ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ

ನಮ್ಮ ಸನಾತನ ಸಂಸ್ಕೃತಿಯಲ್ಲಿ, ತಂದೆ ತಾಯಿಯ ನಂತರ ಜವಾಬ್ಧಾರಿಯುತ ಸ್ಥಾನದ ವ್ಯಕ್ತಿಯೇ ತಾಯಿಯ ಸಹೋದರ, ಸೋದರಮಾವ. ಅದೊಂದು ಕೇವಲ ಸಂಬಂಧವಲ್ಲ. ತವರಿನ ಜೀವಂತ ಪ್ರತಿನಿಧಿ. ಹೆಣ್ಣುಮಗಳ ಬದುಕಿಗೆ ಭದ್ರತಾ ವ್ಯವಸ್ಥೆ. ನಮ್ಮ ಬದುಕಿನಲ್ಲಿ ಸೋದರ ಮಾವಂದಿರ ಭಾವನಾತ್ಮಕ ಸಂಬಂಧದ ಕುರಿತಾದ ಹೃದಯಸ್ಪರ್ಶಿ ರಸಾನುಭವಗಳು ಇದೋ ನಿಮಗಾಗಿ… Read More ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ

ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ. ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ, ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ವ್ಯಂಗ್ಯ ಮಾಡುವುದು, ಮಹಾತ್ಮಾ ಗಾಂಧಿಯವರನ್ನು, ಮತ್ತು ದೇಶವನ್ನು ಅವಮಾನ ಮಾಡಿದಂತೆ. ಸಿಂಹ (ಮೋದಿ) ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಎಂಬುದು ಅತೀಶೀಘ್ರದಲ್ಲೇ CJPಗಳಿಗೆ ತಿಳಿಯಲಿದೆ ಅಲ್ವೇ?
… Read More ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ತಂದೆಯ ಅಂತಿಮ ಸಂಸ್ಕಾರಕ್ಕೂ ಬಾರದೆ, ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಮೂವರು ಪುತ್ರಿಯರ ಮನಕಲಕುವ ಘಟನೆ

ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಸಮಾಜದ ಅಭಿವೃದ್ಧಿಯ ಸಂಕೇತವಲ್ಲ. ನಮ್ಮ ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ ಎಚ್ಚರಿಕೆಯ ಗಂಟೆ. ಮಕ್ಕಳಿಗಾಗಿ ಬದುಕನ್ನೇ ತ್ಯಾಗ ಮಾಡಿದ್ದ ತಂದೆಯ ಅಂತಿಮ ಸಂಸ್ಕಾರವನ್ನೂ ವೃಧ್ಹಾಶ್ರಮದವರಿಗೇ, ಅದನ್ನೂ ವೀಡೀಯೋ ಕಾಲ್ ಮೂಲಕ ನೋಡುವ ಮಟ್ಟಕ್ಕೆ ಬಂದಿದೆ ಎಂದರೆ, ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿದೆಯೇ?… Read More ತಂದೆಯ ಅಂತಿಮ ಸಂಸ್ಕಾರಕ್ಕೂ ಬಾರದೆ, ವೀಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಮೂವರು ಪುತ್ರಿಯರ ಮನಕಲಕುವ ಘಟನೆ

ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ದೇವಾಲಯಗಳು, ಟಿಪ್ಪು ಸುಲ್ತಾನನ ಕೋಟೆ, ಆಸ್ಪತ್ರೆಗಳು, ಗಿಜಿಗುಡುವ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ, ಮೆಟ್ರೋ ಸಂಪರ್ಕ ಇವೆಲ್ಲವೂ ಒಂದೇ ಪ್ರದೇಶದಲ್ಲಿ ಕಾಣಸಿಗುವುದೇ ಕಲಾಸಿಪಾಳ್ಯ. ಬೆಂಗಳೂರಿನ ಭೂತಕಾಲದ ಅನುಭವ ಪಡೆಯಬೇಕಾದರೆ, ಕಲಾಸಿಪಾಳ್ಯ ಸುತ್ತು ಹಾಕಿದರೆ ಸಾಕು. ಕಲಾಸಿಪಾಳ್ಯಕ್ಕೆ ಆ ಹೆಸರು ಹೇಗೆ ಬಂದಿತು? ಆ ಪ್ರದೇಶ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ದೇವರ ಸ್ವಂತ ನಾಡು ಎಂದೇ ವಿಶ್ವವಿಖ್ಯಾತವಾಗಿರುವ ಕೇರಳದ ವಯನಾಡ್ ಒಂದೇ ಜಿಲ್ಲೆಯಲ್ಲಿ 97 ಹಳ್ಳ ಕೊಳ್ಳಗಳು, ತೊರೆ ಮತ್ತು ನದಿಗಳಿದ್ದು ಭಾರತದ ಪ್ರಕೃತಿ ವಿಸ್ಮಯವಾಗಿದೆ. ಪ್ರಕೃತಿಯ ಅಮೂಲ್ಯ ನಿಧಿಯಾದ ವಯನಾಡ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ಅರಣ್ಯ ನಾಶ, ಭೂಕುಸಿತದಿಂದಾಗಿ ಆಗುತ್ತಿರುವ ಪರಿಸರ ಸವಾಲುಗಳ ಕುರಿತಾದ ವಸ್ತುನಿಷ್ಠ ವಿಶ್ಲೇಷಣಾತ್ಮಕ ಲೇಖನ ಇದೋ ನಿಮಗಾಗಿ
… Read More ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ನಿದ್ದೆ, ನಮ್ಮ ಅತಿ ದೊಡ್ಡ ಭದ್ರತೆ

70–80ರ ದಶಕದಲ್ಲಿ ಬಹುತೇಕ ಮಧ್ಯಮವರ್ಗದ ಭಾರತೀಯ ಮನೆಗಳು ಚಿಕ್ಕದಾಗಿರುತ್ತಿದ್ದವು. ಎಲ್ಲರಿಗೂ ಪ್ರತ್ಯೇಕ ಮಲಗುವ ಕೋಣೆಗಳಿರಲಿಲ್ಲ. ಹೀಗಾಗಿ ಅಪ್ಪ-ಅಮ್ಮ, ಅಣ್ಣ-ತಂಗಿ, ಅಜ್ಜ-ಅಜ್ಜಿ ಎಲ್ಲರೂ ಒಂದೇ ಕೋಣೆಯಲ್ಲಿ ಅಥವಾ ಹಜಾರದಲ್ಲೇ ಒಟ್ಟಾಗಿ ಮಲಗುವುದು ಸಾಮಾನ್ಯವಾಗಿತ್ತು. ಅಮ್ಮನ ಸೆರಗಿನ ನೆರಳಲ್ಲಿ, ಅಪ್ಪನ ಅಂಗಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಕೆಲವೊಮ್ಮೆ ಅಪ್ಪನ ಹೆಗಲ ಮೇಲೆ, ಮತ್ತೊಮ್ಮೆ ಅಮ್ಮನ ಜೋಗುಳ ಕೇಳುತ್ತಾ ನಿದ್ರೆಗೆ ಜಾರಿದ ಆ ದಿನಗಳು ಇಂದಿಗೂ ಅನೇಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಗಳಾಗಿವೆ. ಭಾರತೀಯ ಕುಟುಂಬಗಳಲ್ಲಿ ಮಕ್ಕಳು ಹೈಸ್ಕೂಲು ತಲುಪುವವರೆಗೂ ಅಪ್ಪ-ಅಮ್ಮನ ಜೊತೆಯೇ ಮಲಗುವುದು… Read More ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ನಿದ್ದೆ, ನಮ್ಮ ಅತಿ ದೊಡ್ಡ ಭದ್ರತೆ

ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ನಾವು ಅನೇಕ ಬಾರಿ ವ್ಯಕ್ತಿಯ ರೂಪವನ್ನು ನೋಡಿ ಅವನ ಮೌಲ್ಯವನ್ನು ಅಳೆಯುತ್ತೇವೆ. ಆದರೆ ನಿಜವಾದ ಮೌಲ್ಯ ಅಡಗಿರುವುದೇ ಅವನ ವ್ಯಕ್ತಿತ್ವದಲ್ಲಿ, ಗುಣದಲ್ಲಿ ಮತ್ತು ಜ್ಞಾನದಲ್ಲಿ. ಈ ಸತ್ಯವನ್ನು ಮಣ್ಣಿನ ಮತ್ತು ಚಿನ್ನದ ಹೂಜಿಯ ಮೂಲಕ ರಾಜನಿಗೆ ಮನವರಿಕೆ ಮಾಡಿಕೊಟ್ಟ ಅಪೂರ್ವ ಪ್ರಸಂಗವು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ. ಈ ಸುಂದರ ನೀತಿಕಥೆ ಇದೋ ನಿಮಗಾಗಿ… Read More ರೂಪವಲ್ಲ… ಗುಣವೇ ಮನುಷ್ಯನ ನಿಜವಾದ ಆಭರಣ!

ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ, ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿದು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುತ್ತಾ, ಜಂತರ್ ಮಂತರ್ ನಲ್ಲಿ ಸುಳ್ಳು ಸುಳ್ಳು ಪ್ರತಿಭಟನೆ ಮಾಡಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಆವರುಗಳ ಲೈಂಗಿಕ ಕಿರುಕುಳದ ಆರೋಪ ಸುಳ್ಳೆಂದು ಸಾಭೀತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ

ಇತ್ತೀಚಿನ ದಿನಗಳಲ್ಲಿ ಸಂಘದ ಕುರಿತಾಗಿ ಪೂರ್ವಾಗ್ರಹ ಪೀಡಿತರು ಗುರುಪೂಜೋತ್ಸವ ಮತ್ತು ಗುರುದಕ್ಷಿಣೆ ಬಗ್ಗೆ ಹಗುರವಾಗಿ ಟೀಕೆ ಟಿಪ್ಪಣೆಗಳನ್ನು ಮಾಡುವಾಗ, ಅದು ಕೇವಲ ಸ್ವಯಂಸೇವಕರ ಅರ್ಪಣೆಯಾಗಿರದೇ, ಸಂಪೂರ್ಣ ಸಮರ್ಪಣೆ ಆಗಿರುತ್ತದೆ? ಮತ್ತು ರಾಷ್ಟ್ರಭಕ್ತಿ ಮತ್ತು ರಾಷ್ಟ್ರಸೇವೆಗೆ ಹೇಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ? ಎಂಬುದರ ವಿವರಗಳು ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