ಯುಗಾದಿ ಹಬ್ಬ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆಯನ್ನು ಕುಲವಧು ಚಲನಚಿತ್ರದಲ್ಲಿ ಅಳವಡಿಸಿಕೊಂಡು ಲೀಲಾವತಿಯವರು ಹಾಡುತ್ತ ನರ್ತಿಸುವುದನ್ನು ನೋಡುತ್ತಿದ್ದರೆ ಅದುವೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದ. ನಮ್ಮ ಹಿರೀಕರು ನಮ್ಮ ಹವಾಮಾನಕ್ಕೆ ಅನುಗುಣವಾಗಿಯೇ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ದತಿಯನ್ನು ರೂಢಿಮಾಡಿದ್ದಾರೆ. ಅಂತೆಯೇ ಪ್ರಕೃತಿಯೂ ತನ್ನ ಹಳೆಯದ್ದನೆಲ್ಲಾ ಕಳೆದು ಕೊಂಡು ಹೊಸ ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ ಸೂರ್ಯನೂ ಕೂಡಾ ಕೆಲವೇ… Read More ಯುಗಾದಿ ಹಬ್ಬ

ದೇಶ ಮತ್ತು ದ್ವೇಷ

ನೆನ್ನೆ  ಸಂಜೆ ತೋಳ ಬಂತು ತೋಳ ಅನ್ನುವ ಹಾಗೆ ಈಗ ಬಿಡುಗಡೆ ಮಾಡ್ತೀವಿ, ಅಗ ಬಿಡುಗಡೆ ಮಾಡ್ತೀವಿ. ಚಿದಂಬರಂ ಮತ್ತು ಮೋಯ್ಲಿಯವರ ತಂಡ ಎಲ್ಲಾ ಸಿದ್ದ ಪಡಿಸ್ತಿದ್ದಾರೆ ಅಂತ ಹೇಳ್ತಾನೇ, ನೆನ್ನೆ ಮಧ್ಯಾಹ್ನ ಕಾಂಗ್ರೇಸ್  ಗಜಗರ್ಭದಂತೆ  ತನ್ನ ಪಕ್ಷದ ಪ್ರಣಾಳಿಕೆಯನ್ನು  ಬಿಡುಗಡೆ ಮಾಡಿತು.  ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಓದುತ್ತಿದ್ದಂತೆಯೇ ಇದು ನಮ್ಮದೇಶದ ಒಂದು ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಯೋ ಇಲ್ಲವೇ ಪಾಪೀಸ್ಥಾನದ ಉಗ್ರರ ಪ್ರಣಾಳಿಕೆಯೋ ಅನ್ನುವ ಅನುಮಾನ ಮೂಡಿದ್ದಂತೂ ಸತ್ಯ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್… Read More ದೇಶ ಮತ್ತು ದ್ವೇಷ

ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!

ಏ.6 ಯುಗಾದಿ, ಪಂಚಾಂಗ ಪೂಜಿಸುವ ದಿನ. ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ…. ಲೇಖಕರು : ಟಿ.ಎಂ. ಸತೀಶ್, ಸಂಪಾದಕರು, ourtemples.in ಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ ನೋಡಲು ಬರುವುದಿಲ್ಲ. ಹಲವರು ಪಂಚಾಂಗ ಎಂದರೆ ಅರ್ಥವಾಗದ ಕಗ್ಗಂಟು, ಅದು ಪುರೋಹಿತರ ಸ್ವತ್ತು ಎಂದೇ ತಿಳಿದಿದ್ದಾರೆ. ವಾಸ್ತವವಾಗಿ ಪಂಚಾಂಗ ಎಂದರೆ ಅರ್ಥವಾಗದ ಹಲವು ಶ್ಲೋಕಗಳಿಂದ ಕೂಡಿದ ಕಗ್ಗಂಟಲ್ಲ. ಬದಲಾಗಿ ಪಂಚಾಂಗ ಎಂಬುದು ಜನ ಜೀವನದ… Read More ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!

ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಕಳೆದ ವಾರಾಂತ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ನಮ್ಮ ಸ್ನೇಹಿತರೊಂದಿಗೆ ಮನೆ ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರಿಗೂ ಮತದಾನದ ಮಹತ್ವವನ್ನು ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಲು ವಿನಂತಿಸಿಕೊಂಡೆವು. ಸಾಧಾರಣವಾಗಿ ಹೀಗೆ ಮತ ಪ್ರಚಾರಮಾಡಲು ಬರುವವರನ್ನು ಎಲ್ಲರೂ ಕೇಳುವ ಪ್ರಶ್ನೆ, ನೀವು ಯಾವ ಪಕ್ಷದವರು? ಯಾರ ಸಮರ್ಥಕರು? ಆದರೆ ನಾವು ಯಾವುದೇ ಪಕ್ಷದ ಪರವಾಗಿರದೆ ಜನಜಾಗೃತಿ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಮತದಾನ ದಿನವನ್ನು ನೆನಪಿಸಿ, ಮತ ಪಟ್ಟಿಯಲ್ಲಿ ಅವರ ಹೆಸರು ಇದೆಯೇ ಎಂದು ಪರೀಕ್ಷಿಸಲು ತಿಳಿಸಿ,ಕಳೆದ ಬಾರೀ ಮತ ಚಲಾವಣೆ ಮಾಡಿದ್ದರೇ… Read More ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಹದಿನೇಳನೇ ಶತಮಾನದಲ್ಲಿ ಪರಕೀಯರ ಆಕ್ರಮಣಕ್ಕೆ ತುತ್ತಾದ ನಮ್ಮ ದೇಶ ಧಾರ್ಮಿಕವಾಗಿಯೂ ಮತ್ತು ಸಂಸ್ಕೃತಿಕವಾಗಿಯೂ ಅಧೋಗತಿಯಲ್ಲಿ ಸಾಗುತ್ತಿದ್ದಾಗ ಶ್ರೀಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀದೇವಿಯವರ ತಪಸ್ಸಿನ ಫಲವಾಗಿ ದೈವಾನುಗ್ರಹದಿಂದ ದೈವಾಂಶ ಸಂಭೂತರಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಮುರುಗೋಡದಲ್ಲಿ ಜನಿಸಿದರು. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಬಹಳ ಬೇಗ ಅಪಾರ ಭಕ್ತವೃಂದವನ್ನು ಗಳಿಸಿದ ಮಹಾಸ್ವಾಮಿಗಳು ತಮ್ಮ ಲೀಲೆಯಿಂದ ಕಾಲ ಕಾಲಕ್ಕೆ ಮಳೆ ಬೆಳೆ ಆಗುವಂತೆ ನೋಡಿಕೊಂಡು ಎಲ್ಲರೂ ಸುಸಂಸ್ಕೃತರಾಗಿ, ಸುಭೀಕ್ಷವಾಗಿರುವಂತೆ ನೋಡಿಕೊಂಡರು. ಅವರು ಬೆಳೆಸಿದ ಅನೇಕ ಶಿಷ್ಯವೃಂದದಲ್ಲಿ ಸಂತ ಶ್ರೇಷ್ಠ ರಾಜಾರಾಮರು ಅಗ್ರಗಣ್ಯರು.… Read More ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಪರಿಶ್ರಮ

ಮೊನ್ನೆ RCB ಮತ್ತು MI ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಚೆನ್ನೈ ತಂಡ ಹಿಂದೆ ಮೊದಲನೇ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಅಲೌಟ್ ಆಗಿ ಸುಲಭವಾಗಿ ಪಂದ್ಯ ಸೋತಿದ್ದ ಕೋಹ್ಲಿ ಪಡೆ ಈ ಬಾರಿ ಟಾಸ್ ಗೆದ್ದು ಮುಂಬೈ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಹೇಳಿ 187 ರನ್ ಗಳಿಗೆ ಅವರನ್ನು ನಿರ್ಬಂಧಿಸಿ, ಬ್ಯಾಟ್ ಮಾಡಲು ಬಂದ RCB 20 ಓವರ್ಗಳಲ್ಲಿ ಕೇವಲ 181 ರನ್ ಗಳಿಸಲು ಸಾಧ್ಯವಾಗಿ 6 ರನ್… Read More ಪರಿಶ್ರಮ

ತಾನು ಕಳ್ಳ ಪರರ ನಂಬ

ನೆನ್ನೆ ಮುಂಜಾನೆ ರಾಜ್ಯಾದ್ಯಂತ ಕೆಲ ಭ್ರಷ್ಟ ಸರಕಾರಿ ಇಂಜಿನೀಯರುಗಳು ಮತ್ತು  ಗುತ್ತಿಗೆದಾರರ ಮನೆಗಳ ಮೇಲೆ  ಐಟಿ ದಾಳಿ ನಡೆದಿರುವುದು ಈಗ ಜಗಜ್ಜಾಹೀರಾತಾಗಿದೆ. ದಾಳಿಯಾಗಿರುವುದು ಹಾಸನ, ಮಂಡ್ಯ, ಕನಕಪುರ,  ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಾದರೂ ಅದರ ಪರಿಣಾಮ ಮತ್ತು ಪ್ರತಿಭಟನೆ ಬೆಂಗಳೂರಿನಲ್ಲಿ ಆಗುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡೀ ಸರ್ಕಾರವೇ ಈ ದಾಳಿಯ ವಿರುದ್ಧ ಐಟಿ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಅನಾವಶ್ಯಕವಾಗಿ ಪ್ರಧಾನಿಗಳನ್ನೂ, ಬಿಜೆಪಿಯರವನ್ನು ಇದು ರಾಜಕೀಯ ಪ್ರೇರಿತ ಧಾಳಿ… Read More ತಾನು ಕಳ್ಳ ಪರರ ನಂಬ

ಮೋದಿ ಮತ್ತೊಮ್ಮೆ

ಒಂದು ಎರಡು ಮತದಾನಕ್ಕೆ ಹೊರಡು ಮೂರು ನಾಲ್ಕು ಅದು ನಿನ್ನದೇ ಹಕ್ಕು ಐದು ಆರು ತುಸು ಜಾಣ್ಮೆಯ ತೋರು ಏಳು ಎಂಟು ಅದು ಪ್ರಜಾಪ್ರಭುತ್ವದ ನಂಟು ಒಂಭತ್ತು ಹತ್ತು ಯೋಗ್ಯರಿಗೆ ಗುಂಡಿ ಒತ್ತು   ಒಂದರಿಂದ ಹತ್ತರವರೆಗಿನ ಆಟವು ಹೀಗಿತ್ತು ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಿಯಾಗಿತ್ತು.   ಜಿ. ಪಿ. ರಾಜರತ್ನಂ ಅವರಲ್ಲಿ ಕ್ಷಮೆ ಕೋರುತ್ತೇನೆ

ಗರೀಬೀ ಹಟಾವೋ

ಮೊನ್ನೆ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ಸ್ವಘೋಷಿತ ಯುವರಾಜ,  ರಾಹುಲ್ ಗಾಂಧಿ ಅಕ್ಕ ಪಕ್ಕದಲ್ಲಿ ಕರಟಕ ಧಮನಕಳಂತೆ ಸುರ್ಜಿವಾಲ ಮತ್ತು ವೇಣುಗೋಪಾಲ್ ಅವರುಗಳನ್ನು ಕೂರಿಸಿಕೊಂಡು,  ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ,  ದೇಶದ 20% ಬಡವರಿಗೆ ಪ್ರತಿ ತಿಂಗಳು 6000 ರೂಪಾಯಿಗಳಂತೆ  ವರ್ಷಕ್ಕೆ 72000 ರೂಪಾಯಿಗಳನ್ನು ಕನಿಷ್ಠ ಆದಾಯದ ರೂಪದಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಕೊಡುತ್ತೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ  ಪ್ರಕಟಿಸಿದಾಗ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರಿತಿರುವ  ನೆರೆದಿದ್ದ ಪತ್ರಕರ್ತರೆಲ್ಲರೂ ಒಮ್ಮೆಲೆ ರಾಹುಲ್  ತಲೆ ಸರಿ ಇದೆಯೇ, ಯಾವುದಾದರೂ ನಶೆಯಲ್ಲಿದ್ದಾರೆಯೇ? ಆಥವಾ… Read More ಗರೀಬೀ ಹಟಾವೋ