ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ

indiaಈಗಾಗಲೇ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಚುನಾವಣೆಯು ಮುಗಿದಿದ್ದು ಉಳಿದ ಹಂತಗಳ ಚುನಾವಣೆಗಳು ಬಾಕಿ ಇರುವಾಗಲೇ, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯವರು ಇಚ್ಚಿಸುತ್ತಿದ್ದರೆ, ಯಥಾ ಪ್ರಕಾರ ಅವರ ವಿರೋಧಿಗಳು ಮೋದಿಯವರನ್ನು ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದು ಹಳಿಯುತ್ತಾ, ವಯಕ್ತಿಕ ಟೀಕೆಗಳಲ್ಲಿಯೇ ಮುಳುಗಿರುವ ಮೂಲಕ ಭಾಗಶಃ ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

macauleಲಾರ್ಡ್ ಮೆಕಾಲೆ ಎಂದೇ ಪ್ರಸಿದ್ಧವಾಗಿದ್ದ, ಥಾಮಸ್ ಬಾಬಿಂಗ್ಟನ್ ಮೆಕಾಲೆ (1800-59) ಎಂಬ ಬ್ರಿಟೀಷ್ ಅಧಿಕಾರಿ ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸಿದ್ದಲ್ಲದೇ, ಪಾಶ್ಚಾತ್ಯ ದೃಷ್ಟಿಕೋನದಲ್ಲಿ ಮತ್ತು ಭಾರತೀಯ ನ್ಯಾಯಶಾಸ್ತ್ರದ ಆಯೋಗದ ಅಧ್ಯಕ್ಷರಾಗಿ ದಂಡ ಸಂಹಿತೆಯನ್ನು ರಚಿಸಿದರು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದ ಗುರು ಕುಲಗಳನ್ನು ನಾಶ ಮಾಡಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಆರಂಭಿಸಿ ಕರಿಬಣ್ಣದ ಮನುಷ್ಯರಲ್ಲಿ ಬಿಳಿಯರ ಮನಸ್ಥಿತಿಯನ್ನು ತುಂಬಿ ಭಾರತದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹಾಳು ಮಾಡಿದ ವ್ಯಕ್ತಿ ಎಂದರೂ ತಪ್ಪಾಗದು.

ಇಂತಹ ಮೆಕಾಲೆ ಪ್ರಥಮ ಬಾರಿಗೆ ಭಾರತಕ್ಕೆ ಬಂದು ಕೆಲ ಕಾಲ ಭಾರತಾದ್ಯಂತ ತಿರುಗಾಡಿದ ನಂತರ, ನಾನು ಭಾರತದ ಉದ್ದಗಲಕ್ಕೂ ಪ್ರಯಾಣಿಸಿದಾಗ, ಎಲ್ಲಿಯೂ ಸಹಾ ಭಿಕ್ಷುಕರನ್ನಾಗಲೀ ಕಳ್ಳರನ್ನಾಗಲೀ ನನಗೆ ಕಂಡು ಬರಲಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಭಾರತೀಯರಿಗೆ ಚಿಕ್ಕಂದಿನಿಂದಲೂ ಕಲಿಸಿಕೊಡುವಂತಹ ಉನ್ನತ ನೈತಿಕ ಮೌಲ್ಯಗಳು. ಅದೇ ಇಲ್ಲಿನ ನಿಜವಾದ ಸಂಪತ್ತು. ಅದೇ ಈ ರಾಷ್ಟ್ರದ ಬೆನ್ನೆಲುಬು. ಇಂತಹ ಸಾಮರ್ಥ್ಯವುಳ್ಳ ಸಂಪತ್ತನ್ನು ಮುರಿಯದ ಹೊರತು ನಾವೆಂದಿಗೂ ಈ ದೇಶವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ, ಪ್ರಾಚೀನ ಗುರುಕುಲ ಶಿಕ್ಷಣ ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ಬದಲಾಯಿಸಿ, ವಿದೇಶಿ ಮತ್ತು ಇಂಗ್ಲಿಷ್ ಭಾಷೆ ತಮ್ಮ ಸ್ವಂತದಕ್ಕಿಂತ ಒಳ್ಳೆಯದು ಮತ್ತು ಶ್ರೇಷ್ಠವೆಂದು ಭಾರತೀಯರು ಭಾವಿಸುವಂತೆ ಮಾಡಿದಾಗಲೇ, ಅವರು ತಮ್ಮ ಸ್ವಾಭಿಮಾನವನ್ನು, ತಮ್ಮ ಸ್ಥಳೀಯ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾರೆ. ಹಾಗಾದಾಗಲೇ ನಾವು ಸುಲಭವಾಗಿ ಅ ದೇಶವನ್ನು ಕೈವಶ ಮಾಡಿಕೊಳ್ಳಬಹುದು ಎಂಬುದಾಗಿ ಹೇಳಿದ್ದಲ್ಲದೇ, ಅದನ್ನು ಅಕ್ಷರಶಃ ಮಾಡಿ ತೋರಿಸಿದವನು.

