ಸೌತೇಕಾಯಿ ಹಸೀ ಗೊಜ್ಜು

ದೋಸೆ, ಚಪಾತಿ ಅನ್ನದ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಗೊಜ್ಜುಗಳನ್ನು ಮಾಡುವುದು ಸಹಜ. ಈ ಎಲ್ಲಾ ಗೊಜ್ಜುಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ಈ ಬೇಸಿಗೆಯಲ್ಲಿ ತಣ್ಣಗೆ ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಗೊಜ್ಜು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ… Read More ಸೌತೇಕಾಯಿ ಹಸೀ ಗೊಜ್ಜು

ಮೂಲಂಗಿ ಚೆಟ್ನಿ

ಚೆಟ್ನಿ ಅಂದ ತಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ಕಾಯಿ ಚೆಟ್ನಿ, ಹುರಿಗಡಲೆ ಇಲ್ಲವೇ ಕಡಲೇಕಾಯಿ ಬೀಜ ಚಟ್ನಿ. ಅಪರೂಪಕ್ಕೆ ಈರುಳ್ಳಿ ಚೆಟ್ನಿ ಇಲ್ಲವೇ ಟೋಮ್ಯಾಟೋ ಚಟ್ನಿ ಸಹಾ ಮಾಡುತ್ತಾರೆ. ಎಲ್ಲೆಡೆಯಲ್ಲಿಯೂ ಬಹಳ ಸುಲಭವಾಗಿ ಸಿಗುವ ಮತ್ತು ಅರೋಗ್ಯಕರವಾಗಿರುವ ಮೂಲಂಗಿ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೂಲಂಗಿ ಚೆಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ದೊಡ್ಡ ಗಾತ್ರದ ಮೂಲಂಗಿ- 1 ಒಣ ಮೆಣಸಿನಕಾಯಿ- 2-3 ಕೊತ್ತಂಬರಿ… Read More ಮೂಲಂಗಿ ಚೆಟ್ನಿ

ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು… Read More ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ

ಈ ಚಿತ್ರವನ್ನು ನೋಡಿದ ತಕ್ಷಣ ಅರೇ ಈ ಗಿಡವನ್ನು ಎಲ್ಲೋ ನೋಡಿದ್ದೇವಲ್ಲಾ ಎಂದೆನಿಸಿ ಸ್ವಲ್ಪ ಕಾಲ ಯೋಚಿಸುತ್ತಿದ್ದಂತೆಯೇ, ಹಾಂ! ಅವರ ಮನೆಯಲ್ಲಿ ಕಾಂಪೌಂಡ್ ಮೇಲೆ ಸುಂದರವಾಗಿ ಹಬ್ಬಿಸಿದ್ದಾರಲ್ವಾ ಎಂದು ನೆನಪಿಸಿಕೊಂಡರೇ ಮತ್ತೊಬ್ಬರ ಮನೆಯ ಹೂಕುಂಡದಲ್ಲಿಯೂ ಬೆಳೆಸಿರುತ್ತಾರೆ ಬಹುತೇಕ ಉದ್ಯಾನವನಗಳ ಬೇಲಿಗಳ ಮೇಲೆ ಈ ಮಂಗರವಳ್ಳಿಯ ಬಳ್ಳಿಯನ್ನು ಕಾಣಬಹುದಾಗಿದೆ. ಪುನುಗು ಬೆಕ್ಕಿಗೆ ತನ್ನ ದೇಹದಿಂದಲೇ ಒಸರುವ ಸುಂಗಂಧ ತನಗೇ ಗೊತ್ತಿಲ್ಲದಿರುವ ಹಾಗೇ ಆಲಂಕಾರಿಕವಾಗಿ ತಮ್ಮ ಮನೆಗಳಲ್ಲಿ ಬೆಳೆಸುವ ಬಹುತೇಕರಿಗೆ ಔಷಧೀಯ ಗುಣಗಳುಳ್ಳ ಬಹುಪಯೋಗಿ ಈ ಮಂಗರವಳ್ಳಿಯ ಮಹತ್ವವೇ ತಿಳಿದಾಗಿರುವುದು… Read More ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ… Read More ನೀರು, ಕಣ್ಣೀರು