ಸರ್ಕಾರೀ ಶಾಲೆಗಳೋ? ಗಂಜೀ ಕೇಂದ್ರಗಳೋ?

ಅದು ಎಪ್ಪತ್ತರ ದಶಕ ನಾನು ಸರ್ಕಾರೀ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಗ, ನಮ್ಮ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ರುಕ್ಮಿಣಿಯ ಮಗ ಉಮೇಶ, ನನ್ನ ಕೂದಲು ಕತ್ತರಿಸುತ್ತಿದ್ದ ನವೀನ್ ಸಲೂನ್ ಅಂಗಡಿಯವರ ಮಗ ನವೀನ, ನಾಗರಾಜ ಶೆಟ್ಟರ ಮಗ ರಂಗನಾಥ, ಸೈಕಲ್ ಶಾಪ್ ಶಫಿಯವರ ಮಗ ಅಬ್ದುಲ್ಲಾ ಎಲ್ಲರೂ ಒಟ್ಟಿಗೇ ಒಂದೇ ತರಗತಿಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಓದುತ್ತಿದ್ದೆವು. ಅಮ್ಮಾ ಬಟ್ಟೆ ಹಾಕಿ ಎಣ್ಣೆ ಹಚ್ಚಿ ಬೈತಲೆ ತೆಗೆದು ಕೂದಲು ಬಾಚಿದರೆ ಹೆಗಲ ಮೇಲೊಂದು ಹಡಪ, ಆ… Read More ಸರ್ಕಾರೀ ಶಾಲೆಗಳೋ? ಗಂಜೀ ಕೇಂದ್ರಗಳೋ?

ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..

ಭಾಷಾ ಭೂಷಣ

ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ… Read More ಭಾಷಾ ಭೂಷಣ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ. ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛 ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨… Read More ಬೌದ್ಧಿಕ ದಿವಾಳಿತನ

ಶ್ರೀ ಕುದ್ಮುಲ್ ರಂಗರಾಯರು

ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನಿಟ್ಟಿನಲ್ಲಿ ಬಿತ್ತಿಹೋದ ಜಾತಿ ಮತ್ತು ಸಾಮಾಜಿಕ ಅಸಮಾನತೆ ಎಂಬ ಕಳೆ ಈಗ ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಡೆದು ಹಾಕುವುದರಲ್ಲಿ ತಮ್ಮದೇನೂ ಕಿಂಚಿತ್ ಪಾತ್ರವಿರದಿದ್ದರೂ ತಮ್ಮ ಬಾಯಿ ಚಪಲ ಮತ್ತು ಸುತ್ತಮುತ್ತಲಿನ ವಂದಿಮಾಗಧರ ಚೆಪ್ಪಾಳೆಗಾಗಿ ದಲಿತರು, ಬಲಿತರು ಎಂಬ ವಿತಂಡವಾದವನ್ನು ಮಂಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವವರೇ ಹೆಚ್ಚಾಗಿರುವಾಗ ಈ ಸಂದರ್ಭದಲ್ಲಿ ಸುಮಾರು ಸುಮಾರು 150 ವರ್ಷಗಳ ಹಿಂದೆಯೇ ದೀನ ದಲಿತರ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ… Read More ಶ್ರೀ ಕುದ್ಮುಲ್ ರಂಗರಾಯರು