ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್

ಸಂಗೀತ ಕಲಿಯುವುದಕ್ಕೆ ಯಾವುದೇ ಜಾತಿ, ಮತ, ದರ್ಮ ಮತ್ತು ವಯಸ್ಸಿನ ಹಂಗಿಲ್ಲಾ ಎಂದು ಇಡೀ ಜಗತ್ತಿಗೇ ತೋರಿಸಿಕೊಟ್ಟ, ವಿದೇಶೀ ಕರ್ನಾಟಕ ಸಂಗೀತಗಾರ ಜಾನ್ ಬಿ ಹಿಗ್ಗಿನ್ಸ್ ಅವರ ಯಶೋಗಾಥೆ ಇದೋ ನಿಮಗಾಗಿ… Read More ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ… Read More ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು. ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್… Read More ಹರಕೆ

ಅನಂತ ಚತುರ್ದಶಿ ವ್ರತ

ಭಾದ್ರಪದ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೇಯ ದಿನದಂದು ಭಕ್ತಿಭಾವದಂದ ಆಚರಿಸಲ್ಪಡುವ ಅನಂತ ಚತುರ್ದಶಿ ಅಥವಾ ಅನಂತನ ಹಬ್ಬದ ಪೌರಾಣಿಕ ಹಿನ್ನಲೆ, ಹಬ್ಬದ ವೈಶಿಷ್ಟತೆ ಮತ್ತು ಹಬ್ಬದ ಆಚರಣೆಯ ಸಂಪೂರ್ಣ ವಿವರ ಇದೋ ನಿಮಗಾಗಿ… Read More ಅನಂತ ಚತುರ್ದಶಿ ವ್ರತ

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ. ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ… Read More ಕರ್ಮ

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಳೆದ ಎರಡು ಮೂರು ಮೂರು ವಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ದೇಶದ ಹಣವನ್ನು ಕೊಳ್ಳೆಹೊಡೆದ ಆರೋಪದ ಮೇಲೆ ಬಂಧಿಸಲ್ಪಟ್ಟ ರಾಜಕಾರಣಿಗಳ ಬಗ್ಗೆ ಚರ್ಚಿಸುತ್ತಿದ್ದ ಭಾರತೀಯರು, ಇದ್ದಕ್ಕಿಂದಂತೆಯೇ ಎರಡು ಮೂರು ದಿನಗಳಿಂದ ಹೊಸ ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಸಂಚಾರ ನಿಯಮದ ಕಠಿಣ ದಂಡ ದೃಷ್ಟಿ ಹಾಯಿಸಿದ್ದಾರೆ. ಸರ್ಕಾರ ದಂಡಗಳನ್ನು ಬಹು ಪಟ್ಟು ಹೆಚ್ಚು ಮಾಡುತ್ತಿದ್ದಂತೆಯೇ ನಿಯಮವನ್ನು ಉಲ್ಲಂಘಿಸುವ ಮೊದಲು, ಉಲ್ಲಂಘಿಸುವವರು ಎರಡು ಬಾರಿ ಯೋಚಿಸುವಂತೆ ಮಾಡಿದೆಯಾದರೂ, ಹೊಸಾ ನಿಯಮ ಏಕೋ ಎತ್ತಿಗೆ ಜ್ವರ ಬಂದ್ರೇ… Read More ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ… Read More ಸಾರ್ಥಕ ಬದುಕು

ಹಬ್ಬದ ಸಡಗರ ಸಂಭ್ರಮ

ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು. ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ… Read More ಹಬ್ಬದ ಸಡಗರ ಸಂಭ್ರಮ

ಹೂವಿನ ಹಾರ

ಹಬ್ಬ ಹರಿ ದಿನಗಳಲ್ಲಿ ದೇವರ ಅಲಂಕಾರ ಮಾಡಲು ಯಾವುದೇ ರೀತಿಯ ಎಷ್ಟೇ ಆಭರಣಗಳಿಂದ ದೇವರನ್ನು ಅಲಂಕರಿಸಿದರೂ ವಿಧ ವಿಧದ ಹೂವುಗಳು ಮತ್ತು ಹೂವಿನ ಹಾರಗಳ ಅಲಂಕಾರದ ಮುಂದೆ ಉಳಿದೆಲ್ಲವೂ ನಗಣ್ಯವೇ ಸರಿ. ಅದೇ ರೀತಿ ಮುನಿಸಿಕೊಂಡಿರುವ ನಾರಿಯರನ್ನು ಸರಳವಾಗಿ ಮತ್ತು ಸುಲಭವಾಗಿ ಒಲಿಸಿಕೊಳ್ಳಲು ಒಂದು ಮೊಳ ಮಲ್ಲೇ ಅಥವಾ ಮಲ್ಲಿಗೆ ಹೂ ಸಾಕು ಎನ್ನುವುದು ಕೆಲವು ಅನುಭವಸ್ತರ ಅಂಬೋಣ. ಸುಮಾರು ವರ್ಷಗಳ ಹಿಂದೆ ಕೃಷ್ಣರಾಜಾ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನ ಹೂವಿನ ಹಾರ ಕೊಂಡು ಕೊಳ್ಳಲು ಹೋದಾಗ… Read More ಹೂವಿನ ಹಾರ