ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

climberಆತನೊಬ್ಬ ಉತ್ಸಾಹಿ ಪರ್ವತಾರೋಹಿ. ವಿಶ್ವದ ಅತ್ಯಂತ ಎತ್ತರದ ಪರ್ವತಗಳಲ್ಲಿ ಒಂದಾದ ನಮ್ಮ ಹಿಮಾಲಯದ ಗೌರಿಶಂಕರ ಪರ್ವತವನ್ನು ಏರಲು ನಿರ್ಧರಿಸಿ ಕೆಲವರ ಸಹಾಯದಿಂದ ಅಲ್ಪ ಸ್ವಲ್ಪ ಯಶಸ್ಸು ಕಂಡನಾದರೂ, ಸಂಪೂರ್ಣ ಏರಲು ವಿಫಲನಾದ. ಹಾಗೆ ಆತ ಏರಿದ್ದು ಸಾಂಧರ್ಭಿಕ ಹಾಗಾಗಿ ಆತ ಸಾಂಧರ್ಭಿಕ ಶಿಶು ಎಂದೇ ಎಲ್ಲರೂ ಆಡಿಕೊಳ್ಳಲು ಆರಂಭಿಸಿದಾಗ, ಆತ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಕೆಲ ವರ್ಷಗಳ ತಯಾರಿಯ ನಂತರ ಮತ್ತೆ ತನ್ನ ಆರೋಹಣವನ್ನು ಪ್ರಾರಂಭಿಸಿದ. ಆದರೆ ಈ ಬಾರಿ ತಾನು ಯಾರ ಸಹಾಯವಿಲ್ಲದೇ ತನ್ನ ಸ್ವಂತ ಬಲದಿಂದ ಏರಬೇಕು ಎಂದು ನಿರ್ಧರಿಸಿದ. ಹಾಗಾಗಿ ಆತ ಏಕಾಂಗಿಯಾಗಿ ಸಕಲ ಯೋಜನೆಗಳನ್ನು ಸಿದ್ಧಪಡಿಸಿದನಾದರೂ, ಅದು ಹಂತ ಹಂತವಾಗಿರದೇ, ಒಂದೇ ಬಾರಿಗೆ ಗೌರೀಶಂಕರದ ತುತ್ತ ತುದಿಯನ್ನೇರಬೇಕೆಂದು ನಿರ್ಧರಿಸಿ ಒಬ್ಬನೇ ಏರತೊಡಗಿದನು.

ಹಾಗೆ ಬೇಗ ಬೇಗನೆ ಏರುತ್ತಾ ಹೋದಂತೆಲ್ಲಾ ಸೂರ್ಯ ಮುಳುಗಿ ಕತ್ತಲಾವರಿಸಲಾರಂಭಿಸಿದಾಗ, ಹಿಂದಿರುಗಿ ನೋಡಿದಾಗ ಸಾಕಷ್ಟು ದೂರ ಕ್ರಮಿಸಿದ್ದನ್ನು ಗಮನಿಸಿ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಮತ್ತೆ ಅದೇ ಕತ್ತಲಿನಲ್ಲಿಯೇ ತನ್ನ ಆರೋಹಣವನ್ನು ಮಂದುವರೆಸಿದ. ಅಷ್ಟು ಎತ್ತರದ ಪ್ರದೇಶದಲ್ಲಿ ರಾತ್ರಿ ಹಿಮ ಕೂಡ ಬೀಳಲಾರಂಭಿಸಿ, ಗೋಚರತೆ ಶೂನ್ಯವಾಗಿತ್ತು. ಎಲ್ಲವೂ ಕತ್ತಲೆ. ಚಂದ್ರನೂ ಇಲ್ಲಾ, ಕಡೆಗೆ ನಕ್ಷತ್ರಗಳೂ ಸಹಾ ಮೋಡಗಳ ಹಿಂದೆ ಅಡಗಿ ಕುಳಿತಿತ್ತು. ಹಾಗೆ ಏರುವ ಹಾದಿಯಲ್ಲಿ ಆತ ಹಿಡಿದಿದ್ದ ಹಿಮಗಲ್ಲು ಇದ್ದಕ್ಕಿಂದ್ದಂತೆಯೇ ಮುರಿದು ಬೀಳುತ್ತಿದ್ದಂತೆಯೇ, ಕಾಲು ಜಾರಿ ವೇಗವಾಗಿ ಪ್ರಪಾತಕ್ಕೆ ಬೀಳುತ್ತಾ ಹೋದ. ಆ ಕತ್ತಲೆಯ ಭೂಮಿಯ ಗುರುತ್ವಾಕರ್ಷಣೆ ಬಲದಿಂದ ವೇಗವಾಗಿ ತಾನು ಉರುಳಿ ಉರುಳಿ ಬೀಳುತ್ತಿದ್ದಾಗ, ಆತನ ಮನಸ್ಸಿನಲ್ಲೇ ಛೇ! ಇಂತಹ ಪರಿಸ್ಥಿತಿ ನನಗೇ ಬರಬೇಕಾ? ಎಂಬ ಆಲೋಚನೆ ಮೂಡತೊಡಗಿತು?

ಹಾಗೆ ಅವನು ಬೀಳುತ್ತಲೇ ಇದ್ದಾಗ ಮನಸ್ಸು ಮತ್ತು ದೇಹಗಳ ಮೇಲೆ ಆಗುತ್ತಿದ್ದ ಆ ನೋವಿನ ಕ್ಷಣಗಳಲ್ಲಿಯೂ ಅವನಿಗೆ ಒಳ್ಳೆಯ ಮತ್ತು ಕೆಟ್ಟ ನೆನಪುಗಳು ಅವನ ಮನಸ್ಸಿನಲ್ಲಿ ಹಾದುಹೋದವು. ಈಗ ಸಾವಿನ ಹೊರತಾಗಿ ನನಗೆ ಬೇರಾವುದೇ ಆಯ್ಕೆಗಳಿಲ್ಲ ಎಂಬುದು ಅವನಿಗೆ ಮನದಟ್ಟಾಗಿತ್ತು. ಆದರೂ ಕಡೆಯ ಗಳಿಗೆಯ ಪ್ರಯತ್ನವಾಗಿ ಉಳಿದ ಪರ್ವತಾರೋಹಿಯಂತೆ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಉದ್ದವಾದ ಹಗ್ಗವನ್ನು ಬಿಚ್ಚಿ ಅದರ ಕೊಕ್ಕೆಯನ್ನು ಸಾಧ್ಯವಾದಷ್ಟೂ ದೂರಕ್ಕೆ ಎಸೆದು ಅದು ಎಲ್ಲಿಯಾದರೂ ಕಚ್ಚಿಕೊಂಡು ತನ್ನ ಪ್ರಾಣ ಉಳಿಯಬಹುದಾ? ಎಂಬ ಆಸೆ ಆತನಿಗಾಗಿತ್ತು. ಹಾಗೆ ಜೋರಾಗಿ ಆ ಹಗ್ಗವನ್ನು ಎಸೆದು ಹಾಗೇ ಸಂಕಟ ಬಂದಾಗ ವೆಂಕಟರಮಣ ಎನ್ನುತ್ತಾ, ದೇವರೇ ಕಾಪಾಡು ಎಂದು ಜೋರಾಗಿ ಕೂಗತೊಡಗಿದ.

ಹಾಗೆ ಆತ ಜೋರಾಗಿ ಕೂಗುತ್ತಿದ್ದ ಕೆಲವೇ ಕ್ಷಣಗಳಲ್ಲಿ ಆತನಿಗೆ ಅಶರೀರವಾಣಿಯೊಂದು ಕೇಳಿಸಿ,  ನನ್ನಿಂದ ಏನಾಗಬೇಕು? ಎಂದು ಕೇಳಿಸಿದಾಗ, ಆತನಿಗೆ ಬದುಕುವ ಭರವಸೆ ಮೂಡಿ ನನ್ನನ್ನು ಕಾಪಾಡಿ ಎಂದು ಬೇಡಿಕೊಂಡ.
ನಾನು ನಿನ್ನನ್ನು ಉಳಿಸಬಲ್ಲೆ ಎಂದು ನೀನು ಭಾವಿಸುತ್ತೀಯಾ? ಎಂದು ಆಶರೀರವಾಣಿ ನುಡಿಯಿತು
ಅದಕ್ಕೆ ಆತ ಖಂಡಿತವಾಗಿಯೂ ನೀನು ನನ್ನ ದೇವರು. ನಿನ್ನ ಅನುಗ್ರಹದಿಂದ ನಾನು ಬದುಕಬಲ್ಲೆ ಎಂದ.
ನನ್ನ ಮೇಲೆ ಅಷ್ಟು ಭರವಸೆ ಇದ್ದರೇ, ಕೂಡಲೇ, ನೀನು ನಿನ್ನ ಸೊಂಟಕ್ಕೆ ಕಟ್ಟಿಕೊಂಡಿರುವ ಹಗ್ಗವನ್ನು ಕತ್ತರಿಸು ಎಂಬ ಶಬ್ದ ಕೇಳಿಸಿತು.

ಛೇ! ಇದು ನನ್ನನ್ನು ಬದುಕಿಸುವ ದೈವವಲ್ಲಾ ಇದಾವುದೋ ದೆವ್ವಾ! ಎಂದು ಭಾವಿಸಿದ ಆತ ಮತ್ತಷ್ಟೂ ಗಟ್ಟಿಯಾಗಿ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗವನ್ನು ಹಿಡಿದುಕೊಂಡಾಗ, ಆ ಹಗ್ಗದ ತುದಿಗೆ ಕಟ್ಟಿದ್ದ ಕೊಕ್ಕೆ ಎಲ್ಲಿಗೋ ಸಿಕ್ಕಿಕೊಂಡು ಧಕ್ ಎಂದು ಜಗ್ಗಿದ ಹಾಗಾಯ್ತು, ಆ ಕತ್ತಲಿನಲ್ಲಿ ಆತ ತಾನು ಎಲ್ಲಿದ್ದೇನೇ? ಎಷ್ಟು ಎತ್ತರದಲ್ಲಿದ್ದೇನೆ ಎಂಬುದು ಕಾಣಿಸದೇ ಹೋದರೂ, ಗಾಳಿಯಲ್ಲಿ ತಾನು ತೇಲಾಡುತ್ತಿರುವುದರ ಅರಿವಾಗಿ ತಾನೆಲ್ಲೋ ಪ್ರಪಾತದಲ್ಲಿ ಸಿಲಿಕಿಕೊಂಡಿದ್ದೇನೆ ಎಂಬ ಅನುಭವಾಯಿತು. ಆ ಕತ್ತಲಿನಲ್ಲಿ ಆ ಪರಿಯ ಮೈಕೊರೆಯುವ ಛಳಿಯಲ್ಲಿ ಈ ರೀತಿಯ ಆಘಾತವನ್ನು ಸಹಿಸಿಕೊಳ್ಳಲಾರದ ಆತನ ಹೃದಯ ನುಚ್ಚು ನೂರಾಗಿತ್ತು.

ಮಾರನೇಯ ದಿನ ಬೆಳಿಗ್ಗೆ ಆ ಹಿಮಚ್ಚಾದಿತ ಪ್ರದೇಶದಲ್ಲಿ ಪರ್ವತಾರೋಹಿಗಳ ರಕ್ಷಣಾ ತಂಡವು ಬಂದಾಗ, ಅಲ್ಲಿ ಹಗ್ಗದಲ್ಲಿ ನೇತಾಡುತ್ತಿದ್ದ ಹೆಪ್ಪುಗಟ್ಟಿದ ಆ ಪರ್ವತಾರೋಹಿಯ ಶವವನ್ನು ನೋಡಿ ಆಶ್ಚರ್ಯ ಚಕಿತಗೊಂಡಿತು. ಏಕೆಂದರೆ, ಆ ಹಗ್ಗದಲ್ಲಿ ನೇತಾಡುತ್ತಿದ್ದ ಆ ಪರ್ವತಾರೋಹಿಯ ಶವ ನೆಲದಿಂದ ಕೇವಲ ಎರಡು ಅಡಿಗಳಷ್ಟು ಎತ್ತರದಲ್ಲಿ ದೃಢವಾಗಿ ನೇತಾಡುತ್ತಿತ್ತು. ನನ್ನ ಮೇಲೆ ನಂಬಿಕೆ ಇದ್ದಲ್ಲಿ, ಸೊಂಟಕ್ಕೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಿ ಜೀವ ಉಳಿಸಿಕೋ ಎಂದು ಅಶರೀರವಾಣಿ ನುಡಿದಾಗ, ಆ ಪರ್ವತಾರೋಹಿ ಆದನ್ನು ನಂಬದೇ ಗಟ್ಟಿಯಾಗಿ ಹಗ್ಗವನ್ನು ಹಿಡಿದ ಪರಿಣಾಮ ಆತ ಅಂತಿಮವಾಗಿ ತನ್ನ ಜೀವನವನ್ನೇ ಬಲಿ ಕೊಡಬೇಕಾಯಿತು. ಜೀವನದಲ್ಲಿ ಅಷ್ಟೆಲ್ಲಾ ಎತ್ತರಕ್ಕೆ ಏರಲು ಬಯಸಿದ್ದ ಆ ವ್ಯಕ್ತಿ ಅಂತಿಮ ಕ್ಷಣದಲ್ಲಿ ಒಂದು ಧೃಢ ನಿರ್ಧಾರವನ್ನು ತೆಗೆದುಕೊಳ್ಳಲಾಗದೇ ತನ್ನ ಜೀವನವನ್ನು ಕಳೆದುಕೊಳ್ಳಬೇಕಾಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

kummyನಮ್ಮ ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಜಾತ್ಯಾತೀತ ಜನತಾದಳದ ಕುಮಾರಸ್ವಾಮಿಯವರ ಪರಿಸ್ಥಿತಿಯು ಆ ಅವಕಾಶವಾದಿ ಪರ್ವತಾರೋಹಿಯಂತೆಯೇ ಇದೆ ಎಂದರೂ ಅತಿಶಯವಲ್ಲ. ಜನಾದೇಶವಿಲ್ಲದೇ ಇದ್ದರೂ, ಹಿಂಬಾಗಿಲಿನಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಇದ್ದಾಗ ಕೊಟ್ಟ ಮಾತನ್ನು ನಡೆಸಿಕೊಳ್ಳಲಾಗದೇ, ಕೇವಲ ಮೂರ್ನಾಲ್ಕು ಜಿಲ್ಲೆಗಳ ಹೊರತಾಗಿ ತಮ್ಮ ಬಲ ಇಲ್ಲವೆಂಬ ಅರಿವಿದ್ದೂ ಸಹಾ, ಸ್ವಂತ್ರವಾಗಿ, ಯಾರದ್ದೇ ಬೆಂಬಲವಿಲ್ಲದೇ 123 ಸ್ಥಾನಗಳನ್ನು ಗಳಿಸುತ್ತೇನೆ ಎಂಬ ಹುಂಬ ತನದಿಂದ ಜೀವಮಾನದಲ್ಲಿ ಎಂದೂ ಸಹಾ ಒಂದು ಸಣ್ಣ ಚುನಾವಣೆಯಲ್ಲಿಯೂ ಸಹಾ ಜನರಿಂದ ನೇರವಾಗಿ ಗೆಲ್ಲಲಾಗದಂತಹ ಸಿ.ಎಂ. ಇಬ್ರಾಹಿಂ ಎಂಬಂತಹ ಹಿಂಬಾಗಿಲಿನ ಪರಾವಲಂಭಿ ಗೋಸುಂಬೆ ರಾಜಕಾರಣಿಯ ಮಾತನ್ನು ನೆಚ್ಚಿಕೊಂಡು ಪಂಚಯಾತ್ರೆ ನಡೆಸುತ್ತಾ, ಅಲ್ಪ ಸಂಖ್ಯಾತರ ಓಲೈಕೆಗಾಗಿ ಆಗ್ಗಾಗ್ಗೆ ಹಿಂದೂಗಳನ್ನು ಅದರಲ್ಲೂ ಅವರ ಕುಟುಂಬದ ಶ್ರೇಯಸ್ಸಿಗಾಗಿಯೇ ಅನೇಕ ಹೋಮ ಹವನಾದಿಗಳನ್ನು ಮಾಡಿ ಅವರನ್ನು ಆಶರೀರವಾಣಿಯಂತೆ ಎಚ್ಚರ ವಹಿಸುತ್ತಿದ್ದರೂ ಅವರ ಮಾತುಗಳನ್ನು ಧಿಕ್ಕರಿ ಪದೇ ಪದೇ ಅವರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಮೇಲಿನ ಪ್ರಸಂಗದಲ್ಲಿ ಪರ್ವತಾರೋಹಿಗೆ ಆದ ಆಂತ್ಯದಂತೆಯೇ ಅವರ ರಾಜಕೀಯ ಅಂತ್ಯಕ್ಕೆ ಕಾರಣವಾಗಬಹುದು ಎಂದರೂ ತಪ್ಪಾಗದು.

revannaದೇವೇಗೌಡರ ಮತ್ತು ಅವರ ಕುಟುಂಬದವರು ಎಷ್ಟೇ ಬೊಬ್ಬಿರಿದರೂ, ಜನರ ಮನಸ್ಸಿನಲ್ಲಿ ಉಳಿದಿರುವುದೇ  ಅವರದ್ದು ಅಪ್ಪಾ ಮಕ್ಕಳ ಪಕ್ಷ ಎಂದೇ. ಸದ್ಯದಲ್ಲಿ ಅವರ ಕುಟುಂದ 8-9 ಜನರು ಸಾಂವಿಧಾನಿಕ ಅಧಿಕಾರವನ್ನು ಹೊಂದಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ನಿಷ್ಟಾವಂತ ಕಾರ್ಯಕರ್ತರು ಬೇಕು. ಅದರೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಅಧಿಕಾರ ವಹಿಸಲು ಕೇವಲ ಆವರ ಕುಟುಂಬದವರೇ ಆಗಬೇಕು ಎಂಬ ಅವರ ಬಯಕೆ ಈಗ ಗುಟ್ಟಾಗಿಯೇನೂ ಉಳಿದಿದಲ್ಲ. ಕುಮಾರ ಸ್ವಾಮಿಯವರ ಅಣ್ಣ ರೇವಣ್ಣನವರೇ ಹೇಳಿರುವಂತೆ, ಕುಟುಂಬದ ಹೊರಗಿನವರಿಗೆ ಪಕ್ಷದ ಅಧಿಕಾರ ಕೊಟ್ಟಲ್ಲಿ ಪಕ್ಷವನ್ನು ತೊರೆದು ಹೋಗ ಬಹುದೆಂಬ ಆತಂಕದಿಂದಾಗಿ ಇಡೀ ಅಧಿಕಾರ ಅವರ ಕುಟುಂಬದ ಹಿಡಿತಲ್ಲೇ ಅಂದು ಇಂದು ಮತ್ತು ಮುಂದೆಯೂ ಇರಲಿದೆ.

ಹಾಸನ ಜಿಲ್ಲೆಯ ಹೊಳೇನರಸೀಪುರದ ತಾಲ್ಲೂಕ್ಕಿನ ಹರದನಳ್ಳಿಯ ಸಾಮಾನ್ಯ ರೈತರೊಬ್ಬರ ಮಗನಾದ ದೇವೇಗೌಡರು, ಸಿವಿಲ್ ಡಿಪ್ಲಮೋ ಮುಗಿಸಿ, ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣ ಪುಟ್ಟ ಕಾಂಟ್ರಾಕ್ಟ ಮಾಡಿಸುತ್ತಾ, 1960ರ ದಶಕದಲ್ಲಿ ಹೊಳೇನರಸೀಪುರದಲ್ಲಿ ಪಕ್ಷೇತರಾಗಿ ರಾಜಕೀಯ ಆರಂಭಿಸಿದರು. ಬಹಳಷ್ಟು ಜನರಿಗೆ ತಿಳಿಯದಿರುವ ವಿಷಯವೇನೆಂದರೆ, ದೇವೇಗೌಡರು ರಾಜಕೀಯಕ್ಕೆ ಬರಲು ಮೂಲ ಕಾರಣೀಭೂತರೇ ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಹಾಸನದ ಮೂಲದ ಶ್ರೀ ಎ.ಜಿ.ರಾಮಚಂದ್ರರಾವ್ ಎಂಬ ಬ್ರಾಹ್ಮಣರು. ನಂತರದ ದಿನಗಳಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಕೆಲವು ವರ್ಷಗಳಿದ್ದು ಅಂತಿಮವಾಗಿ ಜನತಾಪರಿವಾರದ ಪರವಾಗಿ ನಿಂತು 70ರ ದಶದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1983ರಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಪ್ರಥಮ ಬಾರಿಗೆ ಕಾಂಗ್ರೇಸ್ಸೇತರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದು.1988ರ ಹೊತ್ತಿಗೆ ರಾಮಕೃಷ್ಣ ಹೆಗಡೆಯವರೊಂದಿಗಿನ ಅಸಮಾನದಿಂದ ಜನತಾ ಪಕ್ಷವನ್ನು ತೊರೆದು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಕನಕಪುರದ ಸಾತನೂರಿನಲ್ಲಿ ಡಿ.ಕೆ.ಶಿವಕುಮಾರ್ ಎದಿರು ಹೇಳಹೆಸರಿಲ್ಲದಂತೆ ಸೋತು ಸುಣ್ಣವಾಗಿದ್ದಲ್ಲದೇ ಅವರ ಪಕ್ಷವೂ ಸಹ ನೆಲಕಚ್ಚಿ ದೇವೇಗೌಡರು ರಾಜಕೀಯ ಅಂತ್ಯ ಎಂದೇ ಎಲ್ಲರೂ ಭಾವಿಸಿದ್ದರು.

ದೇವೇಗೌಡರ ವಿರುದ್ದ ಎಲ್ಲಾ ವೈಮನಸ್ಯಗಳನ್ನೂ ಮರೆದು ಮತ್ತೆ ಅವರನ್ನು ಜನತಾದಳಕ್ಕೆ ಕರೆದಂದ ರಾಮಕೃಷ್ಣ ಹೆಗಡೆಯವರು ದೇವೇಗೌಡರನ್ನು ಜನತಾದಳದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರ ನೇತೃತ್ವದಲ್ಲೇ 1994ರ ವಿಧಾನಸಭೆಯ ಚುನಾವಣೆ ಎದುರಿಸಿ ಅವರನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಲು ಮುಂದಾದರು. ವಿಧಾನಸೌಧದಲ್ಲಿ ದೇವೇಗೌಡರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಹತ್ತಿದ ಏಣಿಯನ್ನೇ ಒದೆಯುವ, ಸಹಾಯ ಮಾಡಿದವರನ್ಣೇ ಕುಟುಕುವ ಚೇಳಿನಂತೆ ದೇವೇಗೌಡರ ಕುಟುಂಬ ಮಾಜೀಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿತೆ ಚಪ್ಪಲಿ ಸೇವೆ ಮಾಡಿಸಿದ್ದದ್ದನ್ನು ಈ ರಾಜ್ಯದ ಜನರು ಎಂದೂ ಮರೆಯಲಾರರು.

ನಂತರ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 18 ಸಾಂಸದರು ಜನತಾದಳದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಯಾರಿಗೂ ಬಹುಮತಬಾರದೇ ಅತಂತ್ರ ಸ್ಥಿತಿ ಎದುರಾದಾಗ, ಕಾಂಗ್ರೇಸ್ ಬಾಹ್ಯ ಬೆಂಬಲ ನೀಡಲು ಮುಂದಾದಾಗ, ಅಂದಿನ ಜನತಾದಳದ ರಾಷ್ಟ್ರಧ್ಯಕ್ಷ ಲಾಲೂಪ್ರಸಾದ್ ಯಾದವ್ ಮೇವುಹಗರಣದ ಆರೋಪಿಯಾಗಿದ್ದ ಕಾರಣ ಪ್ರಧಾನಮಂತ್ರಿ ಪಟ್ಟಕ್ಕೆ ಏರಲು ಆಗದ ಕಾರಣ, ಸಾಂಧರ್ಭಿಕ ಶಿಶುವಾಗಿ, ತಾವು ಹೇಳಿದ್ದನ್ನು ಕೇಳುವ ಕೈಗೊಂಬೆ ಎಂದು ದೇವೇಗೌಡರನ್ನು ಅಚಾನಕ್ಕಾಗಿ ಪ್ರಧಾನಮಂತ್ರಿ ಮಾಡಿದಾಗ, ತಮಗೆ  ಮುಂದೆ ರಾಮಕೃಷ್ಣ ಹೆಗಡೆಯವರು ಅಡ್ಡಬರಬಹುದೆಂಬ ದ್ವೇಷದಿಂದ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಮೇಲೆ ಒತ್ತಡ ತಂದು ಹೆಗಡೆಯವರನ್ನು ಜನತಾದಳದಿಂದಲೇ ಉಚ್ಚಾಟಿಸುವ ಮೂಲಕ ಅಂದೇ ತಮ್ಮ ಬ್ರಾಹ್ಮಣ ದ್ವೇಷವನ್ನು ಜಗಜ್ಜಾಹೀರಾತು ಪಡಿಸಿದ್ದರು.  3 ದಶಕಗಳಿಂದಲೂ ಅವರ ಮಾನಸ ಪುತ್ರ ಎಂದೇ ಸೇವೆ ಸಲ್ಲಿಸಿದ್ದ ವೈ.ಎಸ್.ವಿ ದತ್ತಾ ಅವರನ್ನು ಮೂಲೆ ಗುಂಪು ಮಾಡಿ ಇತ್ತೀಚೆಗೆ , ಪಕ್ಷವನ್ನೇ ತ್ಯಜಿಸುವಂತೆ ಮಾಡುವ ಮೂಲಕ ಬ್ರಾಹ್ಮಣರಿಗೆ ದೇವೇಗೌಡ ಕುಟುಂಬ ಹೇಗೆ ಗೌರವಿಸುತ್ತದೆ ಎಂಬುದನ್ನು ತೋರಿಸಿದ್ದರು. 

devegowdaಸಮಯ ಸಿಕ್ಕಾಗಲೆಲ್ಲಾ ದೇವೇಗೌಡರು ಲೋಕಕಲ್ಯಾಣದ ಹೆಸರಿನಲ್ಲಿ ಶತ್ರುವಿನಾಶ ಹೋಮ ಹವನಾದಿಗಳನ್ನು ಕೊಲ್ಲೂರು ಶೃಂಗೇರಿಗಳಲ್ಲದೇ, ಕೇರಳದಲ್ಲಿ ಮಾಡಿಸಿದರೆ, ಅವರ ಮಗ ರೇವಣ್ಣ ಸಾರ್ವಜನಿಕವಾಗಿಯೇ ಹತ್ತು ಬೆರಳಲ್ಲಿ ಹತ್ತು ನಿಂಬೇಹಣ್ಣುಗಳನ್ನು ಹಿಡಿದುಕೊಂಡು ಯಾವುದೇ ಕ್ಷುದ್ರ ಮಾಂತ್ರಿಕರಿಗಿಂತಲೂ ಕಡಿಮೆ ಇಲ್ಲದೇ, ರಾಹುಕಾಲ ಗುಳಿಕಾಲ ಯಮಗಂಡ ಕಾಲ ಎಂದು ಆಡಳಿತದಲ್ಲಿ ಮೂಗುತೂರಿಸುತ್ತಾ, ತಾವು ಹಿಂದೂಗಳ ಪರ ಎಂದು ಬಾಹ್ಯವಾಗಿ ತೋರಿಸಿಕೊಂಡರೂ, ಸಮಯ ಸಿಕ್ಕಾಗಲೆಲ್ಲಾ, ತಮ್ಮ ಈ ಇಳೀವಯಸ್ಸಿನಲ್ಲಿಯೂ ತಲೇ ಮೇಲೆ ತೂತು ತೂತು ಟೋಪಿ ಹಾಕಿಕೊಂಡು ನನ್ನ ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗಿ ಜನಿಸಲು ಇಚ್ಚಿಸುತ್ತೇನೆ ಎಂದು ಅಲ್ಪಸಂಖ್ಯಾತರ ಪರ ಹೇಳಿದರೆ ಅವರ ಮಗ ಕುಮಾರ ಸ್ವಾಮಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿಕೆ ನೀಡುತ್ತಾ, ಒಮ್ಮೆ ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ತೋರಿಸಿಕೊಂಡರೇ, ಮತ್ತೆರಡು ದಿನಗಳಲ್ಲೇ, ಅವರ ಎಂದಿನ ಚಾಳಿಯಂತೆ, ತಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿಯೂ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿಯೂ ದಿನಕ್ಕೊಂದು ಹೇಳಿಕೆ ನೀಡುತ್ತಾ, ಜನರನ್ನು ದಿಕ್ಕು ತಪ್ಪಿಸುವುದೇ ಅವರ ಕಾಯಕವಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

WhatsApp Image 2023-02-04 at 23.26.26ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೇಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಅಧಿಕಾರದ ಸವಿಯನ್ನುಂಡಿರುವ ಕುಮಾರಸ್ವಾಮಿ ಈಗ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರಕ್ಕೇರಲು ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಎಂಬ ಎಂದೂ ಸಾಧಿಸಲಾಗದ, ಅಂಗೈಯಲ್ಲಿ ಅರಮನೆ ತೋರಿಸುವ ಯೋಜನೆಗಳ ರಥಯಾತ್ರೆ ನಡೆಸುತ್ತಾ, ತನ್ನದೇ ಹಣದಲ್ಲಿ ಸಾವಿರಾರು ಜನರನ್ನು ದಿನಗೂಲಿ ಲೆಖ್ಖದಲ್ಲಿ ತಿಂಡಿ, ಊಟ ಕುಡಿತ ನೀಡಿ ಕರೆತಂದು ಅವರಿಂದ ದಿನಕ್ಕೊಂದು ರೀತಿಯ ಹಾರಗಳನ್ನು ಹಾಕಿಸಿಕೊಳ್ಳುತ್ತಾ, ಲಿಮ್ಕಾ, ಗಿನ್ನೆಸ್ ಬುಕ್ ರೆಕಾರ್ಡ್ ಮಾಡುತ್ತಿರುವಾಗಲೇ, ಮುಂದಿನ ಬಾರಿ ಮುಖ್ಯಮಂತ್ರಿ ಆಗುವ ಅವರ ಆಸೆಗೆ ಅವರ ಕುಟುಂಬದ ಕಡೆಯಿಂದಲೇ ತಣ್ಣಿರು ಎರೆಚುವ ಕಾರ್ಯು ಆರಂಭವಾಗಿರುವುದು ವಿಷಾಧನೀಯವಾಗಿದೆ.

WhatsApp Image 2023-02-02 at 13.17.20ಜನತಾದಳದ ರಾಜ್ಯಾಧ್ಯಕ್ಷರು ಯಾರೇ ಆಗಲೀ ಅಧಿಕಾರವೆಲ್ಲವೂ ನಮ್ಮದೇ ಎನ್ನುವುದನ್ನು ಸಾಭೀತು ಮಾಡುವಂತೆ ಕುಮಾರಸ್ವಾಮಿಯವರ ಅಧಿಕೃತ ಧರ್ಮಪತ್ನಿ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ಎಲ್ಲಿದ್ದಿಯಪ್ಪಾ ನಿಖಿಲ್? ಎಂದು ಕೇಳುವಂತಾಗಿರುವ ಮಗನಿಗೆ ತ್ಯಾಗ ಮಾಡಿದರೆ, ಈಗಾಗಲೇ ತಮ್ಮ ಪತಿ ವಿಧಾನ ಸಭಾ ಸದ್ಯಸ್ಯ, ಹಿರಿಯ ಮಗ ವಿಧಾನ ಪರಿಷತ್ ಸದಸ್ಯ, ಕಿರಿಯ ಮಗ ಹಾಸನದ ಸಾಂಸದನಾಗಿದ್ದರೂ, ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಈ ಬಾರಿ ವಿಧಾನ ಸಭೆಗೆ ಸ್ಪರ್ಧಿಸುವುದಾಗಿ ಸ್ವಂತವಾಗಿ ಘೋಷಿಸಿಕೊಂಡು ಪಕ್ಷಾಧ್ಯಕ್ಷ ಇಬ್ರಾಹಿಂ ಮತ್ತು ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಕೇವಲ ನಾಮಕಾವಸ್ಥೆ ಎಂಬುದನ್ನು ಎಲ್ಲರ ಮುಂದೆ ತೋರಿಸುವ ಮೂಲಕ ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ.

ಇದನ್ನೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕುಮಾರಸ್ವಾಮಿಯವರಿಗೆ ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು ಎಂಬ ಕಿವಿಮಾತನ್ನು ಸೂಚ್ಯವಾಗಿ ಹೇಳಿರುವುದೇ ಮಹಾಪರಾಧ ಎಂದು ಭಾವಿಸಿಸಿದ ಕುಮಾರಸ್ವಾಮಿ ಬಾಯಿಗೆ ಬಂದಂತೆ ಪ್ರಹ್ಲಾದ್ ಜೋಶಿಯವರ ವಯಕ್ತಿಕವಾಗಿ ಟೀಕಿಸುವ ಭರದಲ್ಲಿ BJP ಅಧಿಕಾರಕ್ಕೆ ಬಂದಲ್ಲಿ ಪ್ರಹ್ಲಾದ್ ಜೋಶಿ ಎಂಬ ಈ ಬ್ರಾಹ್ಮಣನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದಿರುವುದು ಕೇವಲ ಜೋಶಿಯವರಿಗೆಷ್ಟೇ ಮಾಡಿದ ಅವಮಾನವಾಗಿರದೇ, ಇಡೀ ಬ್ರಾಹ್ಮಣರಿಗೇ ಮಾಡಿದ ಅಪಮಾನವಾಗಿದೆ.

kummiಹಿಂದೊಮ್ಮೆ ಪುರೋಹಿತರು ತಟ್ಟೇ ಕಾಸಿಗೆ ಪೂಜೆ ಮಾಡುತ್ತಾರೆ ಎಂದ್ದಿದ್ದ ಮತ್ತು ಕೆಲ ದಿನಗಳ ಹಿಂದೆ ಪುರೋಹಿತರು ಸ್ವಾರ್ಥಿಗಳು ಎನ್ನುವ ಅರ್ಥದಲ್ಲಿ ನಾಲಿಗೆ ಹರಿಬಿಟ್ಟಿದ್ದ, ಪರೀಕ್ಷೆಯಲ್ಲಿ ಕಾಪಿ ಮಾಡುವಾಗ ಸಿಕ್ಕಿಹಾಕಿಕೊಂಡು ಮೇಷ್ಟ್ರ ಕೈ ಕಚ್ಚಿ ಓಡಿಹೋಗಿ, ನಂತರ ಸಿನಿಮಾ ಪ್ರದರ್ಶಕರಾಗಿ ಬಿಬಿಎಂಪಿ ಕಸ ಬಾಚುತ್ತಿದ್ದ ಕುಮಾರ ಸ್ವಾಮಿ ತನ್ನ ಸ್ವಂತಿಕೆ ಇಲ್ಲದೇ, ಅಪ್ಪನ ಹೆಸರು ಮತ್ತು ಜಾತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕುಮಾರ ಸ್ವಾಮಿ, ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿ ಜನರ ಮಧ್ಯೆಯೇ ಇದ್ದುಕೊಂಡು 2004 ರಿಂದಲೂ ತನ್ನ ಸ್ವಂತ ಬಲದಿಂದ ನಿರಂತರವಾಗಿ ಸಾಂಸದರಾಗಿ ಅಯ್ಕೆಯಾಗಿ ಈಗ ಕೇಂದ್ರದಲ್ಲಿ ಗಣಿಗಾರಿಕೆ ನಂತರ ಪ್ರಸ್ತುತ ಸಂಸದೀಯ ವ್ಯವಹಾರಗಳ ಸಚಿವರಾಗಿ ಅಪಾರ ಜನಮನ್ನಣೆಗಳಿರುವ ಪ್ರಹ್ಲಾದ್ ಜೋಶಿಯವರ ಬಗ್ಗೆ ಮಾತನಾಡುವ ಅರ್ಹತೆಯೇ ಇಲ್ಲಾ.

ಈ ರಾಜ್ಯದ ಮುಖ್ಯಮಂತ್ರಿ ಪಟ್ಟ ಎನ್ನುವುದು ರಾಜ್ಯದ ಪ್ರಭಲ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರಿಗಷ್ಟೇ ಸೀಮಿತವೇ? ಹಾಗಾದರೆ ಮಾತಿಗೆ ಮುಂಚೆ ಅಂಬೇಡ್ಕರ್ ಸಂವಿಧಾನ, ಜಾತ್ಯಾತೀತತೇ, ಧರ್ಮ ನಿರಪೇಕ್ಷತೆ ಎಂದು ಗಂಟೆಗಟ್ಟಲೆ ಬಡಾಯಿ ಕೊಚ್ಚುವ ಕುಮಾರಸ್ವಾಮಿಯರೇ ಬ್ರಾಹ್ಮಣರು ಈ ರಾಜ್ಯದ ಮುಖ್ಯಾಮಂತ್ರಿಗಳು ಏಕಾಗಬಾರದು? ಅಂದು ಬ್ರಿಟೀಷರು ಧರ್ಮದ ಹೆಸರಿನಲ್ಲಿ ಈ ದೇಶವನ್ನು ಒಡೆದು ಹಾಕಿದರೆ, ಇಂದು ನಿಮ್ಮಂತಹ ಸ್ವಾರ್ಥಿಗಳು ನಿಮ್ಮ ಅಧಿಕಾರಕ್ಕಾಗಿ ಜಾತಿ, ಉಪಜಾತಿಗಳ ಹೆಸರಿನಲ್ಲಿ ಒಡೆಯಲು ಮುಂದಾಗಿರುವುದನ್ನು ರಾಜ್ಯದ ಜನರು ಅದರಲ್ಲೂ ಹಿಂದೂಗಳು ಗಮನಿಸುತ್ತಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ತಮ್ಮ ಉತ್ತರವನ್ನು ನೀಡಲು ಸಿದ್ದವಾಗಿದ್ದಾರೆ. ವಚನಭ್ರಷ್ಟ ಎಂದು ಬಾರೀ ಬಾರಿ ಸಾಬೀತು ಮಾಡಿರುವ ನೀವು ಮತ್ತು ನಿಮ್ಮ ಕುಟುಂಬ (ಒಪ್ಪಂದದಂತೆ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಕೊಡದೇ ಹೋದದ್ದು, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇವೇಗೌಡರು ಮತ್ತು ರೇವಣ್ಣ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದಿದ್ದು ) ಈಗ ನೀವೇ ಹೇಳಿದಂತೆ ನಿಮ್ಮ ಪಕ್ಷ ಅಧಿಕಾರಕ್ಕೆ ಬಾರದೇ ಹೋದಲ್ಲಿ ನಿಮ್ಮ ಪಕ್ಷವನ್ನು ವಿಸರ್ಜನೆ ಮಾಡಲು ಸಿದ್ಧರಾಗಿರಿ. ನಿರ್ಗಮಿಸಲು ಅನೇಕ ದಾರಿಗಳಿವೆ. ಆದರೆ ಬದುಕಲು ಇರುವುದು ಒಂದೇ ದಾರಿ. ಅದನ್ನೇ ಆತ್ಮವಿಶ್ವಾಸ ಎನ್ನುವುದು ಹಾಗಾಗಿ ಸ್ವಾಭಿಮಾನಿಗಳಾಗಿ ನಮ್ಮ ಶಕ್ತಿಯಿಂದ ಅಧಿಕಾರಕ್ಕೆ ಬರಬೇಕೇ ಹೊರತು, ದ್ವೇಷ, ಅಸೂಯೆ, ಪರಸ್ವಪ ವಯಕ್ತಿಕ ನಿಂದನೆ ಮಾಡಿ ನಂತರ ಹಿಂಬಾಗಿಲಿನಿಂದ ಜನಾದೇಶಕ್ಕೆ ವಿರುದ್ಧವಾಗಿ ಅಧಿಕಾರಕ್ಕೆ ಬರುವುವರು ವೀರರೂ ಅಲ್ಲಾ ಶೂರರಂತೂ ಅಲ್ಲವೇ ಅಲ್ಲಾ. ಅಂತಹವರನ್ನು ಅಧಿಕಾರದ ದಲ್ಲಾಳಿ ಎನ್ನುತ್ತಾರೆ.

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

 1. ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದು ಎನ್ನುವ ರೀತಿಯಲ್ಲಿ ಮಾತನಾಡಿದರೂ ಅದನ್ನು ಪ್ರತಿಭಟಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯವರು ಯಾತಕ್ಕೆ ಹೇಳಿಕೆ ಕೊಟ್ಟಿಲ್ಲ? ಬ್ರಾಹ್ಮಣ ಸಂಘಟನೆಗಳೂ ಯಾಕೆ ಸುಮ್ಮನಿವೆ ಎಂಬದು ಅರ್ಥವಾಗುತ್ತಿಲ್ಲ. ಬೇರೆ ಜನಾಂಗದವರ ಬಗ್ಗೆ ಹೀಗೆ ಹೇಳಿದ್ದರೆ ದೊಡ್ಡ ಹೋರಾಟವೇ ಪ್ರಾರಂಭವಾಗುತ್ತಿತ್ತು.

  Liked by 1 person

  1. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)

   ಪತ್ರಿಕಾ ಪ್ರಕಣೆಗಾಗಿ:
   ದಿನಾಂಕ: 06/02/2023

   ಇತ್ತೀಚಿಗೆ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಮಾನ್ಯ ಕೇಂದ್ರ ಮಂತ್ರಿಗಳಾದ ಶ್ರೀ ಪ್ರಹ್ಲಾದ ಜೋಶಿ ಅವರನ್ನು ಟೀಕೆ ಮಾಡುವ ಸಂಧರ್ಭದಲ್ಲಿ ಅವರು ಗಾಂಧೀಜಿ ಅವರನ್ನು ಕೊಂದ ಸಮುದಾಯದವರೆಂದು ಹಾಗು ಮಹಾರಾಷ್ಟ್ರ ಮೂಲದ ಪೇಶ್ವೇಗಳಾಗಿ ಸೇವೆ ಸಲ್ಲಿಸಿದ ದೇಶಸ್ಥ ಬ್ರಾಹ್ಮಣರೆಂದು ಉಲ್ಲೇಖಿಸಿದ್ದಾರೆ.

   ಶ್ರೀ ಪ್ರಹ್ಲಾದ ಜೋಶಿ ಅವರು ಎಲ್ಲರಿಗೂ ತಿಳಿದಿರುವ ಹಾಗೆ ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದ ಉತ್ತರಾಧಿಮಠದ ಅನುಯಾಯಯಿಗಳು. ಇವರು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದು ಮಹಾರಾಷ್ಟ್ರಕ್ಕೆ ಸೇರಿದವರಲ್ಲ. ಜೋಶಿ ಅವರು ರಾಜಕೀಯದಲ್ಲಿ ತಮ್ಮದೇ ಆದ ಗೌರವವನ್ನು ಸಂಪಾದಿಸಿದ್ದಾರೆ, ಅರ್ಹತೆಯೇ ಮಾನದಂಡವಾದಲ್ಲಿ ಜೋಶಿ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಕೇವಲ ಜಾತಿಯ ಆಧಾರದ ಮೇಲೆ ವೈಯಕ್ತಿಕ ಟೀಕೆ ಸೂಕ್ತವಲ್ಲ ಅವರ ಹಾಗು ಅವರ ಪಕ್ಷದ ರಾಜಕೀಯ ನಿಲುವುಗಳನ್ನು ಪ್ರಶ್ನಿಸಬಹುದು ಆದರೆ ಜಾತಿ ಆದರದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ.

   ಹಿಂದೆ ನಡೆದು ಹೋದ ಗಾಂಧಿ ಹತ್ಯೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಎಷ್ಟು ಸರಿ? ನೂರಾರು ವರುಷಗಳ ಹಿಂದೆಯೇ ಕರ್ನಾಟದ ನಾನಾ ಭಾಗಗಳಲ್ಲಿ ಬಂದು ನೆಲೆಸಿರುವ ಚಿತ್ಪಾವನ ಹಾಗು ದೇಶಸ್ಥ ಬ್ರಾಹ್ಮಣರು ನಮ್ಮ ನಾಡು ನುಡಿಯೊಂದಿಗೆ ಬೆರೆತು ಕನ್ನಡಿಗರೇ ಆಗಿ ಹೋಗಿದ್ದಾರೆ , ಉದಾಹರಣೆಗೆ ಚಿತ್ಪಾವನರಾದ ವರ ಕವಿ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾರೆವು .ಅಷ್ಟೇ ಅಲ್ಲ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕೆ ಆಲೂರ ವೆಂಕಟರಾಯರು ಸಂಕಲ್ಪಿಸಿದಾಗ ಅವರ ಈ ಸಂಕಲ್ಪಕ್ಕೆ ಅಂದು ಸಂಸತ್ತಿನಲ್ಲೇ ಸಂಪೂರ್ಣ ಬೆಂಬಲ ಘೋಷಿಸಿದವರು ಚಿತ್ಪಾವನ ಮುಖಂಡರೇ. ಭೂದಾನದಂತ ಮಹಾ ಯಜ್ನ್ಯ ವನ್ನು ಕೈಗೊಂಡ ವಿನೋಬಾ ಭಾವೆ ಅವರು ಕೂಡ ಚಿತ್ಪಾವನರೇ. ನಾಥುರಾಂ ಗೋಡ್ಸೆ ಎಂಬ ದಾರಿ ತಪ್ಪಿದ ದೇಶ ಭಕ್ತನೊಬ್ಬ ಗಾಂಧಿಯನ್ನು ಕೊಂದನೆಂದು ಆ ಸಮುದಾಯಕ್ಕೆ ಸೇರಿದ ಎಲ್ಲರನ್ನು ದೋಷಿಗಳಂತೆ ನೋಡುವುದು ಸಮಂಜಸವಲ್ಲ. ಹಾಗೆ ಮಾಡಿದರೆ ಚಿತ್ಪಾವನ ಬ್ರಾಹ್ಮಣ ಸಮಾಜದ ಸ್ವತಂತ್ರ ಹೋರಾಟಗಾರರಾದ ಚಾಪೇಕರ ಸಹೋದರರು , ಬಲವಂತ ಫಡಕೆ , ಸಾವರ್ಕರ್, ಜಸ್ಟಿಸ್ ರಾನಡೆ , ಅಚ್ಚುತ ಪಟವರ್ಧನ್,ಕಾಕಾಸಾಹೇಬ್ ಗಾಡ್ಗಿಳ್, ರಾವ್ ಸಾಹೇಬ್ ಪಟವರ್ಧನ್, ಲಿಮಯೆ, ಸೇನಾಪತಿ ಬಾಪಟ್, ಅನಂತ್ ಕಾನ್ಹೆರೆ, ತಾತ್ಯಾ ಟೋಪೆ, ಮಹದೇವ್ ರಾನಡೆ ಹಾಗು ಗಾಂಧೀಜಿಯವರ ಗುರುಗಳಾದ ಗೋಖಲೆ , ಸ್ವರಾಜ್ಯದ ಕಲ್ಪನೆಯನ್ನು ಬಿತ್ತಿದ ತಿಲಕರು ಇವರೆಲ್ಲರ ರಾಷ್ಟ್ರ ಭಕ್ತಿಯನ್ನೇ ಪ್ರಶ್ನಿಸದ ಹಾಗಾಗುತ್ತದೆ.

   ಪ್ರಸ್ಥಾನತ್ರಯವನ್ನು ಅರ್ಥೈಸಿಕೊಳ್ಳುವ ಮಾರ್ಗದಲ್ಲಿ ಸ್ಮಾರ್ತರಲ್ಲಿ , ವೈಷ್ಣವರಲ್ಲಿ , ಶ್ರೀ ವೈಷ್ಣವರಲ್ಲಿ ಕೆಲವು ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೂ ಎಲ್ಲಾ ತ್ರಿಮತಸ್ಥ ಆಚಾರ್ಯರು ಸನಾತನ ಧರ್ಮದ ರಕ್ಷಣೆ ಹಾಗು ಪೋಷಣೆಗೆ ಕಾರಣೀಭೂತರಾಗಿದ್ದಾರೆ , ಎಲ್ಲಾ ಆಚಾರ್ಯರು ಸಹ ಸಮಸ್ತ ಮನುಕುಲದ ಶ್ರೇಯಸ್ಸನ್ನೇ ಆಶಿಸಿದ್ದಾರೆ.

   ಶ್ರೀ ಕುಮಾರಸ್ವಾಮಿ ಅವರು ಅದರಲ್ಲೂ ದೇವೇಗೌಡರ ಕುಟುಂಬದವರು ಸನಾತನ ಧರ್ಮವನ್ನು ಗೌರವಿಸುವವರಾಗಿದ್ದಾರೆ . ಶೃಂಗೇರಿ ಮಠದ ಪರಂಪರೆಯಲ್ಲಿ ಅತ್ಯಂತ ಭಕ್ತಿ ಹಾಗು ಶ್ರದ್ದೆಯನ್ನು ಹೊಂದಿದವರಾಗಿದ್ದಾರೆ . ಈ ಹಿಂದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ನಗರದ ಮಧ್ಯ ಭಾಗದಲ್ಲಿ ನಿವೇಶನ ಮಂಜೂರು ಮಾಡುವ ವಿಷಯದಲ್ಲಿ ಹಾಗು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಯಲ್ಲಿ ಕುಮಾರಸ್ವಾಮಿ ಅವರ ಪಾತ್ರ ಮಹತ್ವವಾದದ್ದು ಆದ್ದರಿಂದ ವಿಪ್ರ ಸಮುದಾಯ ಇಂದಿಗೂ ದೇವೇಗೌಡರ ಕುಟುಂಬದ ಬಗ್ಗೆ ಸದಾಶಯವನ್ನು ಹೊಂದಿದೆ.

   ಆದರೆ ಶ್ರೀ ಕುಮಾರಸ್ವಾಮಿ ಅವರ ಸಮುದಾಯದ ಬಗೆಗಿನ ಟೀಕೆಗಳು ವಿಪ್ರ ಸಮುದಾಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ. ರಾಜಕೀಯ ವಿರೋಧಿಗಳ ಟೀಕೆ ಮಾಡುವ ಭರದಲ್ಲಿ ಸಮುದಾಯದ ಹೆಸರನ್ನು ಎಳೆದು ತಂದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರುವ ವಿಷಯವಲ್ಲ.

   ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನುಅಲಂಕರಿಸುವ ಆಕಾಂಕ್ಷೆ ಹೊಂದಿರುವ ಶ್ರೀ ಕುಮಾರಸ್ವಾಮಿ ಅವರು ಎಲ್ಲಾಸಮುದಾಯಗಳನ್ನು ಒಟ್ಟಿಗೆ ತೆಗೆದು ಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ಮರೆಯಬಾರದು.

   ಶ್ರೀ ಅಶೋಕ ಹಾರನಹಳ್ಳಿ, ಅಧ್ಯಕ್ಷರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s