ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

jana_shitatya2023ರ ಮೊದಲನೇ ವಾರದಲ್ಲಿ ಹಾವೇರಿಯಲ್ಲಿ ಕನ್ನಡ ಎನ್ನುವವರು, ಬನ್ನಿ ನಮ್ಮ ಸಂಗಡ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಎನ್ನುವಂತೆ ಅಧ್ಯಕ್ಷ ಮಹೇಶ್ ಜೋಶಿಯವರನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಕೆಲವು ಮಂದಿ ಆ ಕನ್ನಡ ಸಮ್ಮೇಳನದಲ್ಲಿಯೂ ಜಾತಿ ಮತ್ತು ಧರ್ಮವನ್ನು ಕೆದಕಿ ಆ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳಿಗೆ ಸೂಕ್ತವಾದ ಸ್ಥಾನ ಮಾನ ನೀಡಿಲ್ಲ (ಇದು ಸುಳ್ಳು ಆರೋಪವೆಂದು ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಂಕಿ ಅಂಶಗಳ ಸಮೇತ ಸಾಭೀತು ಪಡಿಸಿದ್ದಾರೆ) ಇದೊಂದು ರಾಜಕೀಯ ಪ್ರೇರಿತವಾದ ಸಮ್ಮೇಳನ ಎಂದು ಕೆಲವು ಸ್ವಘೋಷಿತ ಬುದ್ದೀಜೀವಿಗಳು ಆರೋಪಿಸಿ ಕಸಾಪ ಸಾಹಿತ್ಯ ಸಮ್ಮೆಳನಕ್ಕೆ ಪರ್ಯಾಯವಾಗಿ ಪುರುಷೋತ್ತಮ ಬಿಳಿಮಲೆ ಎಂಬ ಎಡಬಿಡಂಗಿ ಗಂಜಿ ಗಿರಾಕಿಯ ನೇತೃತ್ವದಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಹೆಸರಿನಲ್ಲಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಸೇರಿಕೊಂಡು ಜ.8ರಂದು ಬೆಂಗಳೂರಿನ ಕೆ.ಆರ್‌.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್‌ ಆವರಣದಲ್ಲಿ ನಡೆಸಿದ ಪ್ರತಿರೋಧ ಸಮಾವೇಷದಲ್ಲಿನ ವಿಛಿದ್ರಕಾರಿ ಮನಸ್ಥಿತಿ ನಿಜಕ್ಕೂ ದೇಶದ ಏಕತೆಗೆ ಆತಂಕಕಾರಿಯಾಗಿದೆ.

WhatsApp Image 2023-01-13 at 21.54.03ನಿಜ ಹೇಳ ಬೇಕೆಂದರೆ, ಹಾವೇರಿ ಕಸಾಪ ಸಮ್ಮೇಳನದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ ಎಂಬ ನೆಪವೊಡ್ಡಿ ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನ ಮಾಡ್ತೇವೆ ಎಂದುವರು ಮುಸಲ್ಮಾನರಾಗಿರದೇ, ಇತ್ತೀಚಿನ ಕೆಲ ವರ್ಷಗಳಿಂದ ತಮ್ಮನ್ನು ತಾವು ಮೂಲ ನಿವಾಸಿಗಳೆಂದು ಕರೆದು ಕೊಳ್ಳುವ ಕೆಲ ಮತಾಂತರಿ ನವಬೌಧ್ದ ಎಡಬಿಡಂಗಿಗಳು ಎಂಬುದು ಮತ್ತಷ್ಟು ಆತಂಕಕಾರಿಯಾದ ವಿಷಯವಾಗಿದೆ. ಕಾರ್ಯಕ್ರಮದಲ್ಲಿ ರಾ ಚಿಂತನ್ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡ ಮುಸಲ್ಮಾನ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಭಾನು ಮುಷ್ತಾಕ್, ನಿರೂಪಣೆ ಮಾಡಿದ ಶಮೀಮ ಮುಜೀಬ್ ಜೊತೆಗೆ ಸಾಹಿತಿ ಮುನೀರ್ ಕಾಟ್ಟಿ ಪಳ್ಳ ಮುಂತಾದ ಬೆರಳೆಣಿಕೆಯ ಮುಸಲ್ಮಾನರ ಹೊರತಾಗಿ ಉಳಿವರೆಲ್ಲಾ ತಮ್ಮ ತೆವಲಿಗೆ ಹಿಂದೂ ಧರ್ಮವನ್ನು ಹಳಿಯುವ ಎಡಬಿಡಂಗಿ ಹಿಂದೂಗಳೇ ಆಗಿದ್ದು, ಅಲ್ಲಿನ ಗೋಷ್ಟಿಗಳಲ್ಲಿ ಕನ್ನಡ, ಕನ್ನಡಿಗರ ಕುರಿತಾಗಿ ಮಾತನಾಡಿದ್ದಕ್ಕಿಂತಲೂ ಹಿಂದೂ ಧರ್ಮದ ಅವಹೇಳನದ ಜೊತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಸೈದ್ಧಾಂತಿಕ ವಿರೋಧವನ್ನು ವ್ಯಕ್ತ ಪಡಿಸಿದ್ದೇ ಹೆಚ್ಚಾಗಿತ್ತು.

ಇದಕ್ಕೆ ಜ್ವಲಂತ ಉದಾಹರಣೆ ಎನ್ನುವಂತೆ ಹಿಂದು ಪೂಜೆ ಸಾಕು, ದ್ರಾವಿಡ ದೇಶ ಬೇಕು ಎಂದು ಒಬ್ಬ ಎಡಬಿಡಂಗಿ ಅಬ್ಬರಿಸಿದರೆ, ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಾ, ಹಿಂದೂ ದೇವಸ್ಥಾನದಲ್ಲಿ ಅರ್ಚಕರು ಮತ್ತು ಗಂಡಸರು, ಹೆಣ್ಣು ಮಕ್ಕಳಿಗೆ ಹೊಟ್ಟೆ ತೋರಿಸುತ್ತ ಓಡಾಡುವುದು ತಪ್ಪು ಎಂಬರ್ಥದ ಪೋಸ್ಟು ಹಾಕಿದರೆ, ಅದಕ್ಕೆ ಉತ್ತರವಾಗಿ ಮತ್ತೊಬ್ಬ ಸ್ವಘೋಷಿತ ಪ್ರಗತಿಪರ ಮಹಿಳಾ ಮಣಿ, ಅರ್ಚಕರು ದೇವರನ್ನು ತೊಳೆಯುವ ಮುನ್ನಾ ತಮ್ಮ ಪಂಚೆಗಳನ್ನು ತೊಳೆಯಲಿ ಎಂದು ತಾನೇ ಸ್ವತಃ ಅರ್ಚಕರ ಮಡಿಬಟ್ಟೆಗಳನ್ನು ಮೂಸಿ ಖಚಿತಪಡಿಸಿಕೊಂಡಂತೆ ಷರಾ ಬರೆದಿದ್ದರು.

mushtakಇನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮುಷ್ತಾಕ್ ಬಾನು ಎಂಬ ಮುಸ್ಲಿಂ ಹೆಣ್ಣು ಮಗಳು ತನ್ನ ಭಾಷಣದಲ್ಲಿ ಮುಸಲ್ಮಾನರನ್ನು ಹೊರಗೆ ದಬ್ಬುವ ಕೆಲಸ ಎಂದಿನಿಂದಲೋ ಆರಂಭವಾಗಿದೆ ಎಂದು ಹೇಳುತ್ತಾ, ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ಅರಿಸಿನ, ಕುಂಕುಮದ ಬಣ್ಣಗಳನ್ನು ಲೇಪಿಸಿ ಮಂದಾಸನದ ಮೇಲೆ ಕೂರಿಸಿದಾಗಲೇ ನಮ್ಮನ್ನು ಹೊರಗಟ್ಟುವ ಕೆಲಸ ಆರಂಭವಾಗಿತ್ತು. ಅದು ಈಗ ಪೂರ್ಣಗೊಳ್ಳುತ್ತಿದೆ. ಕನ್ನಡ ರಥವನ್ನು ಎಳೆದು ಜಾತ್ರೆ, ಪರಿಷೆ ಮಾಡಿ ಮುಸ್ಲಿಮ್ಮರನ್ನು ಹೊರಗಟ್ಟುವುದಕ್ಕೆ ಇಷ್ಟೆಲ್ಲಾ ಹುನ್ನಾರ ಬೇಕಿತ್ತೇ? ಎಂದು ಪ್ರಶ್ನಿಸಿದಾಗ ಅದಕ್ಕೆ ನೆರೆದಿದ್ದವರು ವಿರೋಧ ವ್ಯಕ್ತಪಡಿಸದೇ ಚಪ್ಪಾಳೆ ತಟ್ಟಿದ್ದು ದೇಶದ ಏಕತೆಗೆ ಆತಂಕಕಾರಿಯಾಗಿದೆ.

ನಾವು ಈ ದೇಶವನ್ನು ಭಾರತಮಾತೆ ಎಂದೂ ಕರ್ನಾಟಕ ರಾಜ್ಯವನ್ನು ಕನ್ನಡತಾಯಿ ಎಂದು ದೇವಿಯ ರೂಪದಲ್ಲಿ ಕಾಣುತ್ತೇವೆ. ಇನ್ನು ಅರಿಶಿನ ಮತ್ತು ಕುಂಕುಮ ಎನ್ನುವುದು ನಮ್ಮ ದೇಶದ ಹೆಣ್ಣುಮಕ್ಕಳ ಸುಮಂಗಲಿತನ ಮತ್ತು ಸೌಭಾಗ್ಯದ ಲಕ್ಷಣ ಎಂದು ಭಾವಿಸುರುವುದರಿಂದ ಸ್ವಾಭಾವಿಕವಾಗಿ ಕನ್ನಡಾಂಬೆ ಭುವನೇಶ್ವರಿಗೆ ಅರಿಶಿನ ಕುಂಕುಮ ಹಚ್ಚಿ ಅಲಂಕರಿಸುವುದಲ್ಲದೇ ಅದೇ ಬಣ್ಣವನ್ನೇ ಕನ್ನಡದ ಭಾವುಟದಲ್ಲೂ ಬಳಸಿಕೊಂಡಿದ್ದೇವೆ. ಈ ದೇಶದಲ್ಲೇ ಹುಟ್ಟಿ ಈ ದೇಶದ ಸಂಸ್ಕಾರ ಮತ್ತು ಸಂಪ್ರದಾಯದ ಅರಿವಿದ್ದರೂ ಮತಾಂಧತೆಯಿಂದ ಅರಿಶಿನ ಕುಂಕುಮವನ್ನು ಪ್ರಶ್ನಿಸುವುದು ಕನ್ನಡಕ್ಕಾಗಲೀ ಅಥವಾ ಕನ್ನಡಿಗರಿಗೆ ಕೊಂಚವೂ ಪ್ರಯೋಜನಕ್ಕೆ ಬಾರಾದೇ ವಿನಾ ಕಾರಣ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಮೂಲಕ ದೇಶದ ಏಕತೆಗೆ ಆತಂಕಕಾರಿಯಾಗಿದೆ.

katti_pallaಇನ್ನು ನಫೀಸಾ, ನಮ್ಮನ್ನೇಕೆ ಹೊರ ದಬ್ಬುತ್ತಾರೆ ಇಲ್ಲಿ! ಎಂಬ ಪದ್ಯದ ಮೂಲಕ ಮುಸಲ್ಮಾನರ ಮೇಲೆ ಹಿಂದೂಗಳ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸುವಂತಹ ಪದ್ಯವನ್ನು ಪ್ರಸ್ತುತ ಪಡಿಸಿದ ಮುನೀರ್ ಕಾಟಿಪಳ್ಳ ಅವರ ಒಂದೊಂದೇ ಚರಣಗಳಿಗೂ ಅವರದ್ದೇ ಭಾಷೆಯಲ್ಲಿ ಉತ್ತರಿಸುವ ಪ್ರಯತ್ನವಿದು

ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ ! ಜಾತ್ರೆಯಲ್ಲಿ ಸಂತೆ ಅಂಗಡಿಗಳನ್ನು ಕಿತ್ತೆಸೆದರು
ಹಲಾಲ್ ವ್ಯಾಪಾರಕ್ಕೆ ಬಹಿಷ್ಕಾರ ಎಂದು ಕೂಗಿದರು ತುಂಡು ಬಟ್ಟೆಯನ್ನು ಮುಂದಿಟ್ಟು ಕಾಲೇಜು ಗೇಟಲ್ಲಿ ತಡೆದರು
ಈಗ ಸಾಹಿತ್ಯದ ಜಾತ್ರೆಗೂ ನಾವು ಅನ್ಯರಂತೆ ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !

divisionಈ ಚರಣದಲ್ಲಿ ಎತ್ತಿರುವ ಅಷ್ಟೂ ಪ್ರಶ್ನೆಗಳಿಗೆ ಈ ಲೇಖನದ ಶೀರ್ಷಿಕೆಯೊಂದೇ (ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ) ಉತ್ತರ ನೀಡಬಲ್ಲದು ಎಂದು ಭಾವಿಸುತ್ತೇನೆ. ಧರ್ಮಾಧಾರಿತವಾಗಿ ಈ ದೇಶ ಇಭ್ಬಾಗವಾದರೂ, ಹೃದಯ ವೈಶಾಲ್ಯತೆಯಿಂದ ಮುಸಲ್ಮಾನರನ್ನು ನಮ್ಮ ದೇಶದಿಂದ ಹೊರದಬ್ಬದೇ ಇಲ್ಲಿಯೇ ಇಟ್ಟುಕೊಂಡಿದ್ದಲ್ಲದೇ ಅವರಿಗೆ ಅಲ್ಪಸಂಖ್ಯಾತರು ಎಂದು ವಿವಿಧ ಸೌಲಭ್ಯಗಳನ್ನು ಕೊಟ್ಟರೂ, ಈ ದೇಶವನ್ನು ತಮ್ಮ ತಾಯ್ನಾಡು ಎಂದು ಭಾವಿಸದೇ ಪದೇ ಪದೇ ಪಾಪೀಸ್ಥಾನವನ್ನು ಬೆಂಬಲಿಸುವರು ಯಾರು? ಪಾಕಿಸ್ಥಾನ ಭಾರತದ ವಿರುದ್ಧ ಕ್ರೀಡೆಯಲ್ಲಿ ಗೆದ್ದರೆ, ಪಟಾಕಿ ಹೊಡೆದು ಸಂಭ್ರಮಿಸುವ ಮನಸ್ಥಿತಿ ಯಾರದ್ದು? ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂದೇ ನಂಬಿರುವ ಹಿಂದೂಗಳಿಗೆ ದಿನಕ್ಕೆ ಐದು ಬಾರಿ ಕರ್ಕಶವಾಗಿ ಅಲ್ಲಾ ಒಬ್ಬನೇ ದೇವರು ಉಳಿದವರೆಲ್ಲರೂ ಕಾಫೀರರು ಎಂದು ಶಬ್ಧಮಾಲಿನ್ಯ ಮಾಡುವವರು ಯಾರು? ಎಂಜಿಲು ಮಡಿ ಮೈಲಿಗೆ ಎಂದು ನಂಬವ ಹಿಂದೂಗಳಿಗೆ ಹಲಾಲ್ ಹೆಸರಿನಲ್ಲಿ ಮುಸಲ್ಮಾನರ ಎಂಜಿಲು ಆಹಾರವನ್ನು ತಿನ್ನಿಸುವುದು ಎಷ್ಟು ಸರಿ? ಶಾಲೆಯಲ್ಲಿ ಕಲಿಯುವ ಮಕ್ಕಳಲ್ಲಿ ಯಾವುದೇ ತಾರತಮ್ಯ ಬಾರದೇ ಇರಲಿ ಎಂದು ಸಮವಸ್ತ್ರದ ನೀತಿಯನ್ನು ಎಷ್ಟೋ ವರ್ಷಗಳಿಂದ ಜಾರಿಗೆ ತಂದಿರುವಾಗ ಉಡುಪಿನ ಹೆಸರಿನಲ್ಲಿ ಉಡುಪಿಯಲ್ಲಿ ಪ್ರತ್ಯೇಕತೆಯನ್ನು ತರಲು ಮುಂದಾದ ಹೆಣ್ಣು ಮಕ್ಕಳು ಯಾರು? ಮತ್ತು ಅವರಿಗೆ ನೈತಿಕ ಬೆಂಬಲ ನೀಡುತ್ತಿರುವವರು ಯಾರು?

ನನ್ನಜ್ಜಿ ಭೂಮಾಲಕನ ಭತ್ತದ ಗದ್ದೆಯಲ್ಲಿ ಹಿಡಿ ಅಕ್ಕಿಗಾಗಿ ದುಡಿದಿದ್ದಳು
ನನ್ನಜ್ಜ ಘಟ್ಟದ ಮೇಲೆ ತೋಟದಲ್ಲಿ ದುಡಿಯುತ್ತಲೇ ಪ್ರಾಣ ತೆತ್ತಿದ್ದ
ಆಗ ಜೊತೆಗಿದ್ದವರು ಧರ್ಮ ಕೇಳಿರಲಿಲ್ಲ ಅವರ ಕೈ ಇವರು, ಇವರ ಹೆಗಲು ಅವರು
ದುಡಿಮೆಗಾರರದ್ದೇ ಒಂದು ಧರ್ಮ, ಜೊತೆಯಾಗಿ ಈ ನೆಲವನ್ನು ಬಂಗಾರವಾಗಿಸಿದ್ದರು
ನಫೀಸಾ, ಈಗೇಕೆ ನಮ್ಮನ್ನು ಹೊರದಬ್ಬುತ್ತಾರೆ ಇಲ್ಲಿ !

ಹೌದು ನಿಜ. ಹಸಿವೆಗೆ ಎಂದೂ ಧರ್ಮವಿಲ್ಲ. ತಮ್ಮ ಜನಸಂಖ್ಯೆ ಕಡಿಮೆಯಾಗಿದ್ದಾಗ ಹಸಿವನ್ನು ನಿವಾರಿಸುವ ಸಲುವಾಗಿ ಭೂಮಾಲಿಕ ಭತ್ತದ ಗದ್ದೆಯಲ್ಲಿ ದುಡಿಯಲು ಬಂದಾಗ ಜಾತಿ ಮತ ಧರ್ಮವನ್ನು ನೋಡದೇ ಕೆಲಸ ಕೊಟ್ಟ ದಣಿಯ ವಿರುದ್ಧವೇ, ತಮ್ಮ ಧರ್ಮೀಯರ ಪ್ರಾಭಲ್ಯ ಹೆಚ್ಚಾದಾಗ ಕತ್ತಿ ಮಸೆದವರು ಯಾರು? ಅಕ್ಕಿಕೊಟ್ಟ ಧಣಿಯ ಭತ್ತವನ್ನು ಕದ್ದದ್ದಕ್ಕೆ ಪ್ರಶ್ನಿಸಿದ ಧಣಿಯ ಮೆದೆಗೆ ಬೆಂಕಿ ಹಚ್ಚಿ ಕೇಕೇ ಹಚ್ಚಿದವರು ಯಾರು?

ಮೊನ್ನೆ ಧಾರವಾಡದ ಜಾತ್ರೆಯಲ್ಲಿ ನಬೀಸಾಬರ ಕಲ್ಲಂಗಡಿ ಹೊಡೆದಾಗ
ನಿನ್ನೆ ನನ್ನೂರಿನಲ್ಲಿ ವ್ಯಾಪಾರಿ ಜಲೀಲನ ಹೊಟ್ಟೆ ಬಗೆದಾಗ..
ರಸ್ತೆ ತುಂಬಾ ಚೆಲ್ಲಿದ ಬಣ್ಣ ಹಸಿರಾಗಿರಲಿಲ್ಲ ಅದು ಪೂರ್ತಿ ಕೆಂಪು ಕೆಂಪು ಕೆಂಪಾಗಿತ್ತು..
ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !

DJhalliಕೇವಲ ಕಲ್ಲಂಗಡಿಯನ್ನು ಒಡೆದದ್ದಕ್ಕೇ ಈ ಪರಿಯಾಗಿ ಕಣ್ಣಿರು ಹರಿಸುವವರು, ಸಾಮಾಜಿಕ ಜಾಲತಾಣದಲ್ಲಿ ಗಣೇಶನ ಹಬ್ಬದ ವಿರುದ್ಧ ಪ್ರಚೋದನೆ ಮಾಡಿದ್ದ ವಿರುದ್ದವಾಗಿ ಪ್ರವಾದಿ ಪೈಗಂಬರ್ ಬಗ್ಗೆ ಹಾಕಿದ್ದ ಒಂದು ಹೇಳಿಕೆಗೆ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಜನಪ್ರತಿನಿಧಿಯ ಮನೆಯನ್ನು ಸುಟ್ಟು ಹಾಕಿದವರು ಯಾರು? ಕಳೆದ ಐದು ವರ್ಷಗಳಲ್ಲಿ ಮತಾಂಧತೆಯ ಉಮ್ಮೇದಿನಿಂದ ಕರ್ನಾಟಕದ ಕರಾವಳಿಯಲ್ಲಿ SDPI & PFI ಕಾರ್ಯಕರ್ತರು ಹಿಂದೂ ಕಾರ್ಯಕರ್ತರನ್ನು ಕೊಂದು ಹಾಕಿ ಕೋಡಿ ಕೋಡಿಯಾಗಿ ಕೆಂಪು ರಕ್ತವನ್ನು ಹರಿಸಿದ್ದಕ್ಕೆ ಏನನ್ನಬೇಕು? ಟಿವಿ ಚರ್ಚೆಯಲ್ಲಿ ನಿಮ್ಮದೇ ಧರ್ಮದ ವ್ಯಕ್ತಿಯೊಬ್ಬ ಹಿಂದೂ ದೇವಾನು ದೇವತೆಗಳ ವಿರುದ್ದ ಅಕ್ಷೇಪಣೆ ಮಾಡಿದ್ದರ ವಿರುದ್ಧವಾಗಿ ತಂತ್ರಕ್ಕೆ ಪ್ರತಿತಂತ್ರವಾಗಿ ನಿಮ್ಮ ವಯಸ್ಸಾದ ಪ್ರವಾದಿಗಳು ಎಂಟು ವರ್ಷದ ಹೆಣ್ಣುಮಗುವನ್ನು ವಿವಾಹವಾದ ಸತ್ಯದ ಸಂಗತಿಯನ್ನು ಎತ್ತಿದ ನೂಪುರ್ ಶರ್ಮಾ ಎಂಬ ಹೆಣ್ಣುಮಗಳ ವಿರುದ್ಧ ಪ್ರಪಂಚಾದ್ಯಂತ ಕೊಲೆ ಬೆದರಿಕೆ ಒಡ್ಡಿ ಮುಗಿಬಿದ್ದದ್ದು ಯಾರು ಮತ್ತು ಏಕೆ?

ನನ್ನಜ್ಜಿ ದುಡಿದುಡಿದು ಚಿನ್ನ ಮಾಡಿದ ಮಣ್ಣಲ್ಲಿ ನನ್ನಜ್ಜ ತಿರು ತಿರುಗಿ ಪ್ರಾಣ ಬಿಟ್ಟ ಈ ನೆಲದಲ್ಲಿ
ಈಗ ನನ್ನನ್ನು ತಡೆದು ನಿಲ್ಲಿಸಿ ಹೇಳಲಾಗುತ್ತಿದೆ ನಿನಗಿಲ್ಲ ಪ್ರವೇಶವಿಲ್ಲ, ನೀನು ನಮ್ಮವನಲ್ಲ
ನನಗೊಂದೂ ಅರ್ಥವಾಗುತ್ತಿಲ್ಲ ನಫೀಸಾ, ನಮ್ಮನ್ನೇಕೆ ಹೊರದಬ್ಬುತ್ತಾರೆ ಇಲ್ಲಿ !

MFಮಾಡುವ ಎಲ್ಲಾ ತಪ್ಪು ಕೆಲಸಗಳಿಗೂ ಗುರಾಣಿಯಾಗಿ ನಮಗೆ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಬಳಸುವವರು, ಈ ದೇಶದ ಕಾನೂನುಗಳಿಗೇಕೆ ಬೆಲೆ ಕೊಡುವುದಿಲ್ಲ? ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಜನಸಂಸ್ಕ್ಯಾಸ್ಪೋಟವನ್ನು ತಡೆಯಲು ಒಬ್ಬರಿಗೆ ಒಂದೇ ಮದುವೆ ಎರಡೇ ಮಕ್ಕಳು ಎಂದು ತಂದ ಕುಟುಂಬ ಯೋಜನೆಯನ್ನೇಕೇ ಪಾಲಿಸುವುದಿಲ್ಲ? ದ್ವಿಚಕ್ರವಾಹನದಲ್ಲಿ ಕೇವಲ ಇಬ್ಬರು ಮಾತ್ರಾ ಅದೂ ಶಿರಸ್ತ್ರಾಣ ಹಾಕಿಕೊಂಡೇ ಹೋಗಬೇಕೆಂಬ ಕಾನೂನು ಇದ್ದರೂ, ಕಾನೂನೂ ಇರುವುದೇ ಧಿಕ್ಕರಿಸುವುದಕ್ಕೆ ಎಂಬ ಮನಸ್ಥಿತಿಯಿಂದ ಒಂದೇ ಗಾಡಿಯಲ್ಲಿ ಐದಾರು ಜನರು ಕೇವಲ ಕಿಂಡಿ ಕಿಂಡಿ ಟೋಪಿ ಹಾಕಿಕೊಂಡು ಹೋಗುವುದೇಕೇ? ರಸ್ತೆಯ ನಿಯಮಗಳ ವಿರುದ್ಧವಾಗಿ ದ್ವಿಚಕ್ರವಾಹನಗಳ ವೀಲ್ಹಿ ಮಾಡಿಕೊಂಡು ಅಡ್ಡಾಡುವ ಹುಡುಗರು ಯಾರು? ದೇಶಕ್ಕೆ ಆಂತರಿಕವಾಗಿ ಗಲಭೆ ಎಬ್ಬಿಸುತ್ತಿರುವ ಆತಂಕವಾದಿಗಳು ಯಾರು ಮತ್ತು ಯಾವ ಮತಕ್ಕೆ ಸೇರಿದವರು?

ಕೋಟಿ ಚೆನ್ನಯರ ದಂಡಿನಲ್ಲಿ, ಅಬ್ಬಕ್ಕನ ಸೈನ್ಯದಲ್ಲಿ
ಕೊನೆಗೆ ಶಿವಾಜಿಯ ಗೆರಿಲ್ಲಾ ಪಡೆಗಳಲ್ಲಿ ನನ್ನ ಅಜ್ಜಂದಿರು ಇದ್ದರು
ಆಗ ಅವರನ್ನು ಯಾರೂ ಮುಸಲರೆಂದು ಅನುಮಾನಿಸಿರಲಿಲ್ಲ
ರಾಮ ಪ್ರಸಾದ, ಅಶ್ಫಖುಲ್ಲಾನ ಕೈ ಹಿಡಿದೇ ಫರಂಗಿಗಳ ಗಲ್ಲುಗಂಭದಲ್ಲಿ ನೇತಾಡಿದ್ದ
ಚಿರಸ್ಮರಣೆಯ ಚಿರುಕಂಡ, ಅಬೂಬಕ್ಕರನ ಎದೆಗೆ ಒರಗಿಯೇ ನೇಣು ಕುಣಿಕೆಗೆ ಕೊರಳೊಡ್ಡಿದ್ದ
ನಫೀಸಾ,ಈಗೇಕೆ ನಮ್ಮನ್ನು ಹೊರದಬ್ಬುತ್ತಾರೆ ಇಲ್ಲಿ !

ಇಲ್ಲಿರುವ ಮುಸಲ್ಮಾನರು ಯಾರೂ ಮೂಲತಃ ಅರಬ್ಬಿನಿಂದ ಬಂದವರಲ್ಲ. ನಮ್ಮ ಅಣ್ಣ ತಮ್ಮಂದಿರೇ ಈ ದೇಶದ ಮೇಲೆ ದಂಡೆತ್ತಿ ಬಂದ ಮುಸಲರ ಬಲವಂತದಿಂದಾಗಿಯೋ? ಆಮಿಷಕ್ಕೆ ಒಳಗಾಗಿಯೋ? ನಾನಾ ಕಾರಣಗಳಿಗಾಗಿ ಮುಸಲ್ಮಾನರಾಗಿ ಮತಾಂತರವಾಗಿದ್ದಾರೆ. ಆರಂಭದಲ್ಲಿ ಈ ಮತಾಂತರ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿದ್ದು, ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದಲೇ ಅಖಂಡ ಭಾರತದ ಸ್ವಾತ್ರಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಅಸಂಖ್ಯಾತ ಮುಸಲ್ಮಾನರೂ ಪ್ರಾಣ ತೆತ್ತಿರುವುದು ಸತ್ಯ. ಭಾರತೀಯರ ಹೊರಾಟಕ್ಕೆ ಮಣಿಸು ಬ್ರಿಟೀಷರು ನಮ್ಮ ದೇಶಕ್ಕೆ ಸ್ವಾತ್ರಂತ್ರ್ಯ ಕೊಡುವಾಗ ಧರ್ಮಾಧಾರಿತವಾಗಿ ಈ ದೇಶವನ್ನು ತುಂಡರಿಸಿದವರು ಯಾರು? ಮತ್ತು ಏಕೇ? ನಂತರ ಆಶ್ರಯ ನೀಡಿದ ದೇಶವನ್ನೇ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡುತ್ತಿರುವವರು ಯಾರು?

ಟಿಪ್ಪುವಿನ ಲಾವಣಿಯಲ್ಲಿ, ಬಬ್ಬರ್ಯನ ಪಾಡ್ದನದಲ್ಲಿ ಈ ನೆಲದ ಜನಪದರ ಕತೆಗಳಲ್ಲಿ
ನನ್ನಜ್ಜಂದಿರ ತ್ಯಾಗದ ಕತೆಗಳಿವೆ, ಅವರ ನೋವು ನಲಿವಿನ ಮಿಡಿತಗಳಿವೆ
ಅವರ ಮೊಮ್ಮಗ ನಾನು ಸಾಹಿತ್ಯದ ಜಾತ್ರೆಯಿಂದಲೂ ಈಗ ಹೊರದಬ್ಬಿಸಿಕೊಂಡಿದ್ದೇನೆ
ಹೊಸ ಭಾರತದ ನವ ಬಹಿಷ್ಕೃತ ನಾನು ನಫೀಸಾ, ನನ್ನದೆ ಕತೆ ಬರೆಯುತ್ತೇನೆ ಕೇಳು
ಅದು ಮಾತ್ರ ನಿಗಿ ನಿಗಿ ಕೆಂಡ….

presidentsಸಂತ ಕಬೀರ, ಶಿರ್ಡಿ ಸಾಯಿ ಬಾಬ, ಕನ್ನಡದ ಶಿಶುನಾಳ ಶರೀಫ್, ಇಬ್ರಾಹಿಂ ಸುತಾರ್ ಮುಂತಾದವರುಗಳನ್ನು ನಾವು ದೇವ ಮಾನವರಂತೆ ಇಂದಿಗೂ ಆರಾಧಿಸುತ್ತಿದ್ದೇವೆ. ಎಸ್. ಕೆ. ಕರೀಂಖಾನ್, ಕೆ.ಎಸ್ ನಿಸಾರ್ ಅಹ್ಮದ್ ಮುಂತಾದ ಸಾಹಿತಿಗಳನ್ನು ಆದರಿಸಿ ತಲೆಯ ಮೇಲೆ ಹೊತ್ತು ತಿರುಗಿದ್ದೇವೆ. ಏಕೆಂದರೆ ಇವರುಗಳು ಯಾರೂ ಸಹಾ ಹಿಂದೂ ಮುಸಲ್ಮಾನರ ನಡುವಿನ ಭಾವೈಕತೆಗೆ ಕೊಳ್ಳಿ ಇಡಲಿಲ್ಲ. ‌ ಮುಸಲ್ಮಾನರು ಎಂದು ನೋಡದೇ, ಜಾಕೀರ್ ಹುಸೇನ್, ಹಿದಾಯತ್ತುಲ್ಲಾ, ಫಕ್ರುದ್ದೀನ್ ಅಲಿ ಅಹ್ಮದ್, ಅಬ್ದುಲ್ ಕಲಾಂ ಮುಂತಾದವರನ್ನು ಊ ದೇಶದ ಪ್ರಥಮ ಪ್ರಜೆಯನ್ನಾಗಿಸಿದ್ದೇವೆ. ಹಮೀದ್ ಅನ್ಸಾರಿಯಂತಹ ದೇಶದ್ರೋಹಿಯನ್ನೂ ಸಹಾ ಎರಡು ಬಾರಿ ಉಪರಾಷ್ಟ್ರಪತಿಯನ್ನಾಗಿಸಿದ್ದಲ್ಲದೇ, ಮುಸಲ್ಮಾನರು ಈ ದೇಶದಲ್ಲಿ ಅಲ್ಪಸಂಖ್ಯಾತರಾದರು ಸಹಾ ನೂರಾರು ಸಾಂಸದರು, ಸಾವಿರಾರು ಶಾಸಕರು ಮತ್ತು ಜನಪ್ರತಿನಿಧಿಗಳನ್ನು ನಮ್ಮ ನಾಯಕರುಗಳು ಎಂದು ಪ್ರಜಾತ್ರಂತ್ರದ ರೂಪದಲ್ಲಿ ಆರಿಸಿ ಕಳುಹಿಸಿದ್ದರೂ, 2047ರಲ್ಲಿ ಇಡೀ ಭಾರತವನ್ನು ಮುಸಲ್ಮಾನ ದೇಶವನ್ನಾಗಿಸಲು ಮುಂದಾಗಿರುವವರು ಯಾರು? ಮತ್ತು ಏಕೆ?

WhatsApp Image 2023-01-10 at 10.50.32ಮುನೀರ್ ಕಾಟ್ಟಿ ಪಳ್ಳರೇ ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು ಅದು ಕೃತಿಯಲ್ಲಿಯೂ ಸಹಾ ಮೂಡಿ ಬರಬೇಕು. ಈ ದೇಶದ ಹಿಂದುಗಳು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ, ನೀವು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ, ಈ ದೇಶದಲ್ಲಿ ನಿಮಗೆ ಅಭದ್ರತೆ ಕಾಡುತ್ತಿದೆ. ಹತ್ತು ಹಿಂದೂ ಕುಟುಂಬಗಳ ಜೊತೆ ಒಂದು ಮುಸಲ್ಮಾನರ ಕುಟುಂಬ ಅತ್ಯಂತ ನೆಮ್ಮದಿಯಾಗಿ ಇರಬಲ್ಲದು. ಅದೇ ಒಂದು ಹಿಂದೂ ಕುಟುಂಬವನ್ನು ಹತ್ತು ಮುಸಲ್ಮಾನರ ಕುಟುಂಬದ ನಡುವೆ ನೆಮ್ಮದಿಯಾಗಿ ಇರಿಸಬಲ್ಲಿರಾ? ಎಂಬ ಪ್ರಶ್ನೆಯನ್ನು ನಿಮ್ಮ ನಫೀಸಾಳ ಬಳಿ ಕೇಳಿ ಕೊಂಡಿದ್ದಲ್ಲಿ ಈ ಪ್ರತಿರೋಧ ಸಭೆಯನ್ನು ನಡೆಸುವ ಪ್ರಮೇಯವೇ ಇರುತ್ತಿರಲಿಲ್ಲ, ಈ ಆಕ್ರೋಶ ಭರಿತ ಜನಾಂಗ ದ್ವೇಷ ಅಳಿಯಲಿ ಎಂಬ ಪದ್ಯವನ್ನು ಬರೆಯುವ ಅವಕಾಶವೇ ಇರುತ್ತಿರಲಿಲ್ಲ ಅಲ್ಲವೇ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು – ಮಂಕುತಿಮ್ಮ ।।

ಎಂತಹ ಕಷ್ಟಗಳ ಸಮಯದಲ್ಲೂ ಅಂಜದೆ, ಕಂಗಾಲಾಗದೆ ದೃಢವಾಗಿ ಎಲ್ಲರೊಳಗೆ ಒಂದಾಗಿ ಕೂಡಿ ಬಾಳಿದರೆ, ಯಾವ ಕಷ್ಟಗಳು ನಮ್ಮನ್ನು ಎನೂ ಮಾಡಲಾರವು. ಹಾಗಾಗಿ ಎಲ್ಲಾ ಸನ್ನಿವೇಶಗಳಲ್ಲೂ ಬೆರೆತು ಒಂದಾಗಿರು ಎಂದು ಡಿ.ವಿ. ಗುಂಡಪ್ಪನವರು ಹೇಳಿರುವುದನ್ನು ಅರ್ಥ ಮಾಡಿಕೊಂಡು ಅದೇ ರೀತಿಯಲ್ಲಿ ಎಲ್ಲರೂ ನಡೆದಲ್ಲಿ ಎಲ್ಲವೂ ಸುಖಃವಾಗಿಯೇ ಇರುತ್ತದೆ ಅಲ್ಲವೇ? ಹೇಗೆ ಚಪ್ಪಾಳೆ ಹೊಡೆಯೋದಿಕ್ಕೆ ಎರಡು ಕೈಗಳು ಬೇಕೋ ಅದೇ ರೀತೀ ಈ ದೇಶದ ಏಕತೆಯಿಂದ ಇರಲು ಎಲ್ಲರೂ ಒಂದಾಗಿ ಕೈ ಜೋಡಿಸಲೇ ಬೇಕಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

  1. ಲೇಖನ ಸತ್ಯವನ್ನು ಪ್ರತಿಪಾದಿಸುತ್ತಿದೆ ಮತ್ತು ಅದ್ಭುತವಾಗಿದೆ. ಧನ್ಯವಾದಗಳು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s