ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ಬೇಸಿಗೆಯ ರಜೆಯಲ್ಲಿ ಮಗಳು ಮತ್ತು ಮೊಮ್ಮಗ ಹಳ್ಳಿಗೆ ಬಂದ್ದಿದ್ದಾಗ ಅದೊಮ್ಮೆ ತನ್ನ ಮಗನ ಮಗ ಮತ್ತು ಮಗಳ ಮಗ ಇಬ್ಬರನ್ನೂ ತೋಟಕ್ಕೆ ಕರೆದುಕೊಂಡು ಹೋಗುವಾಗ, ಮಗನ ಮಗನನ್ನು ಕೈ ಹಿಡಿದುಕೊಂಡೂ ಊರಿನಿಂದ ಬಂದಿದ್ದ ಮಗಳ ಮಗನನ್ನು ಹೆಗಲು ಮೇಲೆ ಕೂರಿಸಿಕೊಂಡು ಇನ್ನೇನು ತೋಟದ ಬಳಿ ಬರುವಷ್ಟರಲ್ಲಿ ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗ, ಅಜ್ಜಾ.. ಅಜ್ಜಾ.. ನೋಡಿ ಆ ದನಗಳು ನಿಮ್ಮ ತೋಟದ ಗಿಡಗಳನ್ನು ಎಷ್ಟು ಚೆನ್ನಾಗಿ ಮೇಯ್ಯುತ್ತಿವೆ ಎಂದು ಸಂತಸದಿಂದ ಹೇಳಿದ್ದಂತೆಯೇ, ಮಗನ ಮಗ ತನ್ನ ತಾತನ ಕೈ ಬಿಡಿಸಿಕೊಂಡು ಅಲ್ಲೇ ಸಿಕ್ಕ ಕಡ್ಡಿಯನ್ನು ಹಿಡಿದು ಕೊಂಡು ದನವನ್ನು ಓಡಿಸಲು ಮುಂದಾದ. ಅದನ್ನು ಕಂಡ ಮಗಳ ಮಗ ಪಾಪಾ ಆ ಹಸುವನ್ನು ಓಡಿಸಬಾರದಿತ್ತು ಎಂದಾಗ, ಅದುವರೆವಿಗೂ ಸುಮ್ಮನಿದ್ದ ಆ ಅಜ್ಜಾ, ಲೇಯ್! ನಿಮ್ಮ ತೋಟ ನಿಮ್ಮ ತೋಟ ಎನ್ನುತ್ತಿದ್ದೀಯಾ! ನಮ್ಮ ತೋಟಕ್ಕೆ ದನ ನುಗ್ಗಿದ್ದನ್ನು ಸಂತೋಷ ಪಡುತ್ತೀಯಾ, ದನವನ್ನು ಆಚೆಗೆ ಓಡಿಸಿದರೆ ದುಃಖ ಪಡುತ್ತೀಯಾ?, ಅಜ್ಜಾ ನಮ್ಮನೆ ಅಲ್ಲಿದೆ. ಇದು ನಿಮ್ಮೂರು. ನಿಮ್ಮ ಮನೆ. ನಿಮ್ಮ ತೋಟ. ಬೇಸಿಗೆಯಲ್ಲಿ ಕೇವಲ ಮಜಾ ಮಾಡುವುದಕ್ಕಷ್ಟೇ ನಾವು ಇಲ್ಲಿ ಬಂದಿದ್ದೇವೆ. ರಜಾ ಮುಗಿಯುತಿದ್ದಂತೆಯೇ ನಮ್ಮೂರಿಗೆ ಹೋಗುತ್ತೇವೆ ಎಂದಾಗ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಗಾದೆಯಂತೆ, ಹೊರ ಊರಿನ ಮಕ್ಕಳಿಗೆ ನಮ್ಮ ತೋಟದ ಬಗ್ಗೆ ಅಕ್ಕರೆ ಹೇಗೆ ತಾನೇ ಮೂಡುತ್ತದೆ ಎಂದು ಮಮ್ಮಲ ಮರುಗಿ ಮನೆಗೆ ಹೋಗುವಾಗ ಮಗನ ಮಗನನ್ನು ಹೆಗಲ ಮೇಲೆಯೂ ಮಗಳ ಮಗನನ್ನು ಕೈ ಹಿಡಿದು ನಡೆಸಿಕೊಂಡು ಹೋದರು.

