ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ

ಮೊನ್ನೆ  ಶುಕ್ರವಾರ ಯಾವುದೋ ಕೆಲಸದ ನಿಮಿತ್ತ ರಜೆ ಹಾಕಿದ್ದೆ.  ಸುಮಾರು ಒಂದು ಗಂಟೆ ಸಮಯ ನಮ್ಮ ಏರಿಯಾದಲ್ಲಿಯೇ ಇದ್ದ ಸ್ನೇಹಿತರ ಮನೆಗೆ  ದ್ವಿಚಕ್ರ ವಾಹನವೇರಿ ಹೊರಟೆ. ಇಲ್ಲೇ ನಮ್ಮದೇ ಬಡಾವಣೆ ಅಲ್ವಾ ಅನ್ನೂ ನಿರ್ಲಕ್ಷದಿಂದ ಗಾಡಿಯೊಳಗಿದ್ದ ಹೆಲ್ಮೆಟ್ ಕೂಡಾ ಹಾಗದೆ ದಿಮ್ಮಾಲೆ ರಂಗಾ ಎಂದು ಹೋಗುತ್ತಿದ್ದಾಗ, ಇದ್ದಕ್ಕಿಂದಂತೆಯೇ ಹಳೆಯ ತೆಲುಗು ಸಿನಿಮಾದಲ್ಲಿ ರಾಕ್ಷಸರು ಪ್ರತ್ಯಕ್ಷವಾಗೋ ಹಾಗೆ ಅದೆಲ್ಲಿಂದಲೂ ಪೋಲೀಸ್ ಪೇದೆಯೊಬ್ಬರು  ನನ್ನ ಮುಂದೆ ಧಗ್ಗನೆ ಪ್ರತ್ಯಕ್ಷರಾಗಿ ಸೀಟಿ ಊದುತ್ತಾ ಎರಡೂ ಕೈಗಳನ್ನೂ ತೋರಿಸುತ್ತಾ ಗಾಡಿ ನಿಲ್ಲಿಸಲು ಹೇಳಿದರು.… Read More ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ

ಉಡುದಾರದ ಪಜೀತಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಪದ್ದತಿಗಳು ನಮ್ಮ ಜೀವನದ ಅವಿಭಾಜ್ಯವಾಗಿ ರೂಢಿಯಲ್ಲಿರುತ್ತವೆ. ಅನೇಕರಿಗೆ ಅದರ ಅವಶ್ಯಕತೆಯಾಗಲೀ ಅದರ ಅನುಕೂಲವಾಗಲೀ ವೈಜ್ಞಾನಿಕ ಕಾರಣಗಳಾಗಲೀ ಗೊತ್ತಿಲ್ಲದಿದ್ದರೂ ಹಿರಿಯರಿಂದ ಬಂದ ಸಂಪ್ರದಾಯ ಎಂದು ಅದಕ್ಕೆ ಪ್ರತಿರೋಧ ತೋರದೆ ಚಾಚೂ ತಪ್ಪದೆ ಅದನ್ನು ಆಚರಿಸಿಕೊಂಡು ಬರುತ್ತಾರೆ. ಅಂತಹ ಪದ್ದತಿಯಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಕಟ್ಟುವ ಉಡುದಾರವೂ ಹೌದು. ಹಾಗೆ ಕಟ್ಟಿ ಕೊಂಡ ಉಡುದಾರವೇ ನಮ್ಮ ಶಂಕರನನ್ನು ಪಜೀತಿಗೆ ಸಿಕ್ಕಿಸಿದ ಮೋಜಿನ ಪ್ರಸಂಗವನ್ನೇ ಇಲ್ಲಿ ಹೇಳ ಹೊರಟಿದ್ದೇನೆ. ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು,… Read More ಉಡುದಾರದ ಪಜೀತಿ

ತಾತ ಮೊಮ್ಮಗನ ಸಂಬಂಧ- ಅನುಬಂಧ

ಶಂಕರ ಆಗಿನ್ನು ಚಿಕ್ಕ ಹುಡುಗ. ನಾಲ್ಕನೇಯದೋ ಇಲ್ಲವೇ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಅದೊಂದು ದಿನ ಸಂಜೆ ಊರಿನಿಂದ ಅವರ ಮನೆಗೆ Father is serious. Start immediately ಎನ್ನುವ ಸಂದೇಶವಿದ್ದ ಟೆಲಿಗ್ರಾಂ ಬಂದಿತು. ಸರಿ ಆಷ್ಟು ಹೊತ್ತಿನಲಲ್ಲಿ ಮಕ್ಕಳನ್ನು ಎಲ್ಲಿಗೆ ಬಿಟ್ಟು ಹೋಗುವುದು ಎಂದು ತಿಳಿದು ಶಂಕರ, ಅವನ ತಂಗಿಯರನ್ನೂ ಕರೆದುಕೊಂಡು ಶಂಕರನ ತಂದೆ ಮತ್ತು ತಾಯಿ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ಹತ್ತಿ , ಆಗಿನ್ನೂ ಟೆಲಿಫೋನ್ ಇಲ್ಲದಿದ್ದರಿಂದ ಮಲ್ಲೇಶ್ವರದಲ್ಲಿಯೇ ಶಂಕರನ ತಂದೆ ಇಳಿದು ಅವರ… Read More ತಾತ ಮೊಮ್ಮಗನ ಸಂಬಂಧ- ಅನುಬಂಧ

ಮಣ್ಣಿನ ಋಣ

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು… Read More ಮಣ್ಣಿನ ಋಣ

ವಿವಾಹ ವಾರ್ಷಿಕೋತ್ಸವ

ರೀ ಉಮಾ ಹೇಗಿದ್ದೀರೀ? ಮನೆಯವರೆಲ್ಲಾ ಚೆನ್ನಾಗಿದ್ದಾರಾ? ನೀವು ಬಿಡಿ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಮುಗಿಸಿಕೊಂಡು ನೆಮ್ಮದಿಯಾಗಿ ಮೊಮ್ಮಕ್ಕಳ ಜೊತೆ ಆಟಾವಾಡ್ತಾ ಇದ್ದೀರಿ. ಹೆಣ್ಣು ಮಕ್ಕಳಿಗೇನೋ ಮದುವೆ ಮಾಡಿಬಿಟ್ರಿ ಆದರೆ ಮಗನಿಗೆ ಮದುವೇ ಮಾಡೋದಿಲ್ವಾ? ಅವನಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡಿ ಮಗ, ಸೊಸೆ ಜೊತೆ ಸುಂದರವಾಗಿರುತ್ತೆ ನಿಮ್ಮ ಸಂಸಾರ. ಅಯ್ಯೋ ನಮಗೂ ಅದೇ ಅಸೆ ರೀ .ಆದ್ರೆ ಅವನೇ ಇನ್ನೂ ಇಷ್ಟು ಬೇಗ ಬೇಡ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಕೈ ತುಂಬಾ ಸಂಪಾದನೆ… Read More ವಿವಾಹ ವಾರ್ಷಿಕೋತ್ಸವ

ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ಅದೂ೦ದು ದೊಡ್ಡ ನಗರ ಅಲ್ಲೊಬ್ಬ ಪ್ರಖ್ಯಾತ ವೈದ್ಯರು, ಅವರ ಅಚ್ಚು ಮೆಚ್ಚಿನ ಮಡದಿ, ಮುದ್ದಾದ ಮಗಳೊ೦ದಿಗೆ ಸ್ವರ್ಗಕ್ಕೇ ಕಿಚ್ಚು ಹಚ್ಚಿಸುವ೦ತಹ ಸು೦ದರ ಸ೦ಸಾರ ನಡೆಸುತ್ತಿದ್ದ ಸಮಯದಲ್ಲಿ, ಅಚಾನಕ್ಕಾಗಿ ಬರ ಸಿಡಿಲು ಎರಗಿದ೦ತೆ ವೈದ್ಯರ ಪತ್ನಿ ಆಕಾಲಿಕವಾಗಿ ಮರಣ ಹೊ೦ದಿದಾಗ ದಿಕ್ಕೇ ತೋಚದೇ ವೈದ್ಯರು ಅಧೀರರಾಗುತ್ತಾರೆ. ಪತ್ನಿಯ ವೈದೀಕ ಕಾರ್ಯಗಳೆಲ್ಲವೂ ಮುಗಿದ ನ೦ತರ ಕುಟು೦ಬದವರೆಲ್ಲಾ ಸೇರಿ, ಹೇಗೆ ದೀಪವಿಲ್ಲದೆ ದೇಗುಲ ಬೆಳಗುವುದಿಲ್ಲವೋ, ಹಾಗೆ ಹೆಣ್ಣಿನ ದಿಕ್ಕಿಲ್ಲದೆ ಮನೆಯೂ ಬೆಳಗುವುದಿಲ್ಲ. ಹೇಗೂ ನಿನಗೂ ಚಿಕ್ಕವಯಸ್ಸು, ಮಗಳೂ ಸಣ್ಣವಳಿದ್ದಾಳೆ ಅವಳನ್ನು ನೋಡಿಕೊಳ್ಳುವ… Read More ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು. ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ… Read More ರಾಮ ಹೆಚ್ಚೋ, ರಾವಣ ಹೆಚ್ಚೋ‌

ಹಂಸ ಕ್ಷೀರ ನ್ಯಾಯ

ಸರಿ ಸುಮಾರು 90ರ ದಶಕ, ನಾನಿನ್ನೂ ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ಸರಿಯಾದ ಕೆಲಸ ಸಿಗುವವರೆಗೆ ಸಣ್ಣ ಪುಟ್ಟ ಕಂಪ್ಯೂಟರ್ ರಿಪೇರಿಗಳನ್ನು ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಅವರು ಕೇಳುತ್ತಿದ್ದ ಸಾಫ್ಟವೇರ್ ಇನ್ಸ್ಟಾಲ್ ಮಾಡುತ್ತಾ ಅಷ್ಟೋ ಇಷ್ಟು ಸಂಪಾದನೆ ಮಾಡುತ್ತಾ ತಂದೆಗೆ ಹೊರೆಯಾಗದೆ, ಕಂತಿನಲ್ಲಿ ಕೊಂಡಿದ್ದ ಹೀರೋ ಪುಕ್ ಸಾಲವನ್ನು ತೀರಿಸುತ್ತಾ ಜೀವನ ನಡೆಸುತ್ತಿದ್ದ ಕಾಲವದು. ಅಂದೆಲ್ಲಾ ಫ್ಲಾಫಿ ಡಿಸ್ಕ್ ಜಮಾನ, ಏನೇ ಸಾಫ್ಟ್ವೇರ್ ಬೇಕಿದ್ದರೂ ಫ್ಲಾಫಿ ಡಿಸ್ಕನಲ್ಲಿ ಕಾಪಿ ಮಾಡಿಕೊಂಡು ತಂದು ಇನ್ಸ್ಟಾಲ್… Read More ಹಂಸ ಕ್ಷೀರ ನ್ಯಾಯ

ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಬೆಟ್ಟದ ನೆಲ್ಲಿ ಕಾಯಿ ಸಮುದ್ರ ಉಪ್ಪು ಎತ್ತಲಿಂದೆತ್ತ ಸಂಬಂಧವಯ್ಯಾ? ಎನ್ನುವಂತೆ ಕ್ರಿಕೆಟ್ ಮ್ಯಾಚ್ ಮತ್ತು ಸುಬ್ರಹ್ಮಣ್ಯ ಷಷ್ಥಿಯ ನಡುವೆ ಬ್ರಹ್ಮಚಾರಿ ವಟುವಿನ ಪರದಾಟದ ಸ್ವಾರಸ್ಯಕರ ಪ್ರಸಂಗ ಇದೋ ನಿಮಗಾಗಿ. … Read More ಸುಬ್ರಹ್ಮಣ್ಯ ಷಷ್ಠಿ ಅವಾಂತರ