತನದಲ್ಲಿ ಒಂದು ಚೂರು ವೆತ್ಯಾಸವಾದರೂ ಅದು ಘನ ಘೋರ ಪರಿಣಾಮವನ್ನು ಬೀರುತ್ತದೆ. ಮೇಲೆ ತೋರಿಸಿರುವ ಚಿತ್ರವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೇ, ಹುಡುಗಿಯೊಬ್ಬಳು ಅಪಾಯಕ್ಕೆ ಸಿಲುಕಿದ್ದಾಳೆ. ಅವಳನ್ನು ರಕ್ಷಿಸಲು ಒಬ್ಬ ಹುಡುಗ ಪ್ರಯತ್ನಿಸುತ್ತಿದ್ದಾನೆ. ತಾನು ಕೈಹಿಡಿದು ಮೇಲೆ ಎತ್ತುತ್ತಿರುವ ಹುಡುಗಿಗೆ ಹಾವು ಕಚ್ಚುತ್ತಿದೆ ಎಂದು ಆ ಹುಡುಗನಿಗೆ ತಿಳಿದಿಲ್ಲ. ಅದೇ ರೀತಿ ತನ್ನನ್ನು ರಕ್ಷಿಸುತ್ತಿರುವ ಹುಡುಗನ ಬೆನ್ನ ಮೇಲೆ ದೊಡ್ಡದಾದ… Read More ಗೆಳೆತನ (Friendship)

ಭಗತ್ ಸಿಂಗ್

ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತನ್ನ ಅಮೂಲ್ಯವಾದ ಜೀವನವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ ಮತ್ತು ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾದ ಶ್ರೀ ಭಗತ್ ಸಿಂಗ್ ಅವರ ಜನ್ಮದಿನದಂದು ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಪರಿಚಯ ಇದೋ ನಿಮಗಾಗಿ… Read More ಭಗತ್ ಸಿಂಗ್

ನಂಬಿಕೆ

ಇಂದಿನ ನಮ್ಮ ಬಹುತೇಕ ಯುವ ಜನಾಂಗವನ್ನು ಕರೆದು, ಈ ಕಾರ್ಯವನ್ನು ನಿಮ್ಮಿಂದ ಸಾಧಿಸಲು ಸಾಧ್ಯವೇ ? ಎಂದು ಒಂದು ಸಾಮಾನ್ಯ ಕೆಲಸವನ್ನು ತೋರಿಸಿದರೂ, ಅವರಿಂದ ಮೊದಲು ಬರುವ ಉತ್ತರವೇ ಇಲ್ಲಾ. ಇದು ಸಾಧ್ಯವಿಲ್ಲ. ಅದು ಏಕೆ ಸಾಧ್ಯವಿಲ್ಲಾ ಎಂದು ನಾವು ಕೇಳುವುದಕ್ಕೆ ಮುಂಚೆಯೇ, ಅದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡಲು ಆರಂಭಿಸುತ್ತಾರೆ. ಅರೇ ಅದೇಕೆ ಸಾಧ್ಯವಿಲ್ಲಾ? ನೀವು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಸಾಧುವಾಗುತ್ತದೆ ಎಂದು ತಿಳಿಸಿದಾಗ ಹಾಂ!! ಹೌದು. ನಿಜ. ನೀವು ಹೇಳಿದ ಹಾಗೆ… Read More ನಂಬಿಕೆ

ಚೊಚ್ಚಲ ಟಿ20 ವಿಶ್ವಕಪ್

ಹನ್ನೆರಡು ವರ್ಷಗಳ  ಹಿಂದೆ ಭಾರತ ಕ್ರಿಕೆಟ್ ತಂಡ   ಘಟಾನುಘಟಿ ಆಟಗಾರರೆಲ್ಲಾ ನಿವೃತ್ತಿಯ ಅಂಚಿನಲ್ಲಿದ್ದಾಗ  ಹೊಡೀ ಬಡೀ ಆಟಕ್ಕೆ ಹೇಳಿ ಮಾಡಿಸಿದಂತಹ ಮಹೇಂದ್ರ ಸಿಂಗ್ ದೋನಿ  ನೇತೃತ್ವದಲ್ಲಿ ಯುವ ಆಟಗಾರರ ತಂಡದ ರಚನೆಯಾಗಿತ್ತು. ಆಷ್ಟರಲ್ಲಿ ದಕ್ಷಿಣ ಆಫ್ರಿಕಾದಲ್ಲಿ  ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿಯ ಘೋಷಣೆಯಾಗಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ  ಹೊರ ಬಂದಿದ್ದರಿಂದ ಮತ್ತು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್… Read More ಚೊಚ್ಚಲ ಟಿ20 ವಿಶ್ವಕಪ್

ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ  ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು.  ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ  ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು  ಬೆಳಗಿನಿಂದಲೇ  ಮಡಿಯಲ್ಲಿ  ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು.  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ… Read More ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಆಸ್ತಿ

ಎಂಭತ್ತರ ದಶಕ. ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ  ತುಮಕೂರು ಬಳಿಯ ಬೋರೇಗೌಡರ ಕುಟುಂಬಕ್ಕೆ ನಿಜಕ್ಕೂ ಬಹಳ ಆಘಾತವಾಗಿತ್ತು. ಸತತವಾಗಿ ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾಗದೆ  ಅವರಿದ್ದ ಪ್ರದೇಶ ಬರಗಾಲಕ್ಕೆ ತುತ್ತಾಗಿತ್ತು.  ಹೊತ್ತು ಹೊತ್ತಿಗೆ ಎರಡು ತುತ್ತು ಊಟ ಮಾಡಲೂ ಕಷ್ಟ ಪಡುವ ಸ್ಥಿತಿ ಬಂದೊದಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಕೆಟ್ಟು ಪಟ್ಟಣ ಸೇರು ಎನ್ನುವಂತೆ ತಮ್ಮ ಸಂಬಂಧೀಕರು ಬೆಂಗಳೂರಿನಲ್ಲಿದ್ದ ಕಾರಣ, ಅಲ್ಲಿ ಏನಾದರೂ ಕೂಲೀ ನಾಲಿ ಮಾಡಿ ಸ್ವಲ್ಪ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಾ ಪರಿಸ್ಥಿತಿ… Read More ಆಸ್ತಿ

ಮನಸ್ಸಿದ್ದಲ್ಲಿ ಮಾರ್ಗ

ಸ್ನೇಹ ಚುರುಕಾದ ಬುದ್ಧಿವಂತ ಮಧ್ಯಮ ವರ್ಗದ ಹುಡುಗಿ. ಓದಿನೊಂದಿಗೆ ಹಾಡು, ನೃತ್ಯಗಳಲ್ಲೂ ಎತ್ತಿದ ಕೈ. ತಂದೆ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಜೊತೆಗೆ ಮನೆಯಲ್ಲಿಯೇ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದರೆ, ತಾಯಿ ಅಪ್ಪಟ ಗೃಹಿಣಿ. ಅದೊಂದು ಬೇಸಿಗೆ ರಜೆಯಲ್ಲಿ ಹೈಸ್ಕೂಲ್ ಓದುತ್ತಿದ್ದ ಸ್ನೇಹ ತನ್ನ ಸ್ನೇಹಿತೆಯರೊಂದಿಗೆ ಆಟವಾಡಲು ಮನೆಯ ಸಮೀಪದಲ್ಲೇ ಇದ್ದ ಕ್ರೀಡಾಂಗಣಕ್ಕೆ ಹೋಗಿದ್ದಳು. ಅಲ್ಲೇ ಪಕ್ಕದಲ್ಲೇ ಆಡುತ್ತಿದ್ದವರ ಚೆಂಡು ಇವರತ್ತ ಬಂದಿತು. ಆ ಕೂಡಲೇ ಸ್ನೇಹ ಆ ಚೆಂಡನ್ನು ಹಿಡಿದು ತನ್ನ ಎಡಗೈನಿಂದ ರಭಸವಾಗಿ ಹಿಂದಿರುಗಿಸಿ… Read More ಮನಸ್ಸಿದ್ದಲ್ಲಿ ಮಾರ್ಗ