ಯಾಕಪ್ಪಾ ಇಷ್ಟೇಲ್ಲಾ ಪೀಠಿಕೆ ಎಂದರೆ, ದೂರದ ಇಟಲಿಯಿಂದ ಇಂಗ್ಲೇಂಡಿಗೆ ಬಂದು ಅಲ್ಲಿ ಭಾರತದ ಪ್ರಧಾನಿಗಳ ಮಗನನ್ನು ಬುಟ್ಟಿಗೆ ಹಾಕಿಕೊಂಡು ಮಾದುವೆಯಾಗಿ ಭಾರತಕ್ಕೆ ಬಂದು, ಎರಡು ಮಕ್ಕಳ ತಾಯಿಯಾಗಿ 13 ವರ್ಷಗಳು ಕಳೆದರೂ ಇಲ್ಲಿನ ಭಾಷೆ ಬಿಡಿ ಇಲ್ಲಿನ ಪೌರತ್ವವನ್ನೂ ಪಡೆಯದೇ, ಭಾರತದ ಪ್ರಧಾನಿಗಳ ನಿವಾಸದಲ್ಲೇ ಝಾಂಡಾ ಹೂಡಿ, ನಂತರ ತನ್ನ ಅನುಕೂಲಕ್ಕಾಗಿ ಈ ದೇಶದ ಪೌರತ್ವವನ್ನು ಪಡೆದು, ಅತ್ತೆ ಮತ್ತು ಗಂಡ ಅಕಾಲಿಕವಾಗಿ ಮರಣ ಹೊಂದಿದಾಗ, ಈ ದೇಶದ ಸಂಸ್ಕಾರ, ಸಂಸ್ಕೃತಿಯ ಕೊಂಚವೂ ಅರಿವಿಲ್ಲದೇ ಹೋದರೂ, ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷಯಾಗಿ, ಬೇರೆಯವರ ಸಹಾಯದಿಂದ ಪ್ರಧಾನ ಮಂತ್ರಿಯಾಗಲು ಹೋಗಿ, ವಿದೇಶಿ ಸಂಜಾತೆ ಭಾರತದ ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದ ರಾಜತಾಂತ್ರಿಕತೆಯನ್ನು ಅಂದಿನ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಂ ತಿಳಿಸಿದಾಗ, ಅಧಿಕಾರ ತ್ಯಾಗ ಎಂಬ ನಾಟಕ ಮಾಡಿ ಮುಂದಿನ ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಎಂಬ ಮಹಾ ಮೇಧಾವಿಯನ್ನು ಮಕ್ಕಳಾಟದ ಬೊಂಬೆಯಂತೆ ಪ್ರಧಾನಿಯನ್ನಾಗಿಸಿ ಹಿಂಬಾಗಿಲಿನಿಂದ ಆಧಿಕಾರ ನಡೆಸಿದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿge, ಕಳೆದ 12 ವರ್ಷಗಳಿಂದಲೂ ಮೇಲಿಂದ ಮೇಲೆ ಸೋಲನ್ನು ಅನುಭವಿಸುತ್ತಾ, ಸೋಲಿನಲ್ಲಿ ಶತಕದತ್ತ ಧಾಪುಗಾಲು ಹಾಕುತ್ತಿರುವ ಸಮಯದಲ್ಲೇ ಶತಾಯ ಗತಾಯ ಅಧಿಕಾರಕ್ಕೆ ಬರುವ ಸಲುವಾಗಿ ಮತ್ತೆ ತಾಯಿ ಮಗ ಹೊಸಾ ನಾಟಕ ಆಡಲು ಸಿದ್ಧವಾಗುತ್ತಿರುವುದನ್ನು ಈ ದೇಶದ ಬುದ್ಧಿವಂತ ಜನರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಧಾಳಿಯಲ್ಲಿ ಇರಾನಿನ ಶಿಯಾ ಮುಸಲ್ಮಾನರ ಧಾರ್ಮಿಕ ನಾಯಕ ಮತ್ತು ಜಗತ್ತಿನ ಅನೇಕ ಮುಸಲ್ಮಾನ್ ಭಯೋತ್ಪಾದಕರ ಆಶ್ರಯದಾತ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಕ್ಕೆ, ಕೇವಲ ಇರಾನ್ ಅಷ್ಟೇ ಅಲ್ಲದೇ ಬಹುತೇಕ ಮುಸ್ಲಿಂ ರಾಷ್ಟ್ರದ ಜನರೇ ಸಂಭ್ರಮಿಸುತ್ತಿದ್ದರೆ, ಭಾರತದಲ್ಲಿರುವ ಶಿಯಾ ಮುಸಲ್ಮಾನರನ್ನು ಓಲೈಸಿಕೊಳ್ಳುವ ಸಲುವಾಗಿ, ಯಾರೋ ಬರೆದುಕೊಟ್ಟ ಲೇಖನವನ್ನು ತನ್ನ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಸೋನಿಯಾ, ಖಮೇನಿ ನಿಧನದ ಕುರಿತಾಗಿ ಭಾರತದ ಮೌನ ತಟಸ್ಥ ನಿಲುವಲ್ಲ. ಅದು ಹೊಣೆಗಾರಿಕೆಯಿಂದ ಹಿಂದೆ ಸರಿಯುವ ಮನಸ್ಥಿತಿಯಾಗಿದೆ ಎನ್ನುತ್ತಾ, ಪರೋಕ್ಷವಾಗಿ ಪ್ರಧಾನಿಗಳನ್ನು ಟೀಕಿಸಿದ್ದರೆ, ಅದನ್ನೇ ಆಕೆಯ ಮಗ ರಾಹುಲ್ ಸಹಾ ತನ್ನ ಟಿಟ್ವರ್ ನಲ್ಲಿ ಹಾಕುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾನೆ. ಖಮೇನಿಗೆ ಇರಾನಿನಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆ ಇರಲಿಲ್ಲ. ಹಾಗಾಗಿ ವಿದೇಶಾಂಗ ನೀತಿಯನುಸಾರ ಶೋಕ ವ್ಯಕ್ತಪಡಿಸುವ ಪ್ರಮೇಯವೇ ಇಲ್ಲಾ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಕಾಂಗ್ರೇಸ್ಸಿಗರಿಗೆ ಜನರನ್ನು ಸರ್ಕಾರದ ವಿರುಧ್ಧ ಎತ್ತಿಕಟ್ಟುವುದಷ್ಟೇ ಅವರ ಪರಮೋಚ್ಚ ಗುರಿ ಎಂಬುದು ಜಗಜ್ಜಾಹೀರಾತಾಗಿದೆ.

ಇನ್ನು ಅನೇಕ ದಶಕಗಳಿಂದಲೂ ಇರಾನ್ ನೊಂದಿಗೆ ಭಾರತ ಒಳ್ಳೆಯ ಸಂಬಂಧ ಹೊಂದಿದ್ದು, ಖಮೇನಿ ಜವಹರ್ ಲಾಲ್ ನೆಹರು ಅವರ ಕಟ್ಟಾ ಅಭಿಮಾನಿಯಾಗಿದ್ದರು. ಅನೇಕ ಸಂಧರ್ಭಗಳಲ್ಲಿ ಭಾರತ ಪರ ವಹಿಸಿದ್ದದ್ದರಿಂದ ಭಾರತ ಇರಾನ್ ಪರ ನಿಲ್ಲಬೇಕಿತ್ತು ಎಂದಿದ್ದಾರೆ. ಆದರೆ ಅದೇ ಖಮೇನಿ ಕಟ್ಟರ್ ಮುಸಲ್ಮಾನರಾಗಿದ್ದು ಭಾರತದಲ್ಲಿ ನಡೆದ ಅನೇಕ ಭಯೋತ್ಪಾದನಾ ಚಟುವಟಿಕೆಗಳಿಗೆ ಕಾರಣೀಭೂತನಾಗಿದ್ದೆ ಎನ್ನುವುದನ್ನು ಸೋನಿಯಾ ತಿಳಿಯದಂತಿದೆ. ಹೆಣ್ಣು ಮಕ್ಕಳನ್ನು ದೇವರು ಗಂಡಸರನ್ನು ತೃಪ್ತಿಪಡಿಸುವ ಸಲುವಾಗಿ ಮತ್ತು ಮಕ್ಕಳನ್ನು ಹೆರುವುದಕ್ಕಾಗಿ ಸೃಷ್ಟಿಸಿದ್ದಾನೆ. ಹೆಂಗಸರು, ನಾಯಿ, ಕುರಿ, ಕತ್ತೆಗಳಂತೆ ಗಂಡರ ಸೇವೆಗಷ್ಟೇ ಸೀಮಿತ ಎಂಬ ಮಾತುಗಳನ್ನೂ ಖಮೇನಿ ಹೇಳಿದ್ದನ್ನು ಸೋನಿಯಾ ಅರಿಯದಂತಿದೆ, ಅದೇ ರೀತಿಯಾಗಿ ಹೆಣ್ಣು ಮಗಳೊಬ್ಬಲು ಇರಾನಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಳಿಯ ಹೊಡೆತಕ್ಕೆ ಆಕೆಯ ಹಿಜಾಬ್ ಸರಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಿ, ಆಕೆಯ ಮೇಲೆ ಅಲ್ಲಿನ ಪೋಲಿಸರು ಸಾಮೂಹಿಕ ಅತ್ಯಾಚಾರ ನಡೆಸಿ, ಕಡೆಗೆ ಸಾರ್ವಜನಿಕವಾಗಿ ಅಕೆಯನ್ನು ಗಲ್ಲಿಗೇರಿಸಿದಾಗ ಕರಗದ ಸೋನಿಯಾ ಹೃದಯ ಈಗ ಖಮೇನಿ ಸತ್ತಾಗ ಎದೆ ಬಡಿದುಕೊಳ್ಳುತ್ತಿರುವುದು ಮೊಸಳೆಯ ಕಣ್ಣೀರು ಎಂಬುದು ಸ್ಪಷ್ಟವಾಗಿದೆ.

ಪದೇ ಪದೇ ಕಾಶ್ಮೀರ ಪಾಕೀಸ್ಥಾನದ ಭಾಗವಾಗಬೇಕು. ಕಾಶ್ಮೀರದ ಮುಸ್ಲಿಮ್ಮರ ಮೇಲೆ ಭಾರತ ಧಾಳಿ ನಡೆಸುತ್ತಿದೆ ಎನ್ನುತ್ತಲೇ ಇದ್ದ ಖಮೇನಿ, ಕಾಶ್ಮೀರದ ಸ್ವಾಯುತ್ತತೆಯನ್ನು ಮೋದಿ ಸರ್ಕಾರ ತೆಗೆದು ಹಾಕಿದಾಗ, ಕಾಶ್ಮೀರಿಗಳ ಸ್ವಾತ್ರಂತ್ರ ಮತ್ತು ಸವಲತ್ತುಗಳನ್ನು ಭಾರತ ಸರ್ಕಾರ ಕಿತ್ತುಕೊಂಡಿದೆ ಎಂದು ಆರೋಪಿಸಿ, ಅದರ ವಿರುದ್ಧ ಇರಾನಿನ ಸಂಸತ್ತಿನಲ್ಲಿ ನಿಂದನಾ ನಿರ್ಣಯವನ್ನು ತೆಗೆದುಕೊಂಡಿದ್ದ. ಪಾಕೀಸ್ಥಾನ ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಪರೋಕ್ಷವಾಗಿ ನಡೆಸಿದ ಬಹುತೇಕ ಧಾಳಿಯ (ಪುಲ್ವಾಮ, ಪೆಹೆಲ್ಗಾಂ ಧಾಳಿ, CAA ಸಮಯದಲ್ಲಿ ದೆಹಲಿಯ ಶಹೀನ್ ಭಾಗ್ ನಲ್ಲಿನ ಮುಸ್ಲಿಂ ಹೆಣ್ಣು ಮಕ್ಕಳ ತಿಂಗಳಾನುಗಟ್ಟಲೆಯ ಪ್ರತಿಭಟನೆ) ಪ್ರಮುಖ ರೂವಾರಿ ಇದೇ ಖಮೇನಿಯಾಗಿದ್ದ. ಇನ್ನು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾಗಿ ಅಲ್ಲಿ ನಿರ್ಮಾಣವಾದ ರಾಮ ಮಂದಿರವನೂ ಖಮೇನಿ ಖಂಡಿಸಿದ್ದಕ್ಕೆ ಉದ್ಭಾಟನಾ ಆಹ್ವಾನವಿದ್ದರೂ ಗೈರಾಜಾಗಿದ್ದ ಸೋನಿಯಾ ಮತ್ತು ಕುಟುಂಬ ಇಂದಿಗೂ ಅಯೋಧ್ಯೆಯ ಬಾಲ ರಾಮನ ದರ್ಶನ ಮಾಡದಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುವಂತಿದೆ.

ಬೀದಿ ಬೀದಿ ಅಲೆಯುವ ಬಸವನಂತೆ ದೇಶ ವಿದೇಶಗಳನ್ನು ಸುತ್ತುತ್ತಾ, ಸಮಾಜಘಾತಕರು ಮತ್ತು ಭಾರತ ದೇಶ ವಿರೋಧಿಗಳನ್ನು ರಹಸ್ಯವಾಗಿ ಭೇಟಿಯಾಗಿ ಅವರ ತಾಳಕ್ಕೆ ತಕ್ಕೆಂತೆ ಕುಣೀಯುತ್ತಾ, ಒಮ್ಮೆ ಚೌಕಿದಾರ್ ಚೋರ್ ಹೈ, ತಮ್ಮ ಸೋಲಿಗೆ ಇವಿಎಂ ಮತ ಪೆಟ್ಟಿಗೆಯೇ ಕಾರಣ. ಇತ್ತೀಚೆಗೆ ಓಟ್ ಚೋರಿ ಎನ್ನುವ ಹಾಸ್ಯಾಸ್ಪದ ಹೇಳಿಕೆಗಳಿಂದ ಜನರಿಂದ ಥೂ.. ಛೀ.. ಎಂದು ಉಗಿಸಿಕೊಳ್ಳುತ್ತಿದ್ದರೂ, ಈಗ ಇನ್ನೂ ಬಿಡುಗಡೆಯಾಗದ ಸೈನ್ಯಾಧಿಕಾರಿ ನರವಣೆ ಅವರ ಅಪ್ರಕಟಿತ ಪುಸ್ತಕ ಹಿಡಿದು ಸಂಸತ್ತಿನ ಅಧಿವೇಶನವನ್ನು ರಾಹುಲ್ ಗಾಂಧಿ ನುಂಗಿ ಹಾಕಿದಾಗ, ದೆಹಲಿಯಲ್ಲಿ ನಡೆದ ವಿಶ್ವಮಟ್ಟದ ಎಐ ಸಮ್ಮೇಳನದಲ್ಲಿ ವಿದೇಶಿಗರ ಮುಂದೆ ಅರೆಬೆತ್ತಲೆ ಪುಂಡಾಟ ನಡೆಸಿ ಭಾರತದ ಮರ್ಯಾದೆಯನ್ನು ಹಾಳು ಮಾಡಿದಾಗ ಬುದ್ದಿ ಹೇಳದ ಸೋನಿಯಾ ಈಗ, ಮುಸಲ್ಮಾನರನ್ನು ಓಲೈಸಿಕೊಂಡು ತನ್ನ ಮಗನನ್ನು ಪ್ರಧಾನಮಂತ್ರಿಯನ್ನಾಗಿಸುವುದಕ್ಕಾಗಿಯೇ ಈ ಪತ್ರವನ್ನು ಬರೆಸಿರುವುದು ಸುಸ್ಪಷ್ಟವಾಗಿದೆ.

ಧರ್ಮ ಕೇಳಿ ಅಮಾಯಕ 26 ಜನರ ಕಾಶ್ಮೀರೀ ಪ್ರವಾಸಿಗರನ್ನು ಅವರ ಕುಟುಂಬಸ್ಥರ ಕಣ್ಮುಂದೆಯೇ ಹತ್ಯೆ ಗೈದಾಗ ಮತ್ತು ನೆರೆ ರಾಷ್ಟ್ರದ ಬಾಂಗ್ಲಾದಲ್ಲಿ ನಿರಂತವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ಧಾಳಿ ಮತ್ತು ನರಮೇಧದ ಬಗ್ಗೆ ಎಂದಿಗೂ ಕಣ್ಣೀರು ಸುರಿಸದ ಅಥವಾ ಶೋಕವನ್ನು ವ್ಯಕ್ತಪಡಿಸದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಈಗ ಇದ್ದಕ್ಕಿದ್ದಂತೆಯೇ, ಇರಾನಿನ ಧಾರ್ಮಿಕ ಗುರು ಹತ್ಯೆಗೆೆ ಎದೆ ಬಡಿದುಕೊಂಡು ಅಳುತ್ತಿದ್ದಾರೆ ಎಂದರೆ ಅದರ ಹಿಂದೆ ಭಾರೀ ಹುನ್ನಾರವಿದೆ ಎನಿಸುತ್ತಿದೆ. ಸಾಂಸದೆಯಾಗಿ ಆಯ್ಕೆ ಆಗುತ್ತಿದ್ದಂತೆಯೇ, ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಪ್ಯಾಲೆಸ್ಟೀನ್ ಸಮರ್ಥನೆ ಮಾಡುವ ಚೀಲವನ್ನು ಹಿಡಿದುಕೊಂಡು ಬರುವ ಮೂಲಕ ಅವರ ಕುಟುಂಬದ ಮನಸ್ಥಿತಿಯನ್ನು ಅಂದೇ ಪ್ರಕಟಿಸಿದ್ದಳು. ಈಗ ಅದನ್ನೇ ಆಮ್ಮ ಮತ್ತು ಅಣ್ಣ ಮುಂದುವರೆಸುತ್ತಿದ್ದಾರೆ. ಸೋನಿಯಾ ಅವರ ಇರಾನ್ ಮೇಲಿನ ಪ್ರೀತಿ ಇದೇ ಮೊದಲಲ್ಲಾ ಮತ್ತು ಕೊನೆಯದೂ ಅಲ್ಲಾ. ಈ ಹಿಂದೆ ಪದೇ ಪದೇ ಕಾಲು ಕೆರೆದುಕೊಂಡು ಇಸ್ರೇಲಿನ ಮೇಲೆ ಪುಂಡಾಟ ನಡೆಸುತ್ತಿದ್ದಕ್ಕಿ ಪ್ರತಿರೋಧವಾಗಿ ಇಸ್ರೇಲಿನ ಹಮಾಸ್ ಗಜಾ ಪಟ್ಟಿಯಲ್ಲಿ ಧಾಳಿ ನಡೆಸಿ ಅಲ್ಲಿನ ನೂರಾರು ಜನರನ್ನು ಹತ್ಯೆ ಮಾಡಿದಾಗಲೂ ಇದೇ ಸೋನಿಯಾ ಇರಾನ್ ಪರ ವಹಿಸಿಕೊಂಡು ಇಸ್ರೇಲನ್ನು ಖಂಡಿಸಿದ್ದದ್ದು ಇಲ್ಲಿ ಗಮನಾರ್ಹವಾಗಿದೆ.

ಹೌದು ನಿಜ. ಇರಾನ್ ನೊಂದಿಗೆ ಭಾರತ ಉತ್ತಮವಾದ ವಾಣಿಜ್ಯ ಸ್ನೇಹ ಸಂಬಂಧವನ್ನು ಹೊಂದಿದ್ದು, ಇರಾನ್ ನಿಂದ ಪಡೆಯುವ ತೈಲದ ಬದಲಿಗೆ ಭಾರತ ಅಕ್ಕಿಯನ್ನು ರಫ್ತು ಮಾಡುತ್ತಿದೆ. ಹಾಗೆಂದ ಮಾತ್ರಕ್ಕೇ ಚಿನ್ನದ ಸೂಜಿ ಎಂದು ಹೇಗೆ ಕಣ್ಣಿಗೆ ಚುಚ್ಚಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಹರ್ಷದ ಕೂಳಿಗೆ ಆಸೆ ಪಟ್ಟು ವರ್ಷದ ಕೂಳನ್ನೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಹೇಳಿದಂತೆ ಸುಮಾರಿ 50 ರಿಂದ 57 ಮುಸ್ಲಿಂ ಬಹುಸಂಖ್ಯಾತ ದೇಶಗಳಿದು ಅದರಲ್ಲಿ 23ಕ್ಕೂ ಹೆಚ್ಚಿನ ದೇಶಗಳು ತಮ್ಮದು ಇಸ್ಲಾಂ ಧರ್ಮಾಧಾರಿತ ದೇಶ ಎಂದು ಘೋಷಿಸಿಕೊಂಡಿದ್ದರೂ ಅವುಗಳಲ್ಲಿ ಕೇವಲ 21 ರಾಷ್ಟ್ರಗಳು ಮಾತ್ರಾ ಇರಾನ್ ಪರವಾಗಿದ್ದು ಉಳಿದ ಮುಸ್ಲಿಂ ರಾಷ್ಟ್ರಗಳು ಇರಾನಿನ ಕಾರ್ಯಾಚರಣೆಯನ್ನು ಬೆಂಬಲಿಸದೇ ತಟಸ್ಥರಾಗಿರುವಾಗ ಭಾರತವೇಕೆ ಅವರ ಪರ ವಹಿಸಬೇಕೆಂದು ಸೋನಿಯಾ ಮತ್ತು ಅವರ ಮಕ್ಕಳು ಆಗ್ರಹಿಸುತ್ತಿರುವುದು ಯಾವುದಾದರೂ ಟೂಲ್ ಕಿಟ್ ಭಾಗವಾಗಿರಬಹುದೇ ಎಂಬ ಆಚ್ಚರಿಯನ್ನುಂಟು ಮಾಡುತ್ತಿದೆ.

ಮುಸ್ಲಿಂ ರಾಷ್ಟ್ರಗಳಾದ ಕುವೈತ್, ಸೌದಿ ಅರೇಬಿಯಾ, ಯುಎಇ ತಮ್ಮ ಪರವಾಗಿ ನಿಲ್ಲದೇ ಹೋದದ್ದಕ್ಕಾಗಿ ಕೋಪದಿಂದ ಇರಾನ್ ಈ ಎಲ್ಲಾ ದೇಶಗಳ ಮೇಲೆ ಧಾಳಿ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಕೋಟ್ಯಾಂತರ ಭಾರತೀಯರು ಈ ಎಲ್ಲಾ ಮುಸ್ಲಿಂ ದೇಶಗಳಲ್ಲಿಯೂ ಇದ್ದು, ಆ ಎಲ್ಲಾ ದೇಶಗಳೊಂದಿಗೆ ಭಾರತದ ಸಂಬಂಧ ಅತ್ಯುತ್ತಮವಾಗಿದ್ದು ಈಗ ಇರಾನ್ ಪರವಾಗಿ ಭಾರತ ನಿಲುವನ್ನು ತಾಳಿದರೆ, ಪರೋಕ್ಷವಾಗಿ ಆ ಎಲ್ಲಾ ದೇಶಗಳ ವಿರೋಧವನ್ನು ಕಟ್ಟಿಕೊಳ್ಳ ಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ವಿದೇಶಿ ಸಂಜಾತೆ ಸೋನಿಯಾಳಿಗೆ ಇಲ್ಲದಿರುವುದು ಅಜ್ಜನ ಕಥೆಯ ಮಗಳ ಮಗನ ಮನಸ್ಥಿತಿಯನ್ನು ನೆನಪಿಸುವಂತಿದೆ.

ಮುಸಲ್ಮಾನರ ಮತಗಳ ಆಸೆಗಾಗಿ ಮುಸ್ಲೀಂ ಲೀಗ್ ಗಿಂತಲೂ ಹೆಚ್ಚಾಗಿ ಮುಸಲ್ಮಾನರನ್ನು ಓಲೈಸಿಕೊಳ್ಳಲು ಇಲ್ಲವೇ ಜಾರ್ಜ್ ಸೋರೋಸ್ ನಂತಹ ಭಾರತ ವಿರೋಧಿಯ ತಾಳಕ್ಕೆ ಸೋನಿಯಾ ಕುಟುಂಬ ಕುಣಿಯುತ್ತಿದ್ದರೆ, ಇತ್ತ ಕರ್ನಾಟಕ ಕಾಂಗ್ರೇಸ್ ಸರ್ಕಾರ ಸಂಪೂರ್ಣವಾಗಿ ಮುಸಲ್ಮಾನರ ಪರವಾಗಿ ನಿಂತಿರುವುದು ಅಸಹ್ಯಕರ ಎನಿಸುತ್ತಿದೆ. ದಿನಬೆಳಗಾದರೆ, ಮೋದಿ ಮತ್ತು ಸಂಘ ಪರಿವಾರವನ್ನು ಬಯ್ಯದೇ ಹೋದಲ್ಲಿ ತಿಂದ ಅನ್ನ ಕರಗದು ಎನ್ನುವಂತೆ ಆಡುವ ಟ್ರೋಲಿಂಗ್ ಸ್ಟಾರ್ ಪ್ರಿಯಾಂಕಾ ಖರ್ಗೆ, ಕರ್ನಾಟಕದ ಕಲ್ಬುರ್ಗಿ, ಬಿಜಾಪುರ, ರಾಯಚೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಇನ್ನೂ ಮುಂತಾದ ಕಡೆಗಳಲ್ಲಿ ಖಮೇನಿ ಹತ್ಯೆಯನ್ನು ಖಂಡಿಸಿ ಬೀದಿಗಿಳಿದ ಮುಸಲ್ಮಾನರ ವಿರುದ್ಧ ಚಕಾರವೂ ಎತ್ತದೆ ಇರುವುದು ಆತನ ಇಬ್ಬಂಧಿತನವನ್ನು ತೋರಿಸುತ್ತಿದೆ. ರಾಜ್ಯಾದ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದ ಸಂಘದ ಪಥಸಂಚಲನಕ್ಕೆ ಅಡ್ಡಿ ತರುವುದಕ್ಕಾಗಿಯೇ ನೂರಾರು ಅನುಮತಿ ಪತ್ರಗಳನ್ನು ಕೇಳಿದ್ದ ಇದೇ ಮರಿ ಖರ್ಗೆ, ಯಾವುದೇ ಮುನ್ಸೂಚನೆ ಇಲ್ಲದೇ, ಕೈಗೆ ಸಿಕ್ಕ ಲಾಠಿಗಳನ್ನು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಈ ಮುಸಲ್ಮಾನ ಪುಂಡರನ್ನು ಪ್ರಶ್ನಿಸದೇ ಇರುವುದು ಸೋನಿಯಾಳನ್ನು ಓಲೈಸುವುದಕ್ಕಾಗಿಯೇ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಗಂಗಾವತಿ ಚಂದ್ರಶೇಖರ್ ಅಲಿಯಾಸ್ ಚಿನ್ನಿ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಖಮೇನಿ ಹತ್ಯೆಗೆ ವೈಲೆಂಟ್, ಪುಲ್ವಾಮಾ ದಾಳಿಗೆ ಸೈಲೆಂಟ್ ಎಂಬ ಸ್ಟೇಟಸ್ ಹಾಕಿದಕ್ಕಾಗಿ ಕೆಲವು ಮುಸ್ಲಿಂ ಯುವಕರು ಆತನ ಮೇಲೆ ಹಲ್ಲೆ ಮಾಡಿದಾಗ, ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹಲ್ಲೆಗೊಳಗಾದ ಚಂದ್ರಶೇಖರ್ ಮೇಲೆಯೇ ಕೇಸನ್ನು ದಾಖಲಿಸಿದ್ದಾರೆ. ಮಾತೆತ್ತಿದ್ದರೆ, ಸಂವಿಧಾನ, ಅಭಿವ್ಯಕ್ತಿ ಸ್ವಾತ್ರಂತ್ರ್ಯ ಎಂದು ಬೊಬ್ಬಿರಿವ ಕಾಂಗ್ರೇಸ್ಸಿಗರಿಗೆ, ಅದೇ ಅಭಿವ್ಯಕ್ತಿ ಸ್ವಾತ್ರಂತ್ರ ಹಿಂದೂಗಳಿಗೂ ಇದೆ ಎನ್ನುವುದನ್ನು ಮರೆತಂತಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕಾಂಗ್ರೇಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನು ಸುಟ್ಟು ಹಾಕಿದಾಗಲೂ ಇದೇ ರೀತಿಯದ್ದೇ ಪ್ರಕರಣವಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

ಕೆಲ ವರ್ಷಗಳ ಹಿಂದೆ ಇಸ್ರೇಲ್ ಜನರು ತಮ್ಮ ಪಾಡಿಗೆ ತಾವು ಸಂತೋಷದ ಕೂಟದಲ್ಲಿ ಮಗ್ನರಾಗಿದ್ದಾಗ ಏಕಾ ಏಕಿ ಗ್ಲೈಡರ್ ಗಳ ಮೂಲಕ ಧಾಳಿ ನಡೆಸಿ ನೂರಾರು ಅಮಾಯಕ ಜನರನ್ನು ಖಮೇನಿ ಬೆಂಬಲಿತ ಧಾಳಿಕೊರರು ಹತ್ಯೆ ಮಾಡಿದಾಗ ಮರುಗದ ಸೋನಿಯಾ ಈಗ ಇದ್ದಕ್ಕಿದ್ದಂತೆಯೇ ಖಮೇನಿ ಹತ್ಯೆಯ ವಿರುದ್ಧ ದೇಶವ್ಯಾಪಿ ಗಲಭೆಗಳನ್ನು ಎಬ್ಬಿಸಲು ಮುಂದಾಗಿರುವುದು ಕಾಂಗ್ರೇಸ್ ಪಕ್ಷ ಮುಸ್ಲಿಂ ಲೀಗ್ ನಂತೆ ಆಗುತ್ತಿರುವುದು ಅಂಗೈಯಲ್ಲಿರುವ ಗೆರೆಗಳಂತೆ ಸ್ಪಷ್ಟವಾಗಿದ್ದು, ಇಂತಹ ದೇಶ ವಿರೋಧಿ ಮನಸ್ಥಿತಿಯ ಕಾಂಗ್ರೇಸ್ ನಾಯಕರುಗಳು ನಮ್ಮ ದೇಶಕ್ಕೆ ಅವಶ್ಯಕತೆ ಇದೆಯೇ ಎಂಬುದನ್ನು ಪ್ರಜ್ಞಾವಂತ ಮತದಾರರೇ ನಿರ್ಧರಿಸುತ್ತಾರೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment