ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಎಕರೆ ಕೃ‌ಷಿ ಭೂಮಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿಯ ಕುರಿತಾಗಿ ಅನೇಕರು ಎತ್ತಿರುವ ಅಪಸವ್ಯಕ್ಕೆ ಇದೋ ಇಲ್ಲಿದೆ ನೈಜ ಉತ್ತರ.… Read More ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಆನಂದ್ ರಾವ್ ಸರ್ಕಲ್

ಮಹಾರಾಷ್ಟ್ರದ ಮೂಲದವರಾಗಿದ್ದು, ತಮಿಳುನಾಡಿನಲ್ಲಿ ಹುಟ್ಟಿ ಬೆಳೆದು, ಹೋಳ್ಕರ್ ರಾಜ್ಯದಲ್ಲಿ ಕೆಲಸವನ್ನು ಆರಂಭಿಸಿ, ಅಂತಿಮವಾಗಿ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡು, ದಿವಾನರಾಗಿ ಅಷ್ಟೊಂದು ಕೊಡುಗೆಗಳನ್ನು ನೀಡಿ ಅಂತಿಮವಾಗಿ ಕನ್ನಡಿಗರೇ ಆಗಿ ಹೋದ  ದಿವಾನ್ ಆನಂದ  ರಾವ್  ಅವರ ಕುರಿತಾದ ಸಂಪೂರ್ಣ ಮಾಹಿತಿ ನಿಮಗಾಗಿ.… Read More ಆನಂದ್ ರಾವ್ ಸರ್ಕಲ್

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಮುಂದಿನ ಪೀಳಿಗೆಗೆ ಉಳಿಸಬೇಕಿದೆ ತಿಪ್ಪಗೊಂಡನಹಳ್ಳಿ ಜಲಾಶಯ

ಸ್ವಾತಂತ್ರ್ಯ ಪೂರ್ವದ 1930ರ ಸಮಯದಲ್ಲಿ ಬೆಂಗಳೂರಿನಲ್ಲಿ ಬಹಳ ಕಾಲ ಮಳೆಯಿಲ್ಲದೇ ಬೀಕರ ಬರಗಾಲ ಉಂಟಾಗಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿಗೂ ತೊಂದರೆಯುಂಟಾದಾಗ ನೀರಿನ  ಅಗತ್ಯವನ್ನು ಅರಿತ ಅಂದಿನ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ನಾಲ್ಮಡಿ ಚಾಮರಾಜ ಒಡೆಯರ್ ಅವರು ಮುಖ್ಯ ಇಂಜೀನಿಯರ್ ಆಗಿದ್ದ ಶ್ರೀ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದಕ್ಕೊಂದು ಪರಿಹಾರವನ್ನು ನೀಡಲು ಸೂಚಿಸಿದ ಪರಿಣಾಮವೇ, ಬೆಂಗಳೂರಿನಿಂದ ಪಶ್ಚಿಮಕ್ಕೆ 35 ಕಿ.ಮೀ ದೂರದಲ್ಲಿರುವ ಮಾಗಡಿ ಬಳಿಯ ಅರ್ಕಾವತಿ ನದಿ ಮತ್ತು ಕುಮುದಾವತಿ ನದಿಯ ಸಂಗಮದಲ್ಲಿ ಈ ಬೃಹತ್ತಾದ ತಿಪ್ಪಗೊಂಡನಹಳ್ಳಿ… Read More ಮುಂದಿನ ಪೀಳಿಗೆಗೆ ಉಳಿಸಬೇಕಿದೆ ತಿಪ್ಪಗೊಂಡನಹಳ್ಳಿ ಜಲಾಶಯ

ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು

ಕೇವಲ ಕರ್ನಾಟಕ ಮತ್ತು ಭಾರತವಷ್ಟೇ ಅಲ್ಲದೇ ಇಡೀ ಈ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಇಂಜಿನೀಯರ್ ಎಂಬ ಪ್ರಖ್ಯಾತಿಯನ್ನು ಹೊಂದಿದ್ದಂತಹ ಭಾರತ ರತ್ನ ಶ್ರೀ ಮೊಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್ 15 ರಂದು ಎಂಜಿನಿಯರ್‌ ದಿನ ಎಂದು ಅಚರಿಸುವ ಮೂಲಕ ಆ ಮಹಾಚೇತನಕ್ಕೆ ಗೌರವ ಸಲ್ಲಿಸಲಾಗುತ್ತದೆ.

ಶ್ರೀ ವಿಶ್ವೇಶ್ವರಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯದ ಜೊತೆಗೆ, ಅಂತಹ ಶ್ರೇಷ್ಠ ಪರೋಪಕಾರಿ ಮತ್ತು ಜನಾನುರಾಗಿಗಳಾಗಿದ್ದಂತಹವರ ಕುರಿತು ಇಂದು ಕೆಲವು ಪಟ್ಟಭದ್ರಹಿತಾಸಕ್ತಿಗಳು ನಡೆಸಿಕೊಳ್ಳುತ್ತಿರವ ಬಗೆಗಿನ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ… Read More ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು