ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ಕೈ ತುತ್ತು

ಕೈ ತುತ್ತು ಎನ್ನುವ ಪದ ಕೇಳಿದ ತಕ್ಷಣ ಥಟ್ ಅಂತಾ ನಮಗೇ ಗೊತ್ತಿಲ್ಲದ ಹಾಗೆ ಹಂಸಲೇಖ ಮತ್ತು ಪ್ರಭಾಕರ್ ಅವರ ಜೋಡಿ ನೀಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದಾದ ಕೈ ತುತ್ತು ಕೊಟ್ಟೋಳು ಐ ಲವ್ ಯೂ ಎಂದಳೋ ಮೈ ಮದರ್ ಇಂಡಿಯಾ ಎನ್ನುವ ಹಾಡನ್ನು ನಮ್ಮ ಮನಸ್ಸಿನ ಮುಂದೆ ಬಂದು ಆ ಹಾಡನು ಗುನುಗಲು ಆರಂಭಿಸುತ್ತೇವೆ. ಆದರೆ ನಿಜವಾಗಿಯೂ ಅಮ್ಮನ ಇಲ್ಲವೇ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲ ಅದರ ಸವಿಯನ್ನು. ಹಾಗಾಗಿ ಅಂತಹ ಅಪರೂಪದ… Read More ಕೈ ತುತ್ತು

ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ. ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ.… Read More ವಂಶವಾಹಿ ಸಂಸ್ಕಾರ (ಜೀನ್ಸ್)

ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಭಾರತದ ದೇಶದಲ್ಲಿ ಅದೋಂದು ಸಣ್ಣ ಗ್ರಾಮ. ಆ ಗ್ರಾಮದಲ್ಲೊಬ್ಬ ವೃದ್ದ ದಂಪತಿಗಳು ವಾಸಿಸುತ್ತಿದ್ದರು. ಮನೆಯ ಹತ್ತಿರವೇ ನದಿಯೊಂದು ಹರಿಯುತ್ತಿದ್ದ ಕಾರಣ ಅವರ ಭಾವಿಯಲ್ಲಿ ಕೇವಲ  10 ಅಡಿಗಳ ಆಳದಲ್ಲಿಯೇ ನೀರಿದ್ದರಿಂದ  ಅವರ  ಮನೆಯ  ಸುತ್ತಲೂ ಮಾವು, ತೆಂಗು, ಹಲಸಿನ ಮರಗಳಲ್ಲದೇ ದಿನ ನಿತ್ಯ ಪೂಜೆಗೆ ಬೇಕಾಗುವಂತಹ ಹೂವಿನ ಗಿಡಗಳಲ್ಲದೇ, ಮನೆಗೆ ಅವಶ್ಯಕವಾಗಿದ್ದ ತರಕಾರಿಗಳನ್ನೂ ತಮ್ಮ ಕೈತೋಟದಲ್ಲಿಯೇ ಬೆಳೆಯುತ್ತಾ ಆನಂದಮಯ ಜೀವನವನ್ನು ನಡೆಸುತ್ತಿದ್ದರು. ಇದಲ್ಲದೇ ಅವರ ಬಳಿ ಭತ್ತ ಬೆಳೆಯುವ ಫಲವತ್ತದ ಸಾಕಷ್ಟು ಗದ್ದೆಯಿದ್ದು ಜೀವನಕ್ಕೇನೂ ಕೊರತೆ ಇರರಲಿಲ್ಲವಾದರೂ,… Read More ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಸ್ತ್ರೀ ! ಕ್ಷಮಯಾಧರಿತ್ರಿ!!

ಹೆತ್ತವರಿಗೆ ಮಗಳು, ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಹೆತ್ತ ಮಕ್ಕಳಿಗೆ ತಾಯಿ, ತನ್ನ ಮಕ್ಕಳಿಗೆ ಮದುವೆಯಾದಾಗ, ಅಳಿಯಂದಿರಿಗೆ ಮತ್ತು ಸೊಸೆಯರಿಗೆ ಅತ್ತೆ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ, ಹೀಗೆ ಬಹುರೂಪಿಯಾದ ಹೆಣ್ಣನ್ನು ಗೌರವಿಸುವುದು ಕೇವಲ ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಗೆ ಮಾತ್ರಾ ಸೀಮಿತವಾಗಿರದೇ, ಪ್ರತೀ ದಿನ, ಪ್ರತೀ ಕ್ಷಣವೂ ಆಕೆಗೆ ಚಿರಋಣಿಗಳಾಗಿರಬೇಕು ಅಲ್ವೇ?… Read More ಸ್ತ್ರೀ ! ಕ್ಷಮಯಾಧರಿತ್ರಿ!!

ನಾನು ಅಪ್ಪನಾದ ಮಧುರ ಕ್ಷಣ

ಭಾರತದಂತಹ ಪುಣ್ಯಭೂಮಿಯಲ್ಲಿ ಹುಟ್ಟುವುದಕ್ಕೇ ಪುಣ್ಯ ಮಾಡಿರ ಬೇಕು. ಇನ್ನು ಕಾಲ ಕ್ರಮೇಣ ದೊಡ್ಡವರಾಗುತ್ತಿದ್ದಂತೆಯೇ, ಅವರೇ ಅಪ್ಪಾ, ಅಮ್ಮಾ ಇಲ್ಲವೇ ತಾತ ಮತ್ತು ಅಜ್ಜಿಯರಾಗಿ ಭಡ್ತಿ ಪಡೆಯುವ ಅನುಭವವಂತೂ ನಿಜಕ್ಕೂ ಅದ್ಭುತ ಮತ್ತು ಅವರ್ಣನೀಯವೇ ಸರಿ.

ಇನ್ನು ನಿಮ್ಮವನೇ ಉಮಾಸುತದಿಂದ ಸೃಷ್ಟಿಕರ್ತ ಉಮಾಸುತ ಎಂಬ ಅಡಿಬರಹ ಬರೆಯಲು ಕಾರಣವೇನು? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ನಾನು ಅಪ್ಪನಾದ ಮಧುರ ಕ್ಷಣ