ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಅದೇಕೋ ಏನೋ ಕರ್ನಾಟಕದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ  ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಹಿಂದೂ ವಿರೋಧಿಗಳು ಏಕಾಏಕಿ ಜಾಗೃತರಾಗಿ ಹಿಂದೂ ವಿರೋಧಿ ಕೃತ್ಯಗಳಲ್ಲಿ ಭಾಗಿಗಳಾಗಗುತ್ತಿರುವುದು ಭಾವೈಕ್ಯತೆಗೆ ಧಕ್ಕೆ ತರುವಂತಿದೆ.  2023ರ ಮೇ ತಿಂಗಳಿನಲ್ಲಿ ಕೇವಲ ಗ್ಯಾರಂಟಿ ಎಂಬ ಉಚಿತಗಳ ಆಮೀಷಗಳ ಮೂಲಕ ಅಧಿಕಾರಕ್ಕೆ ಬಂದ ಈ ಕಾಂಗ್ರೇಸ್ ಸರ್ಕಾರ ಕೇವಲ 10-11 ತಿಂಗಳುಗಳಲ್ಲಿ ಹೆಜ್ಜೆ ಹೆಜ್ಜೆಗೂ ತಪ್ಪನ್ನು ಎಸಗುತ್ತಾ, ಹಿಂದೂ ವಿರೋಧಿ ಧೋರಣೆಗಳ ಮೂಲಕ ಥೂ!, ಛೇ!! ಇಂತಹ ದರಿದ್ರ ಸರ್ಕಾರವನ್ನು ಆರಿಸುವ ಮೂಲಕ ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದ ಹಾಗಾಯ್ತು ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.

mari_khargeಅಧಿಕಾರಕ್ಕೆ ಬಂದ ನಂತರ ಕೋಟಾ ಪದ್ದತಿಯಲ್ಲಿ ತಂದೆಯವರ ಅರ್ಹತೆಯ ಮೇಲೆ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಅಂತಹ ಪಿಯೂಸಿ ಫೇಲ್ ಆದವರನ್ನು ಮಂತ್ರಿಗಳನ್ನಾಗಿ ಮಾಡಿದ ಮೇಲಂತೂ ಜನರಿಗೆ ಈ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗಿದ್ದಕ್ಕೆ ಪುಷ್ಟಿಕೊಡುವಂತೆ ಹಿಂದಿನ ಸರ್ಕಾರ ಭಾರತದ ಹಿರಿಮೆ ಮತ್ತು ಗರಿಮೆಗಳನ್ನು ಎತ್ತಿಹಿಡಿಯುವಂತಹ ಪಠ್ಯ ಕ್ರಮವನ್ನು ಅಳವಡಿಸಿದ್ದರೆ, ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಹಾಗೆ ಜಾರಿಗೆ ತಂದಿದ್ದ ಪಠ್ಯಪುಸ್ತಕವನ್ನು ಕಿತ್ತು ಬಿಸಾಕಿದ್ದೇವೆ ಎಂದು ಉದ್ಧಟತನದಿಂದ ಮಾತನಾಡುವ ಮಧು ಬಂಗಾರಪ್ಪ ಮತ್ತು ತನ್ನ ಖಾತೆಯನ್ನು ಬಿಟ್ಟು ಉಳಿದೆಲ್ಲಾ ಮಂತ್ರಿಗಳ ಖಾತೆಗಳಲ್ಲೂ ಅನಗತ್ಯವಾಗಿ ಮೂಗು ತೂರಿಸುತ್ತಾ, ಹಿಂದೂಪರ ಕಾರ್ಯಕರ್ತರನ್ನು ಒದ್ದು ಒಳಗೆ ಹಾಗುತ್ತೇವೇ ಎಂದು ಬೊಬ್ಬಿರುವ ಪ್ರಿಯಾಂಕ್ ಖರ್ಗೆ ಮತ್ತು ಸಿನಿಮಾ ಡೈಲಾಗ್ ಮೂಲಕ ಅಚಾನಕ್ ಆಗಿ ಆಯ್ದೆಯಾದ ಚಿಕ್ಕಬಳ್ಳಾಪುರದ ಪಿಯೂಸಿ ಪಾಸ್ ಬಫೂನ್ ಪ್ರದೀಪ್ ಈಶ್ವರ್ ಅವರ ಕಾಟದಿಂದ ಜನರು ಹೈರಾಣಾಗಿರುವುದು ಸ್ಪಷ್ಟವಾಗಿದೆ.

mud32024 ರ ಏಪ್ರಿಲ್ ತಿಂಗಳಿನಲ್ಲಿ ಸ್ವಯಂಘೋಘಿತ  ಅತೀ ಬುದ್ದಿವಂತ ಶಾಸಕ ಪ್ರದೀಪ್ ಈಶ್ವರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರ ಮತ್ತು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರು  ಮುದ್ದೇನಹಳ್ಳಿಯಯ ಅವರ ಮನೆಯ ಮುಂಭಾಗದಲ್ಲಿನ ಡಿಜಿಟಲ್ ಗ್ರಂಥಾಲಯದ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಅವರ ವಾಕ್ಯ ಎಂದು ಒಂದು  ಮಂದಿರ ಕಟ್ಟಿಸಿದರೆ ಸಾವಿರ ಬಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವನ್ನು ಬರೆಯಲಾಗಿತ್ತು.  ಗ್ರಂಥಾಲಯಕ್ಕೆ ಬಂದಿದ್ದ ಓದುಗರೊಬ್ಬರು ಈ ಬರಹವನ್ನು ನೋಡಿ ಅರೇ, ಈ ರೀತಿಯ ಬರಹ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ಆಗುವುದಿಲ್ಲವೇ? ಒಂದು ದೇವಾಲಯ ಕಟ್ಟಿದರೆ  ಸಾವಿರ ಬಿಕ್ಷುಕರು ಹುಟ್ಟುಕೊಳ್ಳುತ್ತಾರೆ ಎಂಬ ಬರಹ ಎಷ್ಟರಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದದ್ದು, ಎಂದಿನಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನ, ಈ ಸರ್ಕಾರಕ್ಕೆ ಜನ ಥೂ! ಛೀ! ಎಂದು ಶಾಪ ಹಾಕಿದ್ದಲ್ಲದೇ, ಈ ಕುರಿತಾಗಿ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ದೂರು ಕೊಟ್ಟು ಸಂಬಂಧ ಪಟ್ಟ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಟೀಕೆಗಳು ಎದುರಾದಾಗ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಈ ಬರಹವನ್ನು ಅಳಿಸಿ ಹಾಕಿ, ಹಿಂದೂಗಳ ಧಾರ್ಮಿಕ ಭಾವನೆ ಆಕ್ರೋಶಕ್ಕೆ ತಣ್ಣಗಾಗಿಸಲು ಹರ ಸಾಹಸ ಪಡುತ್ತಿರುವುದು ಹಾಸ್ಯಾಸ್ಪದವಾಗಿದೆ.

gurukulaನಿಜ ಹೇಳಬೇಕೆಂದರೆ, ಹಿಂದಿನ ಕಾಲದಲ್ಲಿ ಭಾರತಾದ್ಯಂತ ಇರುವ ಬಹುತೇಕ ಹಿಂದೂ ದೇವಾಲಯಗಳು ಕೇವಲ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿಯಷ್ಟೇ ಆಗಿದ್ದಲ್ಲದೇ, ಅದು ವಿದ್ಯಾ ಕೇಂದ್ರ ಮತ್ತು ದಾಸೋಹ ಕೇಂದ್ರವಾಗಿತ್ತು. ದೇವಾಲಯದ ಸುತ್ತಮುತ್ತಲಿನ ಹತ್ತಾರು ವಿದ್ಯಾರ್ಥಿಗಳಿಗೆ ಅದು ಗುರುಕುಲವಾಗಿ ಅಲ್ಲಿ ಯಾವುದೇ ಜಾತಿ, ಧರ್ಮ, ಅಧಿಕಾರ, ಆಸ್ತಿ ಅಂತಸ್ತುಗಳ ತಾರತಮ್ಯವಿಲ್ಲದೇ ಉಚಿತವಾಗಿ ಊಟ ವಸತಿಯೊಂದಿಗೆ ವಿದ್ಯಾಭ್ಯಾಸವನ್ನು ಕಲಿಸುವಂತಹ ವ್ಯವಸ್ಥೆ ಇತ್ತು ಎಂದು ವಿದೇಶೀ ಇತಿಹಾಸಕರರೇ ಹೇಳಿರುವ ಸತ್ಯವನ್ನು ಬದಿಗಿಟ್ಟು ಅನಗತ್ಯವಾಗಿ ಅಂಬೇಡ್ಕರ್ ಅವರು  ಹೆಸರಿಗೆ ಕಳಂಕ ತರುವಂತಹ ಹೇಳಿಕೆಯನ್ನು ಬರೆಸುವ ಮೂಲಕ ಜಾತಿ ಜಾತಿಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕಲು ಪ್ರಸ್ತುತ ಸರ್ಕಾರ ಪ್ರಯತ್ನಿಸುತ್ತಿರುವುದು ಅತ್ಯಂತ ಖಂಡನಾರ್ಹವಾಗಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ಕೆಲ ತಿಂಗಳುಗಳ ಹಿಂದೆ ಸರ್ಕಾರೀ ಶಾಲೆಗಳು ಮತ್ತು ಹಾಸ್ಟೆಲ್ಲುಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹೊರತು ಪಡಿಸಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲಾ ಎಂಬ ಆದೇಶ ಹೊರಡಿಸಿ ಅದಕ್ಕೆ ಅಕ್ಷೇಪಣೇ ವ್ಯಕ್ತವಾಗುತ್ತಿದ್ದಂತೆಯೇ ಅದೇ ಸಂಜೆಯೇ ತನ್ನ ಆದೇಶವನ್ನು ಹಿಂದುರಿಗೆ ಪಡೆದಿತ್ತು. ಇದಕ್ಕೆ ಪೂರಕ  ಕೊಡುವಂತೆ  ಗುಲ್ಬರ್ಗಾದ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಹತ್ತಾರು ವರ್ಷಗಳಿಂದ ಅನೂಚಾನವಾಗಿ ನಡೆಸುಕೊಂಡು ಬರುತ್ತಿದ್ದ ವಸಂತ ಪಂಚಮಿ ಆಚರಣೆಯನ್ನು ವಿರೋಧಿಸುತ್ತಾ, ಇದೇನು ವಿಶ್ವವಿದ್ಯಾಲಯವೋ? ಇಲ್ಲಾ ಹಿಂದೂ ದೇವಸ್ಥಾನವೋ? ಎಂದು ಅಬ್ಬಿರಿದು ಬೊಬ್ಬಿರಿದ್ದ ವಿಡಿಯೋ ವೈರಲ್ ಆಗಿದ್ದಕ್ಕೂ ಪರೋಕ್ಷವಾಗಿ ಕಮ್ಯೂನಿಸ್ಟ್ ವಿದ್ಯಾರ್ಥಿ ಸಂಘಟನೆ ಮತ್ತು ಕಾಂಗ್ರೇಸ್ ಪಕ್ಷದ ಬೆಂಬಲ ಇತ್ತೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

WhatsApp Image 2024-02-19 at 15.27.54ಗುರು ಹಿರಿಯರಿಗೆ, ಮಠ ಮಾನ್ಯಗಳಿಗೆ ಕೈ ಮುಗಿದು ನಮಸ್ಕಾರ ಮಾಡುವುದು ಅನೂಚಾನವಾಗಿ ನಡೆದುಕೊಂಡು ಬಂದಿರುವಂತಹ ನಮ್ಮ ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಆದರೆ, ಸಿದ್ದರಾಮಯ್ಯನವರ ಪ್ರಸ್ತುತ ಸರ್ಕಾರ ಆಡಳಿತಕ್ಕೆ ಬಂದ ನಂತರ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳಿಗೆ ಕೈ ಮುಗಿದು ಒಳಗೆ ಬರುವುದು ಹಿಂದೂ ಗುಲಾಮಿಗಿರಿಯ ಪದ್ದತಿ ಹಾಗಾಗಿ ಅದನ್ನು ಬದಲಿಸಬೇಕೆಂಬ ಆಲೋಚನೆ ಬಂದ ಕೂಡಲೇ, ಮಣಿವಣ್ಣನ್ ಎಂಬ IAS ಅಧಿಕಾರಿ ತಮ್ಮ ಅಧೀನದ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಬರುವ ಎಲ್ಲಾ ವಸತಿ ಗೃಹಗಳಲ್ಲಿಯೂ ಮೌಕಿಕ ಮತ್ತು WhatsApp ಆದೇಶದ ಮೇರೆಗೆ, ಹತ್ತಾರು ವರ್ಷಗಳಿಂದಲೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಧ್ಯೇಯ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಯಿಸಿದ್ದದ್ದು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿ ಅದೊಂದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಸರಕಾರ ಇದರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಲ್ಲದೇ, ಇಂತಹ ಆದೇಶವನ್ನು ನಾವು ಹೊರಡಿಸಿಯೇ ಇರಲಿಲ್ಲ ಎಂದು ಹೇಳಿ ತಿಪ್ಪೇ ಸಾರಿಸಿತು.

ಅದೇ ರೀತಿ ರಾಜ್ಯದ ಹಿರಿಮೆ ಮತ್ತು ಗರಿಮೆಯನ್ನು ಸಾರುವ ಕನ್ನಡ ನಾಡಗೀತೆಯನ್ನು ಖಡ್ಡಾಯವಾಗಿ ರಾಷ್ಟ್ರಗೀತೆಯೊಂದಿಗೆ ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಹಾಡುತ್ತಿರುವುದು ಅನೇಕ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವಿಷಯ ಎಲ್ಲರಿಗೂ ತಿಳಿದೇ ಇದೇ. ಅದೇಕೋ  ಏನೋ ಈ ಕಾಂಗ್ರೇಸ್ ಸರ್ಕಾರ ಬರುತ್ತಿದ್ದಂತೆಯೇ  ಖಾಸಗೀ ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡಗೀತೆಯ ಖಡ್ಡಾಯವಲ್ಲಾ ಎಂಬ ಆದೇಶ ಬೆಳಿಗ್ಗೆ ಜಾರಿಗೆ ಆಗಿ ಮಧ್ಯಾಹ್ನ ಅದರ ಕುರಿತಾಗಿ ವಿವಾದವಾಗುತ್ತಿದ್ದಂತೆಯೇ, ಮತ್ತೆ ತನ್ನ ಆದೇಶವನ್ನು ಹಿಂಪಡೆಯುವ ಮೂಲಕ ಮೊಹಮ್ಮದ್ ಬಿನ್ ತುಘಲಕ್ ಆಡಳಿತವನ್ನು ನೆನಪು ಮಾಡಿಸಿದ್ದಂತೂ ಸುಳ್ಳಲ್ಲಾ.