modi1ನರೇಂದ್ರ ಮೋದಿಯವರು 2014ರಲ್ಲಿ ಮೊದಲ ಬಾರಿಗೆ ಈ ದೇಶದ ಪ್ರಧಾನಿಯಾಗುವವರೆಗೂ ಭಾರತಕ್ಕೆ ಸ್ವಾತಂತ್ರ ಬಂದು 70+ ವರ್ಷಗಳಾಗಿದ್ದರೂ, ಅದೇ ಮೆಕಾಲೆ ಶಿಕ್ಷಣವನ್ನು ಪಡೆದ ಬಹುತೇಕ ಭಾರತೀಯರು ಆದೇ ರೀತಿಯ ವಸಾಹತುಶಾಹಿ ಮನಸ್ಥಿತಿಯಲ್ಲಿಯೇ ಬದುಕುವಂತಾಗಿತ್ತು. ಹಾಗಾಗಿಯೇ ಭಾರತೀಯರು ತಮ್ಮ ಮಾತೃಭಾಷೆಯ ಸಹಿತವಾಗಿ ಯಾವುದೇ ಭಾರತೀಯ ಭಾಷೆಯನ್ನು ಚೆನ್ನಾಗಿ ಮಾತನಾಡಲು/ಬರೆಯಲು ಕಲಿಯದೇ ಹೋದರೂ, ತಮಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುತ್ತದೆ ಎಂದು ಹೆಮ್ಮೆಪಡುವಂತಾಗಿತ್ತು. ಇಂಗ್ಲೀಷ್ ಬಾರದೇ ಹೋದವರು ನಾಲಾಯಕ್ ಎಂದು ತಿಳಿಯುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದರು ಎಂದರೂ ತಪ್ಪಾಗದು. ಇನ್ನೂ ಸರಳವಾಗಿ ಹೇಳ ಬೇಕೆಂದರೆ, ಅಚ್ಚುಕಟ್ಟಾಗಿ ಕೈಗಳಲ್ಲಿ ತಿನ್ನಲು ಬಂದರೂ, ಚಮಚ ಮತ್ತು ಪೋರ್ಕ್ ಗಳಲ್ಲಿ ತಿನ್ನಲು ಪ್ರಯತ್ನಿಸಿ ಮುಗ್ಗರಿಸಿದವರಿಗೇ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವಂತಾಗಿತ್ತು.

ಇನ್ನು ಭಾರತೀಯರು ವಿದೇಶಕ್ಕೆ ಹೋಗುವಾಗ ತಾವು ಭಾರತದಿಂದ ಬಂದಿದ್ದೇವೆ ಎಂದು ಹೇಳಿಕೊಳ್ಳಲೂ ಸಹಾ ಅಂಜಿಕೆ ಮತ್ತು ಅಳುಕನ್ನು ತೋರುವಂತಾಗಿತ್ತು. ಇಡೀ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊಂದಿರುವ ಭಾರತವನ್ನು ಬ್ರಿಟೀಷರು ಹಾವಾಡಿಗರ ದೇಶ ಎಂದು ಕರೆದಿದ್ದಲ್ಲದೇ, ಮೆಕಾಲೆ ಶಿಕ್ಷಣ ಪದ್ದತಿಯಲ್ಲಿ ನಮ್ಮ ದೇಶದ ಅನೇಕ ರಾಜ ಮಹಾರಾಜರುಗಳು ಮತ್ತು ಸಾಧು ಸಂತರ ಬಗ್ಗೆ ತಿಳಿಸಿಕೊಡುವ ಬದಲು ಕೇವಲ ಮೊಘಲ್ ಸಾಮ್ರಾಜ್ಯ ಮತ್ತು ಪಾಶ್ಚಿಮಾತ್ಯ ನಾಗರಿಕತೆ, ಇತಿಹಾಸಗಳನ್ನು ವೈಭವೀಕರಿಸುವ ಸಾಹಿತ್ಯವನ್ನೇ ಕಲಿಸಿದ್ದ ಪರಿಣಾಮ ನಮ್ಮವರಿಗೆ ನಮ್ಮ ನಿಜವಾದ ಸಾಮರ್ಥ್ಯ ಮತ್ತು ಇತಿಹಾಸ ತಿಳಿಯದೇ ಒಂದು ರೀತಿಯಲ್ಲಿ ಸ್ವಾಭಿಮಾನವಿಲ್ಲದ ಬದುಕನ್ನು ನಡೆಸುವಂತಾಗಿತ್ತು.

ಇನ್ನು ರಾಜಕೀಯ ಮತ್ತು ಚುನಾವಣೆಯ ವಿಷಯಕ್ಕೆ ಬಂದಾಗ, ದೇಶದ ಸ್ವಾತ್ರಂತ್ಯಕ್ಕೆ ಹೋರಾಡಿದ ಲಕ್ಷಾಂತರ ದೇಶಭಕ್ತರನ್ನು ಮೂಲೆ ಗುಂಪು ಮಾಡಿ ಕೇವಲ ಗಾಂಧಿ ಮತ್ತು ನೆಹರು ಅವರುಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರೆಸುವಂತಾಗಿತ್ತು. ಈ ಹಿಂದಿದ್ದ ರಾಜವಂಶದ ಬದಲಾಗಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೂ, ಅದೇಕೋ ಏನೋ? ಪ್ರಧಾನಿ ಪಟ್ಟ ಮಾತ್ರಾ ನೆಹರು ಕುಟುಂಬಕ್ಕೆ ಮತ್ರಾ ಮೀಸಲು ಎನ್ನುವ ಅಲಿಖಿತ ನಿಯಮವನ್ನು ಅಕ್ಷರಶಃ ಒಪ್ಪಿಕೊಂಡಂತಿತ್ತು. ಇಂದಿರಾ ಎಂದರೆ ಇಂಡಿಯಾ ಎನ್ನುವ ಮಟ್ಟಿಗಿನ ಗುಲಾಮಿತನ ಮೈಗೂಡಿಸಿಕೊಂಡಂತಾಗಿತ್ತು. ಇಂದಿರಾ ಅವರ ಅಕಾಲಿಕ ಮರಣಾ ನಂತರ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದಿರದಿದ್ದ ರಾಜೀವ್ ಗಾಂಧಿಯನ್ನು ಸೂತಕದ ಮಧ್ಯೆಯೇ ರಾತ್ರೋ ರಾತ್ರಿ ಪ್ರಧಾನಿಯನ್ನಾಗಿಸಿಯಾಗಿತ್ತು. ಇನ್ನು ರಾಜೀವ್ ಮರಣಾ ನಂತರ ಸೀತಾರಾಂ ಕೇಸರಿ ಮತ್ತು ನರಸಿಂಹ ರಾವ್ ಸಮರ್ಥವಾಗಿ ಪಕ್ಷ ಮತ್ತು ದೇಶವನ್ನು ಮುನ್ನಡೆಸಿದ್ದರೂ, ಸೋನಿಯಾ ಗಾಂಧಿಯನ್ನೇ ಪಕ್ಷದ ಅಧಿನಾಯಕಿಯನ್ನಾಗಿಸಿ ಆಕೆಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಒಂದು ರೀತಿಯ ಖಾಸಗಿ ಕ್ಲಬ್ ಆಗಿ ಮಾರ್ಪಟ್ಟಿತ್ತು. ರಾಜಕೀಯವೇ ಬೇಡ ಎನ್ನುತ್ತಿದ್ದ ಆ ವಿದೇಶಿ ಸಂಜಾತೆ ಮತ್ತು ಭಾರತಕ್ಕೆ ಸೊಸೆಯಾಗಿ ಬಂದರೂ ಸುಮಾರು ದಶಕಗಳ ಕಾಲ ಭಾರತೀಯ ಪೌರತ್ವವನ್ನೇ ಪಡೆಯದಿದ್ದ ಇದೇ ಸೋನಿಯಾ 2004ರಲ್ಲಿ ಪ್ರಧಾನ ಮಂತ್ರಿಯನ್ನಾಗಿಸಲು ಮುಂದಾಗಿತ್ತು. ನಂತರ ಕಾನೂನಾತ್ಮಕವಾಗಿ ಅದು ಸಾಧ್ಯವಿಲ್ಲಾ ಎಂಬುದನ್ನು ಅರಿತು, ಅದನ್ನು ಮರೆಮಾಚಿ, ಅದಕ್ಕೆ ತ್ಯಾಗ ಮತ್ತು ಬಲಿದಾನ ಎಂಬ ಬಣ್ಣ ಕಟ್ಟಿ ಜನರಿಂದ ನೇರವಾಗಿ ಆರಿಸಲು ಛಾತಿ ಇಲ್ಲದಿದ್ದಂತಹ ಮತ್ತು ಸುಲಭವಾಗಿ ತಮ್ಮ ಕೈಗೊಂಬೆಯನ್ನಾಗಿಸಿ ಕೊಳ್ಳಬಲ್ಲಂತಹ ಮನ ಮೋಹನ್ ಸಿಂಗ್ ಆವರನ್ನು ಪ್ರಧಾನಿಯನ್ನಾಗಿಸಿ ಹಿಂಬಾಗಿಲಿನಿಂದ ಅಮ್ಮಾ, ಮಗ ಮತ್ತು ಅಳಿಯ ಸುಮಾರು 10 ವರ್ಷಗಳ ಕಾಲ ಈ ದೇಶವನ್ನು ಲೂಟಿ ಮಾಡಿಯಾಗಿತ್ತು.

modi3ಇಂತಹ ಸಂದರ್ಭದಲ್ಲಿಯೇ 2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಿಂತ ಈ ರಾಷ್ಟ್ರಕ್ಕೆ ಪ್ರಧಾನ ಸೇವಕ ಎಂದು ಅಭೂತಪೂರ್ವವಾಗಿ ಬಹುಮತದೊಂದಿಗೆ ಆರಿಸಿ ಬಂದಾಗ ಸಹಜವಾಗಿಯೇ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವದ ಬಗ್ಗೆ ನಡುಕ ಉಂಟಾಗಿದ್ದಲ್ಲದೇ, ಇದ್ದಕ್ಕಿದ್ದಂತೆ, ಬಹುತೇಕರಿಗೆ ರಾತ್ರೋರಾತ್ರಿ, ಮೋದಿಯವರ ಮುಂದೆ ತಾವುಗಳು ಶಕ್ತಿಹೀನರಾಗಿ ರಾಜಕೀಯದಲ್ಲಿ ಅಪ್ರಸ್ತುತರಾಗಿದ್ದೇವೆ ಎನ್ನುವುದರ ಅರಿವಾಗಿತ್ತು. ಅದಕ್ಕೆ ಪೂರಕವಾಗಿ ಮೋದಿಯವರು ಸಹಾ ಎಲ್ಲಾ ಭಟ್ಟಂಗಿಗಳು ಮತ್ತು ತಮ್ಮ ಪರಿವಾರದವರನ್ನು ತಮ್ಮ ಸುತ್ತಮುತ್ತಲೂ ಹಾಯಲು ಬಿಡದೇ, ಹಿಂದಿಯನ್ನು ಚೆನ್ನಾಗಿ ಮಾತನಾಡುವ ಮತ್ತು ಇಂಗ್ಲಿಷ್ ಮಾತನಾಡದ ಹೊಸ ತಳಿಯ ಭಾರತೀಯರನ್ನು ಸರ್ಕಾರದ ಉನ್ನತ ಕಚೇರಿಗಳಲ್ಲಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಟಿವಿ ಸ್ಟುಡಿಯೋಗಳಲ್ಲಿ, ಪತ್ರಿಕೋದ್ಯಮದಲ್ಲಿ, ಬಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ನಿರೂಪಕರನ್ನಾಗಿ ಮಾಡಿದ ನಂತರ ಈ ದೇಶದ ಜನಸಾಮಾನ್ಯರಿಗೂ ಹೀಗೂ ಉಂಟೇ? ಎಂದು ಮೂಗಿನ ಮೇಲೆ ಬೆರಳನ್ನು ಇಟ್ಟು ಕೊಂಡು ಅಚ್ಚರಿ ಪಡುವಂತಾಯಿತಲ್ಲದೇ, ಯಾವುದೇ ರಾಜಕೀಯ ಹಿನ್ನಲೆಯಿಲ್ಲದ ಸಾಮಾನ್ಯ ಜನ ಸಾಮಾನ್ಯರೂ ಸಹಾ ಉನ್ನತ ಮಟ್ಟಕ್ಕೆ ಏರಬಹುದು ಎಂಬ ನಂಬಿಕೆ ಮೂಡುಸುವಂತಾಯಿತು.

shorನಂತರದ ದಿನಗಳಲ್ಲಿ ಪ್ರಧಾನಿ ಮೋದಿಯವರು ದೇಶದ ಅಭಿವೃದ್ಧಿಯತ್ತ ಗಮನಹರಿಸಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದಂತಹ ಒಂದೊಂದೇ ಕೆಲಸಗಳನ್ನು ಮಾಡಿ ತೋರಿಸಿದ್ದಲ್ಲದೇ, ತಮ್ಮ ಉತ್ತಮ ವಿದೇಶಾಂಗ ನೀತಿಯಿಂದಾಗಿ ಕೇವಲ ದೇಶವವಲ್ಲದೇ ವಿದೇಶದಲ್ಲೂ ಭಾರತದ ಕೀರ್ತಿ ಮತ್ತು ಘನತೆಯನ್ನು ಎತ್ತಿ ಹಿಡಿದಿದ್ದಲ್ಲದೇ, ವಿಶ್ವದ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದತ್ತ ಚಿತ್ತ ಹರಿಸುವಂತಾಗಿ ಮತ್ತೊಮ್ಮೆ ಭಾರತ ನಿಧಾನವಾಗಿ ವಿಶ್ವಗುರುವಾಗುವತ್ತ ಹೋರಟಿದ್ದನ್ನು ನೋಡಿ ಸಹಜವಾಗಿ ಕಾಂಗ್ರೇಸ್ ಪಕ್ಷದ ವಂಶಪಾರಂಪರ್ಯ ಕುಡಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಇದು ಹೀಗೆಯೇ ಮುಂದುವರೆದರೆ ತಮ್ಮ ರಾಜಕೀಯ ಬೇಳೆ ಬೇಯುವುದಿಲ್ಲಾ ಎಂದು ಅರಿವಾಗುತ್ತಿದ್ದಂತೆಯೇ, ಮೋದಿಯವರು ಸುಳ್ಳ, ಕಳ್ಳ, ಭ್ರಷ್ಟ, ಸರ್ವಾಧಿಕಾರಿ ಮತ್ತು ಅವರು ಕೇವಲ ಬೆರಳೆಣಿಕೆಯ ಶ್ರೀಮಂತ ಭಾರತೀಯರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರು ನಮ್ಮ ಹಣವನ್ನು ಕದ್ದು ತನ್ನ ಶ್ರೀಮಂತ ಸ್ನೇಹಿತರಿಗೆ ನೀಡುತ್ತಾರೆ. ನೆರೆಹೊರೆ ರಾಷ್ಟ್ರಗಳಾದ ಪಾಕೀಸ್ಥಾನ ಮತ್ತು ಚೀನಾದೊಡನೆ ಶತ್ರುತ್ವವನ್ನು ಬೆಳೆಸಿಕೊಂಡಿರುವುದಲ್ಲದೇ ದೇಶದಲ್ಲಿ ಹಿಂದುತ್ವವನ್ನು ಮುನ್ನಲೆಗೆ ತರುವ ಮೂಲಕ ಅಲ್ಪಸಂಖ್ಯಾತರು ಮತ್ತು ಸಂವಿಧಾನ ವಿರೋಧಿ ಎಂದು ವಯಕ್ತಿಕವಾಗಿ ನಿಂದಿಸಲಾರಂಭಿಸಿದ್ದಲ್ಲದೇ ತಮ್ಮ ವಂದಿಮಾಗಧರ ಮೂಲಕ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂಬ ಗೀಳಿಟ್ಟರು.

mechanicವಿರೋಧ ಪಕ್ಷಗಳ ಇಂತಹ ಹಾರಾಟ ಚೀರಾಟಗಳಿಂದ ಕೊಂಚವೂ ವಿಚಲಿತರಾಗದ ಪ್ರಧಾನಿ ಮೋದಿಯವರು ತಮ್ಮ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಜೊತೆ ಸಬ್ ಕಾ ವಿಶ್ವಾಸವನ್ನು ಗಳಿಸಿ ಮತ್ತೊಮ್ಮೆ ಎರಡನೇ ಬಾರಿಗೆ ಭಾರೀ ಬಹುಮತದೊಂದಿಗೆ ಆಯ್ಕೆ ಆದ ಮೇಲಂತೂ ಕಾಂಗ್ರೇಸ್ ಮತ್ತು ದೇಶದ ವಂಶಪಾರಂಪರ್ಯ ವಿರೋಧ ಪಕ್ಷಗಳು ಬಹಿರಂಗವಾಗಿಯೇ ಮೋದಿಯವರನ್ನು ಹೀಗೆಯೇ ಬೆಳೆಯಲು ಬಿಟ್ಟಲ್ಲಿ ತಾವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಲಾರಂಭಿಸಿದವು. ಅದಕ್ಕಾಗಿಯೇ ಪ್ರಧಾನಿ ಮೋದಿಯವರ ಪರ್ಯಾಯವಾಗಿ ಕಾಂಗ್ರೇಸ್ ಪಕ್ಷದ ನಾಯಕರಾಗಿ, ರಾಹುಲ್ ಗಾಂಧಿಯನ್ನು ಮುನ್ನಲೆಗೆ ತರುವ ಸಲುವಾಗಿ ರೈತರೊಂದಿಗೆ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಿಸುವುದು, ಗಣಿಗಾರರೊಂದಿಗೆ ಸೈಕಲ್‌ಗಳಲ್ಲಿ ಕಲ್ಲಿದ್ದಲು ಸಾಗಿಸುವುದು, ರಸ್ತೆ ಬದಿಯ ಹೋಟೆಲ್ಲುಗಳಲ್ಲಿ ದೋಸೆ ಹುಯ್ಯುವುದು, ರಸ್ತೆ ಬದಿಯ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡಿಸುವುದು, ರಸ್ತೆಯಲ್ಲಿ ತರಕಾರಿ ಮಾರಾಟಗಾರರ ಸಂಕಟಗಳನ್ನು ಆಲಿಸುವ ಮೂಲಕ ಸಾಮಾನ್ಯ ಮನುಷ್ಯನ ಬಗ್ಗೆ ಆತ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ತೋರಿಸಲು ಪ್ರಯತ್ನಿಸಿದರಾದರೂ ಬುದ್ದಿವಂತ ಭಾರತೀಯರು ಈ ರೀತಿಯ ನಕಲಿ ವೇಷಕ್ಕೆ ಮಾರು ಹೋಗದೇ ಆತನ ಸ್ವಕ್ಷೇತ್ರ ಅಮೇಥಿಯಲ್ಲಿಯೇ ಸೋಲಿಸುವ ಮೂಲಕ ಆತನೊಬ್ಬ ನಾಲಾಯಕ್ ನಾಯಕ ಎಂಬುದನ್ನು ನಿರೂಪಿಸಿದರು.

modi3ಇನ್ನು ವಿದೇಶೀ ನೀತಿಯನ್ನು ಹೊರತು ಪಡಿಸಿ ದೇಶದಲ್ಲಿಯೂ ಅನೇಕ ಕಾಂತ್ರಿಕಾರಿ ಬೆಳವಣಿಗೆಯನ್ನು ಮೋದಿಯವರು ತರುವ ಮೂಲಕ ಜನ ಸಾಮಾನ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ, ಸಾಮಾನ್ಯ ಜನರಿಗೆ ಅಗತ್ಯವಿರುವ ಉಜ್ವಲ ಯೋಜನೆ ಮೂಲಕ ಕಟ್ಟಿಗೆ ಮುಕ್ತ ಅಡುಗೆ, ಜಲ ಜೀವನ್ ಮುಖಾಂತರ ಎಲ್ಲರ ಮನೆಗಳಿಗೆ ನೇರವಾಗಿ ನೀರು ನೀಡಿದ್ದಲ್ಲದೇ, ಸ್ವಾತಂತ್ಯ್ರ ಬಂದು 70+ ವರ್ಷಗಳಾದರೂ ವಿದ್ಯುತ್ ಸಂಪರ್ಕವನ್ನೇ ಪಡೆಯದಿದ್ದ ಸಾವಿರಾರು ಹಳ್ಳಿಗಳೂ ಸಹಾ ಇಂದು ವಿದ್ಯುತ್ ಕಾಣುವಂತಗಿದೆ.

rahulಅದಲ್ಲದೇ ಈ ಎಲ್ಲಾ ಹಳ್ಳಿಗಳನ್ನೂ ದೇಶದ ಹೆದ್ದಾರಿಗೆ ಜೋಡಿಸುವಂತಹ ಉತ್ತಮ ರಸ್ತೆಗಳು, ಶಾಲಾ ಕಾಲೇಜುಗಳು, ಆಧುನಿಕ ಗುಣಮಟ್ಟದ ಉತ್ತಮ ಆಸ್ಪತ್ರೆಗಳ ಜೊತೆಗೆ ಇಂದಿನ ಆಧುನಿಕ ಜನರ ಸಂಪರ್ಕ ಸಾಧನವಾಗಿರುವ ಇಂಟರ್ನೆಟ್ ಸೇವೆ ಮತ್ತು ಜನ್ ಧನ್ ಯೋಜನೆ, ಡಿಜಿಟಲ್ ಇಂಡಿಯಾ ಮೂಲಕ UPI ಜಾರಿಗೆ ತಂದು, ದೇಶದಲ್ಲಿ ಅರ್ಥಿಕ ಸಧೃಢತೆ ತಂರುವ ಮೂಲಕ ಆಂತರಿಕವಾಗಿ ಹಣದ ಹರಿವನ್ನು ಸುಲಭವಾಗಿಸಿರುವುದನ್ನು ಜನರು ಒಪ್ಪಿ ಮತ್ತು ಅಪ್ಪಿಕೊಂಡಿರುವುದು ಸಹಾ ಕಾಂಗ್ರೇಸ್ ಮತ್ತು ವಿರೋಧ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ, ಪದೇ ಪದೇ ಮೋದಿ ಭ್ರಷ್ಟ, ಮೋದಿ ಸರ್ವಾಧಿಕಾರಿ ಎಂಬ ಸುಳ್ಳನ್ನು ಸಾವಿರ ಸಲಾ ಹೇಳುವ ಮೂಲಕ ಅದೇ ಹಸೀ ಸುಳ್ಳನ್ಣೇ ನಿಜ ಮಾಡಲು ಹೊರಟಿರುವುದು ಮೂರ್ಖತನದ ಪರಮಾವಧಿ ಎನಿಸುವಂತಾಯಿತು.

modi_Interviewಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಧಾನ ಮಂತ್ರಿ ಮೋದಿಯವರೇ ಹೇಳಿರುವಂತೆ ಕಳೆದ ಹತ್ತು ವರ್ಷಗಳಲ್ಲಿ ಸಾಧನೆ ಮಾಡಿರುವುದು ಕೇವಲ ಟ್ರೈಲರ್ ಆಗಿದ್ದು ಮೂರನೇ ಬಾರಿಗೆ ಮಗದೊಮ್ಮೆ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಇನ್ನೂ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲು ನೀಲ ನಕ್ಷೆ ತಯಾರಾಗಿದ್ದು ಅವೆಲ್ಲವನ್ನೂ ಜಾರಿಗೆ ತಂದು ಮತ್ತೊಮ್ಮೆ ಭಾರತ ವಿಶ್ವಗುರುವಾಗಿಸುವ ಸಂಕಲ್ಪವನ್ನು ತೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮಹಾ ಸಂಕಲ್ಪದಲ್ಲಿ ಅಳಿಲು ಸೇವೆ ಎನ್ನುವಂತೆ ನಮ್ಮ ನಿಮ್ಮೆಲ್ಲರ ಪಾತ್ರ ಅತ್ಯಮೂಲ್ಯವಾಗಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ತಪ್ಪದೇ ನಾವೆಲ್ಲರೂ ಖಡ್ಡಾಯವಾಗಿ ಮತದಾನ ಮಾಡುವುದಲ್ಲದೇ ನಮ್ಮ ಬಂಧು ಮಿತ್ರರಿಂದಲೂ ಅಗತ್ಯವಾಗಿ ಸತ್ಪಾತ್ರರಿಗೆ ಮತದಾನ ಮಾಡಿಸುವ ಮೂಲಕ ಸಧೃಢ ಭಾರತವನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿ ಹೋಗುವ ಗುರುತರವಾದ ಜವಾಭ್ಧಾರಿ ನಮ್ಮ ನಿಮ್ಮೆಲ್ಲರ ಮೇಲೆಯೇ ಇದೇ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment