ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಪ್ರತೀ ಬಾರೀ ಓಲಂಪಿಕ್ಸ್ ಕ್ರೀಡಾಕೂಟಗಳು ನಡೆದಾಗ ಪದಕಗಳ ಪಟ್ಟಿಯಲ್ಲಿ ಅಮೇರಿಕಾ, ಚೀನಾ, ಜಪಾನ್ ದೇಶಗಳದ್ದೇ ಪ್ರಾಬಲ್ಯ ಮೆರೆದು, ನಮ್ಮ ಭಾರತವನ್ನು  ಕೆಳಗಿನ ಸ್ಥಾನದಲ್ಲಿ ನೋಡುತ್ತಿದ್ದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಥಟ್ ಅಂತಾ ಮೂಡಿ ಬರುವುದೇ ನಾವೂ ನಮ್ಮ ದೇಶದ ಪರಿಸ್ಥಿತಿ ಹೀಗೇಕೆ? ಎನ್ನುವ ನಿರಾಶೆ. ಅದೇ ಗುಂಗಿನಲ್ಲಿ ತÀಮ್ಮೆಲ್ಲಾ ಗೆಳೆಯರೊಡನೇ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವ ಜನರೇನು ಕಡಿಮೆ ಇಲ್ಲ. ಆದರೆ ಈಗಷ್ಟೇ ಸಂಪನ್ನಗೊಂಡ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಪ್ರದರ್ಶನವನ್ನು ಗಮನಿಸಿದರೆ ದೇಶದ… Read More ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮತ್ತು ಅದೇ ಕುರಿತಾಗಿ ಆಗಾಗ ವಿವಾದವೂ ಏರ್ಪಡುವ ವಿಷಯವೆಂದರೆ ಕ್ರಿಕೆಟ್. ಅಗಲಿದ ಅಪ್ಪ ಅಮ್ಮಾ ನಿಂದ ಹಿಡಿದು ನಾನು ನಮ್ಮಾಕಿ, ಮುದ್ದಿನ ಮಗಳು ಮತ್ತು ನಮ್ಮ ಮನೆಯ ಸ್ವಘೋಷಿತ ಕ್ರಿಕೆಟ್ ಎಕ್ಸಪರ್ಟ್ ಮಗ ಎಲ್ಲರೂ ಕ್ರಿಕೆಟ್ ಪ್ರಿಯರೇ. ಆದರೆ ಬೆಂಬಲಿಸುವ ಆಟಗಾರರು ಮತ್ತು ತಂಡಗಳು ಮಾತ್ರಾ ವಿಭಿನ್ನ. ವಿಶ್ವ ಟೆಸ್ಟ್ ಕ್ರಿಕೆಟ್ ಛಾಂಪಿಯನ್ ಶಿಪ್ಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದು ಕಡೆಯಲ್ಲಿ ಆದ ಕೆಲವು ಅನಿರೀಕ್ಷಿತ… Read More ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

ನಮಗೆಲ್ಲರಿಗೂ ತಿಳಿದಿರುವಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ, ಎರಡೂ ದಿನಗಳೂ ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆ ಮುಂದೆ ನಮ್ಮ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಆದರೆ ಕುತೂಹಲಕಾರಿಯಾದ ವಿಶೇಷತೆ ಏನೆಂದರೆ, ಸ್ವಾತಂತ್ರ್ಯ ದಿನೋತ್ಸವದಂದು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಗುವುದಾದರೇ, ಅದೇ ಗಣರಾಜ್ಯೋತ್ಸವದಂದು ನಮ್ಮ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಲಾಗುತ್ತದೆ. ಧ್ವಜವನ್ನು ಹಾರಿಸುವ ಮತ್ತು ಧ್ವಜವನ್ನು ಅನಾವರಣಗೊಳಿಸುವ ಎರಡೂ ಪ್ರಕ್ರಿಯೆಗಳು, ಧ್ವಜದ ಕಂಬದ ಮೇಲೆ ನಡೆದು ನೋಡುಗರಿಗೆ ಅಂತಹ ವ್ಯತ್ಯಾಸ ಕಾಣದಿದ್ದರೂ, ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹಳ… Read More ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ!… Read More 2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ಭಾರತದ ತ್ರಿವರ್ಣ ಧ್ವಜ

ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನಾಚರಣೆ ಎಂದೇಕೆ ಆಚರಿಸಲಾಗುತ್ತದೆ? ಭಾರತದ ತ್ರಿವರ್ಣ ಧ್ಜಜದ ಬಣ್ಣಗಳ ಹಿಂದಿರುವ ಮಹತ್ವ ಏನು? ಜೊತೆಗೆ ಧ್ವಜ ನೀತಿ ಸಂಹಿತೆಯ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಭಾರತದ ತ್ರಿವರ್ಣ ಧ್ವಜ

ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಚೊಚ್ಚಲು ಟಿ20 ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಉಳಿದೆಲ್ಲಾ ತಂಡಗಳಿಗೆ ಹೋಲಿಸಿದಲ್ಲಿ, ಭಾರತಕ್ಕೆ ಅಷ್ಟೇನೂ ಟಿ20 ಪಂದ್ಯಾವಳಿಗಳ ಅನುಭವವಿರಲಿಲ್ಲ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಸಚಿನ್, ಸೌರವ್, ದ್ರಾವಿಡ್ ಅಂತಹ ಘಟಾನುಘಟಿಗಳಿಲ್ಲದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಯುವಕರ ಪಡೆಯೇ ದಕ್ಷಿಣ ಆಫ್ರಿಕಾಕ್ಕೆ ಹೋಗಿತ್ತು. 2007ರ, Sep 14 ರಂದು ದರ್ಭಾನ್ ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು ಎದುರಿಸುತ್ತಿತ್ತು. ಕ್ರೀಡಾಂಗಣದಲ್ಲಿ ಭಾರತೀಯರು ಮತ್ತು ಪಾಕೀಸ್ಥಾನೀಯರಿಂದಲೇ ಕಿಕ್ಕಿರಿದು ತುಂಬಿದ್ದ ಕಾರಣ ಅದೊಂದು ಭಾರತ ಮತ್ತು ಪಾಕ್ ಉಪಖಂಡದಲ್ಲಿಯೇ… Read More ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು… Read More ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

bullet ಮತ್ತು wallet ಶಕ್ತಿ ಸಾಮರ್ಥ್ಯ

ಚೀನಾ ದೇಶದ ವುಹಾನ್ ಪ್ರದೇಶದಲ್ಲಿ ಮೊತ್ತ ಮೊದಲಬಾರಿಗೆ ಕಾಣಿಸಿಕೊಂಡ ಕೂರೋನಾ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚವನ್ನೆಲ್ಲಾ ಆಕ್ರಮಿಸಿ ಲಕ್ಷಾಂತರ ಸಾವು ನೋವು ಸಂಭವಿಸಿದ್ದಲ್ಲದೇ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಭಾರತವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಯತ್ನ ಪಡುತ್ತಿದ್ದರೆ, ಯುದ್ಧೋನ್ಮತ್ತ ಚೀನಾ ದೇಶ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಜೂನ್16 ರಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಏಕಾಏಕಿ ಭಾರತದ ಸೇನೆಯ ಮೇಲೆ ಲಾಠಿ ಮತ್ತು ಕಲ್ಲುಗಳ ಧಾಳಿಯನ್ನು… Read More bullet ಮತ್ತು wallet ಶಕ್ತಿ ಸಾಮರ್ಥ್ಯ