ಸಿದ್ದಗಂಗಾ ಶ್ರೀಗಳು

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ… Read More ಸಿದ್ದಗಂಗಾ ಶ್ರೀಗಳು

ಜಾರ್ಜ್ ಫರ್ನಾಂಡೀಸ್

ಕಾರ್ಮಿಕ ನಾಯಕ, ಜನ ಪರ ಹೋರಾಟಗಾರ,  ಪ್ರಭುಧ್ಧ ವಾಗ್ಮಿ, ಅಪ್ಪಟ ದೇಶ ಪ್ರೇಮಿ, ಸರಳ ವ್ಯಕ್ತಿತ್ವ,  ನಡೆ ಮತ್ತು ನುಡಿಗಳಲ್ಲಿಯೂ ಅಕ್ಷರಶಃ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಧೀಮಂತ ನಾಯಕ, ಮಾಜೀ ರಕ್ಷ್ಣಣಾ ಮಂತ್ರಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಇಂದು ಮುಂಜಾನೆ  ವಯೋಸಹಜ ಮತ್ತು  ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕರ.   ಇಂದಿನ ಅಧಿಕಾರಶಾಹಿ ರಾಜಕಾರಣಿಗಳ ಮಧ್ಯೆಯೂ ಅಪರೂಪವಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ. 1930 ಜೂನ್ 3 ರಂದು … Read More ಜಾರ್ಜ್ ಫರ್ನಾಂಡೀಸ್

ಛಲವಿದ್ದಲ್ಲಿ ಗೆಲುವಿದೆ.

ಶಂಕರ ಒಂದು ಸಣ್ಣ ಅಕೌಂಟಿಂಗ್ ಸಾಫ್ಟ್ವೇರ್  ಕಂಪನಿಯೊಂದರಲ್ಲಿ  ಕಸ್ಟಮರ್ ಸಪೋರ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ದಿನ ನಿತ್ಯದ ಕೆಲಸಗಳಿಗೆ ಇನ್ನಷ್ಟು ಜನರ  ಅವಶ್ಯಕತೆ ಇದ್ದದ್ದರಿಂದ ಕೆಲವು ಸಿಬ್ಬಂಧ್ಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಸಂಧರ್ಭದಲ್ಲಿಯೇ ಸತೀಶ್ ಅಲ್ಲಿಗೆ ಕೆಲಸ ಸೇರಿಕೊಂಡ ಅವನ ಜೊತೆಗೆ ಅವನ ಸಹೋದ್ಯೋಗಿಯಾಗಿದ್ದ ಬಾಲನನ್ನೂ ಒಂದೆರಡು ವಾರಗಳ ಅಂತರದಲ್ಲಿ ಅಲ್ಲಿಯೇ ಕೆಲಸಕ್ಕೆ ಸೇರಿಸಿದ. ಸತೀಶ್ ಬಿಎಸ್ಸಿ ಪದವೀಧರ ಆಗಷ್ಟೇ ಆವನಿಗೆ ಮದುವೆಯಾಗಿತ್ತು. ಬಾಲ ಬಿಕಾಂ ಪದವೀಧರ ಅವನಿಗಾಗಲೇ ಮದುವೆಯಾಗಿ ಒಬ್ಬ ಸಣ್ಣ ವಯಸ್ಸಿನ ಮಗನಿದ್ದ. ಇವರಿಬ್ಬರಿಗಿಂತಲೂ… Read More ಛಲವಿದ್ದಲ್ಲಿ ಗೆಲುವಿದೆ.

ಕೆಲಸ

ಶಂಕರ ಮತ್ತು  ಹರಿ ಇಬ್ಬರೂ ಪ್ರಾಣ ಸ್ನೇಹಿತರು. ಒಂದು ರೀತಿಯ ಚೆಡ್ಡಿ ದೋಸ್ತು ಕುಚಿಕು ಗೆಳೆಯರು. ಇಬ್ಬರೂ ಒಂದೇ ಶಾಲೆ .  ಹರಿ ತಂದೆ ಮತ್ತು ಶಂಕರನ ತಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆವರಿಬ್ಬರ ಮನೆ ಒಂದೇ ಕಡೆ ಇದ್ದುದ್ದರಿಂದ ಅವರಿಬ್ಬರ ಒಡನಾಟ ಹೆಚ್ಚಾಗಿಯೇ ಇತ್ತು.   ಹರಿಯ ತಾತ ಮತ್ತು ಚಿಕ್ಕಪ್ಪ ಅಡುಗೆ  ವೃತ್ತಿಯಲ್ಲಿದ್ದು ಅವರ ಮನೆಯಲ್ಲಿ ಏನಾದಾರೂ ವಿಶೇಷ ಆಡುಗೆ ಮಾಡಿದ್ದಲ್ಲಿ ಅದರಲ್ಲಿ ಶಂಕರನಿಗೆ ಒಂದು ಪಾಲು ಇದ್ದೇ  ಇರುತ್ತಿತ್ತು ಅಂತಹ ಗೆಳೆತನ ಅವರಿಬ್ಬರದ್ದು.… Read More ಕೆಲಸ

ಆಹಾರದ ಸದ್ಬಳಕೆ

ನಮ್ಮಲ್ಲಿ ಹಬ್ಬ ಮತ್ತು ಶುಭ ಮಹೂರ್ತದ ಸಾಲು ಬಂದಿತೆಂದರೆ ಎಲ್ಲರಿಗೂ ಸುಗ್ಗಿಯೋ ಸುಗ್ಗಿ. ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಈ ಶುಭ ಸಂದರ್ಭಗಳಲ್ಲಿ, ಎರಡು ಮೂರು, ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ.… Read More ಆಹಾರದ ಸದ್ಬಳಕೆ

ಅಲ್ಲಾಭಕ್ಷ್ ರೀ ಸರಾ!!

ಶಂಕರ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ‌ಮ್ಯಾನೇಜರ್‌ ಆಗಿ ಕೆಲಸ‌ ಮಾಡುತ್ತಿದ್ದ. ಅದೊಂದು ದಿನ ಅವನ ಸಹೋದ್ಯೋಗಿ ವೀರೇಶ್ ತನ್ನ ಮದುವೆಗೆ ಕಛೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿಯೂ ಆಹ್ವಾನಿಸಿದ್ದಲ್ಲದೆ, ಖುದ್ದಾಗಿ ‌ಮನೆಗೂ ಬಂದೂ ಕುಟುಂಬ ಸಮೇತರಾಗಿ ‌ಬಾಗಲಕೋಟೆಯ‌ ಸಮೀಪದ ಗುಳೇದಗುಡ್ಡದಲ್ಲಿ ನಡೆಯುವ ತನ್ನ ವಿವಾಹಕ್ಕೆ ಬರಲು ಆಹ್ವಾನಿಸಿದ. ಮದುವೆಗೆ ಒಂದೆರಡು‌‌ ದಿನ ಮುಂಚಿತವಾಗಿ ಬಂದರೆ ‌ಸುತ್ತ ಮುತ್ತಲಿನ, ಕೂಡಲ ಸಂಗಮ, ಐಹೊಳೆ, ಬಾದಾಮಿ,ಬನಶಂಕರಿ, ಪಟ್ಟದಕಲ್ಲು ಮಹಾಕೂಟ ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ‌ಸ್ಥಳಗಳನ್ನೂ ನೋಡಬಹುದು ಎಂದು‌ ತಿಳಿಸಿದ. ಹೇಗೂ ಕೆಲವೇ… Read More ಅಲ್ಲಾಭಕ್ಷ್ ರೀ ಸರಾ!!

ಈಸ ಬೇಕು, ಇದ್ದು ಜಯಿಸಬೇಕು

ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎನ್ನುವ ಮಾತುಗಳಿಗೆ ಅನ್ವರ್ಥವಾಗಿ ಬಾಳಿ ಬದುಕಿದ ಧೀಮಂತ ವ್ಯಕ್ತಿಯೊಬ್ಬರ ಪ್ರೇರಣಾದಾಯಿ ಪ್ರಸಂಗ ಇದೋ ನಿಮಗಾಗಿ… Read More ಈಸ ಬೇಕು, ಇದ್ದು ಜಯಿಸಬೇಕು

ಇಲ್ಲೇ ಸ್ವರ್ಗ ಇಲ್ಲೇ ನರಕ

ಅದೊಂದು  ಬೆಳಿಗ್ಗೆ ಶಂಕರ ತನ್ನ ಕಛೇರಿಯಲ್ಲಿ  ಸಭೆಯೊಂದರಲ್ಲಿ ತುರ್ತಾಗಿ ಭಾಗವಹಿಸಲೇ ಬೇಕಾಗಿದ್ದ ಕಾರಣ ಮನೆಯಿಂದ  ಸ್ವಲ್ಪ ಬೇಗನೇ ಹೊರಟು, ತುಸು ಲಗು ಬಗನೇ ಕಾರ್ ಓಡಿಸುತ್ತಿದ್ದ.  ಅವರ ಕಾರಿನ ಸ್ವಲ್ಪ ಮುಂದೆ ಒಬ್ಬ ವಯಸ್ಕರೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ  ಗಾಡಿ ನೆಲಕ್ಕೆ  ಜೋರಾಗಿ ಅಪ್ಪಳಿಸಿದ ಶಬ್ಧ ಕೇಳಿದೊಡನೆ ಶಂಕರ ದಢಾರ್ ಎಂದು ಕಾರ್ ನಿಲ್ಲಿಸಿದ. ವೃಧ್ಧರ  ಗಾಡಿಯೇನೋ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬಿದ್ದಿತ್ತು. ಆದರೆ ಗಾಡಿ ಚಾಲನೆ ಮಾಡುತ್ತಿದ್ದ ವಯಸ್ಕರು ಒಂದು ಕ್ಷಣ ಕಾಣಲಿಲ್ಲವಾದರೂ,… Read More ಇಲ್ಲೇ ಸ್ವರ್ಗ ಇಲ್ಲೇ ನರಕ

ಮಡಿ ಬಟ್ಟೆ

ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ.  ಬೇಸಿಗೆಯ ರಜೆಯಲ್ಲಿ  ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ.  ಬೆಳಿಗ್ಗೆ  4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ  10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ… Read More ಮಡಿ ಬಟ್ಟೆ