ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಬೆಟ್ಟದ ನೆಲ್ಲಿ ಕಾಯಿ ಸಮುದ್ರ ಉಪ್ಪು ಎತ್ತಲಿಂದೆತ್ತ ಸಂಬಂಧವಯ್ಯಾ? ಎನ್ನುವಂತೆ ಕ್ರಿಕೆಟ್ ಮ್ಯಾಚ್ ಮತ್ತು ಸುಬ್ರಹ್ಮಣ್ಯ ಷಷ್ಥಿಯ ನಡುವೆ ಬ್ರಹ್ಮಚಾರಿ ವಟುವಿನ ಪರದಾಟದ ಸ್ವಾರಸ್ಯಕರ ಪ್ರಸಂಗ ಇದೋ ನಿಮಗಾಗಿ. … Read More ಸುಬ್ರಹ್ಮಣ್ಯ ಷಷ್ಠಿ ಅವಾಂತರ

ನಾನು ಹೇಗೆ ಸಣ್ಣಗಾದೆ

ಈ ಹಿಂದೆ ನಾನೇ ಹಲವಾರು ನನ್ನ ಬರಹಗಳಲ್ಲಿ ತಿಳಿಸಿದ್ದಂತೆ ನಾನು ಕಾಲೇಜು ಓದುತ್ತಿರುವಾಗಲೂ ಸಣ್ಣಗೆ ಕುಳ್ಳಗಿದ್ದು , ನಮ್ಮ ತಾಯಿವರು ಕುಟುಂಬದ ವೈದ್ಯರ ಬಳಿ ಹಲವಾರು ಸಲ ತೋರಿಸಿ, ನಮ್ಮ ಮಗನಿಗೆ ಸ್ವಲ್ಪ ಉದ್ದ ಹಾಗು ದಷ್ಟ ಪುಷ್ಟವಾಗಿ  ಆಗುವಂತೆ ಏನಾದರೂ ಔಷಧಿ ಇದ್ದರೆ ಕೊಡಿ ಎಂದು ಕೇಳಿದ್ದದ್ದು ಇನ್ನೂ ಹಚ್ಚ ಹಸುರಾಗಿದೆ. ನಂತರ ವಯೋಗುಣವಾಗಿ ಬೆಳೆದನಾದರೂ ಸಣ್ಣಗೇ ಇದ್ದೆ.  ಮದುವೆ ಸಮಯದಲ್ಲೂ  ಮದುವೆಗೆ ಬಂದಿದ್ದ ನೆಂಟರಿಷ್ಟರೂ, ಸ್ನೇಹಿತರುಗಳು ನನ್ನನ್ನೂ  ಮತ್ತು ನನ್ನ ಅರ್ಧಾಂಗಿಯನ್ನು ನೋಡಿ, ಇದೇನು… Read More ನಾನು ಹೇಗೆ ಸಣ್ಣಗಾದೆ

ಅಜೇಯ

ಅಜೇಯ ಎಂದರೆ ಎಂದೂ ಸೋಲಿಲ್ಲದ ಸರದಾರ ಎಂದರ್ಥ. ಚಂದ್ರಶೇಖರ್ ಆಝಾದ್ ಅದಕ್ಕೆ ಅನ್ವರ್ಥ. ಚಿಕ್ಕಚಯಸ್ಸಿನಲ್ಲಿ ನನ್ನ ಮೇಲೇಯೂ ಮತ್ತು ಹಲವಾರು ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ಪುಸ್ತಕ ಒಂದಿದ್ದರೆ ಅದು ಬಾಬು ಕೃಷ್ಣಮೂರ್ತಿಯವರ ವಿರಚಿತ ಅಜೇಯ ಎಂದರೆ ತಪ್ಪಾಗಲಾರದು. ಒಮ್ಮೆ ಆ ಪುಸ್ತಕ ಹಿಡಿದರೆ ಇಡೀ ಪುಸ್ತಕವನ್ನು ಓದಿ ಮುಗಿಸದೆ ಪಕ್ಕಕ್ಕೆ ಎತ್ತಿಡಲಾಗದ ಪುಸ್ತಕವದು. ಯಾವುದೇ ಪುಸ್ತಕದ ಎರಡು ಪುಟಗಳನ್ನು ನಾವು ಓದಬೇಕು. ನಂತರ ಉಳಿದ ಪುಟಗಳನ್ನು ಲೇಖಕ ತನ್ನ ಭಾಷಾ ಪಾಂಡಿತ್ಯದಿಂದ, ಆಸಕ್ತಿಕರ ವಿಷಯಗಳಿಂದ… Read More ಅಜೇಯ

ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಇವತ್ತು ರಾತ್ರಿ ಮುಗಿದು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ 1 ನೇ ತಾರೀಖು. ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಸಂಭ್ರವೋ ಸಂಭ್ರಮ. ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು… Read More ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಸೆಪ್ಟೆಂಬರ್ ೫ ಭಾರತದ ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ. ಇದನ್ನು ನಾವು ಪ್ರೀತಿಯಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇತ್ತೀಚೆಗಷ್ಟೇ ಶ್ರೀಯುತ ರಾಧಾಕೃಷ್ಣರವರು ನನ್ನ ಪ್ರಾಣ ಸ್ನೇಹಿತ ಹರಿಯವರ ಅಜ್ಜನ  ಸೋದರತ್ತೆಯ ಮಗ  ಎಂದು ತಿಳಿದುಬಂದಿದ್ದರಿಂದ ಶ್ರೀಯುತರು ನಮ್ಶ ಹತ್ತಿರದ ಸಂಬಂಧಿಯೇನೂ ಎನ್ನುವ ಭಾವನೆ ಮೂಡುತ್ತಲಿದೆ.   ನಮ್ಮ ಸಂಸ್ಕೃತಿಯಲ್ಲಿ  ತಂದೆ ತಾಯಿಯರ  ನಂತರದ ಸ್ಥಾನವನ್ನು ಗುರುಗಳಿಗೇ ಮೀಸಲಿಟ್ಟಿದ್ದೇವೆ.  ಮನೆಯೇ ಮೊದಲ ಪಾಠಶಾಲೆ  ತಂದೆ, ತಾಯಿಯರೇ ಮೊದಲ ಗುರುಗಳಾಗಿ, ಬಾಲ ಪಾಠಗಳನ್ನು ಕಲಿಸಿಕೊಟ್ಟರೂ ವ್ಯವಸ್ಥಿತವಾಗಿ ವಿದ್ಯೆಯನ್ನು ಕಲಿತು… Read More ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ ಬದುಕಬಾರದು

ಸಾಲು ಸಾಲು ಹಬ್ಬ, ಮದುವೆ ಮುಂಜಿ ‌ನಾಮಕರಣಗಳ ಸಂಭ್ರಮದಲ್ಲಿ ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲ ರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಇನ್ನು ಎರಡು ಮೂರು ವಾರಗಳಲ್ಲಿ ಮೂರ್ನಾಲ್ಕು ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ತುಂಬಾ… Read More ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ ಬದುಕಬಾರದು

ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ… Read More ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

https://enantheeri.com/2019/03/10/appa/

ಸಂಕಟ ಬಂದಾಗಲೇ ವೆಂಕಟರಮಣನನ್ನು ನೆನಸಿಕೊಂಡು, ಕಣ್ಣಿಗೆ ಕಾಣದ ಆ ಭಗವಂತನನ್ನು, ಅಯ್ಯಾ ತಂದೇ ನಮ್ಮನ್ನು ಕಾಪಾಡು ಎಂದು ಕೋರಿಕೊಳ್ಳುವ ಈ ಸಮಾಜ, ಅದೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಯರನ್ನೇ ವಯಸ್ಸಾದ ನಂತರ ದೂರ ಇಡುವುದು ಎಷ್ಟು ವಿಪರ್ಯಾಸ ಅಲ್ವೇ?… Read More ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ದಸರಾ ಹಬ್ಬ

ದಸರಾ ಹಬ್ಬ  ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ದಶಮಿಯವರೆಗು ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬ. ದೇಶಾದ್ಯಂತ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ ,  ಬ್ರಹ್ಮಚಾರಿಣಿ , ಚಂದ್ರಘಂಟಾ , ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ,  ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಹತ್ತನೇ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬ.  ಉತ್ತರ ಭಾರತದಲ್ಲಂತೂ ಈ ಹತ್ತೂ ದಿನಗಳು ಬಹುತೇಕ ಜನರು… Read More ದಸರಾ ಹಬ್ಬ