ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ

ಕೇವಲ ಹಿಂದೂಸ್ಥಾನವಲ್ಲದೇ ಅನೇಕ ಮುಸ್ಲಿಂ ದೇಶಗಳಲ್ಲಿಯೂ, ಧರ್ಮ ಮತ್ತು ಜಾತಿಯ ಹೊರತಾಗಿ ಒಪ್ಪಿ ಮತ್ತು ಅಪ್ಪಿಕೊಳ್ಳುವ ನಿರ್ವಿವಾದಿತ ದೇವರಿದ್ದರೆ ಅದು ಗಣೇಶ ಎಂದರೂ ತಪ್ಪಾಗದು. ಅಂತಹ ಸರ್ವವಂದಿತ ದೇವರನ್ನು ದೇವರೇ ಅಲ್ಲಾ ಎಂದು ಹೀಯ್ಯಾಳಿಸುವ ಕೆಲವು ಭಾರತೀಯ ಕಾವಿಧಾರಿಗಳ ಬೌದ್ಧಿಕ ಮೌಡ್ಯಕ್ಕೆ ಅದೇ ಪಂಗಡದ ಸ್ವಾಮಿಗಳೇ ತಿರುಗಿಬಿದ್ದಿರುವುದು ಉತ್ತಮ ಬೆಳವಣಿಗೆಯಾಗಿದೆ ಅಲ್ವೇ?… Read More ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ

ಗಣೇಶ ಮತ್ತು ಗಣೇಶ ಹಬ್ಬದ ವಿಶೇಷತೆಗಳು

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗಣೇಶ ಮತ್ತು ಗಣೇಶ ಹಬ್ಬದ ವಿಶೇಷತೆಗಳು

ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಹಂಪೆಯ ಸಾಸಿವೆ ಕಾಳು ಗಣೇಶ

ಇತಿಹಾಸ ಪ್ರಸಿದ್ಧ, ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಇತಿಹಾಸ ಮತ್ತು ಅಲ್ಲಿರುವ ಸಾಸಿವೆ ಕಾಳು ಗಣಪತಿಗೆ ಆ ಹೆಸರು ಬರಲು ಕಾರಣವೇನು ಎಂಬುದರ ರೋಚಕ ಸಂಗತಿ ಇದೋ ನಿಮಗಾಗಿ.… Read More ಹಂಪೆಯ ಸಾಸಿವೆ ಕಾಳು ಗಣೇಶ

ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ… Read More ಕೈದಾಳ ಶ್ರೀ ಚನ್ನಕೇಶವ

ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ. ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ… Read More ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ಧೋಲ್ಕಲ್ ಗಣೇಶ

ನಮ್ಮ ದೇಶದಲ್ಲಿ ಹಲವಾರು ಗಣೇಶನ ಪ್ರಸಿದ್ಧ ದೇವಾಲಯಗಳಿವೆ. ಆದರೆ, ಛತ್ತೀಸ್ ಘಡದ ರಾಯ್‌ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ದಾಂತೇವಾಡ ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯದಲ್ಲಿ ಧೋಲ್ಕಲ್ ಎಂಬ ಪರ್ವತದ ತುತ್ತ ತುದಿಯಲ್ಲಿ ಯಾವುದೇ ಮಂಟಪವಿಲ್ಲದೇ ಬಟ್ಟ ಬಯಲಿನಲ್ಲಿರುವ ಈ ಸುಂದರ ವಿಘ್ನವಿನಾಶಕನ ಬಗ್ಗೆ ಬಹುತೇಕರಿಗೆ ತಿಳಿದೇ ಇರಲಿಲ್ಲ. ಸುಮಾರು 13,000 ಅಡಿಗಳಷ್ಟು ಎತ್ತರದ ಈ ಡೋಲ್ಕಲ್ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿಯನ್ನು ಸ್ಥಳೀಯ ಪತ್ರಕರ್ತ ಮತ್ತು ಪುರಾತತ್ವ ಇಲಾಖೆಯಿಂದ ನಡೆಸುತ್ತಿದ್ದ ಭಾರಿ ಶೋಧ… Read More ಧೋಲ್ಕಲ್ ಗಣೇಶ

ಮುದ ನೀಡದ ಮೋದಕ ಪ್ರಿಯನ ಹಬ್ಬ

ಅಂತೂ ಇಂತೂ ಈ ಕೂರೋನಾ ಸಾಂಕ್ರಾಮಿಕ ಮಹಾಮಾರಿಯ ಸಂಕಷ್ಟಗಳ ನಡುವೆಯೂ ನಿರ್ವಿಘ್ನವಾಗಿ ಗೌರೀ ಮತ್ತು ಗಣೇಶ ಹಬ್ಬಗಳು ಆಚರಿಸಲ್ಪಟ್ಟರೂ ಏಕೋ ಎನೋ ಹಿಂದಿನ ಮೋಜು ಮಸ್ತಿ ಇಲ್ಲವಾಗಿದೆ. ನಾವು ಚಿಕ್ಕವರಿದಿದ್ದಾಗ ಗಣೇಶ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ, ಸಮವಯಸ್ಕ ಹುಡುಗರೆಲ್ಲಾ ಸೇರಿ, ಈ ಬಾರಿ ಯಾವರೀತಿಯಾಗಿ ಹಬ್ಬವನ್ನು ಆಚರಿಸಿಬೇಕು ಎಂದು ಯೋಚಿಸಿ ಸಣ್ಣ ಡಬ್ಬೀ ಗಡಿಗೆ ಮಾಡಿಕೊಂಡೋ ಇಲ್ಲವೇ, ಪುಸ್ತಕವನ್ನು ಹಿಡಿದುಕೊಂಡು ನಮ್ಮ ಪರಿಚಯಸ್ತರ ಮನೆಗಳಿಗೆ ಹೋಗಿ ಮಾವ, ಅತ್ತೇ (ಆಗೆಲ್ಲಾ ಅಂಕಲ್ ಆಂಟಿ ಸಂಸ್ಕೃತಿ ಅಷ್ಟೋಂದಾಗಿ… Read More ಮುದ ನೀಡದ ಮೋದಕ ಪ್ರಿಯನ ಹಬ್ಬ