jaishreeramಇಷ್ಟೆಲ್ಲಾ ಅಪಸವ್ಯಗಳು ಆಡಳಿತಾತ್ಮಕವಾಗಿ ಅಧಿಕಾರಿಗಳ ಮೂಗಿನ ತುದಿಯಲ್ಲಿ ನಡೆಯುತ್ತಿದ್ದರೆ, ಮೊನ್ನೆ ಶ್ರೀರಾಮ ನವಮಿಯಂದು ವಿದ್ಯಾರಣ್ಯಪುರ ಪೋಲೀಸ್ ಠಾಣೆಯ ವ್ಯಾಪ್ತಿಗೆ ಬರುವ  ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಕಾರಿನ ಮೇಲೆ  ಶ್ರೀರಾಮನ ಧ್ವಜ ಕಟ್ಟಿಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂದೆ ಬರುತ್ತಿದ್ದ ಫರ್ಮಾನ್‌, ಸಮೀರ್‌ ಮುಸ್ಲಿಂ ಯುವಕರು  ಕಾರನ್ನು ಅಡ್ಡಗಟ್ಟಿ  ಜೈ ಶ್ರೀರಾಮ್ ಎಂದು ಹೇಳಬಾರದು, ಅಲ್ಲಾ ಹು ಅಕ್ಬರ್ ಹೇಳಬೇಕು ಎಂದು ಬೆದರಿಕೆ ಹಾಕಿರುವ ವೀಡಿಯೋ ಎಲ್ಲೆಡೆಯಲ್ಲಿಯೂ ವೈರಲ್ ಆಗಿದೆ. ಕಾರಿನಲ್ಲಿ ಕುಳಿತಿರುವ ವ್ಯಕ್ತಿ ಅತ್ಯಂತ ವಿನಮ್ರವಾಗಿ ನಿಮ್ಮ ಹಬ್ಬಗಳ ಆಚರಣೆಗೆ ನಾವೇನಾದರೂ ಅಡ್ಡಿ ಮಾಡುತ್ತೇವೆಯೇ? ಎಂದು ಕೇಳುತ್ತಿದ್ದರೂ, ಅದನ್ನು ಕೇಳಲು ತಾಳ್ಮೆ ಇರದ ಆ ಪುಂಡರು NO Jai Shri Ram only Alla hu Akbar ಎಂದು ಧಮ್ಕಿ ಹಾಕುವಷ್ಟು ದಾಷ್ಟ್ಯವನ್ನು ಬೆಳಸಿಕೊಂಡಿರುವುದು  ರಾಜ್ಯದ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತಂದಿದೆ.

WhatsApp Image 2024-03-21 at 14.06.12ಇದೇ ರೀತಿಯಾಗಿ 2024ರ ಮಾರ್ಚ್ 19ರಂದು ಬೆಂಗಳೂರಿನ ಅತ್ಯಂತ ಜನಭರಿತ ಪ್ರದೇಶವಾದ ನಗರ್ತಪೇಟೆಯ ಸಿದ್ಧಣ್ಣ ಗಲ್ಲಿಯ ಮಸೀದಿ ರಸ್ತೆಯಲ್ಲಿ  ಮುಖೇಶ್ (26) ಎಂಬ ಉತ್ತರ ಭಾರತೀಯ ಹಿಂದೂ ಯುವಕನ ಕೃಷ್ಣ ಟೆಲಿಕಾಂ ಎಂಬ ಮೊಬೈಲ್ ಬಿಡಿ ಭಾಗಗಳ ಅಂಗಡಿಯೊಂದರಲ್ಲಿ ತನ್ನ ಪಾಡಿಗೆ ತಾನು  ಹನುಮಾನ್ ಚಾಲೀಸಾ ಆಡಿಯೋ  ಹಾಕಿಕೊಂಡಿದ್ದನ್ನೇ ಮುಂದು ಮಾಡಿಕೊಂಡು ಬಂದ ಕೆಲ ಮುಸ್ಲಿಮ್ ಯುವಕರ ಗುಂಪು, ಮಸೀದಿಯಲ್ಲಿ ಅಜಾನ್ ಕೂಗುತ್ತಿರುವ ವೇಳೆಯಲ್ಲಿ ನಿನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕುವಷ್ಟು ಸೊಕ್ಕೇ ? ಎಂದು ಹೇಳುತ್ತಾ,  ಅಂಗಡಿ ಮಾಲಿಕರಾದ ಶ್ರೀ ಮುಖೇಶ್ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಅತನನ್ನು ಅಂಗಡಿಯಿಂದ ಹೊರೆಗೆಳೆದು ಮನಸೋ ಇಚ್ಚೆ ಥಳಿಸಿರುವುದಲ್ಲದೇ, ಉಗುರುಗಳಿಂದ ಮುಖ ಪರಚಿ, ಕಾಲಿನಲ್ಲಿ ಆತನನ್ನು ಒದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಪೋಲೀಸರು ಕಾಟಾಚಾರಕ್ಕೆ ಆರೋಪಿಗಳನ್ನು ಬಂಧಿಸಿ ನಂತರ ಮುಖೇಶ್ ವಿರುದ್ಧವೇ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೂ ಸಹಾ ಜನರ ಅಕ್ರೋಶಕ್ಕೆ ಕಾರಣವಾಗಿದೆ.

nasir2ಇಷ್ಟೇ ಅಲ್ಲದೇ, 2024ರ ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೇಸ್ ಪಕ್ಷದ ಮೂವರು ಮತ್ತು ಬಿಜೆಪಿಯ ಒಬ್ಬರು ಅಭ್ಯರ್ಥಿಗಳು ವಿಜಯಿ ಎಂದು ಫಲಿತಾಂಶ ಘೋಷಿಸಿದ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರ ಬೆಂಬಲಿಗರು, ವಿಧಾನ ಸೌಧದಲ್ಲಿಯೇ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ  ಕಾಂಗ್ರೇಸ್ ಪಕ್ಷದಿಂದ ರಾಜ್ಯಸಭೆಗೆ ಎರಡನೇ ಬಾರಿ ಆಯ್ಕೆಯಾದ ನಾಸಿರ್ ಹುಸೇನ್ ಅವರ ಬೆಂಬಲಿಗರು ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಭಾರತದ ವಿರೋಧಿ ಪಾಕೀಸ್ಥಾನದ ಪರದ ತಮ್ಮ ಮನಸ್ಥಿತಿಯನ್ನು ಹೊರಹಾಕಿದ್ದರೆ,  ಎಲ್ಲದರಲ್ಲೂ ಮೂಗು ತೂರಿಸಿಕೊಂಡು ಬರುವ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಆ ರೀತಿಯಾಗಿ ಯಾರೂ ಕೂಗೇ ಇಲ್ಲಾ ಎಂದು  ಜನರನ್ನು ತಿಪ್ಪೇ ಸಾರಿಸುವ ಪ್ರಯತ್ನ ಮಾಡಿದರಾದರೂ, ನಂತರ ಬಂದ ತನಿಖಾ ವರದಿಯಲ್ಲಿ  ಆ ರೀತಿಯ ಘೋಷಣೆ ಕೂಗಿರುವುದು ಸತ್ಯ ಎಂದು ಸಾಭೀತಾಗಿ ಆರೋಪಿಗಳ ಬಂಧನವಾದ ಕೆಲವೇ ದಿನಗಳಲ್ಲಿ ಬೇಲ್ ಮೇಲೆ ಹೊರಬಂದಿರುವುದೂ ವಿಪರ್ಯಾಸವಾಗಿದೆ.

nehaಇದಕ್ಕಿಂತಲೂ ಭಯಾನಕವಾದ ಭೀಕರ ಹತ್ಯಾ ಪ್ರಕರಣವೊಂದು ಹುಬ್ಬಳ್ಳಿಯಿಂದ ನೆನ್ನೆಯಷ್ಟೇ ವರದಿಯಾಗಿದ್ದು, ಸ್ಥಳಿಯ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಅವರ ಮಗಳಾದ MCA ವಿದ್ಯಾರ್ಥಿನಿ ನೇಹಾ ಹಿರೇಮಠಳ ಬರ್ಬರ ಕೊಲೆಯಾಗಿದೆ. ಅದೇ ಕಾಲೇಜಿನಲ್ಲಿ BCA ಓದುತ್ತಿರುವ  ವಿದ್ಯಾರ್ಥಿ ಫಯಾಜ್  ನೇಹಳನ್ನು ಪ್ರೀತಿಸುವಂತೆ ಅನೇಕ ದಿನಗಳಿಂದಲೂ ಬೆನ್ನು ಬಿದ್ದಿದ್ದು, ಆಕೆ ಅತನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ  ಹುಬ್ಬಳ್ಳಿಯ BVB ಕಾಲೇಜಿನಲ್ಲೇ ನೇಹಳನ್ನು ಬರ್ಬರವಾಗಿ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿದ್ದು, ಕೊಲೆ ಮಾಡುವ ಸಮಯದಲ್ಲಿ  ಆತನೂ ಸಹಾ ತನ್ನ ಚಹರೆ ತಿಳಿಯಬಾರದೆಂದು ಟೋಪಿಯನ್ನು ಧರಿಸಿಕೊಂಡು ಬಂದಿದ್ದದ್ದು, ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ವೈಟ್ ಫೀಲ್ಡಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿಯಂತೆಯನ್ನೇ ಅನುಸಿರಿಸುವುದು  ಆತಂಕವನ್ನು ಹೆಚ್ಚಿಸಿದೆ.

ಪ್ರಸಕ್ತ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ 10-11  ತಿಂಗಳುಗಳಲ್ಲಿ ತಳೆದಿರುವ ಹಿಂದೂ ವಿರೋಧಿ ಧೋರಣೆಗಳು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿ ಈ ರೀತಿಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ

  • ಹಿಜಾಬ್ ನಿಷೇಧವನ್ನು ಹಿಂಪಡೆಯುವುದಾಗಿ ಘೋಷಿಸುವುದು
  • ಕಾಂಗ್ರೇಸ್ ಪಕ್ಷದ ಏಕೈಕ ಸಂಸದರೇ ದೇಶ ವಿಭಜನೆಯ ಬಗ್ಗೆ ಮಾತನಾಡುವುದು
  • ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ಹೇರುವುದು
  • ಹಿಂದೂಗಳ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಳಸುವುದು
  • ಸಂವಿಧಾನದ ದಿನದಂದು ಭಾಷಣ ಮಾಡಲು ಪಾಕಿಸ್ತಾನ ಲೇಖಕಿಯನ್ನು ಆಹ್ವಾನಿಸುವುದು.

ಕೇವಲ ಬಿಟ್ಟಿ ಭಾಗ್ಯಗಳಿಗೆ ಆಸೆ ಬಿದ್ದು ಹಿಂದೂಗಳು ಇಂತಹ ಮನಸ್ಥಿತಿಯ ಸರ್ಕಾರವನ್ನು ಬೆಂಬಲಿಸಿದಲ್ಲಿ 2047ರ ಒಳಗೆ ಇಡೀ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಹವಣಿಸುತ್ತಿರುವವರ ಕೆಲ ಪಟ್ಟಬಧ್ರ ಹಿತಾಸಕ್ತಿಗಳಿಗೆ ಮತ್ತಷ್ಟು ಇಂಬು ಕೊಡುವುದಲ್ಲದೇ, ಅವರ ಆಸೆ 2047 ಕ್ಕಿಂತಲೂ ಮುಂಚೆಯೇ ಈಡೇರುತ್ತದೆ ಎಂಬುದನ್ನು ಗಮನದಲ್ಲಿಟ್ಟು ಕೊಳ್ಳದೇ ಹೋದಲ್ಲಿ ಕೋಟ್ಯಾಂತರ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸನಾತನ ಧರ್ಮವನ್ನು ಹಾಳುಗೆಡವಿದ ಅಪಕೀರ್ತಿಗೆ ನಾವುಗಳೇ ಭಾಜರಾಗಬೇಕಾಗಿರುವ ಕಾರಣ  ಮುಂದಿನ ವಾರದ ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆಯಿಂದ ನಮ್ಮೆಲ್ಲರ ಮತವನ್ನು ಚಲಾಯಿಸಲೇ ಬೇಕಾಗಿರುವುದು ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಧರ್ಮೋ ರಕ್ಷತಿ ರಕ್ಷಿತಃ

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment