ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಉಡುಪಿಯ ಕುಂದಾಪುರದ ಬಳಿ ಕಾಂತಾರ ಚಿತ್ರ ಚಿತ್ರೀಕರಣವಾದ ಕೆರಾಡಿಯ ಸಮೀಲದಲ್ಲೇ ಸುಂದರ ಪ್ರಕೃತಿತಾಣದ ಮಧ್ಯೆ, ಗುಹೆಯಲ್ಲಿ ಜಲಾವೃತದ ಮಧ್ಯೆ ವಿರಾಜಮಾನವಾಗಿರುವ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ನ ದರ್ಶನವನ್ನು ಮಾಡಿಕೊಂಡು ಬರೋಣ ಬನ್ನಿ.… Read More ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಬಿ. ವಿ. ಕಾರಾಂತ್

ನಟನೆ, ನಿರ್ದೇಶನ, ಸಂಭಾಷಣೆ, ಸಂಗೀತ ನಿರ್ದೇಶನ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ ಕಾರಾಂತರು ಕೈಯ್ಯಾಡಿಸದ ಕ್ಷೇತ್ರವಿಲ್ಲಾ ಎನ್ನುವಂತೆ ನಾಟಕ ಮತ್ತು ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಹಿರಿಯ ರಂಗಕರ್ಮಿ ಶ್ರೀ ಬಿ.ವಿ.ಕಾರಾಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿ. ವಿ. ಕಾರಾಂತ್

ಸತ್ಪಾತ್ರ ದಾನ

ನಮ್ಮ ಸನಾತನಧರ್ಮದಲ್ಲಿ ನಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಅವಶ್ಯಕತೆ ಇರುವವರಿಗೆ ದಾನ ರೂಪದಲ್ಲಿ ಕೊಡಬೇಕು ಎಂದಿದೆ. ಆದರೆ ಆ ನಮ್ಮ ಶ್ರಮದ ಗಳಿಕೆ ಸತ್ಪಾತ್ರವಾಗದೇ ಅಪಾತ್ರವಾಗುವ ಅನೇಕ ಕಥೆ-ವ್ಯಥೆ ಇದೋ ನಿಮಗಾಗಿ. … Read More ಸತ್ಪಾತ್ರ ದಾನ

ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಹಬ್ಬ ಹರಿದಿನ ಮತ್ತು ಜಾತ್ರೆಗಳಲ್ಲಿ ಹೆಣ್ಣು ಮಕ್ಕಳದ್ದೇ ಕಾರುಬಾರಾದರೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ ೮ ಕಿ.ಮೀ ದೂರದಲ್ಲಿರುವ ರಮ್ಮನಗಳ್ಳಿಯಲ್ಲಿ ಮಾತ್ರಾ, ಜಾತ್ರೆ ನಡೆಯುವ ೧೫ ದಿನಗಳ ಕಾಲ ಊರ ಗಂಡುಮಕ್ಕಳು ಹೆಣ್ಣಿನ ವೇಷ ಧರಿಸಿ, ಆ ಊರಿನ ಗ್ರಾಮದೇವತೆ ಮಾರಮ್ಮನನ್ನು ಸಂತುಷ್ಟಗೊಳಿಸುವ ವಿಶಿಷ್ಟವಾದ ಆಚರಣೆಯ ಜೊತೆ ಇನ್ನೂ ಹಲವಾರು ಆಶ್ಚರ್ಯಕರ ಆಚರಣೆಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ರಮ್ಮನಹಳ್ಳಿ ಮಾರಮ್ಮ ಜಾತ್ರೆ (ಲಕ್ಷ್ಮೀ ಜಾತ್ರೆ)

ಕಂಬಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ

ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಗೋಕುಲಾಷ್ಥಮಿಗೂ ಇಮಾಂ ಸಾಬಿಗೂ ಏನು ಸಂಬಂಧ?

ವಿಜ್ಞಾನದದಲ್ಲಿ ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿಯೇ ಓದಿರುವ ನ್ಯೂಟನ್ನನ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೂ ಅಷ್ಟೇ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಕಳೆದ ಒಂದೆರಡು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಸೂಕ್ಶ್ಮವಾಗಿ ಗಮನಿಸಿದ್ದವರಿಗೆ ಈ ವಿಷಯದ ಪ್ರಸ್ತಾಪದ ಅರಿವಿರುತ್ತದೆ. ಎರಡು ತಿಂಗಳುಗಳ ಹಿಂದೆ ಕೆಲ ಮತಾಂಧ ಪಟ್ಟಭದ್ರ ಹಿತಾಸಕ್ತಿಯ ಜನರು ಬೆರಳೆಣಿಕೆಯ ಕಾಲೇಜು ಹುಡುಗಿಯರ ತಲೆಯನ್ನು ಕೆಡಸಿ ಉಡುಪಿನ ವಿಷಯವಾಗಿ ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟು ಹಾಕಿದ ವಿವಾದ ಈ ಪರಿಯಾಗಿ ಬೆಳೆದು ತಮ್ಮ… Read More ಗೋಕುಲಾಷ್ಥಮಿಗೂ ಇಮಾಂ ಸಾಬಿಗೂ ಏನು ಸಂಬಂಧ?

ಶಿರಸಿ ಮಾರಿಕಾಂಬಾ

ಕರ್ನಾಟಕದ ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ, ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆಯುವುದರ ಜೊತೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ವೈಭವೋಪೇತವಾಗಿ ನಡೆಯುವ ಮಾರಿ ಜಾತ್ರೆಯ ಸುಂದರ ಅನುಭವ ಮತ್ತು ಅಲ್ಲಿಯ ದೇವಾಲಯದ ಪ್ರಸಿದ್ಧ ಕೋಣ ಮತ್ತು ಆ ಜಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ಶಿರಸಿ ಮಾರಿಕಾಂಬಾ

ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂಬ ಹತ್ತಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಬದಾಮಿಯ ಬನಶಂಕರಿಯಲ್ಲಿ ನಡೆಯುವ ಬನದ ಹುಣ್ಣಿಮೆ ಜಾತ್ರೋತ್ಸವ, ಬನಶಂಕರಿ ಸ್ಥಳ ಮಹತ್ಮೆ ಮತ್ತು ದೇವಿಯ ಐತಿಹ್ಯದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಬದಾಮಿ ಬನಶಂಕರಿಯ ಬನದ ಹುಣ್ಣಿಮೆ