ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯವಾಗಿರುವ ಮೋದಿಯವರನ್ನು 75 ವರ್ಷ ವಯಸ್ಸಿನ ಅಧಾರದ ಮೇಲೆ ಕೆಳಗಿಳಿಸಿ, 83 ವರ್ಷದ ಖರ್ಗೆಯವರನ್ನು ನಾಮಕಾವಸ್ಥೆ ಪ್ರಧಾನಿಯನ್ನಾಗಿಸಿ, 78 ವರ್ಷದ ಸೋನಿಯಾ ಮತ್ತು ಆಕೆಯ ಮಕ್ಕಳು ಅಧಿಕಾರ ಚಲಾಯಿಸುವ ಹುನ್ನಾರ, ತಿರುಕನ ಕನಸು ಎನಿಸುತ್ತಿದೆ ಅಲ್ವೇ?… Read More ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ದಸರಾಗೆ ಮಹಿಷ ದಸರಾದಿಂದ ಧಮ್ಕಿ

ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಡಾ. ವಿಜಯಲಕ್ಷ್ಮಿ ದೇಶಮಾನೆ

ಗುಲ್ಬರ್ಗಾದ ಕೊಳಗೇರಿಯ ದಲಿತ ವರ್ಗದ ತರಕಾರಿ ಮಾರುತ್ತಿದ್ದ ಹೆಣ್ಣುಮಗಳು, ಕಿತ್ತು ತಿನ್ನುವ ಬಡತನ, ಅಪಮಾನ, ಸಾಮಾಜಿಕ ಅಸಡ್ಡೆಯ ನಡುವೆಯೂ ಈ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆಯಾಗಿ, ಜನ ಸೇವೆಯೇ ಜನಾರ್ದನ ಸೇವೆ ಎಂದು ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂದು ತಿಳಿದು ಸಮಾಜಕ್ಕಾಗಿಯೇ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿಯಾಗಿರುವ ನಮ್ಮ ಹೆಮ್ಮೆಯ ಡಾ. ವಿಜಯಲಕ್ಷ್ಮಿ ದೇಶಮಾನೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಡಾ. ವಿಜಯಲಕ್ಷ್ಮಿ ದೇಶಮಾನೆ

ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ?

ಕಳೆದ ಎರಡು ದಿನಗಳಿಂದಲೂ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಡಾ. ಗಗನ್ ಕುಬೇರ್ ಅವರ ವಿಡಿಯೋ ವೈರಲ್ ಆಗಿರುವುದನ್ನು ನಾವೆಲ್ಲರೂ ನೋಡಿದಾಗ ನನ್ನ ಮನದಲ್ಲಿ ಮೂಡಿದ ಪ್ರಶ್ನೆ ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ? ಉತ್ತರ ಕರ್ನಾಟಕ ಮೂಲದ ಗಗನ್ ಕುಬೇರ್ ಪ್ರತಿಭಾವಂತ ಹುಡುಗ. ಕಷ್ಟ ಪಟ್ಟು ಶ್ರಮವಹಿಸಿ ಓದಿ ತನ್ನ ಅರ್ಹತೆಯಿಂದ ವೈದ್ಯಕೀಯ ಪದವಿಯನ್ನು ಗಳಿಸಿಕೊಂಡಿದ್ದ ಹುಡುಗ. ಈಗಿನ ಕಾಲದಲ್ಲಿ ಕೇವಲ ಎಂ.ಬಿ.ಬಿ.ಎಎಸ್. ಪದವಿ ಇದ್ದರೆ ಸಾಲದು ಸ್ನಾತಕೋತ್ತರ ಪದವಿಯನ್ನು ಪಡೆದಲ್ಲಿ ಮಾತ್ರವೇ ಗೌರವ ದೊರೆಯುತ್ತದೆ ಎಂಬುದನ್ನು… Read More ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ?

ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್

ಬೆನಗಲ್  ಎಂಬ ಹೆಸರನ್ನು ಕೇಳಿದ ಕೂಡಲೇ ನಮಗೆ ಥಟ್  ಅಂತಾ ನೆನಪಾಗೋದೇ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ಮತ್ತು ಭಾರತದ ಸಂವಿಧಾನದ ಕರ್ತೃಗಳು ಯಾರು ಎಂದಾಕ್ಷಣವೇ ಥಟ್  ಅಂತಾ ನೆನಪಗೋದೇ ಡಾ. ಬಿ. ಆರ್. ಅಂಬೇಡ್ಕರ್ ಅವರು. ನಿಜ ಹೇಳಬೇಕೆಂದರೆ, ಬೆನಗಲ್ ಮತ್ತು ಭಾರತದ ಸಂವಿಧಾನಕ್ಕೆ ಶ್ಯಾಮ್ ಮತ್ತು ಅಂಬೇಡ್ಕರ್ ಅವರು ಒಂದು ರೀತಿಯ ಅತಿಥಿ ಅಧ್ಯಾಪಕರು (visiting professor) ಎಂದರೆ ಬಹುತೇಕರಿಗೆ  ಅಚ್ಚರಿ ಮೂಡಬಹುದು  ಇನ್ನೂ ಕೆಲವರು ಸಿಟ್ಟಾಗಲೂ ಬಹುದು. ಆದರೆ ಇತಿಹಾಸವನ್ನಂತೂ… Read More ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್

ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ,… Read More ಅಮಾಯಕರು

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ

ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ

ಸುಮಾರು 175 ವರ್ಷಗಳ ಹಿಂದಿನ ಘಟನೆ. ಧನ್ಯಾ ಎಂಬ 50ರ ಪ್ರಾಯದ ಕೆಳಜಾತಿಗೆ ಸೇರಿದ ಮಹಿಳೆ ಒಬ್ಬರು ಅವರು ಕೆಲಸ ಮಾಡುತ್ತಿದ್ದ ಮನೆಯ 5 ವರ್ಷದ ಬ್ರಾಹ್ಮಣ ಹುಡುಗನನ್ನು ಬಲು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅಕೆಗೆ ಆ ಬಾಲಕನ ಮೇಲೆ ಬಲು ಪ್ರೀತಿ. ಆತನೀಗೂ ಅಕೆಯೆಂದರೆ ಬಲು ಅಕ್ಕರೆ ಹಾಗಾಗಿ ಅವರಿಬ್ಬರೂ ಬಹಳ ಅನ್ಯೋನ್ಯತೆಯಿಂದ್ದಿದ್ದರು. ಅದೊಂದು ದಿನ ಆಕೆ ಆ ಬಾಲಕನೊಂದಿಗೆ ಒಂದು ವಿಷಯವನ್ನು ನಿವೇದಿಸಿಕೊಂಡಾಗ ಕೂಡಲೇ ಆ ಬಾಲಕ ಆಕೆಯ ಇಚ್ಛೆಯನ್ನು ಖಂಡಿತವಾಗಿಯೂ ನೆರವೇರಿಸಿಕೊಡುತ್ತೇನೆ ಎಂದು ಭಾಷೆ… Read More ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