ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಪ್ರಜಾಪೀಡಕನಾಗಿದ್ದ ದುಷ್ಟ ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ದೇವಾನುದೇವತೆಗಳು ತಾಯಿ ದುರ್ಗೆಯನ್ನು ಕೋರಿದಾಗ ತಾಯಿಯು ಚಾಮುಂಡೇಶ್ವರಿಯ ಅವತಾರ ತಾಳಿ ಆ ರಾಕ್ಷಸನ್ನು ಸಂಹರಿಸಿದ ನೆನಪಿಗಾಗಿ ಆ ಪ್ರದೇಶಕ್ಕೆ ಮೈಸೂರು ಎಂದು ಹೆಸರಾಗಿ ಆಸ್ಥಳದಲ್ಲೊಂದು ಸಣ್ಣ ದೇವಾಲಯ ಕಟ್ಟಿ ಕಾಪಾಲಿಕರು ಆ ದೇವಿಗೆ ನರಬಲಿ ಮತ್ತು ಪ್ರಾಣಿಬಲಿಗಳನ್ನು ಕೊಡುತ್ತಾ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎಂಬುವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಅದೇ ಮಹಾಬಲೇಶ್ವರ ತಪ್ಪಲಿನಲ್ಲಿ (ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಒಂದು ರಾಜ್ಯವನ್ನು ಕಟ್ಟಿದರು.

chamundiಅಲ್ಲಿಂದ ಮುಂದೆ ಸುಮಾರು 7 ರಾಜರುಗಳು ಅದನ್ನೇ ಮುಂದುವರಿಸಿಕೊಂಡು 1529ರಲ್ಲಿ ಶ್ರೀ ಕೃಷ್ಣದೇವರಾಯರ ಕಾಲವಾದ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದು ವಿಜಯನಗರದಿಂದ ಮೈಸೂರಿಗೆ ತಂದಿದ್ದಲ್ಲದೇ, 1610ರಲ್ಲಿ ಮತ್ತೆ 30 ಗ್ರಾಮಗಳನ್ನು ಗೆದ್ದು ಮೈಸೂರು ಸಂಸ್ಥಾನವನ್ನು 60 ಗ್ರಾಮಗಳ ವರೆಗೆ ವಿಸ್ತರಿಸಿ, ವಿಜಯನಗರಲ್ಲಿ ಬನ್ನಿ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಹಬ್ಬ 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ಆಚರಣೆಗೆ ತಂದಿದ್ದಲ್ಲದೇ, ತಾಯಿ ಚಾಮುಂಡೇಶ್ವರಿಯನ್ನು ತಮ್ಮ ಕುಲದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕರ್ನಾಟಕದ ನಾಡದೇವಿಯನ್ನಾಗಿ ಮಾಡುತ್ತಾರೆ. ಆದಾದ ನೂರೈವತ್ತು ವರ್ಷಗಳ ಕಾಲ ನಂತರ ಆಳ್ವಿಕೆ ಬಂದ ದೊಡ್ಡ ದೇವರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟದಲ್ಲಿ ಶ್ರೀ ಯದುರಾಯರು ಕಟ್ಟಿಸಿದ್ದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಲ್ಲದೇ, ಜನಸಾಮಾನ್ಯರಿಗೆ ಸುಲಭವಾಗುವಂತೆ ಮೆಟ್ಟಿಲುಗಳನ್ನು ಕಟ್ಟಿಸಿ ಮಾರ್ಗದ ಮಧ್ಯದಲ್ಲಿ ದೊಡ್ಡದಾದ ಏಕಶಿಲಾ ನಂದಿಯನ್ನು ಪ್ರತಿಷ್ಠಾಪಿಸಿ, ನರಬಲಿ ಮತ್ತು ಪ್ರಾಣಿಬಲಿಗಳನ್ನು ಕೊಡುತ್ತಿದ್ದ ಕಾಪಾಲಿಕರನ್ನು 1760ರಲ್ಲಿ ಬಲಿಹಾಕಿ, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಬಲಿಗಳನ್ನು ನಿಷೇಧಿಸಿ, ಎಲ್ಲಾ ರೀತಿಯ ಬಲಿಗಳನ್ನೂ ಚಾಮುಂಡೇಶ್ವರಿ ಬೆಟ್ಟದ ಹಿಂಭಾಗದಲ್ಲಿರುವ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಸ್ಥಳಾಂತರಿಸುತ್ತಾರೆ.

rajaಈ ರೀತಿಯಾಗಿ ಸ್ಥಾಪನೆಯಾದ ಮೈಸೂರು ಸಂಸ್ಥಾನಕ್ಕೆ ಪೆಬ್ರವರಿ 1, 1895ರಲ್ಲಿ ಸಣ್ಣ ವಯಸ್ಸಿನಲ್ಲೇ ಪಟ್ಟಾಭಿಷೇಕವಾಗಿ ಆರಂಭದಲ್ಲಿ ಕೆಲಕಾಲ ಅಮ್ಮನ ಆಶ್ರಯದಲ್ಲೇ ಆಡಳಿತ ನಡೆಸಿ ಮುಂದೆ ಅಲ್ಲಿಂದ 38 ವರ್ಷಗಳ ಮೈಸೂರು ಸಂಸ್ಥಾನದಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ ಭವ್ಯ ಆಡಳಿತವನ್ನು ನಡೆಸಿ, ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಿದ ಕೀರ್ತಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಮಹಾರಾಜರು ತಮ್ಮ ಆಸ್ಥಾನದಲ್ಲಿ ದಿವಾನರಾಗಿದ್ದ, ನಾಡು ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯನವರ ಜೊತೆ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ದಟ್ಟ ಅಡವಿಯ ನಡುವೆ ಬೆಟ್ಟ ಗುಡ್ಡಗಳಿಂದ ಕೂಡಿರುವ ಜೋಗ್ ಎಂಬ ಪ್ರದೇಶದಲ್ಲಿ ಶರಾವತಿ ನದಿಯು ಕಣಿವೆಗಳ ನಡುವೆ ಹರಿದು ಬಂದು ಸುಮಾರು 960 ಅಡಿಗಳ ಎತ್ತರದಿಂದ ದುಮ್ಮಿಕ್ಕುವ ಜಲಪಾತವನ್ನು ನೋಡಲು ಬಂದು 960 ಅಡಿಗಳ ಎತ್ತರದಿಂದ 4 ಕವಲುಗಳಾಗಿ ರಾಮ, ಲಕ್ಷ್ಮಣ, ಭರತ ಹಾಗೂ ಸೀತೆ ಎಂಬ ಹೆಸರಿನಿಂದ ಧುಮ್ಮುಕ್ಕಿತ್ತಿದ್ದದ್ದನ್ನು ನೋಡಿ ಸಂಭ್ರಮಿಸುತ್ತಿದ್ದರೆ, ವಿಶ್ವೇಶ್ವರಯ್ಯನವರು ಮಾತ್ರಾ, What a waste? ಎಂಬ ಉದ್ಗಾರವನ್ನು ತೆಗೆದದ್ದನ್ನು ಕೇಳಿಸಿಕೊಂಡು ಅರೇ, ತಮ್ಮಿಂದೇನಾದರೂ ತಪ್ಪಾಯಿತೇ? ತಮಗೆ ಈ ಜಲಾನಯನ ಪ್ರದೇಶ ಇಷ್ಟವಾಗಲಿಲ್ಲವೇ? ಎಂದು ಕೇಳುತ್ತಾರೆ.

ಆ ಕೂಡಲೇ ಜಾಗೃತಗೊಂಡ ವಿಶ್ವೇಶ್ವರಯ್ಯನವರು ಸ್ವಾಮೀ, ನನ್ನನ್ನು ಕ್ಷಮಿಸಿ, ಈ ಪ್ರದೇಶ ಅತ್ಯಂತ ಮನೋಹರವಾಗಿದೆ. ಆದರೆ ಅಷ್ಟು ಎತ್ತರದಿಂದ ಬೀಳುತ್ತಿರುವ ಇಂತಹ ಅದ್ಬುತ ಶಕ್ತಿಯನ್ನು ಬಳಸಿಕೊಳ್ಳದೇ ವ್ಯರ್ಥ ಮಾಡುತ್ತಿದ್ದೇವಲ್ಲಾ ಎಂಬ ಕೊರಗು ಎಂದಾಗ, ಸ್ವಲ್ಪ ಬಿಡಿಸಿ ಹೇಳಿ ಎಂದು ಮಹಾರಾಜರು ಕೇಳಿದಾಘ, ಇಲ್ಲಿ ಧುಮುಕುತ್ತಿರುವ ನೈಸರ್ಗಿಕ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಇಡೀ ರಾಜ್ಯಕ್ಕೆ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಶಕ್ತಿಯನ್ನು ತಯಾರಿಸಿ ಇಡೀ ರಾಜ್ಯದಲ್ಲಿ ಬೆಳಕನ್ನು ಹರಿಸಬಹುದು ಎಂದು ವಿವರಿಸುತ್ತಾರೆ. ಅದಾಗಲೇ ಶಿಂಷಾ ಜಲವಿದ್ಯುತ್ ಯೋಜನೆಯಿಂದ ಏಷ್ಯಾದಲ್ಲಿ ಮೊತ್ತ ಮೊದಲಬಾರಿಗೆ ಮೈಸೂರು, ಬೆಂಗಳೂರು ಮತ್ತು ಚಿನ್ನದ ಗಣಿ ಕೆಜಿಎಫ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡಿದ ನಂತರ ಹೆಚ್ಚುತ್ತಿದ್ದ ವಿದ್ಯುತ್ ಕೋರಿಕೆಯನ್ನು ಇಲ್ಲಿಂದ ಪೂರೈಸಬಹುದೆಂದು ತಿಳಿದು ಸಂತೋಷಗೊಂಡ ಮಹಾರಾಜರು ವಿಶ್ವೇಶ್ವರಯ್ಯನವರಿಗೂ ಮತ್ತು ಇತರೇ ಅಧಿಕಾರಿಗಳಿಗೂ ಆ ಯೋಜನೆಯ ನೀಲನಕ್ಷೆ ಮತ್ತು ಕರ್ಛು ವೆಚ್ಚದ ಕುರಿತಾಗಿ ತಿಳಿಸಲು ಹೇಳುತ್ತಾರೆ.

ambuಹಾಗೆ ನೋಡಿದರೆ, ಈ ಜೋಗಜಲಪಾತ ಅಥವಾ ಜೋಗ್‍ಫಾಲ್ಸ್ ಎಂದು ಕರೆಯಲ್ಪಡುವ ಈ ಜಗತ್ತ್ಪ್ರಸಿದ್ದ ಪ್ರದೇಶದ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಹಿನ್ನಲೆಯಿದೆ. ತ್ರೇತಾ ಯುಗದಲ್ಲಿ ಶ್ರೀರಾಮ ಸೀತೆ ಮತ್ತು ಲಕ್ಷ್ಮಣರಾದಿಯಾಗಿ ವನವಾಸ ಮಾಡುತ್ತಿರುವ ಸಂದರ್ಭದಲ್ಲಿ ಇದೇ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸೀತಾ ಮಾತೆಉಅ ಬಾಯಾರಿಕೆಯನ್ನು ನೀಗಿಸುವ ಸಲುವಾಗಿ ಪ್ರಭು ಶ್ರೀರಾಮನು ತನ್ನ ಬತ್ತಳಿಕೆಯಲ್ಲಿದ್ದ ಶರವನ್ನು ತೆಗೆದುಕೊಂಡು ವರುಣನನ್ನು ಹಾಗೂ ಭೂಮಾತೆಯನ್ನು ಪ್ರಾರ್ಥಿಸಿ ಬಿಲ್ಲಿನಿಂದ ಬಾಣವನ್ನು ಬಿಟ್ಟಾಗ ಆ ಬಾಣವು ಪ್ರಸ್ತುತ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ ಎಂಬ ಪ್ರದೇಶಕ್ಕೆ ಹೋಗಿ ಭೂಮಿಗೆ ಬಿದ್ದ ಕೂಡಲೇ, ಭೂಮಿಯಿಂದ ಜಲವು ಚಿಮ್ಮಿ ಹರಿದು ಬಂದಾಗ ಆ ನೀರನ್ನು ಕುಡಿದು ಸೀತಾದೇವಿಯು ತನ್ನ ಬಾಯಾರಿಕೆಯನ್ನು ತೀರಿಸಿ ಕೊಂಡಳೆಂಬ ಪ್ರತೀತಿ ಇದೆ.

jogಹೀಗೆ ಶರದಿಂದ ಹುಟ್ಟಿದ ಈ ನದಿ ಮುಂದೆ ಶರಾವತಿ ಎಂದು ಪ್ರಸಿದ್ಧಿ ಪಡೆದು ಬೆಟ್ಟ ಗುಡ್ಡಗಳ ನಡುವೆ ಸುಮಾರು 144 ಕಿ.ಮೀ. ದೂರದ ವೆರೆಗೂ ಹರಿದು ಸಾಗರ ತಾಲ್ಲೂಕಿನ ಜೋಗ ಎಂಬ ಪ್ರದೇಶದಲ್ಲಿ ಸುಮಾರು 960 ಅಡಿಗಳ ಎತ್ತರದಿಂದ 4 ಕವಲುಗಳಾಗಿ ಪ್ರಪಾತಕ್ಕೆ ದುಮ್ಮಿಕ್ಕಿ ಬೀಳುವುದನ್ನು ಇಂದಿಗೂ ಕಾಣಬಹುದಾಗಿದೆ. ಬ್ರಿಟೀಷರು ಭಾರತಕ್ಕೆ ಬರುವವರೆಗೂ ಈ ನಾಲ್ಕು ಕವಲುಗಳನ್ನು ರಾಮ, ಲಕ್ಷ್ಮಣ, ಭರತ ಹಾಗೂ ಸೀತೆ ಎಂಬುದಾಗಿ ಹೆಸರಿಸಲಾಗಿತ್ತು ನಂತರ ಬ್ರೀಟೀಷ್ ಅಧಿಕಾರಿಗಳು ಅಲ್ಲೊಂದು ಅತಿಥಿಗೃಹವನ್ನು ಕಟ್ಟಿ ಅದನ್ನು ಮೋಜು ಮಸ್ತಿಗಳಿಗೆ ಬಳಸಿಕೊಂಡಿದ್ದಲ್ಲದೇ ಆ ನಾಲ್ಕು ಕವಲುಗಳಿಗೆ ರಾಜ,ರಾಣಿ, ರೋರರ್ ಮತ್ತು ರಾಕೇಟ್ ಎಂದು ಮರುನಾಮಕರಣ ಮಾಡಿ ಇಂದಿಗೂ ಅದೇ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿದೆ.

ಮೈಸೂರು ಮಹಾರಾಜರು ಆ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸಲು ಸೂಚಿಸುತ್ತಿದ್ದಂತೆಯೇ, ಸಂತೋಷಗೊಂಡ ಸರ್.ಎಂ.ವಿಶ್ವೇಶ್ವರಯ್ಯನವರು ತಡಮಾಡದೇ ರಾಜ್ಯದ ತಂತ್ರಜ್ಞರನ್ನು ಈ ಪ್ರದೇಶಕ್ಕೆ ಕರೆಸಿ, ಇಡೀ ಪ್ರದೇಶವನ್ನು ಸೂಕ್ಷ್ಮವಾಗಿ ಸರ್ವೇ ನಡೆಸಿ ಒಂದು ಸುಂದರವಾದ ನೀಲನಕ್ಷೆಯನ್ನು ತಯಾರಿಸಿ ಇಡೀ ಯೋಜನೆಯನ್ನು ಪೂರ್ಣಗೊಳಿಸಲು ಅಂದಾಜು ಇಂತಿಷ್ಟು ಹಣ ಖರ್ಚಾಗಬಹುದು ಎಂಬುದರ ಜೊತೆಗೆ ಆ ಗೊಂಡಾರಣ್ಯದಲ್ಲಿ ಬೆಟ್ಟ-ಗುಡ್ಡ ಮತ್ತು ಎತ್ತರೆತ್ತರದ ಪ್ರಪಾತಗಳಿಂದ ಕೂಡಿರುವುದರಿಂದ ಆಗ್ಗಾಗ್ಗೆ ಕಾಡು ಪ್ರಾಣಿಗಳ ಹಾವಳಿಯ ಸಂಭವವೂ ಇರಬಹುದಾದ ಕಾರಣ, ಅನೇಕ ಸಾವು-ನೋವುಗಳಾಗಬಹುದು ಎಂಬ ಎಚ್ಚರಿಕೆಯನ್ನು ತಮ್ಮ ವರದಿಯಲ್ಲಿ ತಿಳಿಸುತ್ತಾರೆ. 1927ರ ಆ ಸಮಯದಲ್ಲಿ ಅದಾಗಲೇ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸಹಾ ಆರಂಭಿಸಲು ಯೋಜನೆ ಸಿದ್ದ ಪಡಿಸಿದ್ದ ಕಾರಣ ಎರಡೂ ಪ್ರದೇಶಗಳಿಗೆ ಒಂದೇ ಸಮಯದಲ್ಲಿಯೇ ಭೇಟಿ ನೀಡುವುದಾಗಿ ಹೇಳಿದ ಮಹಾರಾಜರು, 1927ರ ಫೆಬ್ರವರಿ ತಿಂಗಳಲ್ಲಿ ಭದ್ರಾವತಿಗೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ಜೋಗಕ್ಕೆ ಬಂದಾಗ, ವಿಶ್ವೇಶ್ವರಯ್ಯನವರು ಈಗಿನ ರಾಜಾಕಲ್ಲು ಇರುವ ಎತ್ತರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒಂದು 960 ಎತ್ತರದಿಂದ ಶರಾವತಿ ಧುಕುತ್ತಿರುವ ಅಡಿಯಲ್ಲಿ ಉದ್ದೇಶಿತ ವಿದ್ಯುತ್ ಜಲಾಗಾರದ ತಯಾರಿಕಾ ಕೇಂದ್ರ ನೀಲನಕ್ಷೆಯನ್ನು ಎಳೆ ಎಳೆಯಾಗಿ ತಿಳಿಸುವುದರ ಜೊತೆಗೆ ಅದರ ಅಂದಾಜು ವೆಚ್ಚವನ್ನು ಮತ್ತೊಮ್ಮೆ ತಿಳಿಸಿದಾಗ ಮಹಾರಾಜರ ಎದೆ ಒಮ್ಮೆ ಧಸಕ್ ಎನ್ನುತ್ತದೆ. ಇಂತಹ ದುರ್ಗಮವಾದ ಪ್ರಪಾತದ ಕೆಳಭಾಗದಲ್ಲಿ ವಿದ್ಯುದಾಗಾರವನ್ನು ಸ್ಥಾಪಿಸುವುದು ಅತ್ಯಂತ ಭಯಂಕರ ಮತ್ತು ಆಘಾತಕಾರಿಯಾಗಿದ್ದು ರಾಜ್ಯದ ಬೊಕ್ಕಸದಿಂದ ಆ ಪರಿಯಾದ ಹಣವನ್ನು ವಿನಿಯೋಗಿಸಿದ ನಂತರ ಈ ಯೋಜನೆ ಯಶಸ್ವಿಯಾಗದಿದ್ದರೆ ರಾಜ್ಯದ
ಆರ್ಥಿಕ ಪರಿಸ್ಥಿತಿ ಅಯೋಮಯವಾಗುತ್ತದೆ ಎಂಬ ಆತಂಕ ಅವರಿಗೆ ಕಾಡುತ್ತದೆ.

ಅದಾಗಲೇ ರಾಜ್ಯಾದ್ಯಂತ ವಿದ್ಯುತ್ತಿಗಾಗಿ ಬೇಡಿಕೆ ಹೆಚ್ಚುತ್ತಿರುವುದನ್ನು ಮನಗಂಡು ಅತ್ತ ದರಿ ಇತ್ತ ಪುಲಿ ಎಂಬಂತೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದೇ? ಇಲ್ಲವೇ ಕೈ ಬಿಡುವುದೇ ಎಂಬ ಡೋಲಾಯಮಾನ ಸ್ಥಿತಿಯಲ್ಲಿದ್ದು ಈ ಯೋಜನೆ ಬಗ್ಗೆ ನಾಡದೇವತೆ ಹಾಗೂ ತಮ್ಮ ಕುಲದೇವತೆಯಾದ ಶ್ರೀ.ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿ ಅವಳ ಅಭಯ ಹಸ್ತವಿದ್ದಲ್ಲಿ ಮಾತ್ರವೇ ತಾವು ಈ ಯೋಜನೆಯನ್ನು ಮುಂದುವರೆಸುವುದಾಗಿ ವಿಶ್ವೇಶ್ವರಯ್ಯನವರಿಗೆ ತಿಳಿಸಿ, ಅಷ್ಟರಲ್ಲಾಗಲೇ ಕತ್ತಲಾವರಿಸಿದ್ದರಿಂದ ಅದೇ ಪ್ರದೇಶದಲ್ಲಿದ್ದ ಪ್ರವಾಸಿ ಮಂದಿರದಲ್ಲಿಯೇು ಉಳಿದು ಕೊಳ್ಳುತ್ತಾರೆ. ರಾತ್ರಿ ಊಟವೆಲ್ಲಾ ಮುಗಿಸಿ ಮಲಗುವ ಮುನ್ನಾ, ತಮ್ಮ ಕುಲದೇವತೆ ಶ್ರೀ ಚಾಮುಂಡೇಶ್ವರಿಗೆ ಈ ಯೋಜನೆಯ ಕುರಿತಾದ ಜಿಜ್ಞಾಸೆಯನ್ನು ತೊಡಿಕೊಂಡು ಸರ್ವಶಕ್ತಿವಂತಳಾದ ನೀನೇ ಇದಕ್ಕೊಂದು ಪರಿಹಾರವನ್ನು ಸೂಚಿಸಬೇಕೆಂದು ಪ್ರಾರ್ಥಿಸಿ ನಿದ್ದೆಗೆ ಜಾರುತ್ತಾರೆ.

ಬೆಳಗಿನಿಂದಲೂ ಹತ್ತಾರು ಕಡೆ ಸುತ್ತಾಡಿದ್ದರಿಂದ ಆಯಾಸದಿಂದಾಗಿ ಗಾಢ ನಿದ್ದೆಗೆ ಜಾರಿದ್ದ ಮಹಾರಾಜರಿಗೆ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಕನಸಿನಲ್ಲಿ ಬಂದ ಶ್ರೀ ಚಾಮುಂಡೇಶ್ವರಿ ದೇವಿಯು ಏಕ ಶಿಲೆಯಲ್ಲಿ ದ್ವಿಮುಖ ದರ್ಶನವನ್ನು ನೀಡಿ, ಇದೇ ರೀತಿಯಲ್ಲಿ ಒಂದೇ ಶಿಲೆಯಲ್ಲಿ ತನ್ನ ಮೂರ್ತಿಯನ್ನು ಕೆತ್ತಿಸಿ, ಯೋಜನೆ ಕೈಗೊಳ್ಳುವ ಪ್ರದೇಶದಲ್ಲಿ ಪ್ರತಿಷ್ಠಾಪಿಸಿ, ನೀನು ಕೈಗೊಳ್ಳಬೇಕೆಂದಿರುವ ಯೋಜನೆಯನ್ನು ಮುಂದುವರೆಸು, ಅಲ್ಲಿ ಯಾವದೇ ವಿಘ್ನಗಳಾಗದಂತೆ, ಯಾವುದೇ ಆರ್ಥಿಕ ತೊಂದರೆಗಳಾಗದಂತೆ ಮತ್ತು ಸಾವು-ನೋವುಗಳಾಗದೆ ಇರುವ ಹಾಗೆ ತಾನೇ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಕೂಡಲೇ ನಿದ್ದೆಯಿಂದ ಎಚ್ಚರಗೊಂಡ ಮಹಾರಾಜರು, ಬೆಳಗಿನ ಜಾವದ ಕನಸು ನನಸಾಗುತ್ತದೆ ಎಂಬ ನಂಬಿಕೆ ಇರುವ ಕಾರಣ, ಅಲ್ಲೇ ಪಕ್ಕದ ಕೊಠಡಿಯಲ್ಲಿದ್ದ ದಿವಾನ್ ವಿಶ್ವೇಶ್ವರಯ್ಯನವರನ್ನು ಮತ್ತು ರಾಜ ಗುರುಗಳನ್ನು ಕರೆಸಿ ಕನಸಿನಲ್ಲಿ ತಾಯಿ ಹೇಳಿದ್ದನ್ನು ವಿವರಿಸುತ್ತಾರೆ. ಬೆಳಕು ಹರಿಯುತ್ತಿದ್ದಂತೆಯೇ ವಿಶ್ವೇಶ್ವರಯ್ಯನವರು ಅಲ್ಲಿನ ಖ್ಯಾತ ಶಿಲ್ಪಿಗಳನ್ನು ಕರೆಸಿದಾಗ, ಮಹಾರಾಜರು ತಮ್ಮ ಕನಸಿನಲ್ಲಿ ಕಾಣಿಸಿಕೊಂಡ ಏಕ ಶಿಲೆಯ ದ್ವಿಮುಖಿ ಚಾಮುಂಡೇಶ್ವರಿಯನ್ನು ವರ್ಣಿಸುತ್ತಾ ಹೋದಂತೆಯೇ ಆ ಶಿಲ್ಪಿಗಳು ಅದರ ರೇಖಾಚಿತ್ರವನ್ನು ಬಿಡಿಸಿ ಮಹಾರಾಜರಿಗೆ ತೋರಿಸಿದಾಗ, ತಾವು ಕನಸಿನಲ್ಲಿ ಕಂಡ ತಾಯಿ ಚಾಮುಂಡೇಶ್ವರಿ ಹೀಗೆಯೇ ಇದ್ದಳು ಎಂಬುದಾಗಿ ತಿಳಿಸಿ, ಈ ಕೂಡಲೇ ಅದೇ ರೀತಿಯ ಮೂರ್ತಿಯನ್ನು ಕೆತ್ತನೆ ಮಾಡಿಕೊಡುವಂತೆ ಶಿಲ್ಪಿಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಾರೆ.

ಶಿWhatsApp Image 2023-01-20 at 14.59.12ಲ್ಪಿಗಳು ತಾಯಿ ಚಾಮುಂಡೇಶ್ವರಿಯನ್ನು ಮನಸಾರೆ ನೆನೆದು ತಮ್ಮ ಸಂಪೂರ್ಣ ಕಲಾನೈಪುಣ್ಯತೆಯನ್ನು ಓರೆಗೆ ಹಚ್ಚಿ, ಕೆಲಸವನ್ನು ಆರಂಭಿಸಿ ಶಾಲೀವಾಹನ ಶಕ 1866 ಪುಷ್ಯ ಮಾಸ ಕೃಷ್ಣ ಪಕ್ಷ ಸಪ್ತಮಿಯಲ್ಲಿ ಸುಂದರವಾದ ಎರಡೂ ಬದಿಯೂ ಒಂದೇ ರೀತಿಯಲ್ಲಿ ಕಾಣುವ ದೇವಿಯ ಕೆತ್ತನೆಯನ್ನು ಪೂರ್ಣಗೊಳಿಸುತ್ತಾರೆ. ಅಷ್ಟು ಅದ್ಭುತವಾಗಿ ಮೂಡಿ ಬಂದ ಸುಂದರವಾದ ಮೂರ್ತಿಯನ್ನು ನೋಡಿ ವಿಶ್ವೇಶ್ವರಯ್ಯ ಮರ್ರು ಮಹಾರಾಜರಾದಿಯಾಗಿ ಎಲ್ಲರೂ ಸಂತೋಷಗೊಂಡಿದ್ದಲ್ಲದೇ, ಜಲವಿದ್ಯುತ್ ಯೋಜನೆಯ ಅಡಿಗಲ್ಲಾದ ರಾಜಾಕಲ್ಲಿಗೆ ಸ್ವಲ್ಪ ದೂರದಲ್ಲೇ ಈಗಿನ ತ್ರಿಶೂಲವಿರುವ ಸ್ಥಳದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸುತ್ತಾರೆ.

ghandhiದುರಾದೃಷ್ಟವಷಾತ್ 1940ರಲ್ಲಿ ಶ್ರೀ ನಾಲ್ಮಡಿ ಕೃಷ್ಣರಾಜ ಒಡೆಯರ್‍ರವರು ದೈವಾದೀನರಾದರೂ ಅವರ ಮಗ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸದರಿ ಯೋಜನೆಯನ್ನು ಅಷ್ಟೇ ಆಸ್ಥೆವಯಿಸಿದ ಕಾರಣ ಕೇವಲ ಎಂಟೇ ವರ್ಷಗಳಲ್ಲಿ ಸ್ವಾತ್ರಂತ್ರ್ಯಾ ನಂತರ 1947 ಡಿಸೆಂಬರ್ ಹೊತ್ತಿಗೆ ಸಂಪೂರ್ಣವಾಗಿ ಈ ಯೋಜನೆಗೆ ಕಾರಣೀಭೂತರಾದ ಶ್ರಿ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರನ್ನಿಟ್ಟು ರಾಜ್ಯಕ್ಕೆ ಸಮರ್ಪಿಸಬೇಕೆಂದು ನಿರ್ಧರಿಸಿ ಅದರ ಕುರಿತಾಗಿ ಕಾರ್ಯಪ್ರವೃತ್ತರಾಗಿದ್ದ ಸಮಯಕ್ಕೆ ಸರಿಯಾಗಿ 1948ರ ಜನವರಿ 30 ರಂದು ಪ್ರರ್ಥನಾ ಸ್ಥಳದಲ್ಲಿಯೇ ನಾಥೂರಾಂ ಗೋಡ್ಸೆ ಶ್ರೀ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದ ಸಲುವಾಗಿ ದೇಶಾದ್ಯಾಂತ ದುಃಖ ಆವರಿಸಿದ್ದ ಕಾರಣ, ಅವರ ನೆನಪಿನಾರ್ಥ, ಮಹಾತ್ಮಾ ಗಾಂಧಿ ಜಲವಿದ್ಯುತ್ ಸ್ಥಾವರ ಎಂಬ ಹೆಸರಿನಲ್ಲಿ 1948 ಫೆಬ್ರವರಿ 7 ರಂದು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ. ಅಂದು ಸ್ಥಾಪಿತವಾದ ಜಲವಿದ್ಯುತ್ ಯೋಜನೆ ಇಂದಿನವರೆಗೂ ರಾಜ್ಯದ ಶೇ.33 ವಿದ್ಯುತ್ತನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಿ ರಾಜ್ಯದ ವಿವಿದೆಡೆಯ ವಿದ್ಯುತ್ ಬೇಡಿಕೆಯನ್ನು ನೀಗಿಸುತ್ತಿದೆ.

chamundi_templeನಂತರ 60ರ ದಶಕದಲ್ಲಿ ಮಹಾರಾಜರ ಅಮೃತಹಸ್ತದಿಂದ ಪ್ರತಿಷ್ಠಾಪನೆಮಾಡಲ್ಪಟ್ಟಿದ್ದ ಶ್ರೀ ದ್ವಿಮುಖಿ ಚಾಮುಂಡೇಶ್ವರಿ ದೇವಿಗೊಂದು ಸುಂದರವಾದ ದೇವಾಲಯವನ್ನು ಕಟ್ಟಿ ಕಳೆದ 60 ವರ್ಷಗಳಿಂದಲೂ ಶಾಸ್ಗ್ರೋಕ್ತವಾಗಿ ವಿಧಿವತ್ತಾದ ಪೂಜೆ ಪುನಸ್ಕಾರಗಳನ್ನು ದೇವಾಲಯದ ಆಡಳಿತ ಮಂಡಳಿ ನಡೆಸಿಕೊಂಡು ಬರುತ್ತಿದೆ. ಹುಣ್ಣಿಮೆ, ಅಮಾವಾಸ್ಯೆ, ಹಬ್ಬ ಹರಿದಿನಗಳ ವಿಶೇಷ ಪೂಜೆಯ ಹೊರತಾಗಿ, ಪ್ರತೀ ವರ್ಷದ ಮಾಘ ಮಾಸದಲ್ಲಿ ಅದ್ದೂರಿಯಾಗಿ ವರ್ಧಂತಿ ಉತ್ಸವನ್ನು ನಡೆಸಿಕೊಂಡು ಬರುತ್ತಿರುವುದಲ್ಲದೇ, ಶರನ್ನವರಾತ್ರಿಯ ಹತ್ತು ದಿನಗಳು ದೇವಿಗೆ ವಿಶೇಷವಾದ ಅಲಂಕಾರ ಮಾಡುವುದಲ್ಲದೇ ದೇಶವಿದೇಶಗಳಿಂದ ಪ್ರಖ್ಯಾತ ಕಲಾವಿದರುಗಳನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ನವರಾತ್ರಿಯನ್ನು ಆಚರಿಸುವ ಸತ್ ಸಂಪ್ರದಾಯವನ್ನು ದೇವಾಲಯದ ಆಡಳಿತ ಮಂಡಳಿ ನಡೆಸಿಕೊಂಡು ಹೋಗುತ್ತಿರುವುದು ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

jogಮುಂದಿನ ಬಾರಿ ಜೋಗಜಲಪಾತಕ್ಕೆ ಭೇಟಿ ನೀಡಿದಾಗ ತಪ್ಪದೇ, ಇಡೀ ರಾಜ್ಯಕ್ಕೆ ವಿದ್ಯುಚ್ಛಕ್ತಿಯನ್ನು ನೀಡುವ ಮೂಲಕ ಶಕ್ತಿಕೇಂದ್ರವಾಗಿರುವ ಜೋಗದ ಮಹಾತ್ಮಾ ಗಾಂಧಿ ಜಲವಿದ್ಯುತ್ ಸ್ಥಾವರದ ಸ್ಥಾಪನೆಯ ಹಿಂದಿನ ಮತ್ತು ಇಂದಿಗೂ ಅ ಸ್ಥಾವರದ ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುತ್ತಿರುವ ಹಿಂದಿನ ಮಹಾನ್ ಶಕ್ತಿಯಾಗಿರುವ ಪ್ರಪಂಚದಲ್ಲಿ ಎಲ್ಲಿಯೂ ಕಾಣದಂತಹ ಏಕಶಿಲೆಯಲ್ಲಿ ಎರಡೂ ಕಡೇ ತದ್ರೂಪಿ ದೇವಿಯ ವಿಗ್ರಹ ಹೊಂದಿರುವ ತಾಯಿ ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಆಕೆಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ. ಅದೇ ರೀತಿ ಶರಾವತಿ ನದಿಯು 960 ಅಡಿಗಳ ಎತ್ತರದಿಂದ ರಾಮ ಲಕ್ಷಣ ಭರತ ಮತ್ತು ಸೀತಾ ಎಂಬ 4 ಕವಲುಗಳಾಗಿ ಧುಮ್ಮಿಕ್ಕುವ ಜಲಪಾತವನ್ನು ನೋಡಿ ಹೃನ್ಮನಗಳನ್ನು ತುಂಬಿಕೊಂಡು, ಅವಕಾಶ ಸಿಕ್ಕಲ್ಲೇ ಅಲ್ಲೇ ಸ್ಥಾಪಿಸಲಾಗಿರುವ ದೂರದರ್ಶಕ ಮೂಲಕ ಧುಮ್ಮಿಕ್ಕೆ ಹರಿಯುವ ಕವಲುಗಳ ಮಧ್ಯೆ ಹನುಮಂತನ ಮುಖದ ಹೋಲಿಕೆ ದೃಶ್ಯವನ್ನೂ ನೋಡಿ ಅನಂದಿಸೋಣ.

WhatsApp Image 2023-01-20 at 11.24.06ಅದೇ ರೀತಿ ರಾಜಾಕಲ್ಲು ಇರುವ ಪ್ರದೇಶದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ದೃಶ್ಯವನ್ನು ಆನಂದಿಸಿ, ರಾಜಾಕಲ್ಲಿನ ಮೇಲೆ ಕೆತ್ತಲಾಗಿರುವ ಅಂದಿನ ಮೈಸೂರು ರಾಜ್ಯದ ಎಂಟು ಜೆಲ್ಲೆಗಳಲ್ಲಿ (ಹಳೇ ಮೈಸೂರಿನ ಪ್ರಾಂತ್ಯ) ನಿಮ್ಮ ಊರಿನ ಹೆಸರಿದೆಯೇ ಎಂದು ನೋಡಿ ಆನಂದಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s