ಫ್ರೇಸರ್ ಟೌನ್ (ಪುಲಕೇಶಿ ನಗರ)

ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ… Read More ಫ್ರೇಸರ್ ಟೌನ್ (ಪುಲಕೇಶಿ ನಗರ)

ಅಲಿ ಆಸ್ಕರ್ ರಸ್ತೆ

ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆಯ ನಡುವಿನ ಒಂದು ಸಣ್ಣ ರಸ್ತೆಯನ್ನು ಅಲಿ ಆಸ್ಕರ್ ರಸ್ತೆ ಎಂದು ಕರೆಯಲ್ಪಡುತ್ತದೆ. ಯಾರು ಈ ಅಲಿ ಅಸ್ಕರ್?  ಅವರಿಗೂ ಬೆಂಗಳೂರಿಗೂ ಏನು ಸಂಬಂಧ, ಬೆಂಗಳೂರಿಗೆ ಅವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಲಿ ಆಸ್ಕರ್ ರಸ್ತೆ

ವಿಧುರಾಶ್ವಥ, ದಕ್ಷಿಣ ಭಾರತದ ಜಲಿಯನ್ ವಾಲಾ ಭಾಗ್

ಏಪ್ರಿಲ್ 13 1919 ಅಂದರೆ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ ಪಂಜಾಬಿನ ಜಲಿಯನ್ ವಾಲಾ ಎಂಬ ಉದ್ಯಾನದಲ್ಲಿ ಸಂಭ್ರಮದಿಂದ ಭೈಸಾಖಿ ಹಬ್ಬವನ್ನು ಆಚರಿಸಲು ಸೇರಿದ್ದ ಸಹಸ್ರಾರು ದೇಶಭಕ್ತರ ಮೇಲೆ ಏಕಾ ಏಕಿ ಗುಂಡಿನ ಸುರಿಮಳೆಯನ್ನು ಸುರಿಸಿದ ಬ್ರಿಟಿಷರು ನೂರಾರು ಜನರ ಹತ್ಯೆಗೆ ಕಾರಣವಾಗಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಹಿ ಅಧ್ಯಾಯವಾಗಿರುವಂತೀಯೇ, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರಿನ ತಾಲ್ಲೂಕಿಗೆ ಸೇರಿರುವ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರವಾದ ವಿದುರಾಶ್ವತ್ಥದಲ್ಲೂ ಸಹಾ ಸ್ವಾತಂತ್ರ್ಯ ಪೂರ್ವದಲ್ಲಿ… Read More ವಿಧುರಾಶ್ವಥ, ದಕ್ಷಿಣ ಭಾರತದ ಜಲಿಯನ್ ವಾಲಾ ಭಾಗ್

ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಲಲಿತಕಲೆ ಎಲ್ಲದರಲ್ಲೂ ಅಗ್ರಗಣ್ಯರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು

ಕೇವಲ ಕರ್ನಾಟಕ ಮತ್ತು ಭಾರತವಷ್ಟೇ ಅಲ್ಲದೇ ಇಡೀ ಈ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಇಂಜಿನೀಯರ್ ಎಂಬ ಪ್ರಖ್ಯಾತಿಯನ್ನು ಹೊಂದಿದ್ದಂತಹ ಭಾರತ ರತ್ನ ಶ್ರೀ ಮೊಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್ 15 ರಂದು ಎಂಜಿನಿಯರ್‌ ದಿನ ಎಂದು ಅಚರಿಸುವ ಮೂಲಕ ಆ ಮಹಾಚೇತನಕ್ಕೆ ಗೌರವ ಸಲ್ಲಿಸಲಾಗುತ್ತದೆ.

ಶ್ರೀ ವಿಶ್ವೇಶ್ವರಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯದ ಜೊತೆಗೆ, ಅಂತಹ ಶ್ರೇಷ್ಠ ಪರೋಪಕಾರಿ ಮತ್ತು ಜನಾನುರಾಗಿಗಳಾಗಿದ್ದಂತಹವರ ಕುರಿತು ಇಂದು ಕೆಲವು ಪಟ್ಟಭದ್ರಹಿತಾಸಕ್ತಿಗಳು ನಡೆಸಿಕೊಳ್ಳುತ್ತಿರವ ಬಗೆಗಿನ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು