ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಹಿಂದಿನ ಲೇಖನದಲ್ಲಿ ನಮ್ಮ ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ ಅಲಿಯಾಸ್, ಜಿ.ಕೆ. ಉರ್ಫ್ ಪಿಂಟು ಅಂದ್ರೇ ಯಾರು? ಅವನ ಪೂರ್ವಾಪರ ಏನು ಅಂತಾ ತಿಳಿದುಕೊಂಡಿದ್ವಿ. ಈ ಭಾಗದಲ್ಲಿ ನನಗೇಕೆ ಪಿಂಟೂನ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ? ಅಂತಾಹದ್ದೇನು ಮಾಡಿದ್ದ ಎಂಬುದನ್ನು ತಿಳಿಯೋಣ. ಈಗಾಗಲೇ ತಿಳಿಸಿದ್ದಂತೆ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಚಿಕ್ಕವನಾದರೂ ಅವನ ವ್ಯಕ್ತಿತ್ವ ಮತ್ತು ಆಕಾರದಿಂದಾಗಿ ನನಗೆ ಅಣ್ಣನ ಸ್ಥಾನದಲ್ಲಿದ್ದ. ನಾನು ಮೊದಲನೇ ವರ್ಷದ ಡಿಪ್ಲಮೋ ಓದುತ್ತಿರುವಾಗ ನನ್ನ ಸಹೋದರಿಯ ಮದುವೆಯ ಸಂಧರ್ಭದಲ್ಲಿ ನನ್ನ ಉಪನಯನವಾಗಿತ್ತು. ಆಗ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮೊನ್ನೆ ತಾನೇ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಭಗವಾನ್ ವಿಷ್ಣುವಿಗೆ ಸಹಸ್ರನಾಮವಿರುವಂತೆ ನಮ್ಮೀ ಲೇಖನದ ನಾಯಕ ಶ್ರೀನಿವಾಸನಿಗೂ ಹಲವಾರು ನಾಮಗಳು. ಮನೆಯಲ್ಲಿ ಪೋಷಕರು ನಾಮಕರಣ ಮಾಡಿದ್ದು ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಮುರಳಿ ಎಂದು. ಇನ್ನು ಬಾಲ್ಯದಿಂದಲೂ ನೋಡಲು ಸ್ವಲ್ಪ ದಷ್ಟ ಪುಷ್ಟವಾಗಿದ್ದ ನಮ್ಮ ಶ್ರೀನಿವಾಸ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ ನಾಗರಹೊಳೆ ಸಿನಿಮಾದಲ್ಲಿ ಬರುವ ಪಿಂಟೋ (ದಪ್ಪನೆಯ ಹುಡುಗ)ನನ್ನು ಹೋಲುತ್ತಿದ್ದ ಕಾರಣ ನೆರೆಹೊರೆಯವರು ಪ್ರೀತಿಯಿಂದ ಪಿಂಟೂ ಎಂದು ಕರೆಯುತ್ತಿದ್ದರೆ, ಶಾಲಾ ಕಾಲೇಜುಗಳಲ್ಲಿ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಆಸ್ತಿ

ಎಂಭತ್ತರ ದಶಕ. ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ  ತುಮಕೂರು ಬಳಿಯ ಬೋರೇಗೌಡರ ಕುಟುಂಬಕ್ಕೆ ನಿಜಕ್ಕೂ ಬಹಳ ಆಘಾತವಾಗಿತ್ತು. ಸತತವಾಗಿ ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾಗದೆ  ಅವರಿದ್ದ ಪ್ರದೇಶ ಬರಗಾಲಕ್ಕೆ ತುತ್ತಾಗಿತ್ತು.  ಹೊತ್ತು ಹೊತ್ತಿಗೆ ಎರಡು ತುತ್ತು ಊಟ ಮಾಡಲೂ ಕಷ್ಟ ಪಡುವ ಸ್ಥಿತಿ ಬಂದೊದಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಕೆಟ್ಟು ಪಟ್ಟಣ ಸೇರು ಎನ್ನುವಂತೆ ತಮ್ಮ ಸಂಬಂಧೀಕರು ಬೆಂಗಳೂರಿನಲ್ಲಿದ್ದ ಕಾರಣ, ಅಲ್ಲಿ ಏನಾದರೂ ಕೂಲೀ ನಾಲಿ ಮಾಡಿ ಸ್ವಲ್ಪ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಾ ಪರಿಸ್ಥಿತಿ… Read More ಆಸ್ತಿ

ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು. ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್… Read More ಹರಕೆ

ಕರ್ಮ

ನಮ್ಮ ಸನಾತನ ಧರ್ಮದಲ್ಲಿ ಕರ್ಮದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದೇವೆ. ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ ಎಂಬ ನಂಬಿಕೆ ಇದೆ. ಆದರೆ ಈ ಕಲಿಗಾಲದಲ್ಲಿ ಅದು ಸ್ವಲ್ಪ ಬದಲಾಗಿ, ನಾವು ಮಾಡಿದ ಕರ್ಮವನ್ನು ಇಂದೇ ಡ್ರಾ, ಇಂದೇ ಬಹುಮಾನ ಎನ್ನುವ ಹಾಗೆ ಇಲ್ಲೇ ಅನುಭವಿಸುವ ಹೃದಯವಿದ್ರಾವಕ ಕಥೆಯೊಂದನ್ನು ಹೇಳಲು ಹೊರಟಿದ್ದೇನೆ. ಧಾರವಾಡದ ಪ್ರಾಣೇಶ್ ಕುಲಕರ್ಣಿಯವರು ಇದ್ದಕ್ಕಿದ್ದಂತೆಯೇ ನಡು ರಾತ್ರಿಯಲ್ಲಿ ತಮ್ಮ ಪ್ರಾಣ ಸ್ನೇಹಿತ ಗುರುರಾಜ ದೇಶಪಾಂಡೆಯವರಿಗೆ ಕರೆಮಾಡಿದರು. ಇಬ್ಬರೂ… Read More ಕರ್ಮ

ಸ್ತ್ರೀ ! ಕ್ಷಮಯಾಧರಿತ್ರಿ!!

ಹೆತ್ತವರಿಗೆ ಮಗಳು, ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಹೆತ್ತ ಮಕ್ಕಳಿಗೆ ತಾಯಿ, ತನ್ನ ಮಕ್ಕಳಿಗೆ ಮದುವೆಯಾದಾಗ, ಅಳಿಯಂದಿರಿಗೆ ಮತ್ತು ಸೊಸೆಯರಿಗೆ ಅತ್ತೆ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ, ಹೀಗೆ ಬಹುರೂಪಿಯಾದ ಹೆಣ್ಣನ್ನು ಗೌರವಿಸುವುದು ಕೇವಲ ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಗೆ ಮಾತ್ರಾ ಸೀಮಿತವಾಗಿರದೇ, ಪ್ರತೀ ದಿನ, ಪ್ರತೀ ಕ್ಷಣವೂ ಆಕೆಗೆ ಚಿರಋಣಿಗಳಾಗಿರಬೇಕು ಅಲ್ವೇ?… Read More ಸ್ತ್ರೀ ! ಕ್ಷಮಯಾಧರಿತ್ರಿ!!

ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ರಮೇಶ ಹಳ್ಳಿಯಲ್ಲಿ  ತಕ್ಕ ಮಟ್ಟಿಗೆ ಓದಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸ ತೊಡಗಿದರು.  ಆವರದ್ದು ಸಂಪ್ರದಾಯಸ್ತ ಒಟ್ಟು ಕುಟಂಬವಾದ್ದರಿಂದ ಅಕ್ಕ ತಂಗಿಯರಿಗೆಲ್ಲ ಮದುವೆ ಮಾಡಿ ತಮ್ಮಂದಿರಿಗೆ ಒಂದು ದಾರಿ ತೋರಿಸಿ ಮದುವೆ ಆಗುವಷ್ಟರಲ್ಲಿ ಅವರ ಮದುವೆಯ ವಯಸ್ಸು ಮೀರಿದ್ದರೂ ಮದುವೆ ಆಗಿ ಆವರ ಸುಖಃ ದಾಂಪತ್ಯದ ಫಲವಾಗಿ  ವರ್ಷದೊಳಗೇ ಹೆಣ್ಣು ಮಗುವಿನ ಜನನವಾಗಿ ಮಗಳಿಗೆ ಆಶಾ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದರು. ಹೆಣ್ಣು ಗಂಡುಗಳ ನಡುವೆ ಬೇಧವಿಲ್ಲ  ಎಂದು ಎಷ್ಟೇ ಹೇಳಿದರೂ ಇಂದಿಗೂ ನಮ್ಮ… Read More ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಶಂಕರ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದ ಚೊಕ್ಕದಾದ ಸಂಸಾರ. ಮಕ್ಕಳು ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಡದಿ ಗೃಹಿಣಿ. ನೆಮ್ಮದಿಯಾದ ಸಂಸಾರ.  ಶಂಕರನಿಗೆ  ಬರವಣಿಗೆಯಲ್ಲಿ  ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ  ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ.  ಎಷ್ಟೇ ಚಟುವಟಿಕೆಗಳಿಂದ ಕೂಡಿದ್ದರೂ ಅದು ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಧರ್ಮ,  ನೆಚ್ಚಿನ ಸಿದ್ಧಾಂತ ಮತ್ತು ರಾಜಕೀಯ ನಾಯಕರುಗಳ ಪರವಾಗಿ  ಪ್ರಖರವಾಗಿ ಲೇಖನ ಬರೆಯುತ್ತಿದ್ದ. ಅಂತಯೇ ಇನ್ನೊಬ್ಬರ ಬರಹಗಳಿಗೆ ವಾದ ಪ್ರತಿರೋಧ ಮಾಡುತ್ತಿದ್ದ. ಅವನ  ಬರವಣಿಗೆ,… Read More ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಗೆಜ್ಜೆ ಘಲ್ ಘಲ್, ಎದೆ ಝಲ್ ಝಲ್

ನೆನ್ನೆ ಮಧ್ಯಾಹ್ನ ಕಛೇರಿಯಲ್ಲಿ ಕೆಲಸನಿರತನಾಗಿದ್ದಾಗ  ನನ್ನ ಆತ್ಮೀಯ ಗೆಳೆಯ ಹರಿ ಕರೆ ಮಾಡಿದ. ಸಾಮಾನ್ಯವಾಗಿ ವಾರಂತ್ಯದಲ್ಲಿಯೋ ಇಲ್ಲವೇ ರಾತ್ರಿಯ ಹೊತ್ತು ನಾವಿಬ್ಬರು ಮಾತನಾಡುವ ಪ್ರತೀತಿ.  ಇಂದು ಅಚಾನಕ್ಕಾಗಿ ಕರೆ ಮಾಡಿರುವುದು ನನ್ನಲ್ಲಿ ಒಂದು ಕ್ಷಣ ಆತಂಕವನ್ನೇ ಸೃಷ್ಟಿಮಾಡಿತು. ಸರಿ ಏನಾದರೂ ಆಗಲೀ ಎಂದು ಕರೆಯನ್ನು ಸ್ವೀಕರಿಸಿ, ಹೇಳಪ್ಪಾ ಏನು ಸಮಾಚಾರ ಎಂದು ಕೇಳುತ್ತಿದ್ದಂತೆಯೇ. ನನ್ನ ಊಹೆ ಸರಿಯಾಗಿ, ಕ್ಷೀಣ ಸ್ವರದಲ್ಲಿ ದುಃಖಭರಿತನಾಗಿ ಶ್ರೀಕಂಠಾ ನಮ್ಮ ತಾತ ಹೋಗ್ಬಿಟ್ರೋ ಎಂದ.   ಹರಿ ಹಾಗೆ ಹೇಳುತ್ತಿದ್ದಂತೆಯೇ, ಛೇ ಹೋಗ್ಬಿಟ್ರಾ? ಎಲ್ಲಿ?… Read More ಗೆಜ್ಜೆ ಘಲ್ ಘಲ್, ಎದೆ ಝಲ್ ಝಲ್