ಉದಯಗಿರಿ ಮೈಸೂರಿನ ಉತ್ತರ ಭಾಗದಲ್ಲಿರುವ ಒಂದು ಉಪನಗರವಾಗಿದ್ದು ಕೆಲವು ದಿನಗಳ ಹಿಂದೆ ಇದೇ ಉದಯಗಿರಿ ಠಾಣಾ ವ್ಯಾಪ್ತಿಗೆ ಸೇರಿದ ಬಡಾವಣೆಯ ಯುವಕನೊಬ್ಬ, ಹೊಸದಿಲ್ಲಿ ಚುನಾವಣೆ ಫಲಿತಾಂಶದ ನಂತರ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಮತ್ತು ಅಖಿಲೇಶ್ ಯಾದವ್ ಅವರ ಅರೆನಗ್ನ ಫೋಟೊ ಮೇಲೆ ಉರ್ದು ಭಾಷೆಯಲ್ಲಿ ಬರೆದಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ವಿಷಯ ತಿಳಿದ ಸ್ಥಳೀಯ ಪೋಲೀಸರು ಸ್ವಯಂಪ್ರೇರಿತರಾಗಿ ದೂರನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಉದಯಗಿರಿ ಪೋಲೀಸ್ ಠಾಣೆಯಲ್ಲಿಟ್ಟುಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ, ಸಾವಿರಾರು ಮುಸ್ಲಿಂ ಯುವಕರುಗಳು ಆ ಠಾಣೆಯ ಸುತ್ತುವರೆದು, ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸುತ್ತಿದ್ದಂತಹ ಸಂಧರ್ಭದಲ್ಲಿಯೇ, ಸ್ಥಳೀಯ ಮುಲ್ಲಾನೊಬ್ಬ ಪ್ರಚೋದನಾತ್ಮಕವಾಗಿ ಮಾಡಿದ ಭಾಷಣ, ಅಲ್ಲಿ ನೆರೆದಿದ್ದವರನ್ನು ಉದ್ರೇಕಿಸಿ, ಏಕಾ ಏಕಿ ಪೋಲೀಸ್ ಠಾಣೆಯ ಮೇಲೆ ನಡೆಸಿದ ಕಲ್ಲು ತೂರಾಟದಿಂದಾಗಿ ಅನೇಕ ಪೋಲಿಸರಿಗೂ ಮತ್ತು ಪೋಲೀಸ್ ಅಧಿಕಾರಿಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ಸೇರುವಂತಾದರೆ, ಪೋಲೀಸ್ ವಾಹನಗಷ್ಟೇ ಅಲ್ಲದೇ ಸಾರ್ವಜನಿಕ ಆಸ್ತಿ ಪಾಸ್ತಿಗೂ ನಷ್ಟಮಾಡಿದ್ದಲ್ಲದೇ, ಅಷ್ಟು ತಡರಾತ್ರಿಯಲ್ಲಿಯೂ ಉದಯಗಿರಿಯ ಸುತ್ತಮುತ್ತಲಿನ ಪ್ರದೇಶವಾದ ಶಾಂತಿನಗರ, ಮಹದೇವಪುರ ರಸ್ತೆ ಬಂದ್ ಮಾಡಿ ಪರಿಸ್ಥಿತಿಯನ್ನು ವಿಕೋಪಕ್ಕೆ ತೆಗೆದುಕೊಂಡು ಹೋಗಿ ಮಧ್ಯರಾತ್ರಿಯಾದರೂ ಆ ಸನ್ನಿವೇಶವನ್ನು ನಿಯಂತ್ರಣಕ್ಕೆ ತರಲು ಪೋಲೀಸರು ಹೈರಾಣಾದ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಅದೇ ರೀತಿ ತಮ್ಮ ಓಟ್ ಬ್ಯಾಂಕ್ ನ ಆಸೆಗಾಗಿ ಸದಾಕಾಲವೂ ಮುಸ್ಲಿಂ ತುಷ್ಟೀಕರಣ ಮಾಡುವ ಕೆಲವು ರಾಜ್ಯದ ಪ್ರಸಕ್ತ ಕೆಲವು ಸಚಿವರರೂ ಸೇರಿದಂತೆ ಅನೇಕ ಕಾಂಗ್ರೇಸ್ ನಾಯಕರು ಎಂದಿನಂತೆ ಅವರ ಪರ ವಹಿಸಿಕೊಂಡಿದದ್ದೂ ಸಹಾ ಈಗ ಇತಿಹಾಸವಾಗಿದೆ. ಅದರಲ್ಲೂ ರಾಜ್ಯದ ಸಹಕಾರ ಸಚಿವರಾದ ಕೆ. ಎನ್. ರಾಜಣ್ಣನವರಂತೂ ಥೂ! ಈ ಪೋಲೀಸರಿಗೆ ಬುದ್ದಿ ಇಲ್ವೇನ್ರೀ? ಮುಸ್ಲಿಂ ಬಾಹುಳ್ಯವಿರುವ ಪೋಲೀಸ್ ಠಾಣೆಯಲ್ಲಿಯೇ ಆರೋಪಿನ್ನು ಬಂಧಿಸಿ ಇಡ್ತಾರೇನ್ರೀ? ಎಂದು ಇಡೀ ಪ್ರಕರಣದಲ್ಲಿ ಪೋಲಿಸರದ್ದೇ ತಪ್ಪು ಎಂದು ಹೇಳಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಮೂಲತಃ ಮೈಸೂರಿನವರೇ ಆಗಿರುವ ಪಬ್ಲಿಕ್ ಟಿವಿಯ ರಂಗನಾಥ್ ಅವರು ನಮ್ಮ ಕಾಲದಲ್ಲಿ ಉದಯಗಿರಿಯೇನೂ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿರಲಿಲ್ಲ. ಹಿಂದೂ ಆರೋಪಿಗಳನ್ನು ಮುಸ್ಲಿಂ ಬಾಹುಳ್ಯ ಇರುವ ಪ್ರದೇಶದ ಠಾಣೆಯಲ್ಲಿ ಬಂಧಿಸಿಡಬಾರದು ಎಂಬ ಕಾನೂನೇನೂ ಇಲ್ಲಾ ಎಂದು ಸ್ಪಷ್ಟಪಡಿಸಿದ್ದನ್ನೂ ಸಹಾ ಎಲ್ಲರೂ ನೋಡಿದ್ದೇವೆ.
ಪಬ್ಲಿಕ್ ಟಿವಿಯ ರಂಗನಾಥ್ ಅವರು ಹೇಳಿದಂತೆಯೇ, ಅವರು ಮೈಸೂರು ವಾಸಿಗಳಾಗಿದ್ದಾಗ, ಉದಯಗಿರಿ ಎರಡು ದಶಕಗಳ ಹಿಂದೆ ಖಂಡಿತವಾಗಿಯೂ ಸರ್ವ ಧರ್ಮದ ಶಾಂತಿಯ ತೋಟವಾಗಿತ್ತು. ಉದಯಗಿರಿ ಬಡಾವಣೆಯನ್ನು MUDAದವರು ಅಭಿವೃದ್ಧಿ ಪಡಿಸಿ ಸೈಟ್ ಹಂಚಿಕೆ ಮಾಡಿದ್ದರಿಂದ ಎಲ್ಲಾ ಧರ್ಮದವರೂ ಸ್ವಂತ ಮನೆಗಳನ್ನು ಕಟ್ಟಿಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ಬಹುತೇಕ ಹಿಂದೂಗಳೇ ಆ ಜಾಗದಲ್ಲಿ ಇದ್ದರು. ಅಲ್ಲಿನ ಉದ್ಯಾನವನದಲ್ಲಿ RSS ಶಾಖೆಯೂ ನಡೆಯುತ್ತಿದ್ದರೆ, ಉದಯಗಿರಿ ಕನ್ನಡ ಕಲಾ ಸಂಘ ಮತ್ತು ಅಂಬೇಡ್ಕರ್ ಸಂಘಗಳ ಮೂಲಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆದುಕೊಂಡು ಹೋಗುತ್ತಿತ್ತು.
ಕಾಲ ಕಳೆಯುತ್ತಾ ಹೋದಂತೆಲ್ಲಾ, ಮುಸಲ್ಮಾನರಿಗೆ ಆ ಪ್ರದೇಶ ವಿಶೇಷ ಆಕರ್ಷಣೆಯಾದ ಪರಿಣಾಮ ನೋಡ ನೋಡುತ್ತಿದ್ದಂತೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ವಿವಿಧ ಊರು/ಬಡಾವಣೆಗಳಿಂದ ಉದಯಗಿರಿಗೆ ವಲಸೆಗೆ ಬಂದಿದ್ದಲ್ಲದೇ, ಅದರ ಅಕ್ಕ ಪಕ್ಕದ ಬಡಾವಣೆಗಳಲ್ಲಿಯೂ ಸಹ ತುಂಬಿಕೊಂಡ ಪರಿಣಾಮ ಸದ್ದಿಲ್ಲದೇ ಆ ಪ್ರದೇಶ ಅನಧಿಕೃತವಾಗಿ ಮುಸಲ್ಮಾನರ ಪ್ರದೇಶವಾಗಿದ್ದಲ್ಲದೇ, ಮೂಲೆ ಮೂಲೆಯಲ್ಲಿಯೂ ಸಣ್ಣದಾಗಿ ತಲೆಯೆತ್ತಿದ ಮಸೀದಿಗಳು ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಪ್ರಮಾಣದ ಕಟ್ಟಡಗಳಾಗಿ ನಾಲ್ಕು ದಿಕ್ಕುಗಳಿಗೂ ಲೌಡ್ ಸ್ಪೀಕರ್ ಅಳವಡಿಸಿಕೊಂಡು ಪ್ರತಿ ದಿನ ಐದು ಬಾರಿ ಆಜಾನ್ ಮೊಳಗಿಸಲಾರಂಭಿಸಿತು.
ಹೀಗೆ ಸದ್ದಿಲ್ಲದೇ, ಮುಸಲ್ಮಾನರ ಸಂಖ್ಯೆ ಆ ಪ್ರದೇಶದಲ್ಲಿ ವಿಪರೀತವಾಗಿ ಬೆಳೆಯುತ್ತಿದ್ದಂತೆಯೇ ಸಹಜವಾಗಿ ಅಲ್ಲಿದ್ದ ಹಿಂದೂಗಳು ಭಯ ಭೀತರಾಗಿಲ್ಲದೇ, ಕತ್ತಲಾದ ನಂತರ ಆ ಪ್ರದೇಶಗಳಲ್ಲಿ ಓಡಾಡಲೂ ಸಹಾ ಭಯವಡುವಷ್ಟು ಅಭದ್ರತೆ ಕಾಡಿದ ಪರಿಣಾಮ ಸದ್ದಿಲ್ಲದೇ, ಒಬ್ಬೊಬ್ಬರಾಗಿಯೇ ತಮ್ಮ ಸ್ವಂತ ಮನೆಯನ್ನು ಸಿಕ್ಕ ಬೆಲೆಗೆ ಮಾರಿ ಮೈಸೂರಿನ ವಿವಿಧ ಕಡೆಗಳಿಗೆ ಹೋಗಲಾರಂಭಿಸಿದರು.
ರೋಗಿ ಬಯಸಿದ್ದೂ ಹಾಲು ಅನ್ನಾ ವೈದ್ಯರು ಹೇಳಿದ್ದೂ ಹಾಲೂ ಅನ್ನಾ ಎನ್ನುವಂತೆ ಮುಸಲ್ಮಾನರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗಿತ್ತು. ಇವೆಲ್ಲದರ ಮಧ್ಯೆಯೂ ಅಲ್ಪ ಸ್ವಲ್ಪ ಧೈರ್ಯದಿಂದ ಅಲ್ಲೇ ನೆಲೆಸಿದವರ ಮೇಲೆ ಅಲ್ಲಿನ ಪುಂಡರು ಬೆದರಿಸಲಾರಂಭಿಸಿದರು. ಅದೊಮ್ಮೆ ಅದೇ ಪ್ರದೇಶದಲ್ಲಿದ್ದ ಉದ್ಯಾನವನದಲ್ಲಿ ಸಾಯಂ ಶಾಖೆಯನ್ನು ಮುಗಿಸಿಕೊಂಡು ಬರುತ್ತಿದ್ದ ಹುಡುಗರನ್ನು ಅಟಕಾಯಿಸಿಕೊಂಡ ಅಲ್ಲಿನ ಮಾಂಸದ ಅಂಗಡಿಯಲ್ಲಿ ಮಾಂಸ ಕತ್ತರಿಸುತ್ತಿದ್ದ ವ್ಯಕ್ತಿ, ಒಂದು ಸಣ್ಣ ಮಾಂಸದ ತುಂಡನ್ನು ಅಲ್ಲೊಬ್ಬ ಹುಡುಗನ ಮೇಲೆ ಎಸೆದು, ಕ್ಯಾರೆ RSS ಕೆ ಚಡ್ಡಿ, ಬೊಮ್ಮನ್ ಕೆ ಬಚ್ಚೆ ಎಂದು ಹೆದರಿಸಿದ. ಮಾಂಸವನ್ನೇ ನೋಡಿರದ ಆ ಹುಡುಗನ ಕುತ್ತಿಗೆಯ ಮೇಲೆ ಮಾಂಸದ ತುಂಡು ಬಡಿದರೆ ಆತನ ಪರಿಸ್ಥಿತಿ ಹೇಗಾಗಿರ ಬೇಡ.
ಅಲ್ಲಿಂದ ಎದ್ದನೋ ಬಿದ್ದನೋ ಎಂದು ಓಡಿ ಬಂದು ಮನೆಯವರಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿ ಈ ಪ್ರದೇಶ ಹಿಂದೂಗಳು ವಾಸಿಸಲು ಯೋಗ್ಯವಲ್ಲಾ ಎಂದು ಹೇಳಿದ್ದಲ್ಲದೇ, ಅವರೂ ಸೇರಿ ಅವರ ಅಕ್ಕ ಪಕ್ಕದ ಮನೆಯಾ ಹಿಂದೂಗಳು ಕೂಡ ಆವರ ಮನೆಗಳನ್ನು ಸ್ಥಳೀಯ ಮುಸಲ್ಮಾನರು ಕೊಟ್ಟಷ್ಟು ಹಣಕ್ಕೆ ಮಾರಿ ಕೈ ತೊಳೆದು ಕೊಂಡು ಬೇರೆಯ ಕಡೆ ವಾಸಿಸತೊಡಗಿದರು. ಹೀಗೆ ಉದಯಗಿರಿಯ ಬಹುತೇಕ ಪ್ರದೇಶಗಳು ಸದ್ದಿಲ್ಲದೇ ಮುಸಲ್ಮಾನರದ್ದಾಗುತ್ತಿದ್ದಂತೆಯೇ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿರುವಂತೆಯೇ, ಅದೊಂದು ಮಿನಿ ಪಾಕಿಸ್ಥಾನವಾಗಿ ಹೋಯಿತು. ಅಲ್ಲೆಲ್ಲೋ ಹಿಂದೂ ಮುಸ್ಲಿಂ ಗಲಾಟೆ ಆದರೆ ಉದಯಗಿರಿಯಲ್ಲಿ ಅದರ ವಿರುದ್ಧ ಆಕ್ರೋಶ ಭರಿತ ಪ್ರತಿಭಟನೆ ಮಾಡುತ್ತಾ, ಈ ದೇಶದ ಕಾನೂನಿಗೆ ಆ ಪ್ರದೇಶದಲ್ಲಿ ಬೆಲೆಯೇ ಇಲ್ಲದಂತಾಗಿತ್ತು. ಕಾನೂನನ್ನು ರಕ್ಷಣೆ ಮಾಡಬೇಕಾದಂತಹ ಪೋಲಿಸರ ಮೇಲೆಯೂ ಅಲ್ಲಿನವರಿಗೆ ಭಯವೇ ಇಲ್ಲವಾಗಿ, ಪೋಲಿಸರೇ ಅಲ್ಲಿನ ಜನರ ಬಗ್ಗೆ ಭಯಪಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದರೆ ಏನನ್ನಬೇಕು?
ಹೆಲ್ಮೆಟ್ ಇಲ್ಲದೇ ಮೂರ್ನಾಲ್ಕು ಹುಡುಗರು ಒಂದೇ ಗಾಡಿಯ ಮೇಲೆ ಪ್ರಯಾಣಿಸುವುದು. ರಸ್ತೆಯ ಮಧ್ಯದಲ್ಲಿಯೇ ವ್ಹೀಲಿ ಮಾಡಿಕೊಂದು ಕೊಂಡು ಓಡಾಡುವುದು, ಭಾರತದ ವಿರುದ್ಧ ಪಾಕೀಸ್ಥಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದಾಗ ಪಟಾಕಿ ಹೊಡೆದು ಸಂಭ್ರಮಿಸುವುದು ಹೀಗೆ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದರೂ ಆ ಪ್ರದೇಶದ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಸಹಾ ಈ ದೇಶದ ಕಾನೂನಿಗೂ ನಮಗೂ ಸಂಬಂಧವೇ ಇಲ್ಲಾ ಎನ್ನುವ ರೀತಿಯ ಮನಸ್ಥಿತಿಯನ್ನು ಬೆಳಸಿಕೊಂಡಿರುವುದೇ ಕಳವಳಕಾರಿಯಾಗಿದೆ.
ಇನ್ನೂ ವಿಚಿತ್ರವೆಂದರೆ, ಕೇವಲ ಎರಡು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ ಈ ಬಡವಣೆಯಲ್ಲಿ ಮುಸಲ್ಮಾನರು ಹೆಚ್ಚಾಗುತ್ತಿದ್ದಂತೆಯೇ, ಇದ್ದಕ್ಕಿದ್ದಂತೆಯೇ ಈ ಪ್ರದೇಶದ ಬಹುತೇಕ ಖಾಲಿ ಜಾಗಗಳು ವಕ್ಫ್ ಮಂಡಳಿಗೆ ಸೇರಿದವು ಎಂದು ಅಧಿಕೃತವಾಗಿ ನಮೂದಾಗಿವೆ. ಕೇವಲ ಉದಯಗಿರಿಯಷ್ಟೇ ಅಲ್ಲದೇ ಈಗಾಗಲೇ ತಿಳಿಸಿದಂತೆ, ಉದಯಗಿರಿಯ ಅಕ್ಕ ಪಕ್ಕದ ಬಡಾವಣೆಗಳದ ಶಾಂತಿ ನಗರ, ರಾಜೀವ್ ನಗರ, ಕೆಇಬಿ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳ ಖಾಲೀ ಜಾಗಗಳ ಮೇಲೂ ವಕ್ಫ್ ಕರಿ ನೆರಳು ಬೀಳುವ ಮೂಲಕ ಲವ್ ಜಿಹಾದ್ ರೀತಿಯಲ್ಲಿ ಲ್ಯಾಂಡ್ ಜೆಹಾದ್ ನಡೆಯುತ್ತಿರುವುದು ಅಲ್ಲಿನ ಎಲ್ಲಾ ಪಕ್ಷದ ರಾಜಕಾರಣಿಗಳು ಮತ್ತು ಪಾಲಿಕೆಯ ಆಡಳಿತಾಧಿಕಾರಿಗಳಿಗೆ ತಿಳಿಸಿರುವ ವಿಷಯವಾಗಿದ್ದರೂ, ತುಷ್ಟೀಕರರಣ ಪರಮಾವಧಿಯಿಂದಾಗಿ ಸದ್ದಿಲ್ಲದೇ ಸುಮ್ಮನಿರುವುದೇ ಅಲ್ಲಿನ ಜನರಿಗೆ ಮತ್ತಷ್ಟು ಪುಂಡಾಟಿಕೆ ನಡೆಸಲು ಪ್ರೋತ್ಸಾಹ ನೀಡಿದಂತಾಗಿರುವುದು ವಿಷಾಧನೀಯವಾಗಿದೆ.
ಕೆಲವು ರಾಜಕಾರಣಿಗಳು ಹೇಳುವಂತೆ ಇಲ್ಲಿ ಪುಂಡಾಟಿಕೆ ನಡೆಸುವವರು ಅಪ್ರಾಪ್ತರು, ಅನಕ್ಷರಸ್ಥರು ಮತ್ತು ಅಮಾಯಕರು ಎಂದು ಹೇಳುವುದು ನಿಜಕ್ಕೂ ಶುದ್ಧ ಸುಳ್ಳಾಗಿದೆ. ದಿನಗೂಲಿ ಮಾಡುತ್ತಲೇ ಕನ್ನಡ ಮತ್ತು ಕನ್ನಡ ಪುಸ್ತಕಗಳ ಮೇಲಿನ ಪ್ರೇಮದಿಂದಾಗಿ ಸ್ವಂತ ಹಣದಿಂದ ಸೈಯದ್ ಇಸಾಕ್ ಎಂಬುವವರು ಸುಮಾರು 11,000 ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಬಡವರು ಪುಸ್ತಕಗಳನ್ನು ಓದಲು ಸಾಧ್ಯವಾಗುವಂತಹ ಗ್ರಂಥಾಲಯವನ್ನು ನಿರ್ಮಿಸಿ ಒಂದು ದಶಕಕ್ಕೂ ಅಧಿಕ ಸಮಯದಿಂದ ನಡೆಸಿಕೊಂಡು ಬರುತ್ತಿದ್ದರು. ಈ ಗ್ರಂಥಾಲಯವು ನಾಗರಿಕ ಸೌಲಭ್ಯ (CA) ಸ್ಥಳದಲ್ಲಿದ್ದು ಎಲ್ಲರಿಗೂ ಅನುಕೂಲವಾಗುತ್ತಿತ್ತು. ಕೆಲ ವಾರಗಳ ಹಿಂದೆ ಉದಯಗಿರಿ ಠಾಣೆಗೆ ಬೆಂಕಿ ಹಚ್ಚಿದಂತೆ ಏಪ್ರಿಲ್ 9, 2021 ರಂದು ಕೆಲ ಕಿಡಿಗೇಡಿಗಳು ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ರಾತ್ರೋರಾತ್ರಿಯಲ್ಲಿ ಬೆಂಕಿ ಹಚ್ಚಿದ ಪರಿಣಾಮ ಮುಸಲ್ಮಾನರ ಧಾಳಿಯಿಂದಾಗಿ ನಳಂದ ವಿಶ್ವವಿದ್ಯಾಲಯ ಸುಟ್ಟು ಭಸ್ಮವಾದಂತೆ ಈ ಗ್ರಂಥಾಲಯವೂ ಸುಟ್ಟು ಕರುಕಲಾಗಿದ್ದನ್ನು ಕಂಡ ಸೈಯದ್ ಅವರು ಮುಂದೆ ತಾವು ಎಂದಿಗೂ ಗ್ರಂಥಾಲಯವನ್ನು ಪುನರ್ನಿರ್ಮಿಸುವುದಿಲ್ಲ ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದರು.
ಕನ್ನಡ ಪುಸ್ತಕಗಳಿದ್ದ ಗ್ರಂಥಾಲಯ ಕಿಡಿಗೇಡಿಗಳ ಪುಂಡಾಟಿಕೆ ಬಲಿಯಾದದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮೈಸೂರಿನ ಅಂದಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಲು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಲ್ಲದೇ, ಏಪ್ರಿಲ್ 14, 2021 ರಂದು ರಾಜೀವ್‌ನಗರ 2 ನೇ ಹಂತದಲ್ಲಿ ಸೈಯದ್ ಇಸಾಕ್ ಅವರ ಗ್ರಂಥಾಲಯವನ್ನು ಪುನರ್ನಿರ್ಮಿಸಲು 50,000 ರೂ.ಗಳ ಚೆಕ್ ಸಹಾ ಹಸ್ತಾಂತರಿಸಿದ್ದರು. ಆ ಘಟನೆ ನಡೆದು ಸುಮಾರು ದಿನಗಳಾದರೂ ಈ ಪ್ರಸಂಗದ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಗಮನಿಸಿ ಮತ್ತೆ ಪ್ರತಿಭಟನೆ ನಡೆಸಿದಾಗ, ಸ್ಥಳೀಯ ನಿವಾಸಿ ಸೈಯದ್ ನಾಜೀರ್ ಎಂಬ ವ್ಯಕ್ತಿ ಆ ಗ್ರಂಥಾಲಯದ ಪಕ್ಕದಲ್ಲಿದ್ದ ಸೋಫಾ ರಿಪೇರಿ ಅಂಗಡಿಯ ಬಳಿ ಬೀಡಿ ಹಚ್ಚಿ ಬೆಂಕಿ ಕಡ್ಡಿಯನ್ನು ಆರಿಸದೆ ಬಿಸಾಡಿದ ಪರಿಣಮ ಆ ಗ್ರಂಥಾಲಯ ಸುಟ್ಟು ಹೋಯಿತು ಎಂದು ಆ ಕೇಸನ್ನು ತಿಪ್ಪೇ ಸಾರಿಸುವ ಮೂಲಕ ಆ ಪಕ್ಷ ಈ ಪಕ್ಷ ಎನ್ನುವ ಬೇಧ ಭಾವವಿಲ್ಲದೇ, ಪಕ್ಷಾತೀತವಾಗಿ ಇಂತಹ ಪುಂಡರನ್ನು ಪರೋಕ್ಷವಾಗಿ ರಕ್ಷಿಸುತ್ತಲೇ ಬಂದಿರುವುದರಿಂದಲೇ ಅವರ ಪುಂಡಾಟಿಕೆ ಹೆಚ್ಚಾಗಿದೆ ಎಂದರೂ ತಪ್ಪಾಗದು. ತಮ್ಮ ತಮ್ಮ ಮನೆಗಳಲ್ಲಿ ಯಾವುದೇ ಧರ್ಮದ ಆಚರಣೆಯನ್ನು ಮಾಡಿಕೊಂಡರು, ಮನೆಯಿಂದ ಹೊರಗೆ ಬಂದ ಕೂಡಲೇ, ಇಡೀ ದೇಶದ ಜನರೆಲರೂ ಭಾರತೀಯರು ಮತ್ತು ಅವರೆಲ್ಲರಿಗೂ ಇರುವ ಒಂದೇ ಸಂವಿಧಾನಕ್ಕೆ ಮತ್ತು ಒಂದೇ ಕಾನೂನಿಗೆ ತಲೆ ಬಾಗಲೇ ಬೇಕು ಎಂಬುದನ್ನು ಕಠಿಣವಾಗಿ ಜಾರಿ ತಂದಾಗಲೇ ಈ ರೀತಿಯ ಪುಂಡಾಟಿಕೆಗಳು ನಿಲ್ಲಬಹುದು ಅಲ್ವೇ?
ಏನಂತೀರೀ?
ನಿಮ್ಮವನೇ ಮಂಜುಶ್ರೀ
ಬಹಳ ಸಮಗ್ರವಾಗಿ ಎಲ್ಲ ವಿಚಾರಗಳನ್ನು ಒಳಗೊಂಡಂತೆ ಮಂಡಿಸಿರುವ ಬರಹ. ಸರ್ಕಾರದ ದಪ್ಪ ಚರ್ಮಕ್ಕಾಗಲಿ ಕಿವುಡು ಖಾಯಿಲೆಗಾಗಲಿ ಚುಚ್ಚು ಮದ್ದು ಇದ್ದಂತಿಲ್ಲ. ಮುಂದೊಮ್ಮೆ ಕಿಡಿಯು ಕಿಚ್ಚಾಗುವುದರಲ್ಲಿ ಅನುಮಾನವಿಲ್ಲ.
LikeLike
ಧನ್ಯೋಸ್ಮಿ
LikeLike