ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಕರ್ನಾಟಕ ಎಂದೊಡನೇ ಥಟ್ ಅಂತಾ ನೆನಪಾಗೋದೇ ಬೆಂಗಳೂರು.  ಹೀಗೆ ಆಡಳಿತಾತ್ಮಕವಾಗಿ ಬೆಂಗಳೂರು ಕರ್ನಾಟಕದ ರಾಜಧಾನಿಯಾದರೆ, ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿದ್ದು, ಮೈಸೂರು ಎಂದಾಕ್ಷಣ ನೆನಪಾಗುವುದೇ ವೈಭವೋಪೇತ ದಸರಾ ಹಬ್ಬ. ಇನ್ನು ಕನ್ನಡ ಎಂದೊಡನೆ ಎಲ್ಲರೂ ನಮಸ್ಕರಿಸುವುದೇ ತಾಯಿ ಭುವನೇಶ್ವರಿಗೇ ಮತ್ತು ದಸರಾ ಎಂದಾಕ್ಷಣ ತಾಯಿ ಚಾಮುಂಡೇಶ್ವರಿಗೆ ನಮಸ್ಕರಿಸುತ್ತೇವೆ.

14ನೆಯ ಶತಮಾನದಲ್ಲಿ ಆದಿಗುರು ಶ್ರೀ ಶಂಕರಾಚಾರ್ಯದಿಂದ ಸ್ಥಾಪಿಸಲ್ಪಟ್ಟ ಶ್ರೀ ಶೃಂಗೇರಿ ಶಾರದಾ ಪೀಠದ 12ನೇಯ ಜಗದ್ಗುರುಗಳಾಗಿದ್ದ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಪ್ರಖ್ಯಾತರಾದ ಶ್ರೀ ಶ್ರೀ ಶ್ರೀ ವಿದ್ಯಾರಣ್ಯರು ಪದೇ ಪದೇ ಉತ್ತರದ ಕಡೆಯಿಂದ ಮುಸಲ್ಮಾನರ ಆಕ್ರಮಣ, ಬಿಜಾಪುರದ ಬಹುಮನಿ ಸುಲ್ತಾನ ಮತ್ತು ಗೊಲ್ಕೊಂಡಾದ ರಾಜರುಗಳು ದಕ್ಷಿಣ ಭಾರತದ ಮೇಲೆ ಸಾಲು ಸಾಲು ದಂಡ ಯಾತ್ರೆ ಮಾಡಿ ಲೂಟಿ ಮಾಡುತ್ತಾ ಹಿಂದೂಗಳ ಸಾವಿರಾರು ದೇವಾಲಯಗಳನ್ನು ನಾಶ ಪಡಿಸಿದ್ದಲ್ಲದೇ,  ನಮ್ಮ ಮಾತಾ ಭಗಿನಿಯರ ಮಾನಹಾನಿ ಮಾಡಿದ್ದಲ್ಲದೇ ಬಲವಂತದಿಂದ ಮತಾಂತರ ಮಾಡುವ ದುಸ್ಸಾಹಸಕ್ಕೆ ಇಳಿದಿರುತ್ತಾರೆ. ಮತಾಂತರಕ್ಕೆ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದಕ್ಕೂ  ಹಿಂದು ಮುಂದೂ ನೋಡದಂತಹ ರಾಕ್ಷಸ ಪ್ರವೃತ್ತಿಯಲ್ಲಿ ಆಟ್ಟ ಹಾಸದ ಪರಿಸ್ಥಿತಿ  ಇರುವಾಗ,  ಧರ್ಮ ಉಳಿದಲ್ಲಿ ಮಾತ್ರವೇ ದೇಶ ಉಳಿಯುತ್ತದೆ  ಎಂಬುದನ್ನು ಮನಗಂಡ ಗುರು ವಿದ್ಯಾರಣ್ಯರು, ಸಮರ್ಥರಾದವರಿಂದ  ಒಂದು ಬಲಶಾಲಿಯಾದ ಸೈನ್ಯವನ್ನು ಕಟ್ಟಿ ಮತ್ತೆ ಮುಸಲ್ಮಾನ ಧಾಳಿಕೋರರನ್ನು ಮಟ್ಟ ಹಾಕಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಂತಹ ಸಂಧರ್ಭದಲ್ಲಿಯೇ  ಆವರ ಕಣ್ಣಿಗೆ ಹಕ್ಕ ಬುಕ್ಕರೆಂಬ ಇಬ್ಬರು ಉತ್ಸಾಹೀ ತರುಣರು ಕಣ್ಣಿಗೆಬಿದ್ದು ನಂತರ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ್ದು  ಈಗ ಇತಿಹಾಸ.

ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕಬುಕ್ಕರು ನಂತರ ತುಂಗಾ ಭದ್ರ ನದಿಯ ತಟದಲ್ಲಿರುವ ಆನೆಗೊಂದಿಯ ಮತ್ತೊಂದು ಬದಿಯಲ್ಲಿದ್ದ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕು ಸ್ಥಾಪನೆ ಮಾಡಿ, ವಿರೂಪಾಕ್ಷ ಮತ್ತು ಭುವನೇಶ್ವರಿಯ ಸುಂದರವಾದ ಮತ್ತು ಬೃಹತ್ತಾದ ದೇವಾಲಯವನ್ನು ಕಟ್ಟಿ, ಮೊಘಲರ ವಿರುದ್ಧದ ಪ್ರಪ್ರಥಮ ವಿಜಯದ ಸಂಕೇತವಾಗಿ ನಿರ್ಮಿಸಿದ ಈ ನಗರವನ್ನು ವಿದ್ಯಾನಗರದ ಬದಲಾಗಿ ವಿಜಯನಗರ ಎಂದು ಕರೆಯುವುದೇ ಸೂಕ್ತ ಎಂದು ನಿರ್ಧರಿಸಿದ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ನಂತರದ ದಿನಗಳಲ್ಲಿ ಅದೇ ಹಂಪೆಯಲ್ಲಿ ತಾಯಿ ಭುವನೇಶ್ವರಿಯನ್ನು ಕೇಂದ್ರವಾಗಿಟ್ಟುಕೊಂಡು ಆಶ್ವೀಯುಜ ಮಾಸದ ಮೊದಲ ಹತ್ತು ದಿನಗಳಂದು ವೈಭವೋಪೇತವಾಗಿ ದಸರಾ ಹಬ್ಬ ಎಂಬ ನಾಡಹಬ್ಬದ ಆಚರಣೆಯನ್ನು ಜಾರಿಗೆ ತರುತ್ತಾರೆ.

ಅಂದು ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸ್ಥಾಪಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯ, ಪರಕೀಯರ ಆಕ್ರಮಣವನ್ನು ಮೆಟ್ಟಿ, ಮುಂದೆ ಸುಮಾರು 310ವರ್ಷಗಳ ಕಾಲದಲ್ಲಿ ದಕ್ಷಿಣಾದ್ಯಂತ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡು ಮುಂದೆ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಸುವರ್ಣಯುಗವಾಗಿ ವಿಜೃಂಭಿಸುತ್ತಿದ್ದಂತಹ ಸಂಧರ್ಭದಲ್ಲಿಯೇ, ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ಟಿದರು ಅಲ್ಲಿಂದ ಆಳಿದ ಸುಮಾರು 7 ರಾಜರುಗಳು ಅದನ್ನೇ ಮುಂದುವರಿಸಿಕೊಂಡು ಹೋದರು. 1529ರಲ್ಲಿ ಶ್ರೀ ಕೃಷ್ಣದೇವರಾಯರ ಕಾಲಾವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದು ವಿಜಯನಗರದಿಂದ ಮೈಸೂರಿಗೆ ತರುತ್ತಾರೆ. ಮುಂದೆ 1610 ರಲ್ಲಿ ಆಳ್ವಿಕೆಯಲ್ಲಿದ್ದ ಒಡೆಯರ್ ಅವರು ಮತ್ತೆ 30 ಗ್ರಾಮಗಳನ್ನು ಗೆದ್ದು ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದರಿಂದ ಮೈಸೂರು ಸಂಸ್ಥಾನವನ್ನು 60 ಗ್ರಾಮಗಳ ವರೆಗೆ ವಿಸ್ತರಿಸಿದ್ದರು. ಆಗ ಮೈಸೂರು ಎಂದರೆ ಈಗಿನ ಅರಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವಾಗಿದ್ದು ಉಳಿದ ಕನ್ನೇಗೌಡನ ಕೊಪ್ಪಲು, ಒಂಟೀಕೊಪ್ಪಲು ಮುಂತಾದ ಊರುಗಳಿಂದ ಸುತ್ತುವರಿದಿತ್ತು. ವಿಜಯನಗರಲ್ಲಿ ಬನ್ನಿ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಹಬ್ಬವನ್ನು 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ನಾಡ ಹಬ್ಬವನ್ನಾಗಿ ಆಚರಣೆಗೆ ತರುತ್ತಾರೆ.

ಹೀಗೆ 400ವರ್ಷಗಳಿಗೂ ಅಧಿಕ ಇತಿಹಾಸ ಇರುವ ಈ ದಸರಾ ಹಬ್ಬವನ್ನು  ಸ್ವಾತಂತ್ರ್ಯಾ ನಂತರ ಮೈಸೂರು ಅರಸರ ಬದಲು ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು  ಆಕೆಗೆ ಶ್ರದ್ಧಾ ಭಕ್ತಿಗಳಿಂದ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವುದರ  ಮೂಲಕ ದಸರಾವನ್ನು ಉದ್ಘಾಟಿಸುವ ಸಂಪ್ರದಾಯವಿದ್ದು ಇಂದು ನಿಸ್ಸಂದೇಃಹವಾಗಿ ನಮ್ಮ ಸನಾತನ ಹಿಂದೂ ಸಂಪ್ರದಾಯದ ಪದ್ದತಿಯಂತೆಯೇ ನಡೆಯುತ್ತದೆ.

 

ದಸರಾ ಹಬ್ಬದ ಇಂತಹ ಭವ್ಯ ಪರಂಪರೆಯ ಬಗ್ಗೆ ಅರಿವಿದ್ದರೂ, ದುರಾದೃಷ್ಟವಷಾತ್ ಕೇವಲ ಮತ್ತು ಕೇವಲ ತಮ್ಮ ರಾಜಕೀಯದ ತೆವಲಿಗಾಗಿ ಮತ್ತು ಅಲ್ಪಸಂಖ್ಯಾರ ತುಷ್ಟೀಕರಣ ಅರ್ಥಾತ್  ಅವರ ಮತಗಳ ಓಲೈಕೆಗಾಗಿ ಈ ಬಾರಿಯ ದಸರಾ ಹಬ್ಬದ  ಉದ್ಘಾಟನೆಯನ್ನು ಹಿಂದೂ ಧರ್ಮವನ್ನು ಖಂಡ ತುಂಡವಾಗಿ ವಿರೋಧಿಸುವ, ತಾಯಿ ಭುವನೇಶ್ವರಿಯನ್ನು ಮತ್ತು ಹಳದಿ ಮತ್ತು ಕೆಂಪು ಬಣ್ಣದ  ಕನ್ನಡ ಧ್ವಜವನ್ನು ಒಪ್ಪಿಕೊಳ್ಳಲಾರದ,  ಮುಸ್ಲಿಂ ಮತೀಯವಾದಿ ಲೇಖಕಿ ಹಾಗೂ ಹೋರಾಟಗಾರ್ತಿ ಬಾನು ಮುಷ್ತಾಕ್  ಅವರಿಗೆ ಈ ಬಾರಿ ಬೂಕರ್ ಪ್ರಶಸ್ತಿ ಬಂದಿದೆ ಎಂಬ ಏಕೈಕ ಮಾನದಂಡವಾಗಿ ಪರಿಗಣಿಸಿ ಆಕೆಯಿಂದ  ಮಾಡಿಸಲು ಮುಂದಾಗಿರುವುದು ನಿಜಕ್ಕೂ  ಅಕ್ಷೇಪಾರ್ಹ ಮತ್ತು ಖಂಡನೀಯವಾಗಿದ್ದು ಸಕಲ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದರೂ ತಪ್ಪಾಗದು.

ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಮತ್ತು ಹೋದ ಬಂದ ಕಡೆಯಲ್ಲೆಲ್ಲಾ ಹಿಂದೂಗಳನ್ನೇ ವಿರೋಧಿಸುವವರಿಂದಲೇ ನಾಡ ಹಬ್ಬ ದಸರಾ ಹಬ್ಬವನ್ನು ಉದ್ಟಾಟಿಸುವ ಚಾಳಿ  ಕಾಂಗ್ರೇಸ್ ಸರ್ಕಾರಕ್ಕೆ ಇದೇ ಮೊದಲಾಗಿರದೇ, ಸ್ವಘೋಷಿತ ನಾದಬ್ರಹ್ಮ  ಮತ್ತು  ಪದೇ ಪದೇ  ಒಂದಲ್ಲಾ ಒಂದು ವೇದಿಕೆಯ ಮೇಲೆ ಹಿಂದೂಗಳನ್ನು ಮತ್ತು ಹಿಂದೂ ಯತಿಗಳನ್ನು ಟೀಕಿಸುವ  ನಗರ ನಕ್ಸಲ್, ಸ್ವಘೋಷಿತ ಮೈಸೂರು ರಸ್ತೆಯ ಮಾಜೀ ಪೋಲಿ ಕನ್ನಡ ಚಿತ್ರರಂಗದ ಗೀತೆರಚನಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ 2023ರ ದಸರಾ ಹಬ್ಬ ವನ್ನು ಉದ್ಘಾಟಿಸಿ  ಏಳು ಕೋಟಿ ಕನ್ನಡಿಗರ ಅದರಲ್ಲೂ  ಹಿಂದೂಗಳ ಭಾವನೆಗಳೊಂದಿಗೆ ಚಲ್ಲಾಟವಾಡಿತ್ತು,

ಅದೇ ರೀತಿ ಈ ಹಿಂದೆ ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಂತಹ ಸಂಧರ್ಭದಲ್ಲಿ ಜನ್ಮತಃ ಹಿಂದೂವಾಗಿ ಹುಟ್ಟಿದ್ದರೂ ನಂತರ ದಿನಗಳಲ್ಲಿ ಸೈದ್ಧಾಂತಿಹವಾಗಿ ಕಮ್ಯೂನಿಸ್ಟ್  ಸಿದ್ಧಾಂತವನ್ನು ಒಪ್ಪಿ ಅಪ್ಪಿಕೊಂಡು ಅದೇ ಸೈದ್ಧಾಂತಿಕ ಧೋರಣೆಯನ್ನೇ ಮಕ್ಕಳ ಪಠ್ಯ ಪುಸ್ತಗಳಲ್ಲಿಯೂ ಹೇರಿದ್ದ ಪ್ರೊ. ಬರಗೂರು ರಾಮಚಂದ್ರಪ್ಪನವರಿಂದ ಮೈಸೂರು ದಸರಾ ಹಬ್ಬವನ್ನು ಉಧ್ಘಾಟನೆ ಮಾಡಿಸಲಾಗಿತ್ತು. ಉಧ್ಘಾಟನಾ ಸಂಧರ್ಭದಲ್ಲಿ ದೀಪ ಬೆಳಗುವುದನ್ನು ಬೆಂಕಿ ಇಡಲು ಬಳಸುವ ಕೊಳ್ಳಿಯೊಂದಿಗೆ ಹೋಲಿಸಿದ್ದ ಅದೇ ಬರಗೂರು ರಾಮಚಂದ್ರಪ್ಪ  ಉಧ್ಘಾಟನಾ ಸಮಾರಂಭದ ಸಾಂಪ್ರದಾಯಿಕ ರೂಡಿಯಂತೆ ದೀಪ ಪ್ರಜ್ವಲನೆ ಮಾಡದೇ ಧಿಕ್ಕರಿಸಿದ್ದೂ ಸಹಾ ಹಿಂದೂಗಳ/ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿತ್ತು.

ಕಟ್ಟರ್  ಇಸ್ಲಾಂ ಧರ್ಮದ ಅನುಯಾಯಿ ಆಗಿರುವ ಕೆಲ ವರ್ಷಗಳ ಹಿಂದೆ  ಮುಸ್ಲಿಂ ಮಹಿಳೆಯರ ಅನುಕೂಲಕ್ಕಾಗಿ ತ್ರಿವಳಿ ತಲ್ಲಾಖ್ ನಿಷೇಧ ಹೇರಿದ್ದಾಗ  ಅಂತಹ ಬದಲಾವಣೆಯನ್ನು ಸ್ವೀಕರಿಸುವ ಮನೋಭಾವನೆಯನ್ನು ಹೊಂದಿರದ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದ ಇದೇ ಬಾನು ಮುಷ್ತಾಕ್  ಈಗ  ಹಿಂದೂ ಧರ್ಮದ ನಂಬಿಕೆಯಾದ ಬಹುತ್ವದ ಮೂರ್ತಿ ಪೂಜೆಯನ್ನು  ಒಪ್ಪಿಕೊಳ್ಳುತ್ತಾರೆಯೇ? 

ಒಂದು ಪಕ್ಷ ಪ್ರಚಾರ ಪ್ರಿಯತೆಗಾಗಿ ಹಾಗೆ  ಒಪ್ಪಿಕೊಂಡು ತಾಯಿ ಚಾಮುಂಡೇಶ್ವರಿ ದೇವಿಗೆ ಹೂವನ್ನು ಹಾಕಿ ದೀಪ ಪ್ರಜ್ವಲನೆ ಮಾಡಿ ನಂತರ  ಅದರ ಪಾಪ ಪರಿಹಾರ್ಥವಾಗಿ ಮನೆಯಲ್ಲಿ ಮುಸಲ್ಮಾನರ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿ ಕೊಂಡರೂ, ಪ್ರತೀ ದಿನವೂ ಅಲ್ಲಾಹು ಅಕ್ಬರ್ ಎಂದು  ಐದು ಬಾರಿ ಪ್ರಾರ್ಥನೆ ಮಾಡುವ ಮೂಲಕ ಅಲ್ಲಾಹು ಒಬ್ಬನೇ ದೇವರು, ಅಲ್ಲಾಹುವಿನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮೂರ್ತಿ ಪೂಜೆಯನ್ನು ಒಪ್ಪುವುದಿಲ್ಲ. ಬಹುತ್ವದ ಮೂರ್ತಿಯನ್ನು ಪೂಜಿಸುವವರು ಕಾಫೀರರು. ಕಾಫೀರರನ್ನು ಒಂದು ಪಕ್ಷ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಳಿಸಿ ಇಲ್ಲವೇ ಅವರನ್ನು ಕಂಡಲ್ಲಿ ಕೊಲ್ಲಿ ಎನ್ನುವ ಇಸ್ಲಾಮ್ ಮತದ ಸಿದ್ಧಾಂತವನ್ನು ಧಿಕ್ಕರಿಸಿದಂತೆ ಆಗುವುದಿಲ್ಲವೇ? ರಿಪಬ್ಲಿಕ್ ಕನ್ನಡ ಛಾನೆಲ್ಲಿನ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಮುಲ್ಲಾರೊಬ್ಬರು, ಮುಸಲ್ಮಾನರು ಹಿಂದೂ ದೇವತೆಗಳನ್ನು ಪೂಜಿಸುವುದು ನಿಷಿದ್ಧ, ಹಾಗೆ ಮಾಡಿದಲ್ಲಿ ಅದು ಹರಾಮ್ ಆಗುತ್ತದೆ ಮತ್ತು ಅವರು ಧರ್ಮ ಭ್ರಷ್ಟರಾಗುತ್ತಾರೆ ಎಂದಿದ್ದಾರೆ. ಅಲ್ಲಾನಿಂದ ಮಾತ್ರವೇ ಅಂತಿಮವಾಗಿ ಮೋಕ್ಷಕ್ಕೆ ದಾರಿ ಎಂಬುದನ್ನು ನಂಬಿರುವ ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಗಳನ್ನು ಮೀರಿ ದಸರಾ ಹಬ್ಬದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುತ್ತಾರೆ ಎಂದು ನಂಬಲು ಸಾಧ್ಯವೇ? ಹೀಗೆ ತಾಯಿ ಚಾಮುಂಡೇಶ್ವರಿಯ ಮೇಲೆ ನಂಬಿಕೆ, ಶ್ರದ್ಧೆಗಳಿಲ್ಲದೇ ಮಾಡುವ ಪೂಜೆ ಕಾಟಾಚಾರ ಎನಿಸಿಕೊಳ್ಳುವುದಲ್ಲದೇ, ಕಾಂಗ್ರೇಸ್ಸಿನ ಈ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಮುಸ್ಲಿಂ ಓಟಿನ ತೆವಲಿಗಾಗಿ ಭಾನು ಅವರಿಂದ ದಸರಾ ಉಧ್ಟಾಟನೆ ಮಾಡಿಸುವ ಮೂಲಕ ಅಕೆಯನ್ನು ಧರ್ಮ ಭ್ರಷ್ಟರಾಗುವಷ್ಟೇ ಅಲ್ಲದೇ ಆಕೆಯ ನಂಬಿಕೆಗಳಿಗೆ ಮೋಸ ಮಾಡಿದಂತಾಗುವುದಿಲ್ಲವೇ?

ಅರೇ! ಭಾರತ ಎನ್ನುವುದು ಜಾತ್ಯಾತೀತ ರಾಷ್ಟ್ರ (ಜಾತ್ಯಾತೀತ ಎನ್ನುವುದು ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಇರಲಿಲ್ಲ.  ಇಂದಿರಾ ಗಾಂಧಿಯವರು ಸೇರಿಸಿದ್ದು) ಇದು ಕುವೆಂಪು  ಅವರು ಹೇಳಿದಂತೆ  ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು  ಎಂದು ಹೇಳುವವರಿಗೇನೂ ಕಡಿಮೆ ಇಲ್ಲಾ. ಆದರೆ ಆ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದನ್ನು ಎಲ್ಲರೂ ಮನಃ ಫೂರ್ವಕವಾಗಿ   ಒಪ್ಪಿಕೊಳ್ಳಬೇಕು ಅಲ್ಲವೇ? ಅರೇ, ಅವರದ್ದೇ ಮುಸಲ್ಮಾನ ಧರ್ಮದ ಮಸೀದಿಗಳಲ್ಲಿಯೇ ಹೆಂಗಸರಿಗೆ ಪ್ರವೇಶವಿಲ್ಲಾ. ಇಂತಹ ಪರಿಸ್ಥಿತಿ ಇರುವಾಗ ಆಕೆ ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಬಂದಲ್ಲಿ ಆಕೆಯನ್ನು ಆಕೆಯ ಧರ್ಮೀಯರು ಒಪ್ಪುವರೇ?

 

ಏನು ಕೇಳಿದರೂ ಗೊತ್ತಿಲ್ಲಾ ನನಗೇನು ಗೊತ್ತಿಲ್ಲಾ ಎಂದು ಹೇಳುವ ಈ ರಾಜ್ಯದ ಗೃಹಮಂತ್ರಿಗಳು ಈ ಹಿಂದೇ ನಿಸಾರ್ ಅಹಮದ್ ಅವರು ದಸರಾ ಉದ್ಭಾಟನೆ ಮಾಡಿರಲಿಲ್ಲವೇ? ಎಂಬ ಪ್ರಶ್ನೆ ಕೇಳುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುವ ಮೂಲಕ ಹಿಂದೂಗಳ ಮುಂದೆ ಹಾಸ್ಯಾಸ್ಪದವಾಗಿದ್ದಾರೆ. ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಬೆಣ್ಣೆ ಕದ್ದನೋ ಎಂದು ನಮ್ಮ ಕೃಷ್ಣನನ್ನು ಹೊಗಳುವ ಮೂಲಕ ಸರ್ವಧರ್ಮ ಸಮನ್ವಯಕಾರರಾಗಿದ್ದರು.

ಇತ್ತೀಚೆಗೆ ತಾನೇ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾದ ಮತ್ತೊಬ್ಬ ಸಚಿವ ಮಹದೇವಪ್ಪನವರು ದಸರಾ ಎನ್ನುವುದು ಸಾಂಸ್ಕೃತಿಕ ಉತ್ಸವ ಹಾಗಾಗಿ ಭಾನು ಮುಷ್ತಾಕ್ ಉದ್ಭಾಟನೆ ಮಡುವುದರಲ್ಲಿ ತಪ್ಪಿಲ್ಲಾ ಎಂದು ಹೇಳಿರುವುದು ಅಕ್ಷಮ್ಯ ಅಪರಾಧವಾಗಿದೆ. ದಸರಾ ಎನ್ನುವುದು ನಮ್ಮ ಸನಾತನ ಧಾರ್ಮಿಕ ಕಾರ್ಯಕ್ರಮವಾಗಿದ್ದು ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ ಅಷ್ಟೇ.

ದುರಾದೃಷ್ಟವಾಷಾತ್ ಇದೇ ಭಾನು ಮುಷ್ಟಾಕ್ ಕೆಲ ವರ್ಷಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ, ಹಳದಿ ಮತ್ತು ಕುಂಕುಮ ಬಣ್ಣವನ್ನು  ಕನ್ನಡ ತಾಯಿ ಭುವನೇಶ್ವರಿಯವರಿಗೆ ತೋಡಿಸಿ ಕನ್ನಡವನ್ನು  ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. , ಅರಿಶಿನ-ಕುಂಕುಮದ ಲೇಪಿಸಿ ಭುವನೇಶ್ವರಿಯಾಗಿ ಮಂದಾಸನದ ಮೇಲೆ ಕೂರಿಸಿ ಬಿಟ್ಟಿರಿ. ತನ್ನಂತಹ ಅನ್ಯಧರ್ಮೀಯರನ್ನು ಕನ್ನಡದಿಂದ ದೂರ ಮಾಡಿರುವ ಕಾರಣ, ತಾನು ಭುವನೇಶ್ವರಿಯನ್ನು ಒಪ್ಪುವುದಿಲ್ಲಾ ಈ ಕಾರಣಕ್ಕಾಗಿ ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸಲಾಗಲಿಲ್ಲಾ, ಹಾಗಾಗಿ ನಾನೆಲ್ಲಿ ನಿಲ್ಲಬೇಕು. ನಾನೇನನ್ನು ನೋಡಲಿ, ನಾನೆಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಟ್ಟವಿಕೆ ಇಂದಿನಿಂದಲ್ಲ, ಎಂದಿನಿಂದಲೋ ಆರಂಭವಾಗಿತ್ತು. ಆದರೆ, ಇಂದು ಪೂರ್ಣಗೊಂಡಿದೆಯಷ್ಟೇ  ಎಂದು ಹೇಳಿದ್ದಾರೆ.ಹಾಗೆಯೇ ತಮ್ಮ ಮಾತನ್ನು ಮುಂದುವರೆಸುತ್ತಾ, ಮನುಸ್ಮೃತಿಯಲ್ಲಿ ಬರುವಂತಹ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ | ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ || ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ ಮತ್ತು ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ!  ಎಂದು ಹೇಳುತ್ತಾ ಭುವನೇಶ್ವರಿಯ ಹೆಸರಿನಲ್ಲಿ ಕನ್ನಡಿಗರು ತನ್ನನ್ನು ತುಳಿಯುವುದನ್ನು ನಿಲ್ಲಿಸಿ ಎಂದು ಹೇಳುವ ಮೂಲಕ ಹಿಂದೂ ದೇವತೆಗಳ ಬಗ್ಗೆ ಬಹಿರಂಗವಾಗಿಯೇ  ದ್ವೇಷವನ್ನು ಕಾರಿದ್ದ ಭಾನು ಮುಷ್ತಾಕ್ ಎಂಬ ಅನ್ಯ ಧರ್ಮೀಯ ಮಹಿಳೆಯಿಂದ  ಹಿಂದೂಗಳ ನಾಡ ಹಬ್ಬ  ದಸರಾ ಉದ್ಭಾಟನೆ ಮಾಡಿಸಲು ಈ ಸರ್ಕಾರ ಹೊರಟಿರುವುದು ಸ್ಪಷ್ಟವಾಗಿ ಓಲೈಕೆ ರಾಜಕಾರಣ ಎಂಬುದು ಜಗಜ್ಜಾಹೀರಾತಾಗಿದೆ ಅಲ್ವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ತಪ್ಪಿಸುವ ಸಲುವಾಗಿಯೇ ವಿಜಯನಗರ ಸಾಮ್ರಾಜ್ಯವನ್ನು ಆರಂಭಿಸಿ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿಯೇ ನಾಡಹಬ್ಬವಾಗಿ ದಸರಾ ಹಬ್ಬ ಆರಂಭಿಸಿದ್ದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್  ಅವರಿಂದ ದಸರಾ ಚಾಲನೆಗೆ ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ನಂಬಿಕೆತೆ ದ್ರೋಹ ಬಗೆಯುವುದಷ್ಟೇ ಅಲ್ಲದೇ, ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?

 ವಿಜಯನಗರ ಕಾಲದಿಂದ ಇಂದಿನ ವರೆಗೂ ಸರ್ಕಾರದ ವತಿಯಿಂದ ದಸರಾ ಹಬ್ಬ ಆಚರಿಸಲ್ಪಡುತ್ತಿದ್ದರೂ ಅದು ಸನಾತನ ಸಂಸ್ಕೃತಿಯ ಪ್ರಕಾರ ನಾಡ ಹಬ್ಬವಾಗಿಯೇ ಉಳಿದಿದೆಯೇ ಹೊರತು ಯಾರೋ ಕೆಲವು ಬೆರ್ಕೆಗಳು ಹೇಳುವಂತೆ  ಜಾತ್ಯಾತೀತ ಹಬ್ಬವಾಗಿಲ್ಲ ಮತ್ತು ಹಬ್ಬವಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

  1. ದಸರಾ ಎನ್ನುವುದು ನಮ್ಮ ಸನಾತನ ಧಾರ್ಮಿಕ ಕಾರ್ಯಕ್ರಮವಾಗಿದ್ದು ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ ಅಷ್ಟೇ... ಲೇಖನದಲ್ಲಿನ ಮಾತು ಸರ್ಕಾರಗಳು ಅಕ್ಷರಶಃ ಧಿಕ್ಕರಿಸಿ ಹೈಜಾಕ್ ಮಾಡಿ ಜಾತ್ಯಾತೀತದ ರಂಗು ಬಳಿದು ಅಪಭ್ರಂಶಗೊಳಿಸಿವೆ.

    Liked by 1 person

  2. wonderful, perfect.

    further, Nityotsava by nissar ahemed is Sung by lakhs and crores of students in Thousands of schools.

    we welcome people with this mentality.

    further, though DUNDIRAJ has also won the same, WHY NOT the same importance is given to him.

    Liked by 1 person

Leave a reply to Manjunath Cancel reply