ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ಬಾಲ್ಯದ ಗೆಳೆಯ/ಗೆಳತಿಯರ ಗೆಳೆತನ ಸಾಧಾರಣವಾಗಿ ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತದೆ. ಹೆಚ್ಚೆಂದರೆ ಒಂದಿಬ್ಬರ ಗೆಳೆತನ ಕಾಲೇಜಿನವರೆಗೆ ‌ಮುಂದುವರಿದರೆ ಭಾರಿ ಅನಿಸುತ್ತದೆ. ‌ಅದರಲ್ಲೂ ಹೆಚ್.ಎಂ.ಟಿ ಕಾರ್ಖಾನೆಯ ಕಾರ್ಮಿಕರ ಮಕ್ಕಳು ಎಂದರೆ ಮಧ್ಯಮ ‌ವರ್ಗದ ಜನ. ಎಲ್ಲರ ವಾಸ, ಕಾರ್ಖಾನೆಯ ಕಾಲೋನಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ , ಎಲ್ಲಾ ಧರ್ಮದ, ಜನ ಒಂದೇ ಕಡೆ ಒಟ್ಟಾಗಿ ಆಟ, ಪಾಠವಾಡುತ್ತಾ ಒಟ್ಟೊಟ್ಟಿಗೆ ‌ಬೆಳೆಯುವವರು. ಇದೆಲ್ಲಾ ‌ತಮ್ಮ ತಂದೆಯವರು ಕೆಲಸದಿಂದ ನಿವೃತ್ತಿ ಹೊಂದಿದಾಗಲೋ ಇಲ್ಲವೇ ಸ್ವಂತ ಮನೆ ಕಟ್ಟಿಸಿಕೊಂಡು ಹೋಗುವವರೆಗೆ ಇರುತ್ತದೆ.… Read More ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ನಾನು ಅಪ್ಪನಾದ ಮಧುರ ಕ್ಷಣ

ಭಾರತದಂತಹ ಪುಣ್ಯಭೂಮಿಯಲ್ಲಿ ಹುಟ್ಟುವುದಕ್ಕೇ ಪುಣ್ಯ ಮಾಡಿರ ಬೇಕು. ಇನ್ನು ಕಾಲ ಕ್ರಮೇಣ ದೊಡ್ಡವರಾಗುತ್ತಿದ್ದಂತೆಯೇ, ಅವರೇ ಅಪ್ಪಾ, ಅಮ್ಮಾ ಇಲ್ಲವೇ ತಾತ ಮತ್ತು ಅಜ್ಜಿಯರಾಗಿ ಭಡ್ತಿ ಪಡೆಯುವ ಅನುಭವವಂತೂ ನಿಜಕ್ಕೂ ಅದ್ಭುತ ಮತ್ತು ಅವರ್ಣನೀಯವೇ ಸರಿ.

ಇನ್ನು ನಿಮ್ಮವನೇ ಉಮಾಸುತದಿಂದ ಸೃಷ್ಟಿಕರ್ತ ಉಮಾಸುತ ಎಂಬ ಅಡಿಬರಹ ಬರೆಯಲು ಕಾರಣವೇನು? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ನಾನು ಅಪ್ಪನಾದ ಮಧುರ ಕ್ಷಣ

ಪೆಪ್ಪರ್ಮೆಂಟ್

ಬಹುಷಃ ಎಪ್ಪತ್ತು ಮತ್ತು ಎಂಭತ್ತು ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ ಎಂಬ ನಂಬಿಕೆ ನನ್ನದು. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ತಿಂಡಿಯೇ ಅದು. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಪೆಪ್ಪರ್ಮೆಂಟ್. ನಾವು ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನವಾಗಿ ಸಿಗುತ್ತಿದ್ದದ್ದೇ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಮಕ್ಕಳಿಗೆಂದೇ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು.… Read More ಪೆಪ್ಪರ್ಮೆಂಟ್

ಮನಸ್ಸಿದ್ದಲ್ಲಿ ಮಾರ್ಗ

ಅಮೆರಿಕದಲ್ಲಿದ್ದರೂ ತನ್ನ ಭಾರತದಲ್ಲಿನ ಹುಟ್ಟೂರಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಯುವಕ ದತ್ತ ಪಾಟೀಲ. ಭಾರತದ ಬರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು 800 ಅಡಿಯಿಂದ 100 ಅಡಿಗೆ ತಂದ ಯುವಕನ ಸಾಹಸಗಾಥೆ. ಸರ್ಕಾರಗಳು ಇದನ್ನು ಅರಿತು ಕೆಲಸ ಮಾಡಬೇಕು. 2016ರಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಬರವನ್ನು ಕಂಡಿತ್ತು. ಜನರು ಕುಡಿಯುವ ನೀರಿಗೂ ಪರದಾಡಿದ್ದರು. ಈತನ ಉಳಿದಿದ್ದ ಕ್ಯಾಲಿಫೋರ್ನಿಯ ಕೂಡ ಕಳೆದ ಐದು ವರ್ಷದಿಂದ ನೀರಿನ ಬರ ಕಂಡಿತ್ತು. ಭಾರತಕ್ಕೆ ಪ್ರವಾಸಕ್ಕೆಂದು ಬಂದ ದತ್ತ ಪಾಟೀಲ ಬರೀ ಕಂಡಿದ್ದು… Read More ಮನಸ್ಸಿದ್ದಲ್ಲಿ ಮಾರ್ಗ

ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ನೋಡಿದ ಒಂದು ಗೋಡೇ ಬರಹ ನನ್ನನ್ನು ಬಹಳಷ್ಟು ಕಾಡಿತು. ಅದರ ಸಾರಾಂಶ ಈ ರೀತಿಯಾಗಿದೆ. ಮಗ ತಾಯಿಗೆ ಕೂಗಿ ಹೇಳುತ್ತಾನೆ. ಅಮ್ಮಾ ಕಸದವರು ಬಂದಿದ್ದಾರೆ. ಅದಕ್ಕೆ ಮನೆಯೊಳಗಿನಿಂದ ತಾಯಿ ಶಾಂತಚಿತ್ತದಿಂದ ಮಗನಿಗೆ ತಿಳಿ ಹೇಳುತ್ತಾಳೆ. ಮಗೂ ಕಸದವರು ಅವರಲ್ಲ , ನಾವುಗಳು. ಅವರು  ನಾವು ಮಾಡಿದ ಕಸವನ್ನು ಸ್ವಚ್ಛ ಗೊಳಿಸಲು ಬಂದಿದ್ದಾರೆ. ಇನ್ನೊಬ್ಬರ ಕೆಲಸವನ್ನು ಹೀಯಾಳಿಸದೆ ನಮ್ಮ ಮನಸ್ಥಿತಿಯನ್ನು ನಮ್ಮ ದೃಷ್ಟಿಕೋನವನ್ನು ಬದಲಿಸಿ ನೋಡು ಎಲ್ಲವೂ ಸ್ಚಚ್ಚವಾಗಿ ಕಾಣುತ್ತದೆ ಎಂದು ‌ಸುಂದರವಾಗಿ ಸ್ವಚ್ಚತೆಯ ಬಗ್ಗೆ… Read More ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ… Read More ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ಬದುಕು ಜಟಕಾ ಬಂಡಿ

ಇಂದು ಬೆಳಿಗ್ಗೆ ಮನೆಯ ಹತ್ತಿರ ಜಾಗಿಂಗ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ನನಗಿಂತ ಸುಮಾರು ಅರ್ಧ ಕಿಲೋ ಮೀಟರ್ ಮುಂದೆ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದೆ. ಅವರು ಸ್ವಲ್ಪ ನಿಧಾನವಾಗಿ ಓಡುತ್ತಿರುವುದನ್ನು ಗಮನಿಸಿ ಅವರನ್ನು ಹಿಂದಿಕ್ಕಬೇಕೆಂದು ನನ್ನ ಒಳ ಮನಸ್ಸು ಹೇಳಿತು. ಹಾಗಾಗಿ ನಾನು ಮತ್ತಷ್ಟೂ ವೇಗ ಮತ್ತು ವೇಗವಾಗಿ ಓಡಲು ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಅವರಿಗಿಂತ 100 ಅಡಿಗಳ ಹಿಂದೆ ಬಂದಿದ್ದನ್ನು ಗಮನಿಸಿದ ಅವರೂ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ನಾನೂ ಕೂಡ ಅವರನ್ನು ಹಿಂದಿಕ್ಕಲು ಸರ್ವ… Read More ಬದುಕು ಜಟಕಾ ಬಂಡಿ

ರಂಜಾನ್ ರಾಮಾಯಣ

ಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ… Read More ರಂಜಾನ್ ರಾಮಾಯಣ

ವಿಶ್ವ ಪರಿಸರ ದಿನ

ಭೂಮಿ,ಸೌರಮಂಡಲದಲ್ಲಿ 5ನೇ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಅದಕ್ಕಾಗಿಯೇ ಕವಿಯೊಬ್ಬರು ಎಲ್ಲರಿಗೊಂದೇ ಭೂತಲವೆಂದೆ ಎಲ್ಲರಿಗೂ ಭಗವಂತನೇ ತಂದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯದಾತೆಯಲ್ಲದೇ ನಮ್ಮ ತಾಯಿಯೂ ಹೌದು. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ ಭೂಮಿಗೆ ತಾಯಿಯ ಸ್ವರೂಪ ನೀಡಿ ಭೂಮಿತಾಯಿ ಎಂದೇ ಸಂಭೋಧಿಸುತ್ತೇವೆ. ಆದರೆ ಮನುಷ್ಯನ ದುರಸೆಯಿಂದಾಗಿ ಅದೇ ಭೂಮಿ ತಾಯಿ ಒಡಲನ್ನು ಅಗೆದು, ಬಗೆದು ರತ್ನಗರ್ಭ ವಸುಂಧರೆಯಲ್ಲಿ ಆಡಗಿದ್ದ ಖನಿಜ ಸಂಪತ್ತುಗಳನ್ನು ಬರಿದು ಮಾಡಿದ್ದಲ್ಲದೇ… Read More ವಿಶ್ವ ಪರಿಸರ ದಿನ