ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ

ಹಿರಣ್ಯಕಷಿಪುವಿನ ಮಗ ಮಗ ಪ್ರಹ್ಲಾದ ಭಗವಾನ್ ವಿಷ್ಣು ಸರ್ವಾಂತರ್ಯಾಮಿ. ಆತ ಎಲ್ಲೆಡೆಯಲ್ಲಿಯೂ ಇದ್ದಾನೆ ಎನ್ನುತ್ತಾನೆ. ಆಗ ಕೋಪಗೊಂಡ ಹರಿಯ ವೈರಿ ಹಿರಣ್ಯಕಶಿಪು ಆ ನಿನ್ನ ಹರಿ ಇಲ್ಲಿರುವನೇ? ಅಲ್ಲಿರುವನೇ, ಆಕಾಶದಲ್ಲಿ ಇರುವನೇ, ಭೂಮಿಯಲ್ಲಿ ಇರುವನೇ ನೀರಿನಲ್ಲಿ ಇರುವನೇ? ಎಂದು ಕೇಳಿದಾಗ ಹೌದು ತಂದೆ ಆ ಹರಿ ಎಲ್ಲೆಲ್ಲೂ ಇದ್ದಾನೆ ಎಂದಾಗ ಸಿಟ್ಟಿನಲ್ಲಿ ತನ್ನ ಅರಮನೆಯ ಕಂಬವನ್ನು ತೋರಿಸಿ ಇಲ್ಲಿರುವನೇ ನಿನ್ನ ಹರಿ ಎಂದು ಆ ಕಂಭಕ್ಕೆ ಹೊಡೆದಾಗ ಆ ಕಂಬದಿಂದ ಹರಿ ನರಸಿಂಹಾವತಾರದಲ್ಲಿ ಬಂದು ಹಿರಣ್ಯಕಶಿಪುವನ್ನು ಸಾಯಿಸಿದ… Read More ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ

ಧರ್ಮಸ್ಥಳದ ಲಕ್ಷದೀಪೋತ್ಸವ

ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಕೇವಲ ನದಿಗಳಿಗಷ್ಟೇ ಅಲ್ಲದೇ, ದೇವಾಲಯಗಳಿಗೂ ಪ್ರಸಿದ್ಧವಾಗಿದೆ. ಅಲ್ಲಿ ಹರಿಯುವ ಪ್ರತೀ ನದಿ ಹಳ್ಳ ಕೊಳ್ಳಗಳ ತಟದಲ್ಲಿ ಪ್ರತಿ ಹತ್ತಿಪ್ಪತ್ತು ಕಿಮೀ ದೂರದಲ್ಲಿ ಒಂದೊಂದು ಒಂದೊಂದು ದೇವಸ್ಥಾನಗಳಿದ್ದು, ಅವುಗಳಲ್ಲಿ ಜೀವನದಿ ನೇತ್ರಾವತಿಯ ತಟದಲ್ಲಿರುವ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸಕಲ ಹಿಂದೂಗಳ ಧಾರ್ಮಿಕ ಕ್ಷೇತ್ರವೇ ಪುರಾಣ ಪ್ರಸಿದ್ಧ ಧರ್ಮಸ್ಥಳವಾಗಿದೆ. ಹೆಸರಿಗೆ ಅನ್ವರ್ಥದಂತೆ ಅದು ಶಾಂತಿ ಮತ್ತು ಧರ್ಮದ ಬೀಡಾಗಿದ್ದು ಧರ್ಮಸ್ಥಳದ ಮಂಜುನಾಥನ ಸ್ವಾಮಿಗೆ ಇಡೀ ದೇಶಾದ್ಯಂತ ಭಕ್ತಾದಿಗಳು ಇದ್ದು ಬಹಳ ನಂಬಿಕೆಗೆ ಹೆಸರುವಾಸಿಯಾಗಿದೆ.… Read More ಧರ್ಮಸ್ಥಳದ ಲಕ್ಷದೀಪೋತ್ಸವ

ದಕ್ಷಿಣ ಕಾಶೀ ಅಂತರ ಗಂಗೆ

ಇಂದು ಈ ವರ್ಷದ  ಮೊದಲ ಕಾರ್ತೀಕ ಸೋಮವಾರ.  ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ  ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ.  ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ  ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ  ಚಿನ್ನದ ಬೀಡು.… Read More ದಕ್ಷಿಣ ಕಾಶೀ ಅಂತರ ಗಂಗೆ

ಶ್ರೀರಂಗಂ ಸಂಜೀವನ ಆಂಜನೇಯ ಸ್ವಾಮಿ

ಕೆಲ ತಿಂಗಳುಗಳ ಹಿಂದೆ ತಮಿಳುನಾಡಿನ ಚೆನೈನಲ್ಲಿ ಕನ್ನಡಿಗರಾದ ಅರ್ಜುನ್ ಸರ್ಜಾವರ ಕುಟುಂಬ ಧ್ಯಾನಮುದ್ರೆಯಲ್ಲಿರುವ ಆಂಜನೇಯಸ್ವಾಮಿಯ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದ ವಿಡೀಯೋವನ್ನು ನಮ್ಮ ಛಾನೆಲ್ಲಿನಲ್ಲಿಯೇ ನೋಡಿ ಸಂಭ್ರಮ ಪಟ್ಟಿದ್ದೆವು. ಅದೇ ತಮಿಳುನಾಡಿನ ಶ್ರೀರಂಗಂ ಬಳಿಯ ಮೇಲೂರಿನ ಬಳಿ 37 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಲೋಕಾರ್ಪಣೆ ಆಗಿರುವುದನ್ನು ಕಣ್ತುಂಬ ನೋಡಿ ಸಂಜೀವನ ಆಂಜನೇಯ ಸ್ವಾಮಿ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ. ವಿಶ್ವರೂಪ ಆಂಜನೇಯರ್ ಎಂದು ಹೆಸರಿನ ಖಾಸಗಿ ಟ್ರಸ್ಟ್ ಶ್ರೀರಂಗಂನ ಕೊಲ್ಲಿದಾಮ್ ತೀರದಲ್ಲಿ ಮೇಲೂರು ಎಂಬ ಗ್ರಾಮದ ಬಳಿ… Read More ಶ್ರೀರಂಗಂ ಸಂಜೀವನ ಆಂಜನೇಯ ಸ್ವಾಮಿ

ಊನಕೋಟಿ

ನಮ್ಮ ಸನಾತನ ಧರ್ಮದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಿದ್ದು ಅವೆಲ್ಲವೂ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಎಂದು ನಂಬಿದರೆ, ಇನ್ನೂ ಅನೇಕರು ಅದು ಕೇವಲ ಕಾಲ್ಪನಿಕ ಕಟ್ಟು ಕಥೆ ಎಂದು ವಾದ ಮಾಡುವವರೂ ಇದ್ದಾರೆ. ಹಾಗೆ ವಾದ ಮಾಡುವವರಿಗೆ ಉತ್ತರಿಸುವಂತೆ ಆ ಪುರಾಣ ಕಥೆಗಳಲ್ಲಿ ಉಲ್ಲೇಖವಿರುವ ಬಹುತೇಕ ನದಿಗಳು, ನಗರಗಳು ಭಾರತಾದ್ಯಂತ ಹರಡಿಕೊಂಡಿದ್ದು ಈ ಪುರಾಣ ಕಥೆಗಳಿಗೆ ಪೂರಕವಾಗಿದೆ. ಪುರಾಣ ಕಥೆಯಲ್ಲಿ ಬರುವ ಇಂತಹದ್ದೇ ಒಂದು ದಂತಕತೆಗೆ ಜ್ವಲಂತ ಉದಾಹರಣೆಯಾಗಿ ತ್ರಿಪುರದ ಕಾಡುಗಳಲ್ಲಿ ಗೋಚರವಾಗಿರುವ, ಕಾಲ ಭೈರವನ… Read More ಊನಕೋಟಿ

ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ… Read More ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ನೀಲಿಕುರುಂಜಿ, ಮಂದಲ ಪಟ್ಟಿ

ನಮ್ಮವರಿಗೆ ವಾರಾಂತ್ಯದ ಹಿಂದೆಯೋ ಮುಂದೆಯೋ ಒಂದು ರಜಾ ಸಿಕ್ಕರೇ ಸಾಕು ಅದರ ಜೊತೆಗೆ ಮತ್ತೆರಡು ರಜಗಳನ್ನು ಹಾಕಿಕೊಂಡು ಊರು ಸುತ್ತಲು ಹೊರಟೇ ಬಿಡುತ್ತಾರೆ. ದುರದೃಷ್ಟವಷಾತ್ ಕಳೆದ ಒಂದೂವರೆ ವರ್ಷದಿಂದ ಕೊರೋನಾ ವಕ್ಕರಿಸಿಕೊಂಡು ಪ್ರಪಂಚವೇ ಲಾಕ್ ಡೌನ್ ಆಗಿರುವಾಗ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಸರಗೊಂಡವರ ಮನವನ್ನು ಮುದಗೊಳಿಸುವ ಸಲುವಾಗಿ ಪಶ್ಚಿಮ ಘಟ್ಟದ ಭಾಗವಾದ ಕೊಡಗು ಜಿಲ್ಲೆಯ ​​ಮಂದಲಪಟ್ಟಿ ಬೆಟ್ಟಗಳಲ್ಲಿ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಪ್ರಕೃತಿಯೇ ತನ್ನ ಸೌಂದರ್ಯವನ್ನು ನೀಲಿಕುರಿಂಜಿ ಹೂವುಗಳನ್ನು ಅರಳಿಸಿಕೊಳ್ಳುವ ಮೂಲಕ ಕೇವಲ ಇಮ್ಮಡಿಯಲ್ಲಾ ನೂರ್ಮಡಿಯನ್ನಾಗಿಸಿಕೊಂಡು… Read More ನೀಲಿಕುರುಂಜಿ, ಮಂದಲ ಪಟ್ಟಿ

ಕಿನ್ನರ್ ಕೈಲಾಸ್ ಯಾತ್ರೆ

ನಮ್ಮ ಸನಾತನ ಧರ್ಮದಲ್ಲಿ ಶಿವನ ವಾಸಸ್ಥಾನಗಳು ಎಂದು ಹೇಳುವ ಐದು ಪವಿತ್ರ ಕ್ಷೇತ್ರಗಳಿವೆ. ಅವುಗಳೆಂದರೆ, ಕೈಲಾಸ ಮಾನಸ ಸರೋವರ್, ಆದಿ ಕೈಲಾಸ್, ಕಿನ್ನರ್ ಕೈಲಾಸ್, ಶ್ರೀಖಂಡ್ ಮಹಾದೇವ್ ಕೈಲಾಸ್ ಮತ್ತು ಮಣಿಮಹೇಶ್ ಕೈಲಾಸ್. ಪ್ರತಿಯೊಬ್ಬ ಹಿಂದೂವಿಗೂ ಈ ಕ್ಷೇತ್ರಗಳಿಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಶ್ರೀಕ್ಷೇತ್ರಗಳಿಗೆ ಹೋಗಿ ಶಿವನ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ನಾವಿಂದು ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ದುರ್ಗಮವಾದ ಆದರೆ ಅತ್ಯಂತ ರೋಚಕವಾದ ಕಿನ್ನರ್ ಕೈಲಾಸ್ ನೋಡಿ ಕೊಂಡು ಬರೋಣ ಬನ್ನಿ. ಕಿನ್ನರ್ ಕೈಲಾಸ… Read More ಕಿನ್ನರ್ ಕೈಲಾಸ್ ಯಾತ್ರೆ

ದೊಡ್ಡ ಆಲದ ಮರ

ಕಳೆದ ಒಂದುವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕ ಮಹಾಮಾರಿಯಿಂದ ಮನೆಯಲ್ಲಿ ಜಡ್ಡು ಹಿಡಿದು ಹೋಗಿರುವ ಮೈ ಮತ್ತು ಮನಗಳಿಗೆ ಮುದ ನೀಡುವ, ವೆಂಗಳೂರಿನ ಅತ್ಯಂತ ಸಮೀಪದಲ್ಲೇ ಇರುವ ಸುಂದರ ರಮಣೀಯ ಪ್ರಕೃತಿತಾಣವೊಂದರ ಕುರಿತಾಗಿ ತಿಳಿಯೋಣ ಬನ್ನಿ. ಬೆಂಗಳೂರು ಮೈಸೂರಿನ ಹೆದ್ದಾರಿಯಲ್ಲಿ ಸಾಗಿ ಕೆಂದೇರಿ ದಾಟಿ ಸ್ವಲ್ಪ ದೂರ ಹೊಗುತ್ತಿದ್ದಂತೆಯೇ ಎಡಗಡೆಯಲ್ಲಿ ನಮಗೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಬಲಗಡೆಯಲ್ಲಿ ಅದೇ ರಾಜರಾಜೇಶ್ವರಿ ಡೆಂಟಲ್ ಕಾಲೇಜು ಕಾಣಬಹುದಾಗಿದೆ. ಆ ಕಾಲೇಜಿನ ಪಕ್ಕದಲ್ಲಿಯೇ ಇರುವ ರಾಮಗೊಂಡನಹಳ್ಳಿ… Read More ದೊಡ್ಡ ಆಲದ ಮರ